C-and-Cpp/C3/Arrays/Kannada
From Script | Spoken-Tutorial
Revision as of 15:46, 14 November 2014 by Vasudeva ahitanal (Talk | contribs)
Time | Narration |
00:01 | c ಮತ್ತು c++ ನಲ್ಲಿ ಅರೇಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು : |
00:09 | ಅರೇ ಎಂದರೇನು |
00:11 | ಅರೇ ಯನ್ನು ಡಿಕ್ಲೇರ್ ಮಾಡುವ ಬಗೆ |
00:13 | ಅರೇ ಯ ಇನಿಶಿಯಲೈಸೇಶನ್ |
00:16 | ಅರೇ ಗೆ ಉದಾಹರಣೆಗಳು |
00:18 | ನಾವು ಕೆಲವು ಸಾಮಾನ್ಯವಾಗಿ ಆಗುವ ಎರರ್ ಗಳನ್ನೂ, ಅವುಗಳ ಪರಿಹಾರವನ್ನೂ ನೋಡೋಣ. |
00:22 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.04 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. |
00:36 | ಅರೇ ಗೆ ಪೀಠಿಕೆಯೊಂದಿಗೆ ಪ್ರಾರಂಭಿಸೋಣ. |
00:39 | ಅರೇ ಎಂಬುದು ಡೇಟಾ ಅಥವಾ ಒಂದೇ ರೀತಿಯ ಡೇಟಾ ಟೈಪ್ ನ ಅಂಶಗಳ ಸಂಗ್ರಹವಾಗಿದೆ. |
00:44 | ಅರೇ ಯ ಇಂಡೆಕ್ಸ್, ಸೊನ್ನೆಯಿಂದ ಪ್ರಾರಂಭವಾಗುತ್ತದೆ. |
00:48 | ಮೊದಲನೇ ಡೇಟಾ, ಸೊನ್ನೆ ಇಂಡೆಕ್ಸ್ ನಲ್ಲಿ ಇರುತ್ತದೆ. |
00:52 | ಅರೇಗಳಲ್ಲಿ ಮೂರು ವಿಧ. |
00:55 | ಒಂದೇ ಆಯಾಮದ ಅರೇ |
00:57 | ಎರಡು ಆಯಾಮದ ಅರೇ ಮತ್ತು |
00:59 | ಬಹು ಆಯಾಮದ ಅರೇ |
01:01 | ನಾವು ಈ ಟ್ಯುಟೋರಿಯಲ್ ನಲ್ಲಿ ಒಂದು ಆಯಾಮದ ಅರೇ ಯ ಬಗೆಗೆ ಚರ್ಚೆ ಮಾಡಲಾಗುವುದು. |
01:06 | ಒಂದು ಆಯಾಮದ ಅರೇ ಯನ್ನು ಡಿಕ್ಲೇರ್ ಮಾಡುವುದು ಹೇಗೆಂದು ನೋಡೋಣ. |
01:09 | ಇದರ ಸಿಂಟ್ಯಾಕ್ಸ್ ಹೀಗಿದೆ |
01:11 | ಡೇಟಾ ಟೈಪ್, ಅರೇ ಯ ಹೆಸರು ಮತ್ತು ಅರೇಯ ಸೈಸ್ |
01:16 | ಉದಾಹರಣೆಗೆ, ಇಲ್ಲಿ ನಾವು ಐದು ಎಲಿಮೆಂಟ್ ಗಳ, ಸ್ಟಾರ್ ಎಂಬ ಇಂಟಿಜರ್ ಅರೇ ಯನ್ನು ಡಿಕ್ಲೇರ್ ಮಾಡಿದ್ದೇವೆ. |
01:24 | ಸ್ಟಾರ್ ಅರೇ ಯ ಇಂಡೆಕ್ಸ್ ಸೊನ್ನೆಯಿಂದ ಆರಂಭವಾಗಿ ನಾಲ್ಕರವರೆಗೆ ಇರುತ್ತದೆ. |
01:29 | ನಾವು ಅರೇ ಯ ಡಿಕ್ಲೇರೇಶನ್ ಅನ್ನು ನೋಡಿದೆವು. |
01:32 | ಈಗ, ನಾವು ಅರೇ ಯನ್ನು ಇನಿಶಿಯಲೈಸ್ ಮಾಡುವುದನ್ನು ನೋಡೋಣ. |
01:35 | ಇದಕ್ಕೆ ಸಿಂಟ್ಯಾಕ್ಸ್ ಹೀಗಿದೆ : |
01:38 | ಡೇಟಾ ಟೈಪ್, ಅರೇ ಯ ಹೆಸರು, ಸೈಸ್ ಈಸ್ ಈಕ್ವಲ್ ಟು ಎಲಿಮೆಂಟ್ಸ್ |
01:44 | ಉದಾಹರಣೆಗೆ, ಇಲ್ಲಿ ನಾವು ಇಂಟಿಜರ್ ಅರೇ ಸ್ಟಾರ್ ಮತ್ತು ಅದರ ಸೈಸ್ ಮೂರು ಎಂದು ಡಿಕ್ಲೇರ್ ಮಾಡಿದ್ದೇವೆ. ಅರೇ ಯ ಎಲಿಮೆಂಟ್ ಗಳು ಒಂದು, ಎರಡು ಮತ್ತು ಮೂರು. |
01:54 | ಇಲ್ಲಿ, ಸ್ಟಾರ್ ನ ಇಂಡೆಕ್ಸ್, ಸೊನ್ನೆಯಿಂದ ಎರಡರವರೆಗೆ ಇರುತ್ತದೆ. |
01:59 | ಈಗ ಉದಾಹರಣೆಗಳನ್ನು ನೋಡೋಣ. |
02:01 | ನಾನೀಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಟೈಪ್ ಮಾಡಿದ್ದೇನೆ. |
02:04 | ಹಾಗಾಗಿ, ಅದನ್ನು ಓಪನ್ ಮಾಡುತ್ತೇನೆ. |
02:06 | ನಮ್ಮ ಫೈಲ್ ನ ಹೆಸರು ಅರೇ ಡಾಟ್ ಸಿ ಎಂದು ಗಮನದಲ್ಲಿಡಿ. |
02:10 | ಈ ಪ್ರೊಗ್ರಾಮ್ ನಲ್ಲಿ, ನಾವು ಅರೇಯಲ್ಲಿ ಇಡಲಾದ ಎಲಿಮೆಂಟ್ ಗಳ ಮೊತ್ತವನ್ನು ಕಂಡುಹಿಡಿಯುತ್ತೇವೆ. |
02:16 | ಈಗ, ಕೋಡ್ ಅನ್ನು ವಿವರಿಸುತ್ತೇನೆ. |
02:18 | ಇದು ನಮ್ಮ ಹೆಡರ್ ಫೈಲ್. |
02:20 | ಇದು ನಮ್ಮ ಮೈನ್ ಫಂಕ್ಷನ್. |
02:22 | ಇಲ್ಲಿ, ನಾವು ಸ್ಟಾರ್ ಎಂಬ ಅರೇಯನ್ನು ಸೈಸ್ ಮೂರು ಎಂದು ಡಿಕ್ಲೇರ್ ಮಾಡಿ, ಇನಿಶಿಯಲೈಸ್ ಮಾಡಿದ್ದೇವೆ. |
02:28 | ಅರೇಯ ಎಲಿಮೆಂಟ್ ಗಳು ನಾಲ್ಕು, ಐದು ಮತ್ತು ಆರು. |
02:33 | ನಂತರ, ನಾವು ಸಮ್ ಎಂದು ಒಂದು ಇಂಟಿಜರ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ. |
02:36 | ಇಲ್ಲಿ, ನಾವು ಅರೇಯ ಎಲಿಮೆಂಟ್ ಗಳನ್ನು ಕೂಡಿಸಿ, ಮೊತ್ತವನ್ನು ಸಮ್ ನಲ್ಲಿ ಇಡುತ್ತೇವೆ. |
02:41 | ನಾಲ್ಕು ಇಂಡೆಕ್ಸ್ ಸೊನ್ನೆಯಲ್ಲಿರುತ್ತದೆ, ಐದು ಇಂಡೆಕ್ಸ್ ಒಂದರಲ್ಲಿರುತ್ತದೆ ಮತ್ತು ಆರು ಇಂಡೆಕ್ಸ್ ಎರಡರಲ್ಲಿರುತ್ತದೆ ಎಂಬುದನ್ನು ಗಮನದಲ್ಲಿಡಿ. |
02:50 | ನಂತರ ನಾವು ಸಮ್ ಅನ್ನು ಪ್ರಿಂಟ್ ಮಾಡುತ್ತೇವೆ. |
02:52 | ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. |
02:54 | ಈಗ save ಅನ್ನು ಒತ್ತಿ. |
02:57 | ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
02:59 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
03:09 | ಕಂಪೈಲ್ ಮಾಡಲು, gcc ಸ್ಪೇಸ್ ಅರೇ ಡಾಟ್ ಸಿ ಸ್ಪೇಸ್ ಹೈಫನ್ ಒ ಅರೇ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
03:19 | ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಅರೇ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
03:24 | ಇಲ್ಲಿ ಔಟ್ ಪುಟ್ ಹೀಗೆ ತೋರಿಸುತ್ತದೆ, |
03:26 | ದ ಸಮ್ ಈಸ್ ಫಿಫ್ಟೀನ್ |
03:28 | ಈಗ ಕೆಲವು ಸಾಮನ್ಯ ಎರರ್ ಗಳನ್ನು, ಮತ್ತು ಅವುಗಳನ್ನು ಸರಿಪಡಿಸುವ ವಿಧಾನವನ್ನು ನೋಡೋಣ. |
03:32 | ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. |
03:34 | ಇಲ್ಲಿ, ಲೈನ್ ನಂಬರ್ ನಾಲ್ಕರಲ್ಲಿ ಕರ್ಲಿ ಬ್ರಾಕೆಟ್ ಅನ್ನು ಬಿಡುತ್ತೇವೆ ಎಂದೆಣಿಸಿ. |
03:39 | Save ಅನ್ನು ಒತ್ತಿ, ಈಗ ಏನಾಗುತ್ತದೆ ಎಂಬುದನ್ನು ನೋಡೋಣ. |
03:42 | ಟರ್ಮಿನಲ್ ಗೆ ಹಿಂದಿರುಗಿ. |
03:44 | ಮೊದಲಿನಂತೆ ಕಂಪೈಲ್ ಮಾಡೋಣ. |
03:47 | ನಾವು ಒಂದು ಎರರ್ ಅನ್ನು ನೋಡಾಬಹುದು. |
03:49 | ಇನ್ವ್ಯಾಲೀಡ್ ಇನಿಶಿಯಲೈಸರ್ ಎಂಡ್ ಎಕ್ಸ್ಪೆಕ್ಟೆಡ್ ಐಡೆಂಟಿಫೈರ್ ಆರ್ ಬ್ರಾಕೆಟ್ ಬಿಫೊರ್ ನ್ಯುಮರಿಕ್ ಕಾಂಸ್ಟಂಟ್. |
03:56 | ಏಕೆಂದರೆ, ಅರೇ ಗಳನ್ನು ಕರ್ಲಿ ಬ್ರಾಕೆಟ್ ನ ಒಳಗೆ ಮಾತ್ರ ಇನಿಶಿಯಲೈಸ್ ಮಾಡಬೇಕು. |
04:01 | ಪ್ರೊಗ್ರಾಮ್ ಗೆ ಹಿಂತಿರುಗಿ. ಈ ಎರರ್ ಅನ್ನು ಸರಿಪಡಿಸೋಣ. |
04:04 | ಇಲ್ಲಿ, ಲೈನ್ ನಂಬರ್ ನಾಲ್ಕರಲ್ಲಿ ಕರ್ಲಿ ಬ್ರಾಕೆಟ್ ಅನ್ನು ಟೈಪ್ ಮಾಡಿ. |
04:09 | ಈಗ save ಅನ್ನು ಒತ್ತಿ. |
04:12 | ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂದಿರುಗಿ. |
04:15 | ಮೊದಲಿನಂತೆ ಕಂಪೈಲ್ ಮಾಡೋಣ. ಮೊದಲಿನಂತೆ ಎಕ್ಸಿಕ್ಯೂಟ್ ಮಾಡೋಣ. |
04:19 | ಹೌದು, ಇದು ಕೆಲಸ ಮಾಡುತ್ತಿದೆ. |
04:21 | ಈಗ, ನಾವು ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಎಕ್ಸಿಕ್ಯೂಟ್ ಮಾಡೋಣ. |
04:25 | ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. |
04:28 | ಇಲ್ಲಿ ಕೆಲವು ಕೋಡ್ ಅನ್ನು ಬದಲಾಯಿಸುತ್ತೇನೆ. |
04:30 | ಮೊದಲು ನಿಮ್ಮ ಕೀ ಬೋರ್ಡ್ ನಲ್ಲಿ Shift , Ctrl ಮತ್ತು S ಕೀಗಳನ್ನು ಒಮ್ಮೆಗೇ ಒತ್ತಿ. |
04:38 | ಈಗ, ಫೈಲ್ ಅನ್ನು ಡಾಟ್ ಸಿಪಿಪಿ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ, save ಅನ್ನು ಒತ್ತಿ. |
04:44 | ಹೆಡರ್ ಫೈಲ್ ಅನ್ನು ಐ ಒ ಸ್ಟ್ರೀಮ್ ಎಂದು ಬದಲಾಯಿಸೋಣ. |
04:49 | ಈಗ ಯೂಸಿಂಗ್ ಸ್ಟೇಟ್ಮೆಂಟ್ ಅನ್ನು ಸೇರಿಸಿ. |
04:55 | ಅರೇ ಯ ಡಿಕ್ಲೇರೇಶನ್ ಮತ್ತು ಇನಿಶಿಯಲೈಸೇಶನ್ c++ ನಲ್ಲಿಯೂ ಅದೇ ರೀತಿ ಇರುತ್ತದೆ. |
05:01 | ಹಾಗಾಗಿ ಇಲ್ಲಿ ಏನನ್ನೂ ಬದಲಾಯಿಸುವ ಅಗತ್ಯವಿಲ್ಲ. |
05:04 | ಈಗ ಪ್ರಿಂಟ್ ಎಫ್ ಸ್ಟೇಟ್ಮೆಂಟ್ ನ ಬದಲು ಸಿಔಟ್ ಸ್ಟೇಟ್ಮೆಂಟ್ ಟೈಪ್ ಮಾಡಿ. |
05:09 | ಫಾರ್ಮ್ಯಾಟ್ ಸ್ಪೆಸಿಫೈರ್ ಮತ್ತು ಬ್ಯಾಕ್ ಸ್ಲ್ಯಾಶ್ ಎನ್ ಅನ್ನು ಡಿಲೀಟ್ ಮಾಡಿ, ಈಗ comma ಅನ್ನು ಡಿಲೀಟ್ ಮಾಡಿ, ಎರಡು ಓಪನಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ. |
05:17 | ಇಲ್ಲಿ ಬ್ರಾಕೆಟ್ ಅನ್ನು ಡಿಲೀಟ್ ಮಾಡಿ. ಪುನಃ ಎರಡು ಓಪನಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ ಮತ್ತು ಡಬಲ್ ಕೋಟ್ಸ್ ನ ಒಳಗೆ ಬ್ಯಾಕ್ ಸ್ಲ್ಯಾಶ್ ಎನ್ ಅನ್ನು ಟೈಪ್ ಮಾಡಿ. |
05:26 | ಈಗ save ಅನ್ನು ಒತ್ತಿ. |
05:29 | ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ. |
05:32 | ಕಂಪೈಲ್ ಮಾಡಲು, g++ ಸ್ಪೇಸ್ ಅರೇ ಡಾಟ್ ಸಿಪಿಪಿ ಸ್ಪೇಸ್ ಹೈಫನ್ ಒ ಸ್ಪೇಸ್ ಅರೇ ಒನ್ ಎಂದು ಟೈಪ್ ಮಾಡಿ. |
05:42 | ಅರೇ ಡಾಟ್ ಸಿ ಫೈಲ್ ನ ಔಟ್ ಪುಟ್ ಪಾರಾಮೀಟರ್ ಅನ್ನು ಉಳಿಸಿಕೊಳ್ಳಲು, ಇಲ್ಲಿ ನಾವು ಅರೇ ಒನ್ ಎಂದು ಟೈಪ್ ಮಾಡಿದ್ದೇವೆ. |
05:51 | ಈಗ Enter ಒತ್ತಿ. |
05:54 | ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಅರೇ ಒನ್ ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
05:59 | ದ ಸಮ್ ಈಸ್ ಫಿಫ್ಟೀನ್ ಎಂದು ಔಟ್ ಪುಟ್ ತೋರಿಸುತ್ತದೆ. |
06:02 | ಇದು ನಮ್ಮ ಸಿ ಕೋಡ್ ನಂತೆಯೇ ಇರುವುದನ್ನು ನಾವು ಗಮನಿಸಬಹುದು. |
06:07 | ಈಗ, ನಾವು ಇನ್ನೊಂದು ಸಾಮಾನ್ಯ ಎರರ್ ಅನ್ನು ನೋಡೋಣ. |
06:10 | ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. |
06:12 | ಇಲ್ಲಿ, ಲೈನ್ ನಂಬರ್ ಏಳರಲ್ಲಿ, ಸ್ಟಾರ್ ಒನ್ ಸ್ಟಾರ್ ಟು ಮತ್ತು ಸ್ಟಾರ್ ಥ್ರೀ ಎಂದು ಟೈಪ್ ಮಾಡುತ್ತೇನೆ ಎಂದೆಣಿಸಿ. |
06:23 | save ಅನ್ನು ಒತ್ತಿ. |
06:24 | ಎಕ್ಸಿಕ್ಯೂಟ್ ಮಾಡೋಣ. ನಮ್ಮ ಟರ್ಮಿನಲ್ ಗೆ ಹಿಂತಿರುಗಿ. |
06:28 | ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡುತ್ತೇನೆ. |
06:30 | ಮೊದಲಿನಂತೆ ಕಂಪೈಲ್ ಮಾಡೋಣ. |
06:33 | ಮೊದಲಿನಂತೆ ಎಕ್ಸಿಕ್ಯೂಟ್ ಮಾಡೋಣ. |
06:36 | ನಾವು ಅನಿರೀಕ್ಷಿತ ಔಟ್ ಪುಟ್ ಅನ್ನು ಪಡೆಯುತ್ತೇವೆ. |
06:39 | ಏಕೆಂದರೆ, ಅರೇ ಯ ಇಂಡೆಕ್ಸ್ ಸೊನ್ನೆಯಿಂದ ಆರಂಭವಾಗುತ್ತದೆ. |
06:43 | ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. ಇಲ್ಲಿ ಅರೇ ಯ ಇಂಡೆಕ್ಸ್ ಒಂದರಿಂದ ಆರಂಭವಾಗಿರುವುದನ್ನು ನೋಡಬಹುದು. |
06:49 | ಹಾಗಾಗಿ, ಇದು ಎರರ್ ಕೊಡುತ್ತಿದೆ. ಈ ಎರರ್ ಅನ್ನು ಸರಿಪಡಿಸೋಣ. |
06:54 | ಇಲ್ಲಿ ಸೊನ್ನೆ, ಒಂದು, ಎರಡು ಎಂದು ಟೈಪ್ ಮಾಡಿ, save ಅನ್ನು ಒತ್ತಿ. |
07:02 | ಎಕ್ಸಿಕ್ಯೂಟ್ ಮಾಡೋಣ. ನಮ್ಮ ಟರ್ಮಿನಲ್ ಗೆ ಹಿಂತಿರುಗಿ. |
07:05 | ಮೊದಲಿನಂತೆ ಕಂಪೈಲ್ ಮಾಡೋಣ. ಮೊದಲಿನಂತೆ ಎಕ್ಸಿಕ್ಯೂಟ್ ಮಾಡೋಣ. |
07:09 | ಹೌದು, ಇದು ಕೆಲಸ ಮಾಡುತ್ತಿದೆ. |
07:12 | ಈಗ, ನಮ್ಮ ಸ್ಲೈಡ್ ಗೆ ಹಿಂದಿರುಗೋಣ. |
07:14 | ಸಾರಾಂಶ ತಿಳಿಯೋಣ. |
07:16 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು : |
07:19 | ಅರೇ ಗಳು |
07:20 | ಒಂದು ಆಯಾಮದ ಅರೇ ಯನ್ನು ಡಿಕ್ಲೇರ್ ಮಾಡುವುದು. |
07:23 | ಒಂದು ಆಯಾಮದ ಅರೇ ಯನ್ನು ಇನಶಿಯಲೈಸ್ ಮಾಡುವುದು. |
07:26 | ಉದಾಹರಣೆಗೆ, ಇಂಟ್ ಸ್ಟಾರ್ ಥ್ರೀ ಈಸ್ ಈಕ್ವಲ್ ಟು ಫೋರ್ ಫೈವ್ ಸಿಕ್ಸ್ |
07:31 | ಅರೇಯ ಎಲಿಮೆಂಟ್ ಗಳನ್ನು ಕೂಡಿಸುವುದು, ಉದಾಹರಣೆಗೆ, ಸಮ್ ಈಸ್ ಈಕ್ವಲ್ ಟು ಸ್ಟಾರ್ ಝೀರೋ ಪ್ಲಸ್ ಸ್ಟಾರ್ ಒನ್ ಪ್ಲಸ್ ಸ್ಟಾರ್ ಟು. |
07:40 | ಅರೇ ಯ ಎಲಿಮೆಂಟ್ ಗಳ ಡಿಫರೆನ್ಸ್ ಅನ್ನು ಕಂಡುಹಿಡಿಯಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. |
07:47 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
07:50 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
07:53 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
07:57 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. |
08:03 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
08:06 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
08:13 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
08:17 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
08:25 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
08:30 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |