Geogebra/C3/Exporting-GeoGebra-Files/Kannada
From Script | Spoken-Tutorial
Revision as of 22:19, 23 April 2015 by Sandhya.np14 (Talk | contribs)
Time | Narration |
00:00 | ನಮಸ್ಕಾರ. |
00:02 | Export feature in GeoGebra (ಎಕ್ಸ್ಪೋರ್ಟ್ ಫೀಚರ್ ಇನ್ ಜಿಯೊಜಿಬ್ರಾ) ಎನ್ನುವುದರ ಬಗ್ಗೆಇರುವ ಈ ಜಿಯೊಜಿಬ್ರಾ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ನೀವು ಇದೇ ಮೊದಲಬಾರಿಗೆ Geogebra (ಜಿಯೊಜಿಬ್ರಾ) ವನ್ನು ಬಳಸುತ್ತಿದ್ದರೆ, |
00:10 | ದಯವಿಟ್ಟು Spoken Tutorial ವೆಬ್ಸೈಟ್ ಮೇಲಿನ Introduction to GeoGebra ಎನ್ನುವ ಟ್ಯುಟೋರಿಯಲ್ಅನ್ನು ನೋಡಿ. |
00:17 | ಈ ಟ್ಯುಟೋರಿಯಲ್ ನಲ್ಲಿ, |
00:18 | ನಾವು: ಜಿಯೊಜಿಬ್ರಾದಲ್ಲಿಯ “Export” (ಎಕ್ಸ್ಪೋರ್ಟ್) ಎನ್ನುವ ವೈಶಿಷ್ಟ್ಯದ ಬಗ್ಗೆ, |
00:22 | ‘ಡ್ರಾಯಿಂಗ್ ಪ್ಯಾಡ್’ನ ಆಕೃತಿಗಳನ್ನು “ಸ್ಟ್ಯಾಟಿಕ್ ಪಿಕ್ಚರ್” ನಂತೆ ಎಕ್ಸ್ಪೋರ್ಟ್ ಮಾಡಲು |
00:26 | ಮತ್ತು ಜಿಯೊಜಿಬ್ರಾ ಫೈಲ್ ಅನ್ನು “ಡೈನಾಮಿಕ್ HTML ವೆಬ್-ಪೇಜ್”ನಂತೆ ಎಕ್ಸ್ಪೋರ್ಟ್ ಮಾಡಲು ಕಲಿಯುವೆವು. |
00:31 | ಜಿಯೊಜಿಬ್ರಾವನ್ನು ಆರಂಭಿಸಲು, ನಾನು |
00:34 | GNU/Linux operating system Ubuntu Version 10.04 LTS (GNU/ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಉಬಂಟು ವರ್ಷನ್ 10.04 LTS) ಹಾಗೂ |
00.39 | Geogebra version 3.2.40.0. (ಜಿಯೊಜಿಬ್ರಾ ವರ್ಷನ್ 3.2.40.0) ಗಳನ್ನು ಬಳಸುತ್ತಿದ್ದೇನೆ. |
00:44 | ಈಗ ಜಿಯೊಜಿಬ್ರಾ ವಿಂಡೋಗೆ ಬರೋಣ. |
00:48 | File ಹಾಗೂ Open ಎನ್ನುವ ಮೆನು ಆಯ್ಕೆಗಳನ್ನು ಸೆಲೆಕ್ಟ್ ಮಾಡಿ, ನೀವು ಈಗಾಗಲೇ ಕ್ರಿಯೇಟ್ ಮಾಡಿರುವ ಯಾವುದೇ ಒಂದು ‘ಜಿಯೊಜಿಬ್ರಾ ಫೈಲ್’ಅನ್ನು ಓಪನ್ ಮಾಡಿ. |
00.57 | ನಾವು ConcentricCircles.ggb (ಕಾನ್ಸೆಂಟ್ರಿಕ್ ಸರ್ಕಲ್ಸ್ ಡಾಟ್ ಜಿ ಜಿ ಬಿ) ಯನ್ನು ಆಯ್ಕೆಮಾಡಿ, Open ಅನ್ನು ಕ್ಲಿಕ್ ಮಾಡೋಣ. |
01:04 | ಒಂದುವೇಳೆ Algebra ಹಾಗೂ Spreadsheet View ಗಳು ಓಪನ್ ಆಗಿದ್ದರೆ, ಮೆನು ಆಯ್ಕೆ View ಅನ್ನು ಆಯ್ಕೆಮಾಡಿ, ನಾವು ಈ ಎರಡನ್ನೂ ಅನ್-ಚೆಕ್ ಮಾಡಿ ಮುಚ್ಚಿಬಿಡೋಣ. |
01:16 | ನಾವು Move ಎನ್ನುವ ಗ್ರಾಫಿಕ್ಸ್ ವ್ಯೂ ಟೂಲನ್ನು ಬಳಸಿ, ‘ಡ್ರಾಯಿಂಗ್ ಪ್ಯಾಡ್’ನ ಆಬ್ಜೆಕ್ಟ್ ಗಳ ಸ್ಥಾನವನ್ನು ಬದಲಾಯಿಸಬಹುದು. |
01:22 | ಎಕ್ಸ್ಪೋರ್ಟ್ ಮಾಡಲು ನೀವು ಆಬ್ಜೆಕ್ಟ್ ಗಳನ್ನು ಆಯ್ಕೆಮಾಡಬಹುದು ಅಥವಾ ಯಾವುದೇ ಆಬ್ಜೆಕ್ಟ್ ಅನ್ನು ಆಯ್ಕೆಮಾಡದಿದ್ದರೆ ನೀವು ಪೂರ್ತಿ ‘ಡ್ರಾಯಿಂಗ್ ಪ್ಯಾಡ್’ಅನ್ನು ಎಕ್ಸ್ಪೋರ್ಟ್ ಮಾಡಬಹುದು. |
01:32 | ಕ್ರಮವಾಗಿ File >> Export >> Graphics View as Picture ಎನ್ನುವ ಮೆನು ಆಯ್ಕೆಗಳನ್ನು ಆರಿಸಿಕೊಳ್ಳಿ. |
01:40 | ನಿಮಗೆ ಎಕ್ಸ್ಪೋರ್ಟ್ ಮಾಡಬೇಕಾಗಿರುವ ಫೈಲ್ ನ ಫಾರ್ಮ್ಯಾಟ್ ಅನ್ನು ಆಯ್ಕೆಮಾಡಿ, ನಾವು 'png'ಯನ್ನು ಆಯ್ಕೆಮಾಡೋಣ. |
01:48 | ಇಲ್ಲಿ, ನೀವು Scale ಅನ್ನು ಬದಲಾಯಿಸಬಹುದು, ನಾವು ಡೀಫಾಲ್ಟ್ ವ್ಯಾಲ್ಯೂಗಳನ್ನು ಇಡೋಣ. |
01:53 | ಇಲ್ಲಿ, ನೀವು Resolution ಅನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದು. |
01:58 | Save ನ ಮೇಲೆ ಕ್ಲಿಕ್ ಮಾಡಿ. |
02.01 | ಇಲ್ಲಿ ಫೋಲ್ಡರ್ ನ ಹೆಸರನ್ನು ಆಯ್ಕೆಮಾಡಿ. ಫೈಲ್ ನ ಹೆಸರನ್ನು ಆಯ್ಕೆಮಾಡಿ. |
02:07 | File type, ‘png’, ಈಗಾಗಲೇ ಇಲ್ಲಿದೆ. Save ನ ಮೇಲೆ ಕ್ಲಿಕ್ ಮಾಡಿ. |
02:15 | ಸಂಕ್ಷಿಪ್ತವಾಗಿ, |
02:17 | ‘ಡ್ರಾಯಿಂಗ್ ಪ್ಯಾಡ್’ನ ಮೇಲಿರುವ ಆಬ್ಜೆಕ್ಟ್ ಗಳನ್ನು ಆಯ್ಕೆಮಾಡಿ ಅಥವಾ ಪೂರ್ತಿ ‘ಡ್ರಾಯಿಂಗ್ ಪ್ಯಾಡ್’ಅನ್ನು ಎಕ್ಸ್ಪೋರ್ಟ್ ಮಾಡಲು, ಅದನ್ನು ಆಯ್ಕೆಮಾಡದೇ ಹಾಗೆಯೇ ಬಿಡಿ. |
02:26 | ಮೆನು ಆಯ್ಕೆಗಳನ್ನು ಕ್ರಮವಾಗಿ File >> Export >> Graphics View as Picture ಎಂದು ಆರಿಸಿಕೊಳ್ಳಿ. |
02:33 | Format, Scale ಹಾಗೂ Resolution ಗಳನ್ನು ಆರಿಸಿಕೊಳ್ಳಿ ಮತ್ತು ಎಕ್ಸ್ಪೋರ್ಟ್ ಮಾಡಿದ ಫೈಲ್ ಅನ್ನು ಸೇವ್ ಮಾಡಿ. |
02:40 | ಈಗ, ಪಾಠದ ಎರಡನೆಯ ಭಾಗ, |
02:45 | ಜಿಯೊಜಿಬ್ರಾವನ್ನು ‘ಡೈನಾಮಿಕ್ ವೆಬ್-ಪೇಜ್’ನಂತೆ ಎಕ್ಸ್ಪೋರ್ಟ್ ಮಾಡುವುದು. |
02:49 | ಮೊದಲು ನಾವು ಒಂದು ಜಿಯೊಜಿಬ್ರಾ ಫೈಲ್ಅನ್ನು ಓಪನ್ ಮಾಡೋಣ. ಉದಾಹರಣೆಗೆ, |
02:53 | Interior Angles.ggb (ಇಂಟೀರಿಯರ್ ಆಂಗಲ್ಸ್ ಡಾಟ್ ಜಿ ಜಿ ಬಿ). |
02.59 | ಈಗ, ಕ್ರಮವಾಗಿ File >> Export >> Dynamic Worksheet as Webpage ಎನ್ನುವ ಮೆನು ಆಯ್ಕೆಗಳನ್ನು ಆರಿಸಿಕೊಳ್ಳಿ. |
03:09 | ಒಂದು ಬಾಕ್ಸ್ ಕಾಣಿಸುತ್ತದೆ. |
03:12 | Title, Author name ಹಾಗೂ Date ಗಳನ್ನು ನಮೂದಿಸಿ. |
03:18 | ಇಲ್ಲಿ, General ಹಾಗೂ Advanced ಎನ್ನುವ ಎರಡು ಟ್ಯಾಬ್ ಗಳಿವೆ. |
03:22 | ರಚನೆಯ ಮೇಲ್ಗಡೆ ಮತ್ತು ಕೆಳಗಡೆ ನಿಮಗೆ ಬೇಕಾಗಿರುವ ಟೆಕ್ಸ್ಟ್ ಅನ್ನು, ನೀವು ‘General ಟ್ಯಾಬ್’ನಲ್ಲಿ ನಮೂದಿಸಬಹುದು. |
03:30 | ರಚನೆಯ ಮೇಲ್ಗಡೆ ಕಾಣಿಸಲು, ಈ ಟೆಕ್ಸ್ಟ್ ಅನ್ನು ನಾವು ಸೇರಿಸೋಣ. |
03:37 | ಕೀಬೋರ್ಡ್ ನ ಮೇಲೆ Ctrl +X |
03:43 | ಮತ್ತು ಆಮೇಲೆ ಕೀಬೋರ್ಡ್ ನ ಮೇಲೆ ಮತ್ತೊಮ್ಮೆ Ctrl+V ಯನ್ನು ಒತ್ತಿ, ಮಾಹಿತಿಯನ್ನು ನಾನು ‘ಕಟ್’ ಹಾಗೂ ‘ಪೇಸ್ಟ್’ ಮಾಡುವೆನು. |
03:48 | Move the vertices of the triangle and observe the values of the interior angles of the triangle. |
03:56 | ಈಗ ರಚನೆಯ ಕೆಳಗಡೆ 'Observe what happens when A, B and C are on a straight line by dragging the vertices ಎಂದು ಸೇರಿಸಿ. |
04:08 | ಈಗ Advanced ಟ್ಯಾಬ್ ಗೆ ನಡೆಯೋಣ. |
04:10 | ‘ಜಿಯೊಜಿಬ್ರಾ ಪೇಜ್’ನ ಭಾಗವಾಗಿ, ಜಿಯೊಜಿಬ್ರಾದ ವೈಶಿಷ್ಟ್ಯಗಳು ಹಾಗೂ ಆಯ್ಕೆಗಳನ್ನು ಸೇರಿಸುವ ಹಲವಾರು ಚೆಕ್ ಬಾಕ್ಸ್ ಗಳು ಇಲ್ಲಿ ಇರುತ್ತವೆ. |
04:18 | ವೆಬ್-ಪೇಜ್ ನ ಮೇಲೆ, ರೈಟ್-ಕ್ಲಿಕ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು, ಇದನ್ನು ಚೆಕ್ ಮಾಡಿ. |
04:23 | ಲೇಬಲ್ ಗಳನ್ನು ಎಳೆದಾಡಲು, ಇದನ್ನು ಚೆಕ್ ಮಾಡಿ. |
04:28 | ರಚನೆಯನ್ನು ಮೊದಲಿನಂತೆ (ರಿ-ಸೆಟ್) ಮಾಡುವ ಐಕಾನ್ ಗಾಗಿ ಇದನ್ನು ಚೆಕ್ ಮಾಡಿ. |
04:35 | ನೀವು GeoGebra webpage ನ ಮೇಲೆ ಡಬಲ್-ಕ್ಲಿಕ್ ಮಾಡಿದಾಗ, GeoGebra (ಜಿಯೊಜಿಬ್ರಾ) ಅಪ್ಲಿಕೇಶನ್ ವಿಂಡೋ ನಿಮ್ಮ ಕಂಪ್ಯೂಟರ್ ನ ಮೇಲೆ ಓಪನ್ ಆಗಬೇಕಾಗಿದ್ದರೆ, ಇದನ್ನು ಚೆಕ್ ಮಾಡಿ. |
04:45 | ನಿಮ್ಮ ವೆಬ್-ಪೇಜ್ ನಲ್ಲಿ, menu bar, tool bar ಹಾಗೂ input bar ಅಥವಾ Save ಮತ್ತು Print ಎನ್ನುವ ವೈಶಿಷ್ಟ್ಯಗಳು ಕಾಣಿಸಬೇಕಾಗಿದ್ದರೆ, ಸೂಕ್ತವಾದ ಬಾಕ್ಸ್ ಗಳನ್ನು ಇಲ್ಲಿ ಆಯ್ಕೆಮಾಡಿ. |
04:56 | ವೆಬ್-ಪೇಜ್ ನ ಮೇಲೆ ಕಾಣುವ, ಜಿಯೊಜಿಬ್ರಾ ವಿಂಡೋದ Width ಹಾಗೂ Height ಗಳನ್ನು, ನೀವು ಇಲ್ಲಿ ಬದಲಾಯಿಸಬಹುದು. |
05:03 | Export (ಎಕ್ಸ್ಪೋರ್ಟ್) ಅನ್ನು ಆಯ್ಕೆಮಾಡಿ ಮತ್ತು ಬ್ರೌಸರ್ ನಲ್ಲಿ ವೀಕ್ಷಿಸಲು, ಇದನ್ನು html ಫೈಲ್ ಎಂದು ಸೇವ್ ಮಾಡಿ. |
05:11 | ನಾನು Firefox ವೆಬ್ ಬ್ರೌಸರ್ ಬಳಸುವುದರಿಂದ ಎಕ್ಸ್ಪೋರ್ಟ್ ಮಾಡಿದ ಕೂಡಲೆ ಅದು ಓಪನ್ ಆಗುತ್ತದೆ. |
05:22 | ನೀವು ರಚನೆಯ ಮೇಲ್ಗಡೆ ಹಾಗೂ ಕೆಳಗಡೆ ಟೆಕ್ಸ್ಟ್ ಅನ್ನು ನೋಡಬಹುದು. |
05:29 | ಇದು ಒಂದು ಡೈನಾಮಿಕ್ ವೆಬ್ ಪೇಜ್ ಆಗಿರುವುದರಿಂದ, ನೀವು ವರ್ಟೈಸಿಸ್ ಗಳನ್ನು ಸ್ಥಳಾಂತರಿಸಿ ಆಕೃತಿಯಲ್ಲಿಯ ಬದಲಾವಣೆಗಳನ್ನು ಗಮನಿಸಬಹುದು. |
05:38 | ಸಂಕ್ಷಿಪ್ತವಾಗಿ, |
05:39 | ಈಗಾಗಲೇ ನೀವು ಕ್ರಿಯೇಟ್ ಮಾಡಿರುವ ಒಂದು ಜಿಯೊಜಿಬ್ರಾ ಫೈಲ್ ಅನ್ನು ಓಪನ್ ಮಾಡಿ. ಮೆನುನಲ್ಲಿ ಕ್ರಮವಾಗಿ File >> Export >> Dynamic Worksheet as Webpage ಆಯ್ಕೆಗಳನ್ನು ಆರಿಸಿಕೊಳ್ಳಿ. |
05:50 | Title, Text ಹಾಗೂ Advanced ವೈಶಿಷ್ಟ್ಯಗಳನ್ನು ಆರಿಸಿಕೊಳ್ಳಿ ಮತ್ತು ನಿಮ್ಮ ಜಿಯೊಜಿಬ್ರಾ ಫೈಲ್ ಅನ್ನು ವೆಬ್-ಪೇಜ್, html ಫೈಲ್ ನಂತೆ, ಎಕ್ಸ್ಪೋರ್ಟ್ ಮಾಡಿ. |
06:01 | ವೆಬ್ ಬ್ರೌಸರ್ ಅನ್ನು ಬಳಸಿ ‘html ಫೈಲ್’ಅನ್ನು ವೀಕ್ಷಿಸಿ. |
06:05 | ವೆಬ್ ಬ್ರೌಸರ್ ನ ಮೇಲೆ ಜಿಯೊಜಿಬ್ರಾ ಕೆಲಸ ಮಾಡಲು, ನೀವು ಜಾವಾಅನ್ನು ಇನ್ಸ್ಟಾಲ್ ಮಾಡಬೇಕಾಗಬಹುದು. |
06:11 | ಈಗ ಅಸೈನ್ಮೆಂಟ್: |
06:13 | ಯಾವುದೇ ಒಂದು GeoGebra ಫೈಲನ್ನು ಓಪನ್ ಮಾಡಿ. ಹಲವು ಆಬ್ಜೆಕ್ಟ್ ಗಳನ್ನು ಆಯ್ಕೆಮಾಡಿ ಅಥವಾ ಇಡೀ ‘ಡ್ರಾಯಿಂಗ್ ಪ್ಯಾಡ್’ಅನ್ನು Static picture (ಸ್ಟ್ಯಾಟಿಕ್ ಪಿಕ್ಚರ್) ನಂತೆ |
06:24 | ಮತ್ತು ಒಂದು Dynamic web page (ಡೈನಾಮಿಕ್ ವೆಬ್ ಪೇಜ್) ನಂತೆ ಎಕ್ಸ್ಪೋರ್ಟ್ ಮಾಡಿ. |
06:25 | ಡೈನಾಮಿಕ್ ವೆಬ್ ಪೇಜ್ ನಲ್ಲಿ ಈ ಕೆಳಗಿನ ವೈಶಿಷ್ಟ್ಯಗಳನ್ನು ಸೇರಿಸಿ, |
06:29 | Reset ಆಯ್ಕೆ ಹಾಗೂ Tool Bar ಎನ್ನುವ ಆಯ್ಕೆ. |
06:33 | ಈ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
06:36 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
06:40 | ನಿಮಗೆಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
06.44 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
06.49 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
06.52 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
06.58 | “ ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ. |
07:01 | ಇದು ICT, MHRD ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಆಧಾರವನ್ನು ಪಡೆದಿದೆ. |
07:07 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. |
07:12 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ---------- .
ವಂದನೆಗಳು. |