Java/C2/Methods/Kannada
From Script | Spoken-Tutorial
Revision as of 17:08, 17 October 2014 by Vasudeva ahitanal (Talk | contribs)
Time | Narration |
00:02 | methods in java (ಮೆಥಡ್ಸ್ ಇನ್ ಜಾವಾ) ಎಂಬ ಬಗೆಗಿನ ಸ್ಪೊಕನ್ ಟ್ಯುಟೊರಿಯಲ್ ಗೆ ಸ್ವಾಗತ . |
00:06 | ಈ ಟ್ಯುಟೊರಿಯಲ್ ನಲ್ಲಿ ನಾವು , |
00:08 | ಮೆಥಡ್-ಗಳನ್ನು ಮಾಡುವದು |
00:10 | ಮತ್ತು ಮೆಥಡ್-ಗಳನ್ನು ಕರೆ ಮಾಡುವದು ಇವುಗಳನ್ನು ಕಲಿಯುತ್ತೇವೆ .. |
00:13 | ಇಲ್ಲಿ ನಾವು |
00:14 | Ubuntu 11.10 ವರ್ಶನ್-ಅನ್ನು ಉಪಯೋಗಿಸುತ್ತೆವೆ. |
00:17 | ಜಾವಾ ಡೆವಲಪ್-ಮೆಂಟ್ ಕಿಟ್ ೧.೬ |
00:20 | ಮತ್ತು (ಎಕ್ಲಿಪ್ಸ್)Eclipse 3.7.0 ಅನ್ನು ಉಪಯೋಗಿಸುತ್ತಿದ್ದೇವೆ. |
00:24 | ಈ ಟ್ಯುಟೊರಿಯಲ್-ಅನ್ನು ಅನುಸರಿಸಲು ನಿಮಗೆ simple java program(ಸಿಂಪಲ್-ಜಾವಾ-ಪ್ರೊಗ್ರಾಮ್) ಅನ್ನು ಎಕ್ಲಿಪ್ಸ್-ನಲ್ಲಿ ಬರೆಯಲು,ಕಂಪೈಲ್ ಮಾಡಲು,ರನ್ ಮಾಡಲು ತಿಳಿದಿರಬೇಕು. |
00:32 | ತಿಳಿದಿಲ್ಲವಾದರೆ ಸಂಬಂಧಿಸಿದ ಟ್ಯುಟೊರಿಯಲ್-ಗಾಗಿ ನಮ್ಮ (http://www.spoken-tutorial.org)
ಈ ವೆಬ್-ಸೈಟ್ ಅನ್ನು ನೋಡಿ, |
00:40 | ಜಾವಾ ಮೆಥಡ್ ಎನ್ನುವದು ಸ್ಟೇಟ್-ಮೆಂಟ್ ಗಳ ಸಂಗ್ರಹವಾಗಿದೆ ಮತ್ತೆ ಅದು ನಿಗದಿತ ಕಾರ್ಯಗಳನ್ನು ಮಾಡುತ್ತದೆ. |
00:46 | ಈಗ ಒಂದು ಮೆಥಡ್-ಅನ್ನು ಬರೆಯೋಣ. |
00:50 | ಅದಕ್ಕಾಗಿ ನಾನು ಎಕ್ಲಿಪ್ಸ್-ನಲ್ಲಿ ಒಂದು ಪ್ರೊಜೆಕ್ಟ್-ಮೆಥಡ್ ಅನ್ನು ಸಿದ್ಧಪಡಿಸಿ ಇಟ್ಟಿದ್ದೇನೆ. |
00:57 | ಪ್ರೊಜೆಕ್ಟ್-ನಲ್ಲಿ ನಾನು ಕ್ಲಾಸ್-ನೇಮ್ ಆದ(ಮೆಥಡ್ ಡೆಮೊ)MethodDemo ವನ್ನು ರಚಿಸಿದ್ದೇನೆ. |
01:06 | ಕ್ಲಾಸ್-ನಲ್ಲಿ ಮೇನ್-ಮೆಥಡ್ ನ ಹೊರಗೆ ಒಂದು ಮೆಥಡ್-ಅನ್ನು ಬರೆಯೋಣ. |
01:13 | voidಎಂದು ಮೆಥಡ್-ನೇಮ್ ಅನ್ನು ಟಾಯಿಪ್ ಮಾಡಿ |
01:19 | ಇದನ್ನುdisplayMessage(ಡಿಸ್-ಪ್ಲೈ ಮೆಸೇಜ್)ಎಂದು ಹೆಸರಿಸೋಣ ಪೆರಂಥಿಸಿಸ್ Enter(ಎಂಟರ್) |
01:29 | ಮತ್ತು ಕರ್ಲಿ ಬ್ರೆಕೆಟ್ ಗಳನ್ನು ಹಾಕಿ |
01:32 | ಒಂದು ಮೆಥಡ್ ಒಂದು ವೆಲ್ಯು-ವನ್ನು ಹಿಂದಿರುಗಿಸಬಹುದು. |
01:34 | ಆದರೆ ನಿಮಗೆ ವೆಲ್ಯು ಹಿಂದಿರುಗುವುದು ಬೇಡದಿದ್ದರೆ ಕೀ-ವರ್ಡ್ ಆದ void ಅನ್ನು ಉಪಯೋಗಿಸಲಾಗುತ್ತದೆ . |
01:42 | ಸರಿ, ಈಗ ಕರ್ಲಿ-ಬ್ರೆಕೆಟ್ ನ ಒಳಗೆ ಒಂದು ಸಂದೇಶವನ್ನು ಮುದ್ರಿಸೋಣ. |
01:47 | ಹಾಗಾಗಿ System ಡೊಟ್ out ಡೊಟ್ println Hello Method ಎಂದು ಟಾಯಿಪ್ ಮಾಡಿ. |
02:06 | ಈಗ ಒಂದು ಮೆಥಡ್ ಅನ್ನು ಬರೆದಂತಾಯಿತು. |
02:10 | ಈಗ ನಾವು ಈ ಮೆಥಡ್-ಅನ್ನು ಕಾಲ್ ಮಾಡೋಣ. |
02:13 | ಹಾಗಾಗಿ ನಾವು ಮೇನ್ ಮೆಥಡ್-ನಲ್ಲಿ “ಮೆಥಡ್-ಡೆಮೊ” ಎಂಬ ಕ್ಲಾಸ್ ಒಬ್ಜೆಕ್ಟ್-ಅನ್ನು ರಚಿಸುತ್ತಿದ್ದೆವೆ. |
02:21 | ಹಾಗಾಗಿ 'MethodDemo(ಮೆಥಡ್-ಡೆಮೊ) ಒಬ್ಜೆಕ್ಟ್ ನೇಮ್ ಆಗಿದೆ. |
02:26 | md =new ಎಂದು ಹೆಸರಿಡೋಣ MethodDemo(ಮೆಥಡ್ ಡೆಮೊ) ಪೆರಂಥಿಸಿಸ್, ಸೆಮಿಕೋಲನ್. |
02:37 | ಹಾಗಾಗಿ ನಾವು mdಎಂಬ ಒಬ್ಜೆಕ್ಟ್-ಅನ್ನು MethodDemoಕ್ಲಾಸ್-ನಲ್ಲಿ New(ನ್ಯು) ಓಪರೇಟರ್-ಅನ್ನು ಬಳಸಿ ರಚಿಸಿದ್ದೇವೆ |
02:48 | ಈಗ ನಾವು displayMessage. ಎಂಬ ಮೆಥಡ್-ಅನ್ನು ಕಾಲ್ ಮಾಡೋಣ |
02:51 | ಅದಕ್ಕಾಗಿ md ಡೊಟ್ displayMessage(ಡಿಸ್ಪ್ಲೇ-ಮೆಸೇಜ್) |
03:00 | ಡೊಟ್ ಓಪರೆಟರ್-ಅನ್ನು ಮೆಥಡ್-ಅನ್ನು ಕಾಲ್ ಮಾಡಲು ಬಳಸುತ್ತೇವೆ. |
03:06 | Runರನ್ಐಕಾನ್ ಅನ್ನು ಕ್ಲಿಕ್-ಮಾಡಿ ಎಪ್ಲಿಕೇಶನ್-ಅನ್ನು ರನ್ ಮಾಡೋಣ. |
03:14 | ನಾವು HelloMethod ಎಂಬ ಫಲಿತಾಂಶವನ್ನು ಕಾಣುತ್ತಿದ್ದೇವೆ. |
03:20 | ಈಗ ನಾವು void(ವೊಯಿಡ್ )'ನ ಸ್ಥಳದಲ್ಲಿ “ಇಂಟೀಜರ್” ಅನ್ನು ಇಡೋಣ. |
03:26 | ಅದಕ್ಕಾಗಿ int. ಎಂದು ಟಾಯಿಪ್ ಮಾಡಿ. |
03:32 | ಹಾಗೆಯೇpublic ಎಂಬಮೆಥಡ್-ಅನ್ನೂ ಮಾಡೋಣ, ಅದು ಎಲ್ಲಾ ಕಡೆ ಸಂಬಂಧಿಸಿರುತ್ತದೆ. |
03:37 | ಡೀಫೊಲ್ಟ್-ಆಗಿ ಅದು ಪ್ರೈವೇಟ್ಆಗಿರುತ್ತದೆ, ಅಂದರೆ ಅದು ಯಾವ ಕ್ಲಾಸ್-ನಲ್ಲಿ ಬರೆದಿದೆಯೋ ಅದಕ್ಕೆ ಮಾತ್ರ ಸಂಬಂಧಿಸಿದ್ದಾಗಿದೆ. |
03:45 | ಈಗ ಮೆಥಡ್-ನಲ್ಲಿ return(ರಿಟರ್ನ್) ಸೆವೆನ್, ಸೆಮಿಕೊಲನ್ ಎಂದು ಟಾಯಿಪ್ ಮಾಡಿ. |
03:55 | ನೆನಪಿಡಿreturn(ರಿಟರ್ನ್)ಸ್ಟೇಟ್-ಮೆಂಟ್ ಅನ್ನು ಮೆಥಡ್-ನ ಎಲ್ಲಾ ಸ್ಟೇಟ್-ಮೆಂಟ್-ಗಳ ನಂತರ ಬರೆಯುತ್ತೇವೆ. |
04:02 | ಏಕೆಂದರೆreturn(ರಿಟರ್ನ್) ಸ್ಟೆಟ್-ಮೆಂಟ್ ಆದ ನಂತರ ಯಾವುದೇ ಸ್ಟೇಟ್-ಮೆಂಟ್ ಕೂಡಾ ಎಕ್ಸಿಕ್ಯೂಟ್ ಆಗುವದಿಲ್ಲ. |
04:08 | ಈಗ ನಾವು ಮೇನ್-ಮೆಥಡ್ ನ ಒಳಗೆ ಕೊನೆಯಲ್ಲಿ “ಪ್ರಿಂಟ್-ಸ್ಟೇಟ್-ಮೆಂಟ್ ” ಅನ್ನು ಬರೆಯೋಣ. |
04:15 | ಅದಕ್ಕಾಗಿSystem(ಸಿಸ್ಟಮ್) ಡೊಟ್ out(ಔಟ್) ಡೊಟ್ println(); ಎಂದು ಟಾಯಿಪ್ ಮಾಡಿ. |
04:23 | ಪೆರಂಥಿಸಿಸ್ನ ಒಳಗೇ ನಾವು ಮೆಥಡ್ ಅನ್ನು ಕಾಲ್ ಮಾಡುತ್ತಿದ್ದೇವೆ. |
04:28 | ಹಾಗಾಗಿ “md ಡೊಟ್” ಮೆಥಡ್-ಅನ್ನು ಪೆರಂಥಿಸಿಸ್ ನ ಒಳಗೆ ಇಡಿ, ಹಾಗೇ ಸೆಮಿ-ಕಲನ್ ಅನ್ನು ಅಳಿಸಿ. |
04:37 | ಇದು ಮೆಥಡ್-ನ ರಿಟುರ್ನ್ ವೆಲ್ಯು-ವನ್ನು ಮುದ್ರಿಸುತ್ತದೆ. |
04:42 | ಎಪ್ಲಿಕೇಶನ್-ಅನ್ನು run(ರನ್) ಮಾಡಿ. |
04:45 | ಔಟ್-ಪುಟ್ ವೆಲ್ಯು ಆದ 7 ಅನ್ನು ನಾವು ಕಾಣಬಹುದು. |
04:51 | ಈಗ ನಾವು ಇನ್ನೊಂದು ಮೆಥಡ್-ಅನ್ನು ಬರೆದು ಅದನ್ನು “ಡಿಸ್-ಪ್ಲೇ ಮೆಸೇಜ್” ನಲ್ಲಿ ಅದನ್ನು ಕಾಲ್ ಮಾಡೋಣ. |
04:59 | ಅದಕ್ಕಾಗಿ ಹೀಗೆ ಟಾಯಿಪ್-ಮಾಡಿ public void(ಪಬ್ಲಿಕ್ ವೈಡ್) ಮೆಥಡ್-ನೇಮ್ ಆದ square(ಸ್ಕ್ವೇರ್) ಮತ್ತು ಪೆರಂಥಿಸಿಸ್ ನ ಒಲಗಡೆ int a. |
05:15 | ಇಲ್ಲಿ ನಾವು int a ಯನ್ನು ನಮ್ಮ ಮೆಥಡ್-ನ ಪೆರಾಮಿಟರ್ ಆಗಿ ತೆಗೆದೊಕೊಂಡಿದ್ದೇವೆ. |
05:20 | ಈಗ ಕರ್ಲಿ-ಬ್ರೆಕೆಟ್ ನ ಒಳಗೆ, System ಡೊಟ್ out ಡೊಟ್ printlnಮತ್ತು ಪೆರೆಂಥಿಸಿಸ್-ನ ಒಳಗೆ aಇನ್-ಟುa ಎಂದು ಟಾಯಿಪ್ ಮಾಡಿ. |
05:37 | ಹೀಗೆ ನಾವು ಒಂದು ಸ್ಕ್ವೇರ್-ಮೆಥಡ್ ಅನ್ನು ಬರೆದೆವು. |
05:40 | ಅದು ಪೆರಮಿಟರ್ ಆಗಿ ಕೊಟ್ಟಿರುವ ಇಂಟಿಜರ್ ನ ಸ್ಕ್ವೇರ್ ಅನ್ನು ತೋರಿಸುತ್ತದೆ. |
05:48 | ಈಗ ನಾವು ಈ ಮೆಥಡ್-ಅನ್ನು “ಡಿಸ್-ಪ್ಲೇ ಮೆಸೇಜ್ ಮೆಥಡ್-ನಲ್ಲಿ” ಕಾಲ್ ಮಾಡೋಣ. |
05:53 | ಹಾಗಾಗಿsquare(ಸ್ಕ್ವೇರ್)ಹಾಗೇ ಪೆರಂಥಿಸಿಸ್ ನ ಒಳಗೆ ಇಂಟಿಜರ್ ಆದ5, ಹಾಗೇ ಸೆಮಿಕೊಲನ್ ಎಂದು ಟಾಯಿಪ್ ಮಾಡಿ. |
06:07 | ಎಪ್ಲಿಕೇಶನ್-ಅನ್ನು ರನ್ ಮಾಡಿ. |
06:12 | ಈಗ ನಾವು ಔಟ್-ಪುಟ್ ನಲ್ಲಿ 5 ರ ಸ್ಕ್ವೇರ್ ಆದ್ 25 ಅನ್ನು ಉತ್ತರವಾಗಿ ಕಾಣಬಹುದು. |
06:19 | ಈಗ ನಾವು ಎಪ್ಲಿಕೇಶನ್ ನ ನಡೆಯನ್ನು ತಿಳಿದುಕೊಳ್ಳೋಣ. |
06:24 | ಅದರ ಪ್ರಾರಂಭ main(ಮೇನ್)-ಮೆಥಡ್-ನಿಂದ ಆಗುತ್ತದೆ. |
06:29 | Main ಮೇನ್-ಮೆಥಡ್ನಲ್ಲಿ, ಮೊದಲು ನಾವು displayMessage(ಡಿಸ್-ಪ್ಲೇ ಮೆಸೇಜ್)' ಅನ್ನು ಕಾಲ್ ಮಾಡಿದ್ದೇವೆ. |
06:34 | ಅದಕ್ಕಾಗಿ ಕಂಟ್ರೋಲ್ displayMessage(ಡಿಸ್-ಪ್ಲೇ ಮೆಸೇಜ್) ಇದ್ದಲಿಗೆ ಹೋಗುತ್ತದೆ. |
06:40 | ಹಾಗಾಗಿdisplayMessage(ಡಿಸ್-ಪ್ಲೇ ಮೆಸೇಜ್)ನಲ್ಲಿರುವ ಸ್ಟೇಟ್-ಮೆಂಟ್ ಎಕ್ಸಿಕ್ಯೂಟ್ ಆಗುತ್ತದೆ. |
06:45 | ಮೊದಲನೆಯದು ಪ್ರಿಂಟ್-ಸ್ಟೇಟ್-ಮೆಂಟ್ ಆಗಿದೆ. |
06:50 | ನಂತರ ಅದು square ಮೆಥಡ್-ಗೆ ಹೋಗುತ್ತದೆ. |
06:54 | ಅದಕ್ಕ್ಕಾಗಿ ನಿಯಂತ್ರಣ square ಮೆಥಡ್-ಗೆ ಹಾರುತ್ತದೆ. |
06:57 | ಸ್ಕ್ವೇರ್-ಮೆಥಡ್ ಇಂಟಿಜರ್ 5 ನ್ನು ತೆಗೆದುಕೊಂಡು , ಅದರ ಸ್ಕ್ವೇರ್ ಆದ 25 ಅನ್ನು ತಿರುಗಿ ಕೊಡುತ್ತದೆ. |
07:06 | ನಂತರ ನಿಯಂತ್ರಣವುdisplayMessage(ಡಿಸ್-ಪ್ಲೇ ಮೆಸೆಜ್) ಗೆ ತಿರುಗಿ ಹೋಗುತ್ತದೆ. |
07:10 | ಮತ್ತದು 7 ಎಂಬ ಉತ್ತರವನ್ನು ಕೊಡುತ್ತದೆ. |
07:14 | ನಂತರ ನಿಯಂತ್ರಣವು Main(ಮೇನ್) ಫಂಕ್ಷನ್-ಗೆ ತಿರುಗಿ ಹಾರುತ್ತದೆ. |
07:20 | ಅಲ್ಲಿ main-ಮೆಥಡ್-ನಲ್ಲಿ ಯಾವುದೇ ಸ್ಟೇಟ್-ಮೆಂಟ್ ಗಳು ಎಕ್ಸಿಕ್ಯೂಟ್ ಆಗಲು ಬಾಕಿ ಉಳಿಯದೇ ಇರುವದರಿಂದ ಎಪ್ಲಿಕೇಶನ್ ಕೊನೆಗೊಳ್ಳುತ್ತದೆ. |
07:29 | ಸರಿ ಈಗ displayMessage(ಡಿಸ್-ಪ್ಲೇ ಮೆಸೇಜ್) ಅನ್ನು static(ಸ್ಟೆಟಿಕ್) ಎಂದು ಮಾಡೋಣ. |
07:35 | ಹಾಗಾಗಿ public(ಪಬ್ಲಿಕ್) ಆದ ನಂತರ static(ಸ್ಟೆಟಿಕ್) ಎಂದು ಟಾಯಿಪ್ ಮಾಡಿ. |
07:40 | ಸ್ಟಾಟಿಕ್-ಮೆಥಡ್ ನಲ್ಲಿ ನೊನ್-ಸ್ಟಾಟಿಕ್-ಮೆಥಡ್ ಅನ್ನು ಕರೆಮಾಡುವಂತಿಲ್ಲ ಎಂಬುದನ್ನು ನಾವು ನೋಡಬಹುದು. |
07:47 | ಹಾಗಾಗಿ ನಾವು ಈ ಕರೆಯನ್ನು ಕಮೆಂಟ್ ಮಾಡುತ್ತೇವೆ. |
07:52 | ಮೇನ್ ಇದು (static)ಸ್ಟೆಟಿಕ್-ಮೆಥಡ್ ಆಗಿರುವದರಿಂದ, ನಾವು ಸ್ಟೆಟಿಕ್-ಡಿಸ್-ಪ್ಲೇ-ಮೆಸೇಜ್('static displayMessage ) ಅನ್ನು ಇದರ ಒಳಗೆ ಕರೆ ಮಾಡಬಹುದು. |
08:02 | ಸ್ಟೆಟಿಕ್-ಮೆಥಡ್ ಗೆ ಒಬ್ಜೆಕ್ಟ್-ಅನ್ನು ರಚಿಸುವ ಅವಶ್ಯಕತೆ ಇರುವುದಿಲ್ಲ. |
08:07 | ಹಾಗಾಗಿ ನಾವು ಈ ಒಬ್ಜೆಕ್ಟ್-ನ ರಚನೆಯನ್ನು ಕಮೆಂಟ್ ಮಾಡೋಣ. |
08:11 | ಈmd'ಯನ್ನೂ ಕೂಡಾ ಅಳಿಸೋಣ. |
08:18 | ಎಪ್ಲಿಕೇಶನ್-ಅನ್ನು (Run) ರನ್ ಮಾಡೋಣ . |
08:22 | Hello Method(ಹೆಲ್ಲೊ ಮೆಥಡ್) ಮತ್ತು 7 ಎನ್ನುವ ಫಲಿತಾಂಶವನ್ನು ಕಾಣುತ್ತಿದ್ದೇವೆ. |
08:27 | 25 ಅನ್ನು ನಾವು ಕಾಣುತ್ತಿಲ್ಲ ಏಕೆಂದರೆ ಸ್ಕ್ವೇರ್ ಮೆಥಡ್ ನ ಕರೆಯನ್ನು ನಾವು ಕಮೆಂಟ್ ಮಾಡಿದ್ದೇವೆ. |
08:34 | ಬೇರೆ ಕ್ಲಾಸ್-ಗಳಿಂದಲೂ ನಾವು ಮೆಥಡ್ ಅನ್ನು ಕರೆ ಮಾಡಬಹುದು. |
08:38 | ಅದಕ್ಕಾಗಿ ನಾನುDemo(ಡೆಮೊ) ಎನ್ನುವ ಕ್ಲಾಸ್ ಅನ್ನು ರಚಿಸಿದ್ದೇನೆ. |
08:45 | ಕ್ಲಾಸ್ ನ ಒಳಗೆ ಒಂದು ಮೆಥಡ್ ಅನ್ನು ರಚಿಸಿ. |
08:48 | public void show(ಪಬ್ಲಿಕ್ ವಾಯಿಡ್ ಶೋ) ಪೆರಂಥಿಸಿಸ್ Enter(ಎಂಟರ್) ಎಂದು ಟಾಯಿಪ್ ಮಾಡಿ. |
08:56 | ಕರ್ಲಿ ಬ್ರೆಕೆಟ್ ಒಳಗೆ' System ಡೊಟ್ out ಡೊಟ್ println |
09:07 | I am from other class (ಆಯ್ ಎಮ್ ಫ್ರೊಮ್ ಅದರ್ ಕ್ಲಾಸ್). |
09:13 | ಫೈಲ್ ಅನ್ನು 'Save'(ಸೇವ್) ಮಾಡಿ. |
09:16 | MethodDemo(ಮೆಥಡ್ ಡೆಮೊ) ಕ್ಲಾಸ್ ಗೆ ತಿರುಗಿ ಬನ್ನಿ |
09:19 | ಈಗ ನಾವುshow(ಶೋ) ಮೆಥಡ್-ಅನ್ನು MethodDemo(ಮೆಥಡ್ ಡೆಮೊ) ಕ್ಲಾಸ್ ಮೆಥಡ್-ನಲ್ಲಿ ಕರೆ ಮಾಡುತ್ತೇವೆ. |
09:28 | ಅದಕ್ಕಾಗಿ ನಾವು 'Demo ಡೆಮೊ ಕ್ಲಾಸ್ ನ ಒಬ್ಜೆಕ್ಟ್-ಅನ್ನು ರಚಿಸಬೇಕಾಗುವದು. |
09:22 | ಇದು ಏಕೆಂದರೆ show(ಶೋ) ಮೆಥಡ್ ಇದು ಕ್ಲಾಸ್ Demo(ಡೆಮೊ) ಗೆ ಸೇರಿದೆ. |
09:38 | ಹಾಗಾಗಿ Demo d=new Demo ಪೆರಂಥಿಸಿಸ್ ಸೆಮಿಕೊಲನ್ ಎಂದು ಟಾಯಿಪ್ ಮಾಡಿ. |
09:48 | ಅದಾದ ನಂತರshowಮೆಥಡ್ ಅನ್ನು ಕರೆ ಮಾಡಿ. |
09:54 | ಎಪ್ಲಿಕೇಶನ್ ಅನ್ನು 'Run(ರನ್)' ಮಾಡೋಣ. |
09:58 | I am from other class(ಆಯ್ ಎಮ್ ಫ್ರೊಮ್ ಅದರ್ ಕ್ಲಾಸ್) ಎನ್ನುವದನ್ನು ಕಾಣುತ್ತಿದ್ದೇವೆ. |
10:04 | ಹೀಗೆ ಜಾವಾದಲ್ಲಿ ಮೆಥಡ್-ಗಳನ್ನು ಉಪಯೋಗಿಸುತ್ತಾರೆ. |
10:09 | ಮೆಥಡ್-ನೇಮ್ ಮತ್ತು ಪೆರಮೀಟರ್-ಗಳು ಮೆಥಡ್-ನ ಸಿಗ್ನೇಚರ್-ಅನ್ನು ಉಂಟುಮಾಡುತ್ತವೆ. |
10:14 | ಹಾಗೆಯೇ ಕರ್ಲಿ-ಬ್ರೆಕೆಟ್ ಮತ್ತು ಸ್ಟೇಟ್-ಮೆಂಟ್ ಗಳು ಮೆಥಡ್ ನ ಶರೀರವನ್ನು ಉಂಟುಮಾಡುತ್ತವೆ. |
10:23 | ಹಾಗಾಗಿ ನಾವು ಈ ಟ್ಯುಟೊರಿಯಲ್-ನಲ್ಲಿ , |
10:25 | ಮೆಥಡ್ ಅನ್ನು ರಚಿಸುವುದು |
10:27 | ಮೆಥಡ್ ಅನ್ನು ಕರೆ ಮಾಡುವುದು. |
10:29 | ಮತ್ತು ಮೆಥಡ್-ನ ಬೇರೆ ಬೇರೆ ಸಿಗ್ನೇಚರ್ಗಳನ್ನು ಕಲಿತೆವು. |
10:32 | ನಿಮ್ಮ ಅಭ್ಯಾಸಕ್ಕಾಗಿ ಇಂಟಿಜರ್ ಒಂದರ ಕ್ಯೂಬ್ ಅನ್ನು ಮುದ್ರಿಸುವ ಮೆಥಡ್ ಅನ್ನು ರಚಿಸಿ. |
10:38 | ಸ್ಪೋಕನ್ ಟ್ಯುಟೋರಿಯಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, |
10:41 | [1]ಇಲ್ಲಿನ ವೀಡಿಯೋ ವನ್ನು ನೋಡಿ. |
10:47 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್-ನ ಬಗ್ಗೆ ತಿಳಿಸಿಕೊಡುತ್ತದೆ. |
10:50 | ನಿಮ್ಮಲ್ಲಿ ಉತ್ತಮ ಬೇಂಡ್-ವಿಡ್ತ್ ಇರದಿದ್ದರೆ, ಡೌನ್-ಲೋಡ್ ಮಾಡಿಕೊಂಡು ನೋಡಬಹುದು. |
10:54 | ಸ್ಪೋಕನ್ ಟ್ಯುಟೊರಿಯಲ್ ಪ್ರೋಜೆಕ್ಟ್ ಟೀಮ್ |
10:56 | ಸ್ಪೋಕನ್ ಟ್ಯುಟೊರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರವನ್ನೂ ಮಾಡುತ್ತದೆ. |
10:58 | ಅಂತರ್ಜಾಲ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
11:02 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಅನ್ನು ಸಂಪರ್ಕಿಸಿ. |
11:08 | ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಇದು Talk to a Teacher ಯೋಜನೆಯ ಭಾಗವಾಗಿದೆ. |
11:12 | ಈ ಯೋಜನೆಯನ್ನು ರಾಷ್ಟ್ರೀಯ-ಸಾಕ್ಷರತಾ-ಮಿಶನ್ ಎಂಬ ಸಂಸ್ಥೆ ICT, MHRD ಭಾರತ ಸರಕಾರ ಇದರ ದ್ವಾರಾ ಪ್ರಸ್ತುತಪಡಿಸುತ್ತಿದೆ. |
11:18 | ಇದರ ಬಗ್ಗೆ ಹೆಚ್ಚಿನಮಾಹಿತಿ [2]ಇಲ್ಲಿ ಸಿಗುತ್ತದೆ. |
11:27 | ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದು ತಲುಪಿದ್ದೇವೆ. |
11:29 | ಧನ್ಯವಾದಗಳು. |
11:30 | ಭಾಷಾಂತರ ಮಾಡಿ ಧ್ವನಿ ನೀಡಿದವರು ವಿದ್ವಾನ್.ನವೀನ್ ಭಟ್ ಉಪ್ಪಿನಪಟ್ಟಣ.
ಜೈ ಹಿಂದ್ |