Inkscape/C2/Create-and-Format-Text/Kannada
From Script | Spoken-Tutorial
Revision as of 05:18, 7 May 2016 by Rakeshkkrao (Talk | contribs)
Time | Narration |
00:01 | ನಮಸ್ಕಾರ, ಕ್ರಿಯೇಟ್ ಆಂಡ್ ಫಾರ್ಮ್ಯಾಟ್ ಟೆಕ್ಸ್ಟ್ ಎನ್ನುವ ಇಂಕ್-ಸ್ಕೇಪ್-ನ ಸ್ಪೋಕನ್ ಟ್ಯುಟೋರಿಯಲ್-ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು:
|
00:15 | ಕೊನೆಯಲ್ಲಿ ಸರಳ ಫ್ಲೈಯರ್ ಅನ್ನು ರಚಿಸುವುದು ಹೇಗೆ ಎಂಬುದನ್ನೂ ತಿಳಿಯೋಣ. |
00:19 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಲಿನಕ್ಸ್ ನ 12.04 ನೇ ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಮತ್ತು ಇಂಕ್ ಸ್ಕೇಪ್ ನ 0.48.4 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ. |
00:29 | ಈ ಟ್ಯುಟೋರಿಯಲ್-ನಲ್ಲಿ ಬಳಸುವ ಟೂಲ್-ಗಳಿಗೆ ಉಪಯೋಗವಾಗಲೆಂದು, ಗರಿಷ್ಠ ರೆಸೊಲ್ಯುಶನ್-ನಲ್ಲಿ ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲಾಗಿದೆ |
00:38 | ಇಂಕ್ ಸ್ಕೇಪ್ ಅನ್ನು ಓಪನ್ ಮಾಡೋಣ. |
00:40 | ಟೂಲ್ ಬಾಕ್ಸ್ ನಲ್ಲಿರುವ ಟೆಕ್ಸ್ಟ್ ಟೂಲ್ ಅನ್ನು ಬಳಸಿ, ಟೆಕ್ಸ್ಟ್ ಅನ್ನು ಸೇರಿಸಬಹುದು. |
00:45 | ನಾವು ಎರಡು ರೀತಿಯಲ್ಲಿ ಟೆಕ್ಸ್ಟ್ ಅನ್ನು ಸೇರಿಸಬಹುದು.
|
00:50 | ಮೊದಲು ರೆಗ್ಯುಲರ್ ಟೆಕ್ಸ್ಟ್ ನ ಬಗೆಗೆ ತಿಳಿಯೋಣ. ಟೆಕ್ಸ್ಟ್ ಟೂಲ್ ಅನ್ನು ಕ್ಲಿಕ್ ಮಾಡಿ ಮತ್ತು ಕ್ಯಾನ್ವಾಸ್ ಮೇಲೆ ಕ್ಲಿಕ್ ಮಾಡಿ. |
00:57 | ಸ್ಪೋಕನ್ ಎಂದು ಟೈಪ್ ಮಾಡಿ. ಹೆಚ್ಚಿನ ಅಕ್ಷರಗಳಿಗೆ ಅವಕಾಶ ಮಾಡಿಕೊಡಲು, ಟೆಕ್ಸ್ಟ್ ಬಾಕ್ಸ್ ಬೆಳೆಯುತ್ತದೆ. |
01:03 | ಲೈನ್ ಬ್ರೇಕ್ ಗಳನ್ನು ಕೈಯಾರೆ ಸೇರಿಸಬೇಕು. ಹಾಗಾಗಿ ಮುಂದಿನ ಸಾಲಿಗೆ ಹೋಗಲು, Enter ಕೀಯನ್ನು ಒತ್ತಿ, ಟ್ಯುಟೋರಿಯಲ್ ಎಂದು ಟೈಪ್ ಮಾಡಿ. |
01:11 | ಹಿಂದಿನ ಸಾಲಿಗೆ ಶಬ್ದವನ್ನು ಸರಿಸಲು, T ಅಕ್ಷರದ ಹಿಂದೆ ಕರ್ಸರ್ ಅನ್ನು ಇಡಿ, ಮತ್ತು ಬ್ಯಾಕ್ ಸ್ಪೇಸ್ ಅನ್ನು ಒತ್ತಿ, ಮತ್ತು ಎರಡು ಶಬ್ದಗಳ ನಡುವೆ ಸ್ಪೇಸ್ ಅನ್ನು ಸೇರಿಸಿ. |
01:22 | ಹೀಗೆಯೇ, ಸ್ಪೋಕನ್ ಟ್ಯುಟೋರಿಯಲ್ ನ ಕೆಳಗೆ, ಹೊಸ ಸಾಲಿನಲ್ಲಿ, ಹೆಚ್ ಟಿ ಟಿ ಪಿ ಕೋಲನ್ ಸ್ಲ್ಯಾಶ್ ಸ್ಲ್ಯಾಶ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ(http://spoken-tutorial.org/) ಎಂದು ಟೈಪ್ ಮಾಡಿ. |
01:33 | ನಂತರ, ಫ್ಲೋಡ್ ಟೆಕ್ಸ್ಟ್ ಅನ್ನು ಬಳಸಿ ಟೆಕ್ಸ್ಟ್ ಅನ್ನು ಸೇರಿಸುವುದನ್ನು ಕಲಿಯೋಣ. |
01:38 | ಈ ಬಾರಿ, ಮೊದಲೇ ಸೇವ್ ಮಾಡಿದ, ಲಿಬರ ಆಫೀಸ್ ರೈಟರ್ ಫೈಲ್ ನಿಂದ ಟೆಕ್ಸ್ಟ್ ಅನ್ನು ಕಾಪಿ ಮಾಡುತ್ತೇನೆ. |
01:45 | ಟೆಕ್ಸ್ಟ್ ಅನ್ನು ಆಯ್ಕೆ ಮಾಡಲು, Ctrl ಮತ್ತು A ಕೀಗಳನ್ನು ಒತ್ತಿ ಮತ್ತು Ctrl ಮತ್ತು C ಒತ್ತಿ ಕಾಪಿ ಮಾಡಿ. |
01:52 | ಈಗ, ಇಂಕ್ ಸ್ಕೇಪ್ ಗೆ ಹಿಂತಿರುಗಿ. ಟೆಕ್ಸ್ಟ್ ಟೂಲ್ ಆಯ್ಕೆಯಾಗಿದೆಯೇ ಎಂದು ಪರೀಕ್ಷಿಸಿ. |
01:58 | ಕ್ಯಾನ್ವಾಸ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಆಯತ ಅಥವಾ ಚೌಕವಾದ ಟೆಕ್ಸ್ಟ್ ಏರಿಯಾ ಅನ್ನು ರೂಪಿಸಿ. |
02:03 | ಮೌಸ್ ನ ಬಟನ್ ಅನ್ನು ಬಿಟ್ಟ ನಂತರ, ಕ್ಯಾನ್ವಾಸ್ ನ ಮೇಲೆ ನೀಲಿ ಬಣ್ಣದ ಆಯತಾಕಾರದ ಬಾಕ್ಸ್ ರಚಿತವಾಗಿರುವುದನ್ನು ಗಮನಿಸಿ. |
02:10 | ಈಗ, ಟೆಕ್ಸ್ಟ್ ಬಾಕ್ಸ್ ನ ಒಳಗೆ, ಎಡ ಮೂಲೆಯಲ್ಲಿ, ಟೆಕ್ಸ್ಟ್ ಪ್ರಾಮ್ಪ್ಟ್ ಮಿನುಗುತ್ತಿರುವುದನ್ನು ಗಮನಿಸಿ. |
02:17 | ಕಾಪಿ ಮಾಡಿಕೊಂಡ ಟೆಕ್ಸ್ಟ್ ಅನ್ನು ಪೇಸ್ಟ್ ಮಾಡಲು Ctrl ಮತ್ತು V ಕೀಗಳನ್ನು ಒತ್ತಿ. |
02:22 | ಟೆಕ್ಸ್ಟ್ ಬಾಕ್ಸ್ ನ ಬಣ್ಣವು ಕೆಂಪು ಬಣ್ಣಕ್ಕೆ ತಿರುಗಿರುವುದನ್ನು ಗಮನಿಸಿ. |
02:25 | ಏಕೆಂದರೆ, ಸೇರಿಸಲ್ಪಟ್ಟ ಟೆಕ್ಸ್ಟ್, ಟೆಕ್ಸ್ಟ್ ಬಾಕ್ಸ್ ನ ಗಡಿ ಮೀರಿದೆ. |
02:31 | ಇದನ್ನು, ನಾವು ಟೆಕ್ಸ್ಟ್ ಬಾಕ್ಸ್ ನ ಬಲ ಮೂಲೆಯಲ್ಲಿರುವ ಸಣ್ಣ ಡೈಮಂಡ್ ಹ್ಯಾಂಡಲ್ ಅನ್ನು ಬಳಸಿಕೊಂಡು ಸರಿಪಡಿಸಬಹುದು. |
02:38 | ಇದನ್ನು ಕ್ಲಿಕ್ ಮಾಡಿ, ಟೆಕ್ಸ್ಟ್ ಬಾಕ್ಸ್ ಬಣ್ಣ ನೀಲಿ ಆಗುವವರೆಗೂ ಎಳೆಯಿರಿ. |
02:44 | ಟೆಕ್ಸ್ಟ್ ನ ಕೊನೆಯ ಸಾಲು, ಹಿಂದಿನ ಸಾಲಿನೊಂದಿಗೆ ಸೇರಿಕೊಂಡಿದೆ. |
02:48 | ಇದನ್ನು ಬೇರ್ಪಡಿಸಲು, ಕೊನೆಯ ಸಾಲಿನ ಆರಂಭದಲ್ಲಿ ಎರೆಡು ಬಾರಿ Enter ಕೀಯನ್ನು ಒತ್ತಿ. |
02:53 | ನಂತರ, ಟೆಕ್ಸ್ಟ್ ಅನ್ನು ಫಾರ್ಮ್ಯಾಟ್ ಮಾಡಲು ವಿವಿಧ ಆಯ್ಕೆಗಳನ್ನು ಕಲಿಯೋಣ. ಸ್ಪೋಕನ್ ಟ್ಯುಟೋರಿಯಲ್ ಶಬ್ದವನ್ನು ಕ್ಲಿಕ್ ಮಾಡಿ. |
03:01 | ಮೈನ್ ಮೆನುವಿನಲ್ಲಿ, ಟೆಕ್ಸ್ಟ್ ಅನ್ನು ಕ್ಲಿಕ್ ಮಾಡಿ, ನಂತರ ಟೆಕ್ಸ್ಟ್ ಎಂಡ್ ಫಾಂಟ್ ಅನ್ನು ಆಯ್ಕೆ ಮಾಡಿ. |
03:09 | ಫಾಂಟ್ ಮತ್ತು ಟೆಕ್ಸ್ಟ್ ಎಂದು ಎರಡು ಆಯ್ಕೆಗಳಿರುವ ಡೈಲಾಗ್ ಬಾಕ್ಸ್ ಓಪನ್ ಆಗುತ್ತದೆ. ಫಾಂಟ್ ಟ್ಯಾಬ್ ನಲ್ಲಿ ವಿವಿಧ ಆಯ್ಕೆಗಳಿವೆ. |
03:17 | ಲಭ್ಯವಿರುವ ಎಲ್ಲ ಫಾಂಟ್ ಗಳೂ, ಫಾಂಟ್ ಫ್ಯಾಮಿಲಿ ಯಲ್ಲಿ ಇರುತ್ತವೆ. ನಿಮ್ಮಿಷ್ಟದ ಯಾವುದೆ ಫಾಂಟ್ ಅನ್ನಾದರೂ ಆಯ್ಕೆ ಮಾಡಬಹುದು. |
03:25 | ಇಲ್ಲಿರುವ, ಪ್ರಿವಿವ್ ಬಾಕ್ಸ್ ನಲ್ಲಿ, ನಾವು ಆಯ್ಕೆ ಮಾಡಿದ ಫಾಂಟ್ ನ ಮುನ್ನೋಟ ನೋಡಬಹುದು. ಬಿಟ್ ಸ್ಟ್ರೀಮ್ ಕಾರ್ಟರ್(Bitstream Charter) ಎಂಬುದು ನನ್ನ ಆಯ್ಕೆ. |
03:33 | ನಾಲ್ಕು ಸ್ಟೈಲ್ ಆಯ್ಕೆಗಳಿವೆ – ನಾರ್ಮಲ್, ಇಟಾಲಿಕ್, ಬೋಲ್ಡ್ ಮತ್ತು ಬೋಲ್ಡ್ ಇಟಾಲಿಕ್. ನಿಮ್ಮ ಅವಶ್ಯಕತೆಯಂತೆ ಸ್ಟೈಲ್ ಅನ್ನು ಆರಿಸಿ. ನಾನು ಬೋಲ್ಡ್ ಅನ್ನು ಆರಿಸುತ್ತೇನೆ. |
03:46 | ಫಾಂಟ್ ಸೈಸ್ ಅನ್ನು ಬದಲಾಯಿಸಲು, ಡ್ರಾಪ್ ಡೌನ್ ಆರೋ ಅನ್ನು ಕ್ಲಿಕ್ ಮಾಡಿ, ಮತ್ತು ಗಾತ್ರವನ್ನು ಆಯ್ಕೆ ಮಾಡಿ. ಇದು ಟೈಟಲ್ ಆಗಿರುವುದರಿಂದ, ನಾನು ದೊಡ್ಡ ಫಾಂಟ್, ಅರವತ್ನಾಲ್ಕನ್ನು ಆಯ್ಕೆ ಮಾಡುತ್ತೇನೆ, |
03:57 | ನಂತರ ಲೇ ಔಟ್. |
03:59 | ಈ ಆಯ್ಕೆಗೆ ಮುನ್ನೋಟ ತೋರುತ್ತಿಲ್ಲವಾದ್ದರಿಂದ, ಇದರ ಬಗೆಗೆ ಸ್ವಲ್ಪ ಹೊತ್ತಿನಲ್ಲಿ ಕಲಿಯೋಣ. |
04:04 | ಈಗ, ಫಾಂಟ್ ನ ನಂತರ ಇರುವ ಟೆಕ್ಸ್ಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ, ಒಳಗೆ ಟೆಕ್ಸ್ಟ್ ಇರುವ ಪ್ರಿವಿವ್ ವಿಂಡೋ ಇದೆ. |
04:12 | ಟೆಕ್ಸ್ಟ್ ಗೆ ಬೇಕಾದ ಬದಲಾವಣೆಗಳನ್ನು ಇಲ್ಲಿ ಮಾಡಬಹುದು. |
04:16 | ಅಪ್ಲೈ ಬಟನ್ ಅನ್ನು ಕ್ಲಿಕ್ ಮಾಡಿ, ಮತ್ತು ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. ಟೆಕ್ಸ್ಟ್ ಈಗ ಫಾರ್ಮ್ಯಾಟ್ ಆಗಿರುವುದನ್ನು ಗಮನಿಸಿ. |
04:23 | ಕೆಳಗಿರುವ, ಕಲರ್ ಪ್ಯಾಲೆಟ್ ಅನ್ನು ಬಳಸಿ, ಟೆಕ್ಸ್ಟ್ ನ ಬಣ್ಣವನ್ನು ಬದಲಾಯಿಸಬಹುದು. ಕೆಂಗಂದು ಬಣ್ಣವನ್ನು ಕ್ಲಿಕ್ ಮಾಡುತ್ತೇನೆ. |
04:30 | ನಂತರ, ಯು ಆರ್ ಎಲ್ ನ ಟೆಕ್ಸ್ಟ್ http://spoken-tutorial.org ಅನ್ನು ಆಯ್ಕೆ ಮಾಡಿ. |
04:40 | ಟೂಲ್ ಕಂಟ್ರೋಲ್ ಬಾರ್ ನಲ್ಲಿಯೂ ಟೆಕ್ಸ್ಟ್ ಅನ್ನು ಫಾರ್ಮ್ಯಾಟ್ ಮಾಡಲು ಆಯ್ಕೆಗಳಿವೆ. |
04:44 | ಫಾಂಟ್ ಅನ್ನು ಬಿಟ್ ಸ್ಟ್ರೀಮ್ ಕಾರ್ಟರ್ ಎಂದೂ, ಫಾಂಟ್ ಸೈಸ್ ಅನ್ನು ಇಪ್ಪತ್ತೆಂಟು ಎಂದೂ, ಮತ್ತು ಬಣ್ಣವನ್ನು ನೀಲಿಗೆ ಬದಲಾಯಿಸುತ್ತೇನೆ. |
04:57 | ಈಗ, ಪ್ಯಾರಾಗ್ರಾಫ್ ಟೆಕ್ಸ್ಟ್ ಅನ್ನು ಆಯ್ಕೆ ಮಾಡೋಣ. ಟೆಕ್ಸ್ಟ್ ಟೂಲ್ ಈಗಾಗಲೇ ಆಯ್ಕೆ ಆಗಿದ್ದಲ್ಲಿ, ಟೆಕ್ಸ್ಟ್ ನ ಮೇಲೆ ಕ್ಲಿಕ್ ಮಾಡುವುದರಿಂದ ಟೆಕ್ಸ್ಟ್ ಬಾಕ್ಸ್ ನ ಒಳಗೆ ಹೋಗಬಹುದು. |
05:04 | ಟೆಕ್ಸ್ಟ್ ನ ಫಾಂಟ್ ಸೈಸ್ ಅನ್ನು ಇಪ್ಪತ್ತೈದು ಎಂದು ಬದಲಾಯಿಸುತ್ತೇನೆ. |
05:08 | ಟೆಕ್ಸ್ಟ್ ಅನ್ನು ಕ್ಯಾನ್ವಾಸ್ ನ ಒಳಗೆ ಸರಿಸಲು, ಡೈಮಂಡ್ ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ ಮತ್ತು ಎಳೆಯಿರಿ. |
05:15 | ನಂತರ, ಟೆಕ್ಸ್ಟ್ ಅನ್ನು ಅಲೈನ್ ಮಾಡೋಣ. |
05:19 | ಟೂಲ್ ಕಂಟ್ರೋಲ್ ಬಾರ್ ನಲ್ಲಿರುವ, ಇಟಾಲಿಕ್ ಐಕಾನ್ ನ ಪಕ್ಕದ ನಾಲ್ಕು ಐಕಾನ್ ಗಳು ಟೆಕ್ಸ್ಟ್ ಅನ್ನು ಟೆಕ್ಸ್ಟ್ ಬಾಕ್ಸ್ ನ ಎಡ, ಮಧ್ಯ ಅಥವಾ ಬಲ ಭಾಗಕ್ಕೆ ಅಲೈನ್ ಮಾಡಲು ಸಹಾಯಕವಾಗಿವೆ. |
05:30 | ನಾಲ್ಕನೇ ಅಯ್ಕೆ, ಟೆಕ್ಸ್ಟ್ ಅನ್ನು ಟೆಕ್ಸ್ಟ್ ಬಾಕ್ಸ್ ನ ಗಡಿಯ ಒಳಗೆ ಜಸ್ಟಿಫೈ ಮಾಡುತ್ತದೆ. ಮುಂದುವರೆಯುವ ಮೊದಲು ಲೆಫ್ಟ್ ಅಲೈನ್ ಮೇಲೆ ಕ್ಲಿಕ್ ಮಾಡುತ್ತೇನೆ. |
05:39 | ಅಲೈನ್ ಮತ್ತು ಡಿಸ್ಟ್ರಿಬ್ಯೂಟ್ ಆಯ್ಕೆಯನ್ನು ಬಳಸಿಯೂ ಟೆಕ್ಸ್ಟ್ ಅನ್ನು ಅಲೈನ್ ಮಾಡಬಹುದು. |
05:43 | ಮೈನ್ ಮೆನುವಿನಲ್ಲಿ ಆಬ್ಜೆಕ್ಟ್ ಮೆನುವನ್ನು ಕ್ಲಿಕ್ ಮಾಡಿ. ನಂತರ ಅಲೈನ್ ಮತ್ತು ಡಿಸ್ಟ್ರಿಬ್ಯೂಟ್ ಆಯ್ಕೆಯನ್ನು ಕ್ಲಿಕ್ ಮಾಡಿ. |
05:51 | ಈಗ, ಸ್ಪೋಕನ್ ಟ್ಯುಟೋರಿಯಲ್ ಎಂಬುದನ್ನು ಕೇಂದ್ರಕ್ಕೆ ಸರಿಸೋಣ. ಅದನ್ನು ಕ್ಲಿಕ್ ಮಾಡಿ. |
05:57 | ಮೊದಲು, ರಿಲೇಟಿವ್ ಟು ಎಂಬ ಪ್ಯಾರಾಮೀಟರ್, ಪೇಜ್ ಎಂದು ಸೆಟ್ ಆಗಿದೆಯೇ ಎಂದು ಪರೀಕ್ಷಿಸಿ. |
06:01 | ಹಾಗಾಗಿ, ಸೆಂಟರ್ ಆನ್ ವರ್ಟಿಕಲ್ ಆಕ್ಸಿಸ್ ಅನ್ನು ಕ್ಲಿಕ್ ಮಾಡಿ. ಈಗ, ಟೆಕ್ಸ್ಟ್ ಮಧ್ಯಕ್ಕೆ ಅಲೈನ್ ಆಗಿರುವುದನ್ನು ಗಮನಿಸಿ. |
06:10 | ಕೆಳಗಿರುವ ಖಾಲಿ ಜಾಗದಲ್ಲಿ ಇನ್ನಷ್ಟು ಟೆಕ್ಸ್ಟ್ ಅನ್ನು ಸೇರಿಸೋಣ. |
06:13 | ಫಾಸ್ ಕ್ಯಾಟಗರೀಸ್(FOSS Categories) ಎಂದು ಟೈಪ್ ಮಾಡಿ. ಈಗ, ಸೆಂಟರ್ ಆನ್ ವರ್ಟಿಕಲ್ ಆಕ್ಸಿಸ್ ಎಂಬುದನ್ನು ಕ್ಲಿಕ್ ಮಾಡಿ, ಇದನ್ನು ಪೇಜ್ ನ ಮಧ್ಯಕ್ಕೆ ಅಲೈನ್ ಮಾಡಿ. |
06:25 | ಕೆಲವು ಫಾಸ್ ಹೆಸರುಗಳನ್ನು ಟೈಪ್ ಮಾಡಿ. ಉದಾಹರಣೆಗೆ, ಲಿನಕ್ಸ್ (Linux), ಲೇಟೆಕ್ಸ್ (LaTeX), ಸೈಲ್ಯಾಬ್ (Scilab), ಪೈಥಾನ್ (Python). ಇವುಗಳನ್ನು ಪ್ರತ್ಯೇಕವಾಗಿ ಟೈಪ್ ಮಾಡಿ, ಕ್ಯಾನ್ವಾಸ್ ನ ಮೇಲೆ ಹರಡಿ. |
06:39 | ಈಗ, ಈ ಟೆಕ್ಸ್ಟ್ ಗಳನ್ನು ಒಂದೇ ಸಾಲಿನಲ್ಲಿ ಸಮಾನ ಅಂತರದಲ್ಲಿ ಅಲೈನ್ ಮಾಡೋಣ. |
06:44 | shift ಕೀಯನ್ನು ಬಳಸಿ, ನಾಲ್ಕು ಟೆಕ್ಸ್ಟ್ ಗಳನ್ನು ಆಯ್ಕೆ ಮಾಡಿ. ಅಲೈನ್ ಬೇಸ್ ಲೈನ್ ಆಫ್ ಟೆಕ್ಸ್ಟ್ (Align baseline of text) ಮತ್ತು ಡಿಸ್ಟ್ರಿಬ್ಯೂಟ್ ಬೇಸ್ ಲೈನ್ ಆಫ್ ಟೆಕ್ಸ್ಟ್ ಹಾರಿಜಾಂಟಲಿ (Distribute baseline of text horizontally) ಎಂಬುದನ್ನು ಕ್ಲಿಕ್ ಮಾಡಿ. |
06:58 | ಶಬ್ದಗಳ ನಡುವಿನ ಅಂತರ ಅಸಮಾನವಾಗಿರುವುದನ್ನು ಗಮನಿಸಿ. |
07:02 | ಮೊದಲ ಶಬ್ದದ ಮೊದಲ ಅಕ್ಷರ ಮತ್ತು ಎರಡನೇ ಶಬ್ದದ ಮೊದಲ ಅಕ್ಷರ ಸಮಾನ ಅಂತರದಲ್ಲಿದೆ. ಆದರೆ ಶಬ್ದಗಳು ಸಮಾನ ಅಂತರದಲ್ಲಿಲ್ಲ. |
07:10 | ಇದು, ವರ್ಟಿಕಲ್ ಟೆಕ್ಸ್ಟ್ ಗಳಿಗೂ ಹೀಗೆಯೇ ಕೆಲಸ ಮಾಡುತ್ತದೆ. |
07:15 | ಈ ಆಯ್ಕೆಗಳು ಕೆಲವು ಸಂದರ್ಭಗಳಲ್ಲಿ ಉಪಯುಕ್ತವಾಗಿವೆ. |
07:20 | ನಾವು, ಈ ಶಬ್ದಗಳ ನಡುವಿನ ಅಂತರವನ್ನು ಸರಿಸಮ ಮಾಡೋಣ. |
07:23 | ಅದಕ್ಕಾಗಿ, ಡಿಸ್ಟ್ರಿಬ್ಯೂತ್ ನ ಕೆಳಗಿರುವ ಮೊದಲನೇ ಸಾಲಿನಲ್ಲಿ, ನಾಲ್ಕನೇ ಐಕಾನ್ ಅನ್ನು ಕ್ಲಿಕ್ ಮಾಡಿ. ಈಗ, ಶಬ್ದಗಳ ನಡುವಿನ ಅಂತರ ಸಮವಾಗಿದೆ. |
07:32 | ನಂತರ, ಪ್ಯಾರಗ್ರಾಫ್ ಟೆಕ್ಸ್ಟ್ ನ ಸಾಲುಗಳ ನಡುವಿನ ಅಂತರವನ್ನು ಹೊಂದಿಸಲು ಕಲಿಯೋಣ. |
07:38 | ಟೆಕ್ಸ್ಟ್ ಬಾಕ್ಸ್ ನ ಒಳಗೆ ಪ್ರವೇಶಿಸಲು ಪ್ಯಾರಗ್ರಾಫ್ ಟೆಕ್ಸ್ಟ್ ಮೇಲೆ ಡಬಲ್ ಕ್ಲಿಕ್ ಮಾಡಿ. |
07:44 | ಟೂಲ್ ಕಂಟ್ರೋಲ್ ಬಾರ್ ನಲ್ಲಿರುವ, ಸ್ಪೇಸಿಂಗ್ ಬಿಟ್ವೀನ್ ದ ಲೈನ್ಸ್ ಐಕಾನ್, ಸಾಲುಗಳ ನಡುವಿನ ಅಂತರವನ್ನು ಹೆಚ್ಚಿಸಲು ಅಥವಾ ತಗ್ಗಿಸಲು ಸಹಾಯಕವಾಗಿದೆ. |
07:50 | ನಾನು ಅಂತರವನ್ನು ಹೆಚ್ಚಿಸಿದಾಗ ಏನಾಗುವುದು ಎಂಬುದನ್ನು ಗಮನಿಸಿ. |
07:55 | ಲೈನ್ ಸ್ಪೇಸಿಂಗ್ ಅನ್ನು ಒಂದು ಬಿಂದು ಐವತ್ತು ಎಂದು ಇರಿಸೋಣ. |
07:59 | ಮುಂದಿನ ಐಕಾನ್, ಅಕ್ಷರಗಳ ನಡುವಿನ ಅಂತರವನ್ನು ಹೊಂದಿಸಲು ಸಹಾಯಕವಾಗಿದೆ. ಪುನಃ, ಮೇಲೆ ಮತ್ತು ಕೆಳಗಿನ ಆರೋ(arrow) ಗಳನ್ನು ಒತ್ತಿ, ಬದಲಾವಣೆಗಳನ್ನು ಗಮನಿಸಿ. |
08:07 | ಸ್ಪೇಸ್ ಪ್ಯಾರಾಮೀಟರ್ ಅನ್ನು ಸೊನ್ನೆ ಎಂದಿರಿಸೋಣ. |
08:12 | ಕ್ಯಾನ್ವಾಸ್ ನ ಎರಡೂ ಲಂಬ ಮೂಲೆಗಳಲ್ಲಿ ಖಾಲಿ ಜಾಗವಿರುವುದನ್ನು ಗಮನಿಸಿ. ಇದನ್ನು ಸ್ವಲ್ಪ ಟೆಕ್ಸ್ಟ್ ನಿಂದ ತುಂಬಿಸಬಹುದು. |
08:19 | ಕ್ಯಾನ್ವಾಸ್ ನ ಹೊರಗೆ ಎಲ್ಲಿಯಾದರೂ, ಲರ್ನ್ ಓಪನ್ ಸೋರ್ಸ್ ಸಾಫ್ಟ್ವೇರ್ ಫಾರ್ ಫ್ರೀ ಎಂಬ ಸಾಲನ್ನು ಟೈಪ್ ಮಾಡಿ. |
08:24 | ಫಾಂಟ್ ಆನ್ನು ಉಬುಂಟು ಎಂದೂ, ಫಾಂಟ್ ಸೈಸ್ ಅನ್ನು ಇಪ್ಪತ್ತೆರಡು ಎಂದು ಬದಲಾಯಿಸಿ ಮತ್ತು ಅದನ್ನು ಬೋಲ್ಡ್ ಮಾಡಿ. |
08:34 | ಈಗ, ಟೂಲ್ ಕಂಟ್ರೋಲ್ ಬಾರ್ ನಲ್ಲಿರುವ, ಕೊನೆಯ ಐಕಾನ್ ವರ್ಟಿಕಲ್ ಟೆಕ್ಸ್ಟ್ ಎಂಬುದನ್ನು ಕ್ಲಿಕ್ ಮಾಡಿ |
08:39 | ಟೆಕ್ಸ್ಟ್ ಈಗ ಲಂಬವಾಗಿ ಜೋಡಿಸಲ್ಪಟ್ಟಿರುವುದನ್ನು ಗಮನಿಸಿ. |
08:43 | ಸೆಲೆಕ್ಟರ್ ಟೂಲ್ ಅನ್ನು ಬಳಸಿ ಟೆಕ್ಸ್ಟ್ ಅನ್ನು ಕ್ಲಿಕ್ ಮಾಡಿ ಮತ್ತು ಇದನ್ನು ಕ್ಯಾನ್ವಾಸ್ ನ ಎಡ ಮೂಲೆಗೆ ಸರಿಸಿ. |
08:49 | ನಕಲು ಮಾಡಲು, Ctrl ಮತ್ತು D ಕೀಗಳನ್ನು ಒತ್ತಿ, ಮತ್ತು Ctrl ಕೀಯನ್ನು ಬಳಸಿ, ಪ್ರತಿಯನ್ನು ಕ್ಯಾನ್ವಾಸ್ ನ ಇನ್ನೊಂದು ಮೂಲೆಗೆ ಸರಿಸಿ. |
08:59 | ಈಗ, ಪ್ಯಾರಾಗ್ರಾಫ್ ನಲ್ಲಿರುವ ಟೆಕ್ಸ್ಟ್ ಗೆ ಬುಲೆಟ್ ಪಾಯಿಂಟ್ಸ್ ಅನ್ನು ಸೇರಿಸೋಣ. |
09:03 | ಟೆಕ್ಸ್ಟ್ ಗಳಿಗೆ ಬುಲೆಟ್ ಅಥವಾ ನಂಬರ್ ಲಿಸ್ಟ್ ಅನ್ನು ಸೇರಿಸುವುದು ಇಂಕ್ ಸ್ಕೇಪ್ ನಲ್ಲಿ ಇಲ್ಲ. ಹಾಗಾಗಿ, ಇವುಗಳನ್ನು ನಾವೇ ಮಾಡಬೇಕು. |
09:11 | ಎಲಿಪ್ಸ್ ಟೂಲ್ ಅನ್ನು ಕ್ಲಿಕ್ ಮಾಡಿ. ಕೆಂಪು ಬಣ್ಣದ ಸಣ್ಣ ವೃತ್ತವನ್ನು ರಚಿಸಿ. |
09:17 | ಈಗ, ಈ ಬುಲೆಟ್ ಅನ್ನು ಪ್ಯಾರಾಗ್ರಾಫ್ ನ ಮೊದಲನೇ ಸಾಲಿಗೆ ಸರಿಸಿ. ಇದನ್ನು ನಕಲು ಮಾಡಿ, ಪ್ರತಿಯನ್ನು ಮುಂದಿನ ಸಾಲಿಗೆ ಸರಿಸಿ. |
09:27 | ಎಲ್ಲ ಸಾಲುಗಳಿಗೂ ಇದನ್ನು ಪುನಃ ಮಾಡಿ. |
09:32 | ಈಗ, ನಮ್ಮ ಅಗತ್ಯಗಳಿಗೆ ಅನುಗುಣವಾಗಿ ನಮ್ಮ ಟೆಕ್ಸ್ಟ್ ಇದೆ. |
09:36 | ಇದು ಫ್ಲೈಯರ್ ನಂತೆ ಕಾಣಲು ಕೊನೆಯದಾಗಿ ಕೆಲವು ಸೌಂದರ್ಯವನ್ನು ಹೆಚ್ಚಿಸುವ ಬದಲಾವಣೆಗಳನ್ನು ಮಾಡಿ. |
09:41 | ಇದು ನಮ್ಮ ಪೂರ್ಣಗೊಂಡ ಫ್ಲೈಯರ್. |
09:45 | ನಾನು, ಮೇಲೆ ಮತ್ತು ಕೆಳಗೆ ಬಾರ್ಡರ್ ಗಳನ್ನು ಸೇರಿಸಿದ್ದೇನೆ. ಮತ್ತು ಟೆಕ್ಸ್ಟ್ ಗಳಿಗೆ ದುಂಡಾದ ಆಯತ ಮತ್ತು ದೀರ್ಘವೃತ್ತಗಳನ್ನು ಹಾಕಿದ್ದೇನೆ. |
09:51 | ನಿಮ್ಮ ಫ್ಲೈಯರ್ ಗೆ, ವಿಭಿನ್ನ ವಿನ್ಯಾಸಗಳನ್ನು ರಚಿಸಲು ನಿಮ್ಮ ಸೃಜನಶೀಲತೆ ಬಳಸಬಹುದು. |
09:57 | ಸಾರಾಂಶ ತಿಳಿಯೋಣ. |
09:59 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು :
|
10:06 | ಸಾಮಾನ್ಯ ಫ್ಲೈಯರ್ ಅನ್ನು ರಚಿಸುವುದನ್ನೂ ಕೂಡಾ ಕಲಿತೆವು. |
10:09 | ನಿಮಗಾಗಿ ಒಂದು ಅಸೈನ್ಮೆಂಟ್ ಇಲ್ಲಿದೆ. |
10:11 | ಹೀಗೆ ಒಂದು ಫ್ಲೈಯರ್ ರಚಿಸಿ
|
10:19 | ಸ್ಟಾರ್ ಟೂಲ್ ಅನ್ನು ಬಳಸಿ ಹತ್ತು ಮೂಲೆಗಳ ನಕ್ಷತ್ರವನ್ನು ರಚಿಸಿ.
|
10:31 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
10:39 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
10:47 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
10:57 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
11:01 | ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
11:03 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ರಾಕೇಶ. |