LibreOffice-Suite-Math/C3/Set-Operations-Factorials-Cross-reference-equations/Kannada

From Script | Spoken-Tutorial
Revision as of 20:16, 11 March 2018 by Anjana310312 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 LibreOffice Math ನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ ನಾವು,
00:07 'ಸೆಟ್ ಆಪರೇಷನ್' ಗಳನ್ನು ಬರೆಯುವುದು,
00:10 ಫ್ಯಾಕ್ಟೋರಿಯಲ್ ಗಳನ್ನು ಬರೆಯುವುದು ಮತ್ತು
00:12 ಇಕ್ವೇಷನ್ ಗಳನ್ನು, ಸಂಖ್ಯೆಗಳನ್ನು ಬಳಸಿ, ' ಕ್ರಾಸ್ ರೆಫರೆನ್ಸ್' ಮಾಡುವುದು – ಹೇಗೆ ಎಂದು ಕಲಿಯುವೆವು.
00:16 ಇದಕ್ಕಾಗಿ ಮೊದಲು ನಾವು ನಮ್ಮ ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ Writer document ಉದಾಹರಣೆಯಾದ "MathExample1.odt" ಯನ್ನು ಓಪನ್ ಮಾಡೋಣ.
00:29 ಇಲ್ಲಿ ಡಾಕ್ಯುಮೆಂಟ್ ನ ಕೊನೆಯ ಪುಟಕ್ಕೆ ಸ್ಕ್ರೋಲ್ ಮಾಡಿ, ನಂತರ ಹೊಸ ಪುಟಕ್ಕೆ ಹೋಗಲು Control, Enter ಅನ್ನು ಒತ್ತೋಣ.
00:37 ಮತ್ತು “Set Operations: ” ಎಂದು ಟೈಪ್ ಮಾಡಿ, Enter ಅನ್ನು ಎರಡು ಬಾರಿ ಒತ್ತಿ.
00:42 ಈಗ Math ಅನ್ನು ಕಾಲ್ ಮಾಡೋಣ.
00:45 ಮುಂದೆ ಹೋಗುವ ಮೊದಲು, ಫಾಂಟ್ ಸೈಜ್ ಅನ್ನು 18 point ಗೆ ಬದಲಿಸಿ.
00:51 Alignment ಅನ್ನು Left ಎಂದು ಬದಲಿಸಿ.
00:54 ಈಗ Set operation ಗಳನ್ನು ಹೇಗೆ ಬರೆಯುವುದು ಎಂದು ನೋಡೋಣ.
01:00 ಸೆಟ್ – ಇವುಗಳು ವಿಶಿಷ್ಟವಾದ ಎಲಿಮೆಂಟ್ ಗಳ ಸಂಗ್ರಹ- ಗಳನ್ನು ಪ್ರತಿನಿಧಿಸಲು, Math ಬೇರೆಯದೇ ಮಾರ್ಕಪ್ ಅನ್ನು ಹೊಂದಿದೆ.
01:07 ಈಗ, ' ಫಾರ್ಮುಲಾ ಎಡಿಟರ್ ವಿಂಡೋ' ದಲ್ಲಿ ಸೆಟ್ ಗಳ ನಾಲ್ಕು ಉದಾಹರಣೆಗಳನ್ನು ಪರದೆಯ ಮೇಲೆ ತೋರಿಸಿದಂತೆ ಬರೆಯೋಣ:
01:14 5 ಎಲಿಮೆಂಟ್ ಗಳೊಂದಿಗೆ, Set A
01:18 ಸೆಟ್ B,
01:21 ಸೆಟ್ C ಮತ್ತು ಸೆಟ್ D ಗಳು ತಲಾ ಎರಡು ಎಲಿಮೆಂಟ್ ಗಳನ್ನು ಹೊಂದಿವೆ.
01:26 ಗಮನಿಸಿ, ಸೆಟ್ ಗಳಿಗೆ ಬ್ರ್ಯಾಕೆಟ್ ಗಳನ್ನು ಬರೆಯಲು ನಾವು lbrace ಮತ್ತು rbrace ಎಂಬ ಮಾರ್ಕಪ್ ಗಳನ್ನು ಬಳಸಬಹುದು.
01:35 ಈಗ ನಾವು ಸೆಟ್ ಆಪರೇಷನ್ ಗಳಾದ union ಮತ್ತು intersection ಗಳನ್ನು ಬರೆಯಬಹುದು.
01:42 ಮೊದಲು ಒಂದು union operation ಅನ್ನು ಬರೆಯೋಣ.
01:46 B union C ಗೆ ಮಾರ್ಕಪ್, ನಾವು ಹೇಗೆ ಅದನ್ನು ಓದುತ್ತೇವೆಯೋ ಹಾಗೇ ಇರುತ್ತದೆ.
01:51 ಮತ್ತು ಫಲಿತ ಸೆಟ್ 1, 2, 6, 4 ಮತ್ತು 5 ಆಗಿರುತ್ತದೆ. ಅಂದರೆ ಇದು ಎರಡೂ ಸೆಟ್ ಗಳಲ್ಲಿರುವ ಡಿಸ್ಟಿಂಕ್ಟ್ ಎಲಿಮೆಂಟ್ ಗಳನ್ನು ಹೊಂದಿರುತ್ತದೆ.
02:04 ಇಂಟರ್ಸೆಕ್ಷನ್ ಆಪರೇಷನ್ ನ ಮಾರ್ಕಪ್ ಕೂಡ, ನಾವು ಓದುವಂತೆಯೇ ಇರುತ್ತದೆ.
02:10 ಇಂಟರ್ಸೆಕ್ಷನ್ ಎರಡೂ ಸೆಟ್ ಗಳಲ್ಲಿರುವ ಸಾಮಾನ್ಯ ಎಲಿಮೆಂಟ್ ಗಳನ್ನು ಮಾತ್ರ ಒಳಗೊಂಡಿರುತ್ತದೆ.
02:16 ಹಾಗಾಗಿ B intersection D ದ ಫಲಿತಾಂಶವು 6 ಆಗಿರುತ್ತದೆ.
02:23 ಮತ್ತು 'C' ನಲ್ಲಿರುವ ಎಲ್ಲ ಎಲೆಮೆಂಟ್ ಗಳು set A ನಲ್ಲಿರುವುದರಿಂದ ನಾವು set C ಯು set Asubset ಎಂದು ಬರೆಯಬಹುದು.
02:35 ಇದರ ಮಾರ್ಕಪ್ C subset A ಎಂದಾಗಿದೆ.
02:42 ನೀವು ಇಲ್ಲಿನ ಮೂರನೇ ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ, Elements ವಿಂಡೋವನ್ನು ತೆರೆದು ಹಲವು ಸೆಟ್ ಆಪರೇಷನ್ ಗಳನ್ನು ಬರೆಯಲು ಕಲಿಯಬಹುದು.
02:51 View > Elements > Set Operations ಗೆ ಹೋಗಿ.
02:59 ಈಗ ನಮ್ಮ ಕಾರ್ಯವನ್ನು ಸೇವ್ ಮಾಡೋಣ.
03:02 File > Save ನ ಮೇಲೆ ಕ್ಲಿಕ್ ಮಾಡಿ.
03:06 ಈಗ Factorial function ಗಳನ್ನು ನೋಡೋಣ.
03:11 ನಾವು ಈಗ ಬರೆಯುವ ಮೂರು ಫಾರ್ಮುಲಾ ಗಳಿಗೆ, 1 ರಿಂದ 3 ರವರೆಗಿನ ಅಂಕೆಗಳಿಂದ ಹೆಸರಿಸೋಣ.
03:19 ಇದು ರೈಟರ್ ಡಾಕ್ಯುಮೆಂಟ್ ನಲ್ಲಿ ಎಲ್ಲಿ ಬೇಕಾದರೂ, cross reference ಮಾಡಲು ಸಹಾಯ ಮಾಡುತ್ತದೆ.
03:25 ಈಗ Writer gray box ನ ಹೊರಭಾಗದಲ್ಲಿ, ಮೂರು ಬಾರಿ ಕ್ಲಿಕ್ ಮಾಡುವುದರ ಮೂಲಕ ಹೊಸ ಪೇಜ್ ಗೆ ಹೋಗೋಣ.
03:33 Control, Enter ಅನ್ನು ಒತ್ತಿ.
03:36 “Factorial Function: ” ಎಂದು ಟೈಪ್ ಮಾಡಿ, ಎರಡು ಬಾರಿ Enter ಅನ್ನು ಒತ್ತಿ.
03:42 Math ಅನ್ನು ಕಾಲ್ ಮಾಡುವುದು ಹೇಗೆಂದು ನೀವು ತಿಳಿದಿದ್ದೀರಿ.
03:45 ಆದರೆ Writer ಗೆ Math object ಅನ್ನು ತರಲು ಇನ್ನೊಂದು ವಿಧಾನವಿದೆ.
03:51 ಇದಕ್ಕಾಗಿ, Writer document ನಲ್ಲಿ ‘f n’ ಎಂದು ಟೈಪ್ ಮಾಡಿ ಮತ್ತು F3 ಯನ್ನು ಒತ್ತಿ.
03:59 ಈಗ ನಾವು ಒಂದು ಹೊಸ Math object ಅನ್ನು ನೋಡುತ್ತಿದ್ದೇವೆ ಮತ್ತು ಅದು E is equal to m c squared ಎಂದು ತೋರಿಸುತ್ತದೆ.
04:07 ಮತ್ತು ಇದರ ಜೊತೆ, ಬಲಭಾಗದಲ್ಲಿ ಪ್ಯಾರಾಂಥಿಸಿಸ್ ನಲ್ಲಿ ಸಂಖ್ಯೆ ಒಂದು (1) ಇದೆ.
04:14 ಅಂದರೆ ಈ ಡಾಕ್ಯುಮೆಂಟ್ ನಲ್ಲಿ ಎಲ್ಲಿ ಬೇಕಾದರು, ಈ ಫಾರ್ಮುಲಾವನ್ನು ಸಂಖ್ಯೆ ಒಂದರ ಮೂಲಕ cross reference ಮಾಡಬಹುದು.
04:22 ಇದನ್ನು ಹೇಗೆ ಮಾಡುವುದು ಎಂಬ ವಿವರವನ್ನು ನಂತರ ಕಲಿಯೋಣ.
04:27 ಈಗ Math object ನ ಮೇಲೆ ಡಬಲ್ ಕ್ಲಿಕ್ ಮಾಡಿ.
04:32 Font size 18 ಮತ್ತು 'Left' Alignment ಈ ಫಾರ್ಮ್ಯಾಟ್ ಗಳನ್ನು ಮಾಡಿ.
04:40 ಈಗ Factorial ಗೆ ಒಂದು ಉದಾಹರಣೆಯನ್ನು ಬರೆಯೋಣ.
04:44 ‘fact’ ಎಂಬ mark up ಫ್ಯಾಕ್ಟೋರಿಯಲ್ ಚಿಹ್ನೆಯನ್ನು ಪ್ರತಿನಿಧಿಸುತ್ತದೆ.
04:50 ಹಾಗಾಗಿ, ಮೊದಲೇ ಇರುವ ಫಾರ್ಮುಲಾವನ್ನು ಬದಲಿಸಿ,
04:55 5 Factorial = 5 into 4 into 3 into 2 into 1 = 120 ಎಂದು ಬರೆಯೋಣ.
05:07 ಇಲ್ಲಿ ಮಾರ್ಕಪ್ ಅನ್ನು ಗಮನಿಸಿ.
05:09 ಇಲ್ಲಿ ಹೊಸ Math object ನಮ್ಮ ಮುಂದಿನ ಫಾರ್ಮುಲಾ ವನ್ನು ಬರೆಯೋಣ.
05:14 ಇದಕ್ಕಾಗಿ, ಮೊದಲು ಈ Writer gray box ನ ಹೊರಗೆ ನಿಧಾನವಾಗಿ ಮೂರು ಬಾರಿ ಕ್ಲಿಕ್ ಮಾಡೋಣ.
05:23 ಈ ಪೇಜ್ ನ ಕೊನೆಗೆ ಹೋಗಲು ಡೌನ್ – ಆರೋ ಕೀಲಿಯನ್ನು ಎರಡು-ಮೂರು ಬಾರಿ ಒತ್ತಿ.
05:30 ಮತ್ತು ಎರಡನೇ Math object ಅನ್ನು ತರಲು ‘f n’ ಎಂದು ಟೈಪ್ ಮಾಡಿ ಮತ್ತು F3 ಯನ್ನು ಒತ್ತಿ.
05:37 ಮತ್ತೆ ನಾವು ಫಾರ್ಮ್ಯಾಟಿಂಗ್ ಅನ್ನು ಪುನರಾವರ್ತಿಸುವೆವು.
05:46 ಮತ್ತು ಇರುವ ಫಾರ್ಮುಲಾವನ್ನು ಬದಲಿಸಿ ಪ್ಯಾಕ್ಟೋರಿಯಲ್ ಡೆಫಿನೇಷನ್ :
05:52 n factorial is equal to prod from k = 1 to n of k ಎಂದು ಬರೆಯೋಣ.
06:01 ಗಮನಿಸಿ: ‘prod’ ಮಾರ್ಕಪ್ ಗುಣಲಬ್ದ ವನ್ನು ಸೂಚಿಸುತ್ತದೆ , ಅಂತೆಯೇ sigma ಇದು ಮೊತ್ತ ಕಂಡುಹಿಡಿಯಲು ಇರುವ ಮಾರ್ಕಪ್ ಆಗಿದೆ.
06:10 ಈಗ, ಮೊದಲ ಎರಡನೆಯವುಗಳಂತೆ ಮೂರನೆ ಮ್ಯಾಥ್ ಒಬ್ಜೆಕ್ಟ್ ಅನ್ನು ಪರಿಚಯಿಸೋಣ.
06:20 ಮತ್ತು ಪರದೆಯ ಮೇಲೆ ತೋರಿಸಿದಂತೆ, ಫ್ಯಾಕ್ಟೋರಿಯಲ್ ಡೆಫಿನೇಷನ್ ಅನ್ನು ಎರಡು ಕಂಡಿಷನ್ ಫಾರ್ಮುಲ ಗಳಾಗಿ ಬದಲಿಸಿ ಬರೆಯಿರಿ.
06:30 ‘binom’ ಎಂಬ ಮಾರ್ಕಪ್ ಅನ್ನು ಗಮನಿಸಿ, ಇದು ಎರಡು ಎಲಿಮೆಂಟ್ ಗಳ ವರ್ಟಿಕಲ್ ಸ್ಟ್ಯಾಕ್ ಅನ್ನು ಡಿಸ್ಪ್ಲೇ ಮಾಡುತ್ತದೆ.
06:42 ಈಗ ಈ ಫಾರ್ಮುಲಾಗಳನ್ನು ಕ್ರಾಸ್ ರೆಫರೆನ್ಸ್ ಮಾಡುವುದು ಹೇಗೆ ಎಂದು ನೋಡೋಣ.
06:47 ಇದಕ್ಕಾಗಿ ಹೊಸ ಪೇಜ್ ಗೆ ಹೋಗೋಣ.
06:51 ಮತ್ತು ಹೀಗೆ ಟೈಪ್ ಮಾಡಿ: "An example of factorial is provided here:"
06:59 ಈಗ Insert ಮೆನ್ಯು ವಿನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Cross reference ನ ಮೇಲೆ ಕ್ಲಿಕ್ ಮಾಡಿ.
07:06 ಹೊಸ ಪಾಪ್-ಅಪ್ ನಲ್ಲಿ, Type ಲಿಸ್ಟ್ ನಲ್ಲಿ Text ಅನ್ನು ಆಯ್ಕೆ ಮಾಡಿ.
07:12 ನಂತರ Selection ಲಿಸ್ಟ್ ನಲ್ಲಿ ಮೊದಲನೆಯದನ್ನು ಆಯ್ಕೆ ಮಾಡಿ, ಇದು ನಾವು ಬರೆದ ಫ್ಯಾಕ್ಟೋರಿಯಲ್ ನ ಮೊದಲನೆಯ ಫಾರ್ಮುಲಾವನ್ನು ಸೂಚಿಸುತ್ತದೆ.
07:21 ಈಗ ‘Insert reference to’ ಲಿಸ್ಟ್ ನಲ್ಲಿ Reference ಅನ್ನು ಆಯ್ಕೆ ಮಾಡಿ ಮತ್ತು ಒಮ್ಮೆ Insert ಅನ್ನು ಕ್ಲಿಕ್ ಮಾಡಿ ಮತ್ತು ಕ್ಲೋಸ್ ಮಾಡಿ.
07:31 ಹಾಗಾಗಿ, ನಮ್ಮ ಅಕ್ಷರಗಳ ಮುಂದೆ ಪ್ಯಾರಾಂಥಿಸಿಸ್ ನಲ್ಲಿ ಸಂಖ್ಯೆ ಒಂದು (1) ಬಂದಿದೆ. ನಾವು ಇದನ್ನು ಮಾಡಿದ್ದೇವೆ.
07:39 ಈ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ ಇದನ್ನು ಪರೀಕ್ಷಿಸೋಣ.
07:43 ಮತ್ತು ನಾವು ಮೊದಲ ಫಾರ್ಮುಲಾ ವನ್ನು ಬರೆದಲ್ಲಿಗೆ ಕರ್ಸರ್ ಹೋಗಿರುವುದನ್ನು ಗಮನಿಸಿ.
07:51 ಈ ರೀತಿಯಲ್ಲಿ ನಾವು Writer document ನಲ್ಲಿ ಎಲ್ಲಿ ಬೇಕಾದರೂ ಮ್ಯಾಥ್ ಫಾರ್ಮುಲಾ ಗಳನ್ನು 'ಕ್ರಾಸ್ ರೆಫರೆನ್ಸ್' ಮಾಡಬಹುದು.
07:58 ಈಗ ನಮ್ಮ ಕಾರ್ಯವನ್ನು ಸೇವ್ ಮಾಡೋಣ.
08:01 ಇಲ್ಲಿ Math ಗೆ ಕೆಲವು ರೆಫರೆನ್ಸ್ ಲಿಂಕ್ ಗಳಿವೆ:
08:06 'libreoffice.org documentation' ಲಿಂಕ್ ನಲ್ಲಿರುವ Guide ಅನ್ನು ಡೌನ್ಲೋಡ್ ಮಾಡಿ.
08:14 Math ನ ಕುರಿತು ಹೆಚ್ಚಿನ ಮಾಹಿತಿಗಾಗಿ ನೀವು ಈ ಕೆಳಗಿನ ವೆಬ್ಸೈಟ್ ಅನ್ನು ಭೇಟಿಕೊಡಿ.
08:20 ಅಂತಿಮವಾಗಿ ನಿಮಗೆ ಇಲ್ಲಿ ಒಂದು ಅಸೈನ್ಮೆಂಟ್ ಇದೆ. ಇದಕ್ಕಾಗಿ Writer document ಅನ್ನು ಬಳಸಿ.
08:25 ಈ ಟ್ಯುಟೋರಿಯಲ್ ನಲ್ಲಿ ಕೊಟ್ಟ ಸೆಟ್ ನ ಉದಾಹರಣೆಯನ್ನು ಬಳಸಿ, A union ( B union C) is equal to (A union B) union C ಆಗಿದೆಯೇ ಎಂದು ಪರೀಕ್ಷಿಸಿ.
08:40 A minus B ದ ಫಲಿತಾಂಶವನ್ನು ಬರೆಯಿರಿ.
08:43 ಮತ್ತು Writer document ನಲ್ಲಿ ಎರಡನೆ ಮತ್ತು ಮೂರನೆಯ ಫ್ಯಾಕ್ಟೋರಿಯಲ್ ಫಾರ್ಮುಲಾಗಳನ್ನು ಕ್ರಾಸ್ ರೆಫರೆನ್ಸ್ ಮಾಡಿ.
08:51 ಇಲ್ಲಿಗೆ ನಾವು LibreOffice MathSets, Factorials and Cross Referencing ಕುರಿತಾದ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
08:59 ಈ ಟ್ಯುಟೋರಿಯಲ್ ನಲ್ಲಿ ನಾವು ಸಂಕ್ಷಿಪ್ತವಾಗಿ,
09:03 Set ಆಪರೇಷನ್ ಗಳನ್ನು ಬರೆಯುವುದು,
09:05 Factorial ಗಳನ್ನು ಬರೆಯುವುದು ಮತ್ತು
09:08 ಸಂಖ್ಯೆಗಳನ್ನು ಕೊಟ್ಟು ಇಕ್ವೇಷನ್ ಗಳನ್ನು Cross reference ಮಾಡುವುದು- ಇವುಗಳ ಕುರಿತು ಕಲಿತಿದ್ದೇವೆ.
09:11 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
09:23 ಈ ಪ್ರಾಜೆಕ್ಟ್ http://spoken-tutorial.org ನಿಂದ ಸಂಘಟಿಸಲ್ಪಟ್ಟಿದೆ.
09:27 ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯವಿದೆ.
09:32 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14