KTurtle/C2/Grammar-of-TurtleScript/Kannada

From Script | Spoken-Tutorial
Revision as of 12:14, 23 February 2017 by Pratik kamble (Talk | contribs)

Jump to: navigation, search
Time Narration;
00:01 ಎಲ್ಲರಿಗೂ ನಮಸ್ಕಾರ.
00:02 KTurtle ನಲ್ಲಿ Grammar of TurtleScript ನ ಈ ಟ್ಯುಟೋರಿಯಲ್-ಗೆ ಸ್ವಾಗತ.
00:08 ಈ ಟ್ಯುಟೋರಿಯಲ್- ನಲ್ಲಿ ನಾವು,
00:11 Turtle script (ಟರ್ಟಲ್ ಸ್ಕ್ರಿಪ್ಟ್) ನ ವ್ಯಾಕರಣ ಮತ್ತು 'if'-'else' ನಿಬಂಧನೆಯನ್ನು ಕಲಿಯಲಿದ್ದೇವೆ.
00:16 ಈ ಟ್ಯುಟೋರಿಯಲ್-ಅನ್ನು ತಯಾರಿಸಲು ನಾನು ಉಬಂಟು ಲಿನಕ್ಸ್ OS ನ 12.04 ನೇ ಆವೃತ್ತಿಯನ್ನು ಮತ್ತು KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ.
00:29 ನಿಮಗೆ Kturtleನ ಪ್ರಾಥಮಿಕ ಮಾಹಿತಿ ಇದೆಯೆಂದು ನಾವು ಅಂದುಕೊಂಡಿದ್ದೇವೆ.
00:35 ಅದಿಲ್ಲವಾದರೆ, ಅದಕ್ಕೆ ಸಂಬಂಧಿಸಿದ ಟುಟೋರಿಯಲ್-ಗಳಿಗಾಗಿ ದಯವಿಟ್ಟು ನಮ್ಮ ಜಾಲಪುಟವನ್ನು http://spoken-tutorial.org ನೋಡಿ.
00:40 ಒಂದು ಹೊಸ KTurtleನ ಅಪ್ಲಿಕೇಷನ್ ತೆರೆಯೋಣ.
00:43 Dash home ನ ಮೇಲೆ ಕ್ಲಿಕ್ ಮಾಡೋಣ.
00:45 ಸರ್ಚ್ ಬಾರ್ ನಲ್ಲಿ KTurtle ಎಂದು ಟೈಪ್ ಮಾಡೋಣ.
00:49 KTurtle icon (ಐಕಾನ್) ನ ಮೇಲೆ ಕ್ಲಿಕ್ ಮಾಡೋಣ.
00:52 ನಾವು terminal ಅನ್ನು ಬಳಸಿಯೂ ಕೂಡ KTurtle ಅನ್ನು ತೆರೆಯಬಹುದು.
00:56 ಟರ್ಮಿನಲ್ ಅನ್ನು ತೆರೆಯಲು CTRL+ALT+T ಅನ್ನು ಒಟ್ಟಿಗೆ ಒತ್ತಿ.
01:01 KTurtle ಅಪ್ಲಿಕೇಶನ್ ಅನ್ನು ತೆರೆಯಲು KTurtle ಅಂತ ಟೈಪ್ ಮಾಡಿ enter ಬಟನ್ ಅನ್ನು ಒತ್ತೋಣ.
01:08 ಮೊದಲು TurtleScript ಅನ್ನು ನೋಡೋಣ.
01:11 TurtleScript (ಟರ್ಟಲ್ ಸ್ಕ್ರಿಪ್ಟ್) ಎನ್ನುವುದು ಒಂದು ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಆಗಿದೆ.(ಭಾಷೆ)
01:15 ವಿವಿಧ ರೀತಿಯ ಶಬ್ದ ಮತ್ತು ಚಿಹ್ನೆಗಳನ್ನು (words and symbols )ಒಳಗೊಂಡಿರುವ ಇದು ವಿವಿಧ ರೀತಿಯ ಉದ್ದೇಶ್ಯಗಳಿಗಾಗಿ ಉಪಯೋಗಿಸಲ್ಪಡುತ್ತದೆ.
01:21 ಇದು ಟರ್ಟಲ್ ಗೆ ಏನು ಮಾಡಬೇಕೆಂಬ ಸೂಚನೆಯನ್ನು ಕೊಡುತ್ತದೆ.
01:25 KTurtleGrammar of TurtleScript ನಲ್ಲಿ -
01:30 Comments (ಕಮೆಂಟ್ಸ್)
01:31 Commands (ಕಮಾಂಡ್ಸ್)
01:32 Numbers (ನಂಬರ್ಸ್)
01:33 Strings (ಸ್ಟ್ರಿಂಗ್ಸ್)
01:34 Variables ( ವೇರಿಯೇಬಲ್ಸ್) ಮತ್ತು
01:36 Boolean values (ಬುಲಿಯನ್ ವ್ಯಾಲ್ಯೂಸ್) ಇರುತ್ತವೆ.
01:38 ಈಗ ನಾವು ನಂಬರ್ಸ್ ಅನ್ನು ಎಲ್ಲಿ ಸಂಗ್ರಹಿಸಬೇಕು ಎನ್ನುವುದನ್ನು ನೋಡೋಣ.
01:42 Numbers ಗಳನ್ನು ನಾವು,
01:44 Mathematical operators
01:46 Comparison operators ಮತ್ತು
01:49 Variables ಗಳಲ್ಲಿ ಸಂಗ್ರಹಿಸಿಡಬಹುದು.
01:50 ಸ್ಪಷ್ಟವಾಗಿ ಕಾಣಲೆಂದು ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ.
01:54 ಮೊದಲು ವೇರಿಯೇಬಲ್ಸ್ ಅನ್ನು ನೋಡೋಣ.
01:57 ‘$’ ಚಿಹ್ನೆಯೊಂದಿಗೆ ಶುರುವಾಗುವ ಶಬ್ದಗಳನ್ನು ವೇರಿಯೇಬಲ್ಸ್ ಎನ್ನುತ್ತಾರೆ. ಉದಾಹರಣೆಗೆ, $a.
02:04 ವೇರಿಯೇಬಲ್ಸ್ ಗಳು purple (ಪರ್ಪಲ್ ) ಬಣ್ಣದಿಂದ ಗುರುತಿಸಲ್ಪಡುತ್ತವೆ.
02:09 equal to (=) (ಈಕ್ವಲ್ ಟು) ಎನ್ನುವ ಅಸೈನ್ ಮೆಂಟ್ ಅನ್ನು ಬಳಸಿಕೊಂಡು ವೇರಿಯೇಬಲ್ ಇದರ ಕಂಟೆಂಟ್ ಅನ್ನು ಕೊಡುತ್ತದೆ.
02:14 ವೇರಿಯೇಬಲ್ಸ್ ನಲ್ಲಿ ನಂಬರ್ಸ್ ಅಂದರೆ $a=100,
02:20 strings ಅಂದರೆ $a=hello ಅಥವಾ
02:25 ಬುಲಿಯನ್ ವ್ಯಾಲ್ಯೂಸ್ ಅಂದರೆ true ಅಥವಾ false. $a=true.
02:32 ವೇರಿಯೇಬಲ್ಸ್ ಗಳು ಪ್ರೋಗ್ರಾಂ ಮುಗಿಯುವವರೆಗೆ ಅಥವಾ ಹೊಸದನ್ನು ನಿರ್ದೇಶಿಸುವವರೆಗೆ ಕಂಟೆಂಟ್ ಅನ್ನು ರಕ್ಷಿಸುತ್ತವೆ.
02:41 ಉದಾಹರಣೆಗೆ, ಈ ಕೋಡ್ ಅನ್ನು ನೋಡೋಣ.
02:44 ಟೈಪ್ ಮಾಡೋಣ, $a = 2004
02:50 $b = 25
02:55 print $a + $b
03:01 ವೇರಿಯೇಬಲ್ 'a' ಗಾಗಿ ವೆಲ್ಯೂ 2004 ಎಂದು ನಿರ್ದೇಶಿಸಲಾಗಿದೆ.
03:06 ವೇರಿಯೇಬಲ್ 'b' ಗಾಗಿ ವೆಲ್ಯೂ 25 ಎಂದು ನಿರ್ದೇಶಿಸಲಾಗಿದೆ.
03:10 print ಕಮಾಂಡ್ ಕ್ಯಾನ್ವಾಸಿನ ಮೇಲೆ ಏನನ್ನೋ ಬರೆಯಲು Turtle ಗೆ ಆದೇಶಿಸುತ್ತದೆ.
03:15 print ಕಮಾಂಡ್ ನಂಬರ್ಸ್ ಗಳನ್ನು ಮತ್ತು ಸ್ಟ್ರಿಂಗ್ಸ್ ಗಳನ್ನು ಇನ್ ಪುಟ್ ನ ರೀತಿಯಲ್ಲಿ ತೆಗೆದುಕೊಳ್ಳುತ್ತದೆ.
03:19 print $a + $b ಎಂಬ ಕಮಾಂಡ್, ಎರಡು ವೆಲ್ಯೂಗಳ ಸಂಕಲನ ಮಾಡಲು ಮತ್ತು ಅವುಗಳನ್ನು ಕ್ಯಾನ್ವಾಸಿನ ಮೇಲೆ ತೋರಿಸುವಂತೆ Turtle ಗೆ ಆದೇಶ ನೀಡುತ್ತದೆ.
03:29 ಕೋಡ್ ಅನ್ನು slow (ನಿಧಾನವಾದ) ವೇಗದಲ್ಲಿ ರನ್ ಮಾಡೋಣ.
03:34 ವೆಲ್ಯೂ 2029 ಕ್ಯಾನ್ವಾಸಿನ ಮೇಲೆ ಕಾಣಿಸುತ್ತದೆ.
03.40 ಈಗ Mathematical ಆಪರೇಟರ್ಸ್ ಅನ್ನು ನೋಡೋಣ.
03:44 Mathematical ಆಪರೇಟರ್ಸ್ ನಲ್ಲಿ,

+ (Addition) ಕೂಡಿಸುವುದು - (Subtraction) ಕಳೆಯುವುದು * (Multiplication) ಗುಣಾಕಾರ ಮತ್ತು / (Division) ಭಾಗಾಕಾರ

03:53 ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ.
04:01 ಈಗಾಗಲೇ ನನ್ನ ಹತ್ತಿರ text editor ನಲ್ಲಿ ಒಂದು ಪ್ರೋಗ್ರಾಮ್ ಇದೆ.
04:05 ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ.
04:08 reset ಕಮಾಂಡ್ “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.
04:12 canvassize 200,200 ಎಂಬ ಕಮಾಂಡ್ ಕ್ಯಾನ್ವಾಸಿನ ಉದ್ದ ಮತ್ತು ಅಗಲಕ್ಕಾಗಿ 200 pixels ಅನ್ನು ನಿರ್ಧರಿಸುತ್ತದೆ.
04:22 ವೆಲ್ಯೂ 1+1 ವೇರಿಯೇಬಲ್ $add, ಗಾಗಿ ನಿರ್ದಿಷ್ಟವಾಗಿದೆ.
04:26 ವೆಲ್ಯೂ 20-5 ವೇರಿಯೇಬಲ್ $subtract, ಗಾಗಿ ನಿರ್ದಿಷ್ಟವಾಗಿದೆ.
04:31 ವೆಲ್ಯೂ 15 * 2 ವೇರಿಯೇಬಲ್ $multiply ಗಾಗಿ ನಿರ್ದಿಷ್ಟವಾಗಿದೆ.
04:36 ವೆಲ್ಯೂ 30/30 ವೇರಿಯೇಬಲ್ $divide ಗಾಗಿ ನಿರ್ದಿಷ್ಟವಾಗಿದೆ.
04:40 go 10,10 ಎಂಬ ಕಮಾಂಡ್ Turtle ಗೆ ಕ್ಯಾನ್ವಾಸಿನ ಎಡಭಾಗಕ್ಕೆ 10 pixels ಮತ್ತು ಮೇಲ್ಭಾಗಕ್ಕೆ 10 pixels ಹೋಗುವಂತೆ ಆದೇಶಿಸುತ್ತದೆ.
04:52 print ಕಮಾಂಡ್ ಕ್ಯಾನ್ವಾಸಿನ ಮೇಲೆ ವೇರಿಯೇಬಲ್ ಅನ್ನು ತೋರಿಸುತ್ತದೆ.
04:56 ನಾನು text editor ನಿಂದ ಕೋಡ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ.
05:03 ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ.
05:08 ಪ್ರೋಗ್ರಾಮ್ ಅನ್ನು ಟೈಪ್ ಮಾಡಿದ ಮೇಲೆ ಟ್ಯುಟೋರಿಯಲ್ ಅನ್ನು ಪುನಃ ಆರಂಭಿಸೋಣ.
05:13 ಪ್ರೋಗ್ರಾಮ್ ಅನ್ನು ರನ್ ಮಾಡಲು Run ಬಟನ್ ಅನ್ನು ಒತ್ತೋಣ.
05:17 ನಡೆಯುತ್ತಿರುವ ಕಮಾಂಡ್ editor ನಲ್ಲಿ ಗುರುತಿಸ್ಪಟ್ಟಿದೆ.
05:22 Turtle ಎನ್ನುವುದು ಕ್ಯಾನ್ವಾಸಿನ ಮೇಲೆ ನಿರ್ದಿಷ್ಟವಾದ ಸ್ಥಿತಿಯಲ್ಲಿ ವೆಲ್ಯೂಸ್ ಅನ್ನು ತೋರಿಸುತ್ತದೆ.
05:34 comparison operator (ಕಂಪ್ಯಾರಿಸನ್ ಆಪರೇಟರ್ ) ಅನ್ನು ಬಳಸಲು ಒಂದು ಸರಳವಾದ ಉದಾಹರಣೆಯನ್ನು ಕುರಿತು ಚರ್ಚಿಸೋಣ.
05:41 ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ.
05:49 ಸ್ಪಷ್ಟವಾಗಿ ಕಾಣುವುದಕ್ಕಾಗಿ ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ.
05:53 ಟೈಪ್ ಮಾಡೋಣ.
05:55 $answer = 10 > 3
06:03 print $answer
06:09 ಇಲ್ಲಿ ’greater than’ (ಗ್ರೇಟರ್ ದೆನ್) ಆಪರೇಟರ್ ನ ಜೊತೆಗೆ 10 ಅನ್ನು 3 ರೊಂದಿಗೆ ಹೋಲಿಸಿದೆ.
06:14 ಈ ಹೋಲಿಕೆಯ ಪರಿಣಾಮವಾಗಿ, boolean value true ನಲ್ಲಿ ಸಂಗ್ರಹವಾಗುತ್ತದೆ.
06:19 ವೇರಿಯೇಬಲ್ $answer ಮತ್ತು ವೆಲ್ಯೂ true ಕ್ಯಾನ್ವಾಸಿನ ಮೇಲೆ ಕಾಣಿಸುತ್ತದೆ.
06:27 ಈಗ ಕೋಡ್ ಅನ್ನು ರನ್ ಮಾಡೋಣ.
06:29 Turtle ಎನ್ನುವುದು ಕ್ಯಾನ್ವಾಸಿನ ಮೇಲೆ Boolean value true ಅನ್ನು ತೋರಿಸುತ್ತದೆ.
06:34 ಈಗ ಈ ಅಪ್ಲಿಕೇಶನ್ ನಲ್ಲಿ ಸ್ಟ್ರಿಂಗ್ಸ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡೋಣ. -
06:39 ವೇರಿಯೇಬಲ್ಸ್ ನಲ್ಲಿ ನಂಬರ್ಸ್ ಗಳಂತೆಯೇ ಸ್ಟ್ರಿಂಗ್ಸ್ ಗಳನ್ನೂ ಇಡಬಹುದು.
06:43 mathematical ಅಥವಾ comparison ಆಪರೇಟರ್ಸ್ ನಲ್ಲಿ ಸ್ಟ್ರಿಂಗ್ಸ್ ಅನ್ನು ಉಪಯೋಗಿಸಲಾಗುವುದಿಲ್ಲ.
06:49 ಸ್ಟ್ರಿಂಗ್ಸ್ ಗಳು ಕೆಂಪು ಬಣ್ಣದಿಂದ ಗುರುತಿಸಲ್ಪಡುತ್ತವೆ.
06:53 KTurtle ಎನ್ನುವುದು ಸ್ಟ್ರಿಂಗ್ ನ ರೀತಿಯಲ್ಲಿ ಎರಡು ಉದ್ಧರಣ ಚಿಹ್ನೆಯಲ್ಲಿರುವ ಒಂದು ಲೈನ್ ಅನ್ನು ಗುರುತಿಸುತ್ತದೆ.
07:00 ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ.
07:08 ಈಗ ನಾನು Boolean ವೆಲ್ಯೂಸ್ ನ ಬಗ್ಗೆ ವಿವರಿಸುತ್ತೇನೆ.
07:11 ಅಲ್ಲಿ true ಮತ್ತು false ಎಂಬ ಎರಡು boolean ವೆಲ್ಯೂಸ್ ಗಳು ಮಾತ್ರ ಇವೆ.
07:16 ಉದಾಹರಣೆಗೆ, ಕೋಡ್ ಅನ್ನು ಟೈಪ್ ಮಾಡೋಣ.
07:20 $answer = 7<5
07:28 print $answer
07:34 Boolean value false ಅನ್ನು $answer ವೇರಿಯೇಬಲ್ ಗಾಗಿ ನಿರ್ದೇಶಿಸಲಾಗಿದೆ. ಏಕೆಂದರೆ 7, 5 ಕ್ಕಿಂತ ದೊಡ್ಡದು.
07:43 ಈಗ ಕೋಡ್ ಅನ್ನು ರನ್ ಮಾಡೋಣ.
07:47 Turtle ಎನ್ನುವುದು ಕ್ಯಾನ್ವಾಸಿನ ಮೇಲೆ Boolean ವೆಲ್ಯೂ false ಎಂದು ತೋರಿಸುತ್ತದೆ.
07:51 ಈಗ ನಾವು “if-else” ನಿಬಂಧನೆಯ ಬಗ್ಗೆ ಕಲಿಯೋಣ.
07:56 boolean ವೆಲ್ಯೂ ‘true’ ಎಂದು ಮೂಲ್ಯಾಂಕನವನ್ನು ಮಾಡಿದರೆ ಮಾತ್ರ ‘if’ ಕಂಡೀಶನ್ ಉಂಟಾಗುತ್ತದೆ.
08:03 ‘if’ ಕಂಡೀಶನ್ ‘false’ ಆಗಿದ್ದಾಗ ಮಾತ್ರ ‘else’ ಕಂಡೀಶನ್ ಉಂಟಾಗುತ್ತದೆ.
08:09 ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ.
08:17 ಈಗಾಗಲೇ ನನ್ನ ಹತ್ತಿರ ಟೆಕ್ಸ್ಟ್ ಫೈಲ್ ನಲ್ಲಿ ಒಂದು ಕೋಡ್ ಇದೆ.
08:21 ಈ ಕೋಡ್ 4 , 5 ಮತ್ತು 6 ಸಂಖ್ಯೆಗಳನ್ನು ಹೋಲಿಸುತ್ತದೆ. ಮತ್ತು ಅದರ ಫಲಿತಾಂಶವನ್ನು ಕ್ಯಾನ್ವಾಸಿನ ಮೇಲೆ ಕ್ರಮವಾಗಿ ತೋರಿಸುತ್ತದೆ.
08:30 ನಾನು text editor ನಿಂದ ಕೋಡ್ ಅನ್ನು ಕಾಪಿ ಮಾಡಿ ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ.
08:36 ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ.
08:42 ಪ್ರೋಗ್ರಾಮ್ ಅನ್ನು ಟೈಪ್ ಮಾಡಿದ ಮೇಲೆ ಟ್ಯುಟೋರಿಯಲ್ ಅನ್ನು ಪುನಃ ಆರಂಭಿಸೋಣ.
08:46 ಈಗ ಕೋಡ್ ಅನ್ನು ರನ್ ಮಾಡೋಣ.
08:49 Turtle ಎನ್ನುವುದು 4 ಮತ್ತು 5 ವೆಲ್ಯೂಗಳನ್ನು ಹೋಲಿಸಿದೆ.
08:53 ಮತ್ತು 6 ಕ್ಕಿಂತ 4 ಚಿಕ್ಕದು ಎಂಬ ಪರಿಣಾಮವನ್ನು ಕ್ಯಾನ್ವಾಸಿನ ಮೇಲೆ ತೋರಿಸುತ್ತದೆ.
09:00 ಇದರೊಂದಿಗೆ ಈಗ ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ.
09:05 ಸಂಕ್ಷೇಪವಾಗಿ,
09:07 ಈ ಟ್ಯುಟೋರಿಯಲ್ ನಲ್ಲಿ ನಾವು,
09:11 Turtle script (ಟರ್ಟಲ್ ಸ್ಕ್ರಿಪ್ಟ್) ನ ವ್ಯಾಕರಣ ಮತ್ತು
09:14 ‘if-else’ ಕಂಡೀಶನ್ ಅನ್ನು ಕಲಿತಿದ್ದೇವೆ.
09:17 ಈಗ ನಾವು ಅಸೈನ್ ಮೆಂಟ್ ಭಾಗಕ್ಕೆ ಬರೋಣ.
09:19 ಒಂದು ಸಮೀಕರಣವನ್ನು
09:22 if - else ಕಂಡೀಶನ್
09:24 Mathematical ಹಾಗೂ comparison ಆಪರೇಟರ್ಸ್ ಬಳಸಿ ಬಿಡಿಸುವುದು.
09:27 “print” ಮತ್ತು “go” ಕಮಾಂಡ್ ಗಳನ್ನು ಬಳಸಿ ಪರಿಣಾಮವನ್ನು ತೋರಿಸುವುದು.
09:33 ಈ ಅಸೈನ್ ಮೆಂಟ್ ಅನ್ನು ಪೂರ್ಣಗೊಳಿಸಲು,
09:35 ಯಾವುದಾದರೂ ನಾಲ್ಕು ರೆಂಡಮ್ ನಂಬರ್ಸ್ ಗಳನ್ನು ಆರಿಸಿಕೊಳ್ಳಿ.
09:38 ರೆಂಡಮ್ ಸಂಖ್ಯೆಗಳ ಎರಡು ಸೆಟ್ ಅನ್ನು ಗುಣಾಕಾರ ಮಾಡಿ.
09:42 comparison ಆಪರೇಟರ್ಸ್ ಅನ್ನು ಬಳಸಿ ಫಲಿತಾಂಶವನ್ನು ಹೋಲಿಸಿ.
09:46 ಎರಡೂ ಫಲಿತಾಂಶಗಳನ್ನು ತೋರಿಸಿ.
09:49 ಕ್ಯಾನ್ವಾಸಿನ ಮಧ್ಯಭಾಗದಲ್ಲಿ (ಕೇಂದ್ರಭಾಗದಲ್ಲಿ) ಹೆಚ್ಚಿನ ಫಲಿತಾಂಶವನ್ನು ತೋರಿಸಿ.
09:54 ನೀವು ನಿಮಗೆ ಇಷ್ಟವಾದ ಯಾವ ಈಕ್ವೆಷನ್(ಸಮೀಕರಣ) ಆದರೂ ಆರಿಸಿಕೊಳ್ಳಬಹುದು.
09:59 ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What is a Spoken Tutorial
10:03 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
10:06 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
10:12 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
10:14 ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
10:18 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
10:22 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
10:30 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.
10:35 ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
10:43 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ]
10:48 ಈ ಸ್ಕ್ರಿಪ್ಟ್ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Pratik kamble, Vasudeva ahitanal