KTouch/S1/Getting-Started-with-Ktouch/Kannada
From Script | Spoken-Tutorial
Time | Narration |
00:00 | ಕೆಟಚ್ ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ಮೂಲಕ ನೀವು ಕೆಟಚ್ ಹಾಗೂ ಕೆಟಚ್ ಇಂಟರ್ಫೇಸ್ ಎನ್ನುವ ವಿಷಯಗಳನ್ನು ತಿಳಿದುಕೊಳ್ಳುವಿರಿ. |
00:10 | ನೀವು ಇಲ್ಲಿ, |
00:11 | ಕಂಪ್ಯುಟರ್ ನ ಆಂಗ್ಲ ಅಕ್ಷರಗಳುಳ್ಳ ಕೀಬೋರ್ಡನ್ನು ಸ್ಪಷ್ಟವಾಗಿ ಹಾಗೂ ವೇಗವಾಗಿ ಕುಶಲತೆಯಿಂದ ಹೇಗೆ ಉಪಯೋಗಿಸುವುದೆಂದು ತಿಳಿದುಕೊಳ್ಳಬಹುದು. |
00:18 | ನೀವು, |
00:20 | ಕೀಬೋರ್ಡನ್ನು ವೀಕ್ಷಿಸದೇ ನಿರಂತರವಾಗಿ ಹೇಗೆ ಟೈಪ್ ಮಾಡುವುದು ಎಂಬುದನ್ನೂ ಇಲ್ಲಿ ಕಲಿಯಬಹುದು. |
00:24 | ಕೆಟಚ್ ಎಂದರೇನು? |
00:27 | ಕೆಟಚ್ ಎನ್ನುವುದೊಂದು ಟೈಪಿಂಗ್ ಬೋಧಕವಾಗಿದೆ. ಇದು ನಿಮಗೆ ಆನ್-ಲೈನ್ ಇಂಟರಾಕ್ಟೀವ್ ಕೀಬೋರ್ಡ್ ನ ಸಹಾಯದಿಂದ ಟೈಪ್ ಹೇಗೆ ಮಾಡಬೇಕೆಂದು ತಿಳಿಸಿಕೊಡುತ್ತದೆ. |
00:33 | ನೀವು ನಿಮ್ಮ ವೇಗಕ್ಕೆ ಅನುಸಾರವಾಗಿ ಇದನ್ನು ಕಲಿಯಬಹುದು. |
00:36 | ಇದರಿಂದ ನೀವು ನಿಮ್ಮ ಟೈಪಿಂಗ್ ವೇಗವನ್ನು ಪರಿಶುದ್ಧವಾಗಿ ಕ್ರಮಶಃ ವರ್ಧಿಸಬಹುದು. |
00:43 | ಕೆಟಚ್ ನಲ್ಲಿ ನಿಮ್ಮ ಅಭ್ಯಾಸಕ್ಕಾಗಿ ಕಠಿನತೆಯ ವಿಭಿನ್ನ ಸ್ತರಗಳಲ್ಲಿ ಪಾಠಗಳು ಅಥವಾ ಟೈಪಿಂಗ್ ಮಾದರಿಗಳು ಲಭ್ಯವಾಗುತ್ತವೆ. |
00:50 | ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ನಲ್ಲಿ ಕೆಟಚ್ 1.7.1 ತಂತ್ರಾಂಶವನ್ನು ಉಪಯೊಗಿಸುತ್ತಿದ್ದೇವೆ. |
00:59 | ಉಬಂಟು ತಂತ್ರಾಂಶ ಕೇಂದ್ರದ ಸಹಾಯದಿಂದ ನೀವು ಕೆಟಚ್ ಅನ್ನು ಇನ್ಸ್ಟಾಲ್ ಮಾಡಬಹುದು. |
01:03 | ಉಬುಂಟು ತಂತ್ರಾಂಶ ಕೇಂದ್ರದ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಇದೇ ವೆಬ್-ಸೈಟ್ ನಲ್ಲಿರುವ ಉಬುಂಟು ಲಿನಕ್ಸ್ ಎಂಬ ಪಾಠವನ್ನು ನೋಡಿ. |
01:11 | ಈಗ ಕೆಟಚ್ ಒಪನ್ ಮಾಡೋಣ. |
01:13 | ಮೊದಲಿಗೆ ಡೆಸ್ಕ್-ಟಾಪ್ ನ ಎಡ ಮೇಲ್ಭಾಗದಲ್ಲಿ ಗೋಲಾಕಾರದಲ್ಲಿರುವ Dash Home ಕ್ಲಿಕ್ ಮಾಡಿ. |
01:21 | ಇಲ್ಲಿ ಸರ್ಚ್ ಬಾಕ್ಸ್ ಕಾಣಸಿಗುತ್ತದೆ. |
01:24 | ಅಲ್ಲಿ KTouch ಎಂದು ಟೈಪ್ ಮಾಡಿ. |
01:28 | ಸರ್ಚ್-ಬಾಕ್ಸ್ ನ ಕೆಳಗೆ ಕೆಟಚ್ ನ ಐಕಾನ್ ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿ. |
01:34 | ಕೆಟಚ್ ನ ವಿಂಡೋಸ್ ಕಾಣುತ್ತದೆ. |
01:36 | ವೈಕಲ್ಪಿಕವಾಗಿ ನೀವು ಟರ್ಮಿನಲ್ ನ ಸಹಾಯದಿಂದ ಕೆಟಚ್ ಅನ್ನು ಒಪನ್ ಮಾಡಬಹುದು. |
01:41 | ಟರ್ಮಿನಲ್ಲನ್ನು ಒಪನ್ ಮಾಡಲು Ctrl, Alt ಮತ್ತು T ಇವನ್ನು ಒಟ್ಟಿಗೆ ಕ್ಲಿಕ್ ಮಾಡಿ. |
01:47 | ಕೆಟಚ್ ಒಪನ್ ಮಾಡಲು ಟರ್ಮಿನಲ್ ನಲ್ಲಿ ktouch ಎಂದು ಟೈಪ್ ಮಾಡಿ Enter ಒತ್ತಿ. |
01:55 | ಈಗ ನಾವು ಕೆಟಚ್ ಇಂಟರ್-ಫೇಸ್ ನೊಂದಿಗೆ ಪರಿಚಿತರಾಗೋಣ. |
01:59 | ಮೇನ್ ಮೆನ್ಯುನಲ್ಲಿ File, Training, Settings, Help ಎಂಬ ಮೆನ್ಯುಗಳು ಇವೆ. |
02:06 | ಟೈಪಿಂಗ್ ಅಭ್ಯಾಸಕ್ಕಾಗಿ Start New Session ಎಂಬಲ್ಲಿ ಕ್ಲಿಕ್ ಮಾಡಿ ಹೊಸ ಪಾಠವನ್ನು ಶುರುಮಾಡಿ. |
02:11 | ಟೈಪಿಂಗ್ ಮಾಡುವಾಗ ನಿಲ್ಲಿಸಲು Pause Session ಎಂಬಲ್ಲಿ ಕ್ಲಿಕ್ ಮಾಡಿ. |
02:14 | ನಿಮ್ಮ ಟೈಪಿಂಗ್ ಸ್ತರವನ್ನು ಪರೀಕ್ಷಿಸಲು Lecture Statistics ಎಂಬಲ್ಲಿ ಕ್ಲಿಕ್ ಮಾಡಿ. |
02:19 | Level ಎನ್ನುವುದು ಟೈಪಿಂಗ್ ಸಮಯದಲ್ಲಿ ಉಪಯೋಗಿಸುವ ಕೀಸ್ ನ ಕಾಠಿಣ್ಯದ ಸ್ತರವನ್ನು ಸೂಚಿಸುತ್ತದೆ. |
02:27 | Speed ಎನ್ನುವುದು ನೀವು ಪ್ರತಿನಿಮಿಷ ಎಷ್ಟು ಅಕ್ಷರಗಳನ್ನು ಟೈಪ್ ಮಾಡಿರುವಿರೆಂದು ತೋರಿಸುತ್ತದೆ. |
02:32 | Correctness ಸಂಕೇತವು ನೀವು ಎಷ್ಟು ಅಕ್ಷರಗಳನ್ನು ಶುದ್ಧವಾಗಿ ಟೈಪ್ ಮಾಡಿರುವಿರೆಂದು ತೋರಿಸುತ್ತದೆ. |
02:39 | New Characters in This Level ಎನ್ನುವಲ್ಲಿ ನೀವು ಅಭ್ಯಾಸ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ. |
02:47 | Teacher’s Line ಎನ್ನುವಲ್ಲಿ ನೀವು ಟೈಪ್ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ. |
02:51 | Student’s Line ಎನ್ನುವಲ್ಲಿ ನೀವು ಕೀಬೋರ್ಡ್ ಉಪಯೊಗಿಸಿ ಟೈಪ್ ಮಾಡಿರುವ ಅಕ್ಷರಗಳು ತೋರಲ್ಪಡುತ್ತವೆ. |
02:58 | ಮಧ್ಯದಲ್ಲಿ ಕೀಬೋರ್ಡ್ ಕಾಣಸಿಗುತ್ತದೆ. |
03:02 | ಕೀಬೋರ್ಡಿನ ಮೊದಲ ಪಂಕ್ತಿಯಲ್ಲಿ ಸಂಖ್ಯೆಗಳು, ವಿಶಿಷ್ಟಾಕ್ಷರಗಳು ಮತ್ತು Backspace ಇವೆ. |
03:09 | ಟೈಪ್ ಮಾಡಿದ ಅಕ್ಷರಗಳನ್ನು ಅಳಿಸಲು Backspace ಎಂಬ ಕೀಯನ್ನು ಬಳಸಿ. |
03:13 | ಕೀಬೋರ್ಡಿನ ಎರಡನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ Tab ಇವೆ. |
03:20 | ಕೀಬೋರ್ಡಿನ ಮೂರನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, colon, semicolon ಹಾಗೂ Caps lock ಇವೆ. |
03:28 | ಟೈಪ್ ಮಾಡುವಾಗ ಕೆಳಗಿನ ಪಂಕ್ತಿಗೆ ಹೋಗಲು Enter ಕೀಯನ್ನು ಒತ್ತಿ. |
03:33 | ದೊಡ್ಡ ಅಕ್ಷರಗಳಿಗಾಗಿ Caps Lock ಕೀಯನ್ನು ಒತ್ತಿ. |
03:37 | ಕೀಬೋರ್ಡಿನ ನಾಲ್ಕನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ ಎರಡು Shift ಕೀಗಳು ಇವೆ. |
03:45 | ದೊಡ್ಡ ಅಕ್ಷರವನ್ನು ಟೈಪ್ ಮಾಡಲು ಆ ಅಕ್ಷರವನ್ನು Shift ನ ಜೊತೆಗೆ ಒತ್ತಿ. |
03:52 | ಕೀಗಳಲ್ಲಿ ಮೇಲಿರುವ ಅಕ್ಷರಗಳನ್ನು ಟೈಪ್ ಮಾಡಲು Shift ಕೀನ ಜೊತೆಗೆ ಟೈಪ್ ಮಾಡಿ. |
03:59 | ಉದಾಹರಣೆಗೆ, 1 ಸಂಖ್ಯೆಯಿರುವ ಕೀನಲ್ಲಿ ಆಶ್ಚರ್ಯಸೂಚಕ ಚಿಹ್ನೆಯೂ ಇದೆ.
ಆಗ ಆಶ್ಚರ್ಯಸೂಚಕ ಚಿಹ್ನೆಯನ್ನು ಟೈಪ್ ಮಾಡಲು Shift ಕೀನ ಜೊತೆಗೆ 1 ಅನ್ನು ಒತ್ತಿ. |
04:11 | ಕೀಬೋರ್ಡಿನ ಐದನೇಯ ಪಂಕ್ತಿಯಲ್ಲಿ Ctrl, Alt ಹಾಗೂ Function ಕೀಗಳು ಇವೆ. ಇಲ್ಲಿ space ಕೀ ಕೂಡಾ ಇದೆ. |
04:20 | ಈಗ ನಾವು KTouch ನ ಕೀಬೋರ್ಡ್, Laptop ಕೀಬೋರ್ಡ್ ಹಾಗೂ Desktop ಕೀಬೋರ್ಡ್ ಇವುಗಳಲ್ಲಿ ಏನು ವ್ಯತ್ಯಾಸ ಎಂದು ನೋಡೋಣ. |
04:29 | ಇಲ್ಲಿ ನಾವು ತಿಳಿಯಬೇಕಾದುದೇನೆಂದರೆ KTouch ನ ಕೀಬೋರ್ಡ್ ಹಾಗೂ ಯಾವ ಕೀಬೋರ್ಡ್ Desktops ಹಾಗೂ Laptops ನಲ್ಲಿ ಉಪಯೋಗಿಸುವರೋ ಇವೆರಡೂ ಒಂದೇ ಎಂದು. |
04:36 | ಈಗ ನಾವು ಕೀಬೋರ್ಡ್ ನಲ್ಲಿ ಬೆರಳುಗಳ ಉಚಿತಸ್ಥಾನ ಯಾವುದೆಂದು ನೋಡೋಣ. |
04:41 | ಈ ಸ್ಲೈಡನ್ನು ನೋಡಿ. |
04:42 | ಇದು ಬೆರಳುಗಳನ್ನು ಹಾಗೂ ಅವುಗಳ ಹೆಸರನ್ನು ತೋರಿಸುತ್ತದೆ. |
04:46 | ಎಡದಿಂದ ಬಲಕ್ಕೆ ಕ್ರಮವಾಗಿ ಬೆರಳುಗಳ ಹೆಸರು ಹೀಗಿವೆ -
ಕಿರುಬೆರಳು (Little finger), |
04:51 | ಅನಾಮಿಕ ಬೆರಳು (Ring finger),
ಮಧ್ಯದ ಬೆರಳು (Middle finger), |
04:54 | ತೋರ್ಬೆರಳು (Index finger) ಹಾಗೂ
ಹೆಬ್ಬೆರಳು |
04:59 | ನಿಮ್ಮ ಕೀಬೋರ್ಡನಲ್ಲಿ ನಿಮ್ಮ ಎಡಗೈಯನ್ನು ಕೀಬೋರ್ಡಿನ ಎಡಭಾಗಕ್ಕೆ ಇಡಿ. |
05:03 | ಈಗ ನಿಮ್ಮ ಕಿರುಬೆರಳು ‘A’ ಎನ್ನುವ ಅಕ್ಷರದ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ. |
05:07 | ಅನಾಮಿಕ ಬೆರಳು (Ring finger) ‘S’ ಎಂಬ ಅಕ್ಷರದ ಮೇಲೆ, |
05:10 | ಮಧ್ಯದ ಬೆರಳು (Middle finger) ‘D’ ಎಂಬ ಅಕ್ಷರದ ಮೇಲೆ, |
05:13 | ತೋರ್ಬೆರಳು (Index finger)) ‘F’ ಎಂಬ ಅಕ್ಷರದ ಮೇಲೆ ಇರಬೇಕು. |
05:17 | ಈಗ ನಿಮ್ಮ ಬಲಗೈಯನ್ನು ಕೀಬೋರ್ಡಿನ ಬಲಭಾಗದಲ್ಲಿಡಿ. |
05:20 | ಈಗ ಕಿರುಬೆರಳು (little finger) colon/semi-colon ಎಂಬ ಕೀಯ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ. |
05:25 | ಅನಾಮಿಕ ಬೆರಳು (Ring finger) ‘L’ ಎಂಬ ಅಕ್ಷರದ ಮೇಲೆ, |
05:28 | ಮಧ್ಯದ ಬೆರಳು (Middle finger) ‘K’ ಎಂಬ ಅಕ್ಷರದ ಮೇಲೆ, |
05:30 | ತೋರ್ಬೆರಳು (Index finger) ‘J’ ಎಂಬ ಅಕ್ಷರದ ಮೇಲೆ ಇರಬೇಕು. |
05:34 | ನಿಮ್ಮ ಬಲ ಹೆಬ್ಬೆರಳನ್ನು (right thumb) space ಎಂಬ ಕೀಯನ್ನು ಒತ್ತಲು ಉಪಯೋಗಿಸಿ. |
05:37 | ಮೊದಲಬಾರಿ ಕೆಟಚ್ಚನ್ನು ಒಪನ್ ಮಾಡಿದಾಗ Teacher’s Line ನಲ್ಲಿ ಡೀಫಾಲ್ಟ್ ಆದ ಬರಹವು ಕಾಣಸಿಗುತ್ತದೆ. |
05:44 | ಈ ಬರಹವು ಪಾಠಗಳನ್ನು ಹೇಗೆ ಆಯ್ದುಕೊಳ್ಳಬೇಕು ಹಾಗೂ ಹೇಗೆ ಅವುಗಳನ್ನು ಟೈಪ್ ಮಾಡಬೇಕು ಎಂಬ ನಿರ್ದೇಶಗಳನ್ನು ಸೂಚೀಬದ್ಧವಾಗಿರಿಸುತ್ತದೆ. |
05:51 | ನಮ್ಮ ಉದ್ದೇಶ ಈ ಟ್ಯುಟೋರಿಯಲ್ ಆಗಿರುವುದರಿಂದ ನಾವು ಈ ಡೀಫಾಲ್ಟ್ ಬರಹವನ್ನು ಬಿಟ್ಟು ಪಾಠವನ್ನು ಆಯ್ದುಕೊಳ್ಳೋಣ. |
05:57 | ಬೇಕಿದ್ದಲ್ಲಿ ನೀವು ಈ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಡೀಫಾಲ್ಟ್ ಬರಹವನ್ನು ಟೈಪ್ ಮಾಡಬಹುದು. |
06:02 | ಈಗ ಪಾಠವನ್ನು ಟೈಪ್ ಮಾಡಲು lecture ಆಯ್ದುಕೊಳ್ಳೋಣ. |
06:07 | ಮೇನ್ ಮೆನ್ಯುವಿನಲ್ಲಿ File ಎಂದು ಆರಿಸಿ Open Lecture ಎನ್ನುವಲ್ಲಿ ಕ್ಲಿಕ್ ಮಾಡಿ. |
06:12 | Select Training Lecture File – ‘KTouch’ ಎಂಬ ಡಯಲಾಗ್ ಬಾಕ್ಸ್ ಕಾಣಸಿಗುತ್ತದೆ. |
06:17 | ಕೆಳಗಿರುವ ಫೋಲ್ಡರ್ ಪಾಥ್ ಅನ್ನು ಹುಡುಕಿ -
Root->usr->share->kde4->apps->Ktouch |
06:31 | english.ktouch.xml ಎಂದು ಆರಿಸಿ Open ಎಂಬಲ್ಲಿ ಕ್ಲಿಕ್ ಮಾಡಿ. |
06:36 | ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಅನ್ಯಸಮೂಹವನ್ನು ತೋರಿಸುತ್ತದೆ ಎನ್ನುವುದನ್ನು ಗಮನಿಸಿ. |
06:41 | ಈಗ ಟೈಪಿಂಗ್ ಅನ್ನು ಆರಂಭಿಸೋಣ. |
06:43 | ಡೀಫಾಲ್ಟ್ ಆಗಿ ಪಾಠವು ಪ್ರಥಮಸ್ತರದಲ್ಲಿದ್ದು ಅದರ ವೇಗವು ಶೂನ್ಯವಾಗಿರುತ್ತದೆ. |
06:49 | ಈ ಸ್ತರದಲ್ಲಿ ಹೊಸ ಅಕ್ಷರಗಳು ಇವೆ, ಅದನ್ನು ನಾವಿಲ್ಲಿ ಅಭ್ಯಾಸ ಮಾಡೋಣ. |
06:55 | cursor ಎನ್ನುವುದು Student’s Line ನಲ್ಲಿ ಇದೆ ಎನ್ನುವುದನ್ನು ಗಮನಿಸಿ. |
06:58 | ನಿಮ್ಮ ಕೀಬೋರ್ಡನ್ನು ಉಪಯೊಗಿಸಿ teacher's line ನಲ್ಲಿ ತೋರುವ ಅಕ್ಷರಗಳನ್ನು ಟೈಪ್ ಮಾಡಿ.
|
07:09 | ನಾವು ಟೈಪ್ ಮಾಡುತ್ತಿದ್ದಂತೆಯೇ ಆ ಅಕ್ಷರಗಳು Student’s Line ನಲ್ಲಿ ಮೂಡುತ್ತವೆ ಎನ್ನುವುದನ್ನು ಗಮನಿಸಿ. |
07:14 | ಈಗ ವೇಗಸ್ಥಾನವನ್ನು ಗಮನಿಸಿ. |
07:16 | ನೀವು ಟೈಪ್ ಮಾಡುವಾಗ ನಿಮ್ಮ ಟೈಪಿಂಗ್ ನ ವೇಗಕ್ಕೆ ಅನುಸಾರವಾಗಿ ವೇಗಸ್ಥಾನದ ಸಂಖ್ಯೆಯಲ್ಲಿ ಏರಿಳಿತವಾಗುತ್ತದೆ. |
07:22 | ನೀವು ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗದ ಗಣನೆಯು ಕೂಡ ನಿಲ್ಲುತ್ತದೆ. |
07:25 | ಈಗ ನಾವು Teacher’s Line ನಲ್ಲಿ ಇಲ್ಲದಿರುವ 7 ಮತ್ತು 8 ನ್ನು ಟೈಪ್ ಮಾಡೋಣ. |
07:31 | Student Line ಎನ್ನುವುದು ಕೆಂಪುಬಣ್ಣಕ್ಕೆ ತಿರುಗಿತು. |
07:34 | ಯಾಕೆ? ಏಕೆಂದರೆ, ನಾವು ತಪ್ಪು ಟೈಪ್ ಮಾಡಿದ್ದೆವು. |
07:40 | ತಪ್ಪನ್ನು ಅಳಿಸಿ ಟೈಪಿಂಗನ್ನು ಮುಂದುವರೆಸೋಣ. |
07:56 | ನೀವು ಪಂಕ್ತಿಯ ಕೊನೆಯನ್ನು ಯಾವಾಗ ಮುಟ್ಟುತ್ತೀರೊ ಆಗ ಎರಡನೇಯ ಪಂಕ್ತಿಗೆ ಹೋಗಲು Enter ಅನ್ನು ಒತ್ತಿ. |
08:02 | ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಎರಡನೇಯ ಸಮೂಹವನ್ನು ತೋರಿಸುತ್ತದೆ. |
08:07 | Student’s line ಎನ್ನುವುದು ಖಾಲಿಯಾಗಿದೆ. |
08:11 | ಈಗ ನಾವು ಎಷ್ಟು ಸರಿಯಾಗಿ ಟೈಪ್ ಮಾಡಿದ್ದೇವೆ ಎನ್ನುವುದನ್ನು ನೋಡೋಣ. |
08:14 | Correctness ಎಂಬುದು ನೀವು ಎಶ್ಟು ಪ್ರತಿಶತ ಶುದ್ಧವಾಗಿ ಟೈಪ್ ಮಾಡಿದ್ದೀರೆಂದು ತೋರಿಸುತ್ತದೆ. ಉದಾಹರೆಣೆಗೆ, 80 ಪ್ರತಿಶತ. |
08:23 | ನಾವು ನಮ್ಮ ಮೊದಲ ಟೈಪಿಂಗ್ ಪಾಠವನ್ನು ಮುಗಿಸಿದ್ದೇವೆ. |
08:26 | ಮೊದಮೊದಲು ಮಂದಗತಿಯಲ್ಲಿ ಪರಿಶುದ್ಧವಾಗಿ ಟೈಪಿಂಗ್ ಅಭ್ಯಾಸ ಮಾಡಲು ಇದೊಂದು ಉತ್ತಮ ಪದ್ಧತಿಯಾಗಿದೆ. |
08:31 | ನಾವು ದೋಷವಿಲ್ಲದೇ ಸರಿಯಾಗಿ ಟೈಪ್ ಮಾಡುವುದನ್ನು ಅಭ್ಯಾಸಮಾಡಿದಲ್ಲಿ ಸುಲಭವಾಗಿ ನಮ್ಮ ಟೈಪಿಂಗ್ ವೇಗವನ್ನು ಹೆಚ್ಚಿಸಬಹುದು. |
08:37 | ಈಗ ಹೊಸ ಟೈಪಿಂಗ್ ಪಾಠವನ್ನು ಆರಂಭಿಸೋಣ. |
08:40 | Start New Session ಎಂಬಲ್ಲಿ ಕ್ಲಿಕ್ ಮಾಡಿ. |
08:42 | Start New Training Session – ‘KTouch’ ಎಂಬ ಡಯಲಾಗ್ ಬಾಕ್ಸ್ ನಲ್ಲಿ Start from First Level ಎಂಬಲ್ಲಿ ಕ್ಲಿಕ್ ಮಾಡಿ. |
08:50 | ನೀವೇನು ನೋಡುತ್ತಿರುವಿರಿ?
|
08:52 | ಒಂದು ಅಕ್ಷರಗಳ ಸಮೂಹವು Teacher’s Line ನಲ್ಲಿ ಕಾಣುತ್ತಿದೆ. |
08:55 | Student’s Line ಎನ್ನುವುದು ಅಕ್ಷರಗಳಿಲ್ಲದೆಯೆ ಖಾಲಿ ಇದೆ. |
09:00 | ಈಗ ಟೈಪಿಂಗ್ ಆರಂಭಿಸೋಣ. |
09:05 | ಅಭ್ಯಾಸದ ಅವಧಿಯಲ್ಲಿ ನಿಮಗೆ ಒಮ್ಮೆ ನಿಲ್ಲಿಸಿ ಅನಂತರ ಮುಂದುವರೆಯಬೇಕೆನ್ನಿಸಬಹುದು. |
09:09 | ಆಗ ಹೇಗೆ ಅವಧಿಯನ್ನು ನಿಲ್ಲಿಸುವಿರಿ? |
09:12 | pause session ಎಂಬಲ್ಲಿ ಕ್ಲಿಕ್ ಮಾಡಿ. |
09:14 | ಈಗ ನೋಡಿ, ವೇಗವು ಕಡಿಮೆಯಾಗಿಲ್ಲ. |
09:17 | ನೆನಪಿನಲ್ಲಿಡಿ, ಅವಧಿಯನ್ನು ನಿಲ್ಲಿಸದೇ ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗವು ಕಡಿಮೆಯಾಗುತ್ತದೆ. |
09:23 | ಪುನಃ ಟೈಪಿಂಗ್ ಅನ್ನು ಅನುವರ್ತಿಸಲು Teacher’s line ನಲ್ಲಿರುವ ಮುಂದಿನ ಅಕ್ಷರವನ್ನು ಟೈಪ್ ಮಾಡಿ. |
09:39 | ಯಾವಾಗ ನಿಮ್ಮ ಟೈಪಿಂಗ್ ಮುಗಿಯುತ್ತದೆಯೊ ಆಗ Correctness ಕ್ಷೇತ್ರವನ್ನು ನೋಡಿ. ಅದು ಟೈಪಿಂಗ್ ಪರಿಶುದ್ಧತೆಯನ್ನು ತೋರಿಸುತ್ತದೆ. |
09:46 | ಈಗ ನಾವು ಕೆಟಚ್ ನ ಪರಿಚಯಾತ್ಮಕವಾದ ಈ ಪಾಠದ ಕೊನೆಗೆ ಬಂದಿದ್ದೇವೆ. |
09:50 | ಈ ಪಾಠದಲ್ಲಿ ನಾವು KTouch interface ಎಂಬ ವಿಷಯವನ್ನು ತಿಳಿದೆವು. ಇದರ ಜೊತೆಗೆ ನಾವು ಕೀಬೋರ್ಡಿನಲ್ಲಿ ನಮ್ಮ ಬೆರಳುಗಳನ್ನು ಹೇಗೆ ಇಡಬೇಕೆನ್ನುವುದನ್ನೂ ತಿಳಿದುಕೊಂಡೆವು. |
09:59 | Teacher’s Line ನನ್ನು ನೋಡಿ ಅಕ್ಷರಗಳನ್ನು ಟೈಪ್ ಮಾಡಿ ನಿಮ್ಮ ಮೊದಲ ಪಾಠವನ್ನು ಮುಗಿಸಿ. |
10:04 | ಇಲ್ಲಿ ನಿಮಗೊಂದು ಕೆಲಸವಿದೆ. |
10:06 | ಕೆಟಚ್ಚನ್ನು ಒಪನ್ ಮಾಡಿ ಮೊದಲ ಸ್ತರದ ಟೈಪಿಂಗ್ ಪಾಠವನ್ನು ಮುಗಿಸಿ. ಈ ಸ್ತರದಲ್ಲಿ ಟೈಪಿಂಗ್ ಅಭ್ಯಾಸವನ್ನು ಮಾಡಿ. |
10:13 | ಪ್ರತಿಯೊಂದು ಕೀಯನ್ನೂ ಸರಿಯಾದ ಬೆರಳುಗಳೊಂದಿಗೆ ಪ್ರಯೋಗಿಸಿ. |
10:18 | ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
10:24 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
10:28 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
10:37 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
10:43 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
10:47 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
10:55 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
11:06 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಬೆಂಗಳೂರಿನಿಂದ ವಾಸುದೇವ.
ಧನ್ಯವಾದಗಳು. |