Netbeans/C2/Designing-GUI-for-Sample-Java-Application/Kannada
From Script | Spoken-Tutorial
Revision as of 11:07, 15 March 2017 by Sandhya.np14 (Talk | contribs)
Time | Narration |
00:01 | ನಮಸ್ಕಾರ. |
00:02 | Netbeans (ನೆಟ್ಬೀನ್ಸ್) ಅನ್ನು ಬಳಸಿ, GUI ಗಳನ್ನು ಬಿಲ್ಡ್ ಮಾಡುವ ಬಗ್ಗೆ ಇರುವ ಈ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು Netbeans ನ ಅತ್ಯಂತ ಆಕರ್ಷಕ ವೈಶಿಷ್ಟ್ಯಗಳಲ್ಲಿ ಒಂದಾದ 'GUI Builder' ಅನ್ನು ನೋಡುವೆವು. |
00:13 | GUI ಅನ್ನು ಬಿಲ್ಡ್ ಮಾಡಲು Netbeans ಏನನ್ನು ಒದಗಿಸುತ್ತದೆ? |
00:16 | ನಿಮ್ಮ GUI ಅನ್ನು ಕ್ರಿಯೇಟ್ ಮಾಡಲು ಅದು ನಿಮಗೆ 'What You See Is What You Get' ಎಂಬ ಒಂದು ಡಿಸೈನರ್ ಅನ್ನು ಕೊಡುತ್ತದೆ. |
00:21 | ಅಲ್ಲದೆ, ನಿಮ್ಮ ಲೇ-ಔಟ್ ಅನ್ನು ರಚಿಸಲು ಘಟಕಗಳನ್ನು ಡ್ರ್ಯಾಗ್ ಆಂಡ್ ಡ್ರಾಪ್ ಮಾಡಲು ಒಂದು ಸುಲಭವಾದ ಇಂಟರ್ಫೇಸ್ ಅನ್ನು ಅದು ನಿಮಗೆ ಕೊಡುತ್ತದೆ. |
00:27 | ಇದು, 'Palette' (ಪ್ಯಾಲೆಟ್) ನೊಂದಿಗೆ ಮೊದಲೇ ಇನ್ಸ್ಟಾಲ್ ಮಾಡಲಾದ AWT ಮತ್ತು 'Swing' ಘಟಕಗಳೊಂದಿಗೆ ಬರುತ್ತದೆ. |
00:33 | ಕೆಲವೇ ಕ್ಷಣಗಳಲ್ಲಿ ಒಂದು ಸಂಪೂರ್ಣ 'GUI ಅಪ್ಲಿಕೇಶನ್' ಅನ್ನು ಬಿಲ್ಡ್ ಮಾಡಲು, ನಾವು ಈ ಪ್ರಬಲ ವಿಜುವಲ್ ಎಡಿಟರ್ ನ ಬಳಕೆಯನ್ನು ಮಾಡುವವರಿದ್ದೇವೆ. |
00:39 | ಇದನ್ನು ಮಾಡಿತೋರಿಸಲು, ನಾನು: |
00:43 | * Linux ಆಪರೇಟಿಂಗ್ ಸಿಸ್ಟಂ Ubuntu, ಆವೃತ್ತಿ 11.04 ಹಾಗೂ |
00:46 | * Netbeans IDE ಆವೃತ್ತಿ 7.1.1
ಇವುಗಳನ್ನು ಬಳಸುತ್ತಿದ್ದೇನೆ. |
00:50 | ಇನ್ಸ್ಟಾಲ್ಲೇಶನ್ ಮತ್ತು ಅವಶ್ಯಕತೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಹಿಂದಿನ ಟ್ಯುಟೋರಿಯಲ್ ಅನ್ನು ನೋಡಿ. |
00:56 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:58 | * 'Form Editor' (ಫಾರ್ಮ್ ಎಡಿಟರ್) ಅನ್ನು ಬಳಸುವುದು |
01:00 | * 'Source Editor' (ಸೋರ್ಸ್ ಎಡಿಟರ್) |
01:02 | * 'Palette' (ಪ್ಯಾಲೆಟ್), 'Inspector' (ಇನ್ಸ್ಪೆಕ್ಟರ್) ಮತ್ತು 'Properties' ಈ ವೈಶಿಷ್ಟ್ಯಗಳು |
01:05 | * 'ಇವೆಂಟ್ ಹ್ಯಾಂಡ್ಲರ್' ಗಳನ್ನು (event handler) ಸೇರಿಸುವುದು ಮತ್ತು |
01:07 | * ನಮ್ಮ ಅಪ್ಲಿಕೇಶನ್ ಅನ್ನು ಕಂಪೈಲ್ ಮಾಡಿ ಅದನ್ನು ರನ್ ಸಹ ಮಾಡುವುದು ಇತ್ಯಾದಿಗಳನ್ನು ಕಲಿಯುವೆವು. |
01:10 | ನಾವು ಈಗ ಆರಂಭಿಸೋಣ. ಈ ಟ್ಯುಟೋರಿಯಲ್ ನಲ್ಲಿ ಒಂದು ಸರಳವಾದ 'Account balance application' ಅನ್ನು ಬಿಲ್ಡ್ ಮಾಡೋಣ. |
01:15 | ಈ ಅಪ್ಲಿಕೇಶನ್ ಗಾಗಿ, ನಮಗೆ - |
01:18 | * ಖಾತೆಗೆ (ಅಕೌಂಟ್ ಗೆ) ಜಮಾ (credit) ಮಾಡಲಾದ ಮೊತ್ತವನ್ನು ಇನ್ಪುಟ್ ಮಾಡಲು |
01:21 | * ಖಾತೆಯಿಂದ (ಅಕೌಂಟ್ ನಿಂದ) ಪಡೆಯಲಾದ (debit) ಮೊತ್ತ |
01:24 | * ಮತ್ತು ಕೊನೆಗೆ ಉಳಿಯುವ ಬಾಕಿಯನ್ನು (balance) ಕಂಡುಹಿಡಿಯುವುದು ಇವುಗಳನ್ನು ಮಾಡಲು ಸಾಧ್ಯವಾಗಬೇಕು. |
01:26 | ನಮ್ಮ ಅಪ್ಲಿಕೆಶನ್ ಹೆಚ್ಚು ಆಕರ್ಷಕವಾಗಿ ಕಾಣಲು ಒಂದು ಚಿತ್ರವನ್ನು ಸಹ ನಾವು ಸೇರಿಸುವೆವು. |
01:31 | ಸುಲಭ ಮತ್ತು ತ್ವರಿತವಾದ ನ್ಯಾವಿಗೇಶನ್ ಗಾಗಿ ಮೇಲ್ತುದಿಯಲ್ಲಿ ಒಂದು ಮೆನ್ಯುಬಾರ್ ಅನ್ನು ಸಹ ನಾವು ಸೇರಿಸೋಣ. |
01:35 | ಈಗ ನಾವು 'netbeans' ಗೆ ಹೋಗೋಣ ಮತ್ತು ಒಂದು ಹೊಸ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡುವುದರ ಮೂಲಕ ಆರಂಭಿಸೋಣ. |
01:40 | 'File' ಮೆನ್ಯುವಿನಿಂದ, 'New Project' ಅನ್ನು ಆರಿಸಿಕೊಳ್ಳಿ >> ಇಲ್ಲಿ ಒಂದು 'Java Application' ಅನ್ನು ಆರಿಸಿಕೊಳ್ಳಿ. 'Next' ಅನ್ನು ಒತ್ತಿ |
01:49 | ಮತ್ತು ನಿಮ್ಮ ಪ್ರೊಜೆಕ್ಟ್ ಗೆ ಒಂದು ಹೆಸರನ್ನು ಕೊಡಿ. |
01:51 | ನಾನು ನನ್ನ ಪ್ರೊಜೆಕ್ಟ್ ಅನ್ನು "Account balance" ಎಂದು ಹೆಸರಿಸುವೆನು. |
01:58 | 'Main Class' ಅನ್ನು ಕ್ರಿಯೇಟ್ ಮಾಡಬೇಡಿ ಆದರೆ ಅದನ್ನು 'Main Project' ಎಂದು ಸೆಟ್ ಮಾಡಿ. |
02:02 | 'Finish' ಅನ್ನು ಒತ್ತಿ. ಇದು ನಿಮ್ಮ IDE ಯಲ್ಲಿ ಒಂದು ಹೊಸ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಬೇಕು. |
02:07 | ಈಗ 'File' ಮೆನ್ಯುನಲ್ಲಿ 'File' ಗೆ ಹಿಂದಿರುಗಿ ಮತ್ತು 'New File' ಅನ್ನು ಆಯ್ಕೆಮಾಡಿ. |
02:15 | 'Categories' ನ ಅಡಿಯಲ್ಲಿ 'Swing GUI Forms' ಅನ್ನು |
02:18 | ಮತ್ತು, 'File Type' ನಡಿಯಲ್ಲಿ 'Jframe Form' (ಜೆ ಫ್ರೇಮ್ ಫಾರ್ಮ್) ಅನ್ನು ಆರಿಸಿಕೊಳ್ಳಿ. |
02:21 | 'Next' ಅನ್ನು ಒತ್ತಿ. |
02:24 | ನಾನು ಇದನ್ನೂ "AccountBalance" ಎಂದೇ ಕರೆಯುತ್ತೇನೆ. |
02:29 | ಆದರೆ ನೀವು ನಿಮಗೆ ಬೇಕಾದ ಹೆಸರನ್ನು ಇದಕ್ಕೆ ಕೊಡಬಹುದು. |
02:33 | ನೀವು 'Finish' ಅನ್ನು ಒತ್ತಿದ ತಕ್ಷಣ ಇದು ನಿಮ್ಮನ್ನು ಮುಖ್ಯವಾದ 'Design' ಜಾಗಕ್ಕೆ ಕರೆದೊಯ್ಯುತ್ತದೆ. |
02:39 | ನಾವು ಈಗ 'GUI builder' ನ ಬಗ್ಗೆ ತಿಳಿದುಕೊಳ್ಳೋಣ. |
02:43 | ಬಲಗಡೆಯಲ್ಲಿ, ಇಲ್ಲಿ, 'Palette' ಇದೆ. |
02:45 | ಇದು, ಮೊದಲೇ ಇನ್ಸ್ಟಾಲ್ ಮಾಡಲಾದ 'Swing' ಮತ್ತು 'AWT' ಘಟಕಗಳನ್ನು ಒಳಗೊಂಡಿದೆ. |
02:49 | ಇಲ್ಲಿ, ಪ್ಯಾಲೆಟ್ ನ ಕೆಳಗೆ ಇರುವುದು 'Properties' ವಿಂಡೋ ಆಗಿದೆ. |
02:53 | ಇದು, ನೀವು ಕಾಂಪೋನೆಂಟ್ ಗಳನ್ನು ಆಯ್ಕೆಮಾಡಿದಾಗ ಅವುಗಳ ಗುಣಲಕ್ಷಣಗಳನ್ನು ನಿಮಗೆ ತೋರಿಸುತ್ತದೆ. |
02:58 | ಎಡಗಡೆಯಲ್ಲಿ, ಇಲ್ಲಿರುವುದು 'Navigator' ಅಥವಾ 'inspector' ಆಗಿದೆ. |
03:01 | ಇದು ಇಲ್ಲಿ, ವರ್ಕ್-ಸ್ಪೇಸ್ ನಲ್ಲಿ, 'Design' ಮೋಡ್ ನಲ್ಲಿ 'frame' ಗೆ ಸೇರಿಸಲಾದ ಘಟಕಗಳನ್ನು |
03:05 | ನಿಮಗೆ ತೋರಿಸುತ್ತದೆ. |
03:08 | ಮೇಲ್ಗಡೆ, ಇಲ್ಲಿ ಇರುವುದು 'Source' ಬಟನ್ ಆಗಿದೆ. |
03:11 | ನೀವು ಇದರ ಮೇಲೆ ಕ್ಲಿಕ್ ಮಾಡಿದಾಗ, ಇದು ನಿಮ್ಮನ್ನು 'ಸೋರ್ಸ್ ಕೋಡ್' ಗೆ ಕರೆದೊಯ್ಯುತ್ತದೆ. |
03:15 | ನೀವು ಡಿಸೈನ್ ಗೆ ಘಟಕಗಳನ್ನು ಸೇರಿಸಿದಾಗ ಇದು |
03:18 | ಅದಕ್ಕೆ ಅನುಗುಣವಾದ ಸೋರ್ಸ್ ಕೋಡನ್ನು ತೆಗೆದುಕೊಂಡು ಅದನ್ನು ಇಲ್ಲಿ ಸೋರ್ಸ್ ಗೆ ಸೇರಿಸುತ್ತದೆ. |
03:23 | ನಾವು 'Design' ಮೋಡ್ ಗೆ ಹಿಂದಿರುಗೋಣ ಮತ್ತು ಈಗ ನಾವು ಬಳಸಲಿರುವ ಘಟಕಗಳನ್ನು ನೋಡೋಣ. |
03:28 | ನಮ್ಮ ಅಪ್ಲಿಕೇಶನ್ ಅನ್ನು ಕ್ರಿಯೇಟ್ ಮಾಡಲು, ಪ್ಯಾಲೆಟ್ ನಲ್ಲಿಯ 'Buttons, Labels, Panels, Tabbed pane' ಗಳಂತಹ |
03:31 | ಕೆಲವು ಘಟಕಗಳನ್ನು ನಾವು ಬಳಸಲಿದ್ದೇವೆ. |
03:38 | ಈಗ, 'Palette' ನಿಂದ 'swing Containers' ನ ಅಡಿಯಲ್ಲಿ 'Tabbed Pane' ಅನ್ನು ನಾವು ಆರಿಸಿಕೊಳ್ಳೋಣ. |
03:45 | 'Tabbed Pane' ಅನ್ನು ಆಯ್ಕೆಮಾಡಿ ಮತ್ತು 'form' ನ ಮೇಲೆ ಕ್ಲಿಕ್ ಮಾಡಿ. |
03:50 | ಇದು ನಿಮಗೆ ಒಂದು 'Tabbed frame' ಅನ್ನು ಕೊಡಬೇಕು. ನಿಮ್ಮ ಮೌಸ್ ಅನ್ನು ಬಳಸಿಕೊಂಡು ನೀವು ಇದನ್ನು ರಿಸೈಜ್ ಮಾಡಬಹುದು. |
03:58 | ಈಗ 'Palette' ಗೆ ಹಿಂದಿರುಗಿ ಮತ್ತು ಒಂದು 'Panel' ಅನ್ನು ಆಯ್ಕೆಮಾಡಿ. |
04:02 | ಮತ್ತು ನಿಮ್ಮ 'frame' ನ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ. |
04:06 | ಅದು ನಿಮಗೆ ಒಂದು tab (ಟ್ಯಾಬ್) ಅನ್ನು ಕೊಡಬೇಕು. |
04:09 | ಈಗ ಹಿಂದಿರುಗಿ, ಇನ್ನೊಂದು 'Panel' ಅನ್ನು ಆಯ್ಕೆಮಾಡಿ ಮತ್ತು 'form' ನ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ. |
04:14 | ಇದು ನಿಮಗೆ ಒಟ್ಟು 2 ಟ್ಯಾಬ್ ಗಳನ್ನು ಕೊಡುತ್ತದೆ. |
04:17 | ಈಗ, ಟ್ಯಾಬ್ ನ ಮೇಲೆ ಡಬಲ್-ಕ್ಲಿಕ್ ಅಥವಾ ರೈಟ್-ಕ್ಲಿಕ್ ಮಾಡಿ. 'Edit Text' ಅನ್ನು ಆಯ್ಕೆ ಮಾಡುವುದರ ಮೂಲಕ ನೀವು ಅದನ್ನು 'rename' ಮಾಡಬಹುದು. |
04:29 | ನಾನು ಮೊದಲನೆಯ ಟ್ಯಾಬ್ ಅನ್ನು "Image" ಹಾಗೂ ಎರಡನೆಯದನ್ನು "Balance" ಎಂದು ರೀ-ನೇಮ್ ಮಾಡುವೆನು. |
04:37 | ಈಗ, ನಾವು 'Palette' ಗೆ ಹಿಂದಿರುಗೋಣ ಮತ್ತು 'Swing Controls' ಮೆನ್ಯುನಿಂದ 'label' ಗಳನ್ನು ಸೇರಿಸೋಣ. |
04:43 | 'Swing Controls' ನಿಂದ 'Label' ಅನ್ನು ಆರಿಸಿಕೊಳ್ಳಿ ಮತ್ತು ಇದನ್ನು ಇಲ್ಲಿ ನಿಮ್ಮ ಫಾರ್ಮ್ ಗೆ (form) ಸೇರಿಸಿ. |
04:48 | ನಮ್ಮ ಅಪ್ಲಿಕೇಶನ್ ಗಾಗಿ ನಮಗೆ ಒಟ್ಟು 6 ಲೇಬಲ್ ಗಳ ಅಗತ್ಯವಿದೆ. |
04:54 | ಈಗ ನಾನು ನನ್ನ ಫಾರ್ಮ್ ಗೆ ಆರು ಲೇಬಲ್ ಗಳನ್ನು ಸೇರಿಸಿದ್ದೇನೆ. |
04:58 | ನೀವು ಅವುಗಳನ್ನು ಕ್ಲಿಕ್ ಮಾಡಿ ಸಾಲಾಗಿ ಹೊಂದಿಸಬಹುದು. |
05:02 | ಮತ್ತೆ ಅವುಗಳ ಸ್ಥಾನವನ್ನು ಹೊಂದಿಸಲು ಅಥವಾ ಸಾಲಾಗಿರಿಸಲು ಮೌಸ್ ಅನ್ನು ಸಹ ಬಳಸಬಹುದು. |
05:06 | ಈಗ, ಲೇಬಲ್ ನ ಮೇಲಿನ ಟೆಕ್ಸ್ಟ್ ಅನ್ನು ಬದಲಾಯಿಸಲು - |
05:08 | ನೀವು ಅದರ ಮೇಲೆ ಡಬಲ್-ಕ್ಲಿಕ್ ಅಥವಾ ರೈಟ್-ಕ್ಲಿಕ್ ಮಾಡಬಹುದು |
05:12 | ಮತ್ತು 'Edit Text' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
05:14 | ಈಗ ನಾವು ಈ ಲೇಬಲ್ ಗಳನ್ನು 'rename' ಮಾಡೋಣ. |
05:16 | ನಾನು ಮೊದಲನೆಯದನ್ನು "Initial Amount" ಎಂದು, |
05:22 | ಎರಡನೆಯ ಲೇಬಲ್ ಅನ್ನು "Credit Amount", |
05:30 | ಮೂರನೆಯದನ್ನು "Debit Amount" |
05:35 | ಮತ್ತು ನಾಲ್ಕನೆಯದನ್ನು "Balance" ಎಂದು ಕರೆಯುತ್ತೇನೆ. |
05:41 | ಆರಂಭದಲ್ಲಿ ನಾವು 'Initial Amount' ಅನ್ನು Rs 5000 ಗೆ ಸೆಟ್ ಮಾಡುವೆವು. |
05:48 | 'balance' ಅನ್ನು ಕಂಡುಹಿಡಿದ ನಂತರ, ನಾವು ಅದನ್ನು ಈ ಲೇಬಲ್ ನಲ್ಲಿ ಹಾಕಬಹುದು. |
05:53 | ಆದರೆ ಸಧ್ಯಕ್ಕೆ ನಾವು ಇದನ್ನು ಬರೀ ಸ್ಟಾರ್ ಗಳನ್ನಾಗಿ ಇಡೋಣ. |
06:01 | ಈಗ 'Palette' ಗೆ ಹಿಂದಿರುಗಿ 'Text Field' ಅನ್ನು ಆಯ್ಕೆಮಾಡುವೆವು. ನಾವು 'Credit Amount' ನ ಹತ್ತಿರ ಒಂದು ಹಾಗೂ 'Debit Amount' ನ ಹತ್ತಿರ ಒಂದು, ಹೀಗೆ ಒಟ್ಟಿನಲ್ಲಿ ಎರಡು ಟೆಕ್ಸ್ಟ್ ಫೀಲ್ಡ್ ಗಳನ್ನು ಸೇರಿಸುವೆವು. |
06:16 | ನಾವು 'Text field' ಸ್ಥಳಗಳನ್ನು ಖಾಲಿ ಬಿಡಬೇಕು. |
06:20 | ನಾನು ಟೆಕ್ಸ್ಟ್ ಅನ್ನು ಎಡಿಟ್ ಮಾಡುತ್ತೇನೆ ಮತ್ತು ಇಲ್ಲಿ ಇರುವ ಟೆಕ್ಸ್ಟ್ ಅನ್ನು ತೆಗೆದುಹಾಕುತ್ತೇನೆ. |
06:27 | ಮೌಸ್ ಅನ್ನು ಉಪಯೋಗಿಸಿ ನಾವು ಇದನ್ನು ರಿ-ಸೈಜ್ (resize) ಮಾಡೋಣ. |
06:35 | ಇದನ್ನು ಮಾಡಿದ ಮೇಲೆ ಈಗ ನೀವು Palette ಗೆ ಹಿಂದಿರುಗಬಹುದು ಮತ್ತು 'Button' ಅನ್ನು ಆಯ್ಕೆಮಾಡಬಹುದು. |
06:42 | ನಿಮ್ಮ 'frame' ನ ಕೆಳಗೆ ಬಟನ್ ಅನ್ನು ಸೇರಿಸಿ ಮತ್ತು |
06:48 | ಅದರ ಮೇಲೆ ರೈಟ್-ಕ್ಲಿಕ್ ಮಾಡುವುದರ ಮೂಲಕ ನೀವು ಲೇಬಲ್ ಅನ್ನು ಬದಲಾಯಿಸಬಹುದು. |
06:53 | 'Edit Text' ಆಯ್ಕೆಯನ್ನು ಆರಿಸಿಕೊಳ್ಳಿ ಮತ್ತು ಅದನ್ನು "Get Balance" ಎಂದು ಹೆಸರಿಸಿ. |
06:58 | ಇದೋ, ಈಗ ನಮ್ಮ GUI ಸಿದ್ಧವಾಗಿದೆ. |
07:01 | ಈಗ ನಾವು 'Image' ಟ್ಯಾಬ್ ಗೆ (tab1) ಹೋಗೋಣ ಮತ್ತು ಒಂದು ಇಮೇಜನ್ನು ಸೇರಿಸೋಣ. |
07:05 | ಇದನ್ನು ಮಾಡಲು ನಾವು 'Palette' ಗೆ ಹಿಂದಿರುಗೋಣ |
07:08 | ಮತ್ತು ಇನ್ನೊಂದು 'Label' ಅನ್ನು ಆಯ್ಕೆಮಾಡಿ ಅದನ್ನು ಪ್ಯಾನೆಲ್ ನ ಮೇಲೆ ತಂದು ಇಡೋಣ. |
07:13 | ಈಗ, palette ನ ಕೆಳಗೆ ಇರುವ 'Properties' ವಿಂಡೋದಿಂದ 'icon' ಪ್ರಾಪರ್ಟೀಗಾಗಿ ಹುಡುಕಿ ಮತ್ತು ಇಲ್ಲಿ ಬಲಬದಿಗೆ ಇರುವ 3 ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. |
07:26 | 'icon properties' ವಿಂಡೋ ತೆರೆದುಕೊಳ್ಳುತ್ತದೆ. |
07:28 | ಇಲ್ಲಿ, 'External Image' ಎಂಬ ಆಯ್ಕೆಯನ್ನು ಆರಿಸಿಕೊಂಡು ಬಲಗಡೆಯ 3 ಚುಕ್ಕೆಗಳ (...) ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ. |
07:35 | ಮತ್ತು, ನಿಮ್ಮ ಅಪ್ಲಿಕೇಶನ್ ನಲ್ಲಿ ನಿಮಗೆ ಸೇರಿಸಬೇಕಾಗಿರುವ ಇಮೇಜ್ ಗಾಗಿ ಹುಡುಕಿ. |
07:41 | ನಾನು ಇಲ್ಲಿ ಇಮೇಜನ್ನು ಆಯ್ಕೆಮಾಡಿದ್ದೇನೆ. 'OK' ಮೇಲೆ ಕ್ಲಿಕ್ ಮಾಡಿ. |
07:48 | ಮೌಸ್ ಅನ್ನು ಬಳಸಿ ನಾವು ಇದನ್ನು ಸ್ಥಳಾಂತರ ಮಾಡೋಣ. |
07:51 | ನೀವು ಇಲ್ಲಿ ಲೇಬಲ್ ನ ಮೇಲೆ ಡಬಲ್-ಕ್ಲಿಕ್ ಮಾಡಿ, ಅದರ ಮೇಲಿರುವ ಟೆಕ್ಸ್ಟ್ ಅನ್ನು ತೆಗೆದುಹಾಕಬಹುದು. |
07:59 | ಈಗ ನಾವು ಇಮೇಜನ್ನು ಸೇರಿಸಿದ್ದೇವೆ. |
08:02 | ನಂತರ ನಾವು ನಮ್ಮ GUI ಗೆ ಒಂದು ಮೆನ್ಯುಅನ್ನು ಸೇರಿಸೋಣ. |
08:05 | 'palette' ಗೆ ಹೋಗಿ ಮತ್ತು 'swing menus' ನ ಕೆಳಗೆ ಇರುವ 'Menu bar' ಆಯ್ಕೆಯನ್ನು ಆರಿಸಿಕೊಳ್ಳಿ. |
08:12 | 'Menu Bar' ಅನ್ನು ಆಯ್ಕೆಮಾಡಿ ಮತ್ತು ಇಲ್ಲಿ, ಪ್ಯಾನೆಲ್ ನ ಮೇಲೆ ಕ್ಲಿಕ್ ಮಾಡಿ. |
08:17 | ಡೀಫಾಲ್ಟ್ ಆಗಿ, ಇದು ಈಗಾಗಲೇ 'File' ಮತ್ತು 'Edit' ಎಂಬ ಎರಡು ಮೆನ್ಯು ಲೇಬಲ್ ಗಳನ್ನು ಹೊಂದಿದೆ. |
08:22 | 'Edit Text' ನ ಮೇಲೆ ಡಬಲ್-ಕ್ಲಿಕ್ ಮಾಡಿ ಮತ್ತು ಅದನ್ನು 'Help' ಎಂದು ರೀ-ನೇಮ್ (rename) ಮಾಡಿ. |
08:28 | ನೀವು 'File' ನ ಅಡಿಯಲ್ಲಿ ಒಂದು ಸಬ್-ಮೆನ್ಯುಅನ್ನು ಸಹ ಸೇರಿಸಬಹುದು. |
08:32 | ಈಗ, ಎಡಭಾಗದಲ್ಲಿರುವ 'Inspector' ಅಥವಾ 'Navigator' ನಲ್ಲಿ 'JMenu1' ನ ಮೇಲೆ ರೈಟ್-ಕ್ಲಿಕ್ ಮಾಡಿ. |
08:39 | 'Add From Palette' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ ಮತ್ತು 'Menu Item' ಅನ್ನು ಆಯ್ಕೆಮಾಡಿ. |
08:45 | ಇದು ಒಂದು 'Menu Item' ಅನ್ನು ಸೇರಿಸಬೇಕು. |
08:47 | ನೀವು ಇದನ್ನು 'Exit' ಎಂದು ಸಹ ರೀ-ನೇಮ್ (rename) ಮಾಡಬಹುದು. |
08:54 | ಈಗ, ನಾವು 'File' ಮೆನ್ಯುದ ಅಡಿಯಲ್ಲಿ ಒಂದು ಸಬ್-ಮೆನ್ಯುಅನ್ನು ಸೇರಿಸಿದ್ದೇವೆ ಮತ್ತು ಆ ಮೆನ್ಯು ಐಟಂಅನ್ನು ರೀ-ನೇಮ್ ಸಹ ಮಾಡಿದ್ದೇವೆ. |
09:00 | ಈಗ, ನಮ್ಮ GUI ಹೆಚ್ಚು ಕಡಿಮೆ ಪೂರ್ಣಗೊಂಡಿದೆ. |
09:03 | ನಾವು ಈಗ ಒಂದು 'preview' ಅನ್ನು ನೋಡೋಣ. |
09:05 | ಮೇಲ್ಗಡೆಯ 'Preview Design' ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:09 | ಇದು ನೀವು ಇಲ್ಲಿಯವರೆಗೆ ಮಾಡಿರುವುದರ ಪ್ರಿವ್ಯೂಅನ್ನು ತೋರಿಸುತ್ತದೆ. |
09:12 | ಇಲ್ಲಿಯ ಬಟನ್ ಗಳು ಸಧ್ಯಕ್ಕೆ ಕೆಲಸ ಮಾಡುತ್ತಿಲ್ಲ. |
09:16 | ಆದರೆ ಒಮ್ಮೆ ನೀವು ಕೋಡ್ ನಲ್ಲಿ ಸೇರಿಸಿದರೆ ಎಲ್ಲವೂ ಕೆಲಸ ಮಾಡತೊಡಗುತ್ತವೆ. |
09:20 | ನಾವು ಪ್ರಿವ್ಯೂಅನ್ನು ಮುಚ್ಚೋಣ (ಕ್ಲೋಸ್). |
09:22 | ಈಗ, ಕೋಡ್ ಅನ್ನು ಸೇರಿಸುವ ಮೊದಲು, ನಾವು ಇನ್ಪುಟ್ ಟೆಕ್ಸ್ಟ್ ಫೀಲ್ಡ್ ಗಳಿಗೆ ಸರಿಯಾದ ವೇರಿಯೇಬಲ್ ನೇಮ್ ಗಳನ್ನು ಕೊಡೋಣ. |
09:28 | 'Balance' ಟ್ಯಾಬ್ ಗೆ ಹೋಗಿ. ನಾವು ಇಲ್ಲಿ ಈ ಟೆಕ್ಸ್ಟ್ ಫೀಲ್ಡ್ ಗಳಿಗೆ ಸರಿಯಾದ ವೇರಿಯೇಬಲ್ ನೇಮ್ ಗಳನ್ನು ಕೊಡೋಣ. |
09:34 | 'inspector' ನಲ್ಲಿ, 'JTextfield1' ನ ಮೇಲೆ ರೈಟ್-ಕ್ಲಿಕ್ ಮಾಡಿ. |
09:40 | 'Change Variable Name' ಅನ್ನು ಆಯ್ಕೆಮಾಡಿ. |
09:43 | ನಾವು ವೇರಿಯೇಬಲ್ ನೇಮ್ ಅನ್ನು "creditAmount" ಎಂದು ಬದಲಾಯಿಸೋಣ. |
09:50 | 'OK' ಯ ಮೇಲೆ ಕ್ಲಿಕ್ ಮಾಡಿ. |
09:53 | ನೀವು ಇಲ್ಲಿ, 'Design' ಮೋಡ್ ನಲ್ಲಿ, ಟೆಕ್ಸ್ಟ್ ಫೀಲ್ಡ್ ನ ಮೇಲೆ ಸಹ ರೈಟ್-ಕ್ಲಿಕ್ ಮಾಡಬಹುದು. |
09:56 | 'Change Variable Name' ಅನ್ನು ಆಯ್ಕೆಮಾಡಿ |
10:00 | ಮತ್ತು ವೇರಿಯೇಬಲ್ ನೇಮ್ ಅನ್ನು "debitAmount" ಎಂದು ಬದಲಾಯಿಸಿ. |
10:04 | 'OK' ಯ ಮೇಲೆ ಕ್ಲಿಕ್ ಮಾಡಿ. |
10:08 | ನಾನು ಈ ಕೊನೆಯ ಲೇಬಲ್ ಅನ್ನು ಸಹ ಎಂದರೆ ಸ್ಟಾರ್ ಗಳಿರುವ ಟೆಕ್ಸ್ಟ್ ಫೀಲ್ಡ್ ಅನ್ನು "resultBalance" ಎಂದು ಕರೆಯುತ್ತೇನೆ. |
10:16 | ಮತ್ತೊಮ್ಮೆ 'Change Variable Name' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ ಮತ್ತು ವೆರಿಯೇಬಲ್ ಅನ್ನು "resultBalance" ಎಂದು ಬದಲಾಯಿಸಿ. |
10:23 | 'OK' ಯ ಮೇಲೆ ಕ್ಲಿಕ್ ಮಾಡಿ. |
10:25 | ಈಗ ನಾವು ಈ ಅಪ್ಲಿಕೇಶನ್ ಅನ್ನು ಕಾರ್ಯಗತ ಮಾಡಲು ಕೋಡ್ ಅನ್ನು ನೋಡೋಣ. |
10:30 | ಈಗ, ಇದು ನನ್ನ ಸ್ಯಾಂಪಲ್ ಕೋಡ್ ಆಗಿದೆ. |
10:32 | ನನಗೆ ಇಲ್ಲಿ ಬೇಕಾಗಿರುವುದು "creditAmount" ನಿಂದ 'getText()' ; |
10:37 | "debitAmount" ನಿಂದ 'getText()', |
10:39 | ಬ್ಯಾಲನ್ಸ್ (ಬಾಕಿ) ಅನ್ನು ಕಂಡುಹಿಡಿಯುವುದು ಮತ್ತು ಕೊನೆಯದಾಗಿ "resultBalance" ನಲ್ಲಿ ಒಟ್ಟು ಮೊತ್ತವನ್ನು ಸೇರಿಸುವುದು. |
10:44 | ನಾವು ಇಲ್ಲಿ ಕೋಡ್ ಅನ್ನು ಕಾಪಿ ಮಾಡೋಣ ಮತ್ತು IDE ಗೆ ಹಿಂದಿರುಗೋಣ. |
10:51 | ಈಗ, 'Get Balance' ಬಟನ್ ನ ಮೇಲೆ ರೈಟ್-ಕ್ಲಿಕ್ ಮಾಡಿ. |
10:55 | 'Events >> Action' ಮತ್ತು 'Action Performed' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
11:00 | ಇದು, ನೀವು ಬಟನ್ ಅನ್ನು ಒತ್ತಿದ ಕೂಡಲೇ ಆಗಬೇಕಾಗಿರುವ ಕ್ರಿಯೆಯ ಸಲುವಾಗಿ ಇರುವ ಕೋಡನ್ನು ಬರೆಯಬಹುದಾದ |
11:03 | ಅಥವಾ ಪೇಸ್ಟ್ ಮಾಡಬೇಕಾದ ಕೋಡ್ ನ ಭಾಗಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. |
11:10 | ನಾನು ಕಾಪಿ ಮಾಡಿದ ಕೋಡನ್ನು ಇಲ್ಲಿ ಪೇಸ್ಟ್ ಮಾಡುತ್ತೇನೆ. |
11:17 | ನಾವು ಈ ಕೋಡನ್ನು ಸೇವ್ ಮಾಡೋಣ ಮತ್ತು 'Design' ಮೋಡ್ ಗೆ ಹಿಂದಿರುಗೋಣ. |
11:22 | ಈಗ, ನಾವು ಕೋಡ್ ನಲ್ಲಿ ಅಪ್ಲಿಕೇಶನ್ ನಿಂದ ಹೊರಗೆ ಹೋಗುವುದನ್ನು ಸೇರಿಸೋಣ. |
11:25 | 'Menu Item >> Exit' ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'Events >> Action' ಹಾಗೂ 'Action Performed' ಅನ್ನು ಆರಿಸಿಕೊಳ್ಳಿ. |
11:40 | ಇದು 'Source' ಮೋಡ್ ಗೆ ಬದಲಾಯಿಸುತ್ತದೆ ಮತ್ತು ಈಗ ನಾವು ಅಪ್ಲಿಕೇಶನ್ ನಿಂದ ಯಶಸ್ವಿಯಾಗಿ ಹೊರಬರಲು ಕೋಡ್ ಅನ್ನು ಬರೆಯಬೇಕು. |
11:46 | ಅದು 'System.exit(1)' ಎಂದು ಆಗಿರುತ್ತದೆ. |
11:53 | ಈಗ ಕೋಡನ್ನು ಸೇವ್ ಮಾಡಿ ಮತ್ತು 'Design' ಮೋಡ್ ಗೆ ಹಿಂದಿರುಗಿ. |
11:57 | ನಾವು 'Exit' ಮೆನ್ಯು ಐಟಂಗೆ ಒಂದು ಶಾರ್ಟ್ಕಟ್ ಅನ್ನು ಸಹ ಸೇರಿಸೋಣ. |
12:02 | ಇಲ್ಲಿ ತೆರೆದುಕೊಂಡ ವಿಂಡೋದಲ್ಲಿ 'shortcut' ಆಯ್ಕೆಯ ಮೇಲೆ ಡಬಲ್-ಕ್ಲಿಕ್ ಮಾಡಿ. |
12:07 | 'Q' ಹಾಗೂ 'Ctrl' ಗಳನ್ನು ಒತ್ತಿ ಮತ್ತು 'OK' ಯ ಮೇಲೆ ಕ್ಲಿಕ್ ಮಾಡಿ. |
12:14 | ಈಗ, ಅಪ್ಲಿಕೇಶನ್ ಅನ್ನು ಬಿಟ್ಟು ಹೊರಬರಲು 'Ctrl Q' ಅನ್ನು ನಾವು ಕೀಬೋರ್ಡ್ ಶಾರ್ಟ್ಕಟ್ ಎಂದು ಸೆಟ್ ಮಾಡಿದ್ದೇವೆ. |
12:20 | ಸರಿ, ನಮ್ಮ ಅಪ್ಲಿಕೇಶನ್ ಈಗ ಪೂರ್ಣಗೊಂಡಿದೆ. |
12:23 | ನಾವು ಈಗ ಕೀಬೋರ್ಡ್ ಮೇಲಿನ F6 ಅನ್ನು ಒತ್ತುವುದರ ಮೂಲಕ ಅಪ್ಲಿಕೇಶನ್ ಅನ್ನು 'run' ಮಾಡೋಣ. |
12:30 | ಇದು 'run' ಆಗಬೇಕಾಗಿರುವ 'main class' ಅನ್ನು ಈಗಾಗಲೇ ಆಯ್ಕೆಮಾಡಿದೆ. |
12:33 | 'OK' ಯ ಮೇಲೆ ಕ್ಲಿಕ್ ಮಾಡಿ. |
12:37 | ಮತ್ತು, ಇದೋ ಇಲ್ಲಿದೆ ನೋಡಿ. ಇದು ನಮ್ಮ 'GUI' ಆಗಿದೆ. |
12:40 | ಈಗ, ನಾವು ಒಂದು ಸಲ ರನ್ ಮಾಡಿ ನೋಡೋಣ. |
12:43 | 'Balance' ಟ್ಯಾಬ್ ಗೆ ಹೋಗಿ, 'Credit Amount' ಅನ್ನು Rs. 300/- |
12:47 | ಮತ್ತು 'Debit Amount' ಅನ್ನು Rs. 200 ಎಂದು ನಮೂದಿಸಿ. 'Get Balance' ಅನ್ನು ಒತ್ತಿ. |
12:53 | ಇದು 'Balance' ನಲ್ಲಿ ನಮಗೆ ಸರಿಯಾದ ಮೊತ್ತವನ್ನು ಕೊಡುತ್ತದೆ. |
12:56 | ಈಗ ಅಪ್ಲಿಕೇಶನ್ ನಿಂದ ನಾವು ಹೊರಗೆ ಹೋಗೋಣ. |
12:58 | ನಾನು 'File' ಮೆನ್ಯುಗೆ ಹೋಗಿ 'Exit' ನ ಮೇಲೆ ಕ್ಲಿಕ್ ಮಾಡುವೆನು. |
13:02 | ಕೀಬೋರ್ಡ್ ಮೇಲಿನ 'Ctrl Q' ಅನ್ನು ಒತ್ತಿ ಸಹ ನಾವು ಅಪ್ಲಿಕೇಶನ್ ಅನ್ನು ಬಿಟ್ಟುಬರಲು ಸಾಧ್ಯವಿತ್ತು. |
13:08 | ಈಗ, ಅಪ್ಲಿಕೇಶನ್ ಪೂರ್ಣಗೊಂಡಿದ್ದರಿಂದ ಅಸೈನ್ಮೆಂಟ್ ಅನ್ನು ನೋಡುವಾ. |
13:14 | ನಮ್ಮ ಕೆಲಸ 'Temperature convertor' ಎಂಬ ಅಪ್ಲಿಕೇಶನ್ ಅನ್ನು ತಯಾರಿಸುವುದು ಆಗಿದೆ. |
13:18 | ಹಿಂದಿನಂತೆ ಇದು - |
13:21 | ಒಂದು Celsius ನಿಂದ Fahrenheit ಗೆ ಮತ್ತು ಇನ್ನೊಂದು Fahrenheit ನಿಂದ Celsius ಗೆ ಪರಿವರ್ತಿಸಲು, ಹೀಗೆ ಎರಡು ಟ್ಯಾಬ್ ಗಳನ್ನು ಹೊಂದಿರಬೇಕು. |
13:27 | ಇದು ಒಂದು ಇನ್ಪುಟ್ ತಾಪಮಾನವನ್ನು ತೆಗೆದುಕೊಳ್ಳಬೇಕು ಮತ್ತು |
13:30 | ಪರಿವರ್ತಿತ ತಾಪಮಾನವನ್ನು ಪ್ರದರ್ಶಿಸಬೇಕು. |
13:33 | ಇದು ಮೇಲ್ಗಡೆ 'File' ಮತ್ತು 'Help' ಆಯ್ಕೆಗಳನ್ನು ತೋರಿಸುವ ಒಂದು ಮೆನ್ಯು ಬಾರ್ ಅನ್ನು ಸಹ ಹೊಂದಿರಬೇಕು. |
13:38 | ಮತ್ತು ಅಪ್ಲಿಕೇಶನ್ ನಿಂದ ಹೊರಹೋಗಲು, 'File' ಮೆನ್ಯುದ ಅಡಿಯಲ್ಲಿ ಕೀಬೋರ್ಡ್ ಶಾರ್ಟ್ಕಟ್ ನೊಂದಿಗೆ ಒಂದು 'Exit' ಐಟಮ್ ಇರಬೇಕು. |
13:46 | ನಾನು ಈಗಾಗಲೇ ಅಸೈನ್ಮೆಂಟ್ ಅನ್ನು ಮಾಡಿ ಮುಗಿಸಿದ್ದೇನೆ. |
13:48 | ಇದು ಹೇಗೆ ಕಾಣಬೇಕು ಎಂಬುದನ್ನು ನಾವು ನೋಡೋಣ. |
13:50 | ನಾನು ನನ್ನ ಅಸೈನ್ಮೆಂಟ್ ಅನ್ನು Run ಮಾಡುತ್ತೇನೆ ಮತ್ತು ಇದು ನನ್ನ GUI ಆಗಿದೆ. |
13:56 | ಈಗ, ನಾವು ಇನ್ಪುಟ್ temperature ಅನ್ನು '-40 Celcius' ಎಂದು ಕೊಡೋಣ ಮತ್ತು 'Get Fahrenheit' ದ ಮೇಲೆ ಕ್ಲಿಕ್ ಮಾಡೋಣ. |
14:05 | ಈ ಅಪ್ಲಿಕೇಶನ್, ಸರಿಯಾದ ಪರಿವರ್ತಿತ ಔಟ್ಪುಟ್ ಟೆಂಪರೇಚರ್ ಅನ್ನು ಕೊಡಬೇಕು. |
14:10 | ಈಗ, ನಾವು 'Exit' ಗೆ ಎಂದರೆ ಅಪ್ಲಿಕೇಶನ್ ನಿಂದ ಹೊರಗೆ ಹೋಗಲು 'Ctrl X' ಶಾರ್ಟ್ಕಟ್ ಕೀಯನ್ನು ಪ್ರಯತ್ನಿಸೋಣ. |
14:18 | ಹೀಗೆ, ಕೀಬೋರ್ಡ್ ಶಾರ್ಟ್ಕಟ್ ಬಳಸಿ ನಾವು ಅಪ್ಲಿಕೇಶನ್ ನಿಂದ ಯಶಸ್ವಿಯಾಗಿ ಹೊರಗೆ ಬಂದಿದ್ದೇವೆ. |
14:25 | ಸ್ಕ್ರೀನ್ ಮೇಲೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ. |
14:29 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
14:32 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ ನೀವು ವೀಡಿಯೋಅನ್ನು ಡೌನ್ಲೋಡ್ ಮಾಡಿ ನೋಡಬಹುದು. |
14:37 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: * ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
14:42 | * ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
14:46 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:
contact@spoken-tutorial.org |
14:52 | Spoken Tutorial ಪ್ರಕಲ್ಪವು Talk to a Teacher ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. |
14:56 | ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
15:03 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
spoken-tutorial.org/NMEICT-Intro. |
15:13 | ಈ ಟ್ಯುಟೋರಿಯಲ್, IT for Change ಅವರ ಕೊಡುಗೆಯಾಗಿದೆ. |
15:17 | ವಂದನೆಗಳು. |