Advanced-Cpp/C2/Abstract-Class/Kannada
From Script | Spoken-Tutorial
Revision as of 12:55, 24 November 2014 by Vasudeva ahitanal (Talk | contribs)
Time | Narration |
00:01 | C++ ನಲ್ಲಿಯ abstract class (ಅಬ್ಸ್ಟ್ರ್ಯಾಕ್ಟ್ ಕ್ಲಾಸ್) ಮತ್ತು pure virtual function (ಪ್ಯೂರ್ ವರ್ಚುವಲ್ ಫಂಕ್ಶನ್), ಇವುಗಳ ಬಗೆಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ, |
00:10 | ಅಬ್ಸ್ಟ್ರ್ಯಾಕ್ಟ್ ಕ್ಲಾಸ್, |
00:11 | ಪ್ಯೂರ್ ವರ್ಚುವಲ್ ಫಂಕ್ಶನ್, ಇವುಗಳನ್ನು ನಾವು ಕಲಿಯುವೆವು, |
00:13 | ನಾವು ಇದನ್ನು ಒಂದು ಉದಾಹರಣೆಯ ಮೂಲಕ ಮಾಡುವೆವು. |
00:16 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, |
00:19 | Ubuntu ಆಪರೇಟಿಂಗ್ ಸಿಸ್ಟಮ್ ನ 11.10 ಆವೃತ್ತಿ ಮತ್ತು, |
00:23 | g++ compiler ನ 4.6.1 ನೇ ಆವೃತ್ತಿಗಳನ್ನು ನಾನು ಬಳಸುತ್ತಿದ್ದೇನೆ. |
00:27 | ನಾವು abstract class ಎನ್ನುವುದರ ಪರಿಚಯದೊಂದಿಗೆ ಆರಂಭಿಸೋಣ. |
00:31 | ಅಬ್ಸ್ಟ್ರ್ಯಾಕ್ಟ್ ಕ್ಲಾಸ್ ಎನ್ನುವುದು ಯಾವಾಗಲೂ ಬೇಸ್ ಕ್ಲಾಸ್ ಆಗಿರುತ್ತದೆ. |
00:35 | ಇದು ಕನಿಷ್ಠ ಪಕ್ಷ ಒಂದಾದರೂ ಪ್ಯೂರ್ ವರ್ಚುವಲ್ ಫಂಕ್ಶನ್ ಅನ್ನು ಒಳಗೊಂಡಿರುತ್ತದೆ. |
00:39 | ನಾವು ಅಬ್ಸ್ಟ್ರ್ಯಾಕ್ಟ್ ಕ್ಲಾಸ್ ನ ಇನ್ಸ್ಟನ್ಸ್ ಅನ್ನು ಕ್ರಿಯೇಟ್ ಮಾಡಲು ಸಾಧ್ಯವಿಲ್ಲ. |
00:43 | ನಾವು ಪ್ಯೂರ್ ವರ್ಚುವಲ್ ಫಂಕ್ಶನ್ ಎನ್ನುವುದನ್ನು ನೋಡೋಣ. |
00:45 | ಪ್ಯೂರ್ ವರ್ಚುವಲ್ ಫಂಕ್ಶನ್ ಎನ್ನುವುದು ಬಾಡಿ ಇಲ್ಲದ ಫಂಕ್ಶನ್ ಆಗಿದೆ. |
00:49 | ಬೇಸ್ ಕ್ಲಾಸ್ ನಲ್ಲಿ ಇದನ್ನು ಡಿಫೈನ್ ಮಾಡಿರುವುದಿಲ್ಲ. |
00:52 | ಇದನ್ನು ಹೀಗೆ ಡಿಕ್ಲೇರ್ ಮಾಡಲಾಗಿದೆ: |
00:54 | virtual void ಮತ್ತು virtualfunname()=0; |
01:00 | ಡಿರೈವ್ಡ್ ಕ್ಲಾಸ್ ಎನ್ನುವುದು ಫಂಕ್ಶನ್ ಅನ್ನು ಓವರ್ ರೈಡ್ ಮಾಡಲೇಬೇಕು. |
01:04 | ಇಲ್ಲದಿದ್ದರೆ ಕಂಪೈಲರ್, ಎರರ್ ಅನ್ನು ಕೊಡುತ್ತದೆ. |
01:07 | ಫಂಕ್ಶನ್ ಅನ್ನು ಅಳವಡಿಸುವದು (ಇಂಪ್ಲಿಮೆಂಟ್ ಮಾಡುವದು) ಮಾತ್ರ ಡಿರೈವ್ಡ್ ಕ್ಲಾಸ್ಗೆ ಬಿಟ್ಟಿದ್ದು. |
01:11 | ನಾವು ಒಂದು ಉದಾಹರಣೆಯನ್ನು ನೋಡೋಣ. |
01:13 | ನಾನು ಕೋಡನ್ನು ಈಗಾಗಲೇ ಎಡಿಟರ್ನಲ್ಲಿ ಟೈಪ್ ಮಾಡಿದ್ದೇನೆ. |
01:16 | ನಾನು ಅದನ್ನು ಓಪನ್ ಮಾಡುವೆನು. |
01:18 | ನಮ್ಮ ಫೈಲ್ ನೇಮ್ abstract.cpp ಆಗಿದೆ ಎನ್ನುವುದನ್ನು ಗಮನಿಸಿರಿ. |
01:22 | ಈ ಉದಾಹರಣೆಯು ಎರಡು ಸಂಖ್ಯೆಗಳ ಸ೦ಕಲನ ಮತ್ತು ವ್ಯವಕಲನವನ್ನು ಒಳಗೊಂಡಿರುತ್ತದೆ. |
01:28 | ನಾವು ಕೋಡ್ ಅನ್ನು ಅನುಸರಿಸೋಣ. |
01:30 | ಇದು ನಮ್ಮ iostream ಎನ್ನುವ ಹೆಡರ್ ಫೈಲ್ ಆಗಿದೆ. |
01:33 | ಇಲ್ಲಿ ನಾವು std namespace ಎನ್ನುವುದನ್ನು ಉಪಯೋಗಿಸಿದ್ದೇವೆ. |
01:36 | ಇದು abstractinterface ಎನ್ನುವ ಕ್ಲಾಸ್ ನ ಡಿಕ್ಲರೇಶನ್ ಆಗಿದೆ. |
01:41 | ಆಮೇಲೆ ಇದು public ಸ್ಪೆಸಿಫೈಯರ್ ಆಗಿದೆ. |
01:44 | ಇದರಲ್ಲಿ numbers ಎನ್ನುವ ವರ್ಚುವಲ್ ಫಂಕ್ಶನ್ ಅನ್ನು ನಾವು ಡಿಕ್ಲೇರ್ ಮಾಡಿದ್ದೇವೆ. |
01:49 | ಮತ್ತು ಸೊನ್ನೆ ಇದರ ಆರಂಭಿಕ ವ್ಯಾಲ್ಯು ಆಗಿದೆ. |
01:51 | ಆಮೇಲೆ ಒಂದು ನಾನ್- ವರ್ಚುವಲ್ ಫಂಕ್ಶನ್ |
01:55 | ಮತ್ತು, a ಹಾಗೂ b, ಈ ಎರಡು ಇಂಟೀಜರ್ ವೇರಿಯಬಲ್ ಗಳನ್ನು ಹೊಂದಿದ್ದೇವೆ. |
01:59 | ಇಲ್ಲಿ ನಾವು input ಎನ್ನುವ ಫಂಕ್ಶನ್ ಅನ್ನು ಆಕ್ಸೆಸ್ ಮಾಡುತ್ತೇವೆ. |
02:01 | ಇದರಲ್ಲಿ ನಾವು a ಹಾಗೂ b ಎನ್ನುವ ಸಂಖ್ಯೆಗಳನ್ನು ಪಡೆಯುತ್ತೇವೆ. |
02:05 | ಇದು add ಎನ್ನುವ ಡಿರೈವ್ಡ್ ಕ್ಲಾಸ್ ಆಗಿದೆ. |
02:09 | ಇದು abstractinterface ಎನ್ನುವ ಬೇಸ್ ಕ್ಲಾಸ್ ನ ಗುಣಗಳನ್ನು ಪರಂಪರೆಯಾಗಿ ಪಡೆಯುತ್ತದೆ. |
02:14 | ಇಲ್ಲಿ ನಾವು numbers ಎನ್ನುವ ಫಂಕ್ಶನ್ ಅನ್ನು ಓವರ್ ರೈಡ್ ಮಾಡುತ್ತೇವೆ. |
02:18 | ಇದರಲ್ಲಿ a ಹಾಗೂ b, ಈ ಸಂಖ್ಯೆಗಳ ಸಂಕಲನವನ್ನು ಮಾಡುತ್ತೇವೆ. |
02:21 | ಮತ್ತು ಉತ್ತರವನ್ನು sum ಎನ್ನುವ ಇಂಟೀಜರ್ ವೇರಿಯಬಲ್ ನಲ್ಲಿ ಸ್ಟೋರ್ ಮಾಡುತ್ತೇವೆ. |
02:25 | ನಂತರ ಉತ್ತರವನ್ನು ಪ್ರಿಂಟ್ ಮಾಡುತ್ತೇವೆ. |
02:27 | ಇಲ್ಲಿ sub ಎನ್ನುವ ಇನ್ನೊಂದು ಡಿರೈವ್ಡ್ ಕ್ಲಾಸ್ ಅನ್ನು ಹೊಂದಿದ್ದೇವೆ. |
02:31 | ಇದೂ ಸಹ abstractinterface ಎನ್ನುವ ಬೇಸ್ ಕ್ಲಾಸ್ ಅನ್ನು ಪರಂಪರೆಯಾಗಿ ಪಡೆಯುತ್ತದೆ. |
02:35 | ಇದರಲ್ಲಿ, ಮತ್ತೊಮ್ಮೆ, ನಾವು numbers ಎನ್ನುವ ಫಂಕ್ಶನ್ ಅನ್ನು ಓವರ್ ರೈಡ್ ಮಾಡುತ್ತೇವೆ. |
02:39 | ಮತ್ತು ಇಲ್ಲಿ ನಾವು a ಹಾಗೂ b ಗಳ ವ್ಯತ್ಯಾಸವನ್ನು ಕಂಡುಹಿಡಿಯುತ್ತೇವೆ. |
02:43 | ಆಮೇಲೆ ವ್ಯತ್ಯಾಸವನ್ನು ಪ್ರಿಂಟ್ ಮಾಡುತ್ತೇವೆ. |
02:45 | ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ. |
02:48 | ಇಲ್ಲಿ add ಎನ್ನುವ ಕ್ಲಾಸ್ನ, obj1 ಎನ್ನುವ ಓಬ್ಜೆಕ್ಟ್ ಅನ್ನು ನಾವು ಕ್ರಿಯೇಟ್ ಮಾಡುತ್ತೇವೆ. |
02:53 | ಆಮೇಲೆ ನಾವು ಓಬ್ಜೆಕ್ಟ್ obj1 ಅನ್ನು ಬಳಸಿ input ಹಾಗೂ numbers ಎನ್ನುವ ಈ ಎರಡು ಫಂಕ್ಶನ್ ಗಳನ್ನು ಕಾಲ್ ಮಾಡುತ್ತೇವೆ. |
02:59 | ಆಮೇಲೆ sub ಎನ್ನುವ ಕ್ಲಾಸ್ನ obj2 ಎನ್ನುವ ಓಬ್ಜೆಕ್ಟ್ ಅನ್ನು ನಾವು ಕ್ರಿಯೇಟ್ ಮಾಡುತ್ತೇವೆ. |
03:04 | ಮತ್ತೆ, obj2 ಎನ್ನುವ ಓಬ್ಜೆಕ್ಟ್ ಅನ್ನು ಬಳಸಿ ನಾವು ಈ ಎರಡು ಫಂಕ್ಶನ್ ಗಳನ್ನು ಕಾಲ್ ಮಾಡುತ್ತೇವೆ. |
03:08 | ಇದು ನಮ್ಮ return ಸ್ಟೇಟಮೆಂಟ್ ಆಗಿದೆ. |
03:10 | ಈಗ ನಾವು ಪ್ರೊಗ್ರಾಮನ್ನು ಎಕ್ಸಿಕ್ಯೂಟ್ ಮಾಡೋಣ. |
03:13 | ನಿಮ್ಮ ಕೀಬೋರ್ಡ್ ಮೇಲಿನ Ctrl, Alt and T ಎನ್ನುವ ಕೀಗಳನ್ನು ಒಂದೇ ಬಾರಿಗೆ ಒತ್ತಿ, ಟರ್ಮಿನಲ್ ವಿಂಡೋವನ್ನು ಓಪನ್ ಮಾಡಿರಿ. |
03:21 | ಕಂಪೈಲ್ ಮಾಡಲು g++ space abstract dot cpp space hyphen o space abs ಎಂದು ಟೈಪ್ ಮಾಡಿರಿ. |
03:31 | Enter ಅನ್ನು ಒತ್ತಿರಿ. |
03:32 | ./abs (ಡಾಟ್ ಸ್ಲ್ಯಾಷ್ abs) ಎಂದು ಟೈಪ್ ಮಾಡಿರಿ. |
03:34 | Enter ಅನ್ನು ಒತ್ತಿರಿ. |
03:36 | Enter the numbers ಎಂದು ಕಾಣಿಸುತ್ತದೆ. |
03:38 | ನಾನು 9 ಮತ್ತು 4 ಗಳನ್ನು ಎಂಟರ್ ಮಾಡುವೆನು. |
03:42 | ಔಟ್ಪುಟ್, Sum is 13 ಎಂದು ಕಾಣಿಸುತ್ತದೆ. |
03:46 | Enter the numbers ಎನ್ನುವುದನ್ನು ಮತ್ತೆ ನಾವು ನೋಡುತ್ತೇವೆ. |
03:49 | ನಾನು 8 ಮತ್ತು 3 ಗಳನ್ನು ಎಂಟರ್ ಮಾಡುವೆನು. |
03:52 | ಔಟ್ಪುಟ್, Diff is 5 ಎಂದು ಕಾಣಿಸುತ್ತದೆ. |
03:56 | ಇಲ್ಲಿಗೆ ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
03:59 | ನಮ್ಮ ಸ್ಲೈಡ್ ಗಳಿಗೆ ಹಿಂದಿರುಗಿರಿ. |
04:01 | ನಾವು ಸಂಕ್ಶಿಪ್ತಗೊಳಿಸೋಣ. |
04:03 | ಈ ಟ್ಯುಟೋರಿಯಲ್ ನಲ್ಲಿ, |
04:04 | ಅಬ್ಸ್ಟ್ರ್ಯಾಕ್ಟ್ ಕ್ಲಾಸ್, ಉದಾ. class abstractinterface, |
04:09 | ಪ್ಯೂರ್ ವರ್ಚುವಲ್ ಫಂಕ್ಶನ್,
ಉದಾ. virtual void numbers()=0; ಇವುಗಳನ್ನು ನಾವು ಕಲಿತಿದ್ದೇವೆ. |
04:14 | ಒಂದು ಅಸೈನ್ಮೆಂಟ್ ಎಂದು, student ಎನ್ನುವ ಅಬ್ಸ್ಟ್ರ್ಯಾಕ್ಟ್ ಕ್ಲಾಸ್ ಒಂದನ್ನು ಕ್ರಿಯೇಟ್ ಮಾಡಿರಿ. |
04:17 | Info ಎನ್ನುವ ಪ್ಯೂರ್ ವರ್ಚುವಲ್ ಫಂಕ್ಶನ್ ಒಂದನ್ನು ಕ್ರಿಯೇಟ್ ಮಾಡಿರಿ. |
04:20 | ಈ ಫಂಕ್ಶನ್ ನಲ್ಲಿ ವಿದ್ಯಾರ್ಥಿಯ ಹೆಸರು ಮತ್ತು ರೋಲ್ ನಂ. ಗಳನ್ನು ಪಡೆಯಿರಿ. |
04:25 | marks ಹಾಗೂ sports ಎನ್ನುವ ಎರಡು ಡಿರೈವ್ಡ್ ಕ್ಲಾಸ್ ಗಳನ್ನು ಕ್ರಿಯೇಟ್ ಮಾಡಿರಿ. |
04:29 | marks ಎನ್ನುವುದರಲ್ಲಿ ಮೂರು ವಿಷಯಗಳ ಮಾರ್ಕ್ಸ್ ಗಳನ್ನು ಪಡೆಯಿರಿ. |
04:32 | sports ಎನ್ನುವುದರಲ್ಲಿ ಸ್ಪೋರ್ಟ್ಸ್ ನಲ್ಲಿ ಪಡೆದ ಮಾರ್ಕ್ಸ್ ಗಳನ್ನು ಎಂಟರ್ ಮಾಡಿರಿ. |
04:35 | ಟೋಟಲ್ ಮಾರ್ಕ್ಸ್ ಗಳನ್ನು ಕಂಡುಹಿಡಿಯಿರಿ. |
04:38 | ಆಮೇಲೆ result ಎನ್ನುವ ಇನ್ನೊಂದು ಡಿರೈವ್ಡ್ ಕ್ಲಾಸ್ ಅನ್ನು ಕ್ರಿಯೇಟ್ ಮಾಡಿರಿ. |
04:41 | ಇದರಲ್ಲಿ, ವಿದ್ಯಾರ್ಥಿಯ ಹೆಸರು, ರೋಲ್-ನಂ, ಟೋಟಲ್ ಮಾರ್ಕ್ಸ್ ಗಳನ್ನು ತೋರಿಸಿರಿ. |
04:47 | ಕೆಳಗೆ ತೋರಿಸಿದ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿರಿ. http://spoken-tutorial.org/What_is_a_Spoken_Tutorial |
04:50 | ಅದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
04:53 | ನೀವು ಉತ್ತಮವಾದ ಬ್ಯಾಂಡ್ವಿಡ್ತ್ ಅನ್ನು ಹೊಂದಿಲ್ಲದಿದ್ದರೆ, ಡೌನ್ಲೋಡ್ ಮಾಡಿ ನೋಡಬಹುದು. |
04:58 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
05:03 | ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
05:07 | ಹೆಚ್ಚಿನ ವಿವರಗಳಿಗೆ ದಯವಿಟ್ಟು contact [at] spoken hyphen tutorial dot org ಈ ಈ-ಮೇಲ್ ಗೆ ಬರೆಯಿರಿ. |
05:14 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ. |
05:18 | ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT , MHRD, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ. |
05:25 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ಗಳ ಮೇಲೆ ಲಭ್ಯವಿದೆ. http://spoken-tutorial.org/NMEICT-Intro |
05:30 | ಇದರ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |