C-and-Cpp/C2/Nested-If-And-Switch-Statement/Kannada

From Script | Spoken-Tutorial
Revision as of 13:56, 25 September 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಸಿ ಮತ್ತು ಸಿ ಪ್ಲಸ್ ಪ್ಲಸ್ (C++) ನಲ್ಲಿ ನೆಸ್ಟೆಡ್ ಇಫ್ ಮತ್ತು ಸ್ವಿಚ್ ಸ್ಟೇಟ್ಮೆಂಟ್ ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವ ಅಂಶಗಳು:
00:09 ನೆಸ್ಟೆಡ್ ಇಫ್ ಸ್ಟೇಟ್ಮೆಂಟ್ ಮತ್ತು ಸ್ವಿಚ್ ಸ್ಟೇಟ್ಮೆಂಟ್ ಗಳನ್ನು ಉಪಯೋಗಿಸುವುದು ಹೇಗೆ?
00:13 ಇದನ್ನು ನಾವು ಉದಾಹರಣೆಯೊಂದಿಗೆ ಮಾಡೋಣ.
00:17 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ.
00:30 ಮೊದಲು, ನೆಸ್ಟೆಡ್ ಇಫ್ ಮತ್ತು ಸ್ವಿಚ್ ಸ್ಟೇಟ್ಮೆಂಟ್ ಗಳನ್ನು ಬರೆಯುವ ಬಗೆಯನ್ನು, ಉದಾಹರಣೆಯೊಂದಿಗೆ ಕಲಿಯೋಣ.
00:36 ನಾನೀಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಟೈಪ್ ಮಾಡಿದ್ದೇನೆ. ಅದನ್ನು ನೋಡೋಣ.
00:40 ಈ ಪ್ರೊಗ್ರಾಮ್ ನಲ್ಲಿ, ಇಂಟಿಜರ್ ನ ರೇಂಜ್ ಅನ್ನು ಚೆಕ್ ಮಾಡುವ ಬಗೆಯನ್ನು ತಿಳಿಯೋಣ.
00:45 ನಮ್ಮ ಫೈಲ್ ನ ಹೆಸರು, ನೆಸ್ಟೆಡ್ ಇಫ್ ಎಂಬುದನ್ನು ಗಮನದಲ್ಲಿಡಿ.
00:50 ಕೋಡ್ ಅನ್ನು ವಿವರಿಸುತ್ತೇನೆ.
00:52 ಇದು ನಮ್ಮ ಹೆಡರ್ ಫೈಲ್.
00:54 ಇದು ನಮ್ಮ ಮೈನ್ ಫಂಕ್ಷನ್.
00:56 ಮೈನ್ ಫಂಕ್ಷನ್ ನ ಒಳಗೆ x ಮತ್ತು y ಎಂದು ಎರಡು ಇಂಟಿಜರ್ ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡಿದ್ದೇವೆ.
01:02 ಇಲ್ಲಿ, ಸೊನ್ನೆಯಿಂದ ಮೂವತ್ತೊಂಭತ್ತರ ನಡುವಿನ ಒಂದು ಸಂಖ್ಯೆ ಕೊಡಲು ಯೂಸರ್ ಗೆ ಪ್ರಾಂಪ್ಟ್ ಮಾಡುತ್ತೇವೆ.
01:08 y ನ ಮೌಲ್ಯವನ್ನು ಯೂಸರ್ ಇಂದ ಇನ್ಪುಟ್ ತೆಗೆದುಕೊಳ್ಳುತ್ತೇವೆ.
01:12 ಇದು ನಮ್ಮ ಕಂಡೀಶನ್.
01:14 ಇಲ್ಲಿ, y ಅಪಾನ್ (upon) ಹತ್ತು, ಸೊನ್ನೆಯೇ ಎಂಬುದನ್ನು ಚೆಕ್ ಮಾಡುತ್ತೇವೆ.
01:19 ಕಂಡೀಶನ್ ಸರಿಯಾಗಿದ್ದಲ್ಲಿ,
01:20 ಯು ಹ್ಯಾವ್ ಎಂಟರ್ಡ್ ಎ ನಂಬರ್ ಇನ್ ದ ರೇಂಜ್ ಝೀರೋ ಟು ನೈನ್ ಎಂದು ಪ್ರಿಂಟ್ ಮಾಡುತ್ತೇವೆ.
01:25 ಇದು ನಮ್ಮ ಎಲ್ಸ್ ಇಫ್ ಕಂಡೀಶನ್.
01:28 ಇಲ್ಲಿ, y upon ಹತ್ತು, ಒಂದಕ್ಕೆ ಸಮವೇ ಎಂದು ಚೆಕ್ ಮಾಡುತ್ತೇವೆ.
01:32 ಕಂಡೀಶನ್ ಸರಿಯಾಗಿದ್ದಲ್ಲಿ,
01:34 ಯು ಹ್ಯಾವ್ ಎಂಟರ್ಡ್ ಎ ನಂಬರ್ ಇನ್ ದ ರೇಂಜ್ ಟೆನ್ ಟು ನೈಂಟೀನ್ ಎಂದು ಪ್ರಿಂಟ್ ಮಾಡುತ್ತೇವೆ.
01:39 ಈ ಎಲ್ಸ್ ಇಫ್(elseif) ಕಂಡೀಶನ್ ನಲ್ಲಿ, ಸಂಖ್ಯೆಯು ಇಪ್ಪತ್ತು ಮತ್ತು ಇಪ್ಪತ್ತೊಂಭತ್ತರ ನಡುವಿನದೇ? ಎಂದು ಚೆಕ್ ಮಾಡುತ್ತೇವೆ,
01:45 ಮತ್ತು ಇಲ್ಲಿ, ಸಂಖ್ಯೆಯು ಮೂವತ್ತರಿಂದ ಮೂವತ್ತೊಂಭತ್ತರ ನಡುವೆ ಇದೆಯೇ ಎಂದು ನೋಡುತ್ತೇವೆ.
01:51 ಇದು ನಮ್ಮ ಎಲ್ಸ್ ಕಂಡೀಶನ್.
01:53 ಮೇಲಿನ ಎಲ್ಲಾ ಕಂಡೀಶನ್ ಗಳೂ ತಪ್ಪಾಗಿದ್ದಲ್ಲಿ,
01:55 ನಂಬರ್ ನಾಟ್ ಇನ್ ರೇಂಜ್ ಎಂದು ಪ್ರಿಂಟ್ ಮಾಡುತ್ತೇವೆ.
01:58 ಮತ್ತು, ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್.
02:01 ಈಗ, ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
02:03 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
02:12 ಎಕ್ಸಿಕ್ಯೂಟ್ ಮಾಡಲು, “gcc”ಸ್ಪೇಸ್ ನೆಸ್ಟೆಡ್ (nested) ಹೈಫನ್ (-) ಇಫ್ಡಾಟ್ c ಸ್ಪೇಸ್ ಹೈಫನ್ (-) ಒ (O) ಸ್ಪೇಸ್ nested ಎಂದು ಟೈಪ್ ಮಾಡಿ, Enter ಕೀ ಯನ್ನು ಒತ್ತಿ.
02:23 ಡಾಟ್ ಸ್ಲ್ಯಾಶ್ nested ಎಂದು ಟೈಪ್ ಮಾಡಿ. Enter ಕೀ ಯನ್ನು ಒತ್ತಿ.
02:28 ಎಂಟರ್ ಎ ನಂಬರ್ ಬಿಟ್ವೀನ್ ಝೀರೋ ಟು ಥರ್ಟಿ ನೈನ್ ಎಂದು ಕಾಣಬಹುದು.
02:32 ನಾನು ಹನ್ನೆರಡು ಎಂದು ಎಂಟರ್ ಮಾಡುತ್ತೇನೆ.
02:34 ಯು ಹ್ಯಾವ್ ಎಂಟರ್ಡ್ ದ ನಂಬರ್ ಇನ್ ದ ರೇಂಜ್ ಆಫ್ ಟೆನ್ ಟು ನೈಂಟೀನ್ ಎಂದು ಔಟ್ ಪುಟ್ ತೋರಿಸುತ್ತದೆ.
02:40 ಈಗ ಮತ್ತೊಂದು ಸಂಖ್ಯೆಯನ್ನು ಎಂಟರ್ ಮಾಡೋಣ.
02:42 ಮತ್ತೆ ಎಕ್ಸಿಕ್ಯೂಟ್ ಮಾಡೋಣ. ಅಪ್ ಆರೋ (up arrow) ಕೀ ಯನ್ನು ಒತ್ತಿ. Enter ಕೀ ಯನ್ನು ಒತ್ತಿ.
02:48 ಈ ಬಾರಿ ನಾನು ಐದು ಎಂದು ಕೊಡುತ್ತೇನೆ.
02:50 ಯು ಹ್ಯಾವ್ ಎಂಟರ್ಡ್ ಇನ್ ದ ರೇಂಜ್ ಆಫ್ ಝೀರೋ ಟು ನೈನ್ ಎಂದು ಔಟ್ ಪುಟ್ ನೋಡಬಹುದು.
02:56 ಸ್ವಿಚ್ ಸ್ಟೇಟ್ಮೆಂಟ್ ಉಪಯೋಗಿಸಿ, ಕಂಡೀಶನಲ್ ಎಕ್ಸಿಕ್ಯೂಶನ್ ಅನ್ನು ಇನ್ನೊಂದು ರೀತಿಯಲ್ಲೂ ಮಾಡಬಹುದು.
03:02 ಇದನ್ನು ಹೇಗೆ ಮಾಡುವುದೆಂದು ನೋಡೋಣ.
03:05 ನಾವು ಇದೇ ಪ್ರೊಗ್ರಾಮ್ ನಲ್ಲಿ, ಸ್ವಿಚ್ ಸ್ಟೇಟ್ಮೆಂಟ್ ಉಪಯೋಗಿಸಿ ನೋಡೋಣ.
03:08 ನಾನೀಗಾಗಲೇ ಪ್ರೊಗ್ರಾಮ್ ಅನ್ನು ಒಪನ್ ಮಾಡಿದ್ದೇನೆ.
03:10 ನಮ್ಮ ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗೋಣ.
03:13 ಇದನ್ನು ನಾನು ಹಿಂದಿನ ಪ್ರೊಗ್ರಾಮ್ ನಲ್ಲಿ ವಿವರಿಸಿದ್ದೇನೆ.
03:16 ಹಾಗಾಗಿ, ನಾನು ಸ್ವಿಚ್ ಸ್ಟೇಟ್ಮೆಂಟ್ ಅನ್ನು ವಿವರಿಸುತ್ತೇನೆ.
03:20 ಇಲ್ಲಿ, ನಾವು ಇನ್ಪುಟ್ ಆದ y ಅನ್ನು ಹತ್ತರಿಂದ ಭಾಗಿಸುತ್ತೇವೆ ಮತ್ತು ಉತ್ತರವನ್ನು x ಎಂಬ ವೇರಿಯೇಬಲ್ ನಲ್ಲಿ ಇಡುತ್ತೇವೆ.
03:28 ಅಂದರೆ, ಭಾಗಲಬ್ಧವನ್ನು x ನಲ್ಲಿ ಇಡುತ್ತೇವೆ.
03:32 ಭಾಗಲಬ್ಧದಿಂದ, ಸಂಖ್ಯೆಯ ರೇಂಜ್ ಅನ್ನು ಕಂಡುಹಿಡಿಯಬಹುದು.
03:36 ಇಲ್ಲಿ, ವೇರಿಯೇಬಲ್ x ಅನ್ನು ಚೆಕ್ ಮಾಡಲು ಸ್ವಿಚ್ ಕಮಾಂಡ್ ಗೆ ಸೂಚಿಸಬಹುದು.
03:41 ಇದು ಕೇಸ್ ಝೀರೋ(case 0). case 0 ಪೂರೈಸಿದರೆ,
03:45 ಯು ಹ್ಯಾವ್ ಎಂಟರ್ಡ್ ದ ನಂಬರ್ ಇನ್ ದ ರೇಂಜ್ ಆಫ್ ಝೀರೋ ಟು ನೈನ್ ಎಂದು ಪ್ರಿಂಟ್ ಮಾಡುತ್ತೇವೆ.
03:51 case ಪೂರೈಸಿದರೆ, ಲೂಪ್ ನಿಂದ ಹೊರಬರಲು, ಬ್ರೇಕ್ ಅನ್ನು ಸೇರಿಸುತ್ತೇವೆ.
03:55 ಪ್ರತೀ ಬಾರಿ ಲೂಪ್ ಅನ್ನು ಬ್ರೇಕ್ ಮಾಡಬೇಕು.
03:58 ಏಕೆಂದರೆ, ಒಂದು ಬಾರಿಗೆ, ಒಂದೇ ಕಂಡೀಶನ್ ಮಾತ್ರ ಸರಿಯಾಗಿರಲು ಸಾಧ್ಯ.
04:03 ಇದು case 1. case 1 ಎಂದರೆ, x ನ ಮೌಲ್ಯ ಒಂದು ಆಗಿದ್ದರೆ, ಯು ಹ್ಯಾವ್ ಎಂಟರ್ಡ್ ದ ನಂಬರ್ ಇನ್ ದ ರೇಂಜ್ ಆಫ್ ಟೆನ್ ಟು ನೈನ್ಟೀನ್ ಎಂದು ಪ್ರಿಂಟ್ ಮಾಡುತ್ತೇವೆ.
04:12 ಇದು case 2.
04:14 ಇಲ್ಲಿ, ಯು ಹ್ಯಾವ್ ಎಂಟರ್ಡ್ ದ ನಂಬರ್ ಇನ್ ದ ರೇಂಜ್ ಆಫ್ ಟ್ವೆಂಟಿ ಟು ಟ್ವೆಂಟೀನೈನ್ ಎಂದು ಪ್ರಿಂಟ್ ಮಾಡುತ್ತೇವೆ.
04:20 ಮತ್ತು, ಇದು case 3. ಇಲ್ಲಿ, ಸಂಖ್ಯೆಯು ಮೂವತ್ತು ಮತ್ತು ಮೂವತ್ತೊಂಭತ್ತರ ನಡುವೆ ಇದೆಯೇ ಎಂದು ಚೆಕ್ ಮಾಡುತ್ತೇವೆ.
04:26 ಇದು ಡಿಫಾಲ್ಟ್ ಕೇಸ್. ಮೇಲಿನ ಯಾವುದೇ ಕಂಡೀಶನ್ ಪೂರೈಸದಿದ್ದಲ್ಲಿ ಏನು ಮಾಡಬೇಕು ಎಂದು ಡಿಫಾಲ್ಟ್ ಕೇಸ್ ಸೂಚಿಸುತ್ತದೆ.
04:36 ಇಲ್ಲಿ, ನಂಬರ್ ನಾಟ್ ಇನ್ ರೇಂಜ್ ಎಂದು ಪ್ರಿಂಟ್ ಮಾಡುತ್ತೇವೆ.
04:39 ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್.
04:41 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
04:43 ಟರ್ಮಿನಲ್ ಗೆ ಹಿಂತಿರುಗಿ.
04:46 gcc ಸ್ಪೇಸ್ switch ಡಾಟ್ c ಸ್ಪೇಸ್ ಹೈಫನ್ ಒ ಸ್ಪೇಸ್ switch ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ.
04:55 ಡಾಟ್ ಸ್ಲ್ಯಾಶ್ switch ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ.
05:00 ಝೀರೋ ಮತ್ತು ಮೂವತ್ತೊಂಭತ್ತರ ನಡುವಿನ ನಂಬರ್ ಅನ್ನು ಎಂಟರ್ ಮಾಡಬೇಕು. ನಾನು ಮೂವತ್ತೈದು ಎಂದು ಕೊಡುತ್ತೇನೆ.
05:06 ಯು ಹ್ಯಾವ್ ಎಂಟರ್ಡ್ ದ ನಂಬರ್ ಇನ್ ದ ರೇಂಜ್ ಆಫ್ ಥರ್ಟಿ ಟು ಥರ್ಟಿ ನೈನ್ ಎಂದು ಔಟ್ ಪುಟ್ ತೋರಿಸುತ್ತದೆ.
05:10 ಈಗ, ನಾವು, ಪ್ರೊಗ್ರಾಮ್ ಅನ್ನು c++ನಲ್ಲಿ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ.
05:16 ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗಿ.
05:18 ನಮ್ಮ ಫೈಲ್ ನ ಹೆಸರು ನೆಸ್ಟೆಡ್ ಹೈಫನ್ ಇಫ್ ಡಾಟ್ cpp ಎಂದು ಗಮನಿಸಿ.
05:23 ಇಲ್ಲಿ, ಲಾಜಿಕ್ ಮತ್ತು ಇಂಪ್ಲಿಮೆಂಟೇಶನ್ c ಯಲ್ಲಿ ಇರುವಂತೆಯೇ ಇರುತ್ತದೆ.
05:27 ಕೆಲವು ವ್ಯತ್ಯಾಸಗಳು ಇಂತಿವೆ.
05:30 ಹೆಡರ್ ಫೈಲ್, ಎಸ್ಟಿಡಿಐಒ ಡಾಟ್ h ನ ಬದಲು ಐಒಸ್ಟ್ರೀಮ್,
05:35 ಇಲ್ಲಿ ಯೂಸಿಂಗ್ ನೇಂಸ್ಪೇಸ್ ಎಸ್ಟಿಡಿ, ಎಂದು ಯೂಸಿಂಗ್ ಸ್ಟೇಟ್ಮೆಂಟ್ಅನ್ನು ಸೇರಿಸಿದ್ದೇವೆ.
05:41 ಮತ್ತು ಪ್ರಿನ್ಟ್ ಎಫ್ ಮತ್ತು ಸ್ಕ್ಯಾನ್ ಎಫ್ ನ ಬದಲು ಸಿಔಟ್ ಮತ್ತು ಸಿಇನ್ ಅನ್ನು ಉಪಯೋಗಿಸಿದ್ದೇವೆ.
05:46 ಉಳಿದ ಕೋಡ್ c ಪ್ರೊಗ್ರಾಮ್ ನಂತೆಯೇ ಇರುವುದನ್ನು ನೋಡಬಹುದು.
05:51 ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
05:53 ಟೆರ್ಮಿನಲ್ ಗೆ ಹಿಂತಿರುಗಿ.
05:56 g++ ಸ್ಪೇಸ್ ನೆಸ್ಟೆಡ್ ಹೈಫನ್ ಇಫ್ ಡಾಟ್ cppಸ್ಪೇಸ್ ಹೈಫನ್ ಒ ಸ್ಪೇಸ್ ನೆಸ್ಟೆಡ್ ಒನ್ ಎಂದು ಟೈಪ್ ಮಾಡಿ. Enter ಕೀ ಯನ್ನು ಒತ್ತಿ.
06:07 ಡಾಟ್ ಸ್ಲ್ಯಾಶ್ ನೆಸ್ಟೆಡ್ ಒನ್ ಎಂದು ಟೈಪ್ ಮಾಡಿ ಎಂಟರ್ ಒತ್ತಿ.
06:11 ಎಂಟರ್ ಎ ನಂಬರ್ ಬಿಟ್ವೀನ್ ಝೀರೋ ಎಂಡ್ ಥರ್ಟಿ ನೈನ್. ನಾನು ನಲ್ವತ್ತು ಎಂದು ಕೊಡುತ್ತೇನೆ.
06:16 ನಂಬರ್ ನಾಟ್ ಇನ್ ರೇಂಜ್ ಎಂದು ಔಟ್ ಪುಟ್ ತೋರಿಸುತ್ತದೆ.
06:20 ಈಗ, ಸ್ವಿಚ್ ಪ್ರೊಗ್ರಾಮ್ ಅನ್ನು c++ನಲ್ಲಿ ನೋಡೋಣ.
06:24 ಎಡಿಟರ್ ಗೆ ಹಿಂತಿರುಗಿ.
06:27 ಇಲ್ಲಿಯೂ ಲಾಜಿಕ್ ಮತ್ತು ಇಂಪ್ಲಿಮೆಂಟೇಶನ್ c ಪ್ರೊಗ್ರಾಮ್ ನಂತೆಯೇ ಇರುತ್ತದೆ.
06:31 ಹೆಡರ್ ಫೈಲ್ ಐಒಸ್ಟ್ರೀಮ್ ಎಂದಿರುವುದನ್ನು ನೋಡಿ.
06:34 ಇದು ಯೂಸಿಂಗ್ ಸ್ಟೇಟ್ಮೆಂಟ್,
06:37 ಮತ್ತು ಸಿಔಟ್ ಮತ್ತು ಸಿಇನ್ ಫಂಕ್ಷನ್ ಗಳನ್ನು ಬದಲಾಯಿಸಿದ್ದೇವೆ.
06:41 ಉಳಿದ ಕೋಡ್ ನಮ್ಮ ಸ್ವಿಚ್ ಡಾಟ್ c ಪ್ರೊಗ್ರಾಮ್ ನಂತೆಯೇ ಇದೆ.
06:45 ಎಕ್ಸಿಕ್ಯೂಟ್ ಮಾಡೋಣ.
06:46 ಟರ್ಮಿನಲ್ ಗೆ ಹಿಂತಿರುಗಿ.
06:48 g++ ಸ್ಪೇಸ್ switch ಡಾಟ್ cpp ಸ್ಪೇಸ್ ಹೈಫನ್ ಒಸ್ಪೇಸ್ switch1 ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ.
06:58 ಡಾಟ್ ಸ್ಲ್ಯಾಶ್ ಸ್ವಿಚ್ ಒನ್ ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ.
07:02 ಎಂಟರ್ ಎ ನಂಬರ್ ಬಿಟ್ವೀನ್ ಝೀರೋ ಎಂಡ್ ಥರ್ಟಿ ನೈನ್.
07:05 ನಾನು ಇಪ್ಪತ್ತೈದು ಎಂದು ಕೊಡುತ್ತೇನೆ.
07:09 ಯು ಹ್ಯಾವ್ ಎಂಟರ್ಡ್ ದ ನಂಬರ್ ಇನ್ ದ ರೇಂಜ್ ಆಫ್ ಟ್ವೆಂಟಿ ಟು ಟ್ವೆಂಟಿನೈನ್ ಎಂದು ಔಟ್ ಪುಟ್ ತೋರಿಸುತ್ತದೆ.
07:15 ಈಗ ನಮ್ಮ ಸ್ಲೈಡ್ ಗೆ ಹಿಂದಿರುಗೋಣ.
07:18 ಸ್ವಿಚ್ ಮತ್ತು ನೆಸ್ಟೆಡ್ ಇಫ್ ಸ್ಟೇಟ್ಮೆಂಟ್ ಗಳನ್ನು ಹೋಲಿಸೋಣ.
07:23 ಎಕ್ಸ್ಪ್ರೆಶನ್ ನ ಉತ್ತರದ ಮೇರೆಗೆ, ಸ್ವಿಚ್ ಸ್ಟೇಟ್ಮೆಂಟ್ ರನ್ ಆಗುತ್ತದೆ.
07:28 ಎಕ್ಸ್ಪ್ರೆಶನ್ ಸರಿಯಿದ್ದಲ್ಲಿ ಮಾತ್ರ ನೆಸ್ಟೆಡ್ ಇಫ್ ಸ್ಟೇಟ್ಮೆಂಟ್ ರನ್ ಆಗುತ್ತದೆ.
07:34 ಸ್ವಿಚ್ ನಲ್ಲಿ, ವೇರಿಯೇಬಲ್ ನ ವಿವಿಧ ಮೌಲ್ಯಗಳನ್ನು ಕೇಸ್ ಎಂದು ಪರಿಗಣಿಸುತ್ತೇವೆ.
07:39 ನೆಸ್ಟೆಡ್ ಇಫ್ ನಲ್ಲಿ, ವೇರಿಯೇಬಲ್ ನ ಪ್ರತಿಯೊಂದು ಮೌಲ್ಯಕ್ಕೂ ಒಂದು ಕಂಡೀಶನಲ್ ಸ್ಟೇಟ್ಮೆಂಟ್ ಬರೆಯಬೇಕು.
07:45 ಸ್ವಿಚ್ ಸ್ಟೇಟ್ಮೆಂಟ್, ಇಂಟಿಜರ್ ಮೌಲ್ಯಗಳನ್ನು ಮಾತ್ರ ಚೆಕ್ ಮಾಡುತ್ತದೆ.
07:50 ಇಂಟಿಜರ್ ಮತ್ತು ಫಂಕ್ಷನಲ್ ಮೌಲ್ಯಗಳೆರಡನ್ನೂ ನೆಸ್ಟೆಡ್ ಇಫ್ ಚೆಕ್ ಮಾಡುತ್ತದೆ.
07:55 ಇಲ್ಲಿಗೆ ನಮ್ಮ ಟ್ಯುಟೋರಿಯಲ್ ಅಂತ್ಯಗೊಳ್ಳುತ್ತದೆ.
07:58 ಸಾರಾಂಶ ತಿಳಿಯೋಣ.
08:00 ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು: ನೆಸ್ಟೆಡ್ ಇಫ್ ಸ್ಟೇಟ್ಮೆಂಟ್. ಉದಾಹರಣೆಗೆ : ಎಲ್ಸ್ ಇಫ್ ವೈ ಡಿವೈಡೆಡ್ ಬೈ ಟೆನ್ ಈಕ್ವಲ್ಸ್ ಟು ಝೀರೋ,
08:08 ಸ್ವಿಚ್ ಸ್ಟೇಟ್ಮೆಂಟ್. ಉದಾಹರಣೆಗೆ : ಸ್ವಿಚ್ x,
08:12 ಮತ್ತು ನೆಸ್ಟೆಡ್ ಇಫ್ ಮತ್ತು ಸ್ವಿಚ್ ಸ್ಟೇಟ್ಮೆಂಟ್ ಗಳ ವ್ಯತ್ಯಾಸ.
08:16 ನೌಕರರ ವಯಸ್ಸು ಇಪ್ಪತ್ತರಿಂದ ಅರವತ್ತರ ನಡುವೆ ಇದೆಯೇ ಎಂದು ಪರೀಕ್ಷಿಸಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ.
08:23 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
08:26 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
08:29 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
08:33 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್,ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
08:38 ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
08:42 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
08:49 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
08:52 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
08:58 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
09:04 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal