KTurtle/C3/Common-Errors-in-KTurtle/Kannada
From Script | Spoken-Tutorial
Revision as of 13:57, 3 September 2014 by Vasudeva ahitanal (Talk | contribs)
Time | Narration; |
00:01 | KTurtle ನ ಸಾಮಾನ್ಯ ದೋಷಗಳು (Common Errors) ಎಂಬ ಈ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್-ನಲ್ಲಿ ನಾವು, |
00:10 | Syntax errors (ಸಿಂಟಾಕ್ಸ್ ದೋಷಗಳು) |
00:12 | Runtime errors and (ರನ್-ಟೈಮ್ ದೋಷಗಳು) ಮತ್ತು |
00:14 | Logical errors (ಲಾಜಿಕಲ್ ದೋಷಗಳ) ಬಗ್ಗೆ ಕಲಿಯಲಿದ್ದೇವೆ. |
00:17 | ಈ ಟ್ಯುಟೋರಿಯಲ್-ಅನ್ನು ತಯಾರಿಸಲು ನಾನು, |
00:20 | Ubuntu Linux OS ನ 12.04 ನೇ ಆವೃತ್ತಿಯನ್ನು ಮತ್ತು |
00:25 | KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ. |
00:31 | ನಿಮಗೆ KTurtleನ ಪ್ರಾಥಮಿಕ ಕೆಲಸದ ಮಾಹಿತಿ ಇದೆಯೆಂದು ತಿಳಿದಿದ್ದೇನೆ. |
00:36 | ಅದಿಲ್ಲವಾದಲ್ಲಿ, ಅದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್-ಗಳಿಗಾಗಿ, ದಯವಿಟ್ಟು ನಮ್ಮ ವೆಬ್-ಸೈಟನ್ನು ಸಂಪರ್ಕಿಸಿ. |
00:42 | ಮೊದಲಿಗೆ, ದೋಷವೆಂದರೇನೆಂದು ತಿಳಿದುಕೊಳ್ಳೋಣ. |
00:46 | ದೋಷಗಳೆಂದರೆ (Error) ಪ್ರೋಗ್ರಾಮ್-ನಲ್ಲಿ ಆಗುವ ತಪ್ಪುಗಳು, ಅವುಗಳು incorrect ಅಥವಾ unexpected ಎಂಬ ಫಲಿತಾಂಶವನ್ನು ಉಂಟುಮಾಡುತ್ತದೆ. |
00:55 | ಮೊದಲಿಗೆ ನಾನು ದೋಷಪ್ರಕಾರಗಳ ("Types of errors") ಬಗ್ಗೆ ವಿವರಿಸುವೆನು. |
01:00 | Syntax error ಎನ್ನುವುದು ಪ್ರೋಗ್ರಾಮಿಂಗ್ ಭಾಷೆಯ ವ್ಯಾಕರಣ ನಿಯಮಗಳ ಉಲ್ಲಂಘನೆ. |
01:09 | ಪ್ರೋಗ್ರಾಂನಲ್ಲಿ syntax errors ಉಂಟಾದಾಗ Compilation ಎಂಬುದು ಅಸಫಲವಾಗುತ್ತದೆ. |
01:15 | Syntax errors ಅನ್ನು ಕಂಡುಹಿಡಿಯುವುದು ಮತ್ತು ಪರಿಷ್ಕರಿಸುವುದು ಸರಳ. |
01:22 | ಉದಾಹರಣೆಗಾಗಿ: |
01:23 | ಸರಿಹೊಂದದ ಪ್ಯಾರಾಂಥಿಸಿಸ್ ಗಳು, ಸ್ಕ್ವಾರ್ ಗಳು ಹಾಗೂ ಕರ್ಲಿ ಬ್ರ್ಯಾಕೆಟ್ ಗಳು. |
01:29 | ಸೂಚಿಸಲ್ಪಡದ variableನ ಉಪಯೋಗ. |
01:34 | strings ನಲ್ಲಿ ಕಾಣದಿರುವ quotesಗಳು. |
01:38 | ಒಂದು ಹೊಸ KTurtle ಅಪ್ಲಿಕೇಷನ್ ಅನ್ನು ತೆರೆಯೋಣ. |
01:42 | Dash homeನ ಮೇಲೆ ಕ್ಲಿಕ್ ಮಾಡಿ, ಸರ್ಚ್ ಬಾರ್-ನಲ್ಲಿ KTurtle ಎಂದು ಟೈಪ್ ಮಾಡಿ. |
01:48 | KTurtle ಐಕಾನ್ ಮೇಲೆ ಕ್ಲಿಕ್ ಮಾಡಿ. |
01:51 | ಈಗ ಕೆಲವು ಪ್ರಕಾರಗಳ ಸಿಂಟಾಕ್ಸ್ ದೋಷಗಳೊಂದಿಗೆ ಟ್ಯುಟೋರಿಯಲ್-ಅನ್ನು ಆರಂಭಿಸೋಣ. |
01:58 | ಈಗಾಗಲೇ ನನ್ನ ಹತ್ತಿರ text editor ನಲ್ಲಿ ಒಂದು ಪ್ರೋಗ್ರಾಮ್ ಇದೆ. |
02:02 | ಪ್ರೋಗ್ರಾಂನಲ್ಲಿ ಇರುವಂತಹ ದೋಷವನ್ನು ವಿವರಿಸಲು ನಾನು ಕೋಡ್-ನ ಭಾಗವನ್ನು ಕಮೆಂಟ್ ಮಾಡುತ್ತೇನೆ. |
02:09 | ಇಲ್ಲಿ ನಾನು ಈ ಲೈನನ್ನು ಕಮೆಂಟ್ ಮಾಡುತ್ತೇನೆ. |
02:11 | $a ಈಕ್ವಲ್ ಟು (=) ask ಡಬಲ್ ಕೋಟ್ ನ ಒಳಗೆ "enter any number and click Ok" |
02:19 | ನಾನು ಲೈನ್ ಅನ್ನು ಕಮೆಂಟ್ ಮಾಡಲು hash(#) ಚಿಹ್ನೆಯನ್ನು ಉಪಯೋಗಿಸುವೆನು. |
02:23 | ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುವೆನು ಮತ್ತು ಅದನ್ನು Kturtle' ಎಡಿಟರ್-ನಲ್ಲಿ ಪೇಸ್ಟ್ ಮಾಡುವೆನು. |
02:31 | ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಮತ್ತು ನಿಮ್ಮ KTurtle ಎಡಿಟರ್ ನಲ್ಲಿ ಪ್ರೋಗ್ರಾಮ್ ಅನ್ನು ಟೈಪ್ ಮಾಡಿ. |
02:37 | ಪ್ರೋಗ್ರಾಂ ಟೈಪ್ ಆದಮೇಲೆ ಟ್ಯುಟೋರಿಯಲ್ ಅನ್ನು ಮತ್ತೆ ಆರಂಭ ಮಾಡೋಣ. |
02:42 | ಪ್ರೋಗ್ರಾಮ್ ಅನ್ನು ರನ್ ಮಾಡುವುದಕ್ಕಾಗಿ Run ಬಟನ್ ಮೇಲೆ ಕ್ಲಿಕ್ ಮಾಡೋಣ. |
02:47 | Compiler ಈ ಕೆಳಗಿನ ದೋಷವನ್ನು ತೋರಿಸುತ್ತದೆ. |
02:50 | variable "$a" was used without first being assigned to a value. |
02:57 | ಇಲ್ಲಿ ದೋಷವು 4 ನೇ ಲೈನ್-ನಲ್ಲಿದೆ. |
03:02 | ಇದು syntax error ವೇರಿಯೇಬಲ್ 'a' ಅನ್ನು ನಮೂದಿಸಿಲ್ಲದ ಕಾರಣ ಈ ಎರರ್ ಉಂಟಾಗಿದೆ. |
03:10 | ಹಾಗಾಗಿ, ನಾನು 2ನೇ ಲೈನ್-ಗೆ ಹೋಗುತ್ತೇನೆ, ಮತ್ತು ಕಮೆಂಟ್ ಅನ್ನು ತೆಗೆಯುತ್ತೇನೆ. |
03:14 | ನಾನು text Editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editorನಲ್ಲಿ ಪೇಸ್ಟ್ ಮಾಡುತ್ತೇನೆ. |
03:23 | ಪ್ರೋಗ್ರಾಮ್ ಅನ್ನು ರನ್ ಮಾಡುವುದಕ್ಕಾಗಿ Run ಬಟನ್ ಮೇಲೆ ಕ್ಲಿಕ್ ಮಾಡೋಣ. |
03:27 | a ವೆಲ್ಯೂಗಾಗಿ 6 ಅನ್ನು ಎಂಟರ್ ಮಾಡೋಣ ಮತ್ತು OK ಮೇಲೆ ಕ್ಲಿಕ್ ಮಾಡೋಣ. |
03:31 | ಈಗ ಪ್ರೋಗ್ರಾಮ್ ದೋಷವಿಲ್ಲದೆಯೇ ರನ್ ಆಗುತ್ತದೆ. |
03:35 | ನಾನು KTurtle ಎಡಿಟರ್ ನಿಂದ ಈಗಿರುವ ಪ್ರೋಗ್ರಾಮ್ ಅನ್ನು ತೆಗೆಯುತ್ತೇನೆ. |
03:38 | clear ಕಮಾಂಡ್ ಅನ್ನು ಟೈಪ್ ಮಾಡೋಣ ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು Run ಮಾಡೋಣ. |
03:43 | ಈಗ ಇನ್ನೊಂದು ದೋಷವನ್ನು ನೋಡೋಣ. |
03:46 | ಈಗಾಗಲೇ ನನ್ನ ಹತ್ತಿರ text editor ನಲ್ಲಿ ಒಂದು ಪ್ರೋಗ್ರಾಂ ಇದೆ. |
03:50 | ಇಲ್ಲಿ KTurtle ನಲ್ಲಿ "pi" ನ ವೆಲ್ಯೂ ಮೊದಲೇ ಕೊಟ್ಟಿದೆ. |
03:54 | ಪ್ರೋಗ್ರಾಂನಲ್ಲಿ "$" ಚಿಹ್ನೆಯನ್ನು ಡಿಲಿಟ್ ಮಾಡೋಣ. |
03:58 | ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುವೆನು ಮತ್ತು ಅದನ್ನು Kturtle Editor ನಲ್ಲಿ ಪೇಸ್ಟ್ ಮಾಡುತ್ತೇನೆ. |
04:05 | ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಮತ್ತು ನಿಮ್ಮ KTurtle editorನಲ್ಲಿ ಪ್ರೋಗ್ರಾಮ್ ಅನ್ನು ಟೈಪ್ ಮಾಡಿ. |
04:11 | ಪ್ರೋಗ್ರಾಂ ಟೈಪ್ ಆದ ಮೇಲೆ ಟ್ಯುಟೋರಿಯಲ್ ಅನ್ನು ಆರಂಭಿಸೋಣ. |
04:16 | ಪ್ರೋಗ್ರಾಮ್ ಅನ್ನು ರನ್ ಮಾಡುವುದಕ್ಕಾಗಿ Run ಬಟನ್ ಮೇಲೆ ಕ್ಲಿಕ್ ಮಾಡೋಣ. |
04:19 | Complier ಈ ದೋಷವನ್ನು ತೋರಿಸುತ್ತದೆ. |
04:22 | you cannot put ಈಕ್ವಲ್ ಟು “=” here |
04:26 | ಈ ಎರರ್ 2ನೇ ಲೈನ್ ನಲ್ಲಿ ಇದೆ. |
04:30 | ಇದೊಂದು syntax error. ಇಲ್ಲಿ ವೇರಿಯೆಬಲ್-ನ ಕಂಟೇನರ್ ಇಲ್ಲದಿರುವುದರಿಂದ ಈ ಎರರ್ ಬಂದಿದೆ. |
04:37 | $ ಚಿಹ್ನೆಯನ್ನು ಬದಲಾಯಿಸಲು ನಾವು ಮತ್ತೆ ವಾಪಸ್ ಪ್ರೋಗ್ರಾಂಗೆ ಹೋಗೋಣ. |
04:41 | ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle Editorನಲ್ಲಿ ಪೇಸ್ಟ್ ಮಾಡುತ್ತೇನೆ. |
04:49 | ಈಗ ಪ್ರೋಗ್ರಾಮ್ ಅನ್ನು ರನ್ ಮಾಡುವುದಕ್ಕಾಗಿ Run ಬಟನ್ ಮೇಲೆ ಕ್ಲಿಕ್ ಮಾಡೋಣ. |
04:53 | ಎಂಗಲ್ ವೆಲ್ಯೂಗೋಸ್ಕರ 45 ಎಂಟರ್ ಮಾಡಿ ಮತ್ತು OK ಕ್ಲಿಕ್ ಮಾಡಿ. |
04:57 | ಈಗ ಪ್ರೋಗ್ರಾಮ್ ದೋಷ ಇಲ್ಲದೆಯೇ ರನ್ ಆಗುತ್ತದೆ. |
05:00 | stringನ ಒಂದು quotes ಅನ್ನು ತೆಗೆಯೋಣ. |
05:05 | ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle Editorನಲ್ಲಿ ಪೇಸ್ಟ್ ಮಾಡುತ್ತೇನೆ. |
05:12 | ಪ್ರೋಗ್ರಾಮ್ ಅನ್ನು ರನ್ ಮಾಡುವುದಕ್ಕಾಗಿ Run ಬಟನ್ ಮೇಲೆ ಕ್ಲಿಕ್ ಮಾಡೋಣ. |
05:15 | Complier ಈ ಕೆಳಗಿನ ದೋಷವನ್ನು ತೋರಿಸುತ್ತದೆ, |
05:18 | Text string was not properly closed, expected a double quote “ ” to close the string. |
05:25 | ಇಲ್ಲಿ ದೋಷ 2ನೇ ಲೈನ್-ನಲ್ಲಿ ಇದೆ. |
05:29 | ನಾನು ಮತ್ತೆ ವಾಪಸ್ 2ನೇ ಲೈನ್-ಗೆ ಹೋಗುತ್ತೇನೆ ಮತ್ತು quotes ಅನ್ನು ಬದಲಾಯಿಸುತ್ತೇನೆ. |
05:34 | ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು Kturtle Editorನಲ್ಲಿ ಪೇಸ್ಟ್ ಮಾಡುತ್ತೇನೆ. |
05:41 | ಪ್ರೋಗ್ರಾಮ್ ಅನ್ನು ರನ್ ಮಾಡುವುದಕ್ಕಾಗಿ Run ಬಟನ್ ಮೇಲೆ ಕ್ಲಿಕ್ ಮಾಡೋಣ. |
05:44 | ಎಂಗಲ್ ವೆಲ್ಯೂಗಾಗಿ 45 ಅನ್ನು ಎಂಟರ್ ಮಾಡಿ OK ಕ್ಲಿಕ್ ಮಾಡಿ. |
05:49 | ಈಗ ಪ್ರೋಗ್ರಾಮ್, ದೋಷ ಇಲ್ಲದೆಯೇ ರನ್ ಆಗುತ್ತಿದೆ. |
05:52 | ಈ ರೀತಿಯಾಗಿ ನೀವು ಯಾವುದರಲ್ಲಿ ದೋಷ ಬರುತ್ತಿದೆ ಎಂದು ಕಂಡುಹಿಡಿದು ಅದನ್ನು ಸರಿ ಮಾಡಬಹುದು. |
05:59 | ಈಗ ನಾವು runtime errors ಬಗ್ಗೆ ತಿಳಿದುಕೊಳ್ಳೋಣ. |
06:04 | ಒಂದು ಪ್ರೋಗ್ರಾಮ್ ಅನ್ನು ತಯಾರಿಸುವಾಗRun-time error ಉಂಟಾಗುತ್ತದೆ. |
06:10 | ನೀವು ಪ್ರೋಗ್ರಾಮ್ ಅನ್ನು ರನ್ ಮಾಡಿದಾಗ ಇದು crash (ಕ್ರ್ಯಾಶ್) ಆಗಬಹುದು. |
06:15 | ಸಾಮಾನ್ಯವಾಗಿ Runtime errors ಯೂಸರ್-ನ ತಪ್ಪಾದ ಇನ್-ಪುಟ್-ನಿಂದ ಆಗುತ್ತವೆ. |
06:23 | Compilerಗೆ ಈ ದೋಷಗಳನ್ನು ಕಂಡುಹಿಡಿಯಲಾಗುವುದಿಲ್ಲ. |
06:27 | ಉದಾಹರಣೆಗೆ: |
06:29 | ವೆಲ್ಯೂ ಇಲ್ಲದ variable ಮುಖಾಂತರ ವಿಭಜಿಸಲು ಪ್ರಯತ್ನಿಸುವುದು. |
06:31 | terminating condition(ಟರ್ಮಿನೇಟಿಂಗ್ ಕಂಡೀಷನ್) ಅಥವಾ increment value (ಇನ್-ಕ್ರಿಮೆಂಟ್ ವೆಲ್ಯೂ) ಇಲ್ಲದೆಯೇ ಒಂದು ಲೂಪ್ ಅನ್ನು ರನ್ ಮಾಡಬೇಕು. |
06:43 | ನಾನು editor ನಿಂದ ಈಗಿರುವ ಪ್ರೋಗ್ರಾಮ್ ಅನ್ನು ತೆಗೆಯುತ್ತೇನೆ (ಅಳಿಸುತ್ತೇನೆ). |
06:47 | clear ಕಮಾಂಡ್ ಅನ್ನು ಟೈಪ್ ಮಾಡೋಣ ಮತ್ತು ಕ್ಯಾನ್ವಾಸ್ ಅನ್ನು ಸ್ವಚ್ಛಗೊಳಿಸಲು ರನ್ ಮಾಡೋಣ. |
06:52 | ಈಗಾಗಲೇ ನನ್ನ ಹತ್ತಿರ text editor ನಲ್ಲಿ ಒಂದು ಪ್ರೋಗ್ರಾಂ ಇದೆ. |
06:56 | ಈ ಪ್ರೋಗ್ರಾಮ್ ಎರಡು ಸಂಖ್ಯೆಗಳನ್ನು ವಿಭಾಗಿಸುತ್ತದೆ. |
07:00 | 'a' ಭಾಜ್ಯವಾಗಿದೆ ಮತ್ತು 'r' ಭಾಜಕವಾಗಿದೆ. |
07:04 | ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle Editorನಲ್ಲಿ ಪೇಸ್ಟ್ ಮಾಡುತ್ತೇನೆ. |
07:11 | ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಮತ್ತು ನಿಮ್ಮ KTurtle editorನಲ್ಲಿ ಪ್ರೋಗ್ರಾಮ್ ಅನ್ನು ಟೈಪ್ ಮಾಡಿ. |
07:16 | ಪ್ರೋಗ್ರಾಂ ಟೈಪ್ ಆದಮೇಲೆ ಟ್ಯುಟೋರಿಯಲ್ ಅನ್ನು ಪುನಃ ಆರಂಭಿಸೋಣ. |
07:20 | ಪ್ರೋಗ್ರಾಮ್ ಅನ್ನು ರನ್ ಮಾಡುವುದಕ್ಕಾಗಿ Run ಬಟನ್ ಮೇಲೆ ಕ್ಲಿಕ್ ಮಾಡೋಣ. |
07:24 | 'a'ಗಾಗಿ 5 ಅನ್ನು ಎಂಟರ್ ಮಾಡೋಣ ಮತ್ತು OKಮೇಲೆ ಕ್ಲಿಕ್ ಮಾಡೋಣ. |
07:29 | 'r'ಗಾಗಿ 0 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |
07:33 | ಇಲ್ಲಿ ನಮಗೆ runtime error ಸಿಗುತ್ತದೆ, |
07:36 | “you tried to divide by zero” |
07:39 | ಈ ದೋಷ 4ನೇ ಲೈನ್-ನಲ್ಲಿದೆ. |
07:43 | ನಾವು zeroನಿಂದ ಸಂಖ್ಯೆಯನ್ನು ವಿಭಜಿಸಲು ಆಗುವುದಿಲ್ಲ. ಹಾಗಾಗಿ ಈ ದೋಷ ಉಂಟಾಗಿದೆ. |
07:49 | ಪುನಃ ರನ್ ಮಾಡೋಣ. |
07:51 | aಗಾಗಿ 5ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |
07:54 | 'r'ಗಾಗಿ 2ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |
07:58 | ಈಗ ಪ್ರೋಗ್ರಾಂ ದೋಷಗಳಿಲ್ಲದೆಯೇ ರನ್ ಆಗುತ್ತದೆ. |
08:01 | ನಾನು KTurtle editor ನಿಂದ ಈಗಿರುವ ಪ್ರೋಗ್ರಾಮ್ ಅನ್ನು ತೆಗೆಯುತ್ತೇನೆ. |
08:05 | clear ಕಮಾಂಡನ್ನು ಟೈಪ್ ಮಾಡೋಣ ಮತ್ತು ಕ್ಯಾನ್ವಾಸ್ ಅನ್ನು ಸ್ವಚ್ಛಗೊಳಿಸಲು ರನ್ ಮಾಡೋಣ. |
08:10 | ಈಗ ನಾವು logical errors (ಲಾಜಿಕಲ್ ಎರರ್ಸ್) ಬಗ್ಗೆ ಕಲಿಯಲಿದ್ದೇವೆ. |
08:14 | Logical error ಎಂಬುದು source codeನ ಒಂದು ದೋಷ. ಇದರಿಂದ incorrect ಅಥವಾ unexpected ಬಿಹೇವಿಯರ್ ಉಂಟಾಗುತ್ತದೆ. |
08:26 | ಉದಾಹರಣೆಗೆ, |
08:28 | ತಪ್ಪಾದ ವೆರಿಯೇಬಲ್-ನಲ್ಲಿ ವೆಲ್ಯೂವನ್ನು ನಿರ್ದೇಶಿಸುವುದು. |
08:32 | ಎರಡು ಸಂಖ್ಯೆಗಳ ಸಂಕಲನದ ಬದಲಾಗಿ ಗುಣನ ಮಾಡಬೇಕು. |
08:36 | ನನ್ನ ಹತ್ತಿರ ಈಗಾಗಲೇ ಟೆಕ್ಸ್ಟ್ ಎಡಿಟರ್-ನಲ್ಲಿ ಒಂದು ಪ್ರೋಗ್ರಾಮ್ ಇದೆ. |
08:39 | ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು Kturtle's Editorನಲ್ಲಿ ಪೇಸ್ಟ್ ಮಾಡುತ್ತೇನೆ. |
08:47 | ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಮತ್ತು ಪ್ರೋಗ್ರಾಮ್ ಅನ್ನು KTurtle editorನಲ್ಲಿ ಟೈಪ್ ಮಾಡಿ. |
08:52 | ಪ್ರೋಗ್ರಾಂ ಟೈಪ್ ಆದ ಮೇಲೆ ಟ್ಯುಟೋರಿಯಲ್ ಅನ್ನು ಪುನಃ ಆರಂಭ ಮಾಡೋಣ. |
08:57 | ಈಗ ಪ್ರೋಗ್ರಾಮ್ ಅನ್ನು ರನ್ ಮಾಡುವುದಕ್ಕಾಗಿ Run ಬಟನ್ ಮೇಲೆ ಕ್ಲಿಕ್ ಮಾಡೋಣ. |
09:01 | ಸಂಭಾಷಣೆಯ ಒಂದು ಪೆಟ್ಟಿಗೆ ತೆರೆದುಕೊಳ್ಳುತ್ತದೆ, OKಮೇಲೆ ಕ್ಲಿಕ್ ಮಾಡೋಣ. |
09:05 | ಲೂಪ್ ಒಂದು infinite loopನ ಒಳಗೆ ಹೋಗುತ್ತದೆ. |
09:08 | “while” ಲೂಪ್ 31ರಿಂದ ಸಂಖ್ಯೆಗಳನ್ನು ಮುದ್ರಿಸುತ್ತದೆ ಮತ್ತು ಈಗಲೂ ಮುದ್ರಿಸುತ್ತಾ ಇದೆ ಎಂಬುದನ್ನು ನಾವು ನೋಡಬಹುದು. |
09:15 | ಇದೊಂದು logical error (ಲಾಜಿಕಲ್ ಎರರ್). |
09:18 | “while” ಕಂಡೀಷನ್-ನಲ್ಲಿ x ಎನ್ನುವುದು 20 ಕ್ಕಿಂತ ಹೆಚ್ಚಿದೆ, |
09:23 | ಆದರೆ variable x ಯಾವಾಗಲೂ 20 ಕ್ಕಿಂತ ಹೆಚ್ಚಾಗಿರುತ್ತದೆ. |
09:28 | ಹಾಗಾಗಿ ಲೂಪ್ ಟರ್ಮಿನೇಟ್ ಆಗುವುದೇ ಇಲ್ಲ. |
09:31 | ನಾನು ಪ್ರಕ್ರಿಯೆಯನ್ನು ನಿಲ್ಲಿಸಲು Abort ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ. |
09:36 | $x=$x+1 ಅನ್ನು $x=$x-1 ಆಗಿ ಬದಲಾಯಿಸೋಣ. |
09:44 | ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು Kturtleನ Editorನಲ್ಲಿ ಪೇಸ್ಟ್ ಮಾಡುತ್ತೇನೆ. |
09:51 | ಪ್ರೋಗ್ರಾಮ್ ಅನ್ನು ರನ್ ಮಾಡಲು Run ಬಟನ್ ಮೇಲೆ ಕ್ಲಿಕ್ ಮಾಡೋಣ. |
09:55 | ಒಂದು ಸಂಭಾಷಣೆಯ ಪೆಟ್ಟಿಗೆ ತೆರೆದುಕೊಳ್ಳುತ್ತದೆ. OK ಕ್ಲಿಕ್ ಮಾಡೋಣ. |
09:59 | 29 ರಿಂದ 20 ರವರೆಗೆ ವೆಲ್ಯೂವಿನ ಮುದ್ರಣ ಆದ ನಂತರ ಲೂಪ್ ಟರ್ಮಿನೇಟ್ ಆಗುತ್ತದೆ. |
10:05 | ಈಗ ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
10:10 | ಈಗ ಸಂಕ್ಷೇಪವಾಗಿ, |
10:12 | ಈ ಟ್ಯುಟೋರಿಯಲ್-ನಲ್ಲಿ ನಾವು, ದೋಷಗಳು ಮತ್ತು ದೋಷಗಳ ಪ್ರಕಾರಗಳಾದ |
10:18 | ಸೂಚಿಸಲ್ಪಡದ variableನ ಉಪಯೋಗ |
10:23 | strings ನಲ್ಲಿ ಕಾಣದಿರುವ quotesಗಳು |
10:27 | Runtime errors ಮತ್ತು |
10:30 | Logical errors ಗಳನ್ನು ಕಲಿತಿದ್ದೇವೆ. |
10:31 | ಕೊಟ್ಟಿರುವ ಪ್ರೋಗ್ರಾಂನಲ್ಲಿ ದೋಷಗಳನ್ನು ಕಂಡುಹಿಡಿಯುವ ಒಂದು ಅಸೈನ್-ಮೆಂಟ್ ಅನ್ನು ನಾನು ನಿಮಗೆ ಕೊಡಬಯಸುತ್ತೇನೆ. |
10:46 | ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What is a Spoken Tutorial |
10:50 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪವಾಗಿ ತಿಳಿಸುತ್ತದೆ. |
10:54 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
10:59 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : |
11:01 | ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
11:05 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |
11:09 | ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |
11: 17 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. |
11:23 | ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
11:31 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ] |
11:37 | ಈ ಪಾಠದ ಅನುವಾದಕಿ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ. ಐ. ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |