Inkscape/C2/Layers-and-Boolean-operations/Kannada

From Script | Spoken-Tutorial
Revision as of 14:20, 3 May 2016 by Rakeshkkrao (Talk | contribs)

Jump to: navigation, search
Time Narration
00:00 ನಮಸ್ಕಾರ, ಲೇಯರ್ಸ್ ಆಂಡ್ ಬೂಲಿಯನ್ ಆಪರೇಶನ್ಸ್ ಎನ್ನುವ ಇಂಕ್-ಸ್ಕೇಪ್-ನ ಟ್ಯುಟೊರಿಯಲ್-ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ, ನಾವು ತಿಳಿಯುವ ಅಂಶಗಳು : ಲೇಯರ್ಸ್
00:11 ಫಿಲ್ಟರ್ಸ್
00:12 ಬೂಲಿಯನ್ ಆಪರೇಶನ್ಸ್
00:15 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಲಿನಕ್ಸ್ ನ 12.04 ನೇ ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಮತ್ತು ಇಂಕ್ ಸ್ಕೇಪ್ ನ 0.48.4 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ.
00:25 ಇಂಕ್ಕ್ ಸ್ಕೇಪ್ ಅನ್ನು ಒಪನ್ ಮಾಡೋಣ. ಡ್ಯಾಶ್ ಹೋಮ್ ಗೆ ಹೋಗಿ, ಇಂಕ್ ಸ್ಕೇಪ್ ಎಂದು ಟೈಪ್ ಮಾಡಿ.
00:30 ಲೋಗೋ ಅನ್ನು ಡಬಲ್ ಕ್ಲಿಕ್ ಮಾಡಿ ಇಂಕ್ ಸ್ಕೇಪ್ ಅನ್ನು ಓಪನ್ ಮಾಡಬಹುದು.
00:32 ನಾವು ಈ ಮೊದಲು ರಚಿಸಿದ ಅಸೈನ್ಮೆಂಟ್ ಅಂಡರ್ಸ್ಕೋರ್ ಟು ಡಾಟ್ ಎಸ್ ವಿ ಜಿ ಯನ್ನು ಓಪನ್ ಮಾಡೋಣ.
00:38 ಇದನ್ನು ನಾವು ಮೈ ಡಾಕ್ಯುಮೆಂಟ್ಸ್ ಎಂಬ ಫೋಲ್ಡರ್ ನಲ್ಲಿ ಸೇವ್ ಮಾಡಿದ್ದೆ.
00:41 ಮೊದಲು, ಇಂಕ್ ಸ್ಕೇಪ್ ನಲ್ಲಿ ಲೇಯರ್ಸ್ ನ ಬಗೆಗೆ ಕಲಿಯೋಣ.
00:45 ಲೇಯರ್ ಮೆನುವಿನಲ್ಲಿ, ಲೇಯರ್ ಎಂಬುದನ್ನು ಆಯ್ಕೆ ಮಾಡಿ.
00:50 ಈಗ, ಇಂಟರ್ಫೇಸ್ ನ ಬಲಭಾಗದಲ್ಲಿ, ಲೇಯರ್ ಪ್ಯಾಲೆಟ್ ಒಪನ್ ಆಗುತ್ತದೆ.
00:55 ಪೂರ್ವನಿಯೋಜಿತವಾಗಿ, ಒಂದು ಲೇಯರ್ ಇರುತ್ತದೆ. ಲೇಯರ್ ಒನ್ ಎಂದು ಒಂದು ಲೇಯರ್ ಅನ್ನು ನೋಡಬಹುದು.
01:01 ಇನ್ನೊಂದು ಲೇಯರ್ ಅನ್ನು ಸೇರಿಸಲು ಅಥವಾ ರಚಿಸಲು, ಲೇಯರ್ ಪ್ಯಾಲೆಟ್ ನ ಮೇಲಿರುವ ಪ್ಲಸ್ ಐಕಾನ್ ಅನ್ನು ಕ್ಲಿಕ್ ಮಾಡಿ.
01:07 ಆಡ್(add) ಲೇಯರ್ ಎಂಬ ಡೈಲಾಗ್ ಬಾಕ್ಸ್ ಒಪನ್ ಆಗುತ್ತದೆ.
01:10 ಲೇಯರ್ ನೇಮ್ ಎಂಬ ಟೆಕ್ಸ್ಟ್ ಬಾಕ್ಸ್ ನಲ್ಲಿ, ಲೇಯರ್ ಗೆ ಹೆಸರನ್ನು ಕೊಡಬಹುದು.
01:15 ನಾನು ಈ ಲೇಯರ್ ಅನ್ನು ಐ ಎಂದು ಹೆಸರಿಸುತ್ತೇನೆ.
01:18 ಲೇಯರ್ ನ ಸ್ಥಾನವನ್ನು ನಾವು ನಿರ್ಧರಿಸಬಹುದು, ಇದಕ್ಕಾಗಿ, ಪೊಸಿಶನ್ ಎಂಬ ಡ್ರಾಪ್ ಡೌನ್ ಲಿಸ್ಟ್ ಅನ್ನು ಕ್ಲಿಕ್ ಮಾಡಿ.
01:25 ಇಲ್ಲಿ ಮೂರು ಆಯ್ಕೆಗಳಿವೆ.
01:27 ಅಬೊವ್ ಕರೆಂಟ್ ಎಂಬುದು, ಈ ಲೇಯರ್ ಅನ್ನು ಈಗಿನ ಲೇಯರ್ ನ ಮೇಲೆ ಇರಿಸುತ್ತದೆ.
01:32 ಬಿಲೊ ಕರೆಂಟ್ ಎಂಬುದು ಈ ಲೇಯರ್ ಅನ್ನು ಈಗಿನ ಲೇಯರ್ ನ ಕೆಳಗೆ ಇರಿಸುತ್ತದೆ.
01:36 ಆಸ್ (as) ಸಬ್ ಲೇಯರ್ ಆಫ್ ಕರೆಂಟ್ ಎಂಬುದು, ಈ ಲೇಯರ್, ಈಗಿನ ಲೇಯರ್ ನ ಭಾಗವಾಗಿರುತ್ತದೆ ಎಂಬುದನ್ನು ಸೂಚಿಸುತ್ತದೆ.
01:41 ಈಗ ನಾನು, ಅಬೊವ್ ಕರೆಂಟ್ ಎಂದು ಆಯ್ಕೆ ಮಾಡುತ್ತೇನೆ ಮತ್ತು add ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ.
01:47 ಈಗ ಲೇಯರ್ ಪ್ಯಾಲೆಟ್ ನಲ್ಲಿ, ಐ ಹೆಸರಿನ, ಒಂದು ಹೊಸ ಲೇಯರ್ ಇರುವುದನ್ನು ಗಮನಿಸಬಹುದು.
01:52 ಹೀಗೆಯೇ, ಬೋ ಎಂಬ ಇನ್ನೊಂದು ಲೇಯರ್ ಅನ್ನು ರಚಿಸಿ.
02:00 ಈಗ, ಲೇಯರ್ ಪ್ಯಾಲೆಟ್ ನಲ್ಲಿ ಮೂರು ಲೇಯರ್ ಗಳಿವೆ.
02:04 ಈಗ, ಲೇಯರ್ ನ ಹೆಸರು ಬದಲಾಯಿಸುವುದನ್ನು ಕಲಿಯೋಣ.
02:08 ಮೊದಲು, ಲೇಯರ್ ಒನ್ ನ ಮೇಲೆ ಡಬಲ್ ಕ್ಲಿಕ್ ಮಾಡಿ ಮತ್ತು ಸರ್ಕಲ್ ಎಂದು ಹೆಸರಿಸಿ ನಂತರ ಎಂಟರ್ (enter) ಕೀಯನ್ನು ಒತ್ತಿ.
02:16 ನಮ್ಮ ಕ್ಯಾನ್ವಾಸ್ ಗೆ ಹಿಂತಿರುಗಿ, ಈಗ ಎರಡು ಕಣ್ಣುಗಳೂ ಮತ್ತು ಒಂದು ಬೋ ಇವೆ.
02:20 ಈಗ, ಈ ಎರಡೂ ಆಕಾರಗಳನ್ನೂ ನಾವು ರಚಿಸಿದ ಎರಡು ವಿವಿಧ ಲೇಯರ್ ಗಳಿಗೆ ಸರಿಸೋಣ.
02:25 ಮೌಸ್ ಅನ್ನು ಎಳೆದು, ಎರಡೂ ಕಣ್ಣುಗಳನ್ನೂ ಆಯ್ಕೆ ಮಾಡಿ.
02:28 ಈಗ, ನಿಮ್ಮ ಕೀಬೋರ್ಡ್ ನಲ್ಲಿ, Ctrl ಮತ್ತು X ಅನ್ನು ಒತ್ತಿ. ಕಣ್ಣುಗಳು ಈಗ ಕಾಣದಾಗುತ್ತವೆ.
02:34 ಲೇಯರ್ ಪ್ಯಾಲೆಟ್ ನಲ್ಲಿರುವ ಐ ಎಂಬ ಲೇಯರ್ ನ ಮೇಲೆ ಕ್ಲಿಕ್ ಮಾಡಿ.
02:38 ಕ್ಯಾನ್ವಾಸ್ ಗೆ ಹಿಂತಿರುಗಿ, Ctrl, Alt ಮತ್ತು V ಕೀಗಳನ್ನು ಒತ್ತಿ.
02:44 ಇದೇ ರೀತಿ ಬೋ ಆಕಾರಕ್ಕೂ ಮಾಡಿ.
02:52 ಎಲ್ಲ ಆಬ್ಜೆಕ್ಟ್ ಗಳ ಆಯ್ಕೆಯನ್ನು ರದ್ದುಗೊಳಿಸಲು, ಕ್ಯಾನ್ವಾಸ್ ನ ಮೇಲೆ, ಖಾಲಿ ಜಾಗದಲ್ಲಿ ಕ್ಲಿಕ್ ಮಾಡಿ.
03:00 ಐ ಮತ್ತು ಲಾಕ್ ಐಕಾನ್ ಗಳು ಲೇಯರ್ ಗಳನ್ನು ಮರೆಮಾಚಲು ಮತ್ತು ಲೊಚ್ಕ್ ಮಾಡಲು ಸಹಾಯ ಮಾಡುತ್ತವೆ.
03:04 ನೀವು ಲೇಯರ್ ಅನ್ನು ಮರೆಮಾಚಿದಾಗ, ಕೆಳಗಿರುವ ಲೇಯರ್ ಗಳ ಆಬ್ಜೆಕ್ಟ್ ಗಳನ್ನು ಸ್ಪಷ್ಟವಾಗಿ ನೋಡಬಹುದು.
03:11 ನೀವು ಒಂದು ಲೇಯರ್ ಅನ್ನು ಲಾಕ್ ಮಾಡಿದಾಗ, ಆ ಲೇಯರ್ ಗೆ ಆಗಬಹುದಾದ ಆಕಸ್ಮಿಕ ಬದಲಾವಣೆಗಳನ್ನು ತಡೆಯಬಹುದು.
03:18 ನಾವು ದೊಡ್ಡ ಮತ್ತು ಕ್ಲಿಷ್ಟ ಗ್ರಾಫಿಕ್ ಅಸೈನ್ಮೆಂಟ್ ಗಳನ್ನು ಮಾಡುವಾಗ, ಈ ವಿಶೇಷತೆಗಳು ಸಹಾಯಕವಾಗುತ್ತವೆ.
03:25 ಎಲ್ಲ ಲೇಯರ್ ನ ಎಡ ಭಾಗದಲ್ಲಿ, ನೀವು ಮುಖ್ಯವಾಗಿ ಎರಡು ಐಕಾನ್ ಗಳನ್ನು ಗಮನಿಸಬೇಕು – ಐ ಮತ್ತು ಲಾಕ್.
03:32 ಈಗ ನಾವು ಇವುಗಳ ಬಳಕೆಯನ್ನು ಕಲಿಯೋಣ.
03:35 ಲೇಯರ್ ಗಳನ್ನು, ಲಾಕ್ ಅಥವಾ ಅನ್ಲಾಕ್ ಮಾಡಲು, ಲಾಕ್ ಐಕಾನ್ ಅನ್ನು ಕ್ಲಿಕ್ ಮಾಡಿ. ಈಗ ನಾನು ಬೋ ಲೇಯರ್ ಅನ್ನು ಲಾಕ್ ಮಾಡಿದ್ದೇನೆ.
03:42 ಲಾಕ್ ಆದ ಲೇಯರ್ ನಲ್ಲಿ ನಾವು ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ.
03:47 ಈಗ, ಕ್ಯಾನ್ವಾಸ್ ಮೇಲಿರುವ ಬೋ ಅನ್ನು ಆಯ್ಕೆ ಮಾಡಲು ಪ್ರಯತ್ನಿಸೋಣ. ಆಯ್ಕೆ ಮಾಡಲು ಸಾಧ್ಯವಾಗದಿರುವುದನ್ನು ನೀವು ಗಮನಿಸಬಹುದು.
03:58 ಈಗ, ಬೋ ಲೇಯರ್ ಅನ್ನು ಅನ್ಲಾಕ್ ಮಾಡುತ್ತೇನೆ.
04:01 ಈಗ, ಬೋ ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಬಹುದು ಮತ್ತು ಅದರ ಗುಣಗಳನ್ನು ಬದಲಾಯಿಸಬಹುದು.
04:07 ಕ್ಯಾನ್ವಾಸ್ ನ ಮೇಲೆ, ಲೇಯರ್ ಅನ್ನು ಮರೆಮಾಚಲು ಅಥವಾ ಗೋಚರಿಸುವಂತೆ ಮಾಡಲು, ಲೇಯರ್ ನ ಎಡಭಾಗದಲ್ಲಿರುವ, ಐ ಐಕಾನ್ ಅನ್ನು ಕ್ಲಿಕ್ ಮಾಡಿ.
04:15 ಬೋ ಲೇಯರ್ ನ ಐ ಐಕಾನ್ ಅನ್ನು ಕ್ಲಿಕ್ ಮಾಡುತ್ತೇನೆ.
04:18 ಕ್ಯಾನ್ವಾಸ್ ನ ಮೇಲೆ ಏನಾಗುತ್ತದೆ ಎಂಬುದನ್ನು ಗಮನಿಸಿ.
04:23 ಈಗ ನಾನು ಬೋ ಲೇಯರ್ ನ ನಕಲು ಮಾಡುತ್ತೇನೆ.
04:26 ಲೇಯರ್ ಮೆನುವಿನಲ್ಲಿ, ಡುಪ್ಲಿಕೇಟ್ ಕರೆಂಟ್ ಲೇಯರ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
04:32 ಲೇಯರ್ ಪ್ಯಾಲೆಟ್ ವಿಂಡೋ ನಲ್ಲಿ, ಬೋ ಕಾಪಿ ಎಂಬ ಹೊಸ ಲೇಯರ್ ಇರುವುದನ್ನು ನೀವು ಗಮನಿಸಬಹುದು.
04:41 ಆದರೆ, ನಮಗೆ, ಕ್ಯಾನ್ವಾಸ್ ನ ಮೇಲೆ ಇನ್ನೊಂದು ಬೋ ಕಾಣುವುದಿಲ್ಲ. ಏಕೆಂದರೆ, ಬೋ ಆಬ್ಜೆಕ್ಟ್, ಕೆಳಗಿನ ಲೇಯರ್ ನ ಮೇಲೆ ಇದೆ.
04:50 ಮೇಲಿನ ಲೇಯರ್ ನ ಬೋ ಅನ್ನು ಆಯ್ಕೆ ಮಾಡಿ, ಮತ್ತು ಇದನ್ನು ಸರಿಸಿ, ಎರಡೂ ಬೋ ಗಳೂ ಕಾಣುವಂತೆ ಮಾಡಿ.
04:56 ಸರ್ಕಲ್ ಲೇಯರ್ ಅನ್ನು ಆಯ್ಕೆ ಮಾಡಿ.
04:58 ಕ್ಯಾನ್ವಾಸ್ ನ ಮೇಲೆ ಕಣ್ಣುಗಳು ಮತ್ತು ಬೋ ಗಳನ್ನು ಸುತ್ತುವರೆಯುವಂತೆ, ಒಂದು ವೃತ್ತವನ್ನು ರಚಿಸಿ, ಅದಕ್ಕೆ ಕೇಸರಿ ಬಣ್ಣ ತುಂಬಿ.
05:05 ದೀರ್ಘ ವೃತ್ತವು ಉಳಿದೆಲ್ಲ ಆಬ್ಜೆಕ್ಟ್ ಗಳ ಹಿನ್ನೆಲೆಯಲ್ಲಿ ಕಾಣುತ್ತದೆ.
05:10 ಲೇಯರ್ ಪ್ಯಾಲೆಟ್ ನಲ್ಲಿ, ಪ್ಲಸ್ ಐಕಾನ್ ನ ಮುಂದಿರುವ ನಾಲ್ಕು ಐಕಾನ್ ಗಳು, ಆಯ್ಕೆಯಾದ ಲೇಯರ್ ನ ಸ್ಥಾನದಲ್ಲಿರಿಸಲು ಸಹಾಯ ಮಾಡುತ್ತವೆ.
05:17 ಮೊದಲನೇ ಐಕಾನ್, ಲೇಯರ್ ಅನ್ನು ಉಳಿದೆಲ್ಲ ಲೇಯರ್ ಗಳ ಮೆಲೆ ಇರಿಸುತ್ತದೆ.
05:23 ಈಗ ಸರ್ಕಲ್ ಲೇಯರ್ ಆಯ್ಕೆ ಆಗಿದೆ.
05:25 ಈ ಐಕಾನ್ ಅನ್ನು ಕ್ಲಿಕ್ ಮಾಡುವುದರಿಂದ, ಸರ್ಕಲ್ ಲೇಯರ್ ಅತಿ ಮೇಲಿನ ಲೇಯರ್ ಆಗುವುದನ್ನು ನೀವು ಗಮನಿಸಬಹುದು.
05:33 ಆಯ್ಕೆಯಾದ ಲೇಯರ್ ಅನ್ನು, ಕೊನೆಯ ಐಕಾನ್, ಅತೀ ಕೆಳಗಿನ ಲೇಯರ್ ಆಗಿ ಮಾಡುತ್ತದೆ.
05:38 ಈ ಐಕಾನ್ ನ ಮೇಲ್ ಕ್ಲಿಕ್ ಮಾಡಿ, ಈಗ, ಸರ್ಕಲ್ ಲೇಯರ್, ಅತೀ ಕೆಳಗಿನ ಲೇಯರ್ ಆಗಿವುದನ್ನು ನೀವು ಗಮನಿಸಬಹುದು.
05:44 ಎರಡನೇ ಐಕಾನ್, ಆಯ್ಕೆಯಾದ ಲೇಯರ್ ಅನ್ನು ಒಂದು ಲೇಯರ್ ಮೇಲೆ ಏರಿಸುತ್ತದೆ.
05:48 ಈ ಐಕಾನ್ ಮೇಲೆ ಕ್ಲಿಕ್ ಮಾಡಿ, ಈಗ, ಸರ್ಕಲ್ ಲೇಯರ್, ಐ ಲೇಯರ್ ನ ಮೇಲೆ ಬರುತ್ತದೆ. ಹಾಗಾಗಿ, ಕಣ್ಣುಗಳು ಕಾಣುವುದಿಲ್ಲ.
05:57 ಮೂರನೇ ಐಕಾನ್, ಆಯ್ಕೆಯಾದ ಲೇಯರ್ ಅನ್ನು ಒಂದು ಲೇಯರ್ ಕೆಳಗಿ ಇಳಿಸುತ್ತದೆ.
06:01 ಈ ಐಕಾನ್ ನ ಮೇಲೆ ಕ್ಲಿಕ್ ಮಾಡಿ, ಈಗ ಸರ್ಕಲ್ ಲೇಯರ್, ಐ ಲೇಯರ್ ನ ಕೆಳಗೆ ಬರುತ್ತದೆ.
06:07 ಹೀಗೆ ಈ ನಾಲ್ಕೂ ಐಕಾನ್ ಗಳನ್ನೂ ಬಳಸಬಹುದು.
06:13 ಕೊನೆಯಲ್ಲಿರುವ ಮೈನಸ್ ಐಕಾನ್, ಆಯ್ಕೆಯಾದ ಲೇಯರ್ ಅನ್ನು ಅಳಿಸಿಹಾಕುತ್ತದೆ. ಬೋ ಕಾಪಿ ಎಂಬ ಲೇಯರ್ ಅನ್ನು ಆಯ್ಕೆ ಮಾಡಿ, ಇದನ್ನು ಒತ್ತಿ.
06:21 ಬೋ ಕಾಪಿ ಲೇಯರ್ ಈಗ ಕಾಣುತ್ತಿಲ್ಲ ಎಂಬುದನ್ನು ಗಮನಿಸಬಹುದು.
06:27 ಬ್ಲೆಂಡ್ ಮೋಡ್ ಎಂಬುದು, ಒಂದು ಲೇಯರ್ ಗೆ ಬ್ಲೆಂಡ್ ಫಿಲ್ಟರ್ ಹಾಕಲು ಇರುವ ಶಾರ್ಟ್ ಕಟ್.
06:31 ಆಯ್ಕೆಯಾದ ಲೇಯರ್ ನಲ್ಲಿ, ಆಬ್ಜೆಕ್ಟ್ ಗಳು ಒಂದರ ಮೇಲೊಂದು ಇದ್ದರೆ, ಇಂಕ್ ಸ್ಕೇಪ್ , ಎರಡೂ ಆಬ್ಜೆಕ್ಟ್ ಗಳ ಪ್ರತೀ ಪಿಕ್ಸೆಲ್ ಅನ್ನೂ ಬ್ಲೆಂಡ್ ಮಾಡುತ್ತದೆ.
06:41 ಹಾಗಾಗಿ, ಸರ್ಕಲ್ ಲೇಯರ್ ಅನ್ನು ಮೇಲೆ ಸರಿಸಿ, ಫಿಲ್ಟರ್ ಗಳು ಕಾಣುವಂತೆ ಮಾಡಿ.
06:46 ಬ್ಲೆಂಡ್ ಮೋಡ್ ನ ಡ್ರಾಪ್ ಡೌನ್ ಲಿಸ್ಟ್ ನ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಐದು ಆಯ್ಕೆಗಳಿರುವುದನ್ನು ನೀವು ನೋಡಬಹುದು.
06:52 ಮೊದಲನೇಯ, ನಾರ್ಮಲ್ ಎಂಬ ಆಯ್ಕೆಯು, ಲೇಯರ್ ಗೆ ಯಾವುದೇ ಫಿಲ್ಟರ್ ಅನ್ನು ಸೇರಿಸುವುದಿಲ್ಲ.
06:57 ಇದರ ಮೇಲೆ ಕ್ಲಿಕ್ ಮಾಡೋಣ. ಯಾವುದೇ ಫಿಲ್ಟರ್ ಸೇರ್ಪಡೆ ಆಗದಿರುವುದನ್ನು ನೀವು ಗಮನಿಸಬಹುದು.
07:03 ನಂತರ, ಮಲ್ಟಿಪ್ಲೈ ಎಂಬುದರ ಮೇಲೆ ಕ್ಲಿಕ್ ಮಾಡಿ.
07:06 ಉನ್ನತವಾದ ಪದರದ ಮೇಲೆ ಇರುವ ವಸ್ತುಗಳು ಫಿಲ್ಟರ್ ನಂತೆ, ಬೆಳಕನ್ನು ಕೆಳಗಿನ ಪದರಗಳ ಆಬ್ಜೆಕ್ಟ್ ಗಳು ಕಾಣುವಂತೆ ಬಿಡುತ್ತವೆ.
07:14 ಇದರ ಜೊತೆಗೆ, ಒಂದರ ಮೇಲೊಂದು ಬಂದ ಭಾಗಗಳಲ್ಲಿ, ಬಣ್ಣಗಳನ್ನು ಬೆರೆಸಿ ಗಾಢ ಬಣ್ಣಗಳನ್ನಾಗಿಸುತ್ತದೆ.
07:21 ಮುಂದಿನ ಆಯ್ಕೆ : ಸ್ಕ್ರೀನ್
07:25 ಮೇಲಿನ ಆಬ್ಜೆಕ್ಟ್ ಗಳನ್ನು ಗಮನಿಸಿ. ಅವು ಕೆಳಗಿನ ಆಬ್ಜೆಕ್ಟ್ ಗಳನ್ನು ತಿಳಿಯಾಗಿಸುತ್ತವೆ.
07:30 ಹಾಗಾಗಿ, ಒಂದರ ಮೇಲೊಂದು ಆಬ್ಜೆಕ್ಟ್ ಗಳು ಬಂದ ಭಾಗಗಳಲ್ಲಿ, ಬಣ್ಣಗಳನ್ನು ಬೆರೆಸಿ ತಿಳಿ ಬಣ್ಣವನ್ನಾಗಿಸುತ್ತದೆ.
07:36 ಡಾರ್ಕನ್ ಎಂಬುದನ್ನು ಆಯ್ಕೆ ಮಾಡಿ. ಮೇಲಿನ ಲೇಯರ್ ನಲ್ಲಿರುವ ಆಬ್ಜೆಕ್ಟ್ ಗಳು ಕೆಳಗಿನ ಲೇಯರ್ ನಲ್ಲಿರುವ ಆಬ್ಜೆಕ್ಟ್ ಗಳನ್ನ್ ಗಾಢವಾಗಿಸುತ್ತವೆ.
07:44 ಈಗ, ಲೈಟನ್ ಎಂಬುದನ್ನು ಆಯ್ಕೆ ಮಾಡಿ. ಇಲ್ಲಿ, ಮೇಲಿನ ಆಬ್ಜೆಕ್ಟ್ ಗಳು ಕೆಳಗಿನ ಆಬ್ಜೆಕ್ಟ್ ಗಳನ್ನು ತಿಳಿಯಾಗಿಸುತ್ತವೆ.
07:53 ಬ್ಲೆಂಡ್ ಮೋಡ್ ಅನ್ನು ಪುನಃ ನಾರ್ಮಲ್ ಮೋಡ್ ಗೆ ಬದಲಾಯಿಸಿದರೆ, ಬ್ಲೆಂಡ್ ಫಿಲ್ಟರ್ ಕಣ್ಮರೆಯಾಗುತ್ತವೆ.
08:00 ಈ ರೀತಿ, ಇನ್ನೂ ಹಲವು ಫಿಲ್ಟರ್ ಗಳನ್ನು ಫಿಲ್ಟರ್ ಮೆನುವುನಲ್ಲಿ ನೋಡಬಹುದು.
08:04 ಯಾವುದೇ ಫಿಲ್ಟರ್ ಅನ್ನು ಅಳವಡಿಸುವ ಮೊದಲು, ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ, ನಂತರ ಬೇಕಾದ ಫಿಲ್ಟರ್ ಅನ್ನು ಕ್ಲಿಕ್ ಮಾಡಿ.
08:12 ಸರ್ಕಲ್ ಲೇಯರ್ ಅನ್ನು ಪುನಃ ಕೆಳಗೆ ಸರಿಸಿ.
08:16 ಈಗ ಐ ಅನ್ನು ಆಯ್ಕೆ ಮಾಡುತ್ತೆನೆ. ಫಿಲ್ಟರ್ಸ್ ಮೆನುವಿನಲ್ಲಿ, ಬ್ಲರ್ ಮತ್ತು ಫ್ಯಾನ್ಸಿ ಬ್ಲರ್ ಅನ್ನು ಆಯ್ಕೆ ಮಾಡಿ.
08:26 ಐ ನಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ.
08:29 ಇನ್ನೊಂದು ಐ ಅನ್ನು ಆಯ್ಕೆ ಮಾಡುತ್ತೇನೆ. ಫಿಲ್ಟರ್ಸ್ ಮೆನುವಿನಲ್ಲಿ, ಬೆವೆಲ್ ಮತ್ತು ಸ್ಮಾರ್ಟ್ ಜೆಲ್ಲಿ ಅನ್ನು ಆಯ್ಕೆ ಮಾಡಿ.
08:39 ಪುನಃ, ಐ ನಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ.
08:44 ಈಗ, ಬೋ ಅನ್ನು ಆಯ್ಕೆ ಮಾಡಿ. ಫಿಲ್ಟರ್ಸ್ ಮೆನುವಿನಲ್ಲಿ, ಸ್ಕ್ಯಾಟರ್ ಮತ್ತು ಏರ್ ಸ್ಪ್ರೇ ಅನ್ನು ಆಯ್ಕೆ ಮಾಡಿ.
08:51 ಬಣ್ಣವನ್ನು ಸಿಂಪಡಿಸಿದಂತೆ ಬೋ ಕಾಣುತ್ತದೆ.
08:55 ಬ್ಲೆಂಡ್ ಮೋಡ್ ನ ಕೆಳಗಿರುವ, ಒಪ್ಯಾಸಿಟಿ ಆಯ್ಕೆಯು, ಆಯ್ಕೆಯಾದ ಲೇಯರ್ ನ ಅಪಾರದರ್ಶಕತೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
09:01 ಸರ್ಕಲ್ ಲೇಯರ್ ಅನ್ನು ಆಯ್ಕೆ ಮಾಡಿ.
09:03 ಒಪ್ಯಾಸಿಟಿ ಮಟ್ಟವನ್ನು ಸರಿಪಡಿಸಿ ಮತ್ತು ದೀರ್ಘ ವೃತ್ತದಲ್ಲಾಗುವ ಬದಲಾವಣೆಗಳನ್ನು ಗಮನಿಸಿ.
09:10 ನಂತರ, ನಾವು ಬೂಲಿಯನ್ ಆಪರೇಶನ್ ಗಳ ಬಗೆಗೆ ತಿಳಿಯೋಣ.
09:13 ಪಾತ್ ಮೆನುವಿನಲ್ಲಿ, ಎಲ್ಲ ಬೂಲಿಯನ್ ಆಪರೇಶನ್ ಗಳೂ ಲಭ್ಯವಿದೆ.
09:21 ಕ್ಯಾನ್ವಾಸ್ ನ ಮೇಲಿರುವ ಎಲ್ಲ ಆಕಾರಗಳಾನ್ನೂ ಪಕ್ಕದಲ್ಲಿಡಿ.
09:26 ಒಂದು ಹಸಿರು ಚೌಕ ಮತ್ತು ಕೆಂಪು ಬಣ್ಣದ ವೃತವನ್ನು ರಚಿಸಿ. ವೃತ್ತವನ್ನು ಚೌಕದ ಮೇಲೆ ಬದಿಯಲ್ಲಿ ಇಡಿ.
09:36 ಎರಡನ್ನೂ ಆಯ್ಕೆ ಮಾಡಿ. ಪಾತ್ ಮೆನುವಿನಲ್ಲಿ, ಯುನಿಯನ್ ಎಂಬುದನ್ನು ಕ್ಲಿಕ್ ಮಾಡಿ. ಈಗ ಎರಡೂ ಆಕಾರಗಳೂ ಸೇರಿರುವುದನ್ನು ನೀವು ಗಮನಿಸಬಹುದು.
09:46 ಈಗ, ಈ ಕ್ರಿಯೆಯನ್ನು ರದ್ದುಗೊಳಿಸಲು, ನಿಮ್ಮ ಕೀಬೋರ್ಡ್ ನಲ್ಲಿ, Ctrl ಮತ್ತು Z ಕೀಗಳನ್ನು ಒತ್ತಿ.
09:51 ಪುನಃ ಎರಡನ್ನೂ ಆಯ್ಕೆ ಮಾಡಿ. ಪಾತ್ ಮೆನುವಿನಲ್ಲಿ ಡಿಫರೆನ್ಸ್ ಎಂಬುದನ್ನು ಕ್ಲಿಕ್ ಮಾಡಿ, ಮತ್ತು ಏನಾಗುವುದೆಂದು ಗಮನಿಸಿ.
09:59 ಪುನಃ, ಈಗ, ಈ ಕ್ರಿಯೆಯನ್ನು ರದ್ದುಗೊಳಿಸಲು, Ctrl ಮತ್ತು Z ಕೀಗಳನ್ನು ಒತ್ತಿ.
10:03 ಪುನಃ ಎರಡನ್ನೂ ಆಯ್ಕೆ ಮಾಡಿ. ಪಾತ್ ಮೆನುವಿನಲ್ಲಿ ಇಂಟರ್ಸೆಕ್ಷನ್ ಎಂಬುದನ್ನು ಕ್ಲಿಕ್ ಮಾಡಿ, ಮತ್ತು ಆಕಾರದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ.
10:11 ಈ ಕ್ರಿಯೆಯನ್ನು ರದ್ದುಗೊಳಿಸಲು, Ctrl ಮತ್ತು Z ಕೀಗಳನ್ನು ಒತ್ತಿ.
10:16 ಪುನಃ ಎರಡನ್ನೂ ಆಯ್ಕೆ ಮಾಡಿ. ಪಾತ್ ಮೆನುವಿನಲ್ಲಿ ಎಕ್ಸ್ ಕ್ಲೂಶನ್(Exclusion) ಎಂಬುದನ್ನು ಕ್ಲಿಕ್ ಮಾಡಿ, ಮತ್ತು ಆಕಾರದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ.
10:24 ಪುನಃ Ctrl ಮತ್ತು Z ಕೀಗಳನ್ನು ಒತ್ತಿ.
10:27 ಪುನಃ ಎರಡನ್ನೂ ಆಯ್ಕೆ ಮಾಡಿ. ಪಾತ್ ಮೆನುವಿನಲ್ಲಿ ಡಿವಿಶನ್ ಎಂಬುದನ್ನು ಕ್ಲಿಕ್ ಮಾಡಿ.
10:34 ವಿಂಗಡಿಸಲಾದ ವೃತ್ತದ ಮೇಲೆ ಕ್ಲಿಕ್ ಮಾಡಿ, ಮತ್ತು ಆ ಭಾಗವನ್ನು ಪಕ್ಕಕ್ಕೆ ಸರಿಸಿ, ಫಲಿತಾಂಶವನ್ನು ನೋಡಿ.
10:39 ಈಗ, ctrl ಮತ್ತು z ಕೀಗಳನ್ನು ಎರಡು ಬಾರಿ ಒತ್ತಿ, ಈ ಕಾರ್ಯಗಳನ್ನು ರದ್ದುಗೊಳಿಸಿ.
10:44 ಎರಡೂ ಆಬ್ಜೆಕ್ಟ್ ಗಳನ್ನೂ ಮತ್ತೆ ಆಯ್ಕೆ ಮಾಡಿ. ಪಾತ್ ಮೆನುವಿನಲ್ಲಿ, ಕಟ್ ಪಾತ್ ಎಂಬುದನ್ನು ಕ್ಲಿಕ್ ಮಾಡಿ.
10:50 ಆಕಾರದಲ್ಲಾಗುವ ಬದಲಾವಣೆಗಳನ್ನು ಗಮನಿಸಿ.
10:53 ಕಟ್ ಪಾತ್ ಎಂಬ ಆಯ್ಕೆಯು, ಆಬ್ಜೆಕ್ಟ್ ಸ್ಟ್ರೋಕ್ ಅನ್ನು ಹೊಂದಿದ್ದರೆ ಮಾತ್ರ ಕೆಲಸ ಮಾಡುತ್ತದೆ. ಆಕಾರಗಳ ಆಯ್ಕೆಯನ್ನು ಮೊದಲು ರದ್ದುಗೊಳಿಸಿ.
10:59 ಈಗ, ಯಾವುದಾದರೊಂದು ಸ್ಟ್ರೋಕ್ ಅನ್ನು ಆಯ್ಕೆ ಮಾಡಿ ಮತ್ತು ಕಟ್ ಪಾತ್ ಕಾಣುವಂತೆ ಅದನ್ನು ಪಕ್ಕಕ್ಕೆ ಸರಿಸಿ.
11:05 ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು :
11:09 *ಲೇಯರ್ ಗಳು
11:10 * ಫಿಲ್ಟರ್ಸ್ ಮತ್ತು ಬೂಲಿಯನ್ ಆಪರೇಶನ್ ಗಳು
11:14 ನಿಮಗಾಗಿ ನಾಲ್ಕು ಅಸೈನ್ಮೆಂಟ್ ಗಳು ಇಲ್ಲಿವೆ.
11:16 ಗುಲಾಬಿ ಬಣ್ಣದ ಒಂದು ಆಯತ ಮತ್ತು ಹಸಿರು ಬಣ್ಣದ ತ್ರಿಕೋನ ಗಳನ್ನು ರಚಿಸಿ.
11:21 ತ್ರಿಕೋನವನ್ನು ಆಯತದ ಮೇಲೆ ಇಡಿ.
11:24 ಎರಡನ್ನೂ ಆಯ್ಕೆ ಮಾಡಿ. ಯುನಿಯನ್ ಅನ್ನು ಬಳಸಿ. ಅದು ಹೋಮ್ ಐಕಾನ್ ನಂತೆ ಕಾಣಬೇಕು.
11:30 ಈ ಲೇಯರ್ ಅನ್ನು ಹೋಮ್ ಎಂದು ಹೆಸರಿಸಿ.
11:32 ಎರಡು ವೃತ್ತವನ್ನು ರಚಿಸಿ.
11:34 ಒಂದರಮೇಲೊಂದು ಇಡಿ.
11:36 ಎರಡನ್ನೂ ಆಯ್ಕೆ ಮಾಡಿ, ಡಿಫರೆನ್ಸ್ ಅನ್ನು ಉಪಯೋಗಿಸಿ.
11:39 ಇದು ಅರ್ಧಚಂದ್ರದಂತೆ ಕಾಣಬೇಕು.
11:42 ಒಂದು ದೀರ್ಘವೃತ್ತವನ್ನು ರಚಿಸಿ.
11:44 ಹತ್ತು ಮೂಲೆಯ ಒಂದು ನಕ್ಷತ್ರವನ್ನು ರಚಿಸಿ.
11:46 ಇದನ್ನು ದೀರ್ಘವೃತ್ತದ ಮಧ್ಯದಲ್ಲಿ ಇಡಿ.
11:49 ಎರಡನ್ನೂ ಆಯ್ಕೆ ಮಾಡಿ, ಎಕ್ಸ್ ಕ್ಲೂಶನ್ ಆಯ್ಕೆ ಮಾಡಿ.
11:52 ಕ್ರೆಸೆಂಟ್ ಮತ್ತು ಸ್ಟಾರ್ ಎಂಬ ಎರಡು ಲೇಯರ್ ಅನ್ನು ರಚಿಸಿ.
11:57 ಅರ್ಧವೃತ್ತವನ್ನು ಕತ್ತರಿಸಿ ಮತ್ತು ಕ್ರೆಸೆಂಟ್ ಲೇಯರ್ ಮೇಲೆ ಪೇಸ್ಟ್ ಮಾಡಿ.
12:00 ಹೀಗೆಯೇ, ನಕ್ಷತ್ರ ಆಕಾರಕ್ಕೂ ಮಾಡಿ.
12:03 ನಿಮ್ಮ ಅಸೈನ್ಮೆಂಟ್ ಮುಗಿದ ನಂತರ ಹೀಗೆ ಕಾಣಬೇಕು.
12:07 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
12:16 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
12:23 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
12:27 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
12:34 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ.
12:39 ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
12:42 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Chetana, PoojaMoolya, Rakeshkkrao, Vasudeva ahitanal