Linux/C2/Simple-filters/Kannada

From Script | Spoken-Tutorial
Jump to: navigation, search
Time Narration
0:00 ಲಿನಕ್ಸ್ ನಲ್ಲಿ ಸಿಂಪಲ್ ಫಿಲ್ಟರ್ ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
0:08 ಇಲ್ಲಿ ನಾವು ಹೆಡ್, ಟೇಲ್, ಸಾರ್ಟ್, ಕಟ್ ಮತ್ತು ಪೇಸ್ಟ್ ಗಳ ಬಗ್ಗೆ ಕಲಿಯಲಿದ್ದೇವೆ.
0:17 ಇವೆಲ್ಲಾ ಕಮಾಂಡ್ ಲೈನ್ ಟೆಕ್ಸ್ಟ್ ಮಾನ್ಯುಪ್ಯುಲೇಶನ್ ಟೂಲ್ ಗಳಾಗಿವೆ.
0:22 ನಿಮಗೆ ಟರ್ಮಿನಲ್ ಮೇಲೆ ಹ್ಯಾಷ್ (#) ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ರೂಟ್ ಯೂಸರ್ ಆಗಬೇಕಾಗುತ್ತದೆ. (sudo su ಅಥವಾ su root)
0:29 ನಿಮಗೆ ಟರ್ಮಿನಲ್ ನಲ್ಲಿ ಒಂದು ಡಾಲರ್ ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ಸಾಮಾನ್ಯ ಯೂಸರ್ ಆಗಿದ್ದರೆ ಸಾಕು.
0:38 ನೀವು ಫೈಲ್ ಗಳು ಸೇವ್ ಆಗುವ ಯಾವುದೇ ಪಾತ್ ನ್ನು ಬದಲಾಯಿಸದೇ ಡೀಫಾಲ್ಟ್ ಇನ್ಸ್ಟಾಲೇಶನ್ ಮಾಡಿದ್ದೀರಿ ಎಂದು ನಾನು ಭಾವಿಸುತ್ತೇನೆ.
0:46 ನಾನು ಈ ಟ್ಯುಟೋರಿಯಲ್ ನಲ್ಲಿ ಉಬುಂಟು 10.10 ಅನ್ನು ಬಳಸುತ್ತಿದ್ದೇನೆ.
0:51 ಈ ಟ್ಯುಟೋರಿಯಲ್ ಗೆ ಬೇಕಾಗಿರುವ ಅಗತ್ಯತೆಗಳೇನೆಂದರೆ, ಮೌಸ್ ಮತ್ತು ಕೀಬೋರ್ಡ್ ನ ಬಳಕೆ ಹಾಗೂ ವಿಂಡೋನಲ್ಲಿ ಮೆಗ್ಸಿಮೈಸ್ ಮತ್ತು ಮಿನಿಮೈಸ್ ಬಟನ್ ಗಳ ಬಳಕೆ.
1:02 ನಾವು, ಡೀಫಾಲ್ಟ್ ಆಗಿ ಫೈಲ್ ನ ಮೊದಲ 10 ಸಾಲುಗಳನ್ನು ತೋರಿಸಲು ascii ಫೈಲ್ ಹೆಸರನ್ನು ಹೊಂದಿರುವ head ಕಮಾಂಡ್ ಅನ್ನು ಬಳಸುತ್ತೇವೆ.
1:10 ಈಗ ನಾವು ಒಂದು ಫೈಲ್ ನ್ನು ರಚಿಸೋಣ. ಈಗ ನಾನು ಅದನ್ನು ಪ್ರಾಯೋಗಿಕವಾಗಿ ತೋರಿಸಲು ESC (ಎಸ್ಕೇಪ್) ಕೀಯನ್ನು ಒತ್ತುತ್ತಿದ್ದೇನೆ.
1:17 ಕ್ರಮವಾಗಿ Applications > Accessories > Text Editor ಗೆ ಹೋಗಿ.
1:24 ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿ ಇರುವ ಸಂಖ್ಯೆಗಳನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ.
1:38 ಫೈಲ್ ಗೆ ಹೋಗಿ ಸೇವ್ ಮಾಡಿ.
1:41 ಫೈಲ್ ನ್ನು numbers dot txt ಎಂದು ಹೆಸರಿಸಿ, ಸೇವ್ ಮಾಡಿ.
1:48 ಆ ಫೈಲನ್ನು ಕ್ಲೋಸ್ ಮಾಡಿ.
1:53 ಈಗ Applications > Accessories > Terminal ಗೆ ಹೋಗಿ.
2:01 ನಮಗೆ ನೋಡಲು ಸಾಧ್ಯವಾದರೆ ನಾವು ರಚಿಸಿರುವ ಫೈಲ್ ನ್ನು ಈಗ ನೋಡಲು ಪ್ರಯತ್ನಿಸೋಣ.
2:05 ls ಎಂದು ಟೈಪ್ ಮಾಡಿ, ಎಂಟರ್ ಒತ್ತಿ.
2:09 ನಾವು ಇಲ್ಲಿ ಎಲ್ಲಾ ಫೈಲ್ ಗಳನ್ನೂ ಹಾಗೂ ಫೋಲ್ಡರ್ ಗಳನ್ನೂ ನಮ್ಮ ಹೋಂ ಡೈರೆಕ್ಟರಿಯಲ್ಲಿ ಪಟ್ಟಿ ಮಾಡಿದ್ದೇವೆ.
2:15 ಈಗ ನಾವು ರಚಿಸಿರುವ ಫೈಲ್ ನಲ್ಲಿರುವ ವಿಷಯವನ್ನು ಓದಲು ನಾವು cat ಕಮಾಂಡ್ ನ್ನು ಬಳಸಬಹುದು.
2:21 cat num, ಫೈಲ್ ನ ಹೆಸರು ತಾನಾಗಿಯೇ ಬರಲು ಟ್ಯಾಬ್ ಒತ್ತಿ ನಂತರ ಎಂಟರ್ ಒತ್ತಿ.
2:29 ಹೀಗೆಯೇ ನಾವು head ಕಮಾಂಡ್ ನ ಜೊತೆ ಮಾಡೋಣ.
2:33 Head numbers dot txt. ಎಂಟರ್ ಒತ್ತಿ.
2:39 ಈಗ ಮೊದಲ 10 ಸಾಲುಗಳು ಪ್ರದರ್ಶಿತವಾಗಿದೆ.
2:43 ನಮಗೆ ಮೊದಲ 5 ಸಾಲುಗಳನ್ನು ನೋಡಬೇಕಾದಲ್ಲಿ, head ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ.
2:52 ಅಪ್ ಏರೋ ಕೀ ಒತ್ತಿ ನಡುವೆ ಬನ್ನಿ, hyphen n5 ಬರೆದು ಎಂಟರ್ ಒತ್ತಿ.
2:58 ಈಗ ಮೊದಲ 5 ಸಾಲುಗಳು ಮಾತ್ರ ಕಾಣಿಸುತ್ತಿವೆ.
3:02 ಈಗ ನಾವು ಪ್ರೆಸೆಂಟೇಶನ್ ಗೆ ಹಿಂತಿರುಗೋಣ.
3:08 F5.
3:14 tail ಕಮಾಂಡ್, head ಕಮಾಂಡ್ ಗೆ ಅತ್ಯಂತ ವಿರುದ್ದವಾಗಿದ್ದು, ಅದು ಡೀಫಾಲ್ಟ್ ಆಗಿ ಫೈಲ್ ನ ಕೊನೆಯ 10 ಸಾಲುಗಳನ್ನು ತೋರಿಸುತ್ತದೆ.
3:22 ಈಗ ನಾನು ಟರ್ಮಿನಲ್ ಗೆ ಹೋಗಲು ALT ಮತ್ತು Tab ಒತ್ತುತ್ತೇನೆ.
3:27 tail numbers dot txt
3:31 ನಮಗೆ ಕೊನೆಯ 5 ಸಾಲುಗಳನ್ನು ಮಾತ್ರ ನೋಡಬೇಕಾದಲ್ಲಿ, tail ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ.
3:40 hyphen n5, ಎಂಟರ್ ಒತ್ತಿ.
3:45 ಈಗ ಸ್ಲೈಡ್ ಗೆ ಹಿಂತಿರುಗೋಣ.
3:50 ಲಾಗ್ ಫೈಲ್ ನಲ್ಲಿ ಸಿಸ್ಟಂ ನಲ್ಲಿ ನಡೆದ ಘಟನೆಗಳು ಇರುತ್ತವೆ.
3:55 Auth dot log ಎಂಬ ಫೈಲ್, ಯಾರು ಲಾಗ್ ಇನ್ ಹಾಗೂ ಲಾಗ್ ಔಟ್ ಆಗುತ್ತಾರೋ ಅವರ ಲಾಗ್ ಗಳನ್ನು ನಿಯಂತ್ರಿಸುತ್ತದೆ.
4:01 tail ಕಮಾಂಡ್ ನ ತುಂಬಾ ಉಪಯುಕ್ತವಾದ ವಿಕಲ್ಪವೆಂದರೆ, hyphen f. ಇದನ್ನು ಲಾಗ್ ಫೈಲ್ ನ ಕೊನೆಯನ್ನು ಅನುಸರಿಸಲು ಬಳಸಲಾಗುತ್ತದೆ.
4:09 ಒಂದು ವೇಳೆ, ಲಾಗ್ ಫೈಲ್ ಗೆ ಒಂದು ಹೊಸ ಸಾಲು ಸೇರಿಕೊಂಡರೆ, ಟೈಲ್ ಕಮಾಂಡ್ ಅದನ್ನು ಕೊನೆಯ ಸಾಲು ಎಂದು ಪರಿಗಣಿಸಿ, ಡೀಫಾಲ್ಟ್ ಆಗಿ ಅದರ ಮೇಲಿನ 10 ಸಾಲುಗಳನ್ನು ಪ್ರದರ್ಶಿಸುತ್ತದೆ.
4:18 ಟರ್ಮಿನಲ್ ಗೆ ಹೋಗಿ.
4:21 tail hyphen f forward slash (/) var log auth dot log
4:31 ಈಗ ನಾನು ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ.
4:39 ಈಗ ನಾವು ಇನ್ನೊಂದು ಟರ್ಮಿನಲ್ ನ್ನು ಓಪನ್ ಮಾಡೋಣ. Application- > Accessories - > Terminal.
4:46 ಈಗ ನಾನು ಈ ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ.
4:52 ಇದರಿಂದಾಗಿ ನಾನು ಒಂದೇ ಸ್ಕ್ರೀನ್ ನಲ್ಲಿ ಟೈಲ್ ಎಂಬುದು ಹೇಗೆ ಲಾಗ್ ಫೈಲ್ ನ ಕೊನೆಯ ಸಾಲನ್ನು ತಲುಪುತ್ತದೆ ಎಂಬುದನ್ನು ತೋರಿಸಬಹುದು.
5:00 ಈಗ su ರೂಪದಲ್ಲಿ ತಮ್ಮ ಹೆಸರನ್ನು ಪ್ರಯತ್ನಿಸಿ. ನಂತರ ಎಂಟರ್ ಒತ್ತಿ.
5:05 ಅದರಲ್ಲಿ ತಪ್ಪಾದ ಪಾಸ್ ವರ್ಡ್ ಹಾಕಿ ಎಂಟರ್ ಒತ್ತಿ.
5:08 ಈಗ ನೀವು, tail ಕಾರ್ಯನಿರತವಾಗಿರುವ ಟರ್ಮಿನಲ್ ನಲ್ಲಿ ಹೊಸ ಲಾಗ್ ಸೇರಿರುವುದನ್ನು ಕಾಣಬಹುದು.
5:15 ದಿನಾಂಕ ಮತ್ತು ಸಮಯವು ದೃಢೀಕರಣದ ವೈಫಲ್ಯವು ಯಾವಾಗ ಆಯಿತೆಂದು ಸೂಚಿಸುತ್ತದೆ.
5:23 ಸಿಸ್ಟಂ ನ ದಿನಾಂಕ ಮತ್ತು ಸಮಯವನ್ನು ಪರೀಕ್ಷಿಸಲು date ಎಂದು ಟೈಪ್ ಮಾಡಿ.
5:32 ಟರ್ಮಿನಲ್ ನ್ನು ಕ್ಲೋಸ್ ಮಾಡಲು exit ಎಂದು ಟೈಪ್ ಮಾಡಿ.
5:36 ಕಾರ್ಯನಿರತವಾಗಿರುವ tail ಕಮಾಂಡ್ ನ್ನು ಕ್ಲೋಸ್ ಮಾಡಲು CTRL C ಒತ್ತಿ, ಮತ್ತು ಸ್ಕ್ರೀನ್ ನ್ನು ದೊಡ್ಡದು ಮಾಡಿ.
5:51 ನಾವು ಹಿಂದಿನ ಉದಾಹರಣೆಯಲ್ಲಿ auth dot log ಫೈಲ್ ನ್ನು ಮಾತ್ರ ನೋಡಿದ್ದೇವೆ.
5:57 ಇವುಗಳು ಲಿನಕ್ಸ್ ನಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಲಾಗ್ ಫೈಲ್ ಗಳು.
6:01 ಒಬ್ಬ ಲಿನಕ್ಸ್ ಸಿಸ್ಟಂ ಅಡ್ಮಿನಿಸ್ಟ್ರೇಟರ್, ಸಿಸ್ಟಂ ನಲ್ಲಿ ಏನಾದರೂ ತೊಂದರೆ ಸಂಭವಿಸಿದರೆ ಪರಿಹಾರ ಹುಡುಕುವ ಸಲುವಾಗಿ ಹೆಚ್ಚಿನ ಮಾಹಿತಿಗಾಗಿ ಈ ಲಾಗ್ ಫೈಲ್ ಗಳನ್ನು ನೋಡುತ್ತಾನೆ.
6:12 sort ಎಂಬ ಕಮಾಂಡ್ ಹೆಸರಿಗನುಗುಣವಾಗಿ, ಒಂದು ಫೈಲ್ ನಲ್ಲಿರುವ ವಿಷಯಗಳನ್ನು ನಮಗಾಗಿ ಏರಿಕೆ ಹಾಗೂ ಇಳಿಕೆ ಕ್ರಮದಲ್ಲಿ ಜೋಡಿಸುತ್ತದೆ.
6:23 sort numbers dot txt. ಇದು ನಮ್ಮ numbers dot txt ನ್ನು ಏರಿಕೆ ಕ್ರಮದಲ್ಲಿ ಜೋಡಿಸುತ್ತದೆ.
6:31 ಇದರಲ್ಲಿ ಒಂದು ವಿಶೇಷವಿದೆ. sort ಎಂಬುದು ಸಂಖ್ಯೆಯ ಮೊದಲ ಅಂಕೆಯನ್ನು ಮಾತ್ರ ಪರಿಗಣಿಸುತ್ತಿದೆ. ಹಾಗಾಗಿ, 2 ಎಂಬುದರ ಮುಂಚೆಯೇ 10, 11, 12 ಕಾಣಿಸಿಕೊಳ್ಳುತ್ತವೆ.
6:43 ಇದನ್ನು ತಪ್ಪಿಸಲು, hyphen n ಆಯ್ಕೆಯನ್ನು ಸೇರಿಸಿ. hyphen n ಮತ್ತು ಎಂಟರ್ ಒತ್ತಿ.
6:53 ಈಗ sort, ಸಂಪೂರ್ಣ ಸಂಖ್ಯೆಯನ್ನು ಪರಿಗಣಿಸುತ್ತದೆ.

.

6:58 number dot txt ನ್ನು ಇಳಿಕೆಯ ಕ್ರಮದಲ್ಲಿ ಜೋಡಿಸಲು hyphen r ಆಯ್ಕೆಯನ್ನು ಸೇರಿಸಿ.
7:09 ನಾವು ಈ ಫೈಲ್ ನಲ್ಲಿ ಕೆಲವು ಸಂಖ್ಯೆಗಳು ಪುನರಾವರ್ತಿತವಾಗಿರುವುದನ್ನು ನೋಡಬಹುದು. ಆ ತರಹದ ವಿಶಿಷ್ಟ ಸಂಖ್ಯೆಯನ್ನು ತೆಗೆಯಲು hyphen u ಅನ್ನು ಸೇರಿಸಿ.
7:17 ಈಗ ಟರ್ಮಿನಲ್ ಗೆ ಹೋಗಿ.
7:20 ಅಪ್ ಏರೋ ಕೀ ಒತ್ತಿ.
7:22 u ಒತ್ತಿ, ಎಂಟರ್ ಒತ್ತಿ.
7:26 ಮೊದಲು ಎರಡು 2 ಗಳು ಇದ್ದವು, ಈಗ ಒಂದೇ 2 ಇದೆ.
7:38 ಈಗ ನಾವು ಫೈಲ್ ನ ಕಂಟೆಂಟ್ ಅನ್ನು ಒಂದು ನಿಗದಿಪಡಿಸಿದ ಕಾಲಂನಲ್ಲಿ ಹೇಗೆ ವಿಂಗಡಿಸುವುದೆಂದು ನೋಡೋಣ.
7:44 ಈಗ ನಾವು ಒಂದು ಫೈಲ್ ನ್ನು ರಚಿಸೋಣ, ಅದಕ್ಕಾಗಿ
7:48 Applications > Accessories > Text Editor ಗೆ ಹೋಗಿ.
7:57 ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿರುವ ಡಾಟಾವನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ, CTRL+C; CTRL+V.
8:11 ಫೈಲ್ ನ್ನು marks dot txt ಎಂದು ಹೆಸರಿಸಿ ಮತ್ತು save ಒತ್ತಿ.
8:21 ಈ ಫೈಲ್ ನಲ್ಲಿರುವ ಅಂಕಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಏಕೆಂದರೆ, ಕಡಿಮೆ ಅಂಕಗಳನ್ನು ನೀಡಿದ್ದಕ್ಕೆ ಯಾರಾದರೂ ನನ್ನನ್ನು ಆರೋಪಿಸುವುದು ನನಗೆ ಇಷ್ಟವಿಲ್ಲ.
8:28 ಫೈಲನ್ನು ಕ್ಲೋಸ್ ಮಾಡಿ.
8:33 ಈಗ ನಾವು marks dot txt file ನ ಎರಡನೇಯ ಕಾಲಂನ ಪ್ರಕಾರ ವಿಂಗಡಣೆ ಮಾಡೋಣ.
8:40 ಟರ್ಮಿನಲ್ ಗೆ ಹೋಗಿ.
8:42 sort space marks dot txt space hyphen t space open inverted commas space close inverted commas space
8:53 ಇಲ್ಲಿ Hyphen t ಎಲ್ಲೆಯನ್ನು ನಿರ್ಧರಿಸುತ್ತದೆ ಹಾಗೂ ಕೋಟ್ ಗಳ ನಡುವಿನ ಜಾಗ ಅದನ್ನು ಪ್ರತಿನಿಧಿಸುತ್ತದೆ.
9:02 hyphen k2 ಎನ್ನುವುದು ವಿಂಗಡಣೆ ಮಾಡಬೇಕಾಗಿರುವ ಎರಡನೇ ಕಾಲಂ ಅನ್ನು ಸೂಚಿಸುತ್ತದೆ.
9:14 ಎಂಟರ್ ಒತ್ತಿ.
9:20 cat marks dot txt
9:24 ನಾವು ಎರಡನೇ ಕಾಲಂಗೆ ತಕ್ಕಂತೆ ಮಾತ್ರ ವಿಂಗಡಣೆ ಮಾಡಿದಾಗ ನಿಮಗೆ Avir ಮೇಲೆ ಹೋಗಿ, Bala ಕೆಳಗೆ ಬಂದಿರುವುದು ಕಂಡುಬಂದರೆ, ಅದು ಮೂಲ ಫೈಲ್ ಎಂದರ್ಥ.
9:43 cut ಕಮಾಂಡ್ ನ್ನು ಫೈಲ್ ನ ಕೆಲವು ಮಾಹಿತಿಗಳನ್ನು ಕಟ್ ಮಾಡಲು ಬಳಸುತ್ತಾರೆ.
9:51 ನಾವು ಈಗ marks dot txt ನಿಂದ ಹೆಸರುಗಳನ್ನು ತೆಗೆದು ಹಾಕೋಣ.
9:55 ಈಗ ನಾವು ಟರ್ಮಿನಲ್ ಗೆ ಹೋಗೋಣ. ALT Tab
9:58 cut space marks dot txt space hyphen d space open inverted commas space close inverted commas space.
10:08 ಈ ಕಮಾಂಡ್ ನಲ್ಲಿ d ಯು ಎಲ್ಲೆ ನಿರ್ಧರಿಸುತ್ತದೆ ಮತ್ತು ಕೋಟ್ ಗಳ ನಡುವಿನ ಜಾಗವು ಅದನ್ನು ಪ್ರತಿನಿಧಿಸುತ್ತದೆ.
10:20 hyphen f2 ಎರಡನೇ ಕಾಲಂ ಅನ್ನು ಸೂಚಿಸುತದೆ. ನಂತರ ಎಂಟರ್ ಒತ್ತಿ.
10:31 paste ಕಮಾಂಡ್ ಎನ್ನುವುದು ಎರಡು ಅಥವಾ ಹೆಚ್ಚಿನ ಫೈಲ್ ಗಳ ಲೈನ್ ಗಳನ್ನು ಒಂದೇ ಫೈಲ್ ನಲ್ಲಿ ಸೇರಿಸುತ್ತದೆ.
10:36 ಈಗ ನಾವು numbers dot txt ಮತ್ತು marks dot txt ಎರಡನ್ನೂ ಉಪಯೋಗಿಸೋಣ.
10:41 ಟರ್ಮಿನಲ್ ಗೆ ಹೋಗೋಣ.
10:43 numbers dot txt ಮತ್ತು marks dot txt ಅನ್ನು ಪೇಸ್ಟ್ ಮಾಡಿ ಮತ್ತು ಎಂಟರ್ ಒತ್ತಿ.
10:50 ಈಗ numbers dot txt ನ ಮೊದಲ ಸಾಲು marks dot txt ನ ಮೊದಲ ಸಾಲಿನೊಂದಿಗೆ ಸೇರಿಕೊಂಡಿದೆ.
10:57 ನಾವು ಈ ಔಟ್ ಪುಟ್ ನ್ನು concatefile dot txt ಎನ್ನುವ ಬೇರೆ ಫೈಲ್ ಗೆ ರಿಡೈರೆಕ್ಟ್ ಮಾಡಲು ರಿಡೈರೆಕ್ಟ್ ಕೀಯನ್ನು ಬಳಸಬಹುದು.
11:06 ಟರ್ಮಿನಲ್ ಗೆ ಹೋಗೋಣ.
11:08 ಅಪ್ ಏರೋ ಕೀಯನ್ನು ಒತ್ತಿ, ರಿಡೈರೆಕ್ಟ್ ಕೀ ಆದ ಗ್ರೇಟರ್ ದೆನ್ ಗುರುತನ್ನು ಒತ್ತಿ, concatfile dot txt, ನಂತರ ಎಂಟರ್ ಒತ್ತಿ.
11:18 Cat concatfile dot txt
11:22 ಸ್ಲೈಡ್ ಗೆ ಹೋಗೋಣ.
11:25 paste ಕಮಾಂಡ್ tab ನಿಂದ ನಿರ್ಧರಿಸಲ್ಪಟ್ಟ ಸಂಖ್ಯೆಗಳನ್ನು ಕ್ರಮವಾಗಿ ತೋರಿಸಬೇಕೆಂದು ಇಚ್ಛಿಸಿದಲ್ಲಿ ನಾವು hyphen s ನ್ನು ಬಳಸಬಹುದು.
11:34 paste hyphen s
11:39 numbers dot txt
11:43 ಸ್ಲೈಡ್ ಗೆ ಹೋಗಿ.
11:45 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
11:49 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
11:55 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
11:59 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ. ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Udaya, Vasudeva ahitanal