PERL/C2/for-for-each-loops/Kannada
From Script | Spoken-Tutorial
Revision as of 16:53, 11 March 2016 by Sandhya.np14 (Talk | contribs)
Time | Narration |
00:01 | Perlನಲ್ಲಿ for and foreach Loops ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, Perl ನಲ್ಲಿ ‘for’ ಲೂಪ್ ಹಾಗೂ |
00:11 | ‘foreach’ ಲೂಪ್ ಗಳ ಬಗ್ಗೆ ಕಲಿಯುವೆವು. |
00:13 | ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ Perl 5.14.2 ಇವುಗಳನ್ನು ಉಪಯೋಗಿಸುತ್ತಿದ್ದೇನೆ. |
00:21 | ನಾನು gedit ‘ಟೆಕ್ಸ್ಟ್ ಎಡಿಟರ್’ಅನ್ನು ಸಹ ಬಳಸುತ್ತಿರುವೆನು. |
00:25 | ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು. |
00:29 | ನಿಮಗೆ Perl (ಪರ್ಲ್) ನಲ್ಲಿ ‘ವೇರಿಯೆಬಲ್’ ಮತ್ತು ‘ಕಾಮೆಂಟ್’ಗಳ ಬಗ್ಗೆ ಪರಿಚಯವಿರುವುದು ಅವಶ್ಯಕ. |
00:33 | ಇಲ್ಲದಿದ್ದರೆ, ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು spoken tutorial ವೆಬ್ಸೈಟ್ ನ ಮೇಲೆ ನೋಡಿ. |
00:40 | ವಿವಿಧ ವ್ಯಾಲ್ಯೂಗಳಿಗಾಗಿ, ಒಂದು ಕಂಡಿಶನ್ ಅನ್ನು ನಾವು ಮತ್ತೆಮತ್ತೆ ಪರೀಕ್ಷಿಸಬಹುದಾದ ಒಂದು ಯಾಂತ್ರಿಕ ವ್ಯವಸ್ಥೆಯನ್ನು ಪರ್ಲ್, ಒದಗಿಸುತ್ತದೆ. ‘ಲೂಪ್’ಗಳನ್ನು ಬಳಸಿ ಇದನ್ನು ಮಾಡಲಾಗುವುದು. |
00:49 | ಪರ್ಲ್ ನಲ್ಲಿ ವಿವಿಧ ಪ್ರಕಾರದ ಲೂಪ್ ಗಳಿವೆ: |
00:52 | * ‘for’ ಲೂಪ್ |
00:53 | * ‘foreach’ ಲೂಪ್ |
00:54 | * ‘while’ ಲೂಪ್ ಮತ್ತು |
00:55 | * ‘do-while’ ಲೂಪ್. |
00:56 | ಈ ಟ್ಯುಟೋರಿಯಲ್ ನಲ್ಲಿ, ನಾವು for ಹಾಗೂ foreach ಲೂಪ್ ಗಳನ್ನು ಕಲಿಯುವೆವು. |
01:01 | ಪರ್ಲ್ ನಲ್ಲಿ, ಕೋಡ್ ನ ಒಂದು ಭಾಗವನ್ನು ನಿರ್ದಿಷ್ಟ ಸಲ ಎಕ್ಸಿಕ್ಯೂಟ್ ಮಾಡಲು for ಲೂಪ್ ಅನ್ನು ಬಳಸಬಹುದು. |
01:07 | ‘for’ ಲೂಪ್ ನ ಸಿಂಟ್ಯಾಕ್ಸ್ ಹೀಗಿದೆ: |
01:10 | ‘for ಸ್ಪೇಸ್ ಓಪನ್ ಬ್ರಾಕೆಟ್ ವೇರಿಯೆಬಲ್ ಇನಿಷಿಯಲೈಸೇಷನ್ ಸೆಮಿಕೋಲನ್ ಕಂಡಿಶನ್ ಸೆಮಿಕೋಲನ್ ಇನ್ಕ್ರಿಮೆಂಟ್ |
01:20 | ಕ್ಲೋಸ್ ಬ್ರಾಕೆಟ್’. Enter ಅನ್ನು ಒತ್ತಿ. |
01:22 | ಓಪನ್ ಕರ್ಲಿ ಬ್ರಾಕೆಟ್ಸ್, |
01:24 | ಅನೇಕ ಸಲ ಎಕ್ಸಿಕ್ಯೂಟ್ ಮಾಡಬೇಕಾಗಿರುವ ಕೋಡ್ ನ ಭಾಗ, |
01:28 | ಕ್ಲೋಸ್ ಕರ್ಲಿ ಬ್ರಾಕೆಟ್ಸ್. |
01:30 | ಈಗ ನಾವು, ‘for’ ಲೂಪ್ ನ ಒಂದು ಉದಾಹರಣೆಯನ್ನು ನೋಡೋಣ. |
01:33 | ‘ಟರ್ಮಿನಲ್’ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: gedit forLoop.pl ಸ್ಪೇಸ್ & (ಆಂಪರ್ಸಂಡ್) |
01:42 | ಮತ್ತು Enter ಅನ್ನು ಒತ್ತಿ. |
01:43 | ಇದು gedit ನಲ್ಲಿ ‘forLoop.pl’ ಎಂಬ ಫೈಲನ್ನು ಓಪನ್ ಮಾಡುವುದು. |
1:48 | ಈ ಕೆಳಗಿನ ಕೋಡ್ ನ ಭಾಗವನ್ನು ಟೈಪ್ ಮಾಡಿ: ಹ್ಯಾಶ್ ಎಕ್ಸ್ಕ್ಲಾಮೇಶನ್ ಮಾರ್ಕ್ ಸ್ಲ್ಯಾಶ್ u s r ಸ್ಲ್ಯಾಶ್ bin ಸ್ಲ್ಯಾಶ್ perl. |
01:58 | Enter ಅನ್ನು ಒತ್ತಿ. |
02:00 | ‘for ಸ್ಪೇಸ್ ಓಪನ್ ಬ್ರಾಕೆಟ್ ಡಾಲರ್ i ಇಕ್ವಲ್ಸ್ ಟು ಝೀರೋ (0) ಸೆಮಿಕೋಲನ್ ಸ್ಪೇಸ್ ಡಾಲರ್ i ಲೆಸ್ ದ್ಯಾನ್ ಆರ್ ಇಕ್ವಲ್ ಟು ಫೋರ್ (4) ಸೆಮಿಕೋಲನ್ ಸ್ಪೇಸ್ ಡಾಲರ್ i ಪ್ಲಸ್ ಪ್ಲಸ್ ಕ್ಲೋಸ್ ಬ್ರಾಕೆಟ್’ |
02:18 | ಸ್ಪೇಸ್ |
02:19 | ಓಪನ್ ಕರ್ಲಿ ಬ್ರಾಕೆಟ್, Enter ಅನ್ನು ಒತ್ತಿ. |
02:21 | ಹೀಗೆ ಟೈಪ್ ಮಾಡಿ: print ಸ್ಪೇಸ್ ಡಬಲ್ ಕೋಟ್ಸ್ Value of i ಕೋಲನ್ < ಸ್ಪೇಸ್ > ಡಾಲರ್ i ಬ್ಯಾಕ್ ಸ್ಲ್ಯಾಶ್ n ಡಬಲ್ ಕೋಟ್ಸ್ ಕಂಪ್ಲೀಟ್ ಸೆಮಿಕೋಲನ್’ |
02:35 | ಮತ್ತು Enter ಅನ್ನು ಒತ್ತಿ. |
02:36 | ಈಗ ಕರ್ಲಿ ಬ್ರಾಕೆಟ್ಸ್ ಅನ್ನು ಮುಚ್ಚಿ. |
02:39 | ಫೈಲನ್ನು ಸೇವ್ ಮಾಡಲು ‘Ctrl+S’ ಒತ್ತಿ. |
02:42 | ‘for ಲೂಪ್’ ಏನು ಮಾಡುತ್ತದೆ ಎಂಬುದನ್ನು ನಾನು ವಿವರಿಸುತ್ತೇನೆ. |
02:46 | ವೇರಿಯೆಬಲ್ 'i' ಅನ್ನು ಸೊನ್ನೆಯಿಂದ ಆರಂಭಿಸಲಾಗುತ್ತದೆ. |
02:50 | ಆಮೇಲೆ, ಕಂಡಿಷನ್ ಅನ್ನು ಪರಿಶೀಲಿಸಲಾಗುತ್ತದೆ. |
02:53 | ಈ ಸಂದರ್ಭದಲ್ಲಿ, ಕಂಡಿಷನ್, ‘i ಲೆಸ್ ದ್ಯಾನ್ ಆರ್ ಇಕ್ವಲ್ ಟು 4' (i <= 4) ಎಂದು ಆಗಿದೆ. |
02:59 | ಈ ಕಂಡಿಷನ್ ‘true’ (ನಿಜ) ಆಗಿದ್ದರೆ, ಕರ್ಲಿ ಬ್ರಾಕೆಟ್ಸ್ ನಲ್ಲಿಯ ಕೋಡ್ಅನ್ನು ಎಕ್ಸಿಕ್ಯೂಟ್ ಮಾಡಲಾಗುವುದು. |
03:05 | ಎಂದರೆ, ಮೊದಲನೆಯ ಪ್ರಿಂಟ್ ಸ್ಟೇಟ್ಮೆಂಟ್ "Value of i: 0" (ವ್ಯಾಲ್ಯೂ ಆಫ್ i ಕೋಲನ್ ಝೀರೋ) ಅನ್ನು |
03:11 | ‘ಟರ್ಮಿನಲ್’ನ ಮೇಲೆ ತೋರಿಸಲಾಗುವುದು. |
03:14 | ಇದಾದ ಮೇಲೆ, ವೇರಿಯೆಬಲ್ 'i' ಅನ್ನು ಒಂದರಿಂದ ಹೆಚ್ಚಿಸಲಾಗುವುದು. |
03:18 | ಮತ್ತು ‘for ಲೂಪ್’ನ ಕಂಡಿಷನ್ ಅನ್ನು ಮತ್ತೊಮ್ಮೆ ಪರೀಕ್ಷಿಸಲಾಗುತ್ತದೆ. |
03:23 | 'i' ನ ವ್ಯಾಲ್ಯೂ, 4 (ನಾಲ್ಕು) ಕ್ಕಿಂತ ಹೆಚ್ಚಾದಾಗ ಲೂಪ್ ನಿರ್ಗಮಿಸುವುದು. |
03:29 | ಈ ಸಂದರ್ಭದಲ್ಲಿ, ‘for ಲೂಪ್’ ಅನ್ನು, i = 0, 1, 2, 3, ಮತ್ತು 4 ಗಳಿಗಾಗಿ |
03:38 | ಎಂದರೆ ಒಟ್ಟು 5 ಬಾರಿ ಎಕ್ಸಿಕ್ಯೂಟ್ ಮಾಡಲಾಗುವುದು. |
03:41 | ಈಗ, ‘ಟರ್ಮಿನಲ್’ಗೆ ಬದಲಾಯಿಸಿ. |
03:44 | ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಗಳನ್ನು ಕಂಡುಹಿಡಿಯಲು ಈ ಕೆಳಗಿನಂತೆ ಟೈಪ್ ಮಾಡಿ: |
03:48 | ‘perl ಹೈಫನ್ c forLoop ಡಾಟ್ pl’ |
03:54 | ಮತ್ತು Enter ಅನ್ನು ಒತ್ತಿ. |
03:56 | ಇಲ್ಲಿ, ಇದು ಈ ಕೆಳಗಿನ ಮೆಸೇಜನ್ನು (message) ತೋರಿಸುತ್ತದೆ. |
03:58 | “forLoop.pl syntax OK” |
04:01 | ಆದ್ದರಿಂದ, ಇದರಲ್ಲಿ ‘ಎರರ್’ ಗಳಿಲ್ಲ. |
04:03 | ಈಗ ನಾವು ಪರ್ಲ್-ಸ್ಕ್ರಿಪ್ಟನ್ನು ಎಕ್ಸಿಕ್ಯೂಟ್ ಮಾಡೋಣ. ಇದಕ್ಕಾಗಿ, ಹೀಗೆ ಟೈಪ್ ಮಾಡಿ: ‘perl forLoop ಡಾಟ್pl’ ಮತ್ತು Enter ಅನ್ನು ಒತ್ತಿ. |
04:11 | ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು. |
04:16 | ಈಗ ನಾವು ‘foreach’ ಲೂಪನ್ನು ನೋಡೋಣ. |
04:19 | ‘ಆರೇ’ಗಾಗಿ ಒಂದು ಕಂಡಿಷನ್ ಅನ್ನು ನಮಗೆ ‘ಇಟರೇಟ್’ ಮಾಡಬೇಕಾದಾಗ, ನಾವು foreach ಲೂಪನ್ನು ಉಪಯೋಗಿಸಬಹುದು. |
04:25 | ಇದರ ಸಿಂಟ್ಯಾಕ್ಸ್ ಹೀಗಿದೆ: ‘foreach ಸ್ಪೇಸ್ ಡಾಲರ್ variable ಸ್ಪೇಸ್’ ಬ್ರಾಕೆಟ್ಸ್ ನ ಒಳಗಡೆ ‘ಆಟ್ ದ ರೇಟ್ (@) array ಸ್ಪೇಸ್’ |
04:35 | ಓಪನ್ ಕರ್ಲಿ ಬ್ರಾಕೆಟ್ಸ್ |
04:37 | ‘ಆರೇ’ ದ ಪ್ರತಿಯೊಂದು ಎಲಿಮೆಂಟ್ ನ ಮೇಲೆ ಕ್ರಿಯೆಯನ್ನು ಕೈಗೊಳ್ಳಿ. Enter ಅನ್ನು ಒತ್ತಿ. |
04:42 | ಕರ್ಲಿ ಬ್ರಾಕೆಟ್ಸ್ ಅನ್ನು ಮುಚ್ಚಿ. |
04:44 | ದಯವಿಟ್ಟು ಗಮನಿಸಿ: ‘ಆರೇ’, ‘ಆರೇ ಇನಿಷಿಯಲೈಸೇಷನ್’ ಮತ್ತು ‘ಆರೇ’ಯನ್ನು ಡಿಫೈನ್ ಮಾಡುವುದನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ನೋಡುವೆವು. |
04:52 | ಈಗ ನಾವು, foreach ಲೂಪ್ ನ ಒಂದು ಉದಾಹರಣೆಯನ್ನು ನೋಡೋಣ. |
04:56 | ‘ಟರ್ಮಿನಲ್’ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ: gedit foreachLoop ಡಾಟ್ pl ಸ್ಪೇಸ್ ಆಂಪರ್ಸಂಡ್(&)’ ಮತ್ತು Enter ಅನ್ನು ಒತ್ತಿ. |
05:08 | ಇದು, gedit ನಲ್ಲಿ ‘foreachLoop.pl’ ಎಂಬ ಫೈಲನ್ನು ಓಪನ್ ಮಾಡುವುದು. |
05:12 | ಈ ಕೆಳಗೆ ತೋರಿಸಿದ ಕೋಡ್ ನ ಭಾಗವನ್ನು ಟೈಪ್ ಮಾಡಿ: |
05:15 | ‘ಹ್ಯಾಶ್ ಎಕ್ಸ್ಕ್ಲಾಮೇಶನ್ ಮಾರ್ಕ್ ಸ್ಲ್ಯಾಶ್ u s r ಸ್ಲ್ಯಾಶ್ bin ಸ್ಲ್ಯಾಶ್ perl’ ಮತ್ತು Enter ಅನ್ನು ಒತ್ತಿ. |
05:25 | ‘ಆಟ್ ದ ರೇಟ್ myarray ಸ್ಪೇಸ್ ಇಕ್ವಲ್ ಟು ಸ್ಪೇಸ್ ಓಪನ್ ಬ್ರಾಕೆಟ್ 10 ಕಾಮಾ 20 ಕಾಮಾ 30 ಕ್ಲೋಸ್ ಬ್ರಾಕೆಟ್ ಸೆಮಿಕೋಲನ್’ |
05:39 | Enter ಅನ್ನು ಒತ್ತಿ. |
05:41 | ‘foreach ಸ್ಪೇಸ್ ಡಾಲರ್ var ಸ್ಪೇಸ್ ಓಪನ್ ಬ್ರಾಕೆಟ್ ಆಟ್ ದ ರೇಟ್ myarray ಕ್ಲೋಸ್ ದ ಬ್ರಾಕೆಟ್ ಸ್ಪೇಸ್’ |
05:52 | ಓಪನ್ ಕರ್ಲಿ ಬ್ರಾಕೆಟ್, Enter ಅನ್ನು ಒತ್ತಿ ಮತ್ತು ಹೀಗೆ ಟೈಪ್ ಮಾಡಿ: |
05:56 | ‘print ಸ್ಪೇಸ್ ಡಬಲ್ ಕೋಟ್ಸ್ Element of an array is ಕೋಲನ್ ಡಾಲರ್ var ಬ್ಯಾಕ್ ಸ್ಲ್ಯಾಶ್ n ಡಬಲ್ ಕೋಟ್ಸ್ ಕಂಪ್ಲೀಟ್ ಸೆಮಿಕೋಲನ್’ |
06:13 | Enter ಅನ್ನು ಒತ್ತಿ ಮತ್ತು ಕರ್ಲಿ ಬ್ರಾಕೆಟ್ ಅನ್ನು ಕ್ಲೋಸ್ ಮಾಡಿ. |
06:17 | ಫೈಲನ್ನು ಸೇವ್ ಮಾಡಲು ‘Ctrl+S’ ಒತ್ತಿ. |
06:20 | ಈ ‘ಕೋಡ್’ ಏನು ಮಾಡುತ್ತದೆ ಎಂಬುದನ್ನು ನಾನು ವಿವರಿಸುತ್ತೇನೆ. ‘myarray’ ಎನ್ನುವ ಒಂದು ‘ಆರೇ’ಯನ್ನು ಡಿಕ್ಲೇರ್ ಮಾಡಲಾಗಿದೆ. |
06:27 | ಇದು 10, 20 ಮತ್ತು 30, ಈ ಮೂರು ಎಲಿಮೆಂಟ್ ಗಳನ್ನು ಹೊಂದಿದೆ. |
06:33 | ‘foreach’ ಲೂಪ್ ನ ಪ್ರತಿಯೊಂದು ಪುನರಾವರ್ತನೆಯಲ್ಲಿ (ಇಟರೇಶನ್), 'ಡಾಲರ್ var' ($var), ‘ಆರೇ’ಯ ಒಂದೇ ಒಂದು ಎಲಿಮೆಂಟ್ ಅನ್ನು ಹೊಂದಿರುವುದು. |
06:40 | ‘foreach’ ಕೀವರ್ಡ್, ‘ಆರೇ’ಯ ಪ್ರತಿಯೊಂದು ಎಲಿಮೆಂಟ್ ಗಾಗಿ ಈ ಲೂಪನ್ನು ಪುನರಾವರ್ತಿಸುವುದು. |
06:47 | ಎಂದರೆ, ಕರ್ಲಿ ಬ್ರಾಕೆಟ್ ನ ಒಳಗಿರುವ ಕೋಡ್ಅನ್ನು, ‘myarray’ ಯ ಪ್ರತಿಯೊಂದು ಎಲಿಮೆಂಟ್ ಗಾಗಿ ಎಕ್ಸಿಕ್ಯೂಟ್ ಮಾಡಲಾಗುವುದು. |
06:55 | ಬ್ಯಾಕ್-ಸ್ಲ್ಯಾಶ್ n (\n), ಪ್ರಾಂಪ್ಟ್ ಅನ್ನು ಹೊಸ ಲೈನ್ ಮೇಲೆ ಇರಿಸುವುದು. |
07:00 | ಇದರ ಅರ್ಥ, ಮೊದಲನೆಯ ಎಲಿಮೆಂಟ್ 10 (ಹತ್ತು) ಅನ್ನು ‘ಟರ್ಮಿನಲ್’ನ ಮೇಲೆ ತೋರಿಸಲಾಗುವುದು. |
07:06 | ಆಮೇಲೆ 20 (ಇಪ್ಪತ್ತು) ಮತ್ತು ಹೀಗೆಯೇ ಎಲ್ಲ ಎಲಿಮೆಂಟ್ ಗಳು ಪ್ರಿಂಟ್ ಆಗುವವರೆಗೆ ತೋರಿಸಲಾಗುವುದು. |
07:12 | ‘myarray’ ಯಲ್ಲಿಯ ಎಲ್ಲ ಎಲಿಮೆಂಟ್ ಗಳನ್ನು ಪ್ರಿಂಟ್ ಮಾಡಿದ ಮೇಲೆ ಈ ಲೂಪ್ ನಿರ್ಗಮಿಸುವುದು. |
07:17 | ಈಗ, ‘ಟರ್ಮಿನಲ್’ ಗೆ ಬದಲಾಯಿಸಿ ಮತ್ತು ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಗಳನ್ನು ನೋಡಲು ಈ ಕೆಳಗೆ ತೋರಿಸಿರುವುದನ್ನು ಟೈಪ್ ಮಾಡಿ: |
07:24 | ‘perl ಹೈಫನ್ c foreachLoop ಡಾಟ್ pl’ ಮತ್ತು Enter ಅನ್ನು ಒತ್ತಿ. |
07:32 | ‘ಟರ್ಮಿನಲ್’ನ ಮೇಲೆ ಈ ಕೆಳಗಿನ ಸಾಲನ್ನು ತೋರಿಸಲಾಗುವುದು. |
07:36 | “There are no compilation or syntax errors”. |
07:38 | ಆದ್ದರಿಂದ, ನಾವು Perl ಸ್ಕ್ರಿಪ್ಟನ್ನು ಎಕ್ಸಿಕ್ಯೂಟ್ ಮಾಡೋಣ. |
07:41 | ಹೀಗೆ ಟೈಪ್ ಮಾಡಿ: ‘perl foreachLoop ಡಾಟ್ pl’ ಮತ್ತು Enter ಅನ್ನು ಒತ್ತಿ. |
07:48 | ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು. |
07:54 | ಹೀಗೆ, ಇದು ‘for’ ಲೂಪ್ ಮತ್ತು ‘for-each’ ಲೂಪ್ ಗಳ ಬಗ್ಗೆ ಆಗಿತ್ತು. |
07:57 | ಸಂಕ್ಷಿಪ್ತವಾಗಿ - |
07:59 | ಈ ಟ್ಯುಟೋರಿಯಲ್ ನಲ್ಲಿ ನಾವು, |
08:02 | ಕೆಲವು ಮಾದರಿಯ ಪ್ರೊಗ್ರಾಂಗಳನ್ನು ಉಪಯೋಗಿಸಿ |
08:06 | Perl ನ ‘for’ ಲೂಪ್ ಮತ್ತು ‘for-each’ ಲೂಪ್ ಗಳ ಬಗ್ಗೆ ಕಲಿತಿದ್ದೇವೆ. |
08:07 | ನಿಮಗಾಗಿ ಇಲ್ಲಿ ಒಂದು ಅಸೈನ್ಮೆಂಟ್ ಇದೆ. |
08:10 | 'Spoken Tutorial' ಎಂಬ ಒಂದು ಸ್ಟ್ರಿಂಗ್ ಅನ್ನು ಡಿಕ್ಲೇರ್ ಮಾಡಿ |
08:13 | ಮತ್ತು ಇದನ್ನು ೫ (ಐದು) ಸಲ ಪ್ರಿಂಟ್ ಮಾಡಿ. |
08:16 | ‘ಕಲರ್’ ಗಳ ಒಂದು ಆರೇಯನ್ನು ಹೀಗೆ ಡಿಕ್ಲೇರ್ ಮಾಡಿ. @colorArray = ಓಪನ್ ಬ್ರಾಕೆಟ್ ಸಿಂಗಲ್ ಕೋಟ್ಸ್ ನಲ್ಲಿ red ಕಾಮಾ white ಕಾಮಾ blue ಬ್ರಾಕೆಟ್ ಮುಚ್ಚಿ ಮತ್ತು |
08:32 | ‘foreach’ ಲೂಪನ್ನು ಬಳಸಿ ‘ಆರೇ’ಯ ಎಲಿಮೆಂಟ್ ಅನ್ನು ಪ್ರಿಂಟ್ ಮಾಡಿ. |
08:36 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
08:40 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
08:43 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:48 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:55 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:59 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
09:07 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
09:12 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
09:20 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. spoken hyphen tutorial dot org slash NMEICT hyphen Intro. |
09:31 | ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. |
09:34 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . |
09:36 | ವಂದನೆಗಳು. |