LibreOffice-Suite-Math/C3/Set-Operations-Factorials-Cross-reference-equations/Kannada
From Script | Spoken-Tutorial
Revision as of 14:10, 25 May 2018 by Anjana310312 (Talk | contribs)
Time | Narration | ||
00:00 | LibreOffice Math ನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | ||
00:04 | ಈ ಟ್ಯುಟೋರಿಯಲ್ ನಲ್ಲಿ ನಾವು, | ||
00:07 | 'ಸೆಟ್ ಆಪರೇಷನ್' ಗಳನ್ನು ಬರೆಯುವುದು, | ||
00:10 | ಫ್ಯಾಕ್ಟೋರಿಯಲ್ ಗಳನ್ನು ಬರೆಯುವುದು ಮತ್ತು | ||
00:12 | ಸಂಖ್ಯೆಗಳನ್ನು ಬಳಸಿ, ಸಮೀಕರಣಗಳನ್ನು, ' ಕ್ರಾಸ್ ರೆಫರೆನ್ಸ್' ಮಾಡುವುದು – ಹೇಗೆ ಎಂದು ಕಲಿಯುವೆವು. | ||
00:16 | ಇದಕ್ಕಾಗಿ ಮೊದಲು ನಾವು ನಮ್ಮ ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ Writer ಡಾಕ್ಯುಮೆಂಟ್ ಉದಾಹರಣೆಯಾದ "MathExample1.odt" ಯನ್ನು ಓಪನ್ ಮಾಡೋಣ. | ||
00:29 | ಇಲ್ಲಿ, ಡಾಕ್ಯುಮೆಂಟ್ ನ ಕೊನೆಗೆ ಹೋಗಿ, ನಂತರ ಹೊಸ ಪೇಜ್ ಗೆ ಹೋಗಲು Control, Enter ಅನ್ನು ಒತ್ತೋಣ. | ||
00:37 | ಮತ್ತು “Set Operations: ” ಎಂದು ಟೈಪ್ ಮಾಡಿ, Enter ಅನ್ನು ಎರಡು ಬಾರಿ ಒತ್ತಿ. | ||
00:42 | ಈಗ ನಾವು Math ಅನ್ನು ಕಾಲ್ ಮಾಡೋಣ. | ||
00:45 | ಮುಂದುವರಿಯುವ ಮೊದಲು, ನಾವು ಫಾಂಟ್ ಸೈಜ್ ಅನ್ನು 18 point ಗೆ ಹೆಚ್ಚಿಸೋಣ. | ||
00:51 | Alignment ಅನ್ನು Left ಎಂದು ಬದಲಾಯಿಸಿ. | ||
00:54 | ಈಗ Set operation ಗಳನ್ನು ಹೇಗೆ ಬರೆಯುವುದು ಎಂದು ತಿಳಿದುಕೊಳ್ಳೋಣ. | ||
01:00 | ಸೆಟ್ ಗಳನ್ನು ಪ್ರತಿನಿಧಿಸಲು, Math, ಪ್ರತ್ಯೇಕ ಮಾರ್ಕಪ್ ಅನ್ನು ಹೊಂದಿದೆ. ಈ ಸೆಟ್ ಗಳು ವಿಭಿನ್ನ ಎಲಿಮೆಂಟ್ ಗಳ ಗುಂಪುಗಳಾಗಿವೆ. | ||
01:07 | ಸ್ಕ್ರೀನ್ ನ ಮೇಲೆ ತೋರಿಸಿದಂತೆ, ' ಫಾರ್ಮುಲಾ ಎಡಿಟರ್ ವಿಂಡೋ' ದಲ್ಲಿ, ನಾವು ಸೆಟ್ ಗಳ ನಾಲ್ಕು ಉದಾಹರಣೆಗಳನ್ನು ಬರೆಯೋಣ: | ||
01:14 | 5 ಎಲಿಮೆಂಟ್ ಗಳನ್ನು ಹೊಂದಿರುವ Set A, | ||
01:18 | ಸೆಟ್ B, ಸೆಟ್ C | ||
01:21 | ಮತ್ತು ಸೆಟ್ D ಗಳು ಎಲಿಮೆಂಟ್ ಗಳನ್ನು ಹೊಂದಿವೆ. | ||
01:26 | ಗಮನಿಸಿ, ಸೆಟ್ ಗಳಿಗಾಗಿ ಬ್ರ್ಯಾಕೆಟ್ ಗಳನ್ನು ಹಾಕಲು, ನಾವು lbrace ಮತ್ತು rbrace ಎಂಬ ಮಾರ್ಕಪ್ ಗಳನ್ನು ಬಳಸಬಹುದು. | ||
01:35 | - | 01:42 | ಮೊದಲು ಒಂದು 'ಯೂನಿಯನ್ ಆಪರೇಷನ್' ಅನ್ನು ಬರೆಯೋಣ. |
01:46 | B union C ಗೆ ಮಾರ್ಕಪ್, ನಾವು ಅದನ್ನು ಓದಿದ ಹಾಗೆಯೇ ಇರುತ್ತದೆ. | ||
01:51 | ಮತ್ತು, ಫಲಿತ ಸೆಟ್ 1, 2, 6, 4 ಮತ್ತು 5 ಗಳಿಂದ ಆಗಿದೆ. ಇದು ಎರಡೂ ಸೆಟ್ ಗಳಲ್ಲಿರುವ ವಿಶಿಷ್ಟ ಎಲಿಮೆಂಟ್ ಗಳನ್ನು ಒಳಗೊಂಡಿದೆ. | ||
02:04 | ಇಂಟರ್ಸೆಕ್ಷನ್ ಆಪರೇಷನ್ ನ ಮಾರ್ಕಪ್ ಕೂಡ ನಾವು ಓದಿದ ಹಾಗೆಯೇ ಇರುತ್ತದೆ. | ||
02:10 | ಇಂಟರ್ಸೆಕ್ಷನ್, ಎರಡೂ ಸೆಟ್ ಗಳಲ್ಲಿ ಉಪಸ್ಥಿತವಿರುವ ಎಲಿಮೆಂಟ್ ಗಳನ್ನು ಮಾತ್ರ ಒಳಗೊಂಡಿರುತ್ತದೆ. | ||
02:16 | ಹಾಗಾಗಿ, B ಇಂಟರ್ಸೆಕ್ಷನ್ D ದ ಫಲಿತಾಂಶವು 6 ಎಂದು ಆಗಿರುತ್ತದೆ. | ||
02:23 | ಮತ್ತು, ಸೆಟ್ 'C' ಯಲ್ಲಿರುವ ಪ್ರತಿಯೊಂದು ಎಲಿಮೆಂಟ್, set A ನಲ್ಲಿ ಇರುವುದರಿಂದ, ನಾವು ಸೆಟ್ C ಯು, ಸೆಟ್ A ದ 'ಸಬ್ಸೆಟ್' ಆಗಿದೆ ಎಂದು ಸಹ ಬರೆಯಬಹುದು. | ||
02:35 | ಇದಕ್ಕಾಗಿ ಮಾರ್ಕಪ್, C subset A ಎಂದಾಗಿದೆ. | ||
02:42 | ನೀವು Elements ವಿಂಡೋವನ್ನು ಬಳಸಿ, ಅಲ್ಲಿರುವ ಮೂರನೇ ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ, ಹಲವು ಸೆಟ್ ಆಪರೇಷನ್ ಗಳನ್ನು ಬರೆಯಲು ಕಲಿಯಬಹುದು. | ||
02:51 | ಕ್ರಮವಾಗಿ View > Elements > Set Operations ಗೆ ಹೋಗಿ. | ||
02:59 | ಈಗ ನಾವು ಮಾಡಿರುವುದನ್ನು ಸೇವ್ ಮಾಡೋಣ. | ||
03:02 | ಕ್ರಮವಾಗಿ File > Save ಗಳ ಮೇಲೆ ಕ್ಲಿಕ್ ಮಾಡಿ. | ||
03:06 | ಈಗ ನಾವು 'ಫ್ಯಾಕ್ಟೋರಿಯಲ್ ಫಂಕ್ಷನ್' ಗಳನ್ನು ಬರೆಯೋಣ. | ||
03:11 | ಶೀಘ್ರದಲ್ಲಿಯೆ ನಾವು ಬರೆಯುವ ಮೂರು ಸೂತ್ರಗಳಿಗೆ, 1 ರಿಂದ 3 ರವರೆಗಿನ ಸಂಖ್ಯೆಗಳಿಂದ ಹೆಸರಿಸೋಣ. | ||
03:19 (translation is incomplete) | ಇದು, ರೈಟರ್ ಡಾಕ್ಯುಮೆಂಟ್ ನಲ್ಲಿ ಎಲ್ಲಿ ಬೇಕಾದರೂ ಅವುಗಳನ್ನು, 'ಕ್ರಾಸ್ ರೆಫರೆನ್ಸ್' ಮಾಡಲು ಸಹಾಯ ಮಾಡುತ್ತದೆ. | ||
03:25 | 'ರೈಟರ್ ಗ್ರೇ ಬಾಕ್ಸ್' ನ ಹೊರಭಾಗದಲ್ಲಿ, ಮೂರು ಬಾರಿ ನಿಧಾನವಾಗಿ ಕ್ಲಿಕ್ ಮಾಡುವುದರ ಮೂಲಕ ನಾವು ಒಂದು ಹೊಸ ಪೇಜ್ ಗೆ ಹೋಗೋಣ. | ||
03:33 | Control, Enter ಅನ್ನು ಒತ್ತಿ. | ||
03:36 | “Factorial Function: ” ಎಂದು ಟೈಪ್ ಮಾಡಿ ಮತ್ತು Enter ಅನ್ನು ಎರಡು ಬಾರಿ ಒತ್ತಿ. | ||
03:42 | Math ಅನ್ನು ಹೇಗೆ ಕಾಲ್ ಮಾಡುವುದು ಎಂದು ನಮಗೆ ತಿಳಿದಿದೆ. | ||
03:45 | ಆದರೆ, Math ಒಬ್ಜೆಕ್ಟ್ ಅನ್ನು Writer ನಲ್ಲಿ ತರಲು ಇನ್ನೊಂದು ವಿಧಾನವಿದೆ. | ||
03:51 | ಇದಕ್ಕಾಗಿ, 'ರೈಟರ್ ಡಾಕ್ಯುಮೆಂಟ್' ನಲ್ಲಿ ‘f n’ ಎಂದು ಟೈಪ್ ಮಾಡಿ ಮತ್ತು F3 ಯನ್ನು ಒತ್ತಿ. | ||
03:59 | ಈಗ ನಾವು ಒಂದು ಹೊಸ Math ಒಬ್ಜೆಕ್ಟ್ ಅನ್ನು ನೋಡುತ್ತಿದ್ದೇವೆ ಮತ್ತು ಅದು E is equal to m c squared ಎಂದು ತೋರಿಸುತ್ತದೆ. | ||
04:07 | ಮತ್ತು ಇದರ ಜೊತೆ, ಬಲಭಾಗದಲ್ಲಿ ಆವರಣದಲ್ಲಿ ಸಂಖ್ಯೆ ಒಂದು (1) ಇದೆ. | ||
04:14 | ಅಂದರೆ ಈ ಡಾಕ್ಯುಮೆಂಟ್ ನಲ್ಲಿ ಎಲ್ಲಿ ಬೇಕಾದರು, ಈ ಸೂತ್ರವನ್ನು ಸಂಖ್ಯೆ ಒಂದರ ಮೂಲಕ 'ಕ್ರಾಸ್ ರೆಫರೆನ್ಸ್' ಮಾಡಬಹುದು. | ||
04:22 | ಇದನ್ನು ಹೇಗೆ ಮಾಡುವುದು ಎಂಬ ವಿವರವನ್ನು ನಂತರ ಕಲಿಯೋಣ. | ||
04:27 | ಈಗ Math ಒಬ್ಜೆಕ್ಟ್ ನ ಮೇಲೆ ಡಬಲ್ ಕ್ಲಿಕ್ ಮಾಡಿ. | ||
04:32 | Font size 18 ಮತ್ತು 'Left' Alignment ಈ ಫಾರ್ಮ್ಯಾಟ್ ಗಳನ್ನು ಮಾಡಿ. | ||
04:40 | ಈಗ Factorial ಗೆ ಒಂದು ಉದಾಹರಣೆಯನ್ನು ಬರೆಯೋಣ. | ||
04:44 | ‘fact’ ಎಂಬ 'ಮಾರ್ಕಪ್', ಫ್ಯಾಕ್ಟೋರಿಯಲ್ ಚಿಹ್ನೆಯನ್ನು ಪ್ರತಿನಿಧಿಸುತ್ತದೆ. | ||
04:50 | ಹಾಗಾಗಿ, ಮೊದಲೇ ಇರುವ ಫಾರ್ಮುಲಾವನ್ನು ಬದಲಿಸಿ, | ||
04:55 | 5 Factorial = 5 into 4 into 3 into 2 into 1 = 120 ಎಂದು ಬರೆಯೋಣ. | ||
05:07 | ಇಲ್ಲಿ ಮಾರ್ಕಪ್ ಅನ್ನು ಗಮನಿಸಿ. | ||
05:09 | ಇಲ್ಲಿ ಹೊಸ Math ಒಬ್ಜೆಕ್ಟ್ ನಲ್ಲಿ ನಮ್ಮ ಮುಂದಿನ ಸೂತ್ರವನ್ನು ಬರೆಯೋಣ. | ||
05:14 | ಇದಕ್ಕಾಗಿ, ಮೊದಲು ಈ 'ರೈಟರ್ ಗ್ರೇ ಬಾಕ್ಸ್' ನ ಹೊರಗೆ ನಿಧಾನವಾಗಿ ಮೂರು ಬಾರಿ ಕ್ಲಿಕ್ ಮಾಡೋಣ. | ||
05:23 | ಈ ಪೇಜ್ ನ ಕೊನೆಗೆ ಹೋಗಲು ಡೌನ್ – ಆರೋ ಕೀಲಿಯನ್ನು ಎರಡು-ಮೂರು ಬಾರಿ ಒತ್ತಿ. | ||
05:30 | ಮತ್ತು ಎರಡನೇ Math ಒಬ್ಜೆಕ್ಟ್ ಅನ್ನು ತರಲು ‘f n’ ಎಂದು ಟೈಪ್ ಮಾಡಿ ಮತ್ತು F3 ಯನ್ನು ಒತ್ತಿ. | ||
05:37 | ಮತ್ತೆ ನಾವು ಫಾರ್ಮ್ಯಾಟಿಂಗ್ ಅನ್ನು ಪುನರಾವರ್ತಿಸುವೆವು. | ||
05:46 | ಮತ್ತು ಇರುವ ಫಾರ್ಮುಲಾವನ್ನು ಬದಲಿಸಿ ಫ್ಯಾಕ್ಟೋರಿಯಲ್ ಡೆಫಿನೇಷನ್ : | ||
05:52 | n factorial is equal to prod from k = 1 to n of k ಎಂದು ಬರೆಯೋಣ. | ||
06:01 | ಗಮನಿಸಿ: ‘prod’ ಮಾರ್ಕಪ್ ಗುಣಲಬ್ದ ವನ್ನು ಸೂಚಿಸುತ್ತದೆ , ಅಂತೆಯೇ sigma ಇದು ಮೊತ್ತ ಕಂಡುಹಿಡಿಯಲು ಇರುವ ಮಾರ್ಕಪ್ ಆಗಿದೆ. | ||
06:10 | ಈಗ, ಮೊದಲ ಎರಡನೆಯವುಗಳಂತೆ ಮೂರನೆ ಮ್ಯಾಥ್ ಒಬ್ಜೆಕ್ಟ್ ಅನ್ನು ಪರಿಚಯಿಸೋಣ. | ||
06:20 | ಮತ್ತು ಪರದೆಯ ಮೇಲೆ ತೋರಿಸಿದಂತೆ, ಫ್ಯಾಕ್ಟೋರಿಯಲ್ ಡೆಫಿನೇಷನ್ ಅನ್ನು ಎರಡು ಕಂಡಿಷನ್ ಫಾರ್ಮುಲ ಗಳಾಗಿ ಬದಲಿಸಿ ಬರೆಯಿರಿ. | ||
06:30 | ‘binom’ ಎಂಬ ಮಾರ್ಕಪ್ ಅನ್ನು ಗಮನಿಸಿ, ಇದು ಎರಡು ಎಲಿಮೆಂಟ್ ಗಳ ವರ್ಟಿಕಲ್ ಸ್ಟ್ಯಾಕ್ ಅನ್ನು ಡಿಸ್ಪ್ಲೇ ಮಾಡುತ್ತದೆ. | ||
06:42 | ಈಗ ಈ ಸೂತ್ರಗಳನ್ನು ಕ್ರಾಸ್ ರೆಫರೆನ್ಸ್ ಮಾಡುವುದು ಹೇಗೆ ಎಂದು ನೋಡೋಣ. | ||
06:47 | ಇದಕ್ಕಾಗಿ ಹೊಸ ಪೇಜ್ ಗೆ ಹೋಗೋಣ. | ||
06:51 | ಮತ್ತು ಹೀಗೆ ಟೈಪ್ ಮಾಡಿ: "An example of factorial is provided here:" | ||
06:59 | ಈಗ Insert ಮೆನ್ಯು ವಿನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Cross reference ನ ಮೇಲೆ ಕ್ಲಿಕ್ ಮಾಡಿ. | ||
07:06 | ಹೊಸ ಪಾಪ್-ಅಪ್ ನಲ್ಲಿ, Type ಲಿಸ್ಟ್ ನಲ್ಲಿ Text ಅನ್ನು ಆಯ್ಕೆ ಮಾಡಿ. | ||
07:12 | ನಂತರ Selection ಲಿಸ್ಟ್ ನಲ್ಲಿ ಮೊದಲನೆಯದನ್ನು ಆಯ್ಕೆ ಮಾಡಿ, ಇದು ನಾವು ಬರೆದ ಫ್ಯಾಕ್ಟೋರಿಯಲ್ ನ ಮೊದಲನೆಯ ಸೂತ್ರವನ್ನು ಸೂಚಿಸುತ್ತದೆ. | ||
07:21 | ಈಗ ‘Insert reference to’ ಲಿಸ್ಟ್ ನಲ್ಲಿ Reference ಅನ್ನು ಆಯ್ಕೆ ಮಾಡಿ ಮತ್ತು ಒಮ್ಮೆ Insert ಅನ್ನು ಕ್ಲಿಕ್ ಮಾಡಿ ಮತ್ತು ಕ್ಲೋಸ್ ಮಾಡಿ. | ||
07:31 | ಹಾಗಾಗಿ, ನಮ್ಮ ಅಕ್ಷರಗಳ ಮುಂದೆ ಆವರಣದಲ್ಲಿ ಸಂಖ್ಯೆ ಒಂದು (1) ಬಂದಿದೆ. ನಾವು ಇದನ್ನು ಮಾಡಿದ್ದೇವೆ. | ||
07:39 | ಈ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ ಇದನ್ನು ಪರೀಕ್ಷಿಸೋಣ. | ||
07:43 | ಮತ್ತು ನಾವು ಮೊದಲ ಫಾರ್ಮುಲಾ ವನ್ನು ಬರೆದಲ್ಲಿಗೆ ಕರ್ಸರ್ ಹೋಗಿರುವುದನ್ನು ಗಮನಿಸಿ. | ||
07:51 | ಈ ರೀತಿಯಲ್ಲಿ ನಾವು Writer document ನಲ್ಲಿ ಎಲ್ಲಿ ಬೇಕಾದರೂ ಮ್ಯಾಥ್ ಫಾರ್ಮುಲಾ ಗಳನ್ನು 'ಕ್ರಾಸ್ ರೆಫರೆನ್ಸ್' ಮಾಡಬಹುದು. | ||
07:58 | ಈಗ ನಮ್ಮ ಕಾರ್ಯವನ್ನು ಸೇವ್ ಮಾಡೋಣ. | ||
08:01 | ಇಲ್ಲಿ Math ಗೆ ಕೆಲವು ರೆಫರೆನ್ಸ್ ಲಿಂಕ್ ಗಳಿವೆ: | ||
08:06 | 'libreoffice.org documentation' ಲಿಂಕ್ ನಲ್ಲಿರುವ Guide ಅನ್ನು ಡೌನ್ಲೋಡ್ ಮಾಡಿ. | ||
08:14 | Math ನ ಕುರಿತು ಹೆಚ್ಚಿನ ಮಾಹಿತಿಗಾಗಿ ನೀವು ಈ ಕೆಳಗಿನ ವೆಬ್ಸೈಟ್ ಅನ್ನು ಭೇಟಿಕೊಡಿ. | ||
08:20 | ಅಂತಿಮವಾಗಿ ನಿಮಗೆ ಇಲ್ಲಿ ಒಂದು ಅಸೈನ್ಮೆಂಟ್ ಇದೆ. ಇದಕ್ಕಾಗಿ 'ರೈಟರ್ ಡಾಕ್ಯುಮೆಂಟ್' ಅನ್ನು ಬಳಸಿ. | ||
08:25 | ಈ ಟ್ಯುಟೋರಿಯಲ್ ನಲ್ಲಿ ಕೊಟ್ಟ ಸೆಟ್ ನ ಉದಾಹರಣೆಯನ್ನು ಬಳಸಿ, A union ( B union C) is equal to (A union B) union C ಆಗಿದೆಯೇ ಎಂದು ಪರೀಕ್ಷಿಸಿ. | ||
08:40 | A minus B ದ ಫಲಿತಾಂಶವನ್ನು ಬರೆಯಿರಿ. | ||
08:43 | ಮತ್ತು 'ರೈಟರ್ ಡಾಕ್ಯುಮೆಂಟ್' ನಲ್ಲಿ ಎರಡನೆ ಮತ್ತು ಮೂರನೆಯ ಫ್ಯಾಕ್ಟೋರಿಯಲ್ ಫಾರ್ಮುಲಾಗಳನ್ನು ಕ್ರಾಸ್ ರೆಫರೆನ್ಸ್ ಮಾಡಿ. | ||
08:51 | ಇಲ್ಲಿಗೆ ನಾವು LibreOffice Math ನ Sets, Factorials ಮತ್ತುCross Referencing ಕುರಿತಾದ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. | ||
08:59 | ಈ ಟ್ಯುಟೋರಿಯಲ್ ನಲ್ಲಿ ನಾವು ಸಂಕ್ಷಿಪ್ತವಾಗಿ, | ||
09:03 | Set ಆಪರೇಷನ್ ಗಳನ್ನು ಬರೆಯುವುದು, | ||
09:05 | Factorial ಗಳನ್ನು ಬರೆಯುವುದು ಮತ್ತು | ||
09:08 | ಸಂಖ್ಯೆಗಳನ್ನು ಕೊಟ್ಟು ಇಕ್ವೇಷನ್ ಗಳನ್ನು 'ಕ್ರಾಸ್ ರೆಫರೆನ್ಸ್' ಮಾಡುವುದು- ಇವುಗಳ ಕುರಿತು ಕಲಿತಿದ್ದೇವೆ. | ||
09:11 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು, ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. | ||
09:23 | ಈ ಪ್ರಾಜೆಕ್ಟ್ http://spoken-tutorial.org ನಿಂದ ಸಂಘಟಿಸಲ್ಪಟ್ಟಿದೆ. | ||
09:27 | ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯವಿದೆ. | ||
09:32 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |