KTouch/S1/Configuring-Settings/Kannada

From Script | Spoken-Tutorial
Revision as of 16:18, 27 March 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00.00 ”ಕೇಟಚ್ ನಲ್ಲಿ ಸೆಟ್ಟಿಂಗ್ ಸಂರಚನೆ” ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00.04 ಈ ಟ್ಯುಟೋರಿಯಲ್ ನಲ್ಲಿ ನೀವು,
00.08 ಟ್ಯುಟೋರಿಯಲ್ ನ ಸ್ತರವನ್ನು ಹೇಗೆ ಬದಲಿಸುವುದು, ಟೈಪಿಂಗ್ ನ ವೇಗದ ವ್ಯವಸ್ಥಾಪನೆ ಹೇಗೆ,
00.13 ಶಾರ್ಟ್ಕಟ್ ಕೀಗಳನ್ನು ಹೇಗೆ ವಿನ್ಯಾಸಮಾಡುವುದು, ಟೂಲ್ ಬಾರ್ ಗಳನ್ನು ಹೇಗೆ ವಿನ್ಯಾಸಗೊಳಿಸುವುದು, ಟೈಪಿಂಗ್ ಮೆಟ್ರಿಕ್ಸ್ ಅನ್ನು ಹೇಗೆ ನೋಡುವುದು ಇತ್ಯಾದಿಗಳ ಬಗ್ಗೆ ಕಲಿಯುವಿರಿ.
00.20 ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ರಲ್ಲಿ ಕೇಟಚ್ 1.7.1 ರ ಉಪಯೋಗವನ್ನು ಮಾಡುತ್ತಿದ್ದೇವೆ.
00.27 ಈಗ “ಕೇಟಚ್” ಅನ್ನು ಒಪನ್ ಮಾಡೋಣ.
00.33 ನಾವು “Level 1” ರಲ್ಲಿ ಇದ್ದೇವೆ. ಎರಡನೇಯ ಸ್ತರಕ್ಕೆ ಹೋಗೋಣ.
00.40 ಎರಡನೇಯ ಸ್ತರಕ್ಕೆ ಹೋಗಲು ಲೆವೆಲ್ ಫೀಲ್ಡ್ ನ ಮುಂದೆ ಇರುವ ಟ್ರ್ಯಾಂಗಲ್ ಅನ್ನು ಒತ್ತಿ.
00.48 ನಾವು ದ್ವಿತೀಯ ಸ್ತರಕ್ಕೆ ಹೋದಾಗ ಏನಾಗುತ್ತದೆಯೆಂದು ಗಮನಿಸೋಣ.
00.52 "Teacher’s Line" ಎಂಬಲ್ಲಿನ ಅಕ್ಷರಗಳು ಬದಲಾಗುತ್ತವೆ.
00.56 "New Characters in this Level" ಎಂಬಲ್ಲಿ ತೋರುವ ಅಕ್ಷರಗಳೂ ಕೂಡಾ ಬದಲಾಗುತ್ತವೆ.
01.02 ಈ ಅಕ್ಷರಗಳನ್ನು ಈ ಸ್ತರದಲ್ಲಿ ಅಭ್ಯಾಸಮಾಡಬೇಕು.
01.07 ಈಗ ಟೈಪಿಂಗ್ ಅನ್ನು ಆರಂಭಿಸೋಣ.
01.09 ಈಗ ಯಾವ ಅಕ್ಷರವು "Teacher’s Line" ನಲ್ಲಿ ಇಲ್ಲವೋ ಆ ಅಕ್ಷರವನ್ನು ಟೈಪ್ ಮಾಡೋಣ.
01.14 "Student Line" ಎನ್ನುವುದು ಕೆಂಪುಬಣ್ಣಕ್ಕೆ ತಿರುಗುತ್ತದೆ.
01.17 ಮತ್ತೇನು ಬದಲಾಗುವುದನ್ನು ನೋಡುತ್ತೇವೆ?
01.19 Correctness ಎಂಬಲ್ಲಿ ಶೇಕಡಾ ಮೂಲ್ಯಾಂಕವು ಕೂಡಾ ಕಡಿಮೆಯಾಗುತ್ತದೆ.
01.23 Backspace ಒತ್ತಿ ದೋಷವನ್ನು ಅಳಿಸೋಣ.
01.27 ಈಗ "Training" ಎಂಬ ವಿಕಲ್ಪವನ್ನು ಸೆಟ್ ಮಾಡುವುದು ಹೇಗೆಂದು ನೋಡೋಣ.
01.31 "Training Options" ಎಂದರೇನು?
01.33 "Training options" ಎಂಬುದನ್ನು ನಾವು ಟೈಪಿಂಗ್ ನ ವೇಗ ಮತ್ತು ವಿಶುದ್ಧತೆಯ ಮಾನದಂಡವನ್ನು ಬದಲಿಸಲು ಉಪಯೋಗಿಸುತ್ತೇವೆ.
01.41 ನಾವು ಯಾವುದಾದರೊಂದು ವಿಶೇಷ ಸ್ತರದಲ್ಲಿನ ಟೈಪಿಂಗ್ ಸಾಲಿನ ಸಂಖ್ಯೆಯನ್ನೂ ಕೂಡಾ ನಮ್ಮಿಷ್ಟದಂತೆ ನಿರ್ಧಾರಿಸಬಹುದು.
01.47 ಮೈನ್ ಮೆನ್ಯುವಿನಲ್ಲಿ "Settings" ಅನ್ನು ಆಯ್ಕೆ ಮಾಡಿ "Configure Ktouch" ಎಂಬಲ್ಲಿ ಒತ್ತಿ.
01.52 "Configure – KTouch" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ.
01.56 "Configure – KTouch" ಎಂಬ ಡಯಲಾಗ್ ಬಾಕ್ಸ್ ನ ಎಡಬದಿಯಲ್ಲಿ "Training Options" ಎಂಬಲ್ಲಿ ಒತ್ತಿ.
02.02 ಬಲಬದಿಯಲ್ಲಿ ಈಗ ವಿವಿಧ "Training Options" ಕಾಣುತ್ತವೆ.
02.06 "Typing speed", "Correctness" ಮತ್ತು "Workload" ಇತ್ಯಾದಿಗಳಿಗೆ ಮೇಲೆ ಸೀಮೆಯನ್ನು ನಿರ್ಧರಿಸಿ.
02.13 "Limits to increase a level" ಎಂಬುದರ ಕೆಳಗೆ -
02.15 Typing Speed ಎಂಬುದನ್ನು 120 characters per minute ಎಂದು "Correctness" ಎಂಬುದನ್ನು 85% ಎಂದು
02.24 "Workload" ಎಂಬುದನ್ನು 1 ಎಂದು ನಿರ್ಧರಿಸಿ.
02.27 ಇದರ ಅರ್ಥ, ಪ್ರತಿ ಸ್ತರದಲ್ಲೂ ನಾವು ಒಂದೇ ಸಾಲನ್ನು ಟೈಪ್ ಮಾಡುತ್ತೇವೆ.
02.31 ಒಂದು ಸಾಲು ಮುಗಿದ ನಂತರ, ನಾವು ತಂತಾನೇ ಮುಂದಿನ ಸ್ತರಕ್ಕೆ ಹೋಗುತ್ತೇವೆ.
02.36 ನೀವು ಒಂದು ಸ್ತರವನ್ನು ಮುಗಿಸಿಯೇ ಮುಂದುವರೆಯಬೇಕೆಂದಿದ್ದಲ್ಲಿ "Complete whole training level before proceeding" ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ.
02.46 "Typing speed" ಮತ್ತು "Correctness" ಇವೆರಡಕ್ಕೂ ನ್ಯೂನತಮ ಸೀಮೆಯನ್ನು ನಿರ್ಧರಿಸಿ.
02.50 Limits to decrease a level ಎಂಬುದರ ಕೆಳಗೆ -


02.53 "Typing Speed" ಎಂಬುದನ್ನು "60” characters per minute ಎಂದು, Correctness ಎಂಬುದನ್ನು "60" ಎಂದು ನಿರ್ಧರಿಸಿ.
03.00 "Remember level for next program" ಎಂಬ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
03.06 "Apply" ಎಂಬಲ್ಲಿ ಕ್ಲಿಕ್ ಮಾಡಿ "OK" ಎಂಬಲ್ಲಿ ಕ್ಲಿಕ್ ಮಾಡಿ.
03.09 ನಾವು ಮಾಡಿದ ಬದಲಾವಣೆಯು ಹೊಸ ಸೆಶನ್ ಆರಂಭವಾದಾಗಲೇ ಅನ್ವಯಗೊಳ್ಳುತ್ತವೆ.
03.14 "Start New Session" ಎಂಬಲ್ಲಿ ಕ್ಲಿಕ್ ಮಾಡಿ "Keep Current Level" ಎಂಬುದನ್ನು ಆಯ್ಕೆ ಮಾಡಿ.
03.20 ಪುನಃ ಟೈಪಿಂಗ್ ಅನ್ನು ಆರಂಭಿಸಿ.
03.23 ಆರಂಭಿಕ ವೇಗವು ೦ ಎಂದು ಗಮನಿಸಿ.ಯಾವಾಗ ನಾವು ಟೈಪ್ ಮಾಡುವೆವೋ ಆಗ ವೇಗವು ಹೆಚ್ಚುತ್ತದೆ ಅಥವಾ ಕಡಿಮೆಯಾಗುತ್ತದೆ.
03.30 "Pause Session" ಎಂಬಲ್ಲಿ ಕ್ಲಿಕ್ ಮಾಡಿ. ಯಾವಾಗ ನಾವು ನಿಲ್ಲಿಸುತ್ತೇವೆಯೋ ಆಗ ಟೈಪಿಂಗ್ ವೇಗದ ಗಣನೆಯೂ ಕೂಡಾ ನಿಲ್ಲುತ್ತದೆ.
03.38 ಟೈಪಿಂಗ್ ಅನ್ನು ಪುನಃ ಆರಂಭಿಸಿ.
03.40 ಯಾವಾಗ ವೇಗವು 60 ಕ್ಕಿಂತ ಕಡಿಮೆಯಾಗುತ್ತದೋ ಆಗ Speed ಎಂಬುದರ ಕೆಳಗೆ ಇರುವ ಕೆಂಪು ಬಿಂದುವು ಹೊಳೆಯಲಾರಂಭಿಸುತ್ತದೆ.
03.47 ಇದರಿಂದ ವೇಗವು ನಿರ್ಧಾರಿತ ಸೀಮೆಗಿಂತ ಕಡಿಮೆಯಾಗಿದೆ ಎಂದು ತಿಳಿಯುತ್ತದೆ.
03.54 ಈಗ, "Teacher’s Line" ನಲ್ಲಿ ಇಲ್ಲದಿರುವ 4 ನ್ನು ಟೈಪ್ ಮಾಡಿ.
03.59 "Student’s Line" ಕೆಂಪು ಬಣ್ಣಕ್ಕೆ ತಿರುಗಿತು.
04.02 "Percentage of the Correctness" ಕೂಡಾ ಕಡಿಮೆಯಾಯಿತು.
04.05 ನಿಮಗೆ "Teacher’s Line" ನಲ್ಲಿರುವ ಸ್ಪೇಸ್ ಕಾಣುತ್ತಿದೆಯೇ?
04.11 ಈಗ, ಈ ಪದದ ನಂತರ ನಾನು ಸ್ಪೇಸ್ ಟೈಪ್ ಮಾಡುವುದಿಲ್ಲ.
04.15 "Student’s Line" ಪುನಃ ಕೆಂಪುಬಣ್ಣಕ್ಕೆ ತಿರುಗಿತು.
04.18 ಅಂದರೆ, ಸ್ಪೇಸ್ ಅನ್ನು ಕೂಡಾ ಸರಿಯಾಗಿ ಟೈಪ್ ಮಾಡಬೇಕೆಂದಾಯಿತು.
04.22 student’s line ನಲ್ಲಿ ಒಂದು ಸಂಪೂರ್ಣ ಸಾಲನ್ನು ಟೈಪ್ ಮಾಡಿ, "Enter" ಒತ್ತಿ.
04.31 ಮೂರನೇಯ ಸ್ತರವು ಬಂದಿದೆ.
04.33 ಮೂರನೇಯ ಸ್ತರಕ್ಕೆ ಏಕೆ ಬದಲಾಯಿತು? ಏಕೆಂದರೆ, ನಾವು Workload ಎಂಬಲ್ಲಿ 1 ಎಂದು ನಿರ್ಧರಿಸದ್ದೆವು.
04.39 ಹಾಗಾಗಿ, ಯಾವಾಗ ನಾವು ಎರಡನೇಯ ಸ್ತರದ ಒಂದು ಸಾಲನ್ನು ಮುಗಿಸಿ Enter ಕ್ಲಿಕ್ ಮಾಡುತ್ತೇವೆಯೋ ಆಗ ಮುಂದಿನ ಸ್ತರಕ್ಕೆ ಹೋಗುತ್ತೇವೆ.
04.47 ಗಮನಿಸಿ, "Teacher’s Line" ಎಂಬಲ್ಲಿ ಹೊಸ ಅಕ್ಷರಗಳು ಕಾಣುತ್ತವೆ.
04.52 ನೀವು ನಿಮ್ಮ ಟೈಪಿಂಗ್ ಸೆಶನ್ ನ ಪ್ರಾಪ್ತಾಂಕವನ್ನು ತಿಳಿಯಲಿಚ್ಛಿಸುವಿರಾ?
04.55 ಹಾಗಾದರೆ, "Lecture Statistics" ಎಂಬಲ್ಲಿ ಕ್ಲಿಕ್ ಮಾಡಿ. "Training Statistics" ಎಂದು ಡಯಲಾಗ್ ಬಾಕ್ಸ್ ಕಾಣುತ್ತದೆ.
05.02 ಟ್ಯಾಬ್ ಗಳ ಮೇಲೆ ಕ್ಲಿಕ್ ಮಾಡಿ ಪ್ರತಿಯೊದರಲ್ಲೂ ಏನೇನು ಕಾಣುತ್ತದೆ ಎಂದು ನೋಡಿ.
05.07 "Current Training Session" ಎಂಬಲ್ಲಿ ಕ್ಲಿಕ್ ಮಾಡಿ.
05.12 ಇದು general statistics ಎಂಬುದರ ವಿವರಣೆಯನ್ನು ಕೊಡುತ್ತದೆ. ಉದಾಹರಣೆಗೆ, ಟೈಪಿಂಗ್ ನ ವೇಗ, ಟೈಪಿಂಗ್ ನ ವಿಶುದ್ಧತೆ ಮತ್ತು ಅಕ್ಷರಗಳ ವಿವರಣೆ. ಇವುಗಳನ್ನು ನಾವು ಹೆಚ್ಚು ಗಮನಿಸಬೇಕು.
05.22 "Current Level Statistics" ಟ್ಯಾಬ್ ಕೂಡಾ Current Training Session ಟ್ಯಾಬ್ ಹೇಗೆ ವಿವರಣೆಯನ್ನು ನೀಡುತ್ತದೋ ಹಾಗೇ ವಿವರಣೆಯನ್ನು ನೀಡುತ್ತದೆ.
05.31 "Monitor Progress" ಟ್ಯಾಬ್ ನಿಮ್ಮ ಟೈಪಿಂಗ್ ನ ಪ್ರಗತಿಯ ಚಿತ್ರೀಯ ವಿವರಣೆಯನ್ನು ನೀಡುತ್ತದೆ.
05.38 ಈ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿ.
05.41 ನೀವು ನಿಮ್ಮ ಸ್ವಂತ ಶಾರ್ಟ್ಕಟ್ ಕೀ ಳನ್ನೂ ಕೂಡಾ ರಚಿಸಬಹುದು.
05.45 ಶಾರ್ಟ್ಕಟ್ ಕೀ ಗಳೆಂದರೇನು?
05.47 ಶಾರ್ಟ್ಕಟ್ ಕೀ ಗಳೆಂದರೆ, ಅದೊಂದು ಅನೇಕ ಕೀ ಗಳ ಗುಂಪು. ಅದು ಮೆನ್ಯುವಿನಲ್ಲಿ ಇರುವ ವಿಕಲ್ಪಗಳನ್ನು ಕೀಬೋರ್ಡಿನ ಮುಖಾಂತರ ಪಡೆಯಲು ಸಹಕಾರಿಯಾಗಿದೆ.
05.56 "Lecture Statistics" ನೋಡಲು ಶಾರ್ಟ್ಕಟ್ ಕೀ ಯನ್ನು ರಚಿಸಿ.
06.01 ಮೇನ್ ಮೆನ್ಯುವಿನಿಂದ "Settings", "Configure" "Shortcuts" ಎಂಬುದರ ಮೇಲೆ ಕ್ಲಿಕ್ ಮಾಡಿ.
06.06 "Configure Shortcuts – KTouch" ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
06.10 "Search" ಬಾಕ್ಸ್ ನಲ್ಲಿ "Lecture Statistics" ಎಂದು ಟೈಪ್ ಮಾಡಿ.
06.16 "Lecture Statistics" ಎಂಬಲ್ಲಿ ಕ್ಲಿಕ್ ಮಾಡಿ "Custom" ಎಂದು ಆರಿಸಿ "None" ಎಂಬಲ್ಲಿ ಕ್ಲಿಕ್ ಮಾಡಿ. ಈಗ ಐಕಾನ್ "Input" ಎಂದು ಬದಲಾಗುತ್ತದೆ.
06.24 ಈಗ ಕೀಬೋರ್ಡ್ ನಿಂದ Shift ಮತ್ತು A ಎಂಬ ಕೀಗಳನ್ನು ಒಟ್ಟಿಗೇ ಒತ್ತಿ.
06.30 ಗಮನಿಸಿ, ಈಗ ಐಕಾನ್ Shift+A ಎಂದು ಬದಲಾಗಿದೆ. "OK" ಎಂಬಲ್ಲಿ ಕ್ಲಿಕ್ ಮಾಡಿ.
06.38 ಈಗ "Shift" ಮತ್ತು "A" ಎಂಬ ಕೀಗಳನ್ನು ಒಟ್ಟಿಗೇ ಒತ್ತಿ. "Training Statistics" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ.
06.45 ಹೊರಗೆ ಬರಲು Close ಎಂಬಲ್ಲಿ ಕ್ಲಿಕ್ ಮಾಡಿ.
06.49 ಕೇಟಚ್ ನಿಮಗೆ ಟೂಲ್ ಬಾರ್ ಅನ್ನು ಸಂರಚಿಸಲು ಅನುಮತಿಸುತ್ತದೆ.
06.53 ನಮಗೆ "Quit Ktouch" ಎಂಬ ಆದೇಶವನ್ನು ಐಕಾನ್ ರೂಪದಲ್ಲಿ ತೋರಿಸಬೇಕೆಂದಿದೆ ಎಂದುಕೊಳ್ಳೋಣ.
06.58 ಮೇನ್ಮೆನ್ಯುವಿನಲ್ಲಿ "Settings" ಎಂಬಲ್ಲಿ ಕ್ಲಿಕ್ ಮಾಡಿ, "Configure Toolbars" ಎಂಬಲ್ಲಿ ಕ್ಲಿಕ್ ಮಾಡಿ.
07.03 "Configure Toolbars – KTouch" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ.
07.07 ಎಡಬದಿಯ ವಿಕಲ್ಪಗಳ ಸೂಚಿಯಿಂದ "Quit" ಎಂಬ ಐಕಾನ್ ಆರಿಸಿಅದನ್ನು ಎರಡು ಬಾರಿ ಕ್ಲಿಕ್ ಮಾಡಿ.
07.15 ಆ ಐಕಾನ್ ಬಲಬದಿಯ ಬಾಕ್ಸ್ ಗೆ ಸರಿಯುತ್ತದೆ. "Apply" ಮೇಲೆ ಕ್ಲಿಕ್ ಮಾಡಿ "OK" ಕ್ಲಿಕ್ ಮಾಡಿ.
07.22 "Quit" ಎಂಬ ಐಕಾನ್ ಈಗ ಕೇಟಚ್ ವಿಂಡೋ ನಲ್ಲಿ ಕಾಣಿಸುತ್ತದೆ.
07.26 ಈಗ ನಾವು ಕೆಟಚ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
07.30 ಈ ಟ್ಯುಟೋರಿಯಲ್ ನಲ್ಲಿ ನಾವು ಅಭ್ಯಾಸದ ಸ್ತರವನ್ನು ಹೇಗೆ ಬದಲಾಯಿಸುವುದು, ಟೈಪಿಂಗ್ ನ ವೇಗ ಮತ್ತು ವಿಶುದ್ಧತೆಯ ವಿಷಯದಲ್ಲಿ ಹೇಗೆ ಗಮನಹರಿಸುವುದು ಎಂಬುದನ್ನು ಕಲಿತೆವು.
07.38 ನಾವು ಕೀಬೋರ್ಡ್ ನಲ್ಲಿ ಶಾರ್ಟ್ಕಟ್ ನ ಸಂರಚನೆಯನ್ನು ಹಾಗೂ ಟೂಲ್ ಬಾರ್ ನ ಸಂರಚನೆಯನ್ನು ಕೂಡಾ ಕಲಿತೆವು.
07.43 ಇಲ್ಲಿ ನಿಮಗೊಂದು ಕೆಲಸವಿದೆ.
07.46 "Configure KTouch" ಎಂಬುದರ ಕೆಳಗೆ Workload ಎಂಬುದನ್ನು 2 ಎಂದು ಬದಲಾಯಿಸಿ.
07.50 "Complete whole training level before proceeding" ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ.
07.56 ಈಗ ಒಂದು ಹೊಸ ಟೈಪಿಂಗ್ ಸೆಶನ್ ಅನ್ನು ಆರಂಭಿಸಿ ಅಲ್ಲಿ ಅಭ್ಯಾಸ ಮಾಡಿ.
08.00 ಕೊನೆಗೆ ಆ ಅಭ್ಯಾಸದ ಫಲಿತಾಂಶವನ್ನು ನೋಡಿ.
08.04 ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
08.07 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
08.10 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
08.15 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
08.23 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
08.29 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
08.33 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
08.41 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
08.52 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

Pratik kamble, Vasudeva ahitanal