LibreOffice-Suite-Draw/C2/Common-editing-and-print-functions/Kannada

From Script | Spoken-Tutorial
Revision as of 12:55, 28 January 2016 by Vasudeva ahitanal (Talk | contribs)

Jump to: navigation, search
Time Narration
00:01 LibreOffice Drawನಲ್ಲಿ Common Editing and Printing Functions ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್-ನಲ್ಲಿ, ನೀವು:
00:10 * Draw ಪೇಜ್ ನಲ್ಲಿ ಮಾರ್ಜಿನ್ ಗಳನ್ನು ಸೆಟ್ ಮಾಡುವುದನ್ನು,
00:13 * ಪುಟಸಂಖ್ಯೆ, ದಿನಾಂಕ ಮತ್ತು ಸಮಯಗಳನ್ನು ಸೇರಿಸುವುದನ್ನು,
00:16 * ಕಾರ್ಯಗಳನ್ನು Undo ಮತ್ತು Redo ಮಾಡುವುದನ್ನು,
00:18 * page ಅನ್ನು ರೀನೇಮ್ ಮಾಡುವುದನ್ನು ಮತ್ತು
00:20 * ಪೇಜ್ ಅನ್ನು ಪ್ರಿಂಟ್ ಮಾಡುವುದನ್ನು ಕಲಿಯಲಿದ್ದೀರಿ.
00:22 ಇಲ್ಲಿ ನಾವು:
  • ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು
  • LibreOffice Suite3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
00:33 'WaterCycle' ಫೈಲನ್ನು ತೆರೆಯೋಣ ಮತ್ತು 'WaterCycle' ರೇಖಾಚಿತ್ರವನ್ನು ಹೊಂದಿದ ಪೇಜನ್ನು ಆಯ್ಕೆ ಮಾಡೋಣ.
00:40 ಈ ಚಿತ್ರಕ್ಕೆ ನಾವು Page Marginsಗಳನ್ನು ಸೆಟ್ ಮಾಡೋಣ.
00:44 Page Marginಗಳು ಏಕೆ ಅವಶ್ಯಕ?
00:46 Page Marginಗಳು ಪೇಜ್ ನಲ್ಲಿ object ಗಳನ್ನು ಇರಿಸಲು ಬೇಕಾದ ಸ್ಥಳವನ್ನು ನಿರ್ಧರಿಸುತ್ತವೆ.
00:53 ಉದಾಹರಣೆಗೆ, ನಮಗೆ ಚಿತ್ರವನ್ನು ಪ್ರಿಂಟ್ ಮಾಡಿ ಫೈಲ್ ಮಾಡಬೇಕಾಗಬಹುದು.
00:57 ಪೇಜ್ ನ ಬದಿಗಳಲ್ಲಿ ಸಾಕಷ್ಟು ಸ್ಥಳವಿದೆ ಎಂಬುದನ್ನು ಮಾರ್ಜಿನ್ ಗಳು ಖಚಿತಪಡಿಸುತ್ತವೆ.
01:01 ಇದರಿಂದ ನಾವು ಇದನ್ನು ಪ್ರಿಂಟ್ ಮಾಡಿದಾಗ, ಚಿತ್ರದ ಒಂದು ಭಾಗ ಕತ್ತರಿಗೊಳ್ಳುವುದಾಗಲೀ ಮರೆಯಾಗುವುದಾಗಲೀ ಆಗುವುದಿಲ್ಲ.
01:07 ನಾವು Page Marginಗಳನ್ನು ಸೆಟ್ ಮಾಡೋಣ ಮತ್ತು ಅನಂತರ WaterCycle ಚಿತ್ರವನ್ನು ಪ್ರಿಂಟ್ ಮಾಡೋಣ.
01:11 ಈ ಚಿತ್ರವನ್ನು ಪ್ರಿಂಟ್ ಮಾಡಲು ನಾವು ಬಳಸುವ ಕಾಗದದ ಗಾತ್ರ ಸ್ಟ್ಯಾಂಡರ್ಡ್ ಗಾತ್ರವಾಗಿಲ್ಲ ಎಂದು ಭಾವಿಸೋಣ.
01:18 ಇದು 20 cms ಅಗಲವನ್ನು ಮತ್ತು 20 cms ಉದ್ದವನ್ನು ಹೊಂದಿದೆ.
01:23 ಇದಕ್ಕೆ 1.5 cms Bottom ಮಾರ್ಜಿನ್ ನ ಅವಶ್ಯಕತೆಯಿದೆ.
01:29 ಈ ಅಳತೆಗಳನ್ನು ಸೆಟ್ ಮಾಡಲು, Main ಮೆನುವಿನಿಂದ, Format ಆಯ್ಕೆ ಮಾಡಿ ಮತ್ತು Page ಕ್ಲಿಕ್ ಮಾಡಿ.
01:35 Page Setup ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
01:38 Page ಟ್ಯಾಬ್ ಅನ್ನು ಆಯ್ಕೆ ಮಾಡಿ.
01:41 Width ಫೀಲ್ಡ್ ನಲ್ಲಿ, ವ್ಯಾಲ್ಯೂ “20”ನ್ನು ಮತ್ತು Height ಫೀಲ್ಡ್ ನಲ್ಲಿ “20”ನ್ನು ಎಂಟರ್ ಮಾಡಿ.
01:47 Marginsನ ಕೆಳಗೆ, Bottom ಫೀಲ್ಡ್ ನಲ್ಲಿ '1.5'ನ್ನು ಎಂಟರ್ ಮಾಡಿ.
01:54 ಬಲಭಾಗಕ್ಕೆ, ನೀವು Draw pagepreview ಅನ್ನು ನೋಡುವಿರಿ.
01:58 ಈ ಪ್ರಿವ್ಯೂ ಡ್ರಾ ಪೇಜ್ ನಲ್ಲಿ ಮಾಡಿದ ಬದಲಾವಣೆಗಳನ್ನು ತೋರಿಸುತ್ತದೆ.
02:02 OK ಕ್ಲಿಕ್ ಮಾಡಿ.
02;04 ಚಿತ್ರ ಹೇಗೆ ಕಾಣಿಸುತ್ತಿದೆ?
02:06 ಇದು ಪೇಜ್ ನಿಂದ ಹೊರಗೆ ಹರಡಿದೆ!
02:08 ಇದರ ಅರ್ಥವೇನೆಂದರೆ ಪ್ರಿಂಟ್ ಮಾಡಿದಾಗ ಚಿತ್ರದ ಒಂದು ಭಾಗ ಕಾಣೆಯಾಗುತ್ತದೆ.
02:14 ನೀವು ಇವನ್ನು ದೃಢಪಡಿಸಿಕೊಳ್ಳಬೇಕು:
02:15 * ಚಿತ್ರಗಳು ಯಾವಾಗಲೂ ಮಾರ್ಜಿನ್ ನ ಒಳಗೆ ಇರುತ್ತವೆ.
02:18 * ನೀವು ಚಿತ್ರ ರಚಿಸಿದಾಗ, ಚಿತ್ರದ ಯಾವುದೇ ಭಾಗ ಮಾರ್ಜಿನ್ ನಿಂದ ಹೊರ ಹೋಗುವುದಿಲ್ಲ.
02:23 ಇದರಿಂದಾಗಿ, ನೀವು ಚಿತ್ರವನ್ನು ರಚಿಸುವ ಮೊದಲು ಪೇಜ್ ಮಾರ್ಜಿನ್ ಗಳನ್ನು ಸೆಟ್ ಮಾಡುವುದು ಉತ್ತಮ ಅಭ್ಯಾಸ.
02:29 Main ಮೆನುವಿನಿಂದ, ಮತ್ತೆ, Format ಅನ್ನು ಆಯ್ಕೆ ಮಾಡಿ ಮತ್ತು Page ಅನ್ನು ಕ್ಲಿಕ್ ಮಾಡಿ.
02:35 Page Setup ಡೈಲಾಗ್ ಬಾಕ್ಸ್ ಕಾಣಸಿಗುತ್ತದೆ.
02:38 Page ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
02:40 Format ಡ್ರಾಪ್ ಡೌನ್ ಪಟ್ಟಿಯನ್ನು ಕ್ಲಿಕ್ ಮಾಡಿ ಮತ್ತು 'A4' ಅನ್ನು ಆಯ್ಕೆ ಮಾಡಿ.
02:45 ಇದು ನಾವು ಸೆಟ್ ಮಾಡಿದ್ದ ಮೂಲ ಮಾರ್ಜಿನ್.
02:48 OK ಕ್ಲಿಕ್ ಮಾಡಿ.
02:52 ಚಿತ್ರವು ಈಗ ಮಾರ್ಜಿನ್ ಗಳ ಒಳಗೆ ಇರಿಸಲ್ಪಟ್ಟಿತು.
02:55 Page setup ಡೈಲಾಗ್ ಬಾಕ್ಸನ್ನು Draw pageನಿಂದ ಕೂಡ ನೀವು ಪ್ರವೇಶಿಸಬಹುದು.
03:00 ಇದು, ಪೇಜ್ ನ ಮೇಲೆ ರೈಟ್ ಕ್ಲಿಕ್ ಮಾಡಿ Context ಮೆನುವನ್ನು ಉಪಯೋಗಿಸುವುದರಿಂದ ಸಾಧ್ಯವಾಗುತ್ತದೆ.
03:05 Cancel ಕ್ಲಿಕ್ ಮಾಡೋಣ ಮತ್ತು ಡೈಲಾಗ್ ಬಾಕ್ಸ್ ನಿಂದ ಹೊರಬರೋಣ.
03:09 ಈಗ, ನಾವು ಪುಟಸಂಖ್ಯೆ, ದಿನಾಂಕ, ಸಮಯ ಮತ್ತು ಲೇಖಕನ ಹೆಸರುಗಳನ್ನು ಸೇರಿಸೋಣ.
03:15 WaterCycle ರೇಖಾಚಿತ್ರವನ್ನು ಹೊಂದಿದ ಪುಟವನ್ನು ಆಯ್ಕೆ ಮಾಡೋಣ ಮತ್ತು ಪುಟಸಂಖ್ಯೆಯನ್ನು ಸೇರಿಸೋಣ.
03:21 Main ಮೆನುಗೆ ಹೋಗಿ ಮತ್ತು Insert ಅನ್ನು ಆಯ್ಕೆ ಮಾಡಿ ಮತ್ತು Fields ಅನ್ನು ಕ್ಲಿಕ್ ಮಾಡಿ.
03:27 ಫೀಲ್ಡ್ ಗಳ ಪಟ್ಟಿ ತೆರೆದುಕೊಳ್ಳುತ್ತದೆ.
03:31 Draw ದಿಂದ ಸ್ವಯಂ ಸೃಷ್ಟಿಯಾದ ಮೂಲ್ಯಗಳು ಫೀಲ್ಡ್ ಗಳಲ್ಲಿರುತ್ತವೆ.
03:35 ನಾವು ಕೇವಲ ಒಂದು ಫೀಲ್ಡ್ ಅನ್ನು ಮತ್ತು Drawದಿಂದ ಸೃಷ್ಟಿಯಾದ ಮೂಲ್ಯವನ್ನು ಸೇರಿಸಬೇಕು.
03:41 Page number ಅನ್ನು ಕ್ಲಿಕ್ ಮಾಡೋಣ.
03:43 Draw pageನ ಮೇಲೆ ಸಂಖ್ಯೆ '1'ನ್ನು ಹೊಂದಿದ ಒಂದು ಟೆಕ್ಸ್ಟ್ ಬಾಕ್ಸ್ ಸೇರ್ಪಡೆಗೊಂಡಿತು.
03:48 ನಾವು ಈ ಟೆಕ್ಸ್ಟ್-ಬಾಕ್ಸ್ ನ ಗಾತ್ರವನ್ನು ಸರಿಪಡಿಸೋಣ ಮತ್ತು ಇದನ್ನು ಸ್ವಲ್ಪ ಸಣ್ಣದಾಗಿಸೋಣ.
03:55 ಈಗ, ನಾವು ಬಾಕ್ಸ್ ಅನ್ನು ಎಳೆಯೋಣ ಮತ್ತು ಇದನ್ನು ಪುಟದ ಕೆಳಗಿನ ಬಲ ಮೂಲೆಯಲ್ಲಿ ಇಡೋಣ.
04:01 ನಂಬರ್ ಬಾಕ್ಸ್ ಅನ್ನು ಸರಾಗವಾಗಿ ಮೂವ್ ಮಾಡಲು, ನಂಬರ್ ಬಾಕ್ಸ್ ಅನ್ನು ಆಯ್ಕೆ ಮಾಡಿ ಮತ್ತು Shift ಕೀಯನ್ನು ಒತ್ತಿ.
04:07 ಈಗ, ನಾವು ಇದನ್ನು ಇನ್ನೂ ಕೆಳಗೆ ಮೂವ್ ಮಾಡೋಣ.
04:11 Draw ಫೈಲ್ ನ ಎರಡನೆಯ ಪುಟದಲ್ಲಿ ಮುಂದಿನ ಸಂಖ್ಯೆ ಸೇರ್ಪಡೆಯಾಗಿದೆಯೇ ಎಂಬುದನ್ನು ನಾವು ಪರಿಶೀಲಿಸೋಣ.
04:17 ಇಲ್ಲಿ ಪುಟಸಂಖ್ಯೆ ಇಲ್ಲ!
04:20 ನಾವು ಫೀಲ್ಡ್ ಅನ್ನು ಸೇರಿಸಿದ ಪೇಜ್ ನಲ್ಲಿ ಮಾತ್ರ ಪುಟಸಂಖ್ಯೆ ಸೇರ್ಪಡೆಯಾಗಿದೆ!
04:26 ಈಗ, ನಾವು ಪೇಜ್ ನಂಬರ್ ಫಾರ್ಮ್ಯಾಟ್ ಅನ್ನು ಹೇಗೆ ಬದಲಾಯಿಸುವುದು ಎಂಬುದನ್ನು ಕಲಿಯೋಣ.
04:30 Main ಮೆನುವಿನಿಂದ, Format ಅನ್ನು ಕ್ಲಿಕ್ ಮಾಡಿ ಮತ್ತು Page ಅನ್ನು ಆಯ್ಕೆ ಮಾಡಿ.
04:36 Page Setup ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
04:39 Page ಟ್ಯಾಬ್ ಅನ್ನು ಕ್ಲಿಕ್ ಮಾಡಿ.
04:41 Layout settings ನ ಕೆಳಗೆ, Formatಅನ್ನು ಆಯ್ಕೆ ಮಾಡಿ.
04:45 ಡ್ರಾಪ್ ಡೌನ್ ಲಿಸ್ಟ್ ನಿಂದ, a, b, cಯನ್ನು ಆಯ್ಕೆ ಮಾಡಿ.
04:49 OK ಕ್ಲಿಕ್ ಮಾಡಿ.
04:52 ಪುಟ ಸಂಖ್ಯೆಯು 1, 2, 3ರಿಂದ a, b, c ಆಗಿ ಮಾರ್ಪಟ್ಟಿದೆ.
04:58 ಇದೇ ರೀತಿ, ನೀವು ಇದನ್ನು ಯಾವುದೇ ಫಾರ್ಮ್ಯಾಟ್ ಗೆ ಬದಲಾಯಿಸಬಹುದು.
05:01 ಈಗ ನಾವು Date ಮತ್ತು Time ಫೀಲ್ಡ್ ಗಳನ್ನು ಸೇರಿಸುವುದನ್ನು ಕಲಿಯೋಣ.
05:05 ನಿಮ್ಮ Draw ಪೇಜ್ ನ ಮೇಲೆ Date ಮತ್ತು Time stampಗಳನ್ನು ಕೂಡ ನೀವು ಸೇರಿಸಬಹುದು.
05:10 ಇದನ್ನು ನೀವು Insert ಮತ್ತು Fields ನ ಮೇಲೆ ಕ್ಲಿಕ್ ಮಾಡುವುದರಿಂದ ಸಾಧಿಸಬಹುದು.
05:14 ಮೊದಲನೆಯದು Date(fixed) ಮತ್ತು Time(fixed).
05:18 ಇನ್ನೊಂದು Date(variable) ಮತ್ತು Time(variable)
05:23 Date(fixed) ಮತ್ತು Time(fixed) ಆಯ್ಕೆಗಳು ಪ್ರಕೃತ ದಿನಾಂಕ ಮತ್ತು ಸಮಯವನ್ನು ಸೇರಿಸುತ್ತವೆ.
05:29 ಈ ದಿನಾಂಕ ಮತ್ತು ಸಮಯದ ಮೂಲ್ಯಗಳು ಅಪ್ ಡೇಟ್ ಆಗಿರುವುದಿಲ್ಲ.
05:33 ಮತ್ತೊಂದೆಡೆ Date (variable) ಮತ್ತು Time (variable) ಆಯ್ಕೆಗಳು,
05:37 ನೀವು ಫೈಲನ್ನು ತೆರೆದಾಗ ಸ್ವಯಂ ಅಪ್ ಡೇಟ್ ಆಗುತ್ತವೆ.
05:42 ನಾವು ಇಲ್ಲಿ Time (variable)ಅನ್ನು ಸೇರಿಸೋಣ.
05:46 ಈಗ, ನಾವು ಬಾಕ್ಸನ್ನು ಎಳೆದು ಅದನ್ನು ಕೆಳಗಿನ ಬಲಮೂಲೆಯಲ್ಲಿ ಪುಟಸಂಖ್ಯೆಯ ಮೇಲುಗಡೆ ಇರಿಸೋಣ.
05:56 ಸೇರಿಸಿದ ಸಮಯವು ಪ್ರತಿ ಸಲ ನೀವು Draw ಪೇಜ್ ಅನ್ನು ತೆರೆದಾಗ ಪ್ರಕೃತ ಸಮಯವಾಗಿ ಅಪ್ ಡೇಟ್ ಆಗುತ್ತದೆ.
06:03 ಈಗ ನಾವು ಈ ಫೈಲನ್ನು ರಚಿಸಿದ ಲೇಖಕನ ಹೆಸರನ್ನು ಬರೆಯೋಣ.
06:08 ಇಲ್ಲಿ, ನಾವು ಮೊದಲನೆಯ ಪೇಜ್ ನಲ್ಲಿ ಲೇಖಕನ ಹೆಸರನ್ನು “Teacher. A. B.” ಎಂದು ಸೆಟ್ ಮಾಡೋಣ.
06:17 ಅದಕ್ಕಾಗಿ, ನಾವು Page one ಗೆ ಹೋಗೋಣ.
06:19 Main ಮೆನುಗೆ ಹೋಗಿ, Tools ಅನ್ನು ಆರಿಸಿ ಮತ್ತು Options ಮೇಲೆ ಕ್ಲಿಕ್ ಮಾಡಿ.
06:24 Options ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
06:27 Options ಡೈಲಾಗ್ ಬಾಕ್ಸ್ ನಲ್ಲಿ, LibreOffice ಮೇಲೆ ಕ್ಲಿಕ್ ಮಾಡಿ ಮತ್ತು User Data ಮೇಲೆ ಕ್ಲಿಕ್ ಮಾಡಿ.
06:34 ಡೈಲಾಗ್ ಬಾಕ್ಸ್ ನ ಬಲ ಬದಿಗೆ, ನೀವು ಯೂಸರ್ ಡೇಟಾದ ಮಾಹಿತಿಯನ್ನು ಬರೆಯಬಹುದು.
06:40 ಇಲ್ಲಿ ನೀವು ನಿಮ್ಮ ಅವಶ್ಯಕತೆಗನುಸಾರವಾಗಿ ವಿವರಗಳನ್ನು ಬರೆಯಬಹುದು.
06:44 "First/Last Name/Initials"ನಲ್ಲಿ, ಅನುಕ್ರಮವಾಗಿ "Teacher", 'A', ಮತ್ತು 'B' ಎಂಬ ಪಠ್ಯವನ್ನು ಎಂಟರ್ ಮಾಡಿ.
06:53 OK ಕ್ಲಿಕ್ ಮಾಡಿ.
06:55 ಈಗ, Main ಮೆನುವಿನಿಂದ, Insert ಕ್ಲಿಕ್ ಮಾಡಿ, Fieldsಅನ್ನು ಆರಿಸಿ ಮತ್ತು Author ಅನ್ನು ಕ್ಲಿಕ್ ಮಾಡಿ.
07:02 Teacher A B ಎಂಬ ಹೆಸರು ಒಂದು ಟೆಕ್ಸ್ಟ್ ಬಾಕ್ಸ್ ನಲ್ಲಿ ಸೇರ್ಪಡೆಯಾಯಿತು.
07:07 ನಾವು ಈ ಬಾಕ್ಸನ್ನು ಎಳೆದು Draw ಪೇಜ್ ನ ಕೆಳ ಬಲ ಮೂಲೆಯಲ್ಲಿ Time ಫೀಲ್ಡ್ ನ ಸ್ವಲ್ಪ ಮೇಲೆ ಇರಿಸೋಣ.
07:15 ಈಗ, ನಾವು Draw ಪೇಜ್ ನಲ್ಲಿ ಸೇರಿಸಿದ ಫೀಲ್ಡ್ ಗಳನ್ನು ತೆಗೆದು ಹಾಕಲಿಚ್ಛಿಸಿದರೆ, ಅದು ಹೇಗೆ?
07:21 ಕೇವಲ ಟೆಕ್ಸ್ಟ್ ಬಾಕ್ಸನ್ನು ಆಯ್ಕೆ ಮಾಡಿ ಮತ್ತು Delete ಕೀಯನ್ನು ಒತ್ತಿ.
07:25 Author Name ಫೀಲ್ಡನ್ನು ನಾವು ಡಿಲೀಟ್ ಮಾಡೋಣ.
07:28 ಮತ್ತು ಈ ಕಾರ್ಯವನ್ನು undo ಮಾಡುವುದು ಹೇಗೆ?
07:31 ಸುಲಭ!.. ನೀವು Ctrl ಮತ್ತು Z ಕೀಗಳನ್ನು ಒಂದೇ ಸಲ ಒತ್ತಿ ಯಾವುದೇ ಕಾರ್ಯವನ್ನು undo ಮಾಡಬಹುದು.
07:38 ಕೊನೆಯ ಬಾರಿ ಮಾಡಿದ ಕಾರ್ಯ, ಅಂದರೆ, Author ಫೀಲ್ಡ್ ಅನ್ನು ಡಿಲೀಟ್ ಮಾಡುವುದು undoಗೊಂಡಿತು.
07:45 ಫೀಲ್ಡ್ ಮತ್ತೆ ಕಾಣಿಸುತ್ತಿದೆ.
07:48 ನಾವು Main ಮೆನುವಿನಿಂದ ಕೂಡ undo ಅಥವಾ redo ಮಾಡಬಹುದು.
07:53 Main ಮೆನುವಿನಿಂದ, Edit ಆಯ್ಕೆ ಮಾಡಿ ಮತ್ತು Redo ಕ್ಲಿಕ್ ಮಾಡಿ.
07:57 ಲೇಖಕರ ಹೆಸರು ಈಗ ಕಾಣಿಸುತ್ತಿಲ್ಲ!
08:00 Ctrl+Z ಕೀಗಳನ್ನು ಒತ್ತಿ ನಾವು ಮಾಡಿದ ಎಲ್ಲಾ ಫೀಲ್ಡ್ ಗಳ ಸೇರ್ಪಡೆಯನ್ನೂ undo ಮಾಡೋಣ.
08:06 undo ಮತ್ತು redo ಆಜ್ಞೆಗಳಿಗೆ ನೀವು ಕೀ ಬೋರ್ಡ್ನಿಂದ ಶಾರ್ಟ್ ಕಟ್ ಕೀಗಳನ್ನು ಕೂಡ ಉಪಯೋಗಿಸಬಹುದು.
08:13 ಯಾವುದೇ ಕಾರ್ಯವನ್ನು undo ಮಾಡಲು Ctrl ಮತ್ತು Z ಕೀಗಳನ್ನು ಜೊತೆಯಾಗಿ ಒತ್ತಿ.
08:18 ಯಾವುದೇ ಕಾರ್ಯವನ್ನು redo ಮಾಡಲು Ctrl ಮತ್ತು Y ಕೀಗಳನ್ನು ಜೊತೆಯಾಗಿ ಒತ್ತಿ.
08:23 ಈ ಟ್ಯುಟೋರಿಯಲ್ ಅನ್ನು ಒಮ್ಮೆ ನಿಲ್ಲಿಸಿ ಮತ್ತು ಈ ಅಸೈನ್ ಮೆಂಟನ್ನು ಮಾಡಿ.
08:26 ಲೇಖಕರ ಹೆಸರನ್ನು ಬದಲಾಯಿಸಿ ಮತ್ತು ಅದನ್ನು ಸೇವ್ ಮಾಡಿ.
08:29 ಈಗ, pageಗೆ ಇನ್ನೂ ಎರಡು arrowಗಳನ್ನು ಸೇರಿಸಿ.
08:33 ಎರಡನೇ ಪುಟದಲ್ಲಿ ಪುಟಸಂಖ್ಯೆ ಮತ್ತು ದಿನಾಂಕವನ್ನು ಸೇರಿಸಿ.
08:38 ಈಗ, ಕೊನೆಯ ಐದು ಕಾರ್ಯಗಳನ್ನು undo ಮತ್ತು redo ಮಾಡಿ.
08:42 undo ಮತ್ತು redo ಆಯ್ಕೆಗಳು ಎಲ್ಲಾ ಕಾರ್ಯಗಳನ್ನು undo ಮಾಡಬಲ್ಲವೇ ಅಥವಾ ಕೆಲವು ಕಾರ್ಯಗಳನ್ನು undo ಮಾಡಲಾಗದೇ ಎಂದು ಪರಿಶೀಲಿಸಿ.
08:51 ಈ ಪುಟವನ್ನು “WaterCycleSlide” ಎಂದು ಹೆಸರಿಸೋಣ.
08:54 Pages ಪೇನ್ ನಲ್ಲಿಯ ಸ್ಲೈಡ್ ಅನ್ನು ಆಯ್ಕೆ ಮಾಡಿ, ರೈಟ್ ಕ್ಲಿಕ್ ಮಾಡಿ ಮತ್ತು Rename Page ಅನ್ನು ಆಯ್ಕೆ ಮಾಡಿ.
09:00 Rename Page ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
09:03 Name ಫೀಲ್ಡ್ ನಲ್ಲಿ, ನಾವು "WaterCycleSlide" ಎಂಬ ಹೆಸರನ್ನು ಎಂಟರ್ ಮಾಡೋಣ.
09:08 OK ಕ್ಲಿಕ್ ಮಾಡಿ.
09:10 ಈಗ, ನಾವು ಈ ಪೇಜ್ ನ ಮೇಲೆ ಕರ್ಸರ್ ಅನ್ನು ಇರಿಸೋಣ.
09:14 WaterCycleSlide” ಎಂಬ ಹೆಸರು ಇಲ್ಲಿ ಪ್ರದರ್ಶಿತವಾಗಿರುವುದನ್ನು ನೀವು ಕಾಣಬಲ್ಲಿರಾ?
09:18 ಪುಟಕ್ಕೆ ಅನುಗುಣವಾದ ಹೆಸರನ್ನು ಕೊಡುವುದು ಒಳ್ಳೆಯ ಅಭ್ಯಾಸ.
09:23 WaterCycle ರೇಖಾಚಿತ್ರಕ್ಕೆ ಈಗ ನಾವು ಪ್ರಿಂಟಿಂಗ್ ಆಯ್ಕೆಗಳನ್ನು ಸೆಟ್ ಮಾಡೋಣ.
09:28 Main ಮೆನುವಿನಲ್ಲಿ, File ಕ್ಲಿಕ್ ಮಾಡಿ ನಂತರ Print ಅನ್ನು ಕ್ಲಿಕ್ ಮಾಡಿ.
09:33 ಪ್ರಿಂಟ್ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
09:36 General ಮತ್ತು Options ಟ್ಯಾಬ್ ಗಳಲ್ಲಿನ ಸೆಟ್ಟಿಂಗ್ ಗಳನ್ನು (ಸಂಯೋಜನೆಗಳನ್ನು) ತಿಳಿದುಕೊಳ್ಳಲು,
09:41 LibreOffice Writer ಸೀರೀಸ್ ನಲ್ಲಿಯ Viewing and printing Documents ಎಂಬುದರ ಬಗೆಗಿನ ಟ್ಯುಟೋರಿಯಲ್ ಅನ್ನು ದಯವಿಟ್ಟು ನೋಡಿ.
09:48 ಎಡ ಭಾಗಕ್ಕೆ ನೀವು page preview ಏರಿಯಾವನ್ನು ಕಾಣುವಿರಿ.
09:53 Print ಡೈಲಾಗ್ ಬಾಕ್ಸ್ ನಲ್ಲಿಯ ಬಲ ಭಾಗ ನಾಲ್ಕು ಟ್ಯಾಬ್ ಗಳನ್ನು ಹೊಂದಿದೆ.
09:58 * General, LibreOffice Draw, Page Layout, Options.
10:04 ನಾವು 'LibreOffice Draw'ಗೆ ನಿರ್ದಿಷ್ಟವಾದ ಆಯ್ಕೆಗಳನ್ನು ನೋಡೋಣ.
10:09 LibreOffice Draw ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
10:13 ನಾವು Page name ಮತ್ತು Date and Time ಬಾಕ್ಸ್ ಗಳನ್ನು ‘ಚೆಕ್’ ಮಾಡೋಣ.
10:17 ಇದು, ಚಿತ್ರದೊಂದಿಗೆ, ಪುಟದ ಹೆಸರು, ದಿನಾಂಕ ಮತ್ತು ಸಮಯವನ್ನು ಪ್ರಿಂಟ್ ಮಾಡುತ್ತದೆ.
10:23 ನಾವು ಚಿತ್ರವನ್ನು ಪ್ರಿಂಟ್ ಮಾಡಲು Original colors ಮತ್ತು Fit to printable page ಗಳನ್ನು ಆಯ್ಕೆ ಮಾಡೋಣ.
10:29 ನಿಮ್ಮ ಕಂಪ್ಯೂಟರ್ ನಲ್ಲಿಯ 'WaterCycle' ಚಿತ್ರವನ್ನು ಪ್ರಿಂಟ್ ಮಾಡಲು Print ಮೇಲೆ ಕ್ಲಿಕ್ ಮಾಡಿ.
10:34 ನೀವು ನಿಮ್ಮ ಪ್ರಿಂಟರ್ ಅನ್ನು ಸರಿಯಾಗಿ ಕಾನ್ ಫಿಗರ್ ಮಾಡಿದ್ದರೆ, ನಿಮ್ಮ ಚಿತ್ರವು ಈಗಾಗಲೇ ಪ್ರಿಂಟ್ ಆಗಲು ಶುರುವಾಗಿರಬೇಕು.
10:40 ಈ ರೀತಿ, ನಾವು LibreOffice Drawನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
10:45 ಈ ಟ್ಯುಟೋರಿಯಲ್ ನಲ್ಲಿ, ನೀವು :
10:48 * Draw ಪೇಜ್ ಗೆ ಮಾರ್ಜಿನ್ ಗಳನ್ನು ಸೆಟ್ ಮಾಡುವುದನ್ನು,
10:50 * ಮತ್ತು ಪುಟ ಸಂಖ್ಯೆ, ದಿನಾಂಕ ಮತ್ತು ಸಮಯಗಳನ್ನು ಹೇಗೆ ಸೇರಿಸುವುದು ಎಂಬುದನ್ನು,
10:54 *ಕಾರ್ಯಗಳನ್ನು Undo ಮತ್ತು Redo ಮಾಡುವುದನ್ನು,
10:57 * ಪುಟದ ಹೆಸರನ್ನು ಮಾರ್ಪಡಿಸುವುದನ್ನು ಮತ್ತು
10:58 *ಒಂದು pageಅನ್ನು ಪ್ರಿಂಟ್ ಮಾಡುವುದನ್ನು ಕಲಿತಿದ್ದೀರಿ.
11:01 ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಇದೆ.
11:03 ಇನ್ನೂ ಎರಡು ಪುಟಗಳನ್ನು ಸೇರಿಸಿ.
11:06 ಹಿಂದಿನ ಟ್ಯುಟೋರಿಯಲ್ ನಲ್ಲಿ ನೀವು ರಚಿಸಿದ ಲೇಬಲ್ ಮತ್ತು ಆಮಂತ್ರಣದ ಪ್ರತಿಯೊಂದು ಪುಟಕ್ಕೆ ಬೇರೆ ಬೇರೆ ಮಾರ್ಜಿನ್ ಗಳನ್ನು ಸೆಟ್ ಮಾಡಿ ಮತ್ತು ಪ್ರಿಂಟ್ ಮಾಡಿ.
11:14 ಈ ಪ್ರತಿಯೊಂದು ಪುಟಗಳಲ್ಲೂ Page count ಫೀಲ್ಡ್ ಅನ್ನು ಸೇರಿಸಿ ಮತ್ತು ಏನಾಗುತ್ತದೆ ಎಂಬುದನ್ನು ಗಮನಿಸಿ.
11:21 ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ.
11:24 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
11:28 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
11:32 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
11:34 * ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
11:37 *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
11:41 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
11:47 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.
11:52 ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
11:59 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].
12:10 ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ.

ಧನ್ಯವಾದಗಳು.

Contributors and Content Editors

NHegde, Pratik kamble, Sandhya.np14, Vasudeva ahitanal