Java/C3/Exception-Handling/Kannada
From Script | Spoken-Tutorial
Revision as of 20:37, 20 May 2020 by Sandhya.np14 (Talk | contribs)
Time | Narration |
00:01 | Exception Handling ಕುರಿತ ಸ್ಪೋಕನ್ ಟ್ಯುಟೋರಿಯಲ್‌ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್‌ನಲ್ಲಿ ನಾವು:
ಎಕ್ಸೆಪ್ಶನ್ ಅಂದರೇನು, Checked ಮತ್ತು unchecked ಎಕ್ಸೆಪ್ಶನ್ಸ್, try-catch ಬ್ಲಾಕ್ ಬಳಸಿ ಎಕ್ಸೆಪ್ಶನ್ ಗಳನ್ನು ನಿರ್ವಹಿಸುವುದು ಮತ್ತು finally ಬ್ಲಾಕ್ ಇವುಗಳ ಬಗ್ಗೆ ಕಲಿಯಲಿದ್ದೇವೆ. |
00:20 | ಇಲ್ಲಿ ನಾವು ಉಬಂಟು 16.04 OS, JDK 1 .8 ಮತ್ತು Eclipse 4.3.1 ಇವುಗಳನ್ನು ಬಳಸುತ್ತಿದ್ದೇವೆ. |
00:32 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಜಾವಾ ಮತ್ತು Eclipse IDE ಯ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು. |
00:39 | ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ. |
00:45 | ಎಕ್ಸೆಪ್ಶನ್ ಎನ್ನುವುದು ಅನಿರೀಕ್ಷಿತ ಘಟನೆಯಾಗಿದ್ದು, ಪ್ರೋಗ್ರಾಂ ನ ಎಕ್ಸಿಕ್ಯೂಶನ್ ವೇಳೆ ಇದು ಉಂಟಾಗುತ್ತದೆ. |
00:52 | ಇದು ಪ್ರೋಗ್ರಾಂನ ಸಾಮಾನ್ಯ ಕಾರ್ಯಕ್ಕೆ ಅಡ್ಡಿ ಉಂಟು ಮಾಡುತ್ತದೆ ಮತ್ತು ಅಸಾಧಾರಣವಾಗಿ ಕೊನೆಗೊಳ್ಳುತ್ತದೆ. |
01:00 | ಅವುಗಳು ಆಗುವುದನ್ನು ಆಧರಿಸಿ, ಎಕ್ಸೆಪ್ಶನ್ ಗಳನ್ನು unchecked ಮತ್ತು checked ಎಕ್ಸೆಪ್ಶನ್‌ಗಳೆಂದು ವರ್ಗೀಕರಿಸಲಾಗುತ್ತದೆ. |
01:08 | ನಾವೀಗ eclipse ತೆರೆದು ExceptionDemo ಎನ್ನುವ ಹೊಸ ಪ್ರಾಜೆಕ್ಟ್ ಅನ್ನು ರಚಿಸಲಿದ್ದೇವೆ. |
01:16 | ಈ ಪ್ರಾಜೆಕ್ಟ್ ಒಳಗೆ, Exception Handling ಅನ್ನು ತೋರಿಸಿ ಕೊಡಲು ಅಗತ್ಯವಿರುವ ಕ್ಲಾಸುಗಳನ್ನು ರಚಿಸುವೆವು. |
01:24 | Marks ಎನ್ನುವ ಹೊಸ ಕ್ಲಾಸ್ ಅನ್ನು ನಾವು ರಚಿಸುವೆವು. |
01:28 | ಈಗ Marks ಕ್ಲಾಸನ್ನು ಪ್ರತಿನಿಧಿಸಲು ಈ ಕೋಡ್ ಅನ್ನು ಟೈಪ್ ಮಾಡಿ. |
01:34 | ಈ ಪ್ರೋಗ್ರಾಂ, Marks ಎಂಬ ಅರೇಯಲ್ಲಿ ಸ್ಟೋರ್ ಮಾಡಲಾದ 5 ವಿದ್ಯಾರ್ಥಿಗಳ ಅಂಕಗಳನ್ನು ಪ್ರಿಂಟ್ ಮಾಡುತ್ತದೆ. |
01:41 | ಈಗ ಪ್ರೋಗ್ರಾಂ ಅನ್ನು ರನ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡೋಣ. |
01:45 | ಅರೇ ಯಲ್ಲಿರುವ ವ್ಯಾಲ್ಯೂಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ಕಾಣಬಹುದು. |
01:50 | ಇಲ್ಲಿ ಇರದೇ ಇರುವ ಅರೇ ಎಲಿಮೆಂಟ್ ಅನ್ನು ನಾವು ಆಕ್ಸೆಸ್ ಮಾಡಲು ಪ್ರಯತ್ನಿಸಿದರೆ ಏನಾಗುತ್ತದೆ ಎಂದು ನೋಡೋಣ. |
01:57 | ಈಗ ಈ ಕೋಡ್ ಅನ್ನು ಟೈಪ್ ಮಾಡಿ. |
02:00 | ನಮ್ಮ ಅರೇ ಯಲ್ಲಿ 5 ಎಲಿಮೆಂಟ್‌ಗಳು ಮಾತ್ರ ಇವೆ ಎಂದು ನಮಗೆ ತಿಳಿದಿದೆ. |
02:04 | ಆದರೆ ಈ ಸ್ಟೇಟ್ಮೆಂಟ್ ನಲ್ಲಿ, ನಾವು index 50 ಯಲ್ಲಿರುವ ಎಲಿಮೆಂಟ್ ಅನ್ನು ಆಕ್ಸೆಸ್ ಮಾಡಲು ಯತ್ನಿಸುತ್ತಿದ್ದೇವೆ. ಅದು ಇಲ್ಲಿ ಇಲ್ಲ. |
02:12 | ಈ ಪ್ರೋಗ್ರಾಂ ಅನ್ನು ನಾವೀಗ ರನ್ ಮಾಡೋಣ. |
02:15 | ಈ ಪ್ರೋಗ್ರಾಂ, 7 ನೇ ಸಾಲಿನಲ್ಲಿ “ArrayIndexOutOfBoundsException“ ಎಂಬ ಎರರ್ ಮೆಸೇಜ್ ನೊಂದಿಗೆ ಕೊನೆಗೊಳ್ಳುತ್ತದೆ. |
02:25 | ಈ ಎರರ್ ಸಂದೇಶವು, ಎಕ್ಸೆಪ್ಶನ್ ನ ವಿಧ, ಇದು ಎಲ್ಲಿ ಆಗಿದೆ ಮತ್ತು ಎಕ್ಸೆಪ್ಶನ್ ನ ಇತರ ವಿವರಗಳನ್ನು ಸೂಚಿಸುತ್ತದೆ. |
02:35 | ಎರರ್ ನ ನಂತರ ಪ್ರೋಗ್ರಾಂ ನಿಂತುಹೋಗಿದೆ. ಆದ್ದರಿಂದ print ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗಿಲ್ಲ. |
02:42 | ಇದು Unchecked ಎಕ್ಸೆಪ್ಶನ್ ನ ಉದಾಹರಣೆಯಾಗಿದೆ. |
02:46 | Unchecked ಎಕ್ಸೆಪ್ಶನ್ ಗಳನ್ನು ರನ್-ಟೈಮ್ ಎಕ್ಸೆಪ್ಶನ್ ಎನ್ನುತ್ತೇವೆ. ಏಕೆಂದರೆ ಇದನ್ನು ಎಕ್ಸಿಕ್ಯೂಶನ್ ವೇಳೆಯಲ್ಲಿ ಮಾತ್ರ ಪರೀಕ್ಷಿಸಲಾಗುತ್ತದೆ. |
02:54 | ಸಂಖ್ಯೆಯೊಂದನ್ನು ಸೊನ್ನೆಯಿಂದ ಭಾಗಿಸುವುದು ಮತ್ತು ಇಲ್ಲದಿರುವ ಅರೇ ಎಲಿಮೆಂಟ್ ಅನ್ನು ಆಕ್ಸೆಸ್ ಮಾಡುವುದು ಮುಂತಾದ ಪ್ರೋಗ್ರಾಮಿಂಗ್ ಬಗ್ ಗಳು ಹಾಗೂ ಲಾಜಿಕಲ್ ಎರರ್‌ಗಳನ್ನು ಇವು ನಿರ್ವಹಿಸುತ್ತವೆ. |
03:07 | ಈಗ try catch ಬ್ಲಾಕ್ ಅನ್ನು ಬಳಸಿ, ಎಕ್ಸೆಪ್ಶನ್ ಅನ್ನು ಹೇಗೆ ನಿರ್ವಹಿಸುವುದೆಂದು ಕಲಿಯೋಣ. |
03:13 | try ಬ್ಲಾಕ್‌ನ ಒಳಗೆ ಇರುವ ಕೋಡ್‌ನ ಈ ಭಾಗವು, ಒಂದು ಎಕ್ಸೆಪ್ಶನ್ ಅನ್ನು ತೋರಿಸಬಹುದು. |
03:19 | ಇದಕ್ಕೆ ಸಂಬಂಧಿತ catch ಬ್ಲಾಕ್, ಅಬ್ಜೆಕ್ಟ್ e ಯಲ್ಲಿ ಎಕ್ಸೆಪ್ಶನ್ ನ ವಿವರಗಳನ್ನು ಪಡೆಯಬಹುದು. |
03:26 | catch ಬ್ಲಾಕ್‌ನ ಒಳಗೆ, ಎರರ್ ಸಂದೇಶಗಳನ್ನು ತೋರಿಸಲು ಅಥವಾ ಎರರ್ ಅನ್ನು ಸರಿಪಡಿಸಲು ನಾವು ಕೋಡ್ ಅನ್ನು ಬರೆಯಬಹುದು. |
03:34 | ನಾವೀಗ eclipse ಗೆ ಬದಲಾಯಿಸೋಣ. |
03:37 | ಮೊದಲಿಗೆ, ಈ ರೀತಿಯ ಎಕ್ಸೆಪ್ಶನ್ ಉಂಟು ಮಾಡಿರುವ ಕೋಡ್‌ನ ಸುತ್ತ try ಬ್ಲಾಕ್ ಒಂದನ್ನು ಸೇರಿಸೋಣ. |
03:44 | ನಾವೀಗ ಅನುರೂಪವಾದ catch ಬ್ಲಾಕ್ ಅನ್ನು ಸೇರಿಸೋಣ. |
03:48 | ಇದಕ್ಕಾಗಿ ಈ ಕೋಡ್ ಅನ್ನು ಟೈಪ್ ಮಾಡಿ. |
03:51 | ನಾವಿಲ್ಲಿ ಕಸ್ಟಮ್ ಮೆಸೇಜ್ “Array Overflow Exception occurred” ಅನ್ನು ಪ್ರಿಂಟ್ ಮಾಡಲಿದ್ದೇವೆ. |
03:57 | ಬ್ರ್ಯಾಕೆಟ್ಸ್ ಒಳಗೆ ನಾವು ArrayIndexOutOfBoundsException ನ ಒಂದು ಇನ್ಸ್ಟೆನ್ಸ್ ಅನ್ನು ತಯಾರಿಸಿದ್ದೇವೆ. |
04:05 | ಹೀಗಾಗಿ ಈ ಬ್ಲಾಕ್, ArrayIndexOutOfBoundsException ವಿಧದ ಎಕ್ಸೆಪ್ಶನ್ ಗಳನ್ನು ಕಂಡುಹಿಡಿಯಬಹುದು. |
04:11 | ನಾವೀಗ ಪ್ರೋಗ್ರಾಂ ಅನ್ನು ರನ್ ಮಾಡೋಣ. |
04:14 | ಎರರ್ ಮೆಸೇಜ್ ಪ್ರಿಂಟ್ ಆಗುವುದನ್ನು ನಾವು ನೋಡಬಹುದು. |
04:18 | ಆದರೆ ಈ ಬಾರಿ marks ಅರೇ ಯನ್ನು ಪ್ರಿಂಟ್ ಮಾಡುವುದು ಸಹ ಎಕ್ಸಿಕ್ಯೂಟ್ ಮಾಡಲಾಗಿದೆ. |
04:24 | ಈ ರೀತಿ ನಾವು ಎಕ್ಸೆಪ್ಶನ್ ಗಳನ್ನು ನಿರ್ವಹಿಸಬಹುದು. |
04:27 | ಈಗ, ಅನೇಕ catch ಬ್ಲಾಕ್‌ಗಳನ್ನು ಹೇಗೆ ಬಳಸಬಹುದೆಂದು ನೋಡೋಣ. |
04:32 | ಒಂದು ಬ್ಲಾಕ್, ಬೇರೆ ಬೇರೆ ಪ್ರಕಾರದ ಎಕ್ಸೆಪ್ಶನ್ ಗಳನ್ನು ತೋರಿಸಿದಾಗ ನಾವು ಅವುಗಳನ್ನು ಬಳಸಬಹುದು. |
04:38 | try ಬ್ಲಾಕ್ ಒಳಗೆ ಈ ಕೋಡ್ ಅನ್ನು ಟೈಪ್ ಮಾಡಿ. |
04:42 | ಈ ಕೋಡ್‌ನ ಸಾಲು ಅರೇ ಎಲಿಮೆಂಟ್ ಅನ್ನು ಸೊನ್ನೆಯಿಂದ ಭಾಗಿಸುತ್ತದೆ. ಏಕೆಂದರೆ a ಯ ವ್ಯಾಲ್ಯೂ ಸೊನ್ನೆ ಆಗಿದೆ. |
04:49 | ಆದ್ದರಿಂದ, ಮೊದಲಿಗೆ ArithmeticException ಅನ್ನು ತೋರಿಸಲಾಗುತ್ತದೆ. |
04:53 | ArithmeticException ನಿರ್ವಹಿಸಲು, ಇನ್ನೊಂದು catch ಬ್ಲಾಕ್ ಅನ್ನು ಸೇರಿಸೋಣ. |
04:58 | ಇದಕ್ಕಾಗಿ ಇಲ್ಲಿರುವ catch ಬ್ಲಾಕ್‌ನ ನಂತರ ಈ ಕೋಡ್ ಅನ್ನು ಟೈಪ್ ಮಾಡಿ. |
05:03 | ನಾವೀಗ ಇನ್ನೊಮ್ಮೆ ಪ್ರೋಗ್ರಾಂ ಅನ್ನು ರನ್ ಮಾಡೋಣ. |
05:06 | ಈ ಬಾರಿ "Arithmetic Exception occurred" ಎಂಬ ಎರರ್ ಸಂದೇಶವು ಪ್ರಿಂಟ್ ಆಗುತ್ತದೆ. ಇದನ್ನು ಮೊದಲೇ ಪತ್ತೆ ಮಾಡಲಾಗಿದೆ. |
05:13 | try catch ಬ್ಲಾಕ್ ನ ಹೊರಗಿನ ಕೋಡ್‌ನ ಉಳಿದ ಭಾಗವು ಎಕ್ಸಿಕ್ಯೂಟ್ ಆಗುತ್ತದೆ. |
05:19 | ನಂತರ checked ಎಕ್ಸೆಪ್ಶನ್ ಗಳ ಕುರಿತು ನೋಡೋಣ. |
05:23 | checked ಎಕ್ಸೆಪ್ಶನ್ ಗಳನ್ನು ಕಂಪೈಲ್ ಟೈಂನಲ್ಲಿ ಪರೀಕ್ಷಿಸಲಾಗುತ್ತದೆ. |
05:27 | ಹೀಗಾಗಿ ಪ್ರೋಗ್ರಾಂ ಅನ್ನು ರನ್ ಮಾಡುವ ಮೊದಲೇ ಇವುಗಳನ್ನು ನಿರ್ವಹಿಸಬೇಕು. |
05:31 | ಉದಾಹರಣೆಗೆ: ಇಲ್ಲದಿರುವ ಫೈಲ್ ಒಂದನ್ನು ಆಕ್ಸೆಸ್ ಮಾಡುವುದು ಅಥವಾ ನೆಟ್ವರ್ಕ್ ಡೌನ್ ಆಗಿರುವಾಗ ನೆಟ್ವರ್ಕ್ ಸಿಸ್ಟಂ ಅನ್ನು ಆಕ್ಸೆಸ್ ಮಾಡುವುದು. |
05:41 | ಈಗ Eclipse ಗೆ ಬದಲಾಯಿಸೋಣ ಮತ್ತು ಹೊಸ ಕ್ಲಾಸ್ MarksFile ಅನ್ನು ರಚಿಸೋಣ. |
05:47 | ಇಲ್ಲಿ main() ಮೆಥಡ್ ಅನ್ನು ಸೇರಿಸೋಣ. |
05:50 | ನಾವೀಗ ಕಂಪ್ಯೂಟರ್ ನಲ್ಲಿರುವ ಫೈಲ್ ಒಂದನ್ನು ಓದಬೇಕು (ರೀಡ್). |
05:54 | ಇದಕ್ಕಾಗಿ ಈ ಕೋಡ್ ಅನ್ನು ಟೈಪ್ ಮಾಡಿ. |
05:57 | ಇಲ್ಲಿ FileReader ಅಬ್ಜೆಕ್ಟ್ fr ಅನ್ನು null ಆಗಿ ಇನಿಶಿಯಲೈಸ್ ಮಾಡಲಾಗಿದೆ. |
06:03 | FileReader ಅಬ್ಜೆಕ್ಟ್ ಅನ್ನು, ಒಂದು ನಿರ್ದಿಷ್ಟ ಫೈಲ್ ಅನ್ನು ಆಕ್ಸೆಸ್ ಮತ್ತು ರೀಡ್ ಮಾಡಲು ಬಳಸಲಾಗುತ್ತದೆ. |
06:08 | Eclipse ಒಂದು ಎರರ್ ತೋರಿಸುತ್ತದೆ. |
06:11 | ಈ ಎರರ್ ಸರಿಪಡಿಸಲು, ಅದರ ಮೇಲೆ ಕ್ಲಿಕ್ ಮಾಡಿ ಮತ್ತು import FileReader java dot io ಮೇಲೆ ಡಬಲ್ ಕ್ಲಿಕ್ ಮಾಡಿ. |
06:19 | FileReader ಕ್ಲಾಸ್ ಅನ್ನು java dot io package ನಿಂದ ಇಂಪೋರ್ಟ್ ಮಾಡಲಾಗುತ್ತದೆ. |
06:25 | ಮುಂದಿನ ಟ್ಯುಟೋರಿಯಲ್ನಲ್ಲಿ ನಾವು package ಮತ್ತು ಇದರ ಬಳಕೆಯ ಕುರಿತು ವಿವರವಾಗಿ ಕಲಿಯಲಿದ್ದೇವೆ. |
06:31 | Home ಫೋಲ್ಡರ್ನಲ್ಲಿರುವ Marks ಎಂಬ ಫೈಲ್ ಅನ್ನು fr ಗೆ ಆಕ್ಸೆಸ್ ಮಾಡಲು ಅವಕಾಶ ನೀಡಲು, ಈ ಕೋಡ್ ಅನ್ನು ಟೈಪ್ ಮಾಡಿ. |
06:40 | ಇಲ್ಲಿ ತೋರಿಸಿರುವ ಪಾಥ್ ಅನ್ನು, ನಿಮ್ಮ ಸಿಸ್ಟಂನ Home ಫೋಲ್ಡರ್ನಲ್ಲಿ ಇರುವ ಪಾಥ್ ನಿಂದ ಬದಲಾಯಿಸಬೇಕು. |
06:46 | ಈಗ ಎರರ್ ಕಾಣಿಸಿಕೊಳ್ಳುತ್ತದೆ. ಕೋಡ್ನ ಈ ಸಾಲು FileNotFoundException ಎಂದು ಹೇಳಬಹುದೆಂದು ಇದು ಸೂಚಿಸುತ್ತದೆ. |
06:55 | error ಮೇಲೆ ಕ್ಲಿಕ್ ಮಾಡಿ ಮತ್ತು Surround with try/catch ಮೇಲೆ ಡಬಲ್ ಕ್ಲಿಕ್ ಮಾಡಿ. |
07:00 | ಈ ಎರರ್ ಸರಿಪಡಿಸಲು ಎಕ್ಲಿಪ್ಸ್ ಸ್ವಯಂಚಾಲಿತವಾಗಿ try catch ಅನ್ನು ಸೇರಿಸುವುದನ್ನು ನಾವು ನೋಡಬಹುದು. |
07:08 | ಹೀಗಾಗಿ ಇದು checked ಎಕ್ಸೆಪ್ಶನ್ ಆಗಿದೆ ಎಂಬುದನ್ನು ನಾವು ಅಂದುಕೊಳ್ಳಬಹುದು. |
07:12 | ನಂತರ, finally ಬ್ಲಾಕ್ ಅನ್ನು ಬಳಸುವ ಕುರಿತು ನೋಡೋಣ. |
07:16 | ಈ ಕೋಡ್ ಅನ್ನು ಟೈಪ್ ಮಾಡಿ. |
07:18 | finally ಬ್ಲಾಕ್ ಸಾಮಾನ್ಯವಾಗಿ try-catch ಬ್ಲಾಕ್ ಅನ್ನು ಅನುಸರಿಸುತ್ತದೆ. |
07:22 | ಎಕ್ಸೆಪ್ಶನ್ ಇದ್ದರೂ, ಇಲ್ಲದಿದ್ದರೂ, ಈ ಬ್ಲಾಕ್ನ ಒಳಗೆ ಇರುವ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಇದು ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಹೊಂದಿದೆ. |
07:32 | ನಾವೀಗ finally ಬ್ಲಾಕ್ ಒಳಗೆ, ಫೈಲ್ ರೆಫರನ್ಸ್ ಅನ್ನು ಮುಚ್ಚೋಣ. |
07:37 | ಇದಕ್ಕಾಗಿ fr dot close ಎಂದು ಟೈಪ್ ಮಾಡಿ. |
07:40 | ಈಗ Eclipse, IOException ಒಂದನ್ನು ತೋರಿಸಲಿದೆ ಎಂದು ಇದು ಸೂಚಿಸುತ್ತದೆ. |
07:45 | ಹೀಗಾಗಿ error ಮೇಲೆ ಕ್ಲಿಕ್ ಮಾಡಿ ಮತ್ತು Surround with try/catch ಮೇಲೆ ಡಬಲ್ ಕ್ಲಿಕ್ ಮಾಡಿ. |
07:51 | ಈಗ ಪ್ರೋಗ್ರಾಂ ಅನ್ನು ರನ್ ಮಾಡೋಣ. |
07:54 | ನಾವೀಗ FileNotFoundException ಸಂದೇಶವು ಪ್ರಿಂಟ್ ಆಗಿರುವುದನ್ನು ನೋಡಬಹುದು. |
07:59 | ಏಕೆಂದರೆ, ನಮ್ಮ Home ಫೋಲ್ಡರ್ ನಲ್ಲಿ, ನಾವು Marks ಹೆಸರಿನ ಫೈಲ್ ಹೊಂದಿಲ್ಲ. |
08:04 | fr ಇನ್ನೂ null ವ್ಯಾಲ್ಯೂವನ್ನು ರೆಫರ್ ಮಾಡುತ್ತಿರುವುದರಿಂದ ನಾವು NullPointerException ಅನ್ನು ನೋಡಬಹುದು. |
08:12 | ಆದರೆ finally ಬ್ಲಾಕ್ ಒಳಗೆ, print ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗುವುದನ್ನು ಸಹ ನಾವು ನೋಡಬಹುದು. |
08:18 | ನಾವೀಗ Marks ಟೆಕ್ಸ್ಟ್ ಫೈಲ್ ಅನ್ನು ನಮ್ಮ Home ಫೋಲ್ಡರ್ ನಲ್ಲಿ ರಚಿಸೋಣ. |
08:23 | ನೀವು Windows ನ ಬಳಕೆದಾರರು ಆಗಿದ್ದರೆ, ಟೆಕ್ಸ್ಟ್ ಫೈಲ್ ಒಂದನ್ನು ನಿಮ್ಮ ಲೋಕಲ್ ಡ್ರೈವ್ ನಲ್ಲಿ ರಚಿಸಿ ಮತ್ತು ಇದರ ಪಾಥ್ ಅನ್ನು ಹೇಳಿ. |
08:29 | ಉದಾಹರಣೆಗೆ ಇದನ್ನು D:\\Marks.txt ಆಗಿ ಸೂಚಿಸಬಹುದು. |
08:37 | ನಾವೀಗ ಪ್ರೋಗ್ರಾಂ ಅನ್ನು ಇನ್ನೊಮ್ಮೆ ರನ್ ಮಾಡೋಣ. |
08:40 | ಒಮ್ಮೆ Marks ಫೈಲ್ ಅನ್ನು ರಚಿಸಿದ ನಂತರ ಯಾವುದೇ ಎಕ್ಸೆಪ್ಶನ್ ಗಳು ಇರುವುದಿಲ್ಲ ಎಂದು ನಾವು ದೃಢಪಡಿಸಬಹುದು. |
08:46 | ಮತ್ತು “Inside finally block” ಪ್ರಿಂಟ್ ಆಗುತ್ತದೆ. |
08:50 | ಕ್ಲೀನ್-ಅಪ್ ಆಪರೇಶನ್, ಅಂದರೆ FileReader ಅಬ್ಜೆಕ್ಟ್ fr ಅನ್ನು ಮುಚ್ಚುವುದನ್ನು ಸಹ ಯಶಸ್ವಿಯಾಗಿ ಎಕ್ಸಿಕ್ಯೂಟ್ ಮಾಡಲಾಗಿದೆ. |
08:58 | ನಾವೀಗ ಈ ಟ್ಯುಟೋರಿಯಲ್ನ ಕೊನೆಗೆ ಬಂದಿದ್ದೇವೆ. |
09:02 | ಸಂಕ್ಷಿಪ್ತವಾಗಿ, |
09:04 | ಈ ಟ್ಯುಟೋರಿಯಲ್ ನಲ್ಲಿ ನಾವು:
ಎಕ್ಸೆಪ್ಶನ್ ಎಂದರೇನು, Checked ಮತ್ತು Unchecked ಎಕ್ಸೆಪ್ಶನ್ ಗಳು, try-catch ಬ್ಲಾಕ್ ಬಳಸಿ ಎಕ್ಸೆಪ್ಶನ್ ಗಳನ್ನು ನಿರ್ವಹಿಸುವುದು ಮತ್ತು finally ಬ್ಲಾಕ್ ಇವುಗಳ ಬಗ್ಗೆ ಕಲಿತೆವು. |
09:17 | ಅಸೈನ್ಮೆಂಟ್ ಗಾಗಿ, NullPointerException ಎನ್ನುವ ರನ್-ಟೈಮ್ ಎಕ್ಸೆಪ್ಷನ್ ಕುರಿತು ಕಲಿಯಿರಿ. |
09:24 | ಈ ಟ್ಯುಟೋರಿಯಲ್ನ Assignment ಲಿಂಕ್ನಲ್ಲಿ ಒದಗಿಸಿರುವ Demo.java ಎಂಬ ಹೆಸರಿನ ಜಾವಾ ಪ್ರೋಗ್ರಾಂ ಅನ್ನು ಅನುಸರಿಸಿ. |
09:31 | ನೀವು ಈ ಪ್ರೋಗ್ರಾಂ ಅನ್ನು ರನ್ ಮಾಡುವಾಗ ಎಕ್ಸೆಪ್ಶನ್ ಅನ್ನು ತೋರಿಸಲಾಗುತ್ತದೆ. |
09:35 | ಎಕ್ಸೆಪ್ಶನ್ ಗೆ ಕಾರಣವಾದ ಕೋಡ್ ಅನ್ನು ಗುರುತಿಸಿ. |
09:40 | try-catch ಬ್ಲಾಕ್ ಬಳಸಿ ಇದನ್ನು ಸರಿಪಡಿಸಿ. |
09:43 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
09:52 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
10:04 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ. |
10:15 | ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. |
10:23 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.. |