Arduino/C2/First-Arduino-Program/Kannada
From Script | Spoken-Tutorial
Revision as of 16:01, 29 June 2020 by Sandhya.np14 (Talk | contribs)
Time | Narration |
00:01 | First Arduino Program ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು:
ಆರ್ಡುಯಿನೊ ಪ್ರೋಗ್ರಾಂ ಬರೆಯಲು, ಪ್ರೋಗ್ರಾಂ ಕಂಪೈಲ್ ಮತ್ತು ಅಪ್ಲೋಡ್ ಮಾಡಲು ಮತ್ತು ಎಲ್.ಇ.ಡಿ ಮಿನುಗಿಸಲು ಕಲಿಯಲಿದ್ದೇವೆ. |
00:19 | ಇಲ್ಲಿ ನಾನು:
ಆರ್ಡುಯಿನೊ ಯು.ಎನ್ ಬೋರ್ಡ್, |
00:23 | ಉಬಂಟು ಲೀನಕ್ಸ್ 14.04 ಅಪರೇಟಿಂಗ್ ಸಿಸ್ಟಂ ಮತ್ತು
Arduino IDE ಬಳಸುತ್ತಿದ್ದೇನೆ. |
00:30 | ಈ ಟ್ಯುಟೋರಿಯಲ್ ಅನುಸರಿಸಲು ನೀವು: ಎಲೆಕ್ಟ್ರಾನಿಕ್ಸ್ ನ ಮೂಲಜ್ಞಾನ, |
00:36 | C ಅಥವಾ C++ ಪ್ರೋಗ್ರಾಂ ಬರೆಯುವ ಕುರಿತ ಮೂಲಜ್ಞಾನ |
00:41 | ಮತ್ತು ಆರ್ಡುಯಿನೊ ಯು.ಎನ್ ಬೋರ್ಡ್ ಮತ್ತು ಯು.ಎಸ್.ಬಿ ಪವರ್ ಕೇಬಲ್ ಕುರಿತು ತಿಳಿದಿರಬೇಕು. |
00:46 | ನಮ್ಮ ಮೊದಲ ಪ್ರೋಗ್ರಾಂ ಬರೆಯಲು Arduino IDE ತೆರೆಯೋಣ. |
00:52 | ಇಲ್ಲಿ ನಾವು Menu ಬಾರ್ ನ ಅಡಿಯಲ್ಲಿ ವಿವಿಧ ಮೆನುಗಳನ್ನು ನೋಡಬಹುದು. |
00:57 | Arduino ಎನ್ವಾಯರನ್ಮೆಂಟ್ ನಲ್ಲಿ ಪ್ರತಿ ಪ್ರೋಗ್ರಾಂ ಅನ್ನುSketch ಎಂದು ಸೇವ್ ಮಾಡಲಾಗುತ್ತದೆ. |
01:03 | ಡೀಫಾಲ್ಟ್ ಆಗಿ ಇದು Sketch underscore ಎಂದು ಹೆಸರನ್ನು ಮತ್ತು ಇನ್ನೊಂದು ಹೆಸರನ್ನು ರಚಿಸುತ್ತದೆ. |
01:11 | ನೀವು File ಮೇಲೆ ಹಾಗೂ ನಂತರ Save ಮೇಲೆ ಕ್ಲಿಕ್ ಮಾಡಿ ಹೆಸರನ್ನು ಬದಲಾಯಿಸಬಹುದು. |
01:18 | ಫೈಲ್ ಹೆಸರನ್ನು BlinkLed ಎಂದು ಟೈಪ್ ಮಾಡಿ.
ಈಗ Save ಬಟನ್ ಮೇಲೆ ಕ್ಲಿಕ್ ಮಾಡಿ. |
01:26 | ಇದು ಎರಡು ಎಂಪ್ಟಿ ಫಂಕ್ಷನ್ ಗಳೊಂದಿಗೆ ಡೀಫಾಲ್ಟ್ ಪ್ರೋಗ್ರಾಂ ಎನ್ವಾಯರನ್ಮೆಂಟ್ ಆಗಿದೆ. ಅವೆಂದರೆ void setup() ಮತ್ತು void loop(). |
01:35 | ನಾವೀಗ ಎಲ್.ಇ.ಡಿ ಮಿನುಗಿಸಲು ಆರ್ಡುಯಿನೊ ಪ್ರೋಗ್ರಾಂ ಬರೆಯೋಣ. |
01:41 | ನಾನು ನನ್ನ ಐ.ಡಿ.ಇ ಮತ್ತು ಆರ್ಡುಯಿನೊ ಬೋರ್ಡ್ ಅಕ್ಕಪಕ್ಕಕ್ಕೆ ಇಟ್ಟಿದ್ದೇನೆ. |
01:47 | ಇದು, ಪ್ರೋಗ್ರಾಂನ ಎಕ್ಸಿಕ್ಯೂಶನ್ ಮತ್ತು ಬೋರ್ಡ್ ನಲ್ಲಿ ಔಟ್ಪುಟ್ ನೋಡಲು ನಮಗೆ ಸಹಕರಿಸುತ್ತದೆ. |
01:54 | ಈ ಎಲ್.ಇ.ಡಿ ಪ್ರೋಗ್ರಾಂಗೆ, ನನಗೆ ಪಿನ್ ಸಂಖ್ಯೆ 13 ಅನ್ನು ಮಿನುಗಿಸಬೇಕು. |
02:00 | ಇದು ಈ ಎಲ್.ಇ.ಡಿ ಗೆ ಆಂತರಿಕವಾಗಿ ಸಂಪರ್ಕಿಸಲಾಗಿರುವ ಡಿಜಿಟಲ್ ಇನ್ಪುಟ್/ಔಟ್ಪುಟ್ ಪಿನ್ ಆಗಿದೆ. |
02:07 | ಮಾರ್ಕರ್ ಜೊತೆ ಹೈಲೈಟ್ ಮಾಡಿರುವುದನ್ನು ಗಮನಿಸಿ. |
02:10 | ನಾವೀಗ ನಮ್ಮ ಕೋಡ್ ಬರೆಯಬೇಕು. |
02:13 | void setup() ಫಂಕ್ಷನ್, ಮೈಕ್ರೋಕಂಟ್ರೋಲರ್ ಸ್ಥಾಪನೆಗಾಗಿ ಇರುತ್ತದೆ. |
02:18 | ನಮ್ಮ ವಿಚಾರದಲ್ಲಿ, ಪಿನ್ ಸಂಖ್ಯೆ 13 ನ್ನು ಮೊದಲಿಗೆ ಸ್ಥಾಪಿಸಬೇಕು. |
02:24 | ಇದನ್ನು ಮಾಡಲು, ನಾವು pinMode ಎಂಬ ಇನ್-ಬಿಲ್ಟ್ ಫಂಕ್ಷನ್ ಬಳಸಲಿದ್ದೇವೆ. |
02:31 | ಇದು ಎರಡು ಪ್ಯಾರಾಮೀಟರ್ ಗಳನ್ನು ಹೊಂದಿದೆ - pin number comma mode. |
02:36 | ಹೀಗೆ ಟೈಪ್ ಮಾಡಿ: pinMode open brackets 13 comma output close brackets semicolon. |
02:48 | ನಾವು ಮೋಡ್ ಅನ್ನು ಔಟ್ಪುಟ್ ಆಗಿ ಏಕೆ ಇಡಬೇಕು? |
02:51 | ಇದು ಏಕೆಂದರೆ, ಪಿನ್ ಸಂಖ್ಯೆ 13 ಆಂತರಿಕವಾಗಿ ಎಲ್.ಇ.ಡಿ ಗೆ ಸಂಪರ್ಕಿತವಾಗಿದೆ. |
02:58 | ವೋಲ್ಟೆಜ್ ಅಧಿಕವಾಗಿರುವಾಗ ಇದು ಮಿನುಗುತ್ತದೆ, ಆದರೆ ವೋಲ್ಟೆಜ್ ಶೂನ್ಯವಾಗಿರುವಾಗ ಇದು ಮಿನುಗುವುದಿಲ್ಲ. |
03:05 | ಎಲ್.ಇ.ಡಿ ಗೆ ವೋಲ್ಟೆಜ್ ಒದಗಿಸಲು ನಾವು ಮೋಡ್ ಅನ್ನು ‘output’ ಎಂದು ಕಾನ್ಫಿಗರ್ ಮಾಡಬೇಕು. |
03:12 | ನಂತರ ನಾವು void loop() ಫಂಕ್ಷನ್ ಗೆ ಕೋಡ್ ಬರೆಯಲಿದ್ದೇವೆ. |
03:17 | ಎಲ್.ಇ.ಡಿ ಯನ್ನು ಮಿನುಗಿಸುವ ಮೊದಲು ನಾವು ಒಂದು ಎಲ್.ಇ.ಡಿ ಯನ್ನು ಪ್ರಕಾಶಿಸೋಣ. |
03:22 | digitalWrite ಎಂಬ ಫಂಕ್ಷನ್ ಇದ್ದು ಇದು ಡಿಜಿಟಲ್ ಪಿನ್ ಗೆ ರೈಟ್ ಮಾಡುತ್ತದೆ. |
03:29 | ಇದು pin number ಮತ್ತು value ಅಥವಾ state ಎಂಬ ಎರಡು ಪ್ಯಾರಾಮೀಟರ್ ಗಳನ್ನು ಹೊಂದಿದೆ. |
03:36 | ಈಗಾಗಲೇ ನಮಗೆ ಪಿನ್ ಸಂಖ್ಯೆಯು 13 ಎಂದು ತಿಳಿದಿದೆ. ಮೌಲ್ಯವು ʻHIGHʼ ಅಥವಾ ʻLOWʼ ಆಗಿರಬೇಕು. |
03:44 | ಹೀಗೆ ಟೈಪ್ ಮಾಡಿ: digitalWrite open brackets 13 comma HIGH close brackets semicolon. |
03:55 | ನಾವು ಎಲ್.ಇ.ಡಿ ಯನ್ನು ಬೆಳಗಿಸಬೇಕು. ಹೀಗಾಗಿ ವೋಲ್ಟೇಜ್ ʻHIGHʼ ಇರಬೇಕು. |
04:00 | ಅಷ್ಟೇ. ಕೋಡ್ ತುಂಬಾ ಸರಳವಾಗಿದೆ. |
04:04 | ಮುಂದಿನ ಹಂತ, ಪ್ರೋಗ್ರಾಂ ಅನ್ನು ಕಂಪೈಲ್ ಮಾಡುವುದು. |
04:08 | ಪ್ರೋಗ್ರಾಂ ಅನ್ನು ದೃಢೀಕರಿಸಲು ಮೆನು ಬಾರ್ ನಲ್ಲಿ Tick icon ಮೇಲೆ ಕ್ಲಿಕ್ ಮಾಡಿ. |
04:14 | ಇದು ನಮ್ಮ ಪ್ರೋಗ್ರಾಂ ಅನ್ನು, ಮೈಕ್ರೋಕಂಟ್ರೋಲರ್ ಅರ್ಥೈಸಿಕೊಳ್ಳಬಲ್ಲ ಬೈನರಿ ಫಾರ್ಮ್ಯಾಟ್ ಗೆ ಕಂಪೈಲ್ ಮಾಡುತ್ತದೆ. |
04:22 | IDE ಯ ಕೆಳಗಡೆ ನೀವು ಕಂಪೈಲೇಶನ್ ಸ್ಟೇಟಸ್ ಅನ್ನು ನೋಡಬಹುದು. |
04:27 | ನಂತರ ನಾವು ಪ್ರೋಗ್ರಾಂ ಅನ್ನು ಮೈಕ್ರೋಕಂಟ್ರೋಲರ್ ಗೆ ಅಪ್ಲೋಡ್ ಮಾಡಬೇಕು. |
04:32 | ಅಪ್ಲೋಡ್ ಮಾಡಲು ಮೆನು ಬಾರ್ ನಲ್ಲಿ ರೈಟ್ ಆರೋ ಬಟನ್ ಮೇಲೆ ಕ್ಲಿಕ್ ಮಾಡಿ.
ಬದಲಾಗಿ ನೀವು Sketch ಮೆನು ಆರಿಸಿ ಅಪ್ಲೋಡ್ ಮಾಡಬಹುದು. |
04:48 | TX RX ಸ್ವಲ್ಪ ಕಾಲ ಮಿನುಗುವುದನ್ನು ನೀವು ನೋಡಬಹುದು. ಟ್ರಾನ್ಸ್ಮಿಶನ್ ON ಆಗಿದೆ ಎಂಬುದನ್ನು ಇದು ಸೂಚಿಸುತ್ತದೆ. |
04:57 | ಎಲ್.ಇ.ಡಿ ಬೆಳಗುತ್ತಿರುವುದನ್ನು ನೀವು ನೋಡಬಹುದು. |
05:01 | ಎಲ್.ಇ.ಡಿ ಯನ್ನು ಟರ್ನ್ ಆಫ್ ಮಾಡುವುದು ಹೇಗೆ?
ಎರಡನೇ ಪ್ಯಾರಾಮೀಟರ್ ಮೌಲ್ಯವು ʻಲೋʼ ಇರುವಂತೆ ನಾವು ಈ ಪ್ರೋಗ್ರಾಂ ಅನ್ನು ಮಾರ್ಪಡಿಸಬೇಕು. |
05:11 | ನಾವೀಗ ಈ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡೋಣ. |
05:16 | ಎಲ್.ಇ.ಡಿ ಆಫ್ ಆಗಿರುವುದನ್ನು ನೀವೀಗ ನೋಡಬಹುದು. |
05:20 | ಎಲ್.ಇ.ಡಿ ಯನ್ನು ಆನ್ ಮತ್ತು ಆಫ್ ಮಾಡಲು ನಮಗೀಗ ತಿಳಿದಿದೆ. |
05:25 | ನಂತರ, ಎಲ್.ಇ.ಡಿ ಮಿನುಗಲು ನಾವು ಪ್ರೋಗ್ರಾಂ ಅನ್ನು ಮಾರ್ಪಡಿಸಲಿದ್ದೇವೆ. |
05:31 | ಅಂದರೆ ಒಂದು ಸೆಕೆಂಡಿನ ಅಂತರದಲ್ಲಿ ಆನ್ ಮತ್ತು ಆಫ್ ಆಗಲು. |
05:36 | ಇಲ್ಲಿ ತೋರಿಸಿರುವಂತೆ ನಾವು ಪ್ರೋಗ್ರಾಂ ಅನ್ನು ಬದಲಿಸಲಿದ್ದೇವೆ. delay() ಎನ್ನುವುದು ಬಿಲ್ಟ್-ಇನ್ ಫಂಕ್ಷನ್ ಆಗಿದ್ದು, ನಿರ್ದಿಷ್ಟ ಸಮಯಕ್ಕೆ ಪ್ರೋಗ್ರಾಂ ಅನ್ನು ಪಾಜ್ (pause) ಮಾಡುತ್ತದೆ. |
05:46 | ನಾನು ಹೀಗೆ ಟೈಪ್ ಮಾಡುತ್ತೇನೆ: delay open brackets 500 close brackets semicolon.
ಇಲ್ಲಿ 500 ಎಂದರೆ 500 ಮಿಲಿಸೆಕೆಂಡ್ ಗಳು, ಅಂದರೆ ಅರ್ಧ ಸೆಕೆಂಡಿನ ವಿಳಂಬ. |
06:01 | ನಂತರ digitalWrite open brackets 13 comma LOW close brackets semicolon ಎಂದು ಟೈಪ್ ಮಾಡಿ. |
06:12 | ಇದು ಡಿಜಿಟಲ್ ಪಿನ್ 13 ಅನ್ನು ಆಫ್ ಮೋಡ್ ಗೆ ಕೊಂಡೊಯ್ಯುತ್ತದೆ. |
06:17 | ಇದನ್ನು ನಾವು ಎಷ್ಟು ಹೊತ್ತು ಟರ್ನ್ ಆಫ್ ಮಾಡಬೇಕು?
delay open brackets 500 close brackets semicolon ಎಂದು ಟೈಪ್ ಮಾಡಿ. |
06:28 | ಇನ್ನೊಮ್ಮೆ ನಾವು ಇದನ್ನು 500 ಮಿಲಿಸೆಕೆಂಡುಗಳ ಕಾಲ ಆಫ್ ಮಾಡಬೇಕು. |
06:34 | ನಾನು void loop() ಅನ್ನು ಹಂತ ಹಂತವಾಗಿ ವಿವರಿಸುತ್ತೇನೆ. |
06:40 | void loop() ಎನ್ನುವುದು infinite ಲೂಪ್ ಆಗಿದ್ದು, ಇದು ನಿರಂತರವಾಗಿ ಎಕ್ಸಿಕ್ಯೂಟ್ ಮಾಡುತ್ತದೆ. |
06:45 | ಎಲ್.ಇ.ಡಿ ಗೆ ಸಂಪರ್ಕಿಸಲಾಗಿರುವ ಪಿನ್ ಸಂಖ್ಯೆ 13, 500 ಮಿಲಿಸೆಕೆಂಡುಗಳ ಕಾಲ ʻಹೈʼ ಸ್ಥಿತಿಯಲ್ಲಿರುತ್ತದೆ. ನಂತರ 500 ಮಿಲಿಸೆಕೆಂಡುಗಳ ಕಾಲ ʻಲೋʼ ಸ್ಥಿತಿಯಲ್ಲಿರುತ್ತದೆ. |
06:57 | ಈ ಪ್ರೋಗ್ರಾಂ ಅನ್ನು ಲೂಪ್ ನಲ್ಲಿ ನಿರಂತರವಾಗಿ ಎಕ್ಸಿಕ್ಯೂಟ್ ಮಾಡಲಾಗುತ್ತದೆ. |
07:02 | ಈ ಪ್ರೋಗ್ರಾಂ ಅನ್ನು ಅಪ್ಲೋಡ್ ಮಾಡೋಣ. |
07:05 | ನಮ್ಮ ಎಲ್.ಇ.ಡಿ ಮಿನುಗುವುದನ್ನು ನಾವು ನೋಡಬಹುದು. |
07:10 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ನಾವೀಗ ಸಂಕ್ಷೇಪಿಸೋಣ. |
07:16 | ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡುಯಿನೊ ಪ್ರೋಗ್ರಾಂ ಬರೆಯಲು, |
07:21 | ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಲು ಮತ್ತು ಎಲ್.ಇ.ಡಿ ಮಿನುಗಿಸಲು ಕಲಿತೆವು. |
07:27 | ಈ ಅಸೈನ್ಮೆಂಟ್ ಪೂರ್ಣಗೊಳಿಸಿ. ಮೇಲಿನ Blink LED ಪ್ರೋಗ್ರಾಂನಲ್ಲಿ ವಿಳಂಬದ ಟೈಮಿಂಗ್ ಅನ್ನು 1500 ಕ್ಕೆ ಬದಲಾಯಿಸಿ. |
07:37 | ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಿ ಮತ್ತು ಎಲ್.ಇ.ಡಿ ಮಿನುಗುವುದನ್ನು ಗಮನಿಸಿ. |
07:45 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
7:53 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆ ತೇರ್ಗಡೆಯಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
08:06 | ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ? ದಯವಿಟ್ಟು ಈ ಸೈಟ್ ಗೆ ಭೇಟಿ ನೀಡಿ. |
08:13 | ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ.
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ. |
08:24 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ. |
08.35 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |