LibreOffice-Suite-Math/C2/Derivatives-Differential-Equations-Integral-Equations-Logarithms/Kannada

From Script | Spoken-Tutorial
Revision as of 20:02, 11 March 2018 by Anjana310312 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 LibreOffice Math ನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು ಡೆರಿವೇಟಿವ್ ಗಳು, ಡಿಫರೆನ್ಷಿಯಲ್ ಇಕ್ವೇಷನ್ ಗಳು, ಇಂಟಿಗ್ರಲ್ ಇಕ್ವೇಷನ್ ಗಳು ಮತ್ತು ಲೊಗ್ಯಾರಿದಮ್ ನ ಸೂತ್ರಗಳನ್ನು ಬರೆಯುವುದು ಹೇಗೆ ಎಂದು ಕಲಿಯುವೆವು.
00:17 ಇದಕ್ಕಾಗಿ ಮೊದಲು ನಾವು ನಮ್ಮ ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ Writer document ಉದಾಹರಣೆಯಾದ "MathExample1.odt" ಯನ್ನು ಓಪನ್ ಮಾಡೋಣ.
00:29 ಇಲ್ಲಿ ಡಾಕ್ಯುಮೆಂಟ್ ನ ಕೊನೆಯ ಪುಟಕ್ಕೆ ಸ್ಕ್ರೋಲ್ ಮಾಡಿ, ನಂತರ ಹೊಸ ಪುಟಕ್ಕೆ ಹೋಗಲು Control, Enter ಅನ್ನು ಒತ್ತೋಣ.
00:37 ಈಗ ಹೀಗೆ ಟೈಪ್ ಮಾಡಿ: “Derivatives and Differential Equations: ” ಮತ್ತು Enter ಕೀಯನ್ನು ಎರಡು ಬಾರಿ ಒತ್ತಿ.
00:45 ಈಗ , Insert ಮೆನ್ಯುವನ್ನು ಕ್ಲಿಕ್ ಮಾಡಿ, ನಂತರ Object, ನಂತರ Formula ವನ್ನು ಕ್ಲಿಕ್ ಮಾಡಿ, Math ಅನ್ನು ಕಾಲ್ ಮಾಡೋಣ.
00:54 ಮುಂದೆ ಹೋಗುವ ಮೊದಲು ಫಾಂಟ್ ಸೈಜ್ ಅನ್ನು 18 ಪಾಯಿಂಟ್ ಗೆ ಹೆಚ್ಚಿಸಿಕೊಳ್ಳೋಣ.
01:00 Alignment ಅನ್ನು Left ಗೆ ಬದಲಿಸಿ.
01:03 ಮತ್ತು ಚೆನ್ನಾಗಿ ಓದುವಂತೆ ಮಾಡಲು, ಪ್ರತಿ ಉದಾಹರಣೆಯ ನಡುವೆ ಹೊಸ ಸಾಲುಗಳನ್ನು ಮತ್ತು ಖಾಲಿ ಸಾಲುಗಳನ್ನು ಸೇರಿಸಿ.
01:11 ಈಗ ನಾವು ಡೆರಿವೇಟಿವ್ ಗಳು ಮತ್ತು ಡಿಫರೆನ್ಷಿಯಲ್ ಇಕ್ವೇಷನ್ ಗಳನ್ನು ಹೇಗೆ ಬರೆಯುವುದು ಎಂದು ಕಲಿಯೋಣ.
01:19 ಈ ಸೂತ್ರಗಳು ಮತ್ತು ಸಮೀಕರಣಗಳನ್ನು ಬರೆಯಲು, Math ತುಂಬಾ ಸುಲಭದ ಮಾರ್ಗವನ್ನು ಹೊಂದಿದೆ.
01:25 ನಾವು ಅವುಗಳನ್ನು ಫ್ರಾಕ್ಷನ್ ಗಳಾಗಿ ಪರಿಗಣಿಸಬೇಕು ಮತ್ತು over ಎಂಬ ಮಾರ್ಕ್ಅಪ್ ಅನ್ನು ಬಳಸಬೇಕು.
01:33 ಉದಾಹರಣೆಗೆ- ಟೋಟಲ್ ಡೆರಿವೇಟಿವ್ df by dx ಬರೆಯಲು, ಫಾರ್ಮುಲಾ ಎಡಿಟರ್ ವಿಂಡೋದಲ್ಲಿ "df over dx" ಎಂಬ ಮಾರ್ಕಪ್ ಅನ್ನು ಬಳಸಬಹುದು.
01:50 ನಂತರ ಪಾರ್ಷಿಯಲ್ ಡೆರಿವೇಟಿವ್ ಗಾಗಿ ನಾವು , ‘partial’ ಎಂಬ ಶಬ್ದವನ್ನು ಬಳಸಬಹುದು ಮತ್ತು ಮಾರ್ಕಪ್ ಈ ರೀತಿಯಾಗಿರುತ್ತದೆ : del f over del x.
02:02 ನಾವು ‘partial’ ಮಾರ್ಕಪ್ ಅನ್ನು ಬಳಸುವಾಗ ಕರ್ಲಿ ಬ್ರ್ಯಾಕೆಟ್ ಗಳನ್ನು ಬಳಸಬೇಕು.
02:08 Writer gray box ನಲ್ಲಿ ಪಾರ್ಷಿಯಲ್ ಡೆರಿವೇಟಿವ್ ಗಳಿಗೆ 'del' ಚಿಹ್ನೆಯಾಗಿರುವುದನ್ನು ಗಮನಿಸಿ.
02:14 ಇಲ್ಲಿ ಇನ್ನೊಂದು ಉದಾಹರಣೆಯಿದೆ: ನ್ಯೂಟನ್ ನ ಚಲನೆಯ ಎರಡನೆಯ ನಿಯಮ,
02:21 ಇದು ವೇಗವರ್ಧನೆ (ಆಕ್ಸಲರೇಷನ್) ಮತ್ತು ಬಲಗಳ ನಡುವಿನ ಸಂಬಂಧವನ್ನು ತಿಳಿಸುತ್ತದೆ.
02:26 F is equal to m a.
02:30 ಇದನ್ನು ಸಾಮಾನ್ಯ ಡಿಫರೆನ್ಷಿಯಲ್ ಇಕ್ವೇಷನ್ ಆಗಿ ಈ ರೀತಿಯಾಗಿ ಬರೆಯಬಹುದು: F of t is equal to m into d squared x over d t squared.
02:45 ಗಮನಿಸಿ: ನಾವು ಆಪರೇಷನ್ ಗಳ ಆರ್ಡರ್ ಅನ್ನು ತಿಳಿಸಲು, ಹಲವಾರು ಕರ್ಲಿ ಬ್ರ್ಯಾಕೆಟ್ ಗಳನ್ನು ಬಳಸಿದ್ದೇವೆ.
02:56 ಮತ್ತು ಇಕ್ವೇಷನ್ ಪರದೆಯ ಮೇಲೆ ತೋರಿಸಿದಂತೆ ಇರುತ್ತದೆ.
03:01 ಇಲ್ಲಿ ಇನ್ನೊಂದು ಡಿಫರೆನ್ಷಿಯಲ್ ಇಕ್ವೇಷನ್ ನ ಉದಾಹರಣೆಯಿದೆ.
03:05 ನ್ಯೂಟನ್ ನ ಕೂಲಿಂಗ್ ನ ನಿಯಮ.
03:08 theta of t ಇದು ಕಾಲ t ನಲ್ಲಿ, ಒಂದು ವಸ್ತುವಿನ ಉಷ್ಣತೆಯಾದರೆ, ಆಗ ನಾವು ಡಿಫರೆನ್ಷಿಯಲ್ ಇಕ್ವೇಷನ್ ಅನ್ನು ಈ ರೀತಿಯಾಗಿ ಬರೆಯಬಹುದು:
03:18 d of theta over d of t is equal to minus k into theta minus S
03:30 ಇಲ್ಲಿ 'S' ಇದು ಸುತ್ತಲಿನ ವಾತಾವರಣದ ಉಷ್ಣತೆಯಾಗಿರುತ್ತದೆ.
03:35 Writer gray box ನಲ್ಲಿರುವ ಇಕ್ವೇಷನ್ ಅನ್ನು ಗಮನಿಸಿ.
03:39 ಈಗ ನಮ್ಮ ಈ ಕಾರ್ಯವನ್ನು ಸೇವ್ ಮಾಡೋಣ. File ಗೆ ಹೋಗಿ,Save ಅನ್ನು ಕ್ಲಿಕ್ ಮಾಡಿ.
03:45 ಈಗ 'ಇಂಟಿಗ್ರಲ್ ಇಕ್ವೇಷನ್' ಗಳನ್ನು ಹೇಗೆ ಬರೆಯುವುದು ಎಂದು ನೋಡೋಣ.
03:50 ಮತ್ತು ಈಗ Writer gray box ನ ಹೊರಭಾಗವನ್ನು ಮೂರು ಬಾರಿ ಕ್ಲಿಕ್ ಮಾಡುವುದರ ಮೂಲಕ ಹೊಸ ಪೇಜ್ ಗೆ ಹೋಗೋಣ.
03:58 ಮತ್ತು ನಂತರ Control, Enter ಅನ್ನು ಒತ್ತಿ.
04:03 ಹೀಗೆ ಟೈಪ್ ಮಾಡಿ: “Integral Equations: ”
04:06 ಎರಡು ಬಾರಿ, Enter ಅನ್ನು ಒತ್ತಿ.
04:11 ಈಗ Insert > Object ಮೆನ್ಯುವಿನಿಂದ Math ಅನ್ನು ಕಾಲ್ ಮಾಡೋಣ.
04:17 Font size ಅನ್ನು 18 point ಗಳಿಗೆ ಹೆಚ್ಚಿಸಿ.
04:22 ಮತ್ತು Alignment ಅನ್ನು, Left ಎಂದು ಬದಲಿಸಿ.
04:25 integral ಚಿಹ್ನೆಯನ್ನು ಬರೆಯಲು, ನಾವು 'ಫಾರ್ಮುಲಾ ಎಡಿಟರ್ ವಿಂಡೋ' ದಲ್ಲಿ “int” ಎಂಬ ಮಾರ್ಕಪ್ ಅನ್ನು ಬಳಸಬೇಕು.
04:35 ಹಾಗಾಗಿ ಇಲ್ಲಿ, ರಿಯಲ್ ವೇರಿಯೇಬಲ್ 'x' ನ ಫಂಕ್ಷನ್ ಮತ್ತು x-axis ನ ಮೇಲಿರುವ ರಿಯಲ್ ಲೈನ್ ನ ಇಂಟರ್ವಲ್ ಗಳಾದ 'a, b' ಗಳನ್ನು ಕೊಟ್ಟಿದೆ ಮತ್ತು ಡೆಫಿನೈಟ್ ಇಂಟಗ್ರಲ್ ಅನ್ನು ಈ ರೀತಿಯಾಗಿ ಬರೆಯುವೆವು :Integral from a to b f of x dx.
04:58 ಇಂಟಿಗ್ರಲ್ ಚಿಹ್ನೆಯನ್ನು ಸೂಚಿಸಲು ನಾವು ‘int’ ಮಾರ್ಕಪ್ ಅನ್ನು ಬಳಸಿದ್ದೇವೆ.
05:04 'ಲಿಮಿಟ್' ಗಳಾದ - 'a' ಮತ್ತು 'b' ಗಳನ್ನು ಸೂಚಿಸಲು ನಾಉ ‘from’ ಮತ್ತು ‘to’ ಎಂಬ ಮಾರ್ಕಪ್ ಗಳನ್ನು ಬಳಸಿದ್ದೇವೆ.
05:13 Writer gray box ನಲ್ಲಿರುವ ಫಾರ್ಮುಲಾವನ್ನು ಗಮನಿಸಿ.
05:17 ನಂತರ, ನಾವು double integral formula ದ ಒಂದು ಉದಾಹರಣೆಯನ್ನು ಒಂದು ಘನದ ಘನವನ್ನು ಕಂಡುಹಿಂಡಿಯಲು ಬರೆಯೋಣ.
05:26 ಮತ್ತು ಇದ ಸೂತ್ರವು ಪರದೆಯ ಮೇಲೆ ತೋರಿಸಿದಂತೆ ಇರುತ್ತದೆ.
05:30 ನಾವು ಇಲ್ಲಿ ನೋಡುವಂತೆ ಡಬಲ್ ಇಂಟಿಗ್ರಲ್ ನ ಮಾರ್ಕಪ್ ಸರಳವಾಗಿ, ‘i i n t’ ಎಂದಾಗಿದೆ.
05:38 ಅದೇ ರೀತಿ ಘನದ ಘನವನ್ನು ಕಂಡುಹಿಡಿಯಲು ಟಿಪಲ್ ಇಂಟಿಗ್ರಲ್ ಅನ್ನು ಕೂಡ ಬಳಸಬಹುದು.
05:46 ಮತ್ತು ಟ್ರಿಪಲ್ ಇಂಟಿಗ್ರಲ್ ಗೆ ಮಾರ್ಕಪ್ ‘i i i n t’ ಎಂದಾಗಿದೆ.
05:52 ನಾವು ಇಂಟಿಗ್ರಲ್ ನ ಲಿಮಿಟ್ ಗಳನ್ನು ಸೂಚಿಸಲು, subscript ಮಾರ್ಕಪ್ ಅನ್ನು ಕೂಡ ಬಳಸಬಹುದು.
06:00 subscript ಅನ್ನು ಬಳಸಿ, Math, ಇಂಟಿಗ್ರಲ್ ನ ಕೆಳ ಬಲಭಾಗದಲ್ಲಿ ಅಕ್ಷರಗಳನ್ನು ಇಡುತ್ತದೆ.
06:06 ಹಾಗಾಗಿ ಈ ಎಲ್ಲಾ ವಿಧಾನಗಳಿಂದ, math ನಲ್ಲಿ, ನಾವು ಇಂಟಿಗ್ರಲ್ ಫಾರ್ಮುಲ ಮತ್ತು ಇಕ್ವೇಶನ್ ಗಳನ್ನು ಬರೆಯಬಹುದು.
06:13 ಈಗ ನಾವು ಲೊಗ್ಯಾರಿದಮ್ ಗಳನ್ನೊಳಗೊಂಡ ಸೂತ್ರಗಳನ್ನು ಹೇಗೆ ಬರೆಯುವುದು ಎಂದು ನೋಡೋಣ.
06:19 ಇವುಗಳನ್ನು ಹೊಸ Math gray box ಅಥವ Math object ನಲ್ಲಿ ಬರೆಯೋಣ.
06:24 "Logarithms: " ಎಂದು ಟೈಪ್ ಮಾಡಿ, ಎರಡು ಬಾರಿEnter ಅನ್ನು ಒತ್ತಿ.
06:29 ಇನ್ನೊಮ್ಮೆl Math ಅನ್ನು ಕಾಲ್ ಮಾಡಿ.
06:35 ಮತ್ತು ಫಾಂಟ್ ಅನ್ನು 18 point ಗೆ ಬದಲಿಸಿ.
06:39 ಮತ್ತು ಅವುಗಳನ್ನು Left ಗೆ align ಮಾಡಿ.
06:42 ಲೊಗ್ಯಾರಿದಮ್ ಅನ್ನು ಬಳಸಿ ಒಂದು ಸರಳ ಸೂತ್ರ : log 1000 to the base 10 is equal to 3 ಆಗಿದೆ..
06:52 ಇಲ್ಲಿ ಮಾರ್ಕಪ್ ಅನ್ನು ಗಮನಿಸಿ.
06:55 ಇಲ್ಲಿ ಇನ್ನೊಂದು ಉದಾಹರಣೆ ಇದೆ: log 64 to the base 2 is equal to 6.
07:03 ಈಗ ನಾವು ನ್ಯಾಚುರಲ್ ಆಲ್ಗೋರಿದಮ್ ನ ಇಂಟಿಗ್ರಲ್ ನಿರೂಪಣೆಯನ್ನು ಬರೆಯೋಣ.
07:10 natural logarithm of t is equal to the integral of 1 by x dx from 1 to t.
07:20 ಮತ್ತು ಇದರ ಮಾರ್ಕಪ್ ಪರದೆಯ ಮೇಲೆ ತೋರಿಸಿದಂತೆ ಕಾಣಿಸುತ್ತದೆ.
07:25 ಈಗ ನಮ್ಮ ಉದಾಹರಣೆಗಳನ್ನು ಸೇವ್ ಮಾಡೋಣ.
07:29 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
07:31 ಈ ಕೆಳಗಿನ 'ಡೆರಿವೇಟಿವ್' ಫಾರ್ಮುಲಾವನ್ನು ಬರೆಯಿರಿ:
07:35 d squared y by d x squared is equal to d by dx of ( dy by dx).
07:47 ಸೂಕ್ತ ಬ್ರ್ಯಾಕೆಟ್ ಗಳನ್ನು ಬಳಸಿ.
07:51 ಈ ಕೆಳಗಿನ 'ಇಂಟಿಗ್ರಲ್' ಅನ್ನು ಬರೆಯಿರಿ:
07:53 Integral with limits 0 to 1 of {square root of x } dx.
08:04 ನಂತರ ಈ ಕೆಳಗಿನ 'ಡಬಲ್ ಇಂಟಿಗ್ರಲ್' ಅನ್ನು ಬರೆಯಿರಿ:
08:09 Double integral from T of { 2 Sin x – 3 y cubed + 5 } dx dy.
08:23 ಮತ್ತು
08:25 log x to the power of p to the base b is equal to p into log x to the base b ಈ ಸೂತ್ರವನ್ನು ಬಳಸಿ,
08:35 log 1024 to the base 2 ಇದರ ಉತ್ತರವನ್ನು ಕಂಡುಹಿಡಿಯಿರಿ.
08:41 ನಿಮ್ಮ ಫಾರ್ಮುಲಾ ಗಳನ್ನು Format ಮಾಡಿ.
08:43 ಇಲ್ಲಿಗೆ ನಾವು, LibreOffice Math ನಲ್ಲಿರುವ 'ಡಿಫರೆನ್ಷಿಯಲ್' ಮತ್ತು ಇಂಟಿಗ್ರಲ್ ಇಕ್ವೇಷನ್ ಗಳು ಮತ್ತು ಲೊಗ್ಯಾರಿದಮ್ ಗಳನ್ನು ಬರೆಯುವುದರ ಕುರಿತು ಇರುವ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
08:52 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು :* 'ಡೆರಿವೇಟಿವ್' ಗಳು ಮತ್ತು and 'ಡಿಫರೆನ್ಷಿಯಲ್ ಇಕ್ವೇಷನ್' ಗಳು,
08:58 'ಇಂಟಿಗ್ರಲ್ ಇಕ್ವೇಷನ್' ಗಳು ಮತ್ತು *ಲೊಗ್ಯಾರಿದಮ್ ಗಳೊಂದಿಗೆ ಫಾರ್ಮುಲಾ ಗಳನ್ನು ಬರೆಯುವುದನ್ನು ಕಲಿತಿದ್ದೇವೆ.
09:02 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
09:06 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
09:13 ಈ ಪ್ರಾಜೆಕ್ಟ್ http://spoken-tutorial.org ನಿಂದ ಸಂಘಟಿಸಲ್ಪಟ್ಟಿದೆ.
09:18 ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯವಿದೆ.
09:24 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14