C-and-Cpp/C2/First-Cpp-Program/Kannada

From Script | Spoken-Tutorial
Revision as of 17:07, 21 August 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:02 ಮೊದಲನೇ ಸಿ ಪ್ಲಸ್ ಪ್ಲಸ್ (C++) ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾನು ವಿವರಿಸುವ ಅಂಶಗಳು:
00:10 ಸಿ ಪ್ಲಸ್ ಪ್ಲಸ್ (C++) ಪ್ರೊಗ್ರಾಮ್ ಬರೆಯುವ ಬಗೆ,
00:13 ಅದನ್ನು ಕಂಪೈಲ್ ಮಾಡುವ ಬಗೆ,
00:14 ಅದನ್ನು ಎಕ್ಸಿಕ್ಯೂಟ್ ಮಾಡುವ ಬಗೆ,
00:17 ಸಾಮಾನ್ಯವಾಗಿ ಬರುವ ಎರರ್ ಗಳನ್ನೂ ಮತ್ತು ಅವುಗಳನ್ನು ಬಗೆಹರಿಸುವ ವಿಧಾನಗಳನ್ನೂ ನಾನು ವಿವರಿಸುತ್ತೇನೆ.
00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿಯನ್ನು ಮತ್ತು ಉಬುಂಟು ನಲ್ಲಿ g++ ಕಂಪೈಲರ್ ನ 4.5.2 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ.
00:35 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು,
00:37 ಉಬುಂಟು ಆಪರೇಟಿಂಗ್ ಸಿಸ್ಟಮ್ ಮತ್ತು ಒಂದು ಎಡಿಟರ್ ಅನ್ನು ಉಪಯೊಗಿಸಲು ನಿಮಗೆ ತಿಳಿದಿರಬೇಕು.
00:44 'vim' ಮತ್ತು 'gedit' ಗಳು ಕೆಲವು ಎಡಿಟರ್ ಗಳು.
00:48 ಈ ಟ್ಯುಟೋರಿಯಲ್ ನಲ್ಲಿ ನಾನು gedit ಅನ್ನು ಉಪಯೋಗಿಸುತ್ತೇನೆ.
00:50 ಸಂಬಂಧಪಟ್ಟ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ವೆಬ್ಸೈಟ್ ಗೆ ಭೇಟಿ ಕೊಡಿ.
00:56 C++ ಪ್ರೊಗ್ರಾಮ್ ಅನ್ನು ಹೇಗೆ ಬರೆಯಬಹುದು ಎಂಬುದನ್ನು ಒಂದು ಉದಾಹರಣೆಯ ಮೂಲಕ ತಿಳಿಸುತ್ತೇನೆ.
01:01 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಂದೇ ಬಾರಿಗೆ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
01:09 ಈಗ ಟೆಕ್ಸ್ಟ್ ಎಡಿಟರ್ ಅನ್ನು ಓಪನ್ ಮಾಡೋಣ. ಅದಕ್ಕಾಗಿ ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ,
01:13 “gedit” ಸ್ಪೇಸ್ “talk” ಡಾಟ್ “cpp” ಸ್ಪೇಸ್ “&”(ampersand) ಸೈನ್.
01:21 ampersand (&) ಅನ್ನು ನಾವು ಪ್ರಾಂಪ್ಟ್ ಅನ್ನು ಫ್ರೀ ಮಾಡಲು ಉಪಯೋಗಿಸುತ್ತೇವೆ.
01:25 ಎಲ್ಲಾ C++ ಫೈಲ್ ಗಳು “.cpp” ಎಂಬ ಎಕ್ಸ್ಟೆಂಶನ್ ಹೊಂದಿರುತ್ತವೆ ಎಂಬುದನ್ನು ಗಮನದಲ್ಲಿಡಿ.
01:31 ಈಗ “Enter” ಕೀ ಅನ್ನು ಪ್ರೆಸ್ ಮಾಡಿ.
01:33 ಈಗ ಟೆಕ್ಸ್ಟ್ ಎಡಿಟರ್ ಓಪನ್ ಆಗಿದೆ.
01:35 ಒಂದು ಪ್ರೊಗ್ರಾಮ್ ಬರೆಯಲು ಪ್ರಾರಂಭಿಸೋಣ.
01:38 (ಡಬಲ್ ಸ್ಲ್ಯಾಶ್)“//” ಸ್ಪೇಸ್ “My first C++ program” ಎಂದು ಟೈಪ್ ಮಾಡಿ.
01:44 ಇಲ್ಲಿ, ಡಬಲ್ ಸ್ಲ್ಯಾಶ್ ಅನ್ನು, ಲೈನ್ ಅನ್ನು ಕಮೆಂಟ್ ಮಾಡಲು ಉಪಯೋಗಿಸಲಾಗಿದೆ.
01:49 ಕಾಮೆಂಟ್ ಗಳನ್ನು, ಪ್ರೊಗ್ರಾಮ್ ಅನ್ನು ಅರ್ಥ ಮಾಡಿಕೊಳ್ಳಲು ಉಪಯೋಗಿಸುತ್ತೇವೆ.
01:52 ಡಾಕ್ಯುಮೆಂಟೇಶನ್ ನಲ್ಲಿಯೂ ಇದು ಸಹಾಯಕ.
01:55 ಇದು ಪ್ರೊಗ್ರಾಮ್ ನ ಬಗ್ಗೆ ಮಾಹಿತಿ ಕೊಡುತ್ತದೆ.
01:59 ಡಬಲ್ ಸ್ಲ್ಯಾಶ್ ಅನ್ನು (//) ಸಿಂಗಲ್ ಲೈನ್ ಕಾಮೆಂಟ್ ಎನ್ನುತ್ತಾರೆ. ಈಗ Enter ಒತ್ತಿ.
02:05 ಹ್ಯಾಶ್ “include” ಸ್ಪೇಸ್ ಓಪನಿಂಗ್ ಆಂಗಲ್ ಬ್ರಾಕೆಟ್, ಕ್ಲೋಸಿಂಗ್ ಆಂಗಲ್ ಬ್ರಾಕೆಟ್ ಎಂದು ಟೈಪ್ ಮಾಡಿ.
02:13 ಯಾವಾಗಲೂ ಬ್ರಾಕೆಟ್ ಅನ್ನು ಮೊದಲು ಕಂಪ್ಲೀಟ್ ಮಾಡಿ ನಂತರ ಅದರೊಳಗೆ ಬರೆಯುವುದು ಒಳ್ಳೆಯ ಅಭ್ಯಾಸ.
02:20 ಈಗ ಬ್ರಾಕೆಟ್ ನ ಒಳಗೆ, “iostream” ಎಂದು ಟೈಪ್ ಮಾಡಿ.
02:23 ಇಲ್ಲಿ “iostream” ಎಂಬುದು ಒಂದು ಹೆಡರ್ ಫೈಲ್ ಆಗಿದೆ.
02:26 ಈ ಫೈಲ್ ನಲ್ಲಿ, C++ ನ ಸ್ಟಾಂಡರ್ಡ್ ಇನ್ ಪುಟ್ ಮತ್ತು ಔಟ್ ಪುಟ್ ಫಂಕ್ಷನ್ ಗಳ ಡಿಕ್ಲರೇಶನ್ ಇರುತ್ತವೆ. ಈಗ Enter ಒತ್ತಿ.
02:35 using ಸ್ಪೇಸ್ namespace ಸ್ಪೇಸ್ std ಸೆಮಿಕೊಲನ್ ( ; ) ಎಂದು ಟೈಪ್ ಮಾಡಿ.
02:45 using ಎಂಬ ಸ್ಟೇಟ್ಮೆಂಟ್, ನೀವು std ಎಂಬ ನೇಮ್ ಸ್ಪೇಸ್ ಅನ್ನು ಉಪಯೊಗಿಸುತ್ತೀರಿ ಎಂಬುದನ್ನು, ಕಂಪೈಲರ್ ಗೆ ಹೇಳುತ್ತದೆ.
02:52 ನೇಮ್ ಸ್ಪೇಸ್ ಉಪಯೋಗಿಸುವುದರಿಂದ ಹೆಸರುಗಳ ನಡುವೆ ಆಗುವ ಗೊಂದಲ ತಪ್ಪುತ್ತದೆ.
02:56 ಐಡೆಂಟಿಫೈರ್ ಗಳ ವ್ಯಾಪ್ತಿಯನ್ನು ಸೀಮಿತಗೊಳಿಸುವುದರಿಂದ ಈ ಗೊಂದಲ ತಪ್ಪಿಸಬಹುದು.
03:00 ಇದು ಡಿಕ್ಲೇರ್ ಮಾಡುವ ಜಾಗವನ್ನು ಗೊತ್ತು ಮಾಡಿ, ವ್ಯಾಪ್ತಿಯನ್ನು ಹೇಳುತ್ತದೆ.
03:05 ಒಂದು ನೇಮ್ ಸ್ಪೇಸ್ ಒಳಗೆ ಡಿಫೈನ್ ಮಾಡಿದವುಗಳು ಆ ನೇಮ್ ಸ್ಪೇಸ್ ನ ಒಳಗೆ ಮಾತ್ರ ಸ್ಕೋಪ್ ಹೊಂದಿರುತ್ತವೆ.
03:11 std ಎಂಬ ನೇಮ್ ಸ್ಪೇಸ್ ನಲ್ಲಿ ಎಲ್ಲ ಸ್ಟಾಂಡರ್ಡ್ C++ ಲೈಬ್ರರಿಗಳು ಡಿಕ್ಲೇರ್ ಆಗಿವೆ. ಈಗ Enter ಒತ್ತಿ.
03:20 int ಸ್ಪೇಸ್ main ಓಪನಿಂಗ್ ಬ್ರಾಕೆಟ್ ಕ್ಲೋಸಿಂಗ್ ಬ್ರಾಕೆಟ್ ಎಂದು ಟೈಪ್ ಮಾಡಿ.
03:26 main ಎಂಬುದು ಒಂದು ವಿಶೇಷ ಫಂಕ್ಷನ್ ಆಗಿದೆ.
03:30 ಇದು, ಪ್ರೊಗ್ರಾಮ್, ಈ ಲೈನ್ ಇಂದ ಎಕ್ಸಿಕ್ಯೂಟ್ ಆಗಲು ಪ್ರಾರಂಭವಾಗುತ್ತದೆ, ಎಂಬುದನ್ನು ಸೂಚಿಸುತ್ತದೆ.
03:34 ಓಪನಿಂಗ್ ಮತ್ತು ಕ್ಲೋಸಿಂಗ್ ಬ್ರಾಕೆಟ್ ಅನ್ನು ಪ್ಯಾರಾಂಥೆಸಿಸ್ (parenthesis) ಎನ್ನುತ್ತಾರೆ.
03:39 ಮೈನ್ ನಂತರದ ಪ್ಯಾರಾಂಥೆಸಿಸ್, ಮೈನ್ ಎಂಬುದು ಒಂದು ಫಂಕ್ಷನ್ ಎಂಬುದನ್ನು ಸೂಚಿಸುತ್ತದೆ.
03:45 ಇಲ್ಲಿ, “ಇಂಟ್ ಮೈನ್” ಎಂಬ ಫಂಕ್ಷನ್, ಯಾವುದೇ ಆರ್ಗ್ಯುಮೆಂಟ್ ಗಳನ್ನು ಸ್ವೀಕರಿಸುವುದಿಲ್ಲ ಮತ್ತು ಇಂಟಿಜರ್ ಮೌಲ್ಯವನ್ನು ಕೊಡುತ್ತದೆ.
03:52 ಡೆಟಾ ಟೈಪ್ಸ್ ಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ.
03:56 ಈಗ, ಮೈನ್ ಫಂಕ್ಷನ್ ನ ಬಗ್ಗೆ ಇನ್ನಷ್ಟು ತಿಳಿಯಲು ಸ್ಲೈಡ್ ಗೆ ಹಿಂತಿರುಗೋಣ.
04:02 ಪ್ರತಿ ಪ್ರೊಗ್ರಾಮ್ ಕೂಡಾ, ಒಂದು ಮೈನ್ ಫಂಕ್ಷನ್ ಅನ್ನು ಹೊಂದಿರಲೇಬೇಕು.
04:04 ಒಂದಕ್ಕಿಂತ ಹೆಚ್ಚು ಮೈನ್ ಫಂಕ್ಷನ್ ಗಳು ಇರಬಾರದು.
04:09 ಇಲ್ಲದಿದ್ದಲ್ಲಿ, ಕಂಪೈಲರ್ ಗೆ ಪ್ರೋಗ್ರಾಮಿನ ಆರಂಭವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ.
04:13 ಖಾಲಿ ಜೋಡಿ ಪ್ಯಾರಂಥೆಸಿಸ್, ಮೈನ್ ಫಂಕ್ಷನ್ ಗೆ ಆರ್ಗ್ಯುಮೆಂಟ್ ಇಲ್ಲ ಎಂಬುದನ್ನು ಸೂಚಿಸುತ್ತದೆ.
04:19 ಆರ್ಗ್ಯುಮೆಂಟ್ ಗಳ ಬಗ್ಗೆ ವಿವರವಾಗಿ ಮುಂಬರುವ ಟ್ಯುಟೋರಿಯಲ್ ನಲ್ಲಿ ಚರ್ಚಿಸೋಣ.
04:24 ಈಗ, ನಮ್ಮ ಪ್ರೋಗ್ರಾಮ್ ಗೆ ಹಿಂತಿರುಗೋಣ.
04:29 ಓಪನಿಂಗ್ ಕರ್ಲಿ ಬ್ರಾಕೆಟ್ ( { ) ಅನ್ನು ಟೈಪ್ ಮಾಡಿ.
04:32 ಇಲ್ಲಿ, ಓಪನಿಂಗ್ ಕರ್ಲಿ ಬ್ರಾಕೆಟ್ ( { ), ಮೈನ್ ಫಂಕ್ಷನ್ ನ ಆರಂಭವನ್ನು ಸೂಚಿಸುತ್ತದೆ.
04:37 ಕ್ಲೋಸಿಂಗ್ ಕರ್ಲಿ ಬ್ರಾಕೆಟ್ ( } ) ಅನ್ನು ಟೈಪ್ ಮಾಡಿ.
04:40 ಇಲ್ಲಿ, ಕ್ಲೋಸಿಂಗ್ ಕರ್ಲಿ ಬ್ರಾಕೆಟ್ ( } ), ಮೈನ್ ಫಂಕ್ಷನ್ ನ ಅಂತ್ಯವನ್ನು ಸೂಚಿಸುತ್ತದೆ.
04:45 ಈಗ, ಬ್ರಾಕೆಟ್ ನ ಒಳಗೆ ಎರಡು ಬಾರಿ Enter ಒತ್ತಿ.
04:49 ಕರ್ಸರ್ ಅನ್ನು ಒಂದು ಲೈನ್ ಮೇಲೆ ತನ್ನಿ.
04:51 ಇಂಡೆಂಟೇಶನ್ (Indentation) ಇಂದ ಕೋಡ್ ಅನ್ನು ಒದಲು ಸುಲಭವಾಗುತ್ತದೆ.
04:54 ಇದು, ಎರರ್ ಅನ್ನು ಬೇಗ ಕಂಡುಹಿಡಿಯಲು ಕೂಡಾ, ಸಹಾಯ ಮಾಡುತ್ತದೆ.
04:58 ಹಾಗಾಗಿ, ಇಲ್ಲಿ ಮೂರು ಸ್ಪೇಸ್ ಕೊಡೋಣ.
05:01 ಮತ್ತು, cout ಸ್ಪೇಸ್ ಎರಡು ಓಪನಿಂಗ್ ಆಂಗಲ್ ಬ್ರಾಕೆಟ್ ಗಳನ್ನು ಟೈಪ್ ಮಾಡಿ.
05:07 cout ಎಂಬುದು, ಟರ್ಮಿನಲ್ ಗೆ ಔಟ್ ಪುಟ್ ಅನ್ನು ಪ್ರಿಂಟ್ ಮಾಡಲು ಇರುವ, ಒಂದು ಸ್ಟಾಂಡರ್ಡ್ C++ ಫಂಕ್ಷನ್ ಆಗಿದೆ.
05:14 ಈಗ, ಬ್ರಾಕೆಟ್ ಗಳ ನಂತರ ಎರಡು ಡಬಲ್ ಕೋಟ್ಸ್ ಟೈಪ್ ಮಾಡಿ.
05:18 cout ಫಂಕ್ಷನ್ ನ ಡಬಲ್ ಕೋಟ್ಸ್ ನ ಒಳಗೆ ಏನೇ ಇದ್ದರೂ, ಅದು ಟರ್ಮಿನಲ್ ಗೆ ಪ್ರಿಂಟ್ ಆಗುತ್ತದೆ.
05:24 ಡಬಲ್ ಕೋಟ್ಸ್ ಒಳಗೆ,“Talk to a teacher” ಬ್ಯಾಕ್ ಸ್ಲ್ಯಾಶ್ “n” ಎಂದು ಟೈಪ್ ಮಾಡಿ.
05:31 ಬ್ಯಾಕ್ ಸ್ಲ್ಯಾಶ್ “n” (\n) ಎನ್ನುವುದು ಹೊಸ ಲೈನ್ ಅನ್ನು ಸೂಚಿಸುತ್ತದೆ.
05:35 ಇದರಿಂದಾಗಿ, cout ಫಂಕ್ಷನ್ ನ ಎಕ್ಸಿಕ್ಯೂಶನ್ ನ ನಂತರ, ಕರ್ಸರ್ ಹೊಸ ಲೈನ್ ಗೆ ಹೋಗುತ್ತದೆ.
05:41 ಎಲ್ಲ C++ ಸ್ಟೇಟ್ಮೆಂಟ್ ಗಳೂ ಸೆಮಿಕೊಲನ್ (;) ಇಂದ ಕೊನೆಗೊಳ್ಳಬೇಕು.
05:45 ಹಾಗಾಗಿ, ಇದನ್ನು ಲೈನ್ ನ ಕೊನೆಗೆ ಟೈಪ್ ಮಾಡಿ.
05:48 ಸೆಮಿಕೊಲನ್, ಸ್ಟೇಟ್ಮೆಂಟ್ ಅನ್ನು ಕೊನೆಗೊಳಿಸುತ್ತದೆ. ಈಗ, Enter ಒತ್ತಿ.
05:53 ಇಲ್ಲಿ, ಸ್ಪೇಸ್ ಕೊಡಿ, ಮತ್ತು ರಿಟರ್ನ್ ಸ್ಪೇಸ್ ಝೀರೊ (zero) ಸೆಮಿಕೋಲನ್ ( ; )ಎಂದು ಟೈಪ್ ಮಾಡಿ.
06:00 ಈ ಸ್ಟೇಟ್ಮೆಂಟ್, integer ಝೀರೊ ಅನ್ನು ಕೊಡುತ್ತದೆ.
06:03 ಈ ಫಂಕ್ಷನ್ int ಟೈಪ್ ನದ್ದಾಗಿರುವುದರಿಂದ, integer ಮೌಲ್ಯವನ್ನೇ ರಿಟರ್ನ್ ಮಾಡಬೇಕು.
06:10 ರಿಟರ್ನ್ ಸ್ಟೇಟ್ಮೆಂಟ್, ಎಕ್ಸಿಕ್ಯೂಟ್ ಮಾಡಬಹುದಾದಂತಹ ಸ್ಟೇಟ್ಮೆಂಟ್ ಗಳ ಕೊನೆಯನ್ನು ಸೂಚಿಸುತ್ತದೆ.
06:14 ರಿಟರ್ನ್ ಆದ ಮೌಲ್ಯಗಳ ಬಗ್ಗೆ ಬೇರೆ ಟ್ಯುಟೋರಿಯಲ್ ನಲ್ಲಿ ಕಲಿಯೋಣ.
06:20 ಈಗ ಫೈಲ್ ಅನ್ನು ಸೇವ್ ಮಾಡಲು “Save” ಬಟನ್ ಅನ್ನು ಕ್ಲಿಕ್ ಮಾಡಿ.
06:23 ಆಗಾಗ್ಗೆ, ಫೈಲ್ ಗಳನ್ನು ಸೇವ್ ಮಾಡುವುದು ಒಳ್ಳೆಯ ಅಭ್ಯಾಸ.
06:26 ಇದು, ಹಠಾತ್ ವಿದ್ಯುತ್ ವ್ಯತ್ಯಯದಿಂದಾಗುವ ತೊಂದರೆಯನ್ನು ತಪ್ಪಿಸುತ್ತದೆ.
06:30 ಇದು, ಅಪ್ಲಿಕೇಶನ್ ಗಳು ಕ್ರ್ಯಾಶ್ ಆದ ಪರಿಸ್ಥಿತಿಯಲ್ಲೂ ಸಹಾಯಕವಾಗಿದೆ.
06:34 ಪ್ರೊಗ್ರಾಮ್ ಅನ್ನು ಕಂಪೈಲ್ ಮಾಡೋಣ.
06:36 ಟರ್ಮಿನಲ್ ಗೆ ಹಿಂತಿರುಗಿ.
06:39 “g++” ಸ್ಪೇಸ್ “talk.cpp” ಸ್ಪೇಸ್ ಹೈಫನ್ (-) ಒ (O) ಸ್ಪೇಸ್ “output” ಎಂದು ಟೈಪ್ ಮಾಡಿ.
06:49 ಇಲ್ಲಿ, “g++” ಎಂಬುದು C++ ಪ್ರೊಗ್ರಾಮ್ ಗಳನ್ನು ಕಂಪೈಲ್ ಮಾಡಲು ಉಪಯೋಗಿಸುವ ಒಂದು ಕಂಪೈಲರ್.
06:55 talk.cpp ಎಂಬುದು ನಮ್ಮ ಫೈಲ್ ಹೆಸರು.
06:59 ಹೈಫನ್ ಒ output (-O output) ಎಂಬುದು, ಎಕ್ಸಿಕ್ಯೂಟ್ ಮಾಡಬಹುದಾದವುಗಳು output ಎಂಬ ಫೈಲ್ ಗೆ ಹೋಗಬೇಕು ಎಂಬುದನ್ನು ಸೂಚಿಸುತ್ತದೆ.
07:05 ಈಗ Enter ಒತ್ತಿ.
07:07 ಪ್ರೊಗ್ರಾಮ್ ಕಂಪೈಲ್ ಆಗಿರುವುದನ್ನು ನಾವು ಕಾಣುತ್ತೇವೆ.
07:10 ls ಸ್ಪೇಸ್ (ಹೈಫನ್)-lrt ಎಂದು ಟೈಪ್ ಮಾಡಿ, Enter ಒತ್ತುವುದರಿಂದ output ಎಂಬುದು ಕೊನೆಗೆ ಕ್ರಿಯೇಟ್ ಆದ ಫೈಲ್ ಎಂಬುದು ತಿಳಿಯುತ್ತದೆ.
07:19 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಲು, ( ./ ) ಡಾಟ್ ಸ್ಲ್ಯಾಶ್ output ಎಂದು ಟೈಪ್ ಮಾಡಿ,
07:24 ಮತ್ತು Enter ಒತ್ತಿ.
07:27 ಇಲ್ಲಿ, “Talk to a teacher” ಎಂದು ಔಟ್ ಪುಟ್ ತೋರಿಸುತ್ತದೆ.
07:30 ಈಗ, ಸಾಮಾನ್ಯವಾಗಿ ಬರುವ ಎರರ್ ಗಳನ್ನು ಗಮನಿಸೋಣ.
07:35 ಎಡಿಟರ್ ಗೆ ಹಿಂತಿರುಗಿ.
07:38 ಇಲ್ಲಿ, ನಾವು ಕ್ಲೋಸಿಂಗ್ ಕರ್ಲಿ ಬ್ರಾಕೆಟ್ ಅನ್ನು ಬಿಡುತ್ತೇವೆ ಎಂದೆಣಿಸಿ.
07:42 ಈಗ ಫೈಲ್ ಅನ್ನು Save ಮಾಡಿ.
07:44 ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ.
07:48 ಈಗ, ಈ ಮೊದಲು ಉಪಯೋಗಿಸಿದ ಕಮಾಂಡ್ ಅನ್ನು ಉಪಯೋಗಿಸಿ ಕಂಪೈಲ್ ಮತ್ತು ರನ್ ಮಾಡಿ.
07:55 ನಾವೀಗ, ನಮ್ಮ talk.cpp ಫೈಲ್ ನ ಏಳನೇ ಸಾಲಿನಲ್ಲಿ “Expected curly bracket at the end of input” ಎರರ್ ಇರುವುದನ್ನು ಕಾಣುತ್ತೇವೆ.
08:07 ಈಗ, ನಮ್ಮ ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗಿ.
08:09 ನಾನು ಮೊದಲೇ ಹೇಳಿದಂತೆ, ಕ್ಲೋಸಿಂಗ್ ಕರ್ಲಿ ಬ್ರಾಕೆಟ್, ಮೈನ್ ಫಂಕ್ಷನ್ ನ ಕೊನೆಯನ್ನು ಸೂಚಿಸುತ್ತದೆ.
08:14 ಹಾಗಾಗಿ, ಬ್ರಾಕೆಟ್ ಅನ್ನು ಮತ್ತೆ ಸೇರಿಸಿ. ಈಗ ಫೈಲ್ ಅನ್ನು Save ಮಾಡಿ.
08:19 ಮತ್ತೆ ಎಕ್ಸಿಕ್ಯೂಟ್ ಮಾಡೋಣ.
08:21 up arrow (ಅಪ್ ಆರೊ) ಕೀ ಇಂದ, ಹಿಂದೆ ಉಪಯೋಗಿಸಿದ ಕಮಾಂಡ್ ಗಳನ್ನು ಮತ್ತೆ ಉಪಯೋಗಿಸಬಹುದು.
08:26 ನಾನೀಗ ಅದನ್ನೇ ಮಾಡಿದೆ.
08:30 ಹೌದು, ಇದು ಕೆಲಸ ಮಾಡುತ್ತಿದೆ.
08:32 ನಾನೀಗ ನಿಮಗೆ ಮತ್ತೊಂದು ಸಾಮಾನ್ಯ ಎರರ್ ಅನ್ನು ತೋರಿಸುತ್ತೇನೆ.
08:35 ನಮ್ಮ ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗೋಣ.
08:37 ಈಗ, ನಾವು std ಎಂಬುದನ್ನು ಬಿಡುತ್ತೇವೆ ಎಂದೆಣಿಸಿ.
08:41 ಫೈಲ್ ಅನ್ನು Save ಮಾಡೋಣ.
08:44 ನಮ್ಮ ಟರ್ಮಿನಲ್ ಗೆ ಹಿಂತಿರುಗಿ.
08:46 ಕಂಪೈಲ್ ಮಾಡೋಣ.
08:48 ನಮ್ಮ talk.cpp ಫೈಲ್ ನ ಮೂರು ಮತ್ತು ಆರನೇ ಸಾಲಿನಲ್ಲಿ expected identifier before semicolon
08:56 ಮತ್ತು cout was not declared in this scope ಎಂಬ ಎರರ್ ಗಳಿರುವುದನ್ನು ನೋಡುತ್ತೇವೆ.
09:05 cout ಎಂಬುದು ಸ್ಟಾಂಡರ್ಡ್ C++ ಲೈಬ್ರರಿ ಫಂಕ್ಷನ್ ಆಗಿರುವುದರಿಂದ
09:09 ಮತ್ತು, C++ ಲೈಬ್ರರಿ ಫಂಕ್ಷನ್ ಡಿಫೈನ್ ಆಗಿರುವುದು std ಎಂಬ ನೇಮ್ ಸ್ಪೇಸ್ ನೊಳಗೆ ಇರುವುದರಿಂದ, ಎರರ್ ಕೊಡುತ್ತಿದೆ.
09:18 ಈಗ ಎರರ್ ಅನ್ನು ಸರಿಪಡಿಸೋಣ.
09:19 ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗಿ. ಇಲ್ಲಿ std ಎಂದು ಟೈಪ್ ಮಾಡಿ.
09:23 ಇದನ್ನು Save ಮಾಡೋಣ.
09:25 ಇದನ್ನು ಮತ್ತೆ ಕಂಪೈಲ್ ಮಾಡೋಣ.
09:29 ಹೌದು, ಇದು ಕೆಲಸ ಮಾಡುತ್ತಿದೆ.
09:32 ನಿಮ್ಮ ಹೆಸರು ಮತ್ತು ಊರನ್ನು
09:33 ಪ್ರಿಂಟ್ ಮಾಡಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ.
09:37 ನಾವು ಈ ಟ್ಯುಟೋರಿಯಲ್ ನಲ್ಲಿ ಸಿಂಗಲ್ ಲೈನ್ ಕಾಮೆಂಟ್ ಅನ್ನು ಉಪಯೋಗಿಸಿದ್ದೇವೆ.
09:40 ಈಗ ಮಲ್ಟಿಲೈನ್ ಕಾಮೆಂಟ್ ಉಪಯೋಗಿಸಲು ಪ್ರಯತ್ನಿಸಿ.
09:44 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
09:46 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
09:48 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
09:53 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್,
09:55 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
09:58 ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
10:01 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
10:10 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
10:14 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
10:20 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
10:25 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ .
10:28 ಧನ್ಯವಾದಗಳು.

Contributors and Content Editors

PoojaMoolya, Sandhya.np14, Vasudeva ahitanal