KTurtle/C3/Control-Execution/Kannada

From Script | Spoken-Tutorial
Revision as of 19:58, 22 August 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಎಲ್ಲರಿಗೂ ನಮಸ್ಕಾರ.
00:03 KTurtleControl Execution ನ ಈ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ.
00:10 ಈ ಟ್ಯುಟೋರಿಯಲ್-ನಲ್ಲಿ ನಾವು,
00:13 'while' ಲೂಪ್ ಮತ್ತು
00:15 'for' ಲೂಪ್ ನ ಬಗ್ಗೆ ಕಲಿಯಲಿದ್ದೇವೆ.
00:17 ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್(ಧ್ವನಿಮುದ್ರಣ) ಮಾಡಲು ನಾನು ಉಬಂಟು ಲಿನಕ್ಸ್ OS ನ 12.04 ನೇ ಆವೃತ್ತಿಯನ್ನು ಮತ್ತು KTurtle ನ 0.8.1 ಬೀಟಾ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ.
00:32 ನಿಮಗೆ Kturtle ನ ಪ್ರಾಥಮಿಕ ಮಾಹಿತಿ ಇದೆಯೆಂದು ನಾವು ಅಂದುಕೊಂಡಿದ್ದೇವೆ.
00:38 ಅದಿಲ್ಲವಾದರೆ, ಅದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್-ಗಳಿಗಾಗಿ ದಯವಿಟ್ಟು ನಮ್ಮ ಜಾಲಪುಟ http://spoken-tutorial.org ನೋಡಿ.
00:45 ಒಂದು ಹೊಸ KTurtle ನ ಅಪ್ಲಿಕೇಷನ್ ತೆರೆಯೋಣ.
00:48 Dash home ನ ಮೇಲೆ ಕ್ಲಿಕ್ ಮಾಡಿ.
00:50 ಸರ್ಚ್ ಬಾರ್-ನಲ್ಲಿ KTurtle ಎಂದು ಟೈಪ್ ಮಾಡೋಣ.
00:53 Option ಮೇಲೆ ಕ್ಲಿಕ್ ಮಾಡಿ. KTurtle ಅಪ್ಲಿಕೇಷನ್ ತೆರೆದುಕೊಳ್ಳುತ್ತದೆ.
00:59 ನಾನು ನಿಮಗೆ ಮೊದಲು control execution (ಕಂಟ್ರೋಲ್ ಎಕ್ಸಿಕ್ಯೂಶನ್) ಎಂದರೇನೆಂದು ವಿವರಿಸುತ್ತೇನೆ.
01:05 Control execution ಪ್ರೋಗ್ರಾಂನ ವೇಗವನ್ನು ನಿಯಂತ್ರಿಸುತ್ತದೆ.
01:10 program execution ಅನ್ನು ನಿಯಂತ್ರಿಸಲು ವಿಭಿನ್ನಪ್ರಕಾರದ ನಿಬಂಧನೆಗಳು ಉಪಯೋಗಿಸಲ್ಪಡುತ್ತವೆ.
01:16 ಸರಿಯಾದ ನಿಬಂಧನೆಯು ಪೂರ್ಣವಾಗುವವರೆಗೆ, ಮತ್ತೆ ಮತ್ತೆ ಉತ್ಪಾದಿಸಿರುವ ಕೋಡ್-ಗಳ ಸಮೂಹವನ್ನು ಲೂಪ್ ಎನ್ನುತ್ತಾರೆ.
01:25 ಉದಾಹರಣೆಗೆ “while” ಲೂಪ್ ಮತ್ತು “for” ಲೂಪ್.
01:30 “while” ಲೂಪ್ ನಿಂದ ಟ್ಯುಟೋರಿಯಲ್ ಅನ್ನು ಆರಂಭಿಸೋಣ.
01:34 “while” ಲೂಪ್-ನಲ್ಲಿ, boolean (ಬುಲಿಯನ್) ಮೌಲ್ಯಮಾಪನವು ಎಲ್ಲಿಯವರೆಗೆ ತಪ್ಪಗುವ್ದಿಲ್ಲವೋ ಅಲ್ಲಿಯವರೆಗೆ ಕೋಡ್ ಪುನರಾವೃತ್ತಿಯಾಗುತ್ತದೆ.
01:42 ನಾನು “while” ಲೂಪ್ ಸಂರಚನೆಯನ್ನು ವಿವರಿಸುತ್ತೇನೆ.

while loop condition ಬ್ರ್ಯಾಕೆಟ್ ನಲ್ಲಿ {

do something  

with loop increment variable }

01:56 ಈಗಾಗಲೇ ನನ್ನ ಹತ್ತಿರ text editor ನಲ್ಲಿ ಕೋಡ್ ಇದೆ.
01:59 ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡಿ KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ.
02:07 ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ.
02:13 ಪ್ರೋಗ್ರಾಂ ಟೈಪ್ ಆದ ನಂತರ ಟ್ಯುಟೋರಿಯಲ್ ಅನ್ನು ಮತ್ತೆ ಆರಂಭಿಸಿ.
02:18 ಪ್ರೋಗ್ರಾಂ ಟೆಕ್ಸ್ಟ್ ಸ್ವಲ್ಪ ಅಸ್ಪಷ್ಟವಾಗಿರುವುದರಿಂದ ನಾನು ಅದನ್ನು ಝೂಮ್ ಮಾಡುತ್ತೇನೆ.
02:25 ಈಗ ನಾನು ಕೋಡ್ ಅನ್ನು ವಿವರಿಸುತ್ತೇನೆ.
02:27 ಹ್ಯಾಷ್ (#) ಚಿಹ್ನೆ ಇದರ ನಂತರ ಬರೆದಿರುವ ಲೈನನ್ನು ಕಾಮೆಂಟ್ ಮಾಡುತ್ತದೆ.
02:32 ಅಂದರೆ, ಪ್ರೋಗ್ರಾಂ ನಡೆಯುತ್ತಿರುವಾಗ ಈ ಲೈನ್ ಇಲ್ಲಿ ಉತ್ಪಾದಿತವಾಗುವುದಿಲ್ಲ.
02:38 reset ಕಮಾಂಡ್ “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.
02:43 $x=0 (ಡಾಲರ್ ಎಕ್ಸ್ ಈಕ್ವಲ್ ಟು ಜೀರೊ), x ನಿಂದ zero ತನಕ ಬೇರೆ ಬೇರೆ ರೀತಿಯ ವ್ಯಾಲ್ಯೂವನ್ನು ಉಂಟುಮಾಡುತ್ತದೆ.
02:52 keyword message " ನ ನಂತರ ಪ್ರೋಗ್ರಾಂನಲ್ಲಿ ಮೆಸೇಜ್ ಎಂದು ಉದ್ಧರಣ ಚಿಹ್ನೆಗಳ ಮೇಲೆ ಕೊಟ್ಟಿದೆ.

“message” ಕಮಾಂಡ್ “string” ಅನ್ನು ಇನ್-ಪುಟ್ ರೂಪದಲ್ಲಿ ತೆಗೆದುಕೊಳ್ಳುತ್ತದೆ.

03:04 ಇದು string ನಿಂದ ಟೆಕ್ಸ್ಟ್ ಅನ್ನು ಜೊತೆ ಮಾಡಿಕೊಂಡೇ ಒಂದು ಪಾಪಪ್ ಡಯಲಾಗ್ ಬಾಕ್ಸ್ ಅನ್ನು ತೋರಿಸುತ್ತದೆ.
03:11 while $x<30 (ವೈಲ್ ಡಾಲರ್ ಎಕ್ಸ್ ಲೆಸ್ದೆನ್ ಥರ್ಟಿ) “while” ಕಂಡೀಷನ್ ಅನ್ನು ಚೆಕ್ ಮಾಡುತ್ತದೆ.
03:17 $x=$x+3 , $x by 3 ವೇರಿಯೆಬಲ್ ನ ವ್ಯಾಲ್ಯೂ (ಬೆಲೆ) ವನ್ನು ಹೆಚ್ಚಿಸುತ್ತದೆ.
03:27 fontsize 15 print ಕಮಾಂಡಿನ ಮೂಲಕ ಉಪಯೋಗಿಸಿದ ಫಾಂಟ್ ಸೈಜ್ ಅನ್ನು ಸೆಟ್ ಮಾಡುತ್ತದೆ.
03:35 Font ಸೈಜ್ ಇನ್-ಪುಟ್ ನ ರೀತಿಯಲ್ಲಿ ಸಂಖ್ಯೆಯನ್ನು ತೆಗೆದುಕೊಳ್ಳುತ್ತದೆ. Pixels ನಲ್ಲಿ ಸೆಟ್ ಮಾಡುತ್ತದೆ.
03:42 forward 20 ಕಮಾಂಡ್ “Turtle” ಕ್ಯಾನ್ವಾಸಿನ ಮೇಲೆ 20 ಸ್ಟೆಪ್ಸ್ ಮುಂದೆ ಹೋಗಲು ಅನುಮತಿ ನೀಡುತ್ತದೆ.
03:52 print $x ಕ್ಯಾನ್ವಾಸಿನ ಮೇಲೆ variable x ನ ಬೆಲೆಯನ್ನು ತೋರಿಸುತ್ತದೆ.
04:01 ಪ್ರೋಗ್ರಾಂ ಅನ್ನು ರನ್ ಮಾಡಲು “Run” ಬಟನ್ ಮೇಲೆ ಕ್ಲಿಕ್ ಮಾಡೋಣ.
04:05 ಒಂದು ಮೆಸೇಜ್ ಡಯಲಾಗ್ ಬಾಕ್ಸ್ ಪಾಪ್-ಅಪ್ ಆಗುತ್ತದೆ. OK ಕ್ಲಿಕ್ ಮಾಡುತ್ತೇನೆ.
04:11 ಮೂರರ ಗುಣಕಗಳು 3 ರಿಂದ 30 ರವರೆಗೆ ಕ್ಯಾನ್ವಾಸಿನ ಮೇಲೆ ತೋರಿಸುತ್ತದೆ.
04:17 “Turtle” ಕ್ಯಾನ್ವಾಸಿನ ಮೇಲೆ 20 ಸ್ಟೆಪ್ಸ್ ಮುಂದೆ ಹೋಗುತ್ತದೆ. (ಚಲಿಸುತ್ತದೆ.)
04:22 ಮುಂದೆ “for” ಲೂಪ್ ನಿಂದ ಕೆಲಸ ಮಾಡೋಣ.
04:26 “for” ಲೂಪ್ ಒಂದು ಕೌಂಟಿಂಗ್ ಲೂಪ್.
04:29 “for” ಲೂಪ್-ನಲ್ಲಿ ಪ್ರತಿಸಲವೂ (ಎಲ್ಲ ಸಮಯದಲ್ಲಿಯೂ) ಕೋಡ್ ಉತ್ಪತ್ತಿಯಾಗುತ್ತದೆ,
04:34 ಇದು ತನ್ನ ಕೊನೆಯ ವ್ಯಾಲ್ಯೂವನ್ನು ತಲುಪುವವರೆಗೂ ವೇರಿಯಬಲ್ ವ್ಯಾಲ್ಯೂ ಹೆಚ್ಚಾಗುತ್ತಾ ಹೋಗುತ್ತದೆ.
04:41 ನಾನು “for” ಲೂಪ್-ನ ಸಂರಚನೆಯನ್ನು ವಿವರಿಸುತ್ತೇನೆ.
04:46 for variable = start number to end number ಬ್ರಾಕೆಟ್ ನಲ್ಲಿ { Statement}
04:55 ಈಗ ನಾನು ಈಗಿರುವ ಪ್ರೋಗ್ರಾಮ್ ಅನ್ನು ಕ್ಲಿಯರ್ ಮಾಡುತ್ತೇನೆ.
04:59 ಈಗ ನಾನು clear ಕಮಾಂಡನ್ನು ಟೈಪ್ ಮಾಡುತ್ತೇನೆ ಮತ್ತು ಕ್ಯಾನ್ವಾಸನ್ನು ಸ್ವಚ್ಛ ಮಾಡಲು ರನ್ ಮಾಡುತ್ತೇನೆ.
05:05 ಈಗ ನಾನು text editor ನಿಂದ ಪ್ರೋಗ್ರಾಂ ಅನ್ನು ಕಾಪಿ ಮಾಡಿ KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ.
05:14 ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ನಿಮ್ಮ KTurtle editor ನಲ್ಲಿ ಪ್ರೋಗ್ರಾಂ ಟೈಪ್ ಮಾಡಿ.
05:20 ಪ್ರೋಗ್ರಾಮ್ ಅನ್ನು ಟೈಪ್ ಮಾಡಿದ ನಂತರ ಟ್ಯುಟೋರಿಯಲ್ ಅನ್ನು ಮತ್ತೆ ಆರಂಭ ಮಾಡೋಣ.
05:25 ಪ್ರೋಗ್ರಾಂ ಟೆಕ್ಸ್ಟ್ ಸ್ವಲ್ಪ ಅಸ್ಪಷ್ಟವಾಗಿರುವುದರಿಂದ ನಾನು ಅದನ್ನು ಝೂಮ್ ಮಾಡುತ್ತೇನೆ.
05:32 ನಾನು ಪ್ರೋಗ್ರಾಂ ಅನ್ನು ವಿವರಿಸುತ್ತೇನೆ.
05:34 ಹ್ಯಾಷ್ (#) ಚಿಹ್ನೆ ಇದರ ನಂತರ ಬರೆದ ಲೈನ್ ಅನ್ನು ಕಮೆಂಟ್ ಮಾಡುತ್ತದೆ.
05:39 reset ಕಮಾಂಡ್ “Turtle” ಅನ್ನು ಅದರ default ಸ್ಥಿತಿಯನ್ನು ಸೆಟ್ ಮಾಡುತ್ತದೆ..
05:44 $r=0 ವೇರಿಯೆಬಲ್ ವ್ಯಾಲ್ಯೂ r ನಿಂದ zero ವರೆಗೆ ಆರಂಭಿಸುತ್ತದೆ.
05:52 for $x= 1 to 15 1 ರಿಂದ 15 ರವರೆಗೆ “for” ನಿಬಂಧನೆಯನ್ನು (condition) ಚೆಕ್ ಮಾಡುತ್ತದೆ.
06:01 $r=$x*($x+1)/2 (ಡಾಲರ್ ಆರ್ ಎಕ್ಸ್ ಇನ್ ಟು ಡಾಲರ್ ಎಕ್ಸ್ ಪ್ಲಸ್ ಒನ್ ಬೈ ಟು) ವೇರಿಯೆಬಲ್ r ನ ವ್ಯಾಲ್ಯೂವನ್ನು ಎಣಿಸುತ್ತದೆ.
06:12 fontsize 18, print ಕಮಾಂಡಿನ ಮೂಲಕ ಉಪಯೋಗಿಸಿದ ಫಾಂಟ್ ಸೈಜನ್ನು ಸೆಟ್ ಮಾಡುತ್ತದೆ.
06:19 print $r ಕ್ಯಾನ್ವಾಸಿನ ಮೇಲೆ r ವೇರಿಯೆಬಲ್-ನ ವ್ಯಾಲ್ಯೂವನ್ನು ತೋರಿಸುತ್ತದೆ.
06:26 forward 15 , ಎಂಬ ಕಮಾಂಡ್ Turtleಅನ್ನು ಕ್ಯಾನ್ವಾಸಿನ ಮೇಲೆ 15 ಸ್ಟೆಪ್ಸ್ ಮುಂದೆ ಹೋಗುವಂತೆ ಮಾಡುತ್ತದೆ.
06:34 go 10,250 (ಗೊ ಟೆನ್ ಕಾಮಾ ಟುಫಿಫ್ಟಿ) ಎಂಬ ಕಮಾಂಡ್ Turtle ಗೆ ಕ್ಯಾನ್ವಾಸಿನ ಎಡಭಾಗದಿಂದ 10 pixels ಮತ್ತು ಮೇಲ್ಭಾಗದಿಂದ 250 pixels ಗಳಷ್ಟು ಮುಂದೆ ಸಾಗುವಂತೆ ಆದೇಶಿಸುತ್ತದೆ.
06:48 “Turtle” ಎಲ್ಲಾ print ಕಮಾಂಡ್-ಗಳನ್ನು ಯಾವುದೇ ಸಮಯದ ಅಂತರ ಇಲ್ಲದೆಯೇ ತೋರಿಸುತ್ತದೆ.
06:54 “Wait 2” ಎಂಬ ಕಮಾಂಡ್, ಮುಂದಿನ ಪ್ರೋಗ್ರಾಂ ಎಕ್ಸಿಕ್ಯೂಟ್ ಮಾಡುವ ಮೊದಲು Turtle ಅನ್ನು 2 ಸೆಕೆಂಡ್ “wait” ಮಾಡುವಂತೆ ಸೂಚಿಸುತ್ತದೆ.
07:04 “print” ಕಮಾಂಡ್ “string” ನ ಎರಡು ಉದ್ಧರಣ ಚಿಹ್ನೆಗಳನ್ನು ತೋರಿಸುತ್ತದೆ ಮತ್ತು $r ವೇರಿಯೆಬಲ್-ಅನ್ನು ಕೂಡ ತೋರಿಸುತ್ತದೆ.
07:13 ಈಗ ನಾನು ಪ್ರೋಗ್ರಾಮ್-ಅನ್ನು ರನ್ ಮಾಡುವುದಕ್ಕಾಗಿ “ Run” ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ.
07:17 ಮೊದಲ 15 ಸಹಜ ಸಂಖ್ಯೆಗಳ ಮೊತ್ತ ಮತ್ತು ಮೊದಲ 15 ಸಹಜ ಸಂಖ್ಯೆಗಳು ಕ್ಯಾನ್ವಾಸಿನ ಮೇಲೆ ಕಾಣುತ್ತಿವೆ.
07:27 Turtle ಕ್ಯಾನ್ವಾಸಿನ ಮೇಲೆ 15 ಸ್ಟೆಪ್ಸ್ ಮುಂದೆ ಹೋಗುತ್ತದೆ.
07:32 ಇದರೊಂದಿಗೆ ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ.
07:37 ಈಗ ಸಂಕ್ಷೇಪವಾಗಿ,
07:40 ಈ ಟ್ಯುಟೋರಿಯಲ್-ನಲ್ಲಿ ನಾವು,
07:44 “while”' ಲೂಪ್ ಮತ್ತು “for” ಲೂಪ್ ಉಪಯೋಗಿಸುವುದನ್ನು ಕಲಿತಿದ್ದೇವೆ.
07:47 ಅಸೈನ್-ಮೆಂಟ್-ಗಾಗಿ ನಾನು ನಿಮಗೆ ಕೆಲವು ಪ್ರೋಗ್ರಾಂಗಳನ್ನು ಬರೆಯಲು ಸೂಚಿಸುತ್ತೇನೆ. ಅವುಗಳಿಂದ,
07:54 “while” ಲೂಪ್-ಅನ್ನು ಉಪಯೋಗಿಸಿ 2 ರ ಗುಣನ,
07:58 “for” ಲೂಪ್ ಉಪಯೋಗಿಸಿ ಒಂದು ಸಂಖ್ಯೆಯ ಮಗ್ಗಿ(ಟೇಬಲ್ಸ್)ಯನ್ನು ತಯಾರಿಸಿ.
08:03 ಈ URL ನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. (http://spoken-tutorial.org/What is a Spoken Tutorial)
08:08 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪವಾಗಿ ತಿಳಿಸುತ್ತದೆ.
08:12 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
08:17 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
08:20 ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
08:23 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
08:27 ಹೆಚ್ಚನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
08:36 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ Talk to a Teacher project ನ ಒಂದು ಭಾಗವಾಗಿದೆ.
08:41 ಇದು ಭಾರತ ಸರ್ಕಾರದ MHRD ಯ ICT ಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
08:48 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ]
08:54 ಈ ಪಾಠದ ಅನುವಾದಕಿ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ. ಐ. ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Pratik kamble, Vasudeva ahitanal