Avogadro/C2/Edit-molecules/Kannada
From Script | Spoken-Tutorial
Revision as of 22:15, 6 July 2018 by Sandhya.np14 (Talk | contribs)
Time | Narration |
00:01 | Edit molecules ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು- ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು, |
00:14 | ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು, |
00:16 | ಬಾಂಡ್ ಗಳನ್ನು ರೋಟೇಟ್ ಮಾಡುವುದು (ತಿರುಗಿಸುವುದು) , |
00:18 | ಬಾಂಡ್ ನ ಉದ್ದವನ್ನು ಬದಲಿಸುವುದು, |
00:20 | ಜಲಜನಕವನ್ನು 'ಮೀಥೈಲ್ ಗ್ರುಪ್' ಗೆ ಬದಲಿಸುವುದು, |
00:23 | ರಚನೆ ಗಳನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು- ಇವುಗಳ ಕುರಿತು ಕಲಿಯುವೆವು. |
00:27 | ಇಲ್ಲಿ ನಾನು: Ubuntu Linux OS 14.04 ಆವೃತ್ತಿ,
Avogadro 1.1.1 ಆವೃತ್ತಿ - ಇವುಗಳನ್ನು ಬಳಸುತ್ತಿದ್ದೇನೆ. |
00:37 | ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು Avogadro ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. |
00:43 | ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
00:49 | ಇಲ್ಲಿ, 'ಟರ್ಮಿನಲ್' ಅನ್ನು ಬಳಸಿ, Avogadro ಅನ್ನು ಓಪನ್ ಮಾಡುವುದು ಹೇಗೆ ಎಂದು ನಾನು ತೋರಿಸುವೆನು. |
00:55 | ಟರ್ಮಿನಲ್ ಅನ್ನು ಓಪನ್ ಮಾಡಲು, CTRL, ALT ಮತ್ತು T ಕೀ ಗಳನ್ನು ಒಟ್ಟಿಗೆ ಒತ್ತಿ. |
01:03 | ಪ್ರಾಂಪ್ಟ್ ನಲ್ಲಿ avogadro ಎಂದು ಟೈಪ್ ಮಾಡಿ , Enter ಅನ್ನು ಒತ್ತಿ. |
01:08 | Avogadro ಅಪ್ಲಿಕೇಷನ್ ವಿಂಡೋ ಓಪನ್ ಆಗುತ್ತದೆ. |
01:12 | ವಿವರಣೆಗಾಗಿ ನಾನು , Fragment (ಫ್ರ್ಯಾಗ್ಮೆಂಟ್) ಲೈಬ್ರರಿಯಿಂದ, n-ಬ್ಯುಟೇನ್ ನ ಅಣುವನ್ನು ಪ್ರದರ್ಶಿಸುವೆನು. |
01:19 | Build ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. ಕ್ರಮವಾಗಿ Insert >> Fragment ಗೆ ಹೋಗಿ. |
01:25 | Insert fragment ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
01:29 | ಫ್ರ್ಯಾಗ್ಮೆಂಟ್ ಗಳ ಪಟ್ಟಿಯಲ್ಲಿ, alkanes ಫೋಲ್ಡರ್ ಅನ್ನು ತೆರೆಯಲು, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. |
01:35 | ಈಗ ಕಾಣಿಸುವ ಡ್ರಾಪ್ ಡೌನ್ ಲಿಸ್ಟ್ ನಲ್ಲಿ, butane.cml ಅನ್ನು ಆಯ್ಕೆಮಾಡಿ. |
01:41 | Insert ಬಟನ್ ಅನ್ನು ಕ್ಲಿಕ್ ಮಾಡಿ. Insert Fragment ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, X (ಕ್ಲೋಸ್) ಅನ್ನು ಕ್ಲಿಕ್ ಮಾಡಿ. |
01:49 | ನೀಲಿ ಬಣ್ಣದಲ್ಲಿ ಹೈಲೈಟ್ ಮಾಡಲಾದ 'ಬ್ಯುಟೇನ್' ಅಣು ಪ್ಯಾನಲ್ ನ ಮೇಲೆ ಕಾಣಿಸಿಕೊಳ್ಳುತ್ತದೆ. |
01:54 | ಹೈಲೈಟ್ ಅನ್ನು ತೆಗೆಯಲು, Ctrl, Shift ಮತ್ತು A ಕೀಗಳನ್ನು ಒಟ್ಟಿಗೆ ಒತ್ತಿ. |
02:02 | ಸರಿಯಾಗಿ ಹೊಂದಿಸಲು, Navigation ಟೂಲ್ ಅನ್ನು ಬಳಸಿ ರಚನೆಯನ್ನು ತಿರುಗಿಸಿ. |
02:09 | ಈಗ, ಅಣುವಿಗೆ ಪರಮಾಣುಗಳನ್ನು ಸೇರಿಸುವುದು ಹೇಗೆ ಎಂದು ನಾವು ಕಲಿಯುವೆವು. |
02:14 | ಟೂಲ್ ಬಾರ್ ನಲ್ಲಿರುವ, Draw ಟೂಲ್ ಐಕಾನ್ ಅನ್ನು ಕ್ಲಿಕ್ ಮಾಡಿ. |
02:18 | ಕೊನೆಯ Carbon ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ಯಾನಲ್ ನ ಮೇಲೆ ಎಳೆದುತನ್ನಿ (drag). |
02:23 | ಅಗತ್ಯವಿರುವ ಜಲಜನಕದೊಂದಿಗೆ, ಕಾರ್ಬನ್ ಪರಮಾಣುವನ್ನು ಸೇರಿಸಲಾಗಿದೆ. |
02:27 | ಈಗ ನಾವು ಪ್ಯಾನಲ್ ನಲ್ಲಿ ಪೆಂಟೇನ್ ನ ಅಣುವನ್ನು ಹೊಂದಿದ್ದೇವೆ. |
02:32 | ಹಾಗೆಯೇ, ನೀವು ಆಲ್ಕೇನ್ ಗಳ ಸರಣಿಯನ್ನು ತಯಾರಿಸಲು, Draw ಟೂಲ್ ಅನ್ನು ಬಳಸಿ, ಪರಮಾಣುಗಳನ್ನು ಸೇರಿಸಿಬಹುದು. |
02:39 | ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. Draw ಟೂಲ್ ಅನ್ನು ಬಳಸಿ ಪ್ರೊಪೇನ್ ಅನ್ನು ರಚಿಸಿ. |
02:45 | ಈಗ 'ಇಥೇನ್' ನ ಅಣುವನ್ನು ಪಡೆಯಲು, ಕೊನೆಯ ಕಾರ್ಬನ್ ಪರಮಾಣುವನ್ನು ಜಲಜನಕದೊಂದಿಗೆ ಡಿಲೀಟ್ ಮಾಡೋಣ. |
02:52 | ಪರಮಾಣುಗಳನ್ನು ಡಿಲೀಟ್ ಮಾಡಲು, ಟೂಲ್ ಬಾರ್ ನಲ್ಲಿರುವ Selection tool ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
02:57 | ಆಯ್ಕೆಮಾಡಲು, ಕೊನೆಯ ಕಾರ್ಬನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ. |
03:02 | ಆಯ್ಕೆಯಾದ ಪರಮಾಣುಗಳು, ನೀಲಿ ಬಣ್ಣದಲ್ಲಿ ಕಾಣುತ್ತವೆ. |
03:06 | ಡಿಲೀಟ್ ಮಾಡಲು, Backspace ಅನ್ನು ಒತ್ತಿ. ಅಥವಾ, Edit ಮೆನ್ಯುವಿನಲ್ಲಿಯ clear ಆಯ್ಕೆಯನ್ನು ಸಹ ನೀವು ಬಳಸಬಹುದು. |
03:14 | redo (ರೀ ಡೂ) ಮಾಡಲು, Ctrl ಮತ್ತು Z ಕೀ ಗಳನ್ನು ಒಟ್ಟಿಗೆ ಒತ್ತಿ. |
03:20 | ಅಣುವಿನಲ್ಲಿ ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು ಹೇಗೆಂದು ನಾವು ತೋರಿಸುವೆವು. |
03:26 | ಬಾಂಡ್ ಗಳನ್ನು ಸೇರಿಸಲು, ಟೂಲ್ ಬಾರ್ ನಲ್ಲಿರುವ Draw ಟೂಲ್ ಐಕಾನ್ ಅನ್ನು ಆಯ್ಕೆ ಮಾಡಿ. |
03:31 | ಎಡ ಭಾಗದಲ್ಲಿ, Draw Settings ಮೆನ್ಯು ಓಪನ್ ಆಗುತ್ತದೆ. |
03:35 | ಡಿಫಾಲ್ಟ್ ಆಗಿ, Element ಡ್ರಾಪ್ ಡೌನ್ ಲಿಸ್ಟ್ ನಲ್ಲಿ, Carbon ಆಯ್ಕೆಯಾಗಿದೆ. |
03:40 | ಡಬಲ್ ಬಾಂಡ್ ಅನ್ನು ಸೇರಿಸಲು, Bond Order ಡ್ರಾಪ್ ಡೌನ್ ನಲ್ಲಿ, Double ಅನ್ನು ಆಯ್ಕೆಮಾಡಿ. |
03:46 | C-1 ಮತ್ತು C-2 ಗಳ ನಡುವಿನ ಬಾಂಡ್ ಅನ್ನು, ಡಬಲ್ ಬಾಂಡ್ ಆಗಿ ಪರಿವರ್ತಿಸಲು, ಅದರ ಮೇಲೆ ಕ್ಲಿಕ್ ಮಾಡಿ. |
03:52 | ಡಬಲ್ ಬಾಂಡ್ ಅನ್ನು ಟ್ರಿಪಲ್ ಬಾಂಡ್ ಆಗಿ ಪರಿವರ್ತಿಸಲು, Bond Order ನಿಂದ Triple ಅನ್ನು ಆಯ್ಕೆಮಾಡಿ. ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
03:59 | ಬಾಂಡ್ ಗಳನ್ನು ತೆಗೆದುಹಾಕಲು, ಮೌಸ್ ನ ಬಲ ಬಟನ್ ಅನ್ನು ಹಿಡಿದು ಬಾಂಡ್ ಗಳ ಮೇಲೆ ಕ್ಲಿಕ್ ಮಾಡಿ. |
04:04 | ಇದರ ಪರಿಣಾಮವಾಗಿ ಎರಡು ಬೇರೆ ಬೇರೆ ಅಣುಗಳು ಆಗುತ್ತವೆ. |
04:08 | ಈಗ ಈ ಅಣುಗಳನ್ನು ಮತ್ತೆ ಜೋಡಿಸೋಣ. |
04:11 | ಒಂದು ಅಣುವಿನ ಕಾರ್ಬನ್ ನ ಮೇಲೆ ಕ್ಲಿಕ್ ಮಾಡಿಕೊಂಡು, ಇನ್ನೊಂದು ಅಣುವಿನ ಕಾರ್ಬನ್ ನ ಮೇಲೆ ಡ್ರ್ಯಾಗ್ ಮಾಡಿ, ಕ್ಲಿಕ್ ಮಾಡಿ. |
04:18 | Bond Centric Manipulation (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಬಳಸಿ, ನಾವು ಬಾಂಡ್ ಗಳನ್ನು ತಿರುಗಿಸಬಹುದು ಮತ್ತು ಬಾಂಡ್ ನ ಉದ್ದವನ್ನು ಬದಲಿಸಬಹುದು. |
04:24 | ಟೂಲ್ ಬಾರ್ ನಲ್ಲಿ, Bond Centric Manipulation tool ನ ಮೇಲೆ ಕ್ಲಿಕ್ ಮಾಡಿ. |
04:29 | ಎಡಭಾಗದಲ್ಲಿ, Bond Centric Manipulate ಸೆಟ್ಟಿಂಗ್ ಗಳ ಮೆನ್ಯು ತೆರೆದುಕೊಳ್ಳುತ್ತದೆ. |
04:34 | ಡಿಫಾಲ್ಟ್ ಆಗಿ, Show Angles ಮತ್ತು Snap-to Bonds ಆಯ್ಕೆಗಳನ್ನು ಚೆಕ್ ಮಾಡಲಾಗಿದೆ. |
04:39 | Snap-to Threshold (ಸ್ನ್ಯಾಪ್ ಟು ಥ್ರೆಶೋಲ್ಡ್), 100 (10 ಡಿಗ್ರಿ) ಎಂದು ಸೆಟ್ ಆಗಿದೆ. |
04:43 | ಬಳಕೆದಾರರು, ತಮ್ಮ ಅವಶ್ಯಕತೆಗೆ ತಕ್ಕಂತೆ ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬಹುದು. |
04:49 | ಕೋನಗಳನ್ನು ತೋರಿಸಲು, ಎರಡು ಪರಮಾಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
04:55 | ನಾವು ಬಾಂಡ್ ಗಳ ರೊಟೇಷನ್ ದ ಸಮತಲವನ್ನು (ಪ್ಲೇನ್) ನಿರ್ಧರಿಸಬೇಕು. |
04:59 | ನಿಮಗೆ ಬೇಕಾದ ಸಮತಲವನ್ನು ನಿರ್ಧರಿಸಲು, ಬಾಂಡ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಮೇಲೆ ಅಥವಾ ಕೆಳಗೆ ಚಲಿಸಿ. |
05:05 | ಪರಮಾಣುಗಳ ನಡುವಿನ ಸಮತಲವು, ನೀಲಿ ಅಥವಾ ಹಳದಿ ಬಣ್ಣದಲ್ಲಿ ಕಾಣಿಸುತ್ತದೆ. |
05:11 | ತಿರುಗಿಸಲು, ಪರಮಾಣುಗಳಲ್ಲಿ ಒಂದನ್ನು ಕ್ಲಿಕ್ ಮಾಡಿ ಮತ್ತು ಚಲಿಸಿ. |
05:16 | ಹೊಂದಿಕೊಂಡ ಬಾಂಡ್, ಪರಮಾಣುಗಳೊಂದಿಗೆ ನಿಗದಿತ ಸಮತಲದಲ್ಲಿ ರೋಟೇಟ್ ಆಗುತ್ತದೆ. |
05:21 | ಬಾಂಡ್ ನ ಉದ್ದವನ್ನು ಬದಲಿಸಲು, ಮೌಸ್ ನ ಬಲ ಬಟನ್ ಅನ್ನು ಹಿಡಿದುಕೊಂಡು ಡ್ರ್ಯಾಗ್ ಮಾಡಿ. |
05:27 | ಈಗ ಹೈಡ್ರೋಜನ್ ಗಳನ್ನು ಮೀಥೈಲ್-ಗ್ರುಪ್ ಗಳಾಗಿ ಪರಿವರ್ತಿಸುವುದು ಹೇಗೆ ಎಂದು ನಾವು ತೋರಿಸುವೆವು. |
05:32 | Build ಮೆನ್ಯುವಿನ ಮೇಲೆ, ನಂತರ Change H To Methyl ಮೇಲೆ ಕ್ಲಿಕ್ ಮಾಡಿ. |
05:38 | ಈಗ ಇಲ್ಲಿ, ಎಲ್ಲಾHydrogen ಗಳ ಬದಲಾಗಿ 'ಮಿಥೈಲ್ ಗ್ರುಪ್' ಗಳು ಇರುತ್ತವೆ. |
05:43 | ಬದಲಾವಣೆಗಳನ್ನು undo ಮಾಡಲು, CTRL ಮತ್ತು Z ಕೀ ಗಳನ್ನು ಒಟ್ಟಿಗೆ ಒತ್ತಿ. |
05:49 | ನಾವು ನಿರ್ದಿಷ್ಟವಾದ ಒಂದು 'ಹೈಡ್ರೋಜೆನ್' ಪರಮಾಣುವನ್ನು ಆಯ್ಕೆ ಮಾಡಿ ಅದನ್ನು 'ಮಿಥೈಲ್ ಗ್ರುಪ್' ಆಗಿ ಬದಲಾಯಿಸಬಹುದು. |
05:55 | ಟೂಲ್ ಬಾರ್ ನಲ್ಲಿರುವ Selection tool ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
05:59 | ಆಯ್ಕೆಮಾಡಲು, ಕೊನೆಯ ಕಾರ್ಬನ್ ಪರಮಾಣುವಿಗೆ ಸೇರಿರುವ 'ಹೈಡ್ರೋಜೆನ್' ಅನ್ನು ಕ್ಲಿಕ್ ಮಾಡಿ. |
06:04 | Build ಮೆನ್ಯುವಿಗೆ ಹೋಗಿ , Change H to Methyl ನ ಮೇಲೆ ಕ್ಲಿಕ್ ಮಾಡಿ. |
06:10 | ಆಯ್ಕೆ ಮಾಡಲಾದ 'ಹೈಡ್ರೋಜೆನ್', 'ಮಿಥೈಲ್ ಗ್ರುಪ್' ನಿಂದ ಬದಲಾಯಿಸಲ್ಪಡುತ್ತದೆ. |
06:15 | ಡಿಸೆಲೆಕ್ಟ್ ಮಾಡಲು, Ctrl, Shift ಮತ್ತು A ಕೀಲಿಗಳನ್ನು ಒಟ್ಟಿಗೆ ಒತ್ತಿ. |
06:22 | ಈಗ, ರಚನೆ ಗಳನ್ನು ಕಾಪಿ, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು ಹೇಗೆ ಎಂದು ನೋಡೋಣ. |
06:28 | ಒಂದು ಹೊಸ ವಿಂಡೋವನ್ನು ಓಪನ್ ಮಾಡಲು, File >> New ಗಳನ್ನು ಕ್ಲಿಕ್ ಮಾಡಿ. |
06:33 | ನಾವು ಒಂದು ಮಾಲ್ಟೋಸ್ ಅಣುವನ್ನು ರಚಿಸಲು ಕಲಿಯುವೆವು. |
06:37 | ಮಾಲ್ಟೋಸ್, ಎರಡು ಗ್ಲುಕೋಸ್ ಅಣುಗಳಿಂದ ಮಾಡಲ್ಪಟ್ಟಿದೆ. |
06:41 | ಒಂದು ಗ್ಲುಕೋಸ್ ಅಣುವನ್ನು ಸೇರಿಸಲು, Build ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. |
06:46 | ಕೆಳಕ್ಕೆ ಸ್ಕ್ರೋಲ್ ಮಾಡಿ, Insert >> Fragment ಗಳ ಮೇಲೆ ಕ್ಲಿಕ್ ಮಾಡಿ. |
06:51 | Insert Fragment ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
06:55 | ಈ ಲಿಸ್ಟ್ ನ ಕೆಳಕ್ಕೆ ಸ್ಕ್ರೋಲ್ ಮಾಡಿ, Cyclic sugars (ಸೈಕ್ಲಿಕ್ ಶುಗರ್ಸ್) ಎಂಬ ಫೋಲ್ಡರ್ ಅನ್ನು ಕ್ಲಿಕ್ ಮಾಡಿ. |
07:01 | ಒಂದು ಸಬ್-ಮೆನ್ಯು ಕಾಣಿಸುತ್ತದೆ. |
07:04 | ಕೆಳಕ್ಕೆ ಹೋಗಿ beta-d-glucopyranose.cml(ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ಅನ್ನು ಆಯ್ಕೆ ಮಾಡಿ. |
07:10 | Insert ಬಟನ್ ನ ಮೇಲೆ ಕ್ಲಿಕ್ ಮಾಡಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
07:16 | ಪ್ಯಾನಲ್ ನಲ್ಲಿ beta-D-glucopyranose.cml (ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ನೀಲಿ ಬಣ್ಣದಲ್ಲಿ ಹೈಲೈಟ್ ಆಗಿದ್ದು ಕಾಣಿಸುತ್ತದೆ. |
07:24 | hand ಟೂಲ್ ಅನ್ನು ಬಳಸಿ, ಇದನ್ನು ಮಧ್ಯಕ್ಕೆ ಟ್ರಾನ್ಸ್ಲೇಟ್ ಮಾಡಿ. |
07:28 | ಈಗ ಇನ್ನೊಂದು ಗ್ಲುಕೋಸ್ ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡೋಣ. |
07:33 | ಮೆನ್ಯು ಬಾರ್ ನಲ್ಲಿರುವ Edit ಮೆನ್ಯುವನ್ನು ಕ್ಲಿಕ್ ಮಾಡಿ. |
07:36 | Copy ಯ ಮೇಲೆ ಕ್ಲಿಕ್ ಮಾಡಿ. ಮತ್ತೊಮ್ಮೆ Edit ಮೆನ್ಯುವಿನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ, Paste ಅನ್ನು ಕ್ಲಿಕ್ ಮಾಡಿ. |
07:44 | ದಯವಿಟ್ಟು ಗಮನಿಸಿ: ಕಾಪಿ- ಪೇಸ್ಟ್ ಮಾಡುವಾಗ, ವಿಂಡೋ ಒಂದು ಕ್ಷಣ ಮಬ್ಬಾಗಿ ನಂತರ ಸರಿಹೋಗುತ್ತದೆ. |
07:51 | ಪ್ಯಾನಲ್ ನಲ್ಲಿ, ಮೊದಲು ಇದ್ದ ಅಣುವಿನ ಮೇಲೆ, ಒಂದು ಹೊಸ ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡಲಾಗಿದೆ. |
07:58 | ಕರ್ಸರ್, ಒಂದು ಕೈ ಹಾಗೆ ಬದಲಾಗುತ್ತದೆ. |
08:01 | ಮೂಲ ಅಣುವಿನಿಂದ, ಕಾಪಿ ಮಾಡಿದ ಅಣುವನ್ನು ಸರಿಸಿ. |
08:06 | ಈಗ ಪ್ಯಾನಲ್ ನಲ್ಲಿ, ಎರಡು ವಿಭಿನ್ನ ಅಣುಗಳಿವೆ. |
08:10 | ಡಿಸೆಲೆಕ್ಟ್ ಮಾಡಲು, Ctrl, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ. |
08:17 | ಈಗ ನಾವು ಅಣುಗಳಿಗೆ ಲೇಬಲ್ ಮಾಡೋಣ. ಇದು ಎಲ್ಲಾ ಪರಮಾಣುಗಳ ಸ್ಥಾನವನ್ನು ಗುರುತಿಸಲು ಸಹಾಯಕವಾಗಿದೆ. |
08:25 | ಲೇಬಲ್ ಮಾಡಲು, Display Types ಡ್ರಾಪ್ ಡೌನ್ ಮೆನ್ಯುವಿನಲ್ಲಿ, Label ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
08:32 | 'ಮಾಲ್ಟೋಸ್' ಅನ್ನು ಪಡೆಯಲು, ನೀರಿನ ಒಂದು ಅಣುವನ್ನು ತೆಗೆದುಹಾಕುವುದು ಅವಶ್ಯವಾಗಿದೆ. |
08:37 | ಮೊದಲ ಅಣುವಿನ C-1 ಮೇಲಿನ OH ಗುಂಪನ್ನು ಮತ್ತು ಎರಡನೆಯ ಅಣುವಿನ C-9 ಮೇಲಿನ ಹೈಡ್ರೋಜನ್ ಅನ್ನು ತೆಗೆದುಹಾಕಿ. |
08:46 | Draw tool settings ನಲ್ಲಿ, Carbon ಅನ್ನು ಆಯ್ಕೆಮಾಡಿ. |
08:50 | Bond Order ನಲ್ಲಿ, Single ಅನ್ನು ಆಯ್ಕೆಮಾಡಿ. |
08:54 | Adjust Hydrogens ಎಂಬ ಚೆಕ್-ಬಾಕ್ಸ್ ಅನ್ನು ಅನ್-ಚೆಕ್ ಮಾಡಿ. |
08:58 | oxygen ಪರಮಾಣುವಿನ ಮೂಲಕ, ಮೊದಲ ಅಣುವಿನ C-1 ಮತ್ತು ಎರಡನೇ ಅಣುವಿನ C-9 ಗಳನ್ನು ಜೋಡಿಸಲು ಕ್ಲಿಕ್ ಮಾಡಿ, ಎಳೆಯಿರಿ. |
09:07 | ಈಗ ನಾವು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಬೇಕು. |
09:11 | Auto Optimization tool ಅನ್ನು ಆಯ್ಕೆಮಾಡಿ. |
09:15 | ಎಡ ಭಾಗದಲ್ಲಿ, Auto Optimization settings ಮೆನ್ಯು ಕಾಣಿಸುತ್ತದೆ. |
09:20 | MMFF94 ಫೋರ್ಸ್ ಫೀಲ್ಡ್ ಅನ್ನು ಆಯ್ಕೆಮಾಡಿ ಮತ್ತು Start ನ ಮೇಲೆ ಕ್ಲಿಕ್ ಮಾಡಿ. |
09:27 | ಆಪ್ಟಿಮೈಜೇಶನ್ ಕ್ರಿಯೆಯು ಪೂರ್ಣಗೊಳ್ಳಲು ಕೆಲವು ಸೆಕೆಂಡ್ ಗಳು ಬೇಕಾಗಬಹುದು. ನೀವು ಈಗ ಲೇಬಲ್ ಗಳನ್ನು ತೆಗೆದುಹಾಕಬಹುದು. |
09:35 | ಈಗ ಪ್ಯಾನಲ್ ನಲ್ಲಿ, ಆಪ್ಟಿಮೈಜ್ ಆಗಿರುವ 'ಮಾಲ್ಟೋಸ್' ನ ರಚನೆಯನ್ನು ನಾವು ಪಡೆದಿದ್ದೇವೆ. |
09:40 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: ಪರಮಾಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು, |
09:47 | ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು, |
09:50 | ಬಾಂಡ್ ಗಳನ್ನು ತಿರುಗಿಸಿವುದು (ರೊಟೇಟ್ ಮಾಡುವುದು), |
09:52 | ಬಾಂಡ್ ನ ಉದ್ದವನ್ನು ಬದಲಿಸುವುದು, |
09:54 | ಹೈಡ್ರೋಜನ್ ಅನ್ನು ಮೀಥೈಲ್-ಗ್ರುಪ್ ಗೆ ಬದಲಾಯಿಸುವುದು, |
09:56 | ರಚನೆಯನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು – ಇವುಗಳ ಕುರಿತು ಕಲಿತಿದ್ದೇವೆ. |
10:00 | ಒಂದು ಅಸೈನ್ಮೆಂಟ್: draw ಟೂಲ್ ಅನ್ನು ಬಳಸಿ, ಬ್ಯೂಟೇನ್ ಅಣುವನ್ನು ರಚಿಸಿ. |
10:06 | ಇದನ್ನು 2,3 dimethyl Butane(2,3 ಡೈಮಿಥೈಲ್ ಬ್ಯೂಟೇನ್) ಆಗಿ ಪರಿವರ್ತಿಸಿ. |
10:10 | ಬಾಂಡ್ ಗಳನ್ನು ತಿರುಗಿಸಿ (ರೊಟೇಟ್ ಮಾಡಿ) ಮತ್ತು ಬಾಂಡ್ ನ ಉದ್ದಗಳನ್ನು ಬದಲಿಸಿ. |
10:14 | ಸೆಲ್ಯುಲೋಸ್ ನ ಒಂದು ಅಣುವನ್ನು ರಚಿಸಿ. (ಸೂಚನೆ: Insert fragment library ಯಲ್ಲಿ, D- glucose monomer ಲಭ್ಯವಿದೆ.) |
10:22 | UFF ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ. |
10:27 | ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.
ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:36 | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
10:44 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
10:52 | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |