C-and-Cpp/C2/Arithmetic-Operators/Kannada
From Script | Spoken-Tutorial
Revision as of 15:37, 20 October 2014 by Vasudeva ahitanal (Talk | contribs)
Time | Narration |
00:01 | ಸಿ ಮತ್ತು ಸಿ ಪ್ಲಸ್ ಪ್ಲಸ್(C++) ನಲ್ಲಿಅರಿಥ್ಮೆಟಿಕ್ ಆಪರೇಟರ್ಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವ ಅಂಶಗಳು |
00:10 | ಅರಿಥ್ಮೆಟಿಕ್ ಆಪರೇಟರ್ ಗಳು : |
00:11 | ಸಂಕಲನ ಉದಾಹರಣೆಗೆ a+b |
00:14 | ವ್ಯವಕಲನ ಉದಾಹರಣೆಗೆ a-b |
00:18 | ಭಾಗಾಕಾರ: ಉದಾಹರಣೆಗೆ : aಬೈb |
00:20 | ಗುಣಾಕಾರ ಉದಾಹರಣೆಗೆ a ಇಂಟು b |
00:24 | ಮಾಡ್ಯೂಲಸ್ಉದಾಹರಣೆಗೆ a ಪರ್ಸೆಂಟ್ b |
00:27 | ಈ ಟ್ಯುಟೋರಿಯಲ್ ಗಾಗಿ ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ನ ಆವೃತ್ತಿ 11.10 ಮತ್ತು gcc ಮತ್ತು g++ ಕಂಪೈಲರ್ನ ಆವೃತ್ತಿ 4.6.1 ಅನ್ನುಉಪಯೋಗಿಸಿದ್ದೇನೆ. |
00:38 | ನಾನೀಗ , ಅರಿಥ್ಮೆಟಿಕ್ ಆಪರೇಟರ್ ಗಳನ್ನು ಉಪಯೋಗಿಸುವ ಬಗೆಯನ್ನು c ಪ್ರೋಗ್ರಾಮ್ ನ ಸಹಾಯದಿಂದ ವಿವರಿಸುತ್ತೇನೆ. |
00:44 | ನಾನಿಗಾಗಲೇ ಪ್ರೋಗ್ರಾಮ್ ಅನ್ನು ಬರೆದಿದ್ದೇನೆ. |
00:47 | ಹಾಗಾಗಿ ನಾನು ಎಡಿಟರ್ ಅನ್ನು ಒಪನ್ ಮಾಡಿ, ಕೋಡ್ ಅನ್ನು ವಿವರಿಸುತ್ತೇನೆ. |
00:49 | ಅರಿಥ್ಮೆಟಿಕ್ ಆಪರೇಟರ್ ಗಳಿಗೆ c ಪ್ರೋಗ್ರಾಮ್ ಇಲ್ಲಿದೆ. |
00:56 | ಮೊದಲ ಎರಡು ಸ್ಟೇಟ್ಮೆಂಟ್ ಗಳಲ್ಲಿ ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡಿ ಡಿಫೈನ್ ಮಾಡಲಾಗಿದೆ. |
01:02 | ಮುಂದಿನ ಎರಡು ಸ್ಟೇಟ್ಮೆಂಟ್ ಗಳಲ್ಲಿ a ಗೆ ಐದು ಎಂದೂ, ಮತ್ತು b ಗೆ ಎರಡು ಎಂದು ಮೌಲ್ಯವನ್ನು ಕೊಡಲಾಗಿದೆ. |
01:10 | ಈಗ, ಸಂಕಲನ ದ ಆಪರೇಟರ್ ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ. |
01:14 | a ಮತ್ತು b ಗಳ ಮೊತ್ತವು c ಯಲ್ಲಿ ಇರುತ್ತದೆ. |
01:19 | ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್ a ಮತ್ತು b ಯ ಮೊತ್ತವನ್ನು ಸ್ಕ್ರೀನ್ ನ ಮೇಲೆ ತೋರಿಸುತ್ತದೆ. |
01:28 | ಇಲ್ಲಿ, ಪರ್ಸೆಂಟ್ ಡಾಟ್ ಟು ಎಫ್ ಎಂಬುದು, ಡೆಸಿಮಲ್ ನ ನಂತರ ಎರಡು ಡಿಜಿಟ್ ಗಳ ಪ್ರಿಸಿಶನ್ ಅನ್ನು ಕೊಡುತ್ತದೆ. |
01:37 | ಮುಂದಿನ ಸ್ಟೇಟ್ಮೆಂಟ್ನಲ್ಲಿ a ಮತ್ತು b ಯ ಪ್ರೊಡಕ್ಟ್ ಅನ್ನು c ಯು ಹೊಂದಿರುತ್ತದೆ. |
01:43 | ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್ a ಮತ್ತು b ಯ ಪ್ರೊಡಕ್ಟ್ ಅನ್ನು ಸ್ಕ್ರೀನ್ ನ ಮೇಲೆ ತೋರಿಸುತ್ತದೆ. |
01:48 | ಈ ಎರಡು ಆಪರೇಟರ್ ಗಳು ಹೇಗೆ ಕೆಲಸ ಮಾಡುತ್ತವೆ ಎಂದು ನೋಡೋಣ. |
01:52 | ಕೆಳಗಿನ ಸಾಲುಗಳನ್ನು ಕಮೆಂಟ್ ಮಾಡೋಣ. |
01:55 | ಸ್ಲ್ಯಾಶ್ ಆಸ್ಟರಿಕ್ಸ್ ಆಸ್ಟರಿಕ್ಸ್ ಸ್ಲ್ಯಾಶ್ ಎಂದು ಟೈಪ್ ಮಾಡಿ. |
02:05 | ಸೇವ್ ಅನ್ನು ಒತ್ತಿ. |
02:07 | ಫೈಲ್ ಅನ್ನು ಡಾಟ್ ಸಿ ಎಂಬ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ. |
02:10 | ನಾನು ನನ್ನ ಫೈಲ್ ಅನ್ನು ಅರಿಥ್ಮೆಟಿಕ್ ಡಾಟ್ ಸಿ ಎಂದು ಸೇವ್ ಮಾಡಿದ್ದೇನೆ. |
02:15 | ನಿಮ್ಮ ಕೀಬೋರ್ಡ ನಲ್ಲಿCtrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
02:22 | ಕಂಪೈಲ್ ಮಾಡಲು, ಹೀಗೆ ಟರ್ಮಿನಲ್ ನಲ್ಲಿ ಟೈಪ್ ಮಾಡಿ. |
02:27 | gcc space arithmetic.c space -0 space arith (Gccಸ್ಪೇಸ್ ಅರಿಥ್ಮೆಟಿಕ್ಡಾಟ್ ಸಿ ಸ್ಪೇಸ್ ಮೈನಸ್ ಒ ಸ್ಪೇಸ್ ಎ ಆರ್ ಐ ಟಿ ಎಚ್). |
02:38 | Enter ಕೀಯನ್ನು ಒತ್ತಿ. |
02:40 | ಕೋಡ್ ಅನ್ನು ಏಕ್ಸೆಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ ಎ ಆರ್ ಐ ಟಿ ಎಚ್ ಎಂದು ಟೈಪ್ ಮಾಡಿ, |
02:48 | Enter ಕೀಯನ್ನು ಒತ್ತಿ. |
02:50 | ಔಟ್ ಪುಟ್ ಸ್ಕ್ರೀನ್ ನ ಮೇಲೆ ಹೀಗೆ ಕಾಣುತ್ತದೆ . |
02:54 | Sum of 5 and 2 is 7.00 (ಸಮ್ ಆಫ್ ಫೈವ್ ಎಂಡ್ ಟು ಈಸ್ ಸೆವೆನ್ ಪಾಯಿಂಟ್ ಝಿರೋ ಝಿರೋ) ಮತ್ತು |
02:59 | Product of 5 and 2 is 10.00 (ಪ್ರಾಡಕ್ಟ್ ಆಫ್ ಫೈವ್ ಎಂಡ್ ಟು ಈಸ್ಟೆನ್ ಪಾಯಿಂಟ್ ಝಿರೋ ಝಿರೋ) |
03:03 | ಈಗ ವ್ಯವಕಲನದ ಆಪರೇಟರ್ ಅನ್ನು ನೀವೇ ಪ್ರಯತ್ನಿಸಬೇಕು. |
03:08 | ಸಂಕಲನದ ಆಪರೇಟರ್ ನ ಬದಲು ವ್ಯವಕಲನದ ಆಪರೇಟರ್ಅನ್ನು ಟೈಪ್ ಮಾಡಿ. |
03:13 | ಫಲಿತಾಂಶವು ಮೂರು ಎಂದು ಬರಬೇಕು. |
03:18 | ನಮ್ಮ ಪ್ರೋಗ್ರಾಮ್ ನ ಕೊನೆಯ ಸಾಲುಗಳಿಗೆ ಹಿಂತಿರುಗೋಣ. |
03:23 | ಈಗ, ನಾನು ಭಾಗಾಕಾರಕ್ಕೆ ಕೋಡ್ ಅನ್ನು ವಿವರಿಸುತ್ತೇನೆ. |
03:26 | ಇಲ್ಲಿ ಮತ್ತು ಇಲ್ಲಿಂದ ಮಲ್ಟಿ ಲೈನ್ ಕಾಮೆಂಟ್ ಅನ್ನು ತೆಗೆಯಿರಿ. |
03:34 | ಈ ಸ್ಟೇಟ್ಮೆಂಟ್ ಗಳಲ್ಲಿ c ಯು, a ಮತ್ತು b ಯ ಇಂಟಿಜರ್ ಡಿವಿಷನ್ ನ ಮೌಲ್ಯವನ್ನು ಹೊಂದಿರುತ್ತದೆ. |
03:40 | ಇಂಟಿಜರ್ ಡಿವಿಷನ್ ನಲ್ಲಿ ಫ್ರ್ಯಾಕ್ಷ್ಟನಲ್ ಭಾಗವು ಟ್ರಂಕೇಟ್ ಆಗಿರುತ್ತದೆ ಎಂಬುದನ್ನು ಗಮನಿಸಿ. |
03:47 | ಪ್ರಿಂಟ್ ಎಫ್ ಸ್ಟೇಟ್ಮೆಂಟ್, ಭಾಗಾಕಾರದ ಫಲಿತಾಂಶವನ್ನು ಸ್ಕ್ರೀನ್ ನ ಮೇಲೆ ತೋರಿಸುತ್ತದೆ. |
03:57 | ಇಲ್ಲಿ, ನಾವು ರಿಯಲ್ ಡಿವಿಶನ್ ಅನ್ನು ಮಾಡುತ್ತಿದ್ದೇವೆ. |
04:02 | ಇಲ್ಲಿ, ಎರಡರಲ್ಲಿ ಒಂದು ಆಪರಂಡ್ ಅನ್ನು ಫ್ಲೋಟ್ ಗೆ ಕಾಸ್ಟ್ ಮಾಡಬೇಕು. |
04:10 | ನಾವು ವೇರಿಯೇಬಲ್ a ಅನ್ನು ಟೈಪ್ ಕಾಸ್ಟ್ ಮಾಡಿದ್ದೇವೆ. |
04:13 | ಈಗ, ಒಂದು ಆಪರೇಶನ್ ನಲ್ಲಿ, a ಫ್ಲೋಟ್ ನಂತೆ ವರ್ತಿಸುತ್ತದೆ. |
04:22 | ಪ್ರಿಂಟ್ ಎಫ್ ಸ್ಟೇಟ್ಮೆಂಟ್ ಸರಿಯಾದ ಭಾಗಾಕಾರದ ಫಲಿತಾಂಶವನ್ನು ಸ್ಕ್ರೀನ್ ನ ಮೇಲೆ ತೋರಿಸುತ್ತದೆ. |
04:30 | ರಿಟರ್ನ್ ಝೀರೋ ಎಂದು ಟೈಪ್ ಮಾಡಿ ಕರ್ಲಿ ಬ್ರಾಕೆಟ್ ಅನ್ನು ಕ್ಲೋಸ್ ಮಾಡಿ. |
04:37 | SAVE ಅನ್ನು ಒತ್ತಿ. |
04:40 | ಕೋಡ್ ಅನ್ನು ಕಂಪೈಲ್ ಮತ್ತು ಏಕ್ಸಿಕ್ಯೂಟ್ ಮಾಡಲು ಟರ್ಮಿನಲ್ ಗೆ ಹಿಂದಿರುಗಿ. |
04:45 | ಕಂಪೈಲ್ ಮಾಡಲು, gcc space arithmetic.c – space artih (gcc ಸ್ಪೇಸ್ ಅರಿಥ್ಮೆಟಿಕ್ ಡಾಟ್ ಸಿ ಮೈನಸ್ ಓ ಸ್ಪೇಸ್ ಎ ಆರ್ ಐ ಟಿ ಹೆಚ್) ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
04:59 | ಎಕ್ಸಿಕ್ಯೂಟ್ ಮಾಡಲು, dot slash arith (ಡಾಟ್ ಸ್ಲ್ಯಾಶ್ ಎ ಆರ್ ಐ ಟಿ ಹೆಚ್) ಎಂದು ಟೈಪ್ ಮಾಡಿ, enter ಕೀಯನ್ನು ಒತ್ತಿ. |
05:05 | ಔಟ್ ಪುಟ್ ಸ್ಕ್ರೀನ್ ನ ಮೇಲೆ ಕಾಣುತ್ತದೆ. |
05:08 | ಹಿಂದಿನ, ಸಂಕಲನ ಮತ್ತು ಗುಣಾಕಾರ ಗಳ ಔಟ್ ಪುಟ್ಇದೆ, |
05:16 | ಮತ್ತು ಐದು ಬೈ ಎರಡರ ಇಂಟಿಜರ್ ಡಿವಿಷನ್ ನ ಫಲಿತಾಂಶ ಎರಡು ಎಂಬುದೂ ಇದೆ. |
05:22 | ಇಂಟಿಜರ್ ಡಿವಿಷನ್ ನಲ್ಲಿ, ಫ್ರ್ಯಾಕ್ಷನಲ್ ಭಾಗವು ಬಿಟ್ಟುಹೊಗಿರುವುದನ್ನು ಗಮನಿಸಬಹುದು. |
05:29 | ನಂತರ, ಐದು ಬೈ ಎರಡರ ರಿಯಲ್ ಡಿವಿಷನ್ ನ ಫಲಿತಾಂಶ ಎರಡು ಪಾಯಿಂಟ್ ಐದು ಎಂದಿದೆ. |
05:35 | ರಿಯಲ್ ಡಿವಿಷನ್ ನಲ್ಲಿ, ಫಲಿತಾಂಶ ವು ನಮಗೆ ಬೇಕಾದಂತೆ ಇದೆ. |
05:37 | ಈ ಫಲಿತಾಂಶವನ್ನು ಪಡೆಯಲು ನಾವು ಟೈಪ್ ಕಾಸ್ಟಿಂಗ್ ಅನ್ನು ಉಪಯೋಗಿಸಿದ್ದೇವೆ. |
05:45 | ನಾನು ಇದೇ ಪ್ರೋಗ್ರಾಮ್ ಅನ್ನು c++ ನಲ್ಲಿಬರೆಯಬೇಕೆಂದಿರುವೆ ಎಂದೆಣಿಸಿ. |
05:50 | ಇದೇ ಕೋಡ್ ಅನ್ನು c++ನಲ್ಲಿಯೂ ಉಪಯೋಗಿಸಲು ಸಾಧ್ಯವೇ ಎಂದು ಪ್ರಯತ್ನಿಸೋಣ. |
05:56 | ಎಡಿಟರ್ ಗೆ ಹಿಂದಿರುಗೋಣ. |
06:00 | ಇಲ್ಲಿ c++ಕೋಡ್ ಇದೆ. |
06:05 | ಹೆಡರ್ ಫೈಲ್, c ಯ ಹೆಡರ್ ಫೈಲ್ ಗಿಂತ ಭಿನ್ನವಾಗಿರುವುದನ್ನು ಗಮನಿಸಬಹುದು. |
06:12 | ಇಲ್ಲಿ, ನೇಮ್ ಸ್ಪೇಸ್ ಅನ್ನು ಕೂಡಾ ಉಪಯೋಗಿಸಿದ್ದೇವೆ, |
06:18 | ಮತ್ತು, c++ನ ಔಟ್ ಪುಟ್ ಸ್ಟೇಟ್ಮೆಂಟ್, ಸಿ ಔಟ್ ಎಂದಿರುವುದನ್ನು ಕೂಡಾ ಗಮನಿಸಿ. |
06:25 | ಹಾಗಾಗಿ, ಈ ವ್ಯತ್ಯಾಸಗಳನ್ನು ಹೊರತುಪಡಿಸಿ, ಎರಡೂ ಕೋಡ್ ಗಳೂ ಸಮಾನವಾಗಿವೆ. |
06:32 | save ಅನ್ನು ಒತ್ತಿ. |
06:33 | ನಿಮ್ಮ ಫೈಲ್, ಡಾಟ್ ಸಿಪಿಪಿ ಎಕ್ಸ್ಟೆಂಶನ್ ನೊಂದಿಗೆ ಸೇವ್ ಅಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. |
06:37 | ನನ್ನ ಫೈಲ್ ಅನ್ನು ನಾನು arithmetic.cpp (ಅರಿಥ್ಮೆಟಿಕ್ ಡಾಟ್ ಸಿಪಿಪಿ) ಎಂದು ಸೇವ್ ಮಾಡಿದ್ದೇನೆ. |
06:41 | ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಿ, ಫಲಿತಾಂಶ ಏನು ಎಂಬುದನ್ನು ನೋಡೋಣ. |
06:49 | ಟರ್ಮಿನಲ್ ಅನ್ನು ಒಪನ್ ಮಾಡಿ, g++ space arithmetic.cpp space –o arith (g++ ಸ್ಪೇಸ್ ಅರಿಥ್ಮೆಟಿಕ್ ಡಾಟ್ ಸಿಪಿಪಿ ಸ್ಪೇಸ್ ಮೈನಸ್ ಒ ಎ ಆರ್ ಐ ಟಿ ಹೆಚ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
07:09 | ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಲು, dot slash arith (ಡಾಟ್ ಸ್ಲ್ಯಾಶ್ ಎ ಆರ್ ಐ ಟಿ ಹೆಚ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
07:16 | ಇಲ್ಲಿ ಔಟ್ ಪುಟ್ ತೋರಿಸುತ್ತದೆ. |
07:19 | ಫಲಿತಾಂಶವು ಸಿ ಪ್ರೊಗ್ರಾಮ್ ನಂತೆಯೇ ಇರುವುದನ್ನು ನಾವು ನೋಡಬಹುದು. |
07:23 | ಔಟ್ ಪುಟ್ ನ ಪ್ರಿಸಿಶನ್ ನಲ್ಲಿ ಮಾತ್ರ ವ್ಯತ್ಯಾಸವಿದೆ. |
07:29 | ಈಗ, ಟ್ಯುಟೋರಿಯಲ್ ನ ಸಾರಾಂಶ ತಿಳಿಯೋಣ. |
07:32 | ಈ ಟ್ಯುಟೋರಿಯಲ್ ನಲ್ಲಿ ನಾವು ಅರಿಥ್ಮೆಟಿಕ್ ಆಪರೇಟರ್ ಗಳನ್ನು ಹೇಗೆ ಬಳಸುವುದೆಂದು ಕಲಿತೆವು. |
07:36 | ಮಾಡ್ಯುಲಸ್ ಆಪರೇಟರ್ ಅನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಸಲು, ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. |
07:42 | ಸೂಚನೆ: ಭಾಗಾಕಾರದ ಶೇಷವನ್ನು ಕಂಡುಹಿಡಿಯಲು ಮಾಡ್ಯುಲಸ್ ಆಪರೇಟರ್ ಅನ್ನು ಉಪಯೋಗಿಸಬಹುದು. ಉದಾಹರಣೆಗೆ : ಸಿ ಈಸ್ ಈಕ್ವಲ್ ಟು a ಮಾಡ್ಯುಲಸ್ b. |
07:50 | ನಿಮಗೆ ಫಲಿತಾಂಶವು ಒಂದು ಎಂದು ಬರಬೇಕು. |
07:55 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
07:57 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
08:00 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
08:05 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. |
08:09 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
08:14 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
08:20 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
08:25 | ಇದುರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
08:30 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
08:41 | ಈ ಟ್ಯುಟೋರಿಯಲ್ ನ ಅನುವಾದಕಿಬೆಂಗಳೂರಿನಿಂದ ಚೇತನಾ. ಧನ್ಯವಾದಗಳು. |