LibreOffice-Suite-Writer/C2/Introduction-to-LibreOffice-Writer/Kannada
From Script | Spoken-Tutorial
Time | Narration |
00:01 | ಲಿಬ್ರೆ ಆಫೀಸ್ ರೈಟರ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. ಈ ಟ್ಯುಟೋರಿಯಲ್ ನಲ್ಲಿ ನಾವು ರೈಟರ್ ನ ಬಗ್ಗೆ, |
00:10 | ರೈಟರ್ ನಲ್ಲಿರುವ ವಿವಿಧ ಉಪಕರಣಗಳ (Tool Bar) ಬಗ್ಗೆ, |
00:13 | ಒಂದು ಹೊಸ ಡಾಕ್ಯುಮೆಂಟ್ ಹಾಗೂ ಈಗಾಗಲೇ ಇರುವ ಡಾಕ್ಯುಮೆಂಟ್ ಅನ್ನು ಒಪನ್ ಮಾಡುವಿಕೆಯ ಬಗ್ಗೆ, |
00:17 | ಒಂದು ಡಾಕ್ಯುಮೆಂಟನ್ನು ಸೇವ್ ಮಾಡುವುದರ ಬಗ್ಗೆ ಹಾಗೂ, |
00:20 | ರೈಟರ್ ನಲ್ಲಿ ಡಾಕ್ಯುಮೆಂಟನ್ನು ಹೇಗೆ ಕ್ಲೋಸ್ ಮಾಡಬೇಕು ಎನ್ನುವುದರ ಬಗ್ಗೆ ಕಲಿಯುತ್ತೇವೆ. |
00:22 | ಲಿಬ್ರೆ ಆಫೀಸ್ ರೈಟರ್ ಎನ್ನುವುದು ಲಿಬ್ರೆ ಆಫೀಸ್ ಸೂಟ್ ನ ಒಂದು ವರ್ಡ್ ಪ್ರೊಸೆಸರ್ ಘಟಕವಾಗಿದೆ. |
00:27 | ಇದು ಮೈಕ್ರೋಸಾಫ್ಟ್ ಆಫೀಸ್ ಸೂಟ್ ನಲ್ಲಿನ ಮೈಕ್ರೋಸಾಫ್ಟ್ ವರ್ಡ್ ಗೆ ಸಮನಾಗಿದೆ. |
00:27 | ಇದೊಂದು ಉಚಿತವಾಗಿ ದೊರೆಯುವ ಸಾಫ್ಟ್-ವೇರ್ ಆಗಿದ್ದು ಇದನ್ನು ನಕಲು, ಮರುಬಳಕೆ ಹಾಗೂ ಉಚಿತವಾಗಿ ವಿತರಣೆ ಮಾಡಬಹುದು. |
00:41 | ಇದು ಉಚಿತವಾಗಿ ದೊರೆಯುವುದರಿಂದ ಇದರ ಆದಾನ-ಪ್ರದಾನಕ್ಕೆ ಯಾವುದೇ ಲೈಸೆನ್ಸ್ ಶುಲ್ಕದ ಅಗತ್ಯ ಇರುವುದಿಲ್ಲ. |
00:47 | ಲಿಬ್ರೆ ಆಫೀಸ್ ಸೂಟ್ ಅನ್ನು ಆರಂಭಿಸಲು, ನೀವು Microsoft Windows 2000 ಮತ್ತು ಅದರ ಹೆಚ್ಚಿನ ಆವೃತ್ತಿಗಳಾದ MS Windows XP ಅಥವಾ MS Windows 7 ನ್ನು ಬಳಸಬಹುದು ಅಥವಾ ನೀವು GNU/Linux ಕೂಡಾ ನಿಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಬಳಸಬಹುದು. |
01:04 | ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ಆಗಿ Ubuntu Linux 10.04 ಅನ್ನು ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ. |
01:16 | ಒಂದು ವೇಳೆ ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಇನ್ಸ್ಟಾಲ್ ಮಾಡದಿದ್ದಲ್ಲಿ, ರೈಟರನ್ನು Synaptic Package Manager ಬಳಸಿ ಇನ್ಸ್ಟಾಲ್ ಮಾಡಬಹುದು. |
01:24 | Synaptic Package Manager ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್-ಸೈಟ್ ನಲ್ಲಿ ಸಿಗುವ ಉಬುಂಟು ಲಿನಕ್ಸ್ ಟ್ಯುಟೋರಿಯಲ್ ಗಳನ್ನು ರೆಫರ್ ಮಾಡಿ ಮತ್ತು ಆ ವೆಬ್-ಸೈಟ್ ನಲ್ಲಿ ರುವ ಸೂಚನೆಗಳನ್ನು ಅನುಸರಿಸಿ ಲಿಬ್ರೆ ಆಫೀಸ್ ಸೂಟ್ ನ್ನು ಡೌನ್-ಲೋಡ್ ಮಾಡಿ. |
01:37 | ವಿವರವಾದ ಮಾಹಿತಿಗಳು ಲಿಬ್ರೆ ಆಫೀಸ್ ಸೂಟ್ ನ ಮೊದಲ ಟ್ಯುಟೋರಿಯಲ್ ನಲ್ಲಿ ಲಭ್ಯವಿವೆ. |
01:43 | ನೆನಪಿಡಿ, ರೈಟರನ್ನು ಇನ್ಸ್ಟಾಲ್ ಮಾಡುವಾಗ “Complete” installation ಅನ್ನು ಬಳಸಿ. |
01:50 | ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಮೊದಲೇ ಇನ್ಸ್ಟಾಲ್ ಮಾಡಿದ್ದರೆ, ನೀವು ನಿಮ್ಮ ಸ್ಕ್ರೀನ್ ನ ಮೇಲ್ಗಡೆ ಎಡ ಬದಿಯಲ್ಲಿ ಇರುವ “Applications” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಅದರಲ್ಲಿ “Office”, ತದನಂತರ “LibreOffice” ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಲಿಬ್ರೆ ಆಫೀಸ್ ರೈಟರ್ ಅನ್ನು ಪಡೆಯಬಹುದು. |
02:08 | ವಿವಿಧ ಲಿಬ್ರೆ ಆಫೀಸ್ ಅಂಶಗಳಿರುವ ಒಂದು ಹೊಸ ಡೈಲಾಗ್ ಬಾಕ್ಸ್ ತೆರೆಯುತ್ತದೆ. ಲಿಬ್ರೆ ಆಫೀಸ್ ಅನ್ನು ಉಪಯೋಗಿಸಲು ಸೂಟ್ ನ ವರ್ಡ್ ಪ್ರೊಸೆಸರ್ ಘಟಕವಾದ “Text Document” ನ ಮೇಲೆ ಕ್ಲಿಕ್ ಮಾಡಿ. |
02:23 | ಇದು ರೈಟರ್ ನ ಮುಖ್ಯ ವಿಂಡೋ ದಲ್ಲಿ ಒಂದು ಖಾಲಿ ಡಾಕ್ಯುಮೆಂಟ್ ಅನ್ನು ತೆರೆಯುತ್ತದೆ. |
02:28 | ರೈಟರ್ ನ ವಿಂಡೋನಲ್ಲಿ ವಿಭಿನ್ನ ಟೂಲ್ ಬಾರ್ ಗಳಿವೆ, ಉದಾಹರಣೆಗೆ, title bar, |
02:33 | menu bar, standard tool bar, |
02:36 | formatting bar ಹಾಗೂ status bar. ಇವುಗಳಲ್ಲಿ ತುಂಬಾ ಉಪಯೋಗಕ್ಕೆ ಬರುವ ವಿಕಲ್ಪಗಳಿವೆ, ಅವುಗಳನ್ನು ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿಯೋಣ. |
02:47 | ಬನ್ನಿ, ಟ್ಯುಟೋರಿಯಲ್ಲನ್ನು ಆರಂಭಿಸೋಣ, ಮೊದಲಿಗೆ, ರೈಟರ್ ನಲ್ಲಿ ಹೊಸ ಡಾಕ್ಯುಮೆಂಟನ್ನು ಹೇಗೆ ಒಪನ್ ಮಾಡುವುದೆಂದು ಕಲಿಯೋಣ. |
02:53 | Standard Tool Bar ನಲ್ಲಿ “New” ಎಂಬ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಒಂದು ಹೊಸ ಡಾಕ್ಯುಮೆಂಟನ್ನು ಒಪನ್ ಮಾಡಬಹುದು. |
03:00 | ಅಥವಾ, menu bar ನಲ್ಲಿ “File” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ, |
03:05 | ಹಾಗೂ, “New” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ ಹಾಗೂ ಕೊನೆಯಲ್ಲಿ “Text document” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ. |
03:12 | ಎರಡೂ ವಿಧಾನದಲ್ಲೂ ಒಂದು ಹೊಸ ರೈಟರ್ ವಿಂಡೊ ಒಪನ್ ಆಗುವುದೆಂದು ಗಮನಿಸಿ. |
03:17 | ಈಗ editor area ದಲ್ಲಿ ಏನಾದರೂ ಟೈಪ್ ಮಾಡಿ. |
03:21 | ನಾವಿಲ್ಲಿ “RESUME” ಎಂದು ಟೈಪ್ ಮಾಡೋಣ. |
03:24 | ಡಾಕ್ಯುಮೆಂಟ್ ನಲ್ಲಿ ಟೈಪ್ ಮಾಡಿ ಮುಗಿದ ನಂತರ ಅದರ ಮುಂದಿನ ಉಪಯೋಗಕ್ಕಾಗಿ ಅದನ್ನು ಸೇವ್ ಮಾಡಬೇಕಾಗುತ್ತದೆ. |
03:29 | ಈ ಫೈಲನ್ನು ಸೇವ್ ಮಾಡಲು ಮೆನ್ಯು ಬಾರ್ ನಲ್ಲಿ “File” ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
03:33 | ನಂತರ “Save As” ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
03:36 | ಪರದೆಯಲ್ಲಿ (screen) ಒಂದು ಡೈಲಾಗ್ ಬಾಕ್ಸ್ ಒಪನ್ ಆಗುತ್ತದೆ, ನೀವು ಅಲ್ಲಿ “Name” ಎಂಬಲ್ಲಿ ನಿಮ್ಮ ಫೈಲ್ ನ ಹೆಸರನ್ನು ನಮೂದಿಬೇಕಾಗುತ್ತದೆ. |
03:44 | ಹಾಗಿರುವಾಗ, ನಿಮ್ಮ ಫೈಲ್ ನ ಹೆಸರನ್ನು “resume” ಎಂದು ನಮೂದಿಸಿ. |
03:48 | “Name” ಫೀಲ್ಡ್ ನ ಕೆಳಗೆ “Save in folder” ಎಂದು ಇದೆ. |
03:53 | ಇಲ್ಲಿ ನೀವು ಒಂದು ಫೊಲ್ಡರ್ ನ ಹೆಸರನ್ನು ನಮೂದಿಸಿ. ಮುಂದೆ ಈ ಫೋಲ್ಡರ್ ನಲ್ಲಿಯೇ ನೀವು ಸೇವ್ ಮಾಡಿದ ಫೈಲ್ ಇರುತ್ತದೆ. |
03:58 | “Save in folder” ಎನ್ನುವಲ್ಲಿ ಡೌನ್ ಎರೊ ಕ್ಲಿಕ್ ಮಾಡಿ “Desktop” ಎಂಬಲ್ಲಿ ಕ್ಲಿಕ್ ಮಾಡಿ. |
04:02 | ನೀವು ಅಲ್ಲಿನ ಮೆನ್ಯುವಿನಲ್ಲಿ ಫೊಲ್ಡರ್ ನ ಸೂಚಿಯನ್ನು ನೋಡುತ್ತೀರಿ, ಅಲ್ಲಿ ನಿಮ್ಮ ಫೈಲನ್ನು ಸೇವ್ ಮಾಡಿಡಬಹುದು. |
04:08 | ಈಗ “Desktop” ಎಂಬಲ್ಲಿ ಕ್ಲಿಕ್ ಮಾಡೋಣ. ಡೆಸ್ಕ್-ಟಾಪ್ ನಲ್ಲಿ ಫೈಲ್ ಸೇವ್ ಆಗುತ್ತದೆ. |
04:14 | ನೀವು “Browse for other folders” ಎಂಬಲ್ಲಿ ಕೂಡಾ ಕ್ಲಿಕ್ ಮಾಡಬಹುದು. |
04:18 | ಮತ್ತು ಎಲ್ಲಿ ನಿಮಗೆ ನಿಮ್ಮ ಡಾಕ್ಯುಮೆಂಟನ್ನು ಸೇವ್ ಮಾಡಬೇಕೋ ಆ ಫೊಲ್ಡರ್ ಅನ್ನು ಸೆಲೆಕ್ಟ್ ಮಾಡಬಹುದು. |
04:23 | ಈಗ ಡೈಲಾಗ್ ಬಾಕ್ಸ್ ನಲ್ಲಿ “File type” ಎಂಬಲ್ಲಿ ಕ್ಲಿಕ್ ಮಾಡಿ. |
04:27 | ಇದು ನಿಮಗೆ ಫೈಲ್ ನ ಪ್ರಕಾರಗಳನ್ನು ಅಥವಾ ಫೈಲ್ ಎಕ್ಸ್ಟೆನ್ಶನ್ ಗಳನ್ನು ತೋರಿಸುತ್ತದೆ. ಇಲ್ಲಿ ನೀವು ನಿಮ್ಮ ಫೈಲ್ ಅನ್ನು ಸೇವ್ ಮಾಡಬಹುದು. |
04:34 | ಲಿಬ್ರೆ ಆಫೀಸ್ ರೈಟರ್ ನಲ್ಲಿ ಡೀಫಾಲ್ಟ್ ಆಗಿ ಫೈಲ್ ನ ಪ್ರಕಾರವು “ODF Text Document” ಆಗಿದೆ. ಇದು “dot odt” ಎಂಬ ಎಕ್ಸ್ಟೆನ್ಶನ್ ಅನ್ನು ಹೊಂದಿದೆ. |
04:45 | ODT ಎಂದರೆ ಒಪನ್ ಡಾಕ್ಯುಮೆಂಟ್ ಫಾರ್ಮೆಟ್ ಅಥವಾ ODF ಫಾರ್ಮೆಟ್ ಎಂದು, ಇದು ವಿಶ್ವ ಸ್ತರದಲ್ಲಿ ಸ್ವೀಕೃತವಾದ ವರ್ಡ್ ಡಾಕ್ಯುಮೆಂಟ್ ನ ಒಪನ್ ಫಾರ್ಮೆಟ್ ಆಗಿದೆ. |
04:56 | ಇದು ಭಾರತ ಸರ್ಕಾರದ 'open standards in e-Governance' ಎಂಬ ಪಾಲಿಸಿಯಿಂದ ಕೂಡಾ ಸ್ವೀಕೃತವಾಗಿದೆ. |
05:04 | ಲಿಬ್ರೆ ಆಫೀಸ್ ರೈಟರ್ ನಲ್ಲಿ ಒಪನ್ ಆಗುವ dot odt ಟೆಕ್ಸ್ಟ್ ಡಾಕ್ಯುಮೆಂಟ್ ನ ಹೊರತಾಗಿ .... |
05:11 | ನೀವು ನಿಮ್ಮ ಫೈಲನ್ನು dot doc ಅಥವಾ dot docx ಎಂಬ ಫಾರ್ಮೆಟ್ ನಲ್ಲಿ ಕೂಡಾ ಸೇವ್ ಮಾಡಬಹುದು. ಅದು ಎಮ್. ಎಸ್. ಆಫೀಸ್ ನ ವರ್ಡ್ ಪ್ರೊಗ್ರಾಮ್ ನಲ್ಲಿ ಒಪನ್ ಆಗುತ್ತದೆ. |
05:23 | ಇನ್ನೊಂದು ಲೋಕಪ್ರಿಯವಾದ ಎಕ್ಸ್ಟೆನ್ಶನ್ ಎಂದರೆ dot rtf, ಅಂದರೆ, “Rich Text Format” ಎಂದು. ಇದು ಹೆಚ್ಚಿನ ಎಲ್ಲಾ ಪ್ರೊಗ್ರಾಮ್ ಗಳಲ್ಲೂ ಒಪನ್ ಆಗುತ್ತದೆ. |
05:33 | ಈಗ “ODF Text Document” ಎಂಬಲ್ಲಿ ಕ್ಲಿಕ್ ಮಾಡಿ. |
05:37 | ನಿಮಗೆ “File type” ಎನ್ನುವುದರ ಹತ್ತಿರ “ODF Text Document” ಎಂದು ಹಾಗೂ ಕೋಷ್ಠಕದಲ್ಲಿ dot “odt” ಎಂದು ಕಾಣಸಿಗುತ್ತದೆ. |
05:48 | ಈಗ “Save” ಬಟನ್ ಕ್ಲಿಕ್ ಮಾಡಿ. |
05:50 | ಇದು ನಿಮ್ಮನ್ನು ರೈಟರ್ ವಿಂಡೊ ಗೆ ಕೊಂಡೊಯ್ಯುತ್ತದೆ. ಅಲ್ಲಿನ ಟೈಟಲ್ ಬಾರ್ ನಲ್ಲಿ ನೀವು ಕೊಟ್ಟಿರುವ ಫೈಲ್ ಹೆಸರು ಹಾಗೂ ಎಕ್ಸ್ಟೆನ್ಶನ್ ಇರುತ್ತದೆ. |
05:58 | ಈಗ ನೀವು ರೈಟರ್ ವಿಂಡೊ ನಲ್ಲಿ ಟೆಕ್ಸ್ಟ್ ಡಾಕ್ಯುಮೆಂಟ್ ಬರೆಯಲು ತಯಾರಿರುವಿರಿ. |
06:03 | ಮೇಲೆ ಚರ್ಚಿಸಿದ ಫಾರ್ಮೆಟ್ ನ ಹೊರತಾಗಿ ರೈಟರ್ ಡಾಕ್ಯುಮೆಂಟನ್ನು “dot html” ಫಾರ್ಮೆಟ್ ನಲ್ಲಿ ಕೂಡಾ ಸೇವ್ ಮಾಡಬಹುದು. ಇದೊಂದು ವೆಬ್-ಸೈಟ್ ಫಾರ್ಮೆಟ್ ಆಗಿದೆ. |
06:13 | ಇದನ್ನು ಮೊದಲು ತಿಳಿಸಿದಂತೆಯೆ ಸೇವ್ ಮಾಡಬೇಕು. |
06:17 | ಈಗ ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Save As” ಎಂಬಲ್ಲಿ ಕ್ಲಿಕ್ ಮಾಡಿ. |
06:24 | ಈಗ “File Type” ಎಂಬಲ್ಲಿ ಕ್ಲಿಕ್ ಮಾಡಿ ನಂತರ HTML Document ಕೋಷ್ಠಕದಲ್ಲಿ (OpenOffice dot org Writer) ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
06:35 | ಈ ವಿಕಲ್ಪವು ಡಾಕ್ಯುಮೆಂಟ್ ಗೆ “dot html” ಎಕ್ಸ್ಟೆನ್ಶನ್ ಅನ್ನು ನೀಡುತ್ತದೆ. |
06:40 | “Save” ಬಟನ್ ಮೇಲೆ ಕ್ಲಿಕ್ ಮಾಡಿ. |
06:42 | ಈಗ ಡಯಲಾಗ್ ಬಾಕ್ಸ್ ನಲ್ಲಿ “Ask when not saving in ODF format” ಎಂಬಲ್ಲಿ ಕ್ಲಿಕ್ ಮಾಡಿ. |
06:50 | ಕೊನೆಯಲ್ಲಿ “Keep Current Format” ಎಂಬಲ್ಲಿ ಕ್ಲಿಕ್ ಮಾಡಿ. |
06:55 | ಡಾಕ್ಯುಮೆಂಟ್ ಎನ್ನುವುದು dot html ಎಕ್ಸ್ಟೆನ್ಶನ್ ನ ಜೊತೆಗೆ ಸೇವ್ ಆಗಿರುವುದನ್ನು ನೀವು ಗಮನಿಸಬಹುದು. |
07:00 | ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿ “Export Directly as PDF” ಎಂಬಲ್ಲಿ ಕ್ಲಿಕ್ ಮಾಡಿ ಡಾಕ್ಯುಮೆಂಟ್ ಅನ್ನು PDF ಫಾರ್ಮೆಟ್ ನಲ್ಲಿ ಕೂಡಾ ಎಕ್ಸ್ಪೋರ್ಟ್ ಮಾಡಬಹುದು. |
07:10 | ಮೊದಲಿನಂತೆಯೇ, ಸೇವ್ ಮಾಡಬೇಕಾದ ಸ್ಥಾನವನ್ನು ಆಯ್ಕೆ ಮಾಡಿ. |
07:15 | ಇದನ್ನು ನೀವು ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಮತ್ತು “Export as pdf” ಎಂಬಲ್ಲಿ ಕ್ಲಿಕ್ ಮಾಡಿ ಕೂಡಾ ಎಕ್ಸ್ಪೋರ್ಟ್ ಮಾಡಬಹುದು. |
07:24 | ಗೋಚರಿಸುತ್ತಿರುವ ಡಯಲಾಗ್ ಬಾಕ್ಸ್ ನಲ್ಲಿ “Export” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Save” ಬಟನ್ ಕ್ಲಿಕ್ ಮಾಡಿ. |
07:32 | ಈಗ ಒಂದು pdf ಫೈಲ್ ತಯಾರಾಗುತ್ತದೆ. |
07:35 | ಬನ್ನಿ, “File” ಎಂಬಲ್ಲಿ ಹಾಗೂ “Close” ಎಂಬಲ್ಲಿ ಕ್ಲಿಕ್ ಮಾಡಿ ಈ ಡಾಕ್ಯುಮೆಂಟನ್ನು ಕ್ಲೋಸ್ ಮಾಡೋಣ. |
07:40 | ಈಗ ನಾವು ಲಿಬ್ರೆ ಆಫೀಸ್ ರೈಟರ್ ನಲ್ಲಿ ಈಗಾಗಲೇ ಇರುವ ಡಾಕ್ಯುಮೆಂಟನ್ನು ಹೇಗೆ ಒಪನ್ ಮಾಡುವುದೆಂದು ನೋಡೋಣ. |
07:47 | “Resume.odt." ಎಂಬ ಡಾಕ್ಯುಮೆಂಟನ್ನು ಒಪನ್ ಮಾಡೋಣ. |
07:51 | ಈಗಾಗಲೇ ಇರುವ ಒಂದು ಡಾಕ್ಯುಮೆಂಟನ್ನು ಒಪನ್ ಮಾಡಲು ಮೇಲ್ಗಡೆ ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Open” ಎಂಬಲ್ಲಿ ಕ್ಲಿಕ್ ಮಾಡಿ. |
08:00 | ನಿಮಗೆ ಪರದೆಯ (Screen) ಮೇಲೆ ಒಂದು ಡಯಲಾಗ್ ಬಾಕ್ಸ್ ಕಾಣಸಿಗುತ್ತದೆ. |
08:04 | ಇಲ್ಲಿ ನೀವು ನಿಮ್ಮ ಡಾಕ್ಯುಮೆಂಟನ್ನು ಎಲ್ಲಿ ಸೇವ್ ಮಾಡಿರುವಿರೋ ಆ ಫೋಲ್ಡರನ್ನು ಹುಡುಕಿ. |
08:08 | ಈಗ ಡಯಲಾಗ್ ಬಾಕ್ಸ್ ನ ಮೇಲ್ಗಡೆ ಎಡ ಮೂಲೆಯಲ್ಲಿರುವ ಸಣ್ಣದಾದ ಪೆನ್ಸಿಲ್ ಬಟನ್ ಕ್ಲಿಕ್ ಮಾಡಿ. |
08:14 | ಇದರಲ್ಲಿ “Type a file Name” ಎಂದು ಬರೆದಿದೆ. |
08:16 | ಇದು “Location Bar” ಎಂಬ ಫೀಲ್ಡನ್ನು ಒಪನ್ ಮಾಡುತ್ತದೆ. |
08:19 | ಇಲ್ಲಿ ನಿಮಗೆ ಯಾವ ಫೈಲ್ ಬೇಕೋ ಆ ಫೈಲ್ ನ ಹೆಸರನ್ನು ಟೈಪ್ ಮಾಡಿ. |
08:24 | ನಾವಿಲ್ಲಿ ಫೈಲ್ ನ ಹೆಸರನ್ನು “resume” ಎಂದು ಟೈಪ್ ಮಾಡೋಣ. |
08:27 | ಈಗ ಸೂಚಿಯಲ್ಲಿ resume ಎಂಬ ಫೈಲ್ ನ್ ಹೆಸರು ಕಾಣಸಿಗುತ್ತದೆ, ಅದರಲ್ಲಿ “resume dot odt” ಎಂಬುದನ್ನು ಆಯ್ಕೆಮಾಡಿ. |
08:34 | ಈಗ “Open” ಬಟನ್ ಮೇಲೆ ಕ್ಲಿಕ್ ಮಾಡಿ. |
08:37 | ನೋಡಿ, resume.odt ಫೈಲ್ ಒಪನ್ ಆಯಿತು. |
08:41 | ಆಲ್ಟರ್ನೆಟ್ ಆಗಿ ನೀವು ಟೂಲ್ ಬಾರ್ ನಲ್ಲಿ “Open” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು ಮುಂದಿನ ಪ್ರಕ್ರಿಯೆಗಳನ್ನು ಅದೇ ತರಹ ಮಾಡಿ ಈಗಾಗಲೇ ಇರುವ ಫೈಲನ್ನು ಒಪನ್ ಮಾಡಬಹುದು. |
08:52 | ನೀವು ಮೈಕ್ರೋಸಾಫ್ಟ್ ವರ್ಡ್ ನಲ್ಲಿ ಉಪಯೋಗಿಸುವ “dot doc” ಹಾಗೂ “dot docx” ಎಕ್ಸ್ಟೆನ್ಶನ್ ಗಳನ್ನು ರೈಟರ್ ನಲ್ಲಿ ಒಪನ್ ಮಾಡಬಹುದು. |
09:03 | ಈಗ ನೀವು ಫೈಲ್ ನಲ್ಲಿ ಬದಲಾವಣೆಯನ್ನು ಹೇಗೆ ಮಾಡಬೇಕು ಮತ್ತು ಅದನ್ನು ಅದೇ ಹೆಸರಿನಲ್ಲಿ ಹೇಗೆ ಸೇವ್ ಮಾಡಬೇಕೆಂಬುದನ್ನು ನೋಡುವಿರಿ. |
09:10 | ಅದಕ್ಕಾಗಿ, ಮೊದಲು ಎಡ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ “RESUME” ಎನ್ನುವುದನ್ನು ಆಯ್ಕೆ ಮಾಡಿ, ನಂತರ ಮೌಸ್ ಅನ್ನು ಆ ಟೆಕ್ಸ್ಟ್ ನಲ್ಲಿ ಎಳೆಯಿರಿ. (drag) |
09:17 | ಇದು ಟೆಕ್ಸ್ಟ್ ಅನ್ನು ಆಯ್ಕೆ ಮಾಡುತ್ತದೆ ಮತ್ತು ಅದನ್ನು ಹೈಲೆಟ್ ಮಾಡುತ್ತದೆ. ಈಗ ಎಡ ಮೌಸ್ ಬಟನ್ ಅನ್ನು ಬಿಡಿ. |
09:24 | ಟೆಕ್ಸ್ಟ್ ಎನ್ನುವುದು ಈಗಲೂ ಹೈಲೆಟ್ ಆಗಿರಬೇಕು. |
09:26 | ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿ “Bold” ಎನ್ನುವುದರ ಮೇಲೆ ಕ್ಲಿಕ್ ಮಾಡಿ. ಈಗ ಟೆಕ್ಸ್ಟ್ ಬೋಲ್ಡ್ ಆಗಿದೆ. |
09:33 | ಟೆಕ್ಸ್ಟ್ ಅನ್ನು ಪೇಜ್ ನ ಮಧ್ಯಕ್ಕೆ ತರಲು ಟೂಲ್ ಬಾರ್ ನಲ್ಲಿ “Centered” ಎನ್ನುವುದನ್ನು ಕ್ಲಿಕ್ ಮಾಡಿ. |
09:41 | ನೀವು ಈಗ ಟೆಕ್ಸ್ಟ್ ಪೇಜ್ ನ ಮಧ್ಯದಲ್ಲಿ ಇರುವುದನ್ನು ಗಮನಿಸಬಹುದು. |
09:45 | ಈಗ ಟೆಕ್ಸ್ಟ್ ನ ಫಾಂಟ್ ಆಕಾರವನ್ನು ಹೆಚ್ಚಿಸೋಣ. |
09:48 | ಟೂಲ್ ಬಾರ್ ನಲ್ಲಿ “Font Size” ಫೀಲ್ಡ್ ನಲ್ಲಿ ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ. |
09:53 | ಡ್ರಾಪ್-ಡೌನ್ ಮೆನ್ಯುವಿನಲ್ಲಿ “14” ರ ಮೇಲೆ ಕ್ಲಿಕ್ ಮಾಡಿ. |
09:57 | ಇದರಿಂದ ಟೆಕ್ಸ್ಟ್ ನ ಫಾಂಟ್ ಆಕೃತಿಯು “14” ಆಗುತ್ತದೆ. |
10:01 | “Font Name” ಎಂಬಲ್ಲಿ ಡೌನ್ ಬಾಣವನ್ನು ಕ್ಲಿಕ್ ಮಾಡಿ ಮತ್ತು ಫಾಂಟ್ ನ ಹೆಸರಿಗಾಗಿ “UnDotum” ಎಂದು ಆಯ್ಕೆ ಮಾಡಿ. |
10:09 | ಟೂಲ್ ಬಾರ್ ನಲ್ಲಿ “Save” ಎಂಬಲ್ಲಿ ಕ್ಲಿಕ್ ಮಾಡಿ. |
10:13 | ಈಗ ನೀವು ಬದಲಾವಣೆಯ ನಂತರವೂ ಕೂಡಾ ಫೈಲ್ ಅದೇ ಹೆಸರಿನಲ್ಲಿ ಸೇವ್ ಆಗಿದೆಯೆಂಬುದನ್ನು ನೋಡುತ್ತೀರಿ. |
10:21 | ಸೇವ್ ಮಾಡಿದ ನಂತರ ಡಾಕ್ಯುಮೆಂಟನ್ನು ಕ್ಲೊಸ್ ಮಾಡಬೇಕೆನಿಸಿದಲ್ಲಿ, |
10:25 | ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Close” ಎಂಬಲ್ಲಿ ಕ್ಲಿಕ್ ಮಾಡಿ. ಇದು ನಿಮ್ಮ ಫೈಲ್ ಅನ್ನು ಕ್ಲೊಸ್ ಮಾಡುತ್ತದೆ. |
10:33 | ನಾವು ಲಿಬ್ರೆ ಆಫೀಸ್ ರೈಟರ್ ನ ಸ್ಪೋಕನ್ ಟ್ಯುಟೊರಿಯಲ್ ನ ಕೊನೆಯನ್ನು ತಲುಪಿರುತ್ತೇವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, |
10:43 | ರೈಟರ್ ಹಾಗೂ ಅವುಗಳ ವಿಭಿನ್ನ ಟೂಲ್ ಬಾರ್ ಗಳನ್ನು ನೋಡಿದೆವು. |
10:45 | ರೈಟರ್ ನಲ್ಲಿ ಹೊಸ ಡಾಕ್ಯುಮೆಂಟ್ ಮತ್ತು ಈಗಾಗಲೆ ಇರುವ ಡಕ್ಯುಮೆಂಟನ್ನು ಒಪನ್ ಮಾಡುವುದು ಹೇಗೆ ಮತ್ತು ಡಾಕ್ಯುಮೆಂಟನ್ನು ಸೇವ್ ಮಾಡುವುದು ಹಾಗೂ |
10:52 | ಕ್ಲೊಸ್ ಮಾಡುವುದು ಹೇಗೆಂದು ತಿಳಿದೆವು |
10:55 | ಮಾಡಬೇಕಾದ ಅಭ್ಯಾಸಗಳು – ರೈಟರ್ ನಲ್ಲಿ ಹೊಸ ಡಾಕ್ಯುಮೆಂಟ್ ಒಪನ್ ಮಾಡಿ. |
11:01 | ಅದನ್ನು “practice.odt” ಎಂಬ ಹೆಸರಿನಲ್ಲಿ ಸೇವ್ ಮಾಡಿ. |
11:05 | “This is my first assignment” ಎಂಬೀ ಟೆಕ್ಸ್ಟ್ ಅನ್ನು ಬರೆದು ಫೈಲನ್ನು ಸೇವ್ ಮಾಡಿ. ಟೆಕ್ಸ್ಟ್ ಅನ್ನು ರೇಖಾಂಕಿತ ಮಾಡಿ. |
11:13 | ಫಾಂಟ್ ಆಕೃತಿಯನ್ನು ೧೬ ಕ್ಕೆ ಹೆಚ್ಚಿಸಿ. ಫೈಲ್ ಅನ್ನು ಕ್ಲೋಸ್ ಮಾಡಿ. |
11:18 | ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
11:24 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
11:29 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
11:38 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
11:45 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
11:48 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
11:56 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
12:07 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ವಾಸುದೇವ ಐ.ಐ.ಟಿ ಬಾಂಬೆ. ಧನ್ಯವಾದಗಳು. |