Tux-Typing/S1/Getting-started-with-Tux-Typing/Kannada

From Script | Spoken-Tutorial
Revision as of 15:07, 6 August 2014 by PoojaMoolya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 Tux Typing ನ ಪರಿಚಯಾತ್ಮಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ ನೀವು Tux Typing ಮತ್ತು Tux typing ನ ಇಂಟರ್ಫೇಸ್ ನ ವಿಷಯವನ್ನು ತಿಳಿಯುತ್ತೀರಿ.
00:10 ಇಲ್ಲಿ ನೀವು,
00:12 ಕಂಪ್ಯುಟರ್ ನ ಇಂಗ್ಲೀಷ್ ಕೀಬೋರ್ಡ್ ನಲ್ಲಿ ವೇಗವಾಗಿ, ಸ್ಪಷ್ಟವಾಗಿ ಮತ್ತು ನಿಪುಣತೆಯಿಂದ ಹೇಗೆ ಟೈಪ್ ಮಾಡುವುದು,
00:19 ಟೈಪಿಂಗ್ ಮಾಡುವಾಗ ಪ್ರತಿ ಬಾರಿಯೂ ಕೀಬೋರ್ಡನ್ನು ನೋಡದೇ ಹೇಗೆ ಟೈಪ್ ಮಾಡುವುದು ಎಂಬುದನ್ನು ಕಲಿಯುತ್ತೀರಿ.
00:25 Tux Typing ಎಂದರೇನು?
00:27 Tux Typing ಎಂಬುದೊಂದು ಟೈಪಿಂಗ್ ಟ್ಯೂಟರ್ ಆಗಿದೆ.
00:30 ಇದು ನಿಮಗೆ ಸಂವಾದಾತ್ಮಕ ಕ್ರೀಡೆಗಳ ಮೂಲಕ ಟೈಪಿಂಗ್ ಅನ್ನು ಕಲಿಸುತ್ತದೆ ಮತ್ತು ವಿಭಿನ್ನ ಅಕ್ಷರಗಳನ್ನೂ ಪರಿಚಯಿಸುತ್ತದೆ.
00:38 ನೀವು ನಿಮ್ಮ ವೇಗಕ್ಕನುಸಾರವಾಗಿ ಟೈಪಿಂಗ್ ಅನ್ನು ಕಲಿಯಬಹುದು.
00:41 ಹಾಗೂ, ನಿಧಾನವಾಗಿ ನಿಮ್ಮ ಟೈಪಿಂಗ್ ವೇಗವನ್ನು ಶುದ್ಧತೆಯ ಜೊತೆಗೆ ಹೆಚ್ಚಿಸಬಹುದು.
00:46 Tux Typing ನಿಮ್ಮ ಅಭ್ಯಾಸಕ್ಕಾಗಿ ಹೊಸ ಶಬ್ದಗಳನ್ನು ಮತ್ತು ಟೈಪ್ ಮಾಡಲು ಬೇರೆ ಬೇರೆ ಭಾಷೆಗಳನ್ನೂ ಸೆಟ್ ಮಾಡಲು ಅನುವು ಮಾಡಿಕೊಡುತ್ತದೆ.
00:54 ಇಲ್ಲಿ ನಾವು ಉಬಂಟು ಲಿನಕ್ಸ್ 11.10 ರಲ್ಲಿ Tux Typing 1.8.0 ನ್ನು ಉಪಯೋಗಿಸುತ್ತಿದ್ದೇವೆ.
01:02 ನೀವು ಉಬಂಟು ಸಾಫ್ಟ್ವೇರ್ ಸೆಂಟರ್ ನ ಸಹಾಯದಿಂದ Tux Typing ಇನ್ಸ್ಟಾಲ್ ಮಾಡಬಹುದು.
01:07 ಉಬಂಟು ಸಾಫ್ಟ್ವೇರ್ ಸೆಂಟರ್ ನ ಹೆಚ್ಚಿನ ವಿವರಣೆಗಾಗಿ ಈ ವೆಬ್ಸೈಟ್ ನಲ್ಲಿರುವ ಉಬಂಟು ಲಿನಕ್ಸ್ ಎಂಬ ಟ್ಯುಟೋರಿಯಲ್ ಅನ್ನು ಅನುಸರಿಸಬಹುದು.
01:16 Tux Typing ಅನ್ನು ಒಪನ್ ಮಾಡಿ.
01:19 ಮೊದಲಿಗೆ, Dash Home ಎಂಬಲ್ಲಿ ಕ್ಲಿಕ್ ಮಾಡಿ, ಇದು ನಿಮ್ಮ ಕಂಪ್ಯೂಟರ್ ನ ಮೇಲ್ಭಾಗದ ಎಡಕೋಣೆಯಲ್ಲಿ ಗೋಲಾಕಾರದ ಬಟನ್ ನ ರೂಪದಲ್ಲಿದೆ.
01:26 Search ಬಾಕ್ಸ್ ಕಾಣಿಸುತ್ತದೆ. Dash Home ಎಂಬುದರ ಮುಂದೆ ಸರ್ಚ್ ಬಾಕ್ಸ್ ನಲ್ಲಿ Tux Typing ಎಂದು ಟೈಪ್ ಮಾಡಿ.
01:34 ಸರ್ಚ್ ಬಾಕ್ಸ್ ನ ಕೆಳಗೆ Tux Typing ಎಂಬ ಐಕಾನ್ ಕಾಣುತ್ತದೆ.
01:39 Tux Typing ಎಂಬ ಐಕಾನ್ ಅನ್ನು ಒತ್ತಿ.
01:42 Tux Typing ಎಂಬ ವಿಂಡೋ ಕಾಣಿಸುತ್ತದೆ.
01:46 Tux Typing ನಲ್ಲಿ ಈ ಕೆಳಗಿರುವ ವಿಕಲ್ಪಗಳು ಒಳಗೊಂಡಿವೆ.
01:50 Fish Cascade – ಕ್ರೀಡಾ ಕ್ಷೇತ್ರ.

Comet Zap – ಮತ್ತೊಂದು ಕ್ರೀಡಾ ಕ್ಷೇತ್ರ.

01:56 Lessons – ಇಲ್ಲಿ ವಿಭಿನ್ನ ಪಾಠಗಳು ಇವೆ. ಇವು ನಮಗೆ ಅಕ್ಷರಾಭ್ಯಾಸವನ್ನು ಮಾಡಿಸುತ್ತವೆ.
02:01 Options – ಇಲ್ಲಿ ಇರುವ ವಿಕಲ್ಪಗಳು ನಮಗೆ ಶಬ್ದಗಳನ್ನು ಸಂಪಾದಿಸಲು, ವಾಕ್ಯಗಳನ್ನು ಟೈಪ್ ಮಾಡಲು, ಟಕ್ಸ್ ಟೈಪಿಂಗ್ ನ ಬಗ್ಗೆ ತಿಳಿಯಲು ಮತ್ತು ಭಾಷೆಯನ್ನು ನಿರ್ಧರಿಸಲು ಸಹಾಯ ಮಾಡುತ್ತವೆ.
02:13 Quit – ಕ್ರೀಡೆಯನ್ನು ಮುಗಿಸಲು ಇಲ್ಲಿ ಒತ್ತಬೇಕು.
02:16 ಪಾಠಗಳನ್ನು ಉಪಯೋಗಿಸಿಕೊಂಡು ಟೈಪಿಂಗ್ ಅನ್ನು ಆರಂಭಿಸೋಣ.
02:20 ಮೈನ್ ಮೆನ್ಯುವಿನಲ್ಲಿ Lessons ಎಂಬುದನ್ನು ಕ್ಲಿಕ್ ಮಾಡಿ.
02:23 ಪಾಠಗಳಿರುವ ಒಂದು ವಿಂಡೋ ಕಾಣಿಸುತ್ತದೆ.
02:26 ಮೊದಲ ಪಾಠದಿಂದ ಅಭ್ಯಾಸವನ್ನು ಆರಂಭಿಸೋಣ.
02:30 basic_lesson_01.xml ಎಂಬಲ್ಲಿ ಒತ್ತಿ.
02:35 ನಿರ್ದೇಶಗಳ ಜೊತೆಗೆ ಒಂದು ವಿಂಡೋ ಕಾಣಿಸುತ್ತದೆ.
02:41 ಪಾಠವನ್ನು ಆರಂಭಿಸಲು space bar ಒತ್ತಿ.
02:45 ಕೀಬೋರ್ಡ್ ನ ಜೊತೆಗೆ ವಿಂಡೋ ಕಾಣಿಸುತ್ತದೆ.
02:48 ಈಗ ನಾವು a ಎಂಬ ಅಕ್ಷರದ ಅಭ್ಯಾಸವನ್ನು ಮಾಡೋಣ.
02:52 ಅಭ್ಯಾಸದ ಆರಂಭಕ್ಕಾಗಿ p ಅನ್ನು ಒತ್ತಿ.
02:56 ಒಂದು ವಿಂಡೋ ಕಾಣಿಸುತ್ತದೆ, ಅಲ್ಲಿ ಅಕ್ಷರಗಳು ಕಾಣಿಸುತ್ತವೆ.
03:01 ಇಲ್ಲಿ ‘aaa aaa…..’ ಎನ್ನುವುದು ಏನನ್ನು ಸೂಚಿಸುತ್ತವೆ?
03:07 ಇದು, ನೀವು ಈ ಅಕ್ಷರಗಳನ್ನು ಟೈಪ್ ಮಾಡಬೇಕೆಂದು ಸೂಚಿಸುತ್ತದೆ.
03:10 ಈ ಸಾಲಿಗೆ ಟೀಚರ್ಸ್ ಲೈನ್ ಎಂದು ಹೆಸರಿಡೋಣ.
03:13 ಈಗ ನಾವು ಹೆಚ್ಚಾಗಿ ಬಳಸುವ ಇಂಗ್ಲೀಷ್ ಕೀಬೋರ್ಡನ್ನು ನೋಡೋಣ.
03:19 ನಿಮಗೆ a ಎಂಬ ಅಕ್ಷರದ ಸುತ್ತಲು ಕೆಂಪುಬಣ್ಣದ ಚೌಕ ಕಾಣುತ್ತಿದ್ದೆಯೇ? ಇದು ಈಗ ನೀವು ಯಾವ ಅಕ್ಷರವನ್ನು ಟೈಪ್ ಮಾಡಬೇಕೆಂಬುದನ್ನು ಸೂಚಿಸುತ್ತದೆ.
03:27 ಕೀಬೋರ್ಡಿನ ಮೊದಲ ಸಾಲಿನಲ್ಲಿ ಅಂಕಿಗಳು, ವಿಶಿಷ್ಟಾಕ್ಷರಗಳು ಮತ್ತು Backspace ಕೀ ಇವೆ.
03:35 ಟೈಪ್ ಮಾಡಿದ್ದನು ಅಳಿಸಲು Backspace ಕೀಯನ್ನು ಉಪಯೋಗಿಸಿ.
03:39 ಕೀಬೋರ್ಡಿನಲ್ಲಿ ಮತ್ತೂ ಮೂರು ಸಾಲುಗಳಿರುತ್ತವೆ. ಅವುಗಳಲ್ಲಿ ವರ್ಣಮಾಲೆ, ಸಂಖ್ಯೆಗಳು ಮತ್ತು ಬೇರೆ ಅಕ್ಷರಗಳು ಇರುತ್ತವೆ.
03:51 ಕೀಬೋರ್ಡಿನ ಎರಡನೇಯ ಸಾಲಿನಲ್ಲಿ ವರ್ಣಮಾಲೆ, ಕೆಲವು ವಿಶಿಷ್ಟಾಕ್ಷರಗಳು ಮತ್ತು Enter ಕೀ ಇವೆ.
03:58 ಮುಂದಿನ ಸಾಲಿಗೆ ಹೋಗಲು ನೀವು Enter ಕೀಯನ್ನು ಒತ್ತಬೇಕು.
04:02 ಕೀಬೋರ್ಡಿನ ಮೂರನೇಯ ಸಾಲಿನಲ್ಲಿ ವರ್ಣಮಾಲೆ, colon, semicolon ಮತ್ತು Caps lock ಕೀ ಗಳಿವೆ.
04:10 ದೊಡ್ಡ ಅಕ್ಷರಗಳಲ್ಲಿ ಟೈಪ್ ಮಾಡಲು Caps Lock ಕೀ ಉಪಯೋಗಿಸಿ.
04:14 ಕೀಬೋರ್ಡಿನ ನಾಲ್ಕನೇಯ ಸಾಲಿನಲ್ಲಿ ವರ್ಣಮಾಲೆ, ವಿಶಿಷ್ಟಾಕ್ಷರಗಳು ಮತ್ತು shift ಕೀ ಗಳಿವೆ.
04:21 ದೊಡ್ಡ ಅಕ್ಷರದಲ್ಲಿ ಟೈಪ್ ಮಾಡಲು ಯಾವುದಾದರೊಂದು ಅಕ್ಷರವನ್ನು Shift ಕೀ ನ ಜೊತೆಗೆ ಒತ್ತಿ.
04:27 ಕೀಗಳಲ್ಲಿ ಮೇಲ್ಗಡೆ ಇರುವ ಅಕ್ಷರಗಳನ್ನು ಟೈಪ್ ಮಾಡಲು Shift ಕೀ ನ ಜೊತೆಗೆ ಆ ಅಕ್ಷರವನ್ನು ಟೈಪ್ ಮಾಡಿ.
04:34 ಉದಾಹರಣೆಗೆ, 1 ಎಂಬ ಕೀ ನಲ್ಲಿ ಮೇಲ್ಗಡೆ ಆಶ್ಚರ್ಯಸೂಚಕ ಚಿಹ್ನೆಯೂ ಇದೆ.
04:39 ಆಶ್ಚರ್ಯಸೂಚಕ ಚಿಹ್ನೆಯನ್ನು ಟೈಪ್ ಮಾಡಲು Shift ಕೀ ನ ಜೊತೆಗೆ 1 ನ್ನು ಒತ್ತಿ.
04:44 ಕೀಬೋರ್ಡಿನ ಐದನೇಯ ಸಾಲಿನಲ್ಲಿ Ctrl, Alt ಮತ್ತು ಫಂಕ್ಷನ್ ಕೀ ಗಳಿವೆ. ಇಲ್ಲಿ Space ಬಾರ್ ಕೂಡಾ ಇದೆ.
04:52 ಈಗ ಟಕ್ಸ್ ಟೈಪಿಂಗ್ ನ ಕೀಬೋರ್ಡ್, ಲ್ಯಾಪ್ಟಾಪ್ ನ ಕೀಬೋರ್ಡ್ ಮತ್ತು ಡೆಸ್ಕ್ಟಾಪ್ ನ ಕೀಬೋರ್ಡ್ ಗಳ ನಡುವೆ ವ್ಯತ್ಯಾಸವಿದೆಯೇ ಎಂದು ನೋಡೋಣ.
05:00 ಇಲ್ಲಿ ಗಮನಿಸಬೇಕಾದುದೇನೆಂದರೆ, ಟಕ್ಸ್ ಟೈಪಿಂಗ್ ನ ಕೀಬೋರ್ಡ್ ಮತ್ತು ಯಾವ ಕೀಬೋರ್ಡ್ ಲ್ಯಾಪ್ಟಾಪ್ ಮತ್ತು ಡೆಸ್ಕ್ಟಾಪ್ ಗಳಲ್ಲಿ ಉಪಯೋಗಿಸುವರೋ ಅವೆಲ್ಲವೂ ಒಂದೇ ಎಂದು.
05:10 ಈಗ ಕೀಬೋರ್ಡಿನಲ್ಲಿ ನಮ್ಮ ಬೆರಳುಗಳ ಸ್ಥಾನವೇನೆಂದು ನೋಡೋಣ.
05:14 ಈ ಸ್ಲೈಡ್ ಅನ್ನು ನೋಡಿ.
05:16 ಇದು ಬೆರಳುಗಳು ಮತ್ತು ಅವುಗಳ ಹೆಸರುಗಳನ್ನು ತೋರಿಸುತ್ತದೆ. ಎಡದಿಂದ ಬಲಕ್ಕೆ ಇರುವ ಬೆರಳುಗಳ ಹೆಸರು ಹೀಗಿವೆ:
05:21 ಕಿರುಬೆರಳು (Little finger), ಅನಾಮಿಕ ಬೆರಳು (Ring finger), ಮಧ್ಯದಬೆರಳು (Middle finger), ತೋರ್ಬೆರಳು (Index finger) ಮತ್ತು ಹೆಬ್ಬೆರಳು (Thumb).
05:27 ನಿಮ್ಮ ಕೀಬೋರ್ಡಿನಲ್ಲಿ ನಿಮ್ಮ ಎಡಗೈಯನ್ನು ಕೀಬೋರ್ಡಿನ ಎಡಭಾಗಕ್ಕೆ ಇಡಿ.
05:32 ಕಿರುಬೆರಳು (Little finger) ‘A’ ಎಂಬ ಅಕ್ಷರದ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ.
05:35 ಅನಾಮಿಕ ಬೆರಳು ‘S’ ಎಂಬುದರ ಮೇಲೆ,
05:38 ಮಧ್ಯದ ಬೆರಳು ‘D’ ಎಂಬುದರ ಮೇಲೆ,
05:41 ತೋರ್ಬೆರಳು ‘F’ ಎಂಬುದರ ಮೇಲೆ ಇಡಿ.
05:44 ಈಗ ಬಲಗೈಯನ್ನು ಕೀಬೋರ್ಡಿನ ಬಲಬದಿಯಲ್ಲಿಡಿ.
05:49 ಕಿರುಬೆರಳು ಕಾಲನ್/ಸೆಮಿಕಾಲನ್ ನ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ.
05:54 ಅನಾಮಿಕ ಬೆರಳು ‘L’ ಎಂಬುದರ ಮೇಲೆ,
05:56 ಮಧ್ಯದ ಬೆರಳು ‘K’ ಎಂಬುದರ ಮೇಲೆ,
06:00 ತೋರ್ಬೆರಳು ‘J’ ಎಂಬುದರ ಮೇಲಿಡಬೇಕು.
06:03 ಸ್ಪೇಸ್ ಬಾರ್ ಅನ್ನು ಒತ್ತಲು ಬಲ ಹೆಬ್ಬೆರಳನ್ನು ಉಪಯೋಗಿಸಿ.
06:08 ಎರಡು ಕೈಗಳ ಚಿತ್ರವು ಸೂಕ್ತ ಬೆರಳುಗಳ ಉಪಯೋಗದಿಂದ ಹೇಗೆ ಟೈಪ್ ಮಾಡುವುದೆಂದು ತಿಳಿಸಿಕೊಡುತ್ತದೆ.
06:14 ನೀವು ಕಿರುಬೆರಳನ್ನು ಉಪಯೋಗಿಸಲು ಕೆಂಪು ಚೌಕವನ್ನು ಹುಡುಕುತ್ತಿರುವಿರಾ?
06:19 ನಿಮ್ಮ ಊಹೆ ಸರಿಯಾಗಿದೆ, ನೀವು a ಎಂದು ಟೈಪ್ ಮಾಡಲು ಆ ಬೆರಳನ್ನು ಉಪಯೋಗಿಸಬೇಕು.
06:23 ಕೀಬೋರ್ಡಿನಲ್ಲಿ ಈ ಪಾಠದಲ್ಲಿ ಹೇಳಿರುವಂತೆ ನಿಮ್ಮ ಬೆರಳುಗಳನ್ನು ಇರಿಸಿ.
06:29 ಈಗ ಟೈಪಿಂಗ್ ಅನ್ನು ಆರಂಭಿಸಿ.
06:32 ನಾವು ಟೈಪ್ ಮಾಡುತ್ತಿದ್ದಂತೆಯೇ ಆ ಅಕ್ಷರಗಳು ಟೀಚರ್ಸ್ ಲೈನ್ ನ ಕೆಳಗಿನ ಸಾಲಿನಲ್ಲಿ ಕಾಣಿಸಲ್ಪಡುತ್ತವೆ.
06:39 ಈ ಸಾಲಿಗೆ ಸ್ಟುಡೆಂಟ್ ಲೈನ್ ಎಂದು ಹೆಸರಿಸೋಣ.
06:42 ಈಗ ಯಾವ ಅಕ್ಷರ ಟೀಚರ್ಸ್ ಲೈನ್ ನಲ್ಲಿ ಇಲ್ಲವೋ ಅದನ್ನು ಟೈಪ್ ಮಾಡಿ.
06:47 ನೀವು ತಪ್ಪು ಟೈಪ್ ಮಾಡಿದ ಅಕ್ಷರವು ಸ್ಟುಡೆಂಟ್ ಲೈನ್ ನಲ್ಲಿ ಕಾಣುತ್ತದೆಯೇ? ಇಲ್ಲ.
06:53 ಬದಲಿಗೆ, ಯಾವ ಅಕ್ಷರವನ್ನು ತಪ್ಪಾಗಿ ಟೈಪ್ ಮಾಡಿರುವಿರೋ ಆ ಅಕ್ಷರದ ಮೇಲೆ X ಎಂಬ ಚಿಹ್ನೆಯು ಸ್ವಲ್ಪ ಸಮಯದ ತನಕ ಕಾಣುತ್ತದೆ.
06:59 ಈಗ ಕೆಲವು ಅಕ್ಷರಗಳನ್ನು ಟೈಪ್ ಮಾಡಿ.
07:02 ಈಗ ನಮ್ಮಟೈಪಿಂಗ್ ನ ಮೆಟ್ರಿಕ್ಸ್ ಅನ್ನು ಗಣನೆ ಮಾಡೋಣ.
07:07 ಈಗ ನೀವು ಬಲಬದಿಯ ಫೀಲ್ಡ್ ಏನನ್ನು ತೋರಿಸುತ್ತದೆಯೆಂದು ಅಂದಾಜು ಮಾಡಿ.
07:13 Time – ಎನ್ನುವುದು ನಿಮ್ಮ ಟೈಪಿಂಗ್ ನ ವೇಗವನ್ನು ಸೆಟ್ ಮಾಡುತ್ತದೆ.
07:17 Chars – ಎನ್ನುವುದು ನೀವು ಟೈಪ್ ಮಾಡಿದ ಅಕ್ಷರಗಳ ಸಂಖ್ಯೆಯನ್ನು ತೋರಿಸುತ್ತದೆ.
07:21 CPM – ಎನ್ನುವುದು ನೀವು ಪ್ರತಿ ನಿಮಿಷ ಎಷ್ಟು ಅಕ್ಷರಗಳನ್ನು ಟೈಪ್ ಮಾಡುತೀರೆಂದು ತೋರಿಸುತ್ತದೆ.
07:26 WPM – ಎನ್ನುವುದು ನೀವು ಟೈಪ್ ಮಾಡಿದ ಶಬ್ದಗಳ ಸಂಖ್ಯೆಯನ್ನು ತೋರಿಸುತ್ತದೆ.
07:31 Errors – ಎನ್ನುವುದು ನೀವು ಎಷ್ಟು ತಪ್ಪು ಅಕ್ಷರಗಳನ್ನು ಟೈಪ್ ಮಾಡಿದ್ದೀರೆಂದು ತೋರಿಸುತ್ತದೆ.
07:34 Accuracy – ಎನ್ನುವುದು ನಿಮ್ಮ ಟೈಪಿಂಗ್ ನ ಶುದ್ಧತೆಯನ್ನು ತೋರಿಸುತ್ತದೆ.
07:40 ಮೇನ್ ಮನ್ಯುವಿಗೆ ಹೋಗಲು Escape ಕೀಯನ್ನು ಒತ್ತಿ.
07:45 ನಾವು ನಮ್ಮ ಮೊದಲ ಟೈಪಿಂಗ್ ಪಾಠವನ್ನು ಅಭ್ಯಾಸ ಮಾಡಿದ್ದೇವೆ.
07:47 ನಿಧಾನವಾಗಿ ಶುದ್ಧವಾಗಿ ಟೈಪ್ ಮಾಡಲು ಮತ್ತು ಮೊದಲಬಾರಿ ಅಭ್ಯಾಸ ಮಾಡಲು ಇದು ತುಂಬಾ ಚೆನ್ನಾಗಿದೆ.
07:52 ಒಮ್ಮೆ ದೋಷರಹಿತವಾಗಿ ಶುದ್ಧವಾಗಿ ಟೈಪಿಂಗ್ ಅಭ್ಯಾಸ ಮಾಡಿದಲ್ಲಿ ನಾವು ನಮ್ಮ ಟೈಪಿಂಗ್ ನ ವೇಗವನ್ನು ಹೆಚ್ಚಿಸಬಹುದು.
07:59 ಈಗ ನಾವು ಟಕ್ಸ್ ಟೈಪಿಂಗ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
08:03 ಈ ಟ್ಯುಟೋರಿಯಲ್ ನಲ್ಲಿ ನಾವು ಟಕ್ಸ್ ಟೈಪಿಂಗ್ ಇಂಟರ್ಫೆಸ್ ನ ಬಗ್ಗೆ ತಿಳಿದೆವು ಮತ್ತು ಮೊದಲ ಟೈಪಿಂಗ್ ಪಾಠವನ್ನು ಮುಗಿಸಿದೆವು.
08:11 ಇಲ್ಲಿ ನಿಮಗೊಂದು ಕೆಲಸವಿದೆ.
08:13 basic_lesson_02.xml ಎಂಬಲ್ಲಿ ಹೋಗಿ.
08:19 ಈ ಸ್ತರದಲ್ಲಿ ಅಭ್ಯಾಸ ಮಾಡಿ.
08:21 ಈ ಸ್ತರದಲ್ಲಿ ಇರುವ ಎಲ್ಲಾ ಅಕ್ಷರಗಳನ್ನೂ ಟೈಪ್ ಮಾಡಿ ಮತ್ತು Enter ಒತ್ತಿ.
08:26 ಹೀಗೆಯೇ ನೀವು ಬೇರೆ ಪಾಠವನ್ನೂ ಅಭ್ಯಾಸ ಮಾಡಬಹುದು.
08:30 ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. http://spoken-tutorial.org/What_is_a_Spoken_Tutorial
08:33 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
08:36 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
08:41 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
08:46 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
08:50 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
08:56 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
09:00 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
09:08 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
09:19 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

PoojaMoolya, Vasudeva ahitanal