Avogadro/C2/Hydrogen-Bonding/Kannada
From Script | Spoken-Tutorial
Revision as of 16:03, 8 July 2018 by Anjana310312 (Talk | contribs)
Time | Narration |
00:01 | Hydrogen bonding in molecules ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮೆಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, ಅವೋಗ್ಯಾಡ್ರೋ ವನ್ನು ಕಾನ್ಫಿಗರ್ ಮಾಡಲು, |
00:11 | ಅಣು ಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು, |
00:14 | ಹೈಡ್ರೋಜನ್ ಬಾಂಡ್ ನ ಉದ್ದವನ್ನು ಅಳತೆ ಮಾಡಲು, |
00:16 | ಫೋರ್ಸ್ ಡಿಸ್ಪ್ಲೇ ಯ ವಿಧಗಳನ್ನು ಮತ್ತು ಅಣುಗಳಲ್ಲಿ ಡೈಪೋಲ್ ಚಲನೆಗಳನ್ನು ತೋರಿಸುವುದು – ಇವುಗಳ ಕುರಿತು ಕಲಿಯುವೆವು. |
00:22 | ಇಲ್ಲಿ ನಾನು Ubuntu Linux OS 14.04 ಆವೃತ್ತಿ, |
00:27 | Avogadro 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ. |
00:34 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು Avogadro ಇಂಟರ್ಫೇಸ್ ಅನ್ನು ಬಳಸಲು ಕಲಿತಿರಬೇಕು. |
00:40 | ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ. |
00:45 | ಈ ಟ್ಯುಟೋರಿಯಲ್ ನಲ್ಲಿ ಬಳಸಿದ ರಚನೆಗಳನ್ನು ನಿಮ್ಮ ಅನುಕೂಲಕ್ಕಾಗಿ ಕೋಡ್ ಫೈಲ್ ಗಳಾಗಿ ಕೊಡಲಾಗಿದೆ. |
00:52 | ನಾನು ಹೊಸ Avogadro ವಿಂಡೋವನ್ನು ತೆರೆದಿದ್ದೇನೆ. |
00:56 | Draw Tool ಐಕಾನ್ ನ ಮೇಲೆ ಕ್ಲಿಕ್ ಮಾಡಿ ಮತ್ತು Panel ನ ಮೇಲೆ ಕ್ಲಿಕ್ ಮಾಡಿ. |
01:01 | methane ಅನ್ನು ಪ್ಯಾನಲ್ ನ ಮೇಲೆ ಬರೆಯಲಾಗಿದೆ. |
01:04 | ಈಗ ನಾವು Avogadro ವನ್ನು ಕಾನ್ಫಿಗರ್ ಮಾಡಲು ಕಲಿಯೋಣ. |
01:08 | Settings ಮೆನ್ಯು ಗೆ ಹೋಗಿ ಮತ್ತು Configure Avogadro ನ ಮೇಲೆ ಕ್ಲಿಕ್ ಮಾಡಿ. |
01:13 | Settings ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
01:16 | ಡಯಲಾಗ್ ಬಾಕ್ಸ್, -
General Plugins Project tree ಎಂಬ ಮೂರು ಮೆನ್ಯು ಆಯ್ಕೆಗಳನ್ನೊಳಗೊಂಡ ಸಬ್ ಮೆನ್ಯುವನ್ನು ಹೊಂದಿದೆ. |
01:24 | ಡಿಫಾಲ್ಟ್ ಆಗಿ, General ಮೆನ್ಯು ಆಯ್ಕೆಯಾಗಿರುತ್ತದೆ. |
01:28 | General ಮೆನ್ಯು: Quality ಮತ್ತು Fog ಎಂಬ ಎರಡು ಸ್ಲೈಡರ್ ಗಳನ್ನು ಹೊಂದಿದೆ. |
01:34 | ಸ್ಲೈಡರ್ ಅನ್ನು Low ಇಂದ High ಗೆ ಡ್ರ್ಯಾಗ್ ಮಾಡಿದಂತೆ ಚಿತ್ರಣದ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ. |
01:41 | Quality ಸ್ಲೈಡರ್ ಅನ್ನು Low ಗೆ ಡ್ರ್ಯಾಗ್ ಮಾಡಿ, ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ. |
01:47 | ಗಮನಿಸಿ, ರಚನೆ ಸರಿಯಾಗಿ ಚಿತ್ರಣವಾಗಿಲ್ಲ. |
01:51 | Quality ಸ್ಲೈಡರ್ ಅನ್ನು High ಗೆ ಡ್ರ್ಯಾಗ್ ಮಾಡಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ. |
01:56 | ಅಣು ಹೆಚ್ಚಿನ ಗುಣಮಟ್ಟದೊಂದಿಗೆ, ಪ್ರಕಾಶಮಾನವಾಗಿ ಚಿತ್ರಣಗೊಂಡಿರುವುದನ್ನು ಗಮನಿಸಿ. |
02:02 | High quality rendering (ಹೈ ಕ್ವಾಲಿಟಿ ರೆಂಡರಿಂಗ್)- ಅನ್ನು ಇಮೇಜ್ ಗಳನ್ನು ಪ್ರಿಂಟ್ ಮಾಡಲು ಮತ್ತು ಪಬ್ಲಿಶ್ ಮಾಡಲು ಬಳಸಲಾಗುತ್ತದೆ. |
02:07 | ಇದು CPU ದ ಹೆಚ್ಚಿನ ಶಕ್ತಿಯನ್ನು ಬಳಸುತ್ತದೆ. |
02:11 | Quality' ಸ್ಲೈಡರ್ ಅನ್ನು Medium ಗೆ ಡ್ರ್ಯಾಗ್ ಮಾಡಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:16 | ಸಾಮಾನ್ಯ ವೀಕ್ಷಣೆಗೆ ಮೀಡೀಯಂ ಕ್ವಾಲಿಟಿ ಸೆಟ್ಟಿಂಗ್ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. |
02:21 | ಈಗ Fog ಸ್ಲೈಡರ್: |
02:24 | Fogಸ್ಲೈಡರ್ ಅನ್ನು Lots ಗೆ ಡ್ರ್ಯಾಗ್ ಮಾಡಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:28 | ರಚನೆ ಮಸುಕಾಗಿರುವುದನ್ನು ಗಮನಿಸಿ. |
02:32 | Fog ಸ್ಲೈಡರ್ ಅನ್ನು Some ಗೆ ಡ್ರ್ಯಾಗ್ ಮಾಡಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
ರಚನೆ ಸ್ಪಷ್ಟವಾಗಿ ಕಾಣುತ್ತದೆ. |
02:40 | ನಂತರ Plugins ಮೆನ್ಯು. |
02:43 | Display Types ಡ್ರಾಪ್ ಡೌನ್ ಮೆನ್ಯು ಕಾಣುತ್ತದೆ. |
02:46 | Display Types ಚೆಕ್ ಬಾಕ್ಸ್ ಗಳೂ ಚೆಕ್ ಆಗಿರುವುದನ್ನು ಗಮನಿಸಿ. |
02:51 | Axes(ಎಕ್ಸೆಸ್) ನ ಮೇಲೆ ಕ್ಲಿಕ್ ಮಾಡಿ. 'ಎಕ್ಸೆಸ್ ಡಿಸ್ಲ್ಪ್ಲೇ ' ವಿಧದ ಕುರಿತಾದ ವಿವರಗಳು Details ಟೆಕ್ಸ್ಟ್ ಬಾಕ್ಸ್ ನಲ್ಲಿ ಕಾಣಿಸುತ್ತದೆ. |
02:59 | ಇದೇರೀತಿ ನೀವು ಉಳಿದ Display Type ಗಳ ವಿವರಗಳನ್ನು ನೋಡಬಹುದು. |
03:04 | ನಾನು ಎಲ್ಲಾ ಚೆಕ್ ಬಾಕ್ಸ್ ಗಳನ್ನು ಅನ್ ಚೆಕ್ ಮಾಡಿ Apply ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ. |
03:11 | Display Types ಮೆನ್ಯುವಿನಲ್ಲಿ ಕೇವಲ Ball and Stick ಚೆಕ್ ಬಾಕ್ಸ್ ಮಾತ್ರ ಕಾಣಿಸುತ್ತದೆ. |
03:16 | Ball and Stick Display Type ಚೆಕ್ ಬಾಕ್ಸ್ ಅನ್ನು ಅನ್ ಚೆಕ್ ಮಾಡಿ. |
03:20 | Ball and Stick ಕೂಡ ನಿಷ್ಕ್ರಿಯ (ಡಿಸೇಬಲ್) ಆದರೆ ಪ್ಯಾನಲ್ ನಿಂದ ಅಣು ಕಾಣೆಯಾಗುತ್ತದೆ. |
03:26 | ಡಿಸ್ಪ್ಲೇ ಯನ್ನು ತೋರಿಸಲು Ball and Stick ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
03:30 | ಎಲ್ಲಾ Display Type ಗಳನ್ನು ಸಕ್ರಿಯಗೊಳಿಸಲು Plugins ಗೆ ಹೋಗಿ. |
03:33 | Display Types ಡ್ರಾಪ್ ಡೌನ್ ನಲ್ಲಿರುವ ಎಲ್ಲಾ ಚೆಕ್ ಬಾಕ್ಸ್ ಗಳನ್ನು ಕ್ಲಿಕ್ ಮಾಡಿ. |
03:39 | Apply ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:41 | Display Types ಡ್ರಾಪ್ ಡೌನ್ ನಲ್ಲಿ ಎಲ್ಲಾ ಡಿಸ್ಲ್ಪೇ ವಿಧಗಳು ಕಾಣಿಸುತ್ತವೆ. |
03:46 | Settings ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, OK ಯನ್ನು ಕ್ಲಿಕ್ ಮಾಡಿ. |
03:50 | Display Types ಮೆನ್ಯುವಿನಲ್ಲಿ ಯಾವುದಾದರು ಡಿಸ್ಪ್ಲೇ ವಿಧವು ಸಕ್ರಿಯ(ಆಕ್ಟಿವೇಟ್) ಆಗಿಲ್ಲದಿದ್ದರೆ , Add ಬಟನ್ ಅನ್ನು ಕ್ಲಿಕ್ ಮಾಡಿ. |
03:58 | Add Display Type ಡಯಯಾಗ್ ಬಾಕ್ಸ್ ಕಾಣಿಸುತ್ತದೆ. |
04:02 | Types ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ ಬೇಕಾದ ಡಿಸ್ಪ್ಲೇ ವಿಧವನ್ನು ಆಯ್ಕೆ ಮಾಡಿಕೊಳ್ಳಿ. |
04:07 | ನಾನು Hydrogen Bond ಅನ್ನು ಆಯ್ಕೆ ಮಾಡುವೆನು ಮತ್ತು OK ಯನ್ನು ಕ್ಲಿಕ್ ಮಾಡಿ. |
04:11 | Display Types ಮೆನ್ಯುವಿನಲ್ಲಿ, Hydrogen Bond Display Type ಕಾಣಿಸುತ್ತದೆ. |
04:16 | ನಾನು ಈಗ ಇದನ್ನು ವಿವರಿಸಲು polar methanol(ಪೊಲಾರ್ ಮೆಥನಾಲ್) ಅಣುವಿನಲ್ಲಿ ಹೈಡ್ರೋಜನ್ ಬಾಂಡಿಂಗ್(ಜಲಜನಕದ ಬಂಧ) ನ ಉದಾಹರಣೆಯನ್ನು ತೆಗೆದುಕೊಳ್ಳುವೆನು. |
04:22 | ಪ್ಯಾನಲ್ ನಲ್ಲಿ ಈಗಾಗಲೇ methane ಅಣು ಇದೆ. |
04:26 | ವಿವರಣೆಗಾಗಿ ನನಗೆ methane ಅಣು ಗಳ ಒಂದು ಗುಂಪು ಬೇಕು. |
04:31 | methane ಅಣುವನ್ನು ಚಿತ್ರಿಸಲು, Draw tool ಅನ್ನು ಬಳಸುವುದು ಒಂದು ಸುಲಭ ಮಾರ್ಗವಾಗಿದೆ. |
04:36 | ಡಿಫಾಲ್ಟ್ ಆಗಿ Draw Settings ಮೆನ್ಯು, Element ಅನ್ನು Carbon ಎಂದೂ, Bond Order ಅನ್ನು Single ಎಂದೂ ಹೊಂದಿರುತ್ತದೆ. |
04:43 | ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ. |
04:46 | Element ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. Oxygen ಅನ್ನು ಆಯ್ಕೆ ಮಾಡಿ. |
04:50 | ನಂತರ ಮಿಥೇನ್ ಅಣುವಿನ ಯಾವುದಾದರೂ ಹೈಡ್ರೋಜನ್ ನ ಮೇಲೆ ಕ್ಲಿಕ್ ಮಾಡಿ. |
04:56 | ಈಗ ನಾವು ಪ್ಯಾನಲ್ ನಲ್ಲಿ Methanol ಅಣುಗಳ ಗುಂಪನ್ನು ಹೊಂದಿದ್ದೇವೆ. |
05:00 | Display Types ನಲ್ಲಿರುವ Hydrogen Bond ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
05:04 | ಸರಿಯಾಗಿ ಓರಿಯೆಂಟೇಷನ್ ಮಾಡಲು ಅಣು ಗಳನ್ನು ಆಪ್ಟಿಮೈಜ್ ಮಾಡೋಣ. |
05:08 | ಟೂಲ್ ಬಾರ್ ನಲ್ಲಿರುವ Auto Optimization Tool (ಆಟೋ ಆಪ್ಟಿಮೈಜೇಷನ್ ಟೂಲ್) ಅನ್ನು ಕ್ಲಿಕ್ ಮಾಡಿ. |
05:12 | ಎಡಭಾಗದಲ್ಲಿ Auto Optimization Settings ಕಾಣಿಸುತ್ತದೆ. |
05:17 | Force Field ಡ್ರಾಪ್ ಡೌನ್ ನಲ್ಲಿ, MMFF94 ಅನ್ನು ಆಯ್ಕೆ ಮಾಡಿ. |
05:22 | ಆಪ್ಟಿಮೈಜ್ ಮಾಡಲು Start ಬಟನ್ ಅನ್ನು ಕ್ಲಿಕ್ ಮಾಡಿ. |
05:26 | ನೀವು ಹಳದಿ ಬಣ್ಣದ ಗೆರೆಗಳಾಗಿ, hydrogen ಬಾಂಡ್ ನ ರಚನೆಯನ್ನು ನೋಡಬಹುದು. |
05:31 | ಈ ಬಾಂಡ್ ಗಳು ಒಂದು ಅಣು ನ ಹೈಡ್ರೋಜನ್ ಮತ್ತು ಇನ್ನೊಂದು ಅಣುವಿನ ಆಕ್ಸಿಜನ್ ನ ನಡುವೆ ಏರ್ಪಟ್ಟಿರುತ್ತವೆ. |
05:38 | 'ಆಟೋ ಆಪ್ಟಿಮೈಜೇಶನ್ ' ಅನ್ನು ನಿಲ್ಲಿಸಲು Stop ನ ಮೇಲೆ ಕ್ಲಿಕ್ ಮಾಡಿ. |
05:42 | ಈಗ ನಾನು ortho-nitrophenol (ಆರ್ಥೋ ನೈಟ್ರೋಫೆನಾಲ್) ನಲ್ಲಿ ಇಂಟ್ರಾಮೊಲಿಕ್ಯೂಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು. |
05:48 | ಇದಕ್ಕಾಗಿ ನಾನು Chemical structure database (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ ಅಣುವನ್ನು ತೆಗೆದುಕೊಳ್ಳುವೆನು. |
05:54 | ಮೊದಲು ತೆರೆದ ಎಲ್ಲಾ ವಿಂಡೋಗಳನ್ನು ಕ್ಲೋಸ್ ಮಾಡಿ ಮತ್ತು ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. |
05:59 | File ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, Import ಗೆ ಹೋಗಿ. Fetch by Chemical name (ಫೆಚ್ ಬೈ ಕೆಮಿಕಲ್ ನೇಮ್ ) ಅನ್ನು ಕ್ಲಿಕ್ ಮಾಡಿ. |
06:06 | Chemical Name ಟೆಕ್ಸ್ಟ್ ಬಾಕ್ಸ್ ಕಾಣಿಸುತ್ತದೆ. |
06:09 | ಸಣ್ಣ ಅಕ್ಷರದಲ್ಲಿ ortho-nitrophenol ಎಂದು ಟೈಪ್ ಮಾಡಿ. OK ಬಟನ್ ಅನ್ನು ಒತ್ತಿ. |
06:15 | ಪ್ಯಾನಲ್ ನ ಮೇಲೆ Ortho-nitrophenol(ಆರ್ಥೋ ನೈಟ್ರೋಫೆನಾಲ್) ಅಣು ಕಾಣಿಸುತ್ತದೆ. |
06:19 | ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸಲು, ಪ್ಯಾನಲ್ ನಲ್ಲಿ Ortho-nitrophenol(ಆರ್ಥೋ ನೈಟ್ರೊಫೆನಾಲ್) ಅಣುಗಳ ಒಂದು ಸಮೂಹ ಬೇಕು. |
06:26 | ನಾನು ಪ್ಯಾನಲ್ ನಲ್ಲಿ ಅಣುಗಳನ್ನು ಕಾಪಿ ಮಾಡಿ, ಪೇಸ್ಟ್ ಮಾಡಿದ್ದೇನೆ. |
06:30 | selection tool ಅನ್ನು ಬಳಸಿ, ಅಣುವನ್ನು ಆಯ್ಕೆಮಾಡಿ. |
06:34 | ಕಾಪಿ ಮಾಡಲು CTRL + C ಯನ್ನು ಮತ್ತು ಪೇಸ್ಟ್ ಮಾಡಲು CTRL + V ಯನ್ನು ಒತ್ತಿ. |
06:39 | Hydrogen Bond ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
06:42 | ಸರಿಯಾದ ಓರಿಯೆಂಟೇಷನ್ ಬೇಕಿದ್ದಲ್ಲಿ ಅಣುಗಳನ್ನು ಆಪ್ಟಿಮೈಜ್ ಮಾಡಿ. |
06:46 | ಆಪ್ಟಿಮೈಜೇಷನ್ ಕ್ರಿಯೆಯಲ್ಲಿ, ಅಣುಗಳಲ್ಲಿ 'ಇಂಟ್ರಾ ಮೊಲಿಕ್ಯೂಲ್ ಹೈಡ್ರೋಜನ್ ಬಾಂಡ್' ಏರ್ಪಡುತ್ತದೆ. |
06:54 | ಅಣುವಿನಲ್ಲಿ nitro ಗುಂಪಿನ ಆಕ್ಸಿಜನ್ ಮತ್ತು Hydroxy ಗುಂಪಿನ ಹೈಡ್ರೋಜನ್ ಗಳ ನಡುವೆ ಹೈಡ್ರೋಜನ್ ಬಾಂಡ್ ಏರ್ಪಟ್ಟಿದೆ. |
07:02 | ಈಗ ಈ ಹೈಡ್ರೋಜನ್ ಬಾಂಡ್ ನ ಉದ್ದವನ್ನು ಅಳತೆ ಮಾಡೋಣ. |
07:06 | ಟೂಲ್ ಬಾರ್ ನಲ್ಲಿ Click to Measure ಐಕಾನ್ ಅನ್ನು ಕ್ಲಿಕ್ ಮಾಡಿ. |
07:10 | ಹೈಡ್ರೋಜನ್ ಮತ್ತು ಆಕ್ಸಿಜನ್ ಅಣುಗಳ ಮೇಲೆ ಕ್ಲಿಕ್ ಮಾಡಿ. |
07:14 | ಪ್ಯಾನಲ್ ನ ಕೆಳಭಾಗದಲ್ಲಿ ಹೈಡ್ರೋಜನ್ ಬಾಂಡ್ ನ ಉದ್ದ ಡಿಸ್ಪ್ಲೇ ಆಗುತ್ತದೆ. |
07:19 | ಹೈಡ್ರೋಜನ್ ಬಾಂಡ್ ನ ಪ್ರಾಮುಖ್ಯತೆಯನ್ನು ಈ ಸ್ಲೈಡ್ ತೋರಿಸುತ್ತದೆ. |
07:23 | ಹೈಡ್ರೋಜನ್ ಬಾಂಡ್ ಗಳು – ನೀರಿನ ಅನನ್ಯ ದ್ರಾವಕ ಸಾಮರ್ಥ್ಯಗಳನ್ನು ನಿರ್ಧರಿಸುತ್ತವೆ ಮತ್ತು ಮಂಜುಗಡ್ಡೆಯ ಸ್ಪಟಿಕ ರಚನೆಯನ್ನು ಸ್ಥಿರಗೊಳಿಸುತ್ತವೆ, |
07:32 | DNA ಯ ಪೂರಕ ಎಳೆಗಳನ್ನು ಒಟ್ಟಿಗೆ ಹಿಡಿದಿಡುತ್ತವೆ, |
07:36 | ಪ್ರೋಟೀನ್ ಮತ್ತು ನ್ಯೂಕ್ಲಿಕ್ ಆಸಿಡ್ ಗಳ ರಚನೆಯನ್ನು ನಿರ್ಧರಿಸುತ್ತವೆ ಮತ್ತು ಸ್ಥಿರಗೊಳಿಸುತ್ತವೆ. |
07:41 | enzyme catalysis (ಎಂಝೈಮ್ ಕ್ಯಾಟಾಲಿಸಿಸ್)ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. |
07:46 | ಅಸೈನ್ಮೆಂಟ್ :, ಇವುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಗಳನ್ನು ತೋರಿಸಿ:
1. Para-hydroxybenzoic acid(ಪ್ಯಾರಾ-ಹೈಡ್ರೋಕ್ಸಿ ಬೆಂಝೋಯಿಕ್ ಆಸಿಡ್). 2. Nucleobases- adenine and uracil( ನ್ಯೂಕ್ಲಿಯೋಬೇಸ್ –ಅಡಿನೈನ್ ಮತ್ತು ಯುರಾಸಿಲ್). |
07:56 | ನಿಮ್ಮ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು. |
08:00 | Para-hydroxybenzoic acid (ಪ್ಯಾರಾ-ಹೈಡ್ರೋಕ್ಸಿ ಬೆಂಝೋಯಿಕ್ ಆಸಿಡ್) ಅಣುಗಳಲ್ಲಿ ಮತ್ತು adenine ?( ಅಡಿನೈನ್ )ಮತ್ತು uracil (ಯುರಾಸಿಲ್ ) ಅಣುಗಳಲ್ಲಿ ಇಂಟರ್ ಮೊಲಿಕ್ಯೂಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ಗಮನಿಸಿ. |
08:10 | ಅಣುಗಳ ಫೋರ್ಸ್ (ಬಲ) ಅನ್ನು ತೋರಿಸಲು , ನಾವು Display Types ಎಂಬ ಆಯ್ಕೆಯನ್ನು ಹೊಂದಿದ್ದೇವೆ. |
08:15 | ನಾನು ನೀರಿನ ಅಣುಗಳೊಂದಿಗೆ ಒಂದು ಹೊಸ ವಿಂಡೋ ವನ್ನು ಓಪನ್ ಮಾಡುವೆನು. |
08:19 | Display Types ನಲ್ಲಿ Force ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
08:23 | Hydrogen Bond ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
08:26 | ಟೂಲ್ ಬಾರ್ ನಲ್ಲಿ Auto Optimization Tool ಐಕಾನ್ ಅನ್ನು ಕ್ಲಿಕ್ ಮಾಡಿ. |
08:30 | MMFF94 Force Field ಅನ್ನು ಆಯ್ಕೆ ಮಾಡಿ. Start ಬಟನ್ ಅನ್ನು ಕ್ಲಿಕ್ ಮಾಡಿ. |
08:36 | ಆಪ್ಟಿಮೈಜೇಷನ್ ಪ್ರಕ್ರಿಯೆಯಲ್ಲಿ, : Force ಡಿಸ್ಪ್ಲೇ ಟೈಪ್ , ಪ್ರತಿ ಪರಮಾಣುವಿನ ಮೇಲೆ ಆಗುವ ಬಲ ಪ್ರಯೋಗವನ್ನು ಹಸಿರು ಬಾಣದ ಗುರುತಿನ ಲ್ಲಿ ತೋರಿಸುತ್ತದೆ. |
08:45 | ಬಾಣದ ಗುರುತುಗಳು ಬಲದ ದಿಕ್ಕು ಮತ್ತು ಪ್ರಮಾಣವನ್ನು ತೋರಿಸುತ್ತದೆ. |
08:49 | ಅಣು ಆಪ್ಟಿಮೈಜ್ ಆಗುತ್ತಾ ಬಂದಂತೆ ಬಾಣಗಳು ಸಣ್ಣವಾಗಿ, ಹೊರಟು ಹೋಗುತ್ತವೆ. |
08:55 | ಈಗ ಅಣುವಿನಲ್ಲಿ dipole moment ನ ಕುರಿತು ನೋಡೋಣ. |
08:59 | ಪೋಲಾರ್ ಅಣುಗಳಲ್ಲಿ ಚಾರ್ಜ್ ವಿಂಗಡಣೆಯಿಂದ Dipole moment (ಡೈಪೋಲ್ ಮೂಮೆಂಟ್) ಉಂಟಾಗುತ್ತದೆ. |
09:04 | Dipole moment(μ) = charge(Q) times distance of separation(r)
(ಡೈಪೋಲ್ ಮೂಮೆಂಟ್ ಇಸ್ ಇಕ್ವಲ್ ಟು ಚಾರ್ಜ್ ಟೈಮ್ಸ್ ಡಿಸ್ಟೆನ್ಸ್ ಆಪ್ ಸಪರೇಷನ್) |
09:09 | ಡೈಪೋಲ್ ಮೂಮೆಂಟ್ ಅನ್ನು 'ಡಿಬೈ' ಯುನಿಟ್ ಗಳಲ್ಲಿ ಸೂಚಿಸಲಾಗುತ್ತದೆ. |
09:13 | ಈಗ ನಾನು ಹೈಡ್ರೋಜನ್ ಸಯನೈಡ್ (HCN) ಮತ್ತು ನೀರಿನ ಅಣುಗಳಲ್ಲಿ ಡೈಪೋಲ್ ಮೂಮೆಂಟ್ ಅನ್ನು ತೋರಿಸುವೆನು. |
09:20 | ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.
Draw tool ಅನ್ನು ಬಳಸಿ ಪ್ಯಾನಲ್ ನಲ್ಲಿ ಹೈಡ್ರೋಜನ್ ಸಯನೈಡ್ (HCN) ಅಣು ಅನ್ನು ಬರೆಯಿರಿ. |
09:27 | ಹೈಡ್ರೋಜನ್ ಅನ್ನು ಆಯ್ಕೆ ಮಾಡಿಕೊಂಡು ಕಾರ್ಬನ್ ಗೆ ಒಂದು ಬಾಂಡ್ ಅನ್ನು ಬರೆಯಿರಿ. |
09:31 | ನೈಟ್ರೋಜನ್ ಅನ್ನು ಆಯ್ಕೆ ಮಾಡಿಕೊಂಡು, ಬಾಂಡ್ ಆರ್ಡರ್ ಅನ್ನು ಟ್ರಿಪಲ್ ಎಂದು ಆಯ್ಕೆ ಮಾಡಿ, ಮತ್ತು ಇಲ್ಲಿ ತೋರಿಸಿದಂತೆ ಬಾಂಡ್ ಅನ್ನು ಬರೆಯಿರಿ. |
09:38 | MMFF94 Force Field ಬಳಸಿ, ರಚನೆಯನ್ನು ಆಪ್ಟಿಮೈಜ್ ಮಾಡಿ. |
09:44 | 'ಡೈಪೋಲ್ ಮೂಮೆಂಟ್' ಅನ್ನು ತೋರಿಸಲು, Display Types ನಲ್ಲಿ Dipole ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
09:50 | Dipole ಅನ್ನು ಕೆಂಪು ಬಣ್ಣದ ಬಾಣದ ಗುರುತಿನಿಂದ ತೋರಿಸಲಾಗುತ್ತದೆ. |
09:54 | ಅಂದಾಜಿಸಿದ ಡೈಪೋಲ್ ಮೂಮೆಂಟ್ ಅನ್ನು ತೋರಿಸಲು, View ಮೆನ್ಯುವಿಗೆ ಹೋಗಿ, |
09:57 | Properties ಗೆ ಹೋಗಿ ಮತ್ತು Molecule Properties ಅನ್ನು ಆಯ್ಕೆ ಮಾಡಿ. Molecule Properties ವಿಂಡೋ ಓಪನ್ ಆಗುತ್ತದೆ. |
10:05 | ಈ ವಿಂಡೋ ಹೈಡ್ರೋಜನ್ ಸಯನೈಡ್ ನ estimated dipole moment(ಎಸ್ಟಿಮೇಟೆಡ್ ಡೈಪೋಲ್ ಮೂಮೆಂಟ್) ಅನ್ನು 0.396D ಎಂದು ತೋರಿಸುತ್ತದೆ. |
10:13 | ಹೀಗೆಯೇ ನೀರಿನ estimated dipole moment , 0.245D ಆಗಿರುತ್ತದೆ. |
10:21 | ಸಂಕ್ಷಿಪ್ತವಾಗಿ, |
10:23 | ಈ ಟ್ಯುಟೋರಿಯಲ್ ನಲ್ಲಿ ನಾವು, ಅವೋಗಾಡ್ರೋ ವನ್ನು ಕಾನ್ಫಿಗರ್ ಮಾಡುವುದು, |
10:27 | ಮೆಥನಾಲ್ ನಲ್ಲಿ ಇಂಟರ್ಮೊಲಿಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು, |
10:31 | ಆರ್ಥೋ-ನೈಟ್ರೋಫೆನಾಲ್ ನಲ್ಲಿ ಇಂಟ್ರಾ ಮೊಲಿಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು, |
10:35 | ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳತೆ ಮಾಡುವುದು, |
10:38 | ನೀರಿನ ಅಣುಗಳಲ್ಲಿ 'ಫೋರ್ಸ್ ಡಿಸ್ಪ್ಲೇ ಟೈಪ್' ಅನ್ನು ತೋರಿಸುವುದು, |
10:42 | ಹೈಡ್ರೋಜನ್ ಮತ್ತು ನೀರಿನ ಅಣುಗಳಲ್ಲಿ ಡೈಪೋಲ್ ಮೂಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿತಿದ್ದೇವೆ. |
10:48 | ಅಸೈನ್ಮೆಂಟ್ ,
1. ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೈಲ್ ಕ್ಲೋರೈಡ್ ಅಣುಗಳಲ್ಲಿ ಡೈಪೋಲ್ ಮೂಮೆಂಟ್ ಅನ್ನು ತೋರಿಸಿ. 2. ಅಮೋನಿಯಾ ಅಣುಗಳಲ್ಲಿ Force Display Type ಅನ್ನು ತೋರಿಸುವುದು. |
10:59 | ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.
ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು. |
11:06 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
11:12 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD ಭಾರತ ಸರ್ಕಾರ ಧನಸಹಾಯ ಮಾಡುತ್ತದೆ. |
11:18 | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು |