Avogadro/C2/Build-molecules/Kannada

From Script | Spoken-Tutorial
Revision as of 17:11, 5 July 2018 by Sandhya.np14 (Talk | contribs)

Jump to: navigation, search
Time Narration
00:01 Build Molecules ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು: ಡೇಟಾಬೇಸ್ ನಿಂದ ಅಣುಗಳನ್ನು ಇಂಪೋರ್ಟ್ ಮಾಡುವುದು,
00:11 ತಿರುಗಿಸುವುದು (ರೋಟೇಟ್ ಮಾಡುವುದು), ಝೂಮ್ ಇನ್ ಮತ್ತು ಝೂಮ್ ಔಟ್ ಮಾಡುವುದು,
00:15 ಪ್ಯಾನಲ್ ನ ಮೇಲೆ ಅಣುಗಳನ್ನು ನಿರ್ಮಿಸುವುದು,
00:17 ಫೋರ್ಸ್ ಫೀಲ್ಡ್ ಅನ್ನು ಸ್ಥಾಪಿಸುವುದು ಮತ್ತು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡುವುದು,
00:21 ಬಾಂಡ್ ನ ಉದ್ದ, ಕೋನಗಳು ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು,
00:25 ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು,
00:27 ಡಿ.ಎನ್.ಎ. ಅಣುಗಳು ಮತ್ತು ಪೆಪ್ಟೈಡ್ ಗಳನ್ನು ನಿರ್ಮಿಸುವುದು- ಇವುಗಳ ಕುರಿತು ಕಲಿಯುವೆವು.
00:31 ಇಲ್ಲಿ ನಾನು Ubuntu Linux OS 14.04 ಆವೃತ್ತಿ,

Avogadro 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ.

00:44 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ರಸಾಯನ ಶಾಸ್ತ್ರದ ಬಗ್ಗೆ ತಿಳಿದಿರಬೇಕು. Avogadro ವನ್ನು ಡೌನ್ಲೋಡ್ ಮಾಡಲು, ದಯವಿಟ್ಟುsourceforge.net/projects/avogadro ಈ ಲಿಂಕ್ ಅನ್ನು ಬಳಸಿ.
00:53 ನಾನು ಈಗಾಗಲೇ Avogadro ವನ್ನು ಡೌನ್ಲೋಡ್ ಮಾಡಿದ್ದೇನೆ.
00:56 Avogadro ವನ್ನು ಓಪನ್ ಮಾಡಲು, Dash home ನ ಮೇಲೆ ಕ್ಲಿಕ್ ಮಾಡಿ.
01:00 ಸರ್ಚ್ ಬಾರ್ ನಲ್ಲಿ, avogadro ಎಂದು ಟೈಪ್ ಮಾಡಿ.
01:02 ಅಪ್ಲಿಕೇಷನ್ ಅನ್ನು ಓಪನ್ ಮಾಡಲು, Avogadro ಐಕಾನ್ ನ ಮೇಲೆ ಕ್ಲಿಕ್ ಮಾಡಿ.
01:08 ಈಗ ನಾವು ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್ ನಿಂದ, ಒಂದು xylene ಅಣುವನ್ನು ಇಂಪೋರ್ಟ್ ಮಾಡುವುದರಿಂದ ಆರಂಭಿಸೋಣ.
01:15 ಒಂದು ಅಣುವನ್ನು ಇಂಪೋರ್ಟ್ ಮಾಡಲು, ನಮಗೆ ಸಕ್ರಿಯವಾಗಿರುವ ಇಂಟರ್ನೆಟ್ ಸಂಪರ್ಕ ಬೇಕು.
01:19 File ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, Import ಗೆ ಹೋಗಿ.
01:23 ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ.
01:25 Fetch by chemical name ಅನ್ನು ಆಯ್ಕೆ ಮಾಡಿ.
01:28 Chemical name ಎಂಬ ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
01:30 ವಿವರಣೆಗಾಗಿ , ನಾನು ಸರ್ಚ್-ಬಾಕ್ಸ್ ನಲ್ಲಿ xylene ಎಂದು ಟೈಪ್ ಮಾಡುವೆನು.
01:36 OK ಬಟನ್ ನ ಮೇಲೆ ಕ್ಲಿಕ್ ಮಾಡಿ.
01:38 ಈಗ ಪ್ಯಾನಲ್ ನ ಮೇಲೆ ನಾವು xylene ಅಣುವನ್ನು ಹೊಂದಿದ್ದೇವೆ.
01:42 ಈಗ Panel ನಲ್ಲಿ ಅಣುವನ್ನು ತಿರುಗಿಸೋಣ.
01:45 ಟೂಲ್ ಬಾರ್ ನಲ್ಲಿ, Navigation tool ನ ಮೇಲೆ ಕ್ಲಿಕ್ ಮಾಡಿ.
01:49 ಕರ್ಸರ್ ಅನ್ನು ಅಣುವಿನ ಮೇಲೆ ಇಡಿ.
01:52 ಮೌಸ್ ನ ಎಡ ಬಟನ್ ಅನ್ನು ಹಿಡಿದುಕೊಂಡು ಎಳೆಯಿರಿ.
01:56 ದಿಕ್ಸೂಚಿ ಬಾಣಗಳು, ಈ ಎಳೆಯುವಿಕೆಯನ್ನು ಸೂಚಿಸುತ್ತಿರುವುದನ್ನು ಗಮನಿಸಿ.
02:00 ಅಣುವನ್ನು ಟ್ರಾನ್ಸ್ಲೇಟ್ ಮಾಡಲು, ಮೌಸ್ ನ ಬಲ ಬಟನ್ ಅನ್ನು ಒತ್ತಿ ಡ್ರ್ಯಾಗ್ ಮಾಡಿ.
02:06 ಸ್ಟ್ರಕ್ಚರ್ ಅನ್ನು ಝೂಮ್ ಇನ್ ಮತ್ತು ಝೂಮ್ ಔಟ್ ಮಾಡಲು, ಮೌಸ್ ನ ಚಕ್ರವನ್ನು ಸ್ಕ್ರೋಲ್ ಮಾಡಿ.
02:10 ಈಗ ಒಂದು ಅಣುವನ್ನು ರಚಿಸುವುದು ಹೇಗೆ ಎಂದು ಕಲಿಯೋಣ.
02:14 ಒಂದು ಅಣುವನ್ನು ರಚಿಸಲು, ಟೂಲ್ ಬಾರ್ ನಲ್ಲಿಯ Draw Tool ಐಕಾನ್ ಅನ್ನು ಕ್ಲಿಕ್ ಮಾಡಿ.
02:19 Draw Settings ಮೆನ್ಯುವಿನಡಿಯಲ್ಲಿ, ನಾವು Element ಹಾಗೂ Bond Order ಎಂಬ ಡ್ರಾಪ್- ಡೌನ್ ಬಟನ್ ಗಳನ್ನು ಮತ್ತು

Adjust Hydrogens ಎಂಬ ಚೆಕ್ ಬಾಕ್ಸ್ ಅನ್ನು ನೋಡಬಹುದು.

02:30 ನಿಮಗೆ ಸ್ಟ್ರಕ್ಚರ್ ನಲ್ಲಿ ಹೈಡ್ರೋಜನ್ ಗಳು (ಜಲಜನಕ) ಬೇಡವಾದಲ್ಲಿ Adjust Hydrogens ಎಂಬ ಚೆಕ್ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ.
02:37 Element ಡ್ರಾಪ್- ಡೌನ್ ಲಿಸ್ಟ್, ಎಲಿಮೆಂಟ್ ಗಳ (ಮೂಲವಸ್ತು) ಪಟ್ಟಿಯನ್ನು ತೋರಿಸುತ್ತದೆ.
02:42 ಸಂಪೂರ್ಣ Periodic table (ಪೀರಿಯೋಡಿಕ್ ಟೇಬಲ್) ಅನ್ನು ಬೇರೆಯದೇ ವಿಂಡೋದಲ್ಲಿ ನೋಡಲು, Other ನ ಮೇಲೆ ಕ್ಲಿಕ್ ಮಾಡಿ.
02:48 ವಿಂಡೋವನ್ನು ಕ್ಲೋಸ್ ಮಾಡಲು, Close ನ (X ಗುರುತು) ಮೇಲೆ ಕ್ಲಿಕ್ ಮಾಡಿ.
02:51 ಈಗ ಪ್ಯಾನಲ್ ನ ಮೇಲೆ, Aniline (ಅನಿಲಿನ್) ನ ಸ್ಟ್ರಕ್ಚರ್ ಅನ್ನು ರಚಿಸೋಣ.
02:55 Element ಡ್ರಾಪ್- ಡೌನ್ ಲಿಸ್ಟ್ ನಲ್ಲಿ, Carbon ಅನ್ನು ಆಯ್ಕೆಮಾಡಿ.
02:59 Bond Order ಡ್ರಾಪ್- ಡೌನ್ ಲಿಸ್ಟ್ ನಲ್ಲಿ, Single ಅನ್ನು ಆಯ್ಕೆಮಾಡಿ.
03:03 Panel ನ ಮೇಲೆ ಕ್ಲಿಕ್ ಮಾಡಿ.
03:05 ಆರು ಕಾರ್ಬನ್ (ಇಂಗಾಲ) ಪರಮಾಣುಗಳ ಮುಚ್ಚಿದ ಸರಪಣಿಯನ್ನು ರಚಿಸಲು ಡ್ರ್ಯಾಗ್ & ಡ್ರಾಪ್ ಮಾಡಿ.
03:10 ಡಬಲ್ ಬಾಂಡ್ ಗಳನ್ನು ತೋರಿಸಲು, Bond Order ಡ್ರಾಪ್ ಡೌನ್ ನಿಂದ Double ಅನ್ನು ಆಯ್ಕೆಮಾಡಿ.
03:16 ಬೆಂಝೀನ್ ನ ಸ್ಟ್ರಕ್ಚರ್ ಅನ್ನು ಪಡೆಯಲು, ಒಂದು ಬಿಟ್ಟು ಮತ್ತೊಂದು ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
03:21 Aniline ನ ಸ್ಟ್ರಕ್ಚರ್ ಅನ್ನು ಪೂರ್ತಿಗೊಳಿಸೋಣ.
03:24 Element ಡ್ರಾಪ್ ಡೌನ್ ಲಿಸ್ಟ್ ನಲ್ಲಿ, Nitrogen ಅನ್ನು ಆಯ್ಕೆಮಾಡಿ.
03:29 Bond Order ಡ್ರಾಪ್- ಡೌನ್ ನಲ್ಲಿ, Single ಅನ್ನು ಆಯ್ಕೆಮಾಡಿ.
03:33 ಸ್ಟ್ರಕ್ಚರ್ ನಲ್ಲಿ, ಯಾವುದಾದರೂ ಒಂದು ಕಾರ್ಬನ್ (ಇಂಗಾಲ) ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ.
03:39 Build ಮೆನ್ಯುವಿಗೆ ಹೋಗಿ ಮತ್ತು Add Hydrogens ಅನ್ನು ಆಯ್ಕೆಮಾಡಿ.
03:45 ನಾವು ಪ್ಯಾನಲ್ ನಲ್ಲಿ, Aniline ನ ಸ್ಟ್ರಕ್ಚರ್ ಅನ್ನು ಪಡೆದಿದ್ದೇವೆ.
03:49 ಸ್ಟೇಬಲ್ ಕನ್ಫರ್ಮೇಶನ್ ಅನ್ನು ಪಡೆಯಲು, ಪ್ಯಾನಲ್ ನಲ್ಲಿಯ Aniline ಸ್ಟ್ರಕ್ಚರ್ ಅನ್ನು ಆಪ್ಟಿಮೈಜ್ ಮಾಡಬೇಕು.
03:56 ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ, Auto Optimization Tool ನ ಮೇಲೆ ಕ್ಲಿಕ್ ಮಾಡಿ.
04:02 ಎಡ ಭಾಗದಲ್ಲಿ, AutoOptimization Settings ಎಂಬ ಮೆನ್ಯು ಕಾಣಿಸುತ್ತದೆ.
04:06 Force Field ಎಂಬ ಡ್ರಾಪ್- ಡೌನ್ ಲಿಸ್ಟ್ ಅನ್ನು ಕ್ಲಿಕ್ ಮಾಡಿ, MMFF94 ಅನ್ನು ಆಯ್ಕೆ ಮಾಡಿ.
04:13 MMFF94 ಅನ್ನು ಸಾಮಾನ್ಯವಾಗಿ, ಚಿಕ್ಕ ಸಾವಯವ (ಆರ್ಗ್ಯಾನಿಕ್) ಅಣುಗಳನ್ನು ಆಪ್ಟಿಮೈಜ್ ಮಾಡಲು ಬಳಸಲಾಗುತ್ತದೆ.
04:20 Start ಬಟನ್ ನ ಮೇಲೆ ಕ್ಲಿಕ್ ಮಾಡಿ.
04:23 ಆಪ್ಟಿಮೈಜ್ ಮಾಡುವುದನ್ನು ಪೂರ್ತಿಗೊಳಿಸಲು, ಕೆಲವು ಸೆಕೆಂಡ್ ಗಳು ಬೇಕಾಗುವುದು.
04:28 Optimization Setting ಅನ್ನು ಕ್ಲೋಸ್ ಮಾಡಲು, Stop ನ ಮೇಲೆ ಕ್ಲಿಕ್ ಮಾಡಿ.
04:33 ಈಗ 'ಅನಿಲಿನ್' ನ ಬಾಂಡ್ ಗಳ ಉದ್ದ, ಬಾಂಡ್ ನ ಕೋನಗಳು ಮತ್ತು 'ಡೈಹೆಡ್ರಲ್ ಆಂಗಲ್' (dihedral angle) ಗಳನ್ನು ಅಳತೆ ಮಾಡೋಣ.
04:40 ಟೂಲ್ ಬಾರ್ ನಲ್ಲಿ, Click to Measure ಐಕಾನ್ ಅನ್ನು ಆಯ್ಕೆ ಮಾಡಿ.
04:44 ಅಂತರವನ್ನು ಅಳೆಯಲು, ಯಾವುದೇ ಎರಡು ಅಕ್ಕಪಕ್ಕದ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ.
04:49 ಕೋನಗಳನ್ನು ಅಳೆಯಲು, ಯಾವುದಾದರೂ ಮೂರು ಕ್ರಮಾನುಗತ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ.
04:55 'ಡೈಹೆಡ್ರಲ್ ಆಂಗಲ್' ಗಳನ್ನು ಅಳೆಯಲು, ಯಾವುದಾದರೂ ನಾಲ್ಕು ಕ್ರಮಾನುಗತ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ.
05:02 ಅಳತೆ ಮಾಡಿದ ವ್ಯಾಲ್ಯುಗಳು, ಪ್ಯಾನಲ್ ನ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತವೆ.
05:07 ಫೈಲ್ ಅನ್ನು ಸೇವ್ ಮಾಡಲು, File , ನಂತರ Save As ಗಳನ್ನು ಕ್ಲಿಕ್ ಮಾಡಿ.
05:13 Save Molecule As ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
05:17 File Name ಅನ್ನು, Aniline.cml ಎಂದು ಟೈಪ್ ಮಾಡಿ.
05:21 ಲೊಕೇಷನ್ ಅನ್ನು Desktop ಎಂದು ಆಯ್ಕೆಮಾಡಿ ಮತ್ತು Save ಬಟನ್ ನ ಮೇಲೆ ಕ್ಲಿಕ್ ಮಾಡಿ.
05:28 ಒಂದು ಹೊಸ ವಿಂಡೋ ವನ್ನು ಓಪನ್ ಮಾಡಲು, New ಐಕಾನ್ ಅನ್ನು ಕ್ಲಿಕ್ ಮಾಡಿ.
05:32 Avogadro ಸಾಪ್ಟ್ವೇರ್, fragment ಲೈಬ್ರರಿಯನ್ನು ಬಳಸಿ, ಸಂಯುಕ್ತ (ಕಾಂಪ್ಲೆಕ್ಸ್) ಅಣುಗಳನ್ನು ರಚಿಸಲು ಒಂದು ವಿಧಾನವನ್ನು ಹೊಂದಿದೆ.
05:38 Build ಮೆನ್ಯುವಿಗೆ ಹೋಗಿ.
05:40 ನಂತರ Insert ಗೆ ಹೋಗಿ, Fragment ಅನ್ನು ಆರಿಸಿಕೊಳ್ಳಿ.
05:45 Insert Fragment ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
05:49 ವಿಭಿನ್ನ ರಾಸಾಯನಿಕ ಸ್ಟ್ರಕ್ಚರ್ ಗಳ, cml ಫೈಲ್ ಗಳನ್ನು ಹೊಂದಿರುವ ಫೋಲ್ಡರ್ ಗಳ ಲಿಸ್ಟ್ ಅನ್ನು ನಾವು ನೋಡಬಹುದು.
05:55 ಉದಾಹರಣೆಗೆ, ನಾವು alkenes (ಆಲ್ಕೀನ್ಸ್) ಫೋಲ್ಡರ್ ಅನ್ನು ಓಪನ್ ಮಾಡೋಣ.
06:00 ಫೋಲ್ಡರ್ ನಲ್ಲಿರುವುದನ್ನು ನೋಡಲು, ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ.
06:04 2-methyl-buta-1,3-diene.cml ಅನ್ನು ಆಯ್ಕೆಮಾಡಿ.
06:10 Insert ಬಟನ್ ನ ಮೇಲೆ ಕ್ಲಿಕ್ ಮಾಡಿ.
06:13 ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, Close ಬಟನ್ ಅನ್ನು ಕ್ಲಿಕ್ ಮಾಡಿ.
06:17 ಪ್ಯಾನಲ್ ನಲ್ಲಿ, 2-methyl-1,3-butadiene ಸ್ಟ್ರಕ್ಚರ್ ಅನ್ನು ತೋರಿಸಲಾಗುತ್ತದೆ.
06:22 ಇದನ್ನು ಸಾಮಾನ್ಯವಾಗಿ Isoprene (ಐಸೋಪ್ರೀನ್) ಎಂದು ಕರೆಯುತ್ತಾರೆ.
06:26 ನಾವು Isoprene (ಐಸೋಪ್ರೀನ್) ಅನ್ನು ಬಳಸಿ ಅನೇಕ ಸ್ವಾಭಾವಿಕ ಉತ್ಪನ್ನಗಳನ್ನು ರಚಿಸಬಹುದು.
06:30 ಈ ಅಣು, ಸೆಲೆಕ್ಟ್ ಮೋಡ್ ನಲ್ಲಿದೆ.
06:33 ಡಿ-ಸೆಲೆಕ್ಟ್ ಮಾಡಲು, CTRL, SHIFT ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ.
06:39 ಉದಾಹರಣೆಗೆ : ನಾನು Isoprene ಅನ್ನು ಬಳಸಿ ರಚಿಸಲಾದ, Vitamin A ಮತ್ತು natural rubber ಅನ್ನು ತೋರಿಸುವೆನು..
06:47 Vitamin A, natural rubber
06:51 ನಾನು Isoprene (ಐಸೋಪ್ರೀನ್) ಅನ್ನು ಒಂದು ಮೂಲೆಗೆ ಟ್ರಾನ್ಸ್ಲೇಟ್ ಮಾಡುವೆನು.
06:56 ಕ್ರಮವಾಗಿ Build >> Insert >> Fragment ಗಳ ಮೇಲೆ ಕ್ಲಿಕ್ ಮಾಡಿ.
07:02 ಕೆಳಗೆ ಸ್ಕ್ರೋಲ್ ಮಾಡಿ, macrocycles ಫೋಲ್ಡರ್ ಗೆ ಹೋಗಿ. ಅದನ್ನು ಓಪನ್ ಮಾಡಲು ಡಬಲ್ ಕ್ಲಿಕ್ ಮಾಡಿ.
07:08 porphin ಫ್ರ್ಯಾಗ್ಮೆಂಟ್ ಅನ್ನು ಆಯ್ಕೆ ಮಾಡಿ, ಮತ್ತು Insert ಅನ್ನು ಕ್ಲಿಕ್ ಮಾಡಿ.
07:14 ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
07:16 porphyrin ಫ್ರ್ಯಾಗ್ಮೆಂಟ್ ಅನ್ನು ಬಳಸಿ, ನಾವು Chlorophyll (ಕ್ಲೋರೋಫಿಲ್) ಮತ್ತು Vitamin B12 ಗಳಂತಹ ಸಂಕೀರ್ಣ ರಾಸಾಯನಿಕ ಸ್ಟ್ರಕ್ಚರ್ ಗಳನ್ನು ರಚಿಸಬಹುದು.
07:25 Chlorophyll (ಕ್ಲೋರೋಫಿಲ್)
07:27 Vitamin B12 (ವೈಟಮಿನ್ B12)
07:30 Avogadro ವನ್ನು ಬಳಸಿ, DNA ಮತ್ತು peptide ಗಳಂತಹ ಸಂಕೀರ್ಣ ಅಣುಗಳನ್ನು ಸಹ ರಚಿಸಬಹುದು.
07:37 New ಐಕಾನ್ ಅನ್ನು ಬಳಸಿ ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.
07:41 ಒಂದು DNA ಅಣುವನ್ನು ಸೇರಿಸಲು: ಕ್ರಮವಾಗಿ Build ಮೆನ್ಯು, ನಂತರ Insert ಗೆ ಹೋಗಿ, ಸಬ್ ಮೆನ್ಯುವಿನಲ್ಲಿ DNA/RNA ಯನ್ನು ಕ್ಲಿಕ್ ಮಾಡಿ.
07:51 Insert Nucleic Acids ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
07:55 DNA/RNA Builder ಡ್ರಾಪ್- ಡೌನ್ ನಲ್ಲಿ , DNA ಯನ್ನು ಆಯ್ಕೆಮಾಡಿ.
08:00 ನಾಲ್ಕು 'ನ್ಯೂಕ್ಲಿಕ್ ಆಸಿಡ್ ಬೇಸ್' ಗಳನ್ನು (nucleic acid base) ಬಟನ್ ಗಳಾಗಿ ತೋರಿಸಲಾಗಿದೆ.
08:05 Nucleic acid ಸಿಕ್ವೆನ್ಸ್ ಅನ್ನು ಆಯ್ಕೆಮಾಡಲು, ಬಟನ್ ಗಳ ಮೇಲೆ ಕ್ಲಿಕ್ ಮಾಡಿ.
08:10 ನೀವು, ನಿಮಗೆ ಬೇಕಾದ acid ಗಳ ಸಿಕ್ವೆನ್ಸ್ ಅನ್ನು ಆರಿಸಿಕೊಳ್ಳಬಹುದು.
08:14 ವಿವರಣೆಗಾಗಿ ನಾನು, A T G C A T G C ಯನ್ನು ಆರಿಸಿಕೊಳ್ಳುತ್ತೇನೆ.
08:26 Nucleic acid ಗಳ ಆಯ್ಕೆಯ ಕ್ರಮವು, Sequence ಎಂಬ ಟೆಕ್ಸ್ಟ್ ಬಾಕ್ಸ್ ನಲ್ಲಿ ಕಾಣಿಸುತ್ತದೆ.
08:32 Bases Per Turn ಡ್ರಾಪ್ ಡೌನ್ ನಲ್ಲಿ, A ಯನ್ನು ಆಯ್ಕೆ ಮಾಡಿ. "5" ಆಯ್ಕೆ ಮಾಡಿ, ಇದು ಪ್ರತಿ Helix ನಲ್ಲಿ ಇರುವ ಬೇಸ್ ಪೇರ್ ಗಳ ಸಂಖ್ಯೆ ಆಗಿದೆ.
08:41 Strands ಅನ್ನು Single ಎಂದು ಆಯ್ಕೆ ಮಾಡಿ ಮತ್ತು Insert ಬಟನ್ ನ ಮೇಲೆ ಕ್ಲಿಕ್ ಮಾಡಿ.
08:47 ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, Close ಅನ್ನು ಒತ್ತಿ.
08:51 ಈಗ ನಾವು ಪ್ಯಾನಲ್ ನಲ್ಲಿ, ಒಂದೇ ಸ್ಟ್ರ್ಯಾಂಡ್ ನ DNA ಅಣುವನ್ನು ಹೊಂದಿದ್ದೇವೆ.
08:56 ಸ್ಟ್ರಕ್ಚರ್ ಅನ್ನು ಝೂಮ್ ಔಟ್ ಮಾಡಿ, ಪ್ಯಾನಲ್ ನ ಮಧ್ಯಭಾಗಕ್ಕೆ ಎಳೆದು ತನ್ನಿ.
09:01 ಪ್ಯಾನಲ್ ನಲ್ಲಿ, DNA ಅಣುವನ್ನು ಡಿಸೆಲೆಕ್ಟ್ ಮಾಡಲು, CTRL, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ.
09:09 Insert ಮೆನ್ಯುವಿನಲ್ಲಿಯ Peptide ಆಯ್ಕೆಯನ್ನು ಬಳಸಿ, ನಾವು 'ಪೆಪ್ಟೈಡ್' ನ ಸಿಕ್ವೆನ್ಸ್ ಅನ್ನು ಕೂಡ ರಚಿಸಬಹುದು.
09:16 ಮತ್ತೊಮ್ಮೆ, ಒಂದು ಹೊಸ ವಿಂಡೋವನ್ನು ಓಪನ್ ಮಾಡಲು, New ಐಕಾನ್ ನ ಮೇಲೆ ಕ್ಲಿಕ್ ಮಾಡಿ.
09:21 Build ಮೆನ್ಯು ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ, Insert , ನಂತರ Peptide ಗೆ ಹೋಗಿ.
09:26 Insert Peptide ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
09:29 amino acids ಬಟನ್ ಗಳನ್ನು ಕ್ಲಿಕ್ ಮಾಡುವುದರ ಮೂಲಕ, Peptide ಸಿಕ್ವೆನ್ಸ್ ಗಾಗಿ, amino acid ಗಳನ್ನು ಆಯ್ಕೆ ಮಾಡಿ.
09:36 ವಿವರಣೆಗಾಗಿ, ನಾನು ಸಿಕ್ವೆನ್ಸ್ ಅನ್ನು Glycine(Gly) -Valine(Val) -Proline(Pro) and Cystine(Cys) ಎಂದು ಆಯ್ಕೆಮಾಡುವೆನು.
09:45 ಆಯ್ಕೆಯ ಕ್ರಮವು, Sequence ಟೆಕ್ಸ್ಟ್ ಬಾಕ್ಸ್ ನಲ್ಲಿ ಕಂಡುಬರುತ್ತದೆ.
09:50 Insert Peptide ಬಟನ್ ನ ಮೇಲೆ ಕ್ಲಿಕ್ ಮಾಡಿ.
09:53 Insert Peptide ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
09:57 ಪ್ಯಾನಲ್ ನ ಮೇಲೆ Peptide ನ ಚೈನ್ ಕಾಣಿಸುತ್ತದೆ.
10:00 ಪ್ಯಾನಲ್ ನಲ್ಲಿ Peptide ಅನ್ನು ಡಿಸೆಲೆಕ್ಟ್ ಮಾಡಲು, CTRL, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ.
10:07 ನೀವು ನಿಮ್ಮ ಆಯ್ಕೆಯ amino acid ಗಳನ್ನು ಆಯ್ಕೆ ಮಾಡಿಕೊಂಡು, ಪೆಪ್ಟೈಡ್ ನ ಸಿಕ್ವೆನ್ಸ್ ಯನ್ನು ರಚಿಸಬಹುದು.
10:13 ಸಂಕ್ಷಿಪ್ತವಾಗಿ,
10:15 ಈ ಟ್ಯುಟೋರಿಯಲ್ ನಲ್ಲಿ ನಾವು:
10:18 ಡೇಟಾಬೇಸ್ ನಿಂದ ಅಣುಗಳನ್ನು ಇಂಪೋರ್ಟ್ ಮಾಡುವುದು,
10:21 ತಿರುಗಿಸುವುದು (ರೋಟೇಟ್ ಮಾಡುವುದು), ಝೂಮ್ ಇನ್ ಮತ್ತು ಝೂಮ್ ಔಟ್ ಮಾಡುವುದು,
10:24 ಪ್ಯಾನಲ್ ನ ಮೇಲೆ ಅಣುಗಳನ್ನು ನಿರ್ಮಿಸುವುದು,
10:26 ಫೋರ್ಸ್ ಫೀಲ್ಡ್ ಅನ್ನು ಸೆಟ್ ಅಪ್ ಮಾಡುವುದು ಮತ್ತು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡುವುದು,
10:30 ಬಾಂಡ್ ಗಳ ಉದ್ದ, ಕೋನಗಳು ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು,
10:35 ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು,
10:37 DNA ಅಣುಗಳು ಮತ್ತು Peptide ಗಳನ್ನು ರಚಿಸುವುದು- ಇವುಗಳ ಕುರಿತು ಕಲಿತಿದ್ದೇವೆ.
10:41 ಒಂದು ಅಸೈನ್ಮೆಂಟ್ - ಈ ಕೆಳಗಿನ ಅಮಿನೋ ಆಸಿಡ್ ರೆಸಿಡ್ಯೂಗಳನ್ನು ಬಳಸಿ, ಒಂದು ಪ್ರೋಟೀನ್ ಸಿಕ್ವೆನ್ಸ್ ಅನ್ನು ರಚಿಸಿ:
10:49 UFF ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ.
10:53 ಇಮೇಜ್ ಅನ್ನು .cml ಫೈಲ್ ಎಂದು ಸೇವ್ ಮಾಡಿ.
10:58 Nucleic acids: AUGC ಯನ್ನು ಬಳಸಿ, RNA ಸಿಕ್ವೆನ್ಸ್ ಅನ್ನು ರಚಿಸಿ.
11:04 MMFF94 ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ.
11:10 ಇಮೇಜ್ ಅನ್ನು .cml ಫೈಲ್ ಎಂದು ಸೇವ್ ಮಾಡಿ.
11:14 ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸಿಕೊಡುತ್ತದೆ.
11:18 ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
11:23 ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
11:30 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
11:36 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು

Contributors and Content Editors

Anjana310312, Sandhya.np14