Thunderbird/C2/Address-Book/Kannada
From Script | Spoken-Tutorial
Revision as of 17:10, 20 August 2014 by Vasudeva ahitanal (Talk | contribs)
Time | Narration |
---|---|
00:00 | ಮೋಜಿಲಾ ಥಂಡರ್ ಬರ್ಡ್ ನಲ್ಲಿನ ಅಡ್ಡ್ರೆಸ್ ಬುಕ್ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ಅಡ್ಡ್ರೆಸ್ ಬುಕ್ ಗೆ ವಿಳಾಸಗಳನ್ನು ಸೇರಿಸಲು, ನೋಡಲು, ಬದಲಾಯಿಸಲು ಮತ್ತು ಡಿಲೀಟ್ ಮಾಡಲು ಕಲಿಯಲಿದ್ದೇವೆ. |
00:14 | ಇದರೊಂದಿಗೆ ನಾವು. |
00:16 | ಹೊಸ ಅಡ್ಡ್ರೆಸ್ ಬುಕ್ ಅನ್ನು ಕ್ರಿಯೇಟ್ ಮಾಡಲು, |
00:18 | ಈಗಾಗಲೇ ರಚಿತವಾಗಿರುವ ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡಲು, |
00:20 | ಬೇರೆ ಮೇಲ್ ಅಕೌಂಟ್ ನಿಂದ ವಿಳಾಸಗಳನ್ನು ಆಮದು (Import) ಮಾಡಿಕೊಳ್ಳಲು ಕಲಿಯಲಿದ್ದೇವೆ: |
00:24 | ಇಲ್ಲಿ ನಾವು ಉಬಂಟು 13:0:1 ನಲ್ಲಿ ಮೋಜಿಲಾ ಥಂಡರ್ ಬರ್ಡ್ 12:04 ಅನ್ನು ಉಪಯೋಗಿಸುತ್ತಿದ್ದೇವೆ: |
00:32 | ಅಡ್ಡ್ರೆಸ್ ಬುಕ್ ಎಂದರೇನು? |
00:34 | ಮೊಬೈಲ್ ಫೋನ್ ನಲ್ಲಿನ Contacts ಎಂಬ ವಿಶೇಷತೆಯ (feature) ರೀತಿಯಲ್ಲೇ ಇಲ್ಲಿ ಅಡ್ಡ್ರೆಸ್ ಬುಕ್ ಕೆಲಸ ಮಾಡುತ್ತದೆ: |
00:39 | ವಿಳಾಸಗಳನ್ನು ರಚಿಸಲು ಮತ್ತು ನಿರ್ವಹಿಸಲು ಕೂಡ ಅಡ್ಡ್ರೆಸ್ ಬುಕ್ ಅನ್ನು ಬಳಸಬಹುದು: |
00:45 | ಥಂಡರ್ ಬರ್ಡ್ ನಲ್ಲಿ ಎರಡು ರೀತಿಯ ಅಡ್ಡ್ರೆಸ್ ಬುಕ್ ಗಳು ಇವೆ: |
00:48 | Personal address book ಹೊಸ ವಿಳಾಸಗಳನ್ನು ರಚಿಸಲು ಸಹಕರಿಸುತ್ತದೆ. |
00:53 | Collected address book ಸ್ವತಃ outgoing ಅಥವಾ sent mails ನಿಂದ ಈ-ಮೇಲ್ ಅಡ್ಡ್ರೆಸ್ ಗಳನ್ನು ಸಂಗ್ರಹಿಸುತ್ತದೆ:. |
00:59 | ಲಾಂಚರ್ ನಲ್ಲಿರುವ ಥಂಡರ್ ಬರ್ಡ್ ಐಕಾನ್ ಅನ್ನು ಕ್ಲಿಕ್ ಮಾಡಿ: |
01:02 | Thunderbird ವಿಂಡೋ ಓಪನ್ ಆಗುತ್ತದೆ. |
01:05 | ಈಗ Personal Address Book ಗೆ ವಿಳಾಸಗಳನ್ನು ಸೇರಿಸಲು ಕಲಿಯೋಣ. |
01:10 | ಮೇನ್ ಮೆನುವಿನಿಂದ Tools ಮತ್ತು Address Book ಅನ್ನು ಕ್ಲಿಕ್ ಮಾಡಿ. |
01:14 | Address Book ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
01:17 | ಎಡ ಫಲಕದಲ್ಲಿ ನೀವು Personal ಮತ್ತು Collected Address Books ಅನ್ನು ನೋಡಬಹುದು. |
01:23 | ಎಡ ಫಲಕದಲ್ಲಿ ಡಿಫಾಲ್ಟ್ ನಿಂದಲೇ Personal Address Book ಸೆಲೆಕ್ಟ್ ಆಗಿದೆ. |
01:28 | ಬಲ ಫಲಕ ಎರಡು ವಿಭಾಗಗಳನ್ನು ಹೊಂದಿದೆ. |
01:31 | ಮೇಲಿನ ಭಾಗ ವಿಳಾಸಗಳನ್ನು ತೋರಿಸುತ್ತದೆ. |
01:34 | ಕೆಳಗಿನ ಭಾಗ ಸೆಲೆಕ್ಟ್ ಮಾಡಿರುವ ವಿಳಾಸದ ಸಮಗ್ರ ಮಾಹಿತಿಯನ್ನು ತೋರಿಸುತ್ತದೆ: |
01:40 | ಈಗ ಹೊಸ ವಿಳಾಸವನ್ನು ರಚಿಸೋಣ. |
01:44 | ಟೂಲ್ ಬಾರ್ ನಿಂದ New Contact ಅನ್ನು ಕ್ಲಿಕ್ ಮಾಡಿ. |
01:47 | New Contact ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ: |
01:50 | Contact ಟ್ಯಾಬ್ ಅನ್ನು ಕ್ಲಿಕ್ ಮಾಡಿ: |
01:53 | First ಎಂಬಲ್ಲಿ AMyNewContact ಎಂದು ನಮೂದಿಸಿ. |
01:57 | USERONE at GMAIL dot COM ಅನ್ನು Email ಎಂಬಲ್ಲಿ ನಮೂದಿಸಿ: |
02:02 | Display ಫೀಲ್ಡ್ ನಲ್ಲಿ First Name ತಾನಗಿಯೇ ನಮೂದಿಸಲ್ಪಟ್ಟಿರುವುದನ್ನು ಗಮನಿಸಿ. |
02:10 | Private ಟ್ಯಾಬ್ ಅನ್ನು ಕ್ಲಿಕ್ ಮಾಡಿ, ಈ ಟ್ಯಾಬ್ ಅನ್ನು ಸಂಪೂರ್ಣ ಅಂಚೆಯ ವಿಳಾಸವನ್ನು ಸಂಗ್ರಹಿಸಲು ಬಳಸಬಹುದು. |
02:18 | ಇದರೊಂದಿಗೆ ನೀವು Work, Other ಮತ್ತು Photo ಟ್ಯಾಬ್ ಅನ್ನು ಬಳಸಿ ಆ ವಿಳಾಸಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಮತ್ತು ಭಾವಚಿತ್ರವನ್ನು ಸಂಗ್ರಹಿಸಬಹುದು. |
02:26 | OK ಅನ್ನು ಕ್ಲಿಕ್ ಮಾಡಿ: |
02:29 | ಇದೀಗ ವಿಳಾಸವು ಅಡ್ಡ್ರೆಸ್ ಬುಕ್ ಗೆ ಸೇರಲ್ಪಟ್ಟಿದೆ ಮತ್ತು ಬಲ ಫಲಕದಲ್ಲಿ ಕಾಣಿಸುತ್ತಿದೆ: |
02:34 | ಇದೇ ರೀತಿಯಲ್ಲ್ಲಿ VMyNewContact ಮತ್ತು ZMyNewContact ಅನ್ನು ಸೇರಿಸೋಣ. |
02:48 | ಹೆಸರಿನ ಆಧಾರದಲ್ಲಿ ವಿಳಾಸಗಳನ್ನು ವಿಂಗಡಿಸಲು ಬಯಸಿದಾದಲ್ಲಿ , |
02:52 | ಮೇನ್ ಮೇನ್ಯುವಿನಿಂದ, View, Sort by ಮತ್ತು Name ಅನ್ನು ಕ್ಲಿಕ್ ಮಾಡಿ. |
02:58 | ವಿಳಾಸಗಳು ಡೀಫಾಲ್ಟ್ ನಿಂದಲೇ ಆರೋಹಣ ಕ್ರಮದಲ್ಲಿ ವರ್ಗೀಕೃತವಾಗಿರುವುದನ್ನು ಗಮನಿಸಿ : |
03:04 | ಇವುಗಳನ್ನು ಆರೋಹಣ ಕ್ರಮದಲ್ಲಿ ವರ್ಗೀಕರಿಸಲು, ಮೇನ್ ಮೆನ್ಯುವಿಂದ, View, Sort by ಮತ್ತು Ascending ಅನ್ನು ಕ್ಲಿಕ್ ಮಾಡಿ. |
03:13 | ಇದಕ್ಕೆ ಬದಲಾಗಿ, Address Book ಡಯಲಾಗ್ ಬಾಕ್ಸ್ ನ ಬಲ ಫಲಕದಿಂದ, Name ಅನ್ನು ಕ್ಲಿಕ್ ಮಾಡಿ. |
03:19 | ಇದೀಗ ಹೆಸರುಗಳು ಅವರೋಹಣ ಕ್ರಮದಲ್ಲಿ ವರ್ಗೀಕೃತವಾಗಿದೆ! |
03:24 | ಇದೀಗ ವಿಳಾಸವನ್ನು ಹುಡುಕೋಣ (search). |
03:27 | ನಾವೀಗ ಈ-ಮೇಲ್ ಅಥವಾ ಹೆಸರುಗಳನ್ನು ಬಳಸಿ ವಿಳಾಸಗಳನ್ನು ಹುಡುಕೋಣ: |
03:33 | ಈಗ AMyNewContact ಎಂಬ ಹೆಸರನ್ನು ಹುಡುಕೋಣ : |
03:37 | Address Book ಡಯಲಾಗ್ ಬಾಕ್ಸ್ ಗೆ ಹೋಗಿ: |
03:40 | ಸರ್ಚ್ ಫೀಲ್ಡ್ ನಲ್ಲಿ, AMyNewContact ಎಂದು ನಮೂದಿಸಿ. |
03:45 | ಸರ್ಚ್ ಫೀಲ್ಡ್ ಅನ್ನು ಗಮನಿಸಿ: |
03:47 | ದೊಡ್ದದಾದ ಗ್ಲಾಸ್ ಐಕಾನ್ ನ ಬದಲಾಗಿ , ಸಣ್ಣದಾದ ಕ್ರಾಸ್ ಐಕಾನ್ ಕಾಣಿಸುತ್ತದೆ. |
03:54 | AMyNewContact ಎಂಬ ವಿಳಾಸವು ಮಾತ್ರ ಮೇಲಿನ ಬಲ ಫಲಕದಲ್ಲಿ ಕಾಣಿಸುತ್ತಿದೆ: |
04:01 | ಈದೀಗ, ಸರ್ಚ್ ಫೀಲ್ಡ್ ನಲ್ಲಿ ಕ್ರಾಸ್ ಐಕಾನ್ ಅನ್ನು ಕ್ಲಿಕ್ ಮಾಡಿ. |
04:05 | ಮೇಲಿನ ಬಲ ಫಲಕದಲ್ಲಿ ಎಲ್ಲಾ ವಿಳಾಸಗಳು ಕಾಣಿಸುತ್ತವೆ. |
04:09 | ಈ ಟ್ಯುಟೋರಿಯಲ್ ಅನ್ನು ಅಲ್ಲಿಗೆ ನಿಲ್ಲಿಸಿ, ಈ ಅಸೈನ್ ಮೆಂಟ್ ಅನ್ನು ಮಾಡಿ: |
04:13 | ವಿಷವನ್ನಾಧರಿಸಿ ಈ –ಮೇಲ್ ಅನ್ನು ಹುಡುಕಿ: |
04:16 | ZMyContact ಎಂಬ ವಿಳಾಸಕ್ಕೆ ಸಂಬಂಧಿಸಿದ ಮಾಹಿತಿಗಳು ಬದಲಾಗಿದ್ದಲ್ಲಿ, |
04:21 | ಈ ಮಾಹಿತಿಗಳನ್ನು ಸರಿಪಡಿಸಬಹುದೆ? ಹೌದು, ಸರಿಪಡಿಸಬಹುದು! |
04:26 | ಬಲ ಫಲಕದಿಂದ, ZMyNewContact ಅನ್ನು ಸೆಲೆಕ್ಟ್ ಮಾಡೋಣ: |
04:30 | ಈಗ ಅದರ ಮೇಲೆ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡೋಣ ಮತ್ತು Properties ಅನ್ನು ಆರಿಸೋಣ. |
04:36 | Edit Contact ForZMyNewContact ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
04:42 | ವಿಳಾಸದ ಹೆಸರನ್ನು MMyNewContact ಎಂದು ಬದಲಾಯಿಸೋಣ: |
04::46 | Display ಫೀಲ್ಡ್ ನಲ್ಲಿ ಕೂಡ MMyNewContact ಎಂದು ಹೆಸರು ಬದಲಿಸೋಣ. |
04:53 | Work Title ಮತ್ತು Department ಗಳನ್ನು ಇದಕ್ಕೆ ಸೇರಿಸಬೇಕು. |
04:57 | Work ಟ್ಯಾಬ್ ಅನ್ನು ಕ್ಲಿಕ್ ಮಾಡಿ: |
04:59 | Title ನಲ್ಲಿ Manager ಎಂದು ಮತ್ತು Department ನಲ್ಲಿ HR ಎಂದು ನಮೂದಿಸಿ:OK ಅನ್ನು ಕ್ಲಿಕ್ ಮಾಡಿ. |
05:06 | ಕೆಳಗಿನ ಬಲ ಫಲಕದಲ್ಲಿ ವಿಳಾಸದ ಬಗೆಗಿನ ವಿವರಗಳು ಪುನಾರಚಿತವಾಗಿರುದನ್ನು(updated) ಗಮನಿಸಿ. |
05:13 | ಇದೀಗ ಥಂಡರ್ ಬರ್ಡ್ ನಿಂದ ಅನಗತ್ಯ ವಿಳಾಸಗಳನ್ನು ಡಿಲೀಟ್ ಮಾಡುವುದು ಹೇಗೆ? ಎಂದು ಕಲಿಯೋಣ. |
05:18 | ಮೊದಲು ವಿಳಾಸವನ್ನು ಸೆಲೆಕ್ಟ್ ಮಾಡಿ: |
05:20 | ಕಾಂಟೆಕ್ಸ್ಟ್ (context) ಮೆನ್ಯು ವನ್ನು ನೋಡಲು ವಿಳಾಸದ ಮೇಲೆ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ ನಂತರ Delete ಅನ್ನು ಕ್ಲಿಕ್ ಮಾಡಿ: |
05:25 | confirmation ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ: OK ಅನ್ನು ಕ್ಲಿಕ್ ಮಾಡಿ: |
05:30 | ಈಗ ವಿಳಾಸವು ಡಿಲೀಟ್ ಆಗಿದೆ ಮತ್ತು ಇದು ವಿಳಾಸದ ಪಟ್ಟಿಯಲ್ಲಿ ಕಾಣಿಸುವುದಿಲ್ಲ: |
05:37 | ಥಂಡರ್ ಬರ್ಡ್ ನಿಮಗೆ ನಿಮ್ಮದೇ ಆದ ಅಡ್ಡ್ರೆಸ್ ಬುಕ್ ಅನ್ನು ರಚಿಸಲು ಅವಕಾಶವನ್ನು ಕೊಡುತ್ತದೆ: |
05:41 | Personal Address Book ಮತ್ತು Collected Addresses ಎಂಬೆರಡು ಅಡ್ಡ್ರೆಸ್ ಬುಕ್ ಗಳು ಡೀಫಾಲ್ಟ್ ನಿಂದಲೇ ಇದರೊಂದಿಗೆ ಇರುತ್ತವೆ. |
05:50 | ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸೋಣ. |
05:53 | Address Book ಡಯಲಾಗ್ ಬಾಕ್ಸ್ ಅನ್ನು ಓಪನ್ ಮಾಡಿಯೇ ಇಟ್ಟುಕೊಂಡಿರುವುದನ್ನು ಮರೆಯದಿರಿ. |
05:58 | ಮೇನ್ ಮೆನುವಿನಿಂದ, File ಗೆ ಹೋಗಿ, New ಅನ್ನು ಕ್ಲಿಕ್ ಮಾಡಿ ಮತ್ತು Address Book ಅನ್ನು ಸೆಲೆಕ್ಟ್ ಮಾಡಿ. |
06:04 | New Address Book ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
06:08 | Address Book Name ಫೀಲ್ಡ್, Office Contacts ಎಂದು ನಮೂದಿಸಿ: OK ಎಂದು ಕ್ಲಿಕ್ ಮಾಡಿ: |
06:16 | ನಾವು ರಚಿಸಿರುವ ಹೊಸ ಅಡ್ಡ್ರೆಸ್ ಬುಕ್ ಎಡ ಫಲಕದಲ್ಲಿ ಕಾಣಿಸುತ್ತಿದೆ: |
06:20 | ಡೀಫಾಲ್ಟ್ ಅಡ್ಡ್ರೆಸ್ ಬುಕ್ ಅನ್ನು ಬಳಸಿದ ರೀತಿಯಲ್ಲೇ ಈ ಅಡ್ಡ್ರೆಸ್ ಬುಕ್ ಅನ್ನು ಬಳಸಬಹುದು: |
06:28 | ಈ ಟ್ಯುಟೋರಿಯಲ್ ಅನ್ನು ಅಲ್ಲಿಗೆ ಸ್ವಲ್ಪ ನಿಲ್ಲಿಸಿ ಈ ಅಸೈನ್ ಮೆಂಟ್ (assignment) ಅನ್ನು ಮಾಡಿ. |
06:31 | ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸಿ ಅದಕ್ಕೆ ವಿಳಾಸಗಳನ್ನು ಸೇರಿಸಿ: |
06:36 | ಇನ್ನು ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡಲು ಕಲಿಯೋಣ. |
06:41 | ನೀವು ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡುವಾಗ ಅದರಲ್ಲಿನ ಎಲ್ಲಾ ವಿಳಾಸಗಳು ಕೂಡ ಡಿಲೀಟ್ ಆಗುತ್ತವೆ: |
06:50 | address book Office Contacts ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡಲು ಎಡ ಫಲಕದಿಂದ ಅದನ್ನು ಸೆಲೆಕ್ಟ್ ಮಾಡಿ. |
06:56 | ಕಾಂಟೆಕ್ಸ್ಟ್ ಮೆನ್ಯು ವನ್ನು ನೋಡಲು ಅದರ ಮೇಲೆ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು Delete ಅನ್ನು ಸೆಲೆಕ್ಟ್ ಮಾಡಿ: |
07:01 | ಡಿಲೀಟ್ ಮಾಡುವುದನ್ನು ಖಚಿತಪಡಿಸಲು delete address book ಡಯಲಾಗ್ ಬಾಕ್ಸ್ ಬಾಕ್ಸ್ ಕಾಣಿಸುತ್ತದೆ: OK ಅನ್ನು ಕ್ಲಿಕ್ ಮಾಡಿ. |
07:10 | ಇದೀಗ ಅಡ್ಡ್ರೆಸ್ ಬುಕ್ ಡಿಲೀಟ್ ಆಗುತ್ತದೆ. |
07:14 | ಈ ಟ್ಯುಟೊರಿಯಲ್ ಅನ್ನು ಸ್ವಲ್ಪ ನಿಲ್ಲಿಸಿ, ಈ ಕೆಳಗಿನ ಅಸೈನ್ ಮೆಂಟ್ ಅನ್ನು ಮಾಡಿ: |
07:17 | Additional Office Contacts ಎನ್ನುವ ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸಿ. |
07:22 | Address Book ಟೂಲ್ ಬಾರ್ ನಲ್ಲಿರುವ Edit ಆಪ್ಷನ್ ಅನ್ನು ಅನ್ನು ಬಳಸಿ. |
07:27 | ಈ ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡಿ: |
07:30 | ಮೇನ್ ಮೆನ್ಯುವಿನಿಂದ Address Book ಡಯಲಾಗ್ ಬಾಕ್ಸ್ ನಲ್ಲಿ, Edit ಮತ್ತು Search Addresses ಅನ್ನು ಸೆಲೆಕ್ಟ್ ಮಾಡಿ. |
07:37 | ವಿಳಾಸಗಳನ್ನು ಹುಡುಕಲು Advanced Search ಆಪ್ಷನ್ ಅನ್ನು ಬಳಸಿ: |
07:43 | ಇತರ ಮೇಲ್ ಅಕೌಂಟ್ ಗಳಿಂದ ವಿಳಾಸಗಳನ್ನು ಆಮದು (import) ಮಾಡಲು ಕೂಡ ಥಂಡರ್ ಬರ್ಡ್ ಅನುವು ಮಾಡಿಕೊಡುತ್ತದೆ. |
07:48 | ಈ ರೀತಿಯಲ್ಲಿ ನಾವು ವಿಳಾಸದ ಮಾಹಿತಿಗಳನ್ನು ಕಳೆದುಕೊಳ್ಳದೆ ಅವುಗಳನ್ನು ಪುನಾರಚಿಸಬಹುದು (update): |
07:55 | ಜೀ-ಮೇಲ್ ಅಕೌಂಟ್ ನಿಂದ ವಿಳಾಸಗಳನ್ನು ಆಮದು (import) ಮಾಡಿಕೊಳ್ಳೋಣ |
07:59 | ಮೊದಲಿಗೆ ಜೀ-ಮೇಲ್ ಅಕೌಂಟ್ ಅನ್ನು ಓಪನ್ ಮಾಡಿ. |
08:02 | ಹೊಸ ಬ್ರೌಸರ್ ಅನ್ನು ಓಪನ್ ಮಾಡಿ ಮತ್ತು www:gmail:com ಎಂಬ url ಅನ್ನು ನಮೂದಿಸಿ: Enter ಅನ್ನು ಒತ್ತಿ: |
08:12 | ಜೀ-ಮೇಲ್ ನ ಮುಖ ಪುಟ (ಹೋಮ್ ಪೇಜ್) ಕಾಣಿಸುತ್ತದೆ. |
08:15 | STUSERONE at gmail dot com ಎಂಬ Username ಅನ್ನು ಮತ್ತು password ಅನ್ನು ನಮೂದಿಸಿ. |
08:24 | Sign In ಅನ್ನು ಕ್ಲಿಕ್ ಮಾಡಿ: ಜೀ-ಮೇಲ್ ವಿಂಡೋ ಕಾಣಿಸುತ್ತದೆ. |
08:29 | ಈ ಟ್ಯುಟೋರಿಯಲ್ ಗಾಗಿ ನಾವು ಜೀ-ಮೇಲ್ ನಲ್ಲಿ ನಾಲ್ಕು ವಿಳಾಸಗಳನ್ನು ರಚಿಸಿದ್ದೇವೆ. |
08:35 | ಜೀ-ಮೇಲ್ ವಿಂಡೋವಿನ ಮೇಲಿನ ಎಡ ಭಾಗದಲ್ಲಿ, Gmail ಮತ್ತು Contacts ಅನ್ನು ಕ್ಲಿಕ್ ಮಾಡಿ: |
08:41 | Contacts ಟ್ಯಾಬ್ ಕಾಣಿಸುತ್ತದೆ: |
08:44 | More ಅನ್ನು ಕ್ಲಿಕ್ ಮಾಡಿ ಮತ್ತು Export ಅನ್ನು ಸೆಲೆಕ್ಟ್ ಮಾಡಿ. |
08:48 | Export contacts ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
08:51 | Which contacts do you want to export? ಫೀಲ್ಡ್ ನಲ್ಲಿ, All contacts ಅನ್ನು ಸೆಲೆಕ್ಟ್ ಮಾಡಿ. |
08:58 | Which export format? ಫೀಲ್ಡ್ ನಲ್ಲಿ, Outlook CSV format ಅನ್ನು ಸೆಲೆಕ್ಟ್ ಮಾಡಿ: Export ಅನ್ನು ಸೆಲೆಕ್ಟ್ ಮಾಡಿ. |
09:06 | Opening contacts:csv ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
09:11 | Save File ಅನ್ನು ಸೆಲೆಕ್ಟ್ ಮಾಡಿ ಮತ್ತು OK ಅನ್ನು ಕ್ಲಿಕ್ ಮಾಡಿ. |
09:15 | Downloads ಡಯಲಾಗ್ ಬಾಕ್ಸ್ ಕಾಣಿಸುತ್ತದೆ: |
09:18 | ಇದೊಂದು ದಾಖಲೆಗಳು (document) ಸೇವ್ ಆಗುವ ಡೀಫಾಲ್ಟ್ ಫೋಲ್ಡರ್ ಆಗಿದೆ: |
09:23 | ಈ ಫೈಲ್ contacts:csv ಎಂದು ಡೀಫಾಲ್ಟ್ Downloads ಫೋಲ್ಡರ್ ನಲ್ಲಿ ಸೇವ್ ಆಗಿದೆ. |
09:30 | Downloads ಡಯಲಾಗ್ ಬಾಕ್ಸ್ ಅನ್ನು ಕ್ಲೊಸ್ ಮಾಡಿ: |
09:34 | ಮೇನ್ ಮೆನ್ಯುವಿನಿಂದ, Tools ಅನ್ನು ಕ್ಲಿಕ್ ಮಾಡಿ ಮತ್ತು Import ಅನ್ನು ಸೆಲೆಕ್ಟ್ ಮಾಡಿ. |
09:39 | Import ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
09:42 | Address Books ಅನ್ನು ಸೆಲೆಕ್ಟ್ ಮಾಡಿ: Next ಅನ್ನು ಕ್ಲಿಕ್ ಮಾಡಿ. |
09:47 | Select type of file ನ ಸೂಚಿಯಿಂದ (ಲಿಸ್ಟ್) ನಿಂದ, Text file ನ ಮೇಲ್ ನ ಮೇಲೆ ಕ್ಲಿಕ್ ಮಾಡಿ, Next ಅನ್ನು ಕ್ಲಿಕ್ ಮಾಡಿ. |
09:54 | Downloads ಫೋಲ್ಡರ್ ಅನ್ನು ಬ್ರೌಸ್ ಮಾಡಿ: |
09:57 | Select which types of files are shown ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು All Files ಅನ್ನು ಸೆಲೆಕ್ಟ್ ಮಾಡಿ: |
10:04 | contacts:csv ಸೆಲೆಕ್ಟ್ ಮಾಡಿ: Open ಅನ್ನು ಕ್ಲಿಕ್ ಮಾಡಿ. |
10:10 | Import Address Book ಡಯಲಾಗ್ ಬಾಕ್ಸ್ ಕಾಣಿಸುತ್ತದೆ: |
10:14 | First record contains field names ಬಾಕ್ಸ್ ಅನ್ನು ಗುರುತಿಸಿರುದನ್ನು ಖಚಿತಪಡಿಸಿಕೊಳ್ಳಿ: |
10:20 | ಈ ಟ್ಯುಟೋರಿಯಲ್ ನಲ್ಲಿ ನಾವು, ಕೇವಲ First Name, Last Name ಮತ್ತು Primary Email ಫೀಲ್ಡ್ ಗಳನ್ನು ಗುರುತಿಸಬೇಕು ಮತ್ತು ಸರಿ ಹೊಂದಿಸಬೇಕು: |
10:28 | ಎಡ ಬದಿಯ ಇನ್ನಿತರ ಫೀಲ್ಡ್ ಗಳನ್ನು ಗುರುತಿಸದಿರಿ. |
10:33 | ಎಡ ಬದಿಯ First Name ಬಲ ಬದಿಯ First Name ನೊಂದಿಗೆ ಈಗಾಗಲೇ ಜೋಡಣೆಗೊಂಡಿದೆ (aligned): |
10:39 | Move Up ಮತ್ತು Move Down ಬಟನ್ ಗಳನ್ನು ಮೋಝಿಲಾ ಥಂಡರ್ ಬರ್ಡ್ ನ ಎಡ ಬದಿಯ Address Book fields ಕಾಲಮ್(column) ಅನ್ನು |
10:47 | ಬಲ ಬದಿಯ Gmail Record data to import ಕಾಲಮ್(column) ಗೆ ಸರಿ ಹೊಂದಿಸಲು ಬಳಸಬೇಕು. |
10:52 | ಎಡ ಬದಿಗಿರುವ Last Name ಫೀಲ್ಡ್ ಅನ್ನು ಸೆಲೆಕ್ಟ್ ಮಾಡಿ ಮತ್ತು Move Down ಬಟನ್ ಅನ್ನು ಕ್ಲಿಕ್ ಮಾಡಿ. |
10:58 | Address Book fields ಕಾಲಮ್ ನಲ್ಲಿರುವ Last Name ಮತ್ತು Record data to import ಕಾಲಮ್ ನ Last Name ಜೋಡಣೆಗೊಂಡಿರುವುದನ್ನು ಗಮನಿಸಿ. |
11:07 | Primary Email ಅನ್ನು ಸೆಲೆಕ್ಟ್ ಮಾಡಿ ಮತ್ತು Move Down ಬಟನ ಅನ್ನು ಕ್ಲಿಕ್ ಮಾಡಿ, ಅದು E-mail Address ನೊಂದಿಗೆ ಜೋಡಣೆಗೊಳ್ಳುವ ತನಕ ಕಾಯಿರಿ: ನಂತರ OK ಅನ್ನು ಕ್ಲಿಕ್ ಮಾಡಿ. |
11:17 | ಅಡ್ಡ್ರೆಸ್ ಬುಕ್ ಯಶಸ್ವಿಯಾಗಿ ರವಾನೆ (importe) ಆಗಿದೆ ಎಂದು ಮೆಸೇಜ್ ಕಾಣಿಸುತ್ತದೆ: Finish ಅನ್ನು ಕ್ಲಿಕ್ ಮಾಡಿ: |
11:24 | ಇದೀಗ ಜೀ-ಮೇಲ್ ಅಡ್ಡ್ರೆಸ್ ಬುಕ್ ಥಂಡರ್ ಬರ್ಡ್ ಗೆ ವರ್ಗಾಯಿಸಲ್ಪಟ್ಟಿದೆ: |
11:28 | Address Book ಡಯಲಾಗ್ ಬಾಕ್ಸ್ ನ ಎಡ ಫಲಕದಲ್ಲಿ, contacts ಎಂಬ ಹೊಸ ಫೋಲ್ದರ್ ಸೇರ್ಪಡೆಗೊಂಡಿದೆ. |
11:36 | contacts ಅನ್ನು ಕ್ಲಿಕ್ ಮಾಡಿ: |
11:38 | email ವಿಳಾಸದೊಂದಿರುವ First Names ಗಳು ಕಾಣಿಸುತ್ತವೆ: |
11:43 | ಜೀ-ಮೇಲ್ ಅಡ್ಡ್ರೆಸ್ ಬುಕ್ ಅನ್ನು ನಾವೀಗ ಥಂಡರ್ ಬರ್ಡ್ ಗೆ ರವಾನಿಸಿಕೊಂಡಿದ್ದೇವೆ! |
11:48 | ಮೇಲಿನ ಎಡ ಮೂಲೆಯಲ್ಲಿರುವ ಕೆಂಪು ಬಣ್ಣದ ಕ್ರಾಸ್ ಅನ್ನು ಒತ್ತುವ ಮೂಲಕ ಅಡ್ಡ್ರೆಸ್ ಬುಕ್ ಅನ್ನು ಕ್ಲೋಸ್ ಮಾಡಿ: |
11:55 | ಇದೀಗ ಥಂಡರ್ ಬರ್ಡ್ ನಿಂದ ಲಾಗ್ ಔಟ್ ಆಗೋಣ: ಮೇನ್ ಮೆನ್ಯುವಿನಿಂದ, File ಮತ್ತು Quit ಅನ್ನು ಕ್ಲಿಕ್ ಮಾಡಿ. |
12:02 | ಇಲ್ಲಿಗೆ ಥಂಡರ್ ಬರ್ಡ್ ಬಗೆಗಿನ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ: |
12:06 | ಈ ಟ್ಯುಟೋರಿಯಲ್ ನಲ್ಲಿ ಅಡ್ಡ್ರೆಸ್ ಬುಕ್ ಗೆ ವಿಳಾಸಗಳನ್ನು ಸೇರಿಸಲು, ನೋಡಲು, ಬದಲಾಯಿಸಲು ಮತ್ತು ಡಿಲೀಟ್ ಮಾಡಲು ಕಲಿಯಲಿತಿದ್ದೇವೆ: ಇದರೊಂದಿಗೆ |
12:17 | ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸಲು, |
12:19 | ಈಗಾಗಲೇ ರಚಿತವಾಗಿರುವ ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡಲು, |
12:21 | ಬೇರೆ ಮೇಲ್ ಅಕೌಂಟ್ ನಿಂದ ವಿಳಾಸಗಳನ್ನು ಆಮದು (Import) ಮಾಡಿಕೊಳ್ಳಲು ಕಲಿತಿದ್ದೇವೆ: |
12:25 | ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಕೊಡಲಾಗಿದೆ: |
12:27 | ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸಿ: |
12:29 | ವಿಳಾಸಗಳನ್ನು ಸೇರಿಸಿ ಮತ್ತು ನೋಡಿ. |
12:32 | ನಿಮ್ಮ ಈ-ಮೇಲ್ ಐ:ಡಿ ಇಂದ ಥಂಡರ್ ಬರ್ಡ್ ಅಕೌಂಟ್ ಗೆ ವಿಳಾಸಗಳನ್ನು ಆಮದು (Import) ಮಾಡಿಕೊಳ್ಳಿ: |
12:38 | ಅಡ್ಡ್ರೆಸ್ ಬುಕ್ ಅನ್ನು ಆಮದು ಮಾಡಿಕೊಳ್ಳುವ ವೇಳೆಯಲ್ಲಿ ಎಲ್ಲಾ ಫೀಲ್ಡ್ ಗಳನ್ನು ಸರಿ ಹೊಂದಿಸಿ: |
12:43 | ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ. |
12:46 | ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ. |
12:50 | ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
12:56 | ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
12:59 | ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ: |
13:03 | ಹೆಚ್ಚಿನ ಮಾಹಿತಿಗಾಗಿ, contact @spoken-tutorial:org ಈ ಈ-ಮೇಲ್ ಮೂಲಕ ಸಂಪರ್ಕಿಸಿ: |
13:10 | ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ: |
13:14 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
13:22 | ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ: |
13:32 | ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ:ಐ:ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು: |