ExpEYES/C2/Communicating-to-ExpEYES-using-Python/Kannada

From Script | Spoken-Tutorial
Revision as of 06:32, 11 October 2016 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ನಮಸ್ಕಾರ. Communicating to ExpEYES using Python (ಕಮ್ಯುನಿಕೇಟಿಂಗ್ ಟು ಎಕ್ಸ್ಪೈಸ್ ಯೂಸಿಂಗ್ ಪೈಥನ್) ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:07 ಈ ‘ಟ್ಯುಟೋರಿಯಲ್’ನಲ್ಲಿ, ನಾವು:
  • 'Python' ನ ಪರಿಚಯ
  • 'Plot ವಿಂಡೋ' ಹಾಗೂ ‘ಪೈಥನ್’ ಗಳನ್ನು ಬಳಸಿ AC ವೋಲ್ಟೇಜ್ ಅನ್ನು ಅಳೆಯುವುದು
  • 'Sine wave' ಅನ್ನು ಉತ್ಪಾದಿಸುವುದು
  • ‘ಪೈಥನ್’ ಅನ್ನು ಬಳಸಿ ಬಾಹ್ಯ (ಎಕ್ಸ್ಟರ್ನಲ್) ಮತ್ತು ಆಂತರಿಕ (ಇಂಟರ್ನಲ್) ವೋಲ್ಟೇಜ್ ಗಳನ್ನು ಅಳೆಯುವುದು
00:22
  • 'Plot ವಿಂಡೋ' ಹಾಗೂ ‘ಪೈಥನ್’ ಗಳನ್ನು ಬಳಸಿ 'ಕೆಪ್ಯಾಸಿಟನ್ಸ್' (capacitance) ಮತ್ತು ರೆಜಿಸ್ಟನ್ಸ್ (resistance) ಗಳನ್ನು ಅಳೆಯುವುದು
  • 'Square wave' ಅನ್ನು (ಚೌಕಾಕಾರದ ತರಂಗ) ಉತ್ಪಾದಿಸುವುದು
  • ನಮ್ಮ ಪ್ರಯೋಗಗಳಿಗಾಗಿ ಕನೆಕ್ಷನ್ ಗಳನ್ನು ಮತ್ತು ಸರ್ಕೀಟ್ ಡೈಗ್ರಾಮ್ ಗಳನ್ನು ತೋರಿಸುವುದು

ಇತ್ಯಾದಿಗಳ ಬಗ್ಗೆ ಕಲಿಯುವೆವು.

00:34 ಇಲ್ಲಿ ನಾನು:
  • ExpEYES ಆವೃತ್ತಿ 3.1.0
  • Ubuntu Linux OS (ಉಬಂಟು ಲಿನಕ್ಸ್ ಒ ಎಸ್) ಆವೃತ್ತಿ 14.10 ಇವುಗಳನ್ನು ಬಳಸುತ್ತಿದ್ದೇನೆ.
00:43 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು:
  • ExpEYES Junior ಇಂಟರ್ಫೇಸ್
  • Python ಪ್ರೊಗ್ರಾಮಿಂಗ್

ಇವುಗಳನ್ನು ಚೆನ್ನಾಗಿ ತಿಳಿದಿರಬೇಕು.

00:52 ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.
00:56 ‘ಪೈಥನ್’ ನ ಪರಿಚಯದೊಂದಿಗೆ ನಾವು ಆರಂಭಿಸೋಣ.
01:00 ‘ಪೈಥನ್’ ಸರಳವಾಗಿದ್ದು ಕಲಿಯಲು ಸುಲಭವಾದ ಒಂದು ಪ್ರಭಾವಶಾಲಿ ಪ್ರೊಗ್ರಾಮಿಂಗ್ ಭಾಷೆಯಾಗಿದೆ.
  • ಇದು ನಿಃಶುಲ್ಕ ಮತ್ತು 'ಓಪನ್ ಸೋರ್ಸ್' ಆಗಿದ್ದು, ಕ್ರಾಸ್ ಪ್ಲಾಟ್ಫಾರ್ಮ್ ಹೈ ಲೆವೆಲ್ ಭಾಷೆಯಾಗಿದೆ.
  • ಇದು, 'Object oriented' (ಆಬ್ಜೆಕ್ಟ್ ಓರಿಎಂಟೆಡ್) ಪ್ರೊಗ್ರಾಂಗೆ ಪರಿಣಾಮಕಾರಿ ವಿಧಾನವನ್ನು ಹೊಂದಿದೆ.
01:15 ನಮ್ಮ ಸಿಸ್ಟಂ ನ ಮೇಲೆ ‘ಪೈಥನ್’ ಅನ್ನು ಇನ್ಸ್ಟಾಲ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳೋಣ.
01:18 'ಟರ್ಮಿನಲ್' ಅನ್ನು ತೆರೆಯಲು 'CTRL+ ALT' ಮತ್ತು 'T' ಕೀಗಳನ್ನು ಒತ್ತಿ.
01:22 'Python ಇಂಟರ್ಪ್ರಿಟರ್' ಅನ್ನು ಆರಂಭಿಸಲು, "python" ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ. 'ಟರ್ಮಿನಲ್' ನ ಮೇಲೆ, ‘ಪೈಥನ್’ ನ ಡೀಫಾಲ್ಟ್ ಆವೃತ್ತಿಯ ಬಗ್ಗೆ ವಿವರಗಳನ್ನು ತೋರಿಸಲಾಗುವುದು.
01:36 ಪ್ರದರ್ಶಿಸಲಾದ ಮೂರು 'ಆಂಗಲ್ ಬ್ರಾಕೆಟ್'ಗಳು (angle brackets) 'Python' ಪ್ರಾಂಪ್ಟ್ ಅನ್ನು (>>>)ಸೂಚಿಸುತ್ತವೆ. ಈಗ, ನೀವು ಕಮಾಂಡ್ ಗಳನ್ನು ಟೈಪ್ ಮಾಡಲು ಸಿದ್ಧರಾಗಿದ್ದೀರಿ.
01:44 ‘ಪೈಥನ್’ ಪ್ರೊಗ್ರಾಮಿಂಗ್ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.
01:49 ನಾನು ಈ ಸಾಧನದ ಮೇಲ್ತುದಿಯ 'ಪ್ಯಾನೆಲ್'ನ ಮೇಲಿರುವ ಚಾನಲ್ ಗಳ ಬಗ್ಗೆ ಚರ್ಚಿಸುವೆನು.
01:54 ಮೇಲ್ತುದಿಯ ‘ಪ್ಯಾನೆಲ್’ ನ ಮೇಲೆ, ಪ್ರತಿಯೊಂದು 'ಟರ್ಮಿನಲ್' ಅನ್ನು ಒಂದು ನಿರ್ದಿಷ್ಟ ಚಾನೆಲ್ ನಂಬರ್ ಗೆ ನಿಗದಿಪಡಿಸಲಾಗಿದೆ.
02:00 ಉದಾಹರಣೆಗೆ- ‘ಚಾನಲ್ 1’ ಅನ್ನು 'A1' ಗೆ ಹಾಗೂ ‘ಚಾನಲ್ 2’ ಅನ್ನು 'A2' ಗೆ ನಿಗದಿಪಡಿಸಲಾಗಿದೆ.
02:07 ಈ ಸಾಧನಕ್ಕೆ ತಂತಿಗಳನ್ನು (wires) ಹೇಗೆ ಜೋಡಿಸುವುದೆಂದು ನಾನು ತೋರಿಸುವೆನು.
02:11 ಈ ಸಾಧನವು ಎರಡೂ ಬದಿಯಲ್ಲಿ 'ಸ್ಕ್ರೂ ಟರ್ಮಿನಲ್' ಗಳನ್ನು ಹೊಂದಿದೆ.
02:15 ಕನೆಕ್ಷನ್ ಮಾಡಲು, ನಾವು ಟರ್ಮಿನಲ್ ಗಳಲ್ಲಿ ತಂತಿಗಳನ್ನು ಸೇರಿಸಿ ಸ್ಕ್ರೂಗಳನ್ನು ಬಿಗಿಗೊಳಿಸುತ್ತೇವೆ. ಇಲ್ಲಿ 'A2 ' ಅನ್ನು 'SINE' ಗೆ ಜೋಡಿಸಲಾಗಿದೆ.
02:22 ಇದು ಸರ್ಕೀಟ್ ಡೈಗ್ರಾಮ್ ಆಗಿದೆ.
02:28 ನಾವು 'A2 ' ದ ವೋಲ್ಟೇಜ್ ಅನ್ನು ಅಳೆಯಲು ಒಂದು ಪ್ರಯೋಗವನ್ನು ಮಾಡೋಣ ಮತ್ತು ಇದು 'Sine wave' ಇರುತ್ತದೆ ಎಂದು ತೋರಿಸೋಣ.
02:36 ನಾವು 'ಪ್ಲಾಟ್ ವಿಂಡೋ'ದ ಮೇಲೆ ಫಲಿತಾಂಶವನ್ನು ನೋಡೋಣ.
02:39 'ಪ್ಲಾಟ್ ವಿಂಡೋ'ದ ಮೇಲೆ, 'A2' ದ ವೋಲ್ಟೇಜ್ಅನ್ನು ತೋರಿಸಲು ಅದರ ಮೇಲೆ ಕ್ಲಿಕ್ ಮಾಡಿ. 'A2' ದ ವೋಲ್ಟೇಜ್ ಅನ್ನು ಕೆಳಗೆ ತೋರಿಸಲಾಗಿದೆ.
02:48 A2 ದ ಮೇಲೆ ಕ್ಲಿಕ್ ಮಾಡಿ ಮತ್ತು ‘ಚಾನಲ್’ 'CH1'ಗೆ ಎಳೆಯಿರಿ. ನಾವು 'A2' ಅನ್ನು 'CH1' ಗೆ ಎಳೆದಾಗ 'A2 ' ದ ಇನ್ಪುಟ್ ಡೇಟಾಅನ್ನು 'CH1'ಗೆ ನಿಗದಿಪಡಿಸಲಾಗುವುದು.
02:59 'Sine wave' ಅನ್ನು ತೋರಿಸಲು, 'msec/div' ಸ್ಲೈಡರ್ ಅನ್ನು ನಡೆಸಿ. 'A2'ದ ವೋಲ್ಟೇಜ್ ಗಳಲ್ಲಿಯ ಬದಲಾವಣೆಯನ್ನು ತೋರಿಸಲು 'A2' ದ ಮೇಲೆ ಮೇಲೆ ಕ್ಲಿಕ್ ಮಾಡಿ.
03:09 'CH1' ಮೇಲೆ ಕ್ಲಿಕ್ ಮಾಡಿ ಮತ್ತು 'FIT' ಗೆ ಎಳೆಯಿರಿ. 'A2' ದ ವೋಲ್ಟೇಜ್ ಮತ್ತು ಫ್ರಿಕ್ವೆನ್ಸಿ ಗಳು ಬಲಬದಿಯಲ್ಲಿ ಪ್ರದರ್ಶಿಸಲ್ಪಡುತ್ತವೆ.
03:16 ನಾವು ಇದೇ ಪ್ರಯೋಗವನ್ನು ಮಾಡುವೆವು ಮತ್ತು ‘ಪೈಥನ್’ ಅನ್ನು ಬಳಸಿ 'A2' ದ ವೋಲ್ಟೇಜ್ ಅನ್ನು ಅಳೆಯುವೆವು.
03:23 ದಯವಿಟ್ಟು ಗಮನಿಸಿ, ‘ಪೈಥನ್’ ಇಂಟರ್ಪ್ರಿಟರ್ ನಲ್ಲಿ ಎರರ್ ಗಳನ್ನು ತಪ್ಪಿಸಲು,
  • ಈ ಸಾಧನವನ್ನು ಸಿಸ್ಟಂಗೆ ಜೋಡಿಸಿ
  • ಪ್ಲಾಟ್ ವಿಂಡೋವನ್ನು ಕ್ಲೋಸ್ ಮಾಡಿ.
03:31 'ExpEYES' ನಿಂದ 'eyes' ಲೈಬ್ರರಿಯನ್ನು ಇಂಪೋರ್ಟ್ ಮಾಡಲು, ಪ್ರಾಂಪ್ಟ್ ಇರುವಲ್ಲಿ ಹೀಗೆ ಟೈಪ್ ಮಾಡಿ: "import expeyes.eyesj". ‘Enter’ ಅನ್ನು ಒತ್ತಿ.
03:40 ಹೀಗೆ ಟೈಪ್ ಮಾಡಿ: “p=expeyes.eyesj.open()” ಹಾಗೂ ‘Enter’ ಅನ್ನು ಒತ್ತಿ. ಒಂದುವೇಳೆ ಹಾರ್ಡ್ವೇರ್ ಕಂಡುಬಂದರೆ, 'open()' ಫಂಕ್ಷನ್, ಒಂದು ಆಬ್ಜೆಕ್ಟ್ ಅನ್ನು ಹಿಂದಿರುಗಿಸುತ್ತದೆ.
03:53 ಈ ಸಾಲುಗಳು 'ExpEYES' ಲೈಬ್ರರಿಯನ್ನು ಲೋಡ್ ಮಾಡುತ್ತವೆ ಹಾಗೂ ಸಾಧನಕ್ಕೆ ಕನೆಕ್ಷನ್ ಅನ್ನು ಸ್ಥಾಪಿಸುತ್ತವೆ.
03:58 'A2' ದ ವೋಲ್ಟೇಜ್ ಅನ್ನು ನೋಡಲು, ಹೀಗೆ ಟೈಪ್ ಮಾಡಿ: "print p.get_voltage" ಬ್ರಾಕೆಟ್ ಗಳಲ್ಲಿ "2" ಹಾಗೂ ‘Enter’ ಅನ್ನು ಒತ್ತಿ.
04:08 ಔಟ್ಪುಟ್, 'A2' ದ ವೋಲ್ಟೇಜ್ ಅನ್ನು ತೋರಿಸುತ್ತದೆ. ಹೀಗೆಯೇ, ನಾವು 'A2' ದ ವಿವಿಧ ವೋಲ್ಟೇಜ್ ಗಳನ್ನು ತೋರಿಸಬಹುದು.
04:15 'A2' ದ ವೋಲ್ಟೇಜ್, 'AC ' ವೋಲ್ಟೇಜ್ ಆಗಿರುವುದರಿಂದ ಇದು ಬದಲಾಗುತ್ತಿರುತ್ತದೆ.
04:20 'ಪೈಥನ್ ಇಂಟರ್ಪ್ರಿಟರ್' ಅನ್ನು ಬಳಸಿ ಪ್ಲಾಟ್ ಗಳನ್ನು ರಚಿಸಲು, 'ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್' ಅನ್ನು (Synaptic Package Manager) ಉಪಯೋಗಿಸಿ 'python-matplotlib' ಲೈಬ್ರರಿಯನ್ನು ಇನ್ಸ್ಟಾಲ್ ಮಾಡಿ.
04:30 ನಾನು ಈಗಾಗಲೇ 'python-matplotlib' ಲೈಬ್ರರಿಯನ್ನು ನನ್ನ ಸಿಸ್ಟಂನ ಮೇಲೆ ಇನ್ಸ್ಟಾಲ್ ಮಾಡಿದ್ದೇನೆ.
04:36 Windows ಆಪರೇಟಿಂಗ್ ಸಿಸ್ಟಂನ ಮೇಲೆ ಪ್ಲಾಟ್ ಗಳನ್ನು ರಚಿಸಲು,
04:40 ಈ ಕೆಳಗಿನವುಗಳನ್ನು ಡೌನ್ಲೋಡ್ ಮಾಡಿ ಹಾಗೂ ಇನ್ಸ್ಟಾಲ್ ಮಾಡಿ.
  • matplotlib ಆವೃತ್ತಿ 1.4.3
  • numpy 1.9 ಅಥವಾ ಅದರ ನಂತರದ ಆವೃತ್ತಿ.
04:49 ಇನ್ಸ್ಟಾಲ್ ಮಾಡಲಾದ 'ExpEYES' ಫೈಲ್ ಗಳನ್ನು ಮತ್ತು ಡ್ರೈವರ್ ಗಳನ್ನು ಕಾಪಿ ಮಾಡಿ ಮತ್ತು 'C' ಡ್ರೈವ್ ನಲ್ಲಿ ಪೇಸ್ಟ್ ಮಾಡಿ.
04:55 'Sine wave' ಅನ್ನು ರಚಿಸಲು- 'python' ಪ್ರಾಂಪ್ಟ್ ಇರುವಲ್ಲಿ, ಹೀಗೆ ಟೈಪ್ ಮಾಡಿ: "import expeyes.eyesj" ಹಾಗೂ ‘Enter’ ಅನ್ನು ಒತ್ತಿ.
05:05 ಹೀಗೆ ಟೈಪ್ ಮಾಡಿ: p=expeyes.eyesj.open() ಹಾಗೂ ಹಿಂದೆ ಮಾಡಿದಂತೆ ‘Enter’ ಅನ್ನು ಒತ್ತಿ.
05:12 ಹೀಗೆ ಟೈಪ್ ಮಾಡಿ : from pylab import * (asterisk). "from pylab import *" ಇದು matplotlib ಲೈಬ್ರರಿಯ ಪ್ರೊಗ್ರಾಂ ಆಗಿದೆ. ‘Enter’ ಅನ್ನು ಒತ್ತಿ.
05:26 ಹೀಗೆ ಟೈಪ್ ಮಾಡಿ: ion() (ಅಯಾನ್). ಈ ಕಮಾಂಡ್, 'pylab ಇಂಟರ್ಯಾಕ್ಟಿವ್ ಮೋಡ್' ಅನ್ನು ಸೆಟ್ ಮಾಡುತ್ತದೆ. ‘Enter’ ಅನ್ನು ಒತ್ತಿ.
05:35 ಹೀಗೆ ಟೈಪ್ ಮಾಡಿ: "t,v=p.capture" ಬ್ರಾಕೆಟ್ ಗಳಲ್ಲಿ "2, 200, 100".

"t" ಮತ್ತು "v" ಗಳು time ಹಾಗೂ voltage ಎಂಬ ವೆಕ್ಟರ್ ಗಳಾಗಿವೆ.

05:50 2 – ಇದು, A2 ಗಾಗಿ ‘ಚಾನಲ್’ ನಂಬರ್ ಆಗಿದೆ. 200, ಡೇಟಾ ಪಾಯಿಂಟ್ ಗಳ ಸಂಖ್ಯೆಯಾಗಿದೆ. 100, ನಂತರದ ಎರಡು ಮಾಪನಗಳ ನಡುವಿನ 'ಟೈಮ್ ಇಂಟರ್ವಲ್' (ಮಧ್ಯಂತರ ಸಮಯ) ಆಗಿದೆ.
06:02 ‘Enter’ ಅನ್ನು ಒತ್ತಿ.
06:04 ಔಟ್ಪುಟ್ ಅನ್ನು ನೋಡಲು, ಹೀಗೆ ಟೈಪ್ ಮಾಡಿ: "plot" ಬ್ರಾಕೆಟ್ ಗಳಲ್ಲಿ "t, v".

'plot ಬ್ರಾಕೆಟ್ ಗಳಲ್ಲಿ t, v' – ಇದು, ಒಂದು 'Sine wave' ಅನ್ನು ಹೊಸ ವಿಂಡೋದಲ್ಲಿ ರಚಿಸುತ್ತದೆ.

06:15 ‘Enter’ ಅನ್ನು ಒತ್ತಿ.
06:18 ನಾವು ಮೇಲಿನ ಕಮಾಂಡ್ ಗಳನ್ನು ಬಳಸಿ Windows command prompt ನ ಮೇಲೆ ಸಹ 'Sine wave' ಅನ್ನು ರಚಿಸಬಹುದು.
06:26 ಆಮೇಲೆ, ನಾವು ಒಂದು ಬ್ಯಾಟರಿಯನ್ನು ಎಕ್ಸ್ಟರ್ನಲ್ ವೋಲ್ಟೇಜ್ ಸೋರ್ಸ್ ನ ಹಾಗೆ ಬಳಸಿಕೊಂಡು A1 ನ ವೋಲ್ಟೇಜ್ ಅನ್ನು ಅಳೆಯೋಣ.
06:32 ಎಕ್ಸ್ಟರ್ನಲ್ ವೋಲ್ಟೇಜ್ ಸೋರ್ಸ್ ಅನ್ನು ಅಳೆಯಲು, 'ಗ್ರೌಂಡ್ (GND)' ಅನ್ನು 3V ಗಳ ಒಂದು ಬ್ಯಾಟರಿಯ ಮೂಲಕ A1 ಗೆ ಜೋಡಿಸಲಾಗಿದೆ.
06:39 ಇದು ಸರ್ಕೀಟ್ ಡೈಗ್ರಾಮ್ ಆಗಿದೆ. ನಾವು ‘ಪೈಥನ್ ಇಂಟರ್ಪ್ರಿಟರ್’ ಅನ್ನು ಬಳಸಿ A1 ನ ವ್ಯಾಲ್ಯೂಅನ್ನು ತೋರಿಸುವೆವು.
06:46 'python' ಪ್ರಾಂಪ್ಟ್ ಇರುವಲ್ಲಿ ಹೀಗೆ ಟೈಪ್ ಮಾಡಿ: "import expeyes.eyesj" ಹಾಗೂ ‘Enter’ ಅನ್ನು ಒತ್ತಿ.
06:53 ಹೀಗೆ ಟೈಪ್ ಮಾಡಿ: p=expeyes.eyesj.open() ಹಾಗೂ ‘Enter’ ಅನ್ನು ಒತ್ತಿ.
06:59 ಹೀಗೆ ಟೈಪ್ ಮಾಡಿ: print p.get_voltage ಬ್ರಾಕೆಟ್ ಗಳಲ್ಲಿ 1 ಹಾಗೂ ‘Enter’ ಅನ್ನು ಒತ್ತಿ.
07:07 ಇಲ್ಲಿ, ‘ಚಾನಲ್ 1’ ಅನ್ನು A1 ಗೆ ನಿಗದಿಪಡಿಸಲಾಗಿದೆ. A1 ನ ವೋಲ್ಟೇಜ್ ಅನ್ನು 'ಟರ್ಮಿನಲ್' ನ ಮೇಲೆ ತೋರಿಸಲಾಗಿದೆ.
07:14 ನಾವು PVS ಅನ್ನು ಇಂಟರ್ನಲ್ ವೋಲ್ಟೇಜ್ ಸೋರ್ಸ್ ಎಂದು ಬಳಸಿಕೊಂಡು A1 ನ ವೋಲ್ಟೇಜ್ ನ್ನು ಅಳೆಯೋಣ.
07:20 ಈ ಪ್ರಯೋಗದಲ್ಲಿ, PVS ಅನ್ನು A1 ಗೆ ಜೋಡಿಸಲಾಗಿದೆ.
07:24 ಇದು ಸರ್ಕೀಟ್ ಡೈಗ್ರಾಮ್ ಆಗಿದೆ.
07:28 'ಟರ್ಮಿನಲ್' ಗೆ ಹಿಂದಿರುಗಿ. ಹೀಗೆ ಟೈಪ್ ಮಾಡಿ: print p.set_voltage ಬ್ರಾಕೆಟ್ ಗಳಲ್ಲಿ 3 ಹಾಗೂ ‘Enter’ ಅನ್ನು ಒತ್ತಿ.
07:39 ಇಲ್ಲಿ, PVS ನ ವೋಲ್ಟೇಜ್ ಅನ್ನು 3 volts ಗೆ ಸೆಟ್ ಮಾಡಲಾಗುವುದು. PVS ನ ವೋಲ್ಟೇಜ್ ಅನ್ನು ತೋರಿಸಲಾಗಿದೆ.
07:47 ಹೀಗೆ ಟೈಪ್ ಮಾಡಿ: "print p.get_voltage" ಬ್ರಾಕೆಟ್ ಗಳಲ್ಲಿ "1" ಹಾಗೂ ‘Enter’ ಅನ್ನು ಒತ್ತಿ. A1 ನ ವೋಲ್ಟೇಜ್ ಅನ್ನು ಟರ್ಮಿನಲ್ ನ ಮೇಲೆ ತೋರಿಸಲಾಗುವುದು.
07:59 ಈಗ ನಾನು 'ಕೆಪ್ಯಾಸಿಟರ್' ಹಾಗೂ 'ರೆಸಿಸ್ಟರ್' ಗಳನ್ನು ಬಳಸಿ, ವೋಲ್ಟೇಜ್ ನ AC ಹಾಗೂ DC ಘಟಕಗಳನ್ನು ತೋರಿಸುವೆನು. ಅಲ್ಲದೆ, ಒಂದು 'ಸ್ಕ್ವೇರ್' ತರಂಗವನ್ನು (Square wave) ಸಹ ರಚಿಸುವೆನು.
08:11 ಈ ಪ್ರಯೋಗದಲ್ಲಿ -
  • A1 ಅನ್ನು SQR1 ಗೆ ಜೋಡಿಸಲಾಗಿದೆ.
  • SQR1 ಅನ್ನು ಒಂದು 'ಕೆಪ್ಯಾಸಿಟರ್' ನ ಮೂಲಕ A2 ಗೆ ಜೋಡಿಸಲಾಗಿದೆ.
  • A2 ಅನ್ನು 200K 'ರೆಸಿಸ್ಟರ್' ನ ಮೂಲಕ ಗ್ರೌಂಡ್ (GND) ಗೆ ಜೋಡಿಸಲಾಗಿದೆ.
08:25 ಇದು ಸರ್ಕೀಟ್ ಡೈಗ್ರಾಮ್ ಆಗಿದೆ.
08:27 ಪ್ಲಾಟ್ ವಿಂಡೋದ ಮೇಲೆ ನಾವು ಫಲಿತಾಂಶವನ್ನು ನೋಡೋಣ.
08:31 ಪ್ಲಾಟ್ ವಿಂಡೋ ದಲ್ಲಿ, Measure C on IN1 ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
08:36 IN1 ದ ‘ಕೆಪ್ಯಾಸಿಟನ್ಸ್’ ಅನ್ನು -0.6 pF (ಪಿಕೋ ಫ್ಯಾರಡ್ಸ್) ಎಂದು ತೋರಿಸಲಾಗಿದೆ.
08:42 Measure R on SEN ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. SEN ದ 'ರೆಜಿಸ್ಟನ್ಸ್' ಅನ್ನು 560 Ω (ಓಮ್ಸ್) ಎಂದು ತೋರಿಸಲಾಗಿದೆ.
08:51 ದಯವಿಟ್ಟು ಗಮನಿಸಿ: ನಿಮಗೆ ‘ಕೆಪ್ಯಾಸಿಟನ್ಸ್’ & ರೆಜಿಸ್ಟನ್ಸ್ ಗಳ ಸ್ವಲ್ಪ ವಿಭಿನ್ನ ವ್ಯಾಲ್ಯೂಗಳು ಸಿಗಬಹುದು.
08:57 SQ1 ದ ಮೇಲೆ ಕ್ಲಿಕ್ ಮಾಡಿ ಮತ್ತು CH1 ಗೆ ಎಳೆಯಿರಿ.

SQ1 ಅನ್ನು ‘ಚಾನಲ್’ CH1 ಗೆ ನಿಗದಿಪಡಿಸಲಾಗಿದೆ.

09:04 A2 ದ ಮೇಲೆ ಕ್ಲಿಕ್ ಮಾಡಿ ಮತ್ತು CH2 ಗೆ ಎಳೆಯಿರಿ.

A2 ಅನ್ನು ‘ಚಾನಲ್’ CH2 ಗೆ ನಿಗದಿಪಡಿಸಲಾಗಿದೆ.

09:12 Square wave ಗಳನ್ನು ತೋರಿಸಲು SQR1 ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. ತರಂಗಗಳನ್ನು ಸರಿಹೊಂದಿಸಲು msec/div ಸ್ಲೈಡರ್ ಅನ್ನು ಬಳಸಿ.
09:23 CH2 ದ ಮೇಲೆ ಕ್ಲಿಕ್ ಮಾಡಿ ಮತ್ತು FIT ಗೆ ಎಳೆಯಿರಿ. A2 ದ ವೋಲ್ಟೇಜ್ ಹಾಗೂ ಫ್ರಿಕ್ವೆನ್ಸಿ ಗಳನ್ನು ಬಲಭಾಗದಲ್ಲಿ ತೋರಿಸಲಾಗಿದೆ.
09:32 ನಾವು ‘ಕೆಪ್ಯಾಸಿಟನ್ಸ್’, ರೆಜಿಸ್ಟನ್ಸ್ ಗಳನ್ನು ಅಳೆಯಲು ಇದೇ ಪ್ರಯೋಗವನ್ನು ಮಾಡುವೆವು ಮತ್ತು ‘ಪೈಥನ್ ಇಂಟರ್ಪ್ರಿಟರ್’ ಅನ್ನು ಬಳಸಿ ಒಂದು 'Square wave' ಅನ್ನು ರಚಿಸುವೆವು.
09:41 'python' ಪ್ರಾಂಪ್ಟ್ ಇರುವಲ್ಲಿ ಹೀಗೆ ಟೈಪ್ ಮಾಡಿ: "import expeyes.eyesj" ಹಾಗೂ ‘Enter’ ಅನ್ನು ಒತ್ತಿ.
09:50 ಹೀಗೆ ಟೈಪ್ ಮಾಡಿ: p=expeyes.eyesj.open() ಹಾಗೂ ‘Enter’ ಅನ್ನು ಒತ್ತಿ.
09:58 ‘ಕೆಪ್ಯಾಸಿಟನ್ಸ್’ ವ್ಯಾಲ್ಯೂಅನ್ನು ತೋರಿಸಲು, ಹೀಗೆ ಟೈಪ್ ಮಾಡಿ: p.measure_cap() ಹಾಗೂ ‘Enter’ ಅನ್ನು ಒತ್ತಿ.
10:07 ಟರ್ಮಿನಲ್ ನ ಮೇಲೆ, ‘ಕೆಪ್ಯಾಸಿಟನ್ಸ್’ ವ್ಯಾಲ್ಯೂಅನ್ನು ತೋರಿಸಲಾಗಿದೆ.
10:11 'ರೆಜಿಸ್ಟನ್ಸ್' ವ್ಯಾಲ್ಯೂಅನ್ನು ತೋರಿಸಲು, ಹೀಗೆ ಟೈಪ್ ಮಾಡಿ : p.measure_res() ಹಾಗೂ ‘Enter’ ಅನ್ನು ಒತ್ತಿ.

ಟರ್ಮಿನಲ್ ನ ಮೇಲೆ, 'ರೆಜಿಸ್ಟನ್ಸ್' ವ್ಯಾಲ್ಯೂಅನ್ನು ತೋರಿಸಲಾಗಿದೆ.

10:24 Square ತರಂಗವನ್ನು ರಚಿಸಲು, ಹೀಗೆ ಟೈಪ್ ಮಾಡಿ : from pylab import *(ಆಸ್ಟೆರಿಸ್ಕ್) ಹಾಗೂ ‘Enter’ ಅನ್ನು ಒತ್ತಿ.
ಹೀಗೆ ಟೈಪ್ ಮಾಡಿ: ion() ಹಾಗೂ ‘Enter’ ಅನ್ನು ಒತ್ತಿ. 
10:36 ಹೀಗೆ ಟೈಪ್ ಮಾಡಿ: print p.set_sqr1 ಬ್ರಾಕೆಟ್ ಗಳಲ್ಲಿ 100 ಹಾಗೂ ‘Enter’ ಅನ್ನು ಒತ್ತಿ. ಇಲ್ಲಿ, 100 ಇದು ಸ್ಕ್ವೇರ್ ತರಂಗದ ಫ್ರಿಕ್ವೆನ್ಸಿ (ಆವರ್ತನ) ಆಗಿದೆ.
10:49 ಹೀಗೆ ಟೈಪ್ ಮಾಡಿ: t,v=p.capture ಬ್ರಾಕೆಟ್ಸ್ ನಲ್ಲಿ 6, 400, 100 ಮತ್ತು ‘Enter’ ಅನ್ನು ಒತ್ತಿ.
11:00 ಹೀಗೆ ಟೈಪ್ ಮಾಡಿ: plot ಬ್ರಾಕೆಟ್ಸ್ ನಲ್ಲಿ t,v.

'plot ಬ್ರಾಕೆಟ್ಸ್ ನಲ್ಲಿ t,v' – ಇದು, ಒಂದು ಹೊಸ ವಿಂಡೋದಲ್ಲಿ 'square wave' ಅನ್ನು ರಚಿಸುತ್ತದೆ.

11:12 'Enter' ಅನ್ನು ಒತ್ತಿ.
11:14 ಸಂಕ್ಷಿಪ್ತವಾಗಿ,
11:17 ಈ ಟ್ಯುಟೋರಿಯಲ್ ನಲ್ಲಿ:
  • ‘ಪೈಥನ್’ ನ ಪರಿಚಯ
  • 'Plot ವಿಂಡೋ' ಹಾಗೂ ‘ಪೈಥನ್’ ಗಳನ್ನು ಬಳಸಿ AC ವೋಲ್ಟೇಜ್ ಅನ್ನು ಅಳೆಯುವುದು
  • 'Sine wave' ಅನ್ನು ರಚಿಸುವುದು
  • ‘ಪೈಥನ್’ ಅನ್ನು ಬಳಸಿ ಬಾಹ್ಯ (ಎಕ್ಸ್ಟರ್ನಲ್) ಮತ್ತು ಆಂತರಿಕ (ಇಂಟರ್ನಲ್) ವೋಲ್ಟೇಜ್ ಗಳನ್ನು ಅಳೆಯುವುದು
11:33
  • 'ಪ್ಲಾಟ್ ವಿಂಡೋ' ಹಾಗೂ ‘ಪೈಥನ್’ ಗಳನ್ನು ಬಳಸಿ 'ಕೆಪ್ಯಾಸಿಟನ್ಸ್' (capacitance) ಮತ್ತು ರೆಜಿಸ್ಟನ್ಸ್ (resistance) ಗಳನ್ನು ಅಳೆಯುವುದು
  • 'Square wave' ಅನ್ನು ರಚಿಸುವುದು
  • ನಮ್ಮ ಪ್ರಯೋಗಗಳಿಗಾಗಿ ಕನೆಕ್ಷನ್ & ಸರ್ಕೀಟ್ ಡೈಗ್ರಾಮ್ ಗಳನ್ನು ತೋರಿಸುವುದು

ಮುಂತಾದವುಗಳನ್ನು ನಾವು ಕಲಿತಿದ್ದೇವೆ.

11:45 ಒಂದು ಅಸೈನ್ಮೆಂಟ್ -
  • ಪ್ಲಾಟ್ ವಿಂಡೋಅನ್ನು ಬಳಸಿ ನಿಮ್ಮ ಬೆರಳಿನ ರೆಜಿಸ್ಟನ್ಸ್ ಅನ್ನು ಅಳೆಯಿರಿ.
  • ‘ಪೈಥನ್’ ಅನ್ನು ಬಳಸಿ 'Sine' ಮತ್ತು 'Square wave' ಗಳ ಒಂದು ಸಂಯೋಜನೆಯನ್ನು ರಚಿಸಿ.
11:56 ಮೇಲೆ ಹೇಳಿದ ಪ್ರಯೋಗಗಳಿಗಾಗಿ ಸರ್ಕೀಟ್ ಡೈಗ್ರಾಮ್ ಗಳನ್ನು ತೋರಿಸಿ.
11:59 ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
12:07 ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
12:13 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
12:20 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. .

ವಂದನೆಗಳು.

Contributors and Content Editors

Sandhya.np14