PERL/C2/Comments-in-Perl/Kannada

From Script | Spoken-Tutorial
Revision as of 16:13, 14 July 2015 by Sandhya.np14 (Talk | contribs)

Jump to: navigation, search
Time Narration
00:00 Comments in Perl (ಕಾಮೆಂಟ್ಸ್ ಇನ್ ಪರ್ಲ್) ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ, ನಾವು
00:08 Perl ನಲ್ಲಿಯ ‘ಕಾಮೆಂಟ್’ಗಳ ಬಗ್ಗೆ ಕಲಿಯುವೆವು.
00:10 ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ
00:18 Perl 5.14.2 ಎಂದರೆ: Perl ರಿವಿಜನ್ 5, ಆವೃತ್ತಿ 14 ಮತ್ತು ಉಪ-ಆವೃತ್ತಿ 2 ಇವುಗಳನ್ನು ಬಳಸುತ್ತಿದ್ದೇನೆ.
00:23 ನಾನು gedit Text Editor ಸಹ ಬಳಸುತ್ತಿರುವೆನು.
00:27 ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು.
00:31 ನಿಮಗೆ ಪರ್ಲ್ ನಲ್ಲಿ ಕಂಪೈಲ್ ಹಾಗೂ ಎಕ್ಸಿಕ್ಯೂಟ್ ಮಾಡುವ ಬಗೆ ಮತ್ತು ವೇರಿಯೆಬಲ್ ಗಳ ಬಗ್ಗೆ ತಿಳಿದಿರಬೇಕು.
00:37 ಇಲ್ಲದಿದ್ದರೆ, ದಯವಿಟ್ಟು spoken tutorial ವೆಬ್ಸೈಟ್ ಮೇಲಿನ, ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ನೋಡಿ.
00:43 ಪರ್ಲ್ ನಲ್ಲಿ, ಕೋಡ್ ನ ಒಂದು ಭಾಗವನ್ನು ಎರಡು ವಿಧದಲ್ಲಿ ಕಾಮೆಂಟ್ ಮಾಡಬಹುದು.
00:47 * ಸಿಂಗಲ್-ಲೈನ್
00:48 * ಮಲ್ಟಿ-ಲೈನ್
00:49 ಬಳಕೆದಾರನಿಗೆ (user) ಕೋಡ್ ನ ಒಂದೇ ಸಾಲನ್ನು (line) ಕಾಮೆಂಟ್ ಮಾಡಬೇಕಾದಾಗ ಅಥವಾ
00:55 ಕೋಡ್ ನ ಒಂದು ಭಾಗದ ಕಾರ್ಯವನ್ನು ವಿವರಿಸಲು, ಒಂದು ಸಾಲಿನ ಟೆಕ್ಸ್ಟ್ ಅನ್ನು ಸೇರಿಸುವಾಗ ಈ ವಿಧದ ಕಾಮೆಂಟ್ ಅನ್ನು ಬಳಸಲಾಗುವುದು.
01:01 ಈ ವಿಧದ ಕಾಮೆಂಟ್, ಹ್ಯಾಶ್ (#) ಚಿಹ್ನೆಯೊಂದಿಗೆ ಆರಂಭವಾಗುತ್ತದೆ.
01:05 ಇಲ್ಲಿ, ಇದನ್ನು ಮಾಡಿತೋರಿಸಿದೆ. ‘ಟೆಕ್ಸ್ಟ್ ಎಡಿಟರ್’ನಲ್ಲಿ ನಾವು ಒಂದು ಹೊಸ ಫೈಲನ್ನು ತೆರೆಯೋಣ (open).
01:11 Terminal (ಟರ್ಮಿನಲ್) ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ: gedit comments.pl & (ಜಿ-ಎಡಿಟ್ ಕಾಮೆಂಟ್ಸ್ ಡಾಟ್ ಪಿ-ಎಲ್ ಸ್ಪೇಸ್ ಆಂಪರ್ಸಂಡ್).
01:19 ಆಂಪರ್ಸಂಡ್(&), ‘ಟರ್ಮಿನಲ್’ನಲ್ಲಿ ‘ಕಮಾಂಡ್ ಪ್ರಾಂಪ್ಟ್’ಅನ್ನು ಮುಕ್ತಗೊಳಿಸುತ್ತದೆ ಎನ್ನುವುದನ್ನು ನಿಮಗೆ ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ಈಗ Enter ಅನ್ನು ಒತ್ತಿ.
01:27 ಈಗ, ಈ ಕೆಳಗಿನ ಕಮಾಂಡ್ ಗಳನ್ನು ಟೈಪ್ ಮಾಡಿ.
01:29 # Declaring count variable (ಹ್ಯಾಶ್ ಡಿಕ್ಲೇರಿಂಗ್ ಕೌಂಟ್ ವೇರಿಯೆಬಲ್). Enter ಅನ್ನು ಒತ್ತಿ.
01:37 ಡಾಲರ್ count ಸ್ಪೇಸ್ ಇಕ್ವಲ್ ಟು ಸ್ಪೇಸ್ 1 ಸೆಮಿಕೋಲನ್, Enter ಅನ್ನು ಒತ್ತಿ.
01:45 print ಸ್ಪೇಸ್ ಡಬಲ್ ಕೋಟ್ಸ್ Count is ಡಾಲರ್ ($) count ಬ್ಯಾಕ್-ಸ್ಲ್ಯಾಶ್ n ಡಬಲ್ ಕೋಟ್ಸ್ ಕಂಪ್ಲೀಟ್ ಸೆಮಿಕೋಲನ್ ಸ್ಪೇಸ್ ಹ್ಯಾಶ್(#) Prints Count is 1
02:03 ಈಗ ‘Ctrl, S’ ಒತ್ತಿ ಈ ಫೈಲನ್ನು ಸೇವ್ ಮಾಡಿ ಮತ್ತು ಪರ್ಲ್ ಸ್ಕ್ರಿಪ್ಟನ್ನು ಎಕ್ಸಿಕ್ಯೂಟ್ ಮಾಡಿ.
02:08 ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: perl ಹೈಫನ್ c comments ಡಾಟ್ pl ಮತ್ತು Enter ಅನ್ನು ಒತ್ತಿ.
02:18 ಇಲ್ಲಿ ‘ಸಿಂಟ್ಯಾಕ್ಸ್ ಎರರ್’ ಇಲ್ಲವೆಂದು ಇದು ನಮಗೆ ಹೇಳುತ್ತದೆ.
02:21 ಈಗ ಹೀಗೆ ಟೈಪ್ ಮಾಡಿ: perl comments ಡಾಟ್ pl ಮತ್ತು Enter ಅನ್ನು ಒತ್ತಿ.
02:28 ಇದು ಈ ಕೆಳಗಿನ ಔಟ್ಪುಟ್ ಅನ್ನು ತೋರಿಸುವುದು : “Count is 1”
02:33 ನಾವು gedit ಗೆ ಹಿಂತಿರುಗೋಣ.
02:36 gedit ನಲ್ಲಿ, ಮೊದಲನೆಯ ಸಾಲಿಗೆ ಹೋಗಿ ಮತ್ತು Enter ಅನ್ನು ಒತ್ತಿ.
02:40 ಮೊದಲನೆಯ ಸಾಲಿಗೆ ಮರಳಿಹೋಗಿ ಮತ್ತು ಈ ಕೆಳಗಿನ ಕಮಾಂಡನ್ನು ಟೈಪ್ ಮಾಡಿ:
02:44 ಹ್ಯಾಶ್ ಎಕ್ಸ್ಕ್ಲಮೇಶನ್ ಮಾರ್ಕ್ (ಉದ್ಗಾರವಾಚಕ ಚಿಹ್ನೆ, exclamation mark) ಸ್ಲ್ಯಾಶ್ usr ಸ್ಲ್ಯಾಶ್ bin ಸ್ಲ್ಯಾಶ್ perl
02:52 ಪರ್ಲ್ ನಲ್ಲಿ, ಈ ಸಾಲನ್ನು ‘ಶೆಬಾಂಗ್ ಲೈನ್’ ಎಂದು ಕರೆಯುತ್ತಾರೆ ಮತ್ತು ಇದು Perl ಪ್ರೊಗ್ರಾಂನಲ್ಲಿ ಮೊದಲನೆಯ ಸಾಲು ಆಗಿದೆ.
02:59 ‘ಪರ್ಲ್ ಇಂಟರ್ಪ್ರಿಟರ್’ಅನ್ನು ಎಲ್ಲಿ ಹುಡುಕಬೇಕೆಂದು ಇದು ಹೇಳುತ್ತದೆ.
03:03 ಗಮನಿಸಿ: ಈ ಸಾಲು ಹ್ಯಾಶ್ ಚಿಹ್ನೆಯೊಂದಿಗೆ ಆರಂಭವಾಗುತ್ತಿದ್ದರೂ ಪರ್ಲ್, ಇದನ್ನು ‘ಸಿಂಗಲ್ ಲೈನ್ ಕಾಮೆಂಟ್’ ಎಂದು ಪರಿಗಣಿಸುವುದಿಲ್ಲ.
03:11 ಈಗ ನಾವು ‘ಮಲ್ಟಿ ಲೈನ್ ಕಾಮೆಂಟ್’ಗಳತ್ತ ನೋಡೋಣ.
03:13 ‘ಮಲ್ಟಿ ಲೈನ್’:
03:17 ಬಳಕೆದಾರನು (user) ಕೋಡ್ ನ ಒಂದು ಭಾಗವನ್ನು ಕಾಮೆಂಟ್ ಮಾಡಲು ಅಥವಾ ಅದರ ವಿವರಣೆ/ ಬಳಕೆಯನ್ನು ಸೇರಿಸಲು ಬಯಸಿದಾಗ, ಈ ವಿಧದ ಕಾಮೆಂಟ್ಅನ್ನು ಬಳಸಲಾಗುತ್ತದೆ.
03:25 ಈ ವಿಧದ ಕಾಮೆಂಟ್, ‘ಇಕ್ವಲ್ ಟು (=) head’ ಸಂಕೇತದೊಂದಿಗೆ ಆರಂಭವಾಗುತ್ತದೆ ಮತ್ತು ‘ಇಕ್ವಲ್ ಟು cut’ ಸಂಕೇತದೊಂದಿಗೆ ಕೊನೆಗೊಳುತ್ತದೆ.
03:33 ನಾವು 'gedit' ಗೆ ಹಿಂದಿರುಗಿ, 'comments ಡಾಟ್ pl' ಎನ್ನುವ ಫೈಲ್ನಲ್ಲಿ ಕೆಳಗೆ ಹೇಳಿರುವುದನ್ನು ಟೈಪ್ ಮಾಡೋಣ.
03:39 ಫೈಲ್ ನ ಕೊನೆಯಲ್ಲಿ ಹೀಗೆ ಟೈಪ್ ಮಾಡಿ: ‘= head’ (ಇಕ್ವಲ್ ಟು ಹೆಡ್), Enter ಅನ್ನು ಒತ್ತಿ.
03:45 print ಸ್ಪೇಸ್ ಡಬಲ್ ಕೋಟ್ಸ್ count variable is used for counting purpose ಡಬಲ್ ಕೋಟ್ಸ್ ಕಂಪ್ಲೀಟ್, Enter ಅನ್ನು ಒತ್ತಿ.
03:59 =cut (ಇಕ್ವಲ್ ಟು ಕಟ್)
04:01 ಫೈಲನ್ನು ಸೇವ್ ಮಾಡಿ ಅದನ್ನು ಮುಚ್ಚಿ (close) ಮತ್ತು ಪರ್ಲ್ ಸ್ಕ್ರಿಪ್ಟನ್ನು ಎಕ್ಸಿಕ್ಯೂಟ್ ಮಾಡಿ.
04:05 ‘ಟರ್ಮಿನಲ್’ ನ ಮೇಲೆ ಹೀಗೆ ಟೈಪ್ ಮಾಡಿ: perl ಹೈಫನ್ c comments ಡಾಟ್ pl ಮತ್ತು Enter ಅನ್ನು ಒತ್ತಿ.
04:13 ‘ಸಿಂಟ್ಯಾಕ್ಸ್ ಎರರ್’ ಇಲ್ಲ.
04:15 ಆದ್ದರಿಂದ ಇದನ್ನು ನಾವು ಎಕ್ಸಿಕ್ಯೂಟ್ ಮಾಡೋಣ, perl comments ಡಾಟ್ pl
04:21 ಇದು ಮೊದಲು ತೋರಿಸಿದ್ದ ‘ಔಟ್ಪುಟ್’ ಅನ್ನು ಮತ್ತೆ ತೋರಿಸುವುದು. “Count is 1”
04:27 ಇದು, “count variable is used for counting purpose” ಎನ್ನುವ ವಾಕ್ಯವನ್ನು ಪ್ರಿಂಟ್ ಮಾಡುತ್ತಿಲ್ಲ.
04:32 ಏಕೆಂದರೆ, ‘ಇಕ್ವಲ್ ಟು ಹೆಡ್’ ಮತ್ತು ‘ಇಕ್ವಲ್ ಟು ಕಟ್’ ಗಳನ್ನು ಬಳಸಿ ನಾವು ಈ ಭಾಗವನ್ನು ಕಾಮೆಂಟ್ ಮಾಡಿದ್ದೇವೆ.
04:40 ನೀವು '=head =cut' ಅನ್ನು ಅಥವಾ '=begin =end'ಅನ್ನು ಬಳಸಬಹುದು.
04:48 ಇವುಗಳು, ಪರ್ಲ್, ಬಳಸುವ ವಿಶೇಷ ಕೀವರ್ಡ್ಸ್ ಗಳಲ್ಲ .
04:52 ದಯವಿಟ್ಟು ಗಮನಿಸಿ: ‘=’ ಚಿಹ್ನೆಯ ಹಿಂದೆ ಮತ್ತು ಮುಂದೆ ಹಾಗೂ 'head', 'cut', 'begin' ಅಥವಾ 'end' ಶಬ್ದಗಳ ನಂತರ ಸ್ಪೇಸ್ ಇರಬಾರದು.
05:02 ಮತ್ತೊಮ್ಮೆ ‘ಟರ್ಮಿನಲ್’ಅನ್ನು ಓಪನ್ ಮಾಡಿ.
05:05 ಮತ್ತು ಹೀಗೆ ಟೈಪ್ ಮಾಡಿ: gedit commentsExample ಡಾಟ್ pl ಸ್ಪೇಸ್ ಆಂಪರ್ಸಂಡ್ (&) ಮತ್ತು Enter ಅನ್ನು ಒತ್ತಿ.
05:15 ಸ್ಕ್ರೀನ್ ನ ಮೇಲೆ ತೋರಿಸಿದ ಹಾಗೆ ಈ ಕೆಳಗಿನ ಕಮಾಂಡ್ ಗಳನ್ನು ಟೈಪ್ ಮಾಡಿ.
05:19 ಇಲ್ಲಿ ನಾನು, firstNum ಹಾಗೂ secondNum ಎನ್ನುವ ಎರಡು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡಿ, ಅವುಗಳಿಗೆ ಕೆಲವು ವ್ಯಾಲ್ಯೂಗಳನ್ನು ನಿಗದಿಪಡಿಸುತ್ತಿದ್ದೇನೆ (assign).
05:28 ನಂತರ, ಈ ಭಾಗವನ್ನು ಇಲ್ಲಿ ಕಾಮೆಂಟ್ ಮಾಡಿದ್ದೇನೆ.
05:32 ಈಗ ನಾನು ಈ ಎರಡು ನಂಬರ್ ಗಳನ್ನು ಕೂಡಿಸಿ ಅದರ ಮೊತ್ತವನ್ನು addition ಎನ್ನುವ ಮೂರನೆಯ ವೇರಿಯೆಬಲ್ ಗೆ ಅಸೈನ್ ಮಾಡಿದ್ದೇನೆ.
05:39 ಆಮೇಲೆ, print ಕಮಾಂಡ್ ಅನ್ನು ಬಳಸಿ ನನಗೆ ವ್ಯಾಲ್ಯೂವನ್ನು ಪ್ರಿಂಟ್ ಮಾಡಬೇಕಾಗಿದೆ.
05:44 ಫೈಲನ್ನು ಸೇವ್ ಮಾಡಿ ಮತ್ತು ‘ಟರ್ಮಿನಲ್’ನ ಮೇಲೆ, ಪರ್ಲ್ ಸ್ಕ್ರಿಪ್ಟನ್ನು ಎಕ್ಸಿಕ್ಯೂಟ್ ಮಾಡಿ.
05:49 ‘ಟರ್ಮಿನಲ್’ನ ಮೇಲೆ ಹೀಗೆ ಟೈಪ್ ಮಾಡಿ: perl ಹೈಫನ್ c commentsExample ಡಾಟ್ pl, Enter ಅನ್ನು ಒತ್ತಿ.
05:57 ಇಲ್ಲಿ ‘ಸಿಂಟ್ಯಾಕ್ಸ್ ಎರರ್’ ಇಲ್ಲ.
05:59 ಆದ್ದರಿಂದ, ಹೀಗೆ ಟೈಪ್ ಮಾಡಿ ಸ್ಕ್ರಿಪ್ಟನ್ನು ಎಕ್ಸಿಕ್ಯೂಟ್ ಮಾಡಿ.
06:01 perl commentsExample ಡಾಟ್ pl. Enter ಅನ್ನು ಒತ್ತಿ.
06:07 ಇದು ಈ ಕೆಳಗಿನಂತೆ ಔಟ್ಪುಟ್ ತೋರಿಸುವುದು. “Addition is 30”.
06:12 ಇದು ನಮ್ಮನ್ನು ಈ ಟ್ಯುಟೋರಿಯಲ್ ನ ಕೊನೆಗೆ ತರುತ್ತದೆ.
06:16 ಇಲ್ಲಿ, ನಾವು ಪರ್ಲ್ ನಲ್ಲಿ ಕಾಮೆಂಟ್ ಗಳನ್ನು ಸೇರಿಸಲು ಕಲಿತೆವು.
06:19 ಒಂದು ನಂಬರ್ ನ ವರ್ಗವನ್ನು (square) ಕಂಡುಹಿಡಿಯಲು ಪರ್ಲ್ ಸ್ಕ್ರಿಪ್ಟನ್ನು ಬರೆಯಿರಿ.
06:23 ‘ಸಿಂಗಲ್ ಲೈನ್ ಕಾಮೆಂಟ್’ ಹಾಗೂ ‘ಮಲ್ಟಿಲೈನ್ ಕಾಮೆಂಟ್’ಗಳನ್ನು ಬಳಸಿ ಕೋಡ್ ನ ಕಾರ್ಯವನ್ನು ವಿವರಿಸಿ.
06:30 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
06:34 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
06:37 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
06:42 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
06:44 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
06:48 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
06:51 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
06:58 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
07:03 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
07:11 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. spoken hyphen tutorial dot org slash NMEICT hyphen Intro.
07:15 ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .

ವಂದನೆಗಳು.

Contributors and Content Editors

Sandhya.np14, Vasudeva ahitanal