FrontAccounting-2.4.7/C2/Place-Sales-Order-in-FrontAccounting/Kannada

From Script | Spoken-Tutorial
Revision as of 15:06, 15 June 2020 by Sandhya.np14 (Talk | contribs)

Jump to: navigation, search
Time Narration


00:01 FrontAccounting ನಲ್ಲಿ ಸೇಲ್ಸ್ ಆರ್ಡರ್ ನೀಡುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ನಲ್ಲಿ ನಾವು,

ಸೇಲ್ಸ್ ಕೊಟೇಶನ್ ಎಂಟ್ರಿ,

00:13 ಸೇಲ್ಸ್ ಆರ್ಡರ್ ಎಂಟ್ರಿ,
00:15 ಡೆಲಿವರಿ ಮತ್ತು

ಸೇಲ್ಸ್ ಆರ್ಡರ್ ಇನ್ಕ್ವೈರಿ ಮಾಡಲು ಕಲಿಯಲಿದ್ದೇವೆ.

00:20 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು, ನಾನು

ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04,

00:28 FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
00:32 ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು ಬುಕ್ ಕೀಪಿಂಗ್ನ ತತ್ವಗಳ ಜ್ಞಾನ ಹೊಂದಿರಬೇಕು.
00:42 ಮತ್ತು ನೀವು ಈಗಲೇ FrontAccounting ನಲ್ಲಿ ಆರ್ಗನೈಸೇಶನ್ ಅಥವಾ ಕಂಪನಿಯನ್ನು ಸೆಟಪ್ ಮಾಡಿರಬೇಕು.
00:48 ಇಲ್ಲದಿದ್ದರೆ ಸಂಬಂಧಿತ FrontAccounting ಟ್ಯುಟೋರಿಯಲ್ ಗಳಿಗಾಗಿ ಈ ವೆಬ್ ಸೈಟ್ ಗೆ ಭೇಟಿ ನೀಡಿ.
00:54 ನೀವು FrontAccounting ಇಂಟರ್ ಫೇಸ್ ನಲ್ಲಿ ಕೆಲಸ ಮಾಡಲು ಶುರು ಮಾಡುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ.
01:00 ಈಗ ನಾವು FrontAccounting ಇಂಟರ್ಫೇಸ್ ಅನ್ನು ತೆರೆಯೋಣ.
01:04 ಬ್ರೌಸರ್ ತೆರೆಯಿರಿ localhost/account ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
01:13 login ಪುಟ ತೆರೆದುಕೊಳ್ಳುತ್ತದೆ.
01:16 ಅಡ್ಮಿನ್ ಅನ್ನು ಯೂಸರ್ ನೇಮ್ ಆಗಿ ಮತ್ತು ಇದರ ಪಾಸ್ ವರ್ಡ್ ಟೈಪ್ ಮಾಡಿ.
01:21 ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.
01:24 FrontAccounting ಇಂಟರ್ ಫೇಸ್ ತೆರೆದುಕೊಳ್ಳುತ್ತದೆ.
01:27 ಸೇಲ್ಸ್ ಗೆ ಬೇಕಾದ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ್ದೇವೆ.
01:31 ಸೇಲ್ಸ್ ಕೊಟೇಶನ್ ಎಂಟ್ರಿ ಮಾಡಲು ನಾವು ತಯಾರಿದ್ದೇವೆ.
01:35 Sales ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

Transactions ಪ್ಯಾನೆಲ್ ನಲ್ಲಿ Sales Quotation Entry ಮೇಲೆ ಕ್ಲಿಕ್ ಮಾಡಿ.

01:43 ಕಸ್ಟಮರ್ ಹೆಸರು ಮತ್ತು ಇತರ ಸಂಬಂಧಿತ ಮಾಹಿತಿ ಹೊಂದಿರುವ ಡ್ರಾಪ್ ಡೌನ್ ಬಾಕ್ಸ್ ಅನ್ನು ನಾವು ನೋಡಬಹುದು.
01:50 ಇದು ಏಕೆಂದರೆ Add and Manage Customers ನಲ್ಲಿ ನಾವು ವಿವರಗಳನ್ನು ಆಗಲೇ ಪರಿಷ್ಕರಿಸಿದ್ದೇವೆ.
01:57 ನಾವೀಗ ನಮ್ಮ ಕಸ್ಟಮರ್ ‘Amit’ ಗೆ ಹೊಸ ಸೇಲ್ಸ್ ಕೊಟೇಶನ್ ಎಂಟ್ರಿಯನ್ನು ತಯಾರಿಸೋಣ.
02:03 ರೆಫರನ್ಸ್ ಸಂಖ್ಯೆಯು ಅಟೋ ಜನರೇಟೆಡ್ ಆಗಿರುವುದನ್ನು ಗಮನಿಸಿ.
02:07 ಉಳಿದ ಎಲ್ಲಾ ಫೀಲ್ಡ್ ನ ಎಂಟ್ರಿಗಳನ್ನು ಹಾಗೆಯೇ ಬಿಟ್ಟು ಬಿಡಿ.
02:11 Sales Quotation Items ಪ್ಯಾನಲ್ ನಲ್ಲಿ Item Description ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.

Item ಅನ್ನು Dell laptop ಆಗಿ ಆರಿಸಿ.

02:28 ಇದು ಏಕೆಂದರೆ ನಾವಿದನ್ನು ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ್ದೇವೆ.
02:33 Quantity ಫೀಲ್ಡ್ ನಲ್ಲಿ, ನಾವು 1 ಅನ್ನು ಕ್ವಾಂಟಿಟಿ ಆಗಿ ಟೈಪ್ ಮಾಡುತ್ತೇನೆ.
02:38 ಕಸ್ಟಮರ್ ಗೆ ಡಿಸ್ಕೌಂಟ್ ನೀಡಲು ನೀವು ಇಚ್ಛಿಸಿದಲ್ಲಿ, Discount ಫೀಲ್ಡ್ ನಲ್ಲಿ ಶೇಕಡಾವನ್ನು ಟೈಪ್ ಮಾಡಿ.
02:45 ನಾನು ನನ್ನ ಕಸ್ಟಮರ್ ಗೆ 0.10 % ಡಿಸ್ಕೌಂಟ್ ನೀಡುತ್ತೇನೆ.
02:51 ಈಗ ಎಂಟ್ರಿಯನ್ನು ಸೇವ್ ಮಾಡಲು, ಸಾಲಿನ ಬಲ ತುದಿಯಲ್ಲಿರುವ Add Item ಬಟನ್ ಮೇಲೆ ಕ್ಲಿಕ್ ಮಾಡಿ.
02:58 ಈ ಸೇಲ್ಸ್ ಆರ್ಡರ್ಗೆ ಅಮೌಂಟ್ ಟೋಟಲ್ 12% ಜಿಎಸ್ಟಿಯನ್ನು ಒಳಗೊಂಡಿದೆ ಎಂಬುದನ್ನು ಗಮನಿಸಿ.
03:06 Shipping Charge ಫೀಲ್ಡ್ ನಲ್ಲಿ ಕಸ್ಟಮರ್ ಗೆ ಮಾಡಿದ ಐಟಂಗಳ ಶಿಪ್ ಮೆಂಟ್ ಗೆ ಶುಲ್ಕವನ್ನು ಸೇರಿಸಲಾಗುತ್ತದೆ.
03:13 ಹೀಗಾಗಿ Shipping Charge ಫೀಲ್ಡ್ ನಲ್ಲಿ ನಾನು ರೂ. 200 ಎಂದು ಟೈಪ್ ಮಾಡುತ್ತೇನೆ.
03:19 ಪ್ಯಾನೆಲ್ ನ ಕೆಳಭಾಗದಲ್ಲಿ ಇರುವ Update ಬಟನ್ ಮೇಲೆ ಕ್ಲಿಕ್ ಮಾಡಿ.
03:23 ನಾವೀಗ Subtotal ಮತ್ತು Amount Total ನಲ್ಲಿ ಬದಲಾವಣೆಗಳನ್ನು ನೋಡಬಹುದು.
03:28 ಕೆಳಗೆ ಸ್ಕ್ರಾಲ್ ಮಾಡಿ.

ವಿಂಡೋವಿನ ಕೆಳಭಾಗದಲ್ಲಿ Place Quotation ಬಟನ್ ಮೇಲೆ ಕ್ಲಿಕ್ ಮಾಡಿ.

03:35 ಕೊಟೇಶನ್ ಅನ್ನು ಈಗ ನೀಡಲಾಗಿದೆ ಎಂಬುದನ್ನು ಸಕ್ಸಸ್ ಮೆಸೇಜ್ ತೋರಿಸುತ್ತದೆ.
03:40 ನಂತರ ಕೊಟೇಶನ್ ಗೆ ಪ್ರತಿಯಾಗಿ ನಾವು ಆರ್ಡರ್ ಅನ್ನು ಪ್ಲೇಸ್ ಮಾಡಬೇಕು.
03:46 ಇದಕ್ಕಾಗಿ Make Sales Order Against This Quotation ಲಿಂಕ್ ಮೇಲೆ ಕ್ಲಿಕ್ ಮಾಡಿ.
03:52 ಸೇಲ್ಸ್ ಆರ್ಡರ್ ಎಂಟ್ರಿಗೆ ವಿಂಡೋ ತೆರೆದುಕೊಳ್ಳುತ್ತದೆ.
03:56 ಐಟಂ ನಿರೂಪಣೆ ವಿವರಗಳನ್ನು ನಾವಿಲ್ಲಿ ನೋಡಬಹುದು.
04:00 ಕೆಳಗೆ ಸ್ಕ್ರಾಲ್ ಮಾಡಿ.

ವಿಂಡೋವಿನ ಕೆಳಭಾಗದಲ್ಲಿ Place Order ಬಟನ್ ಮೇಲೆ ಕ್ಲಿಕ್ ಮಾಡಿ.

04:06 ನಾವು ಯಶಸ್ವಿಯಾಗಿ ಆರ್ಡರ್ ಪ್ಲೇಸ್ ಮಾಡಿದ್ದೇವೆ ಎಂಬುದನ್ನು ದೃಢೀಕರಣದ ಮೆಸೇಜ್ ಹೇಳುತ್ತದೆ.
04:12 ಮುಂದಿನ ಹಂತ ಡೆಲಿವರಿ ಮಾಡುವುದು.
04:15 ಇದಕ್ಕಾಗಿ Make Delivery Against This Order ಲಿಂಕ್ನ ಮೇಲೆ ಕ್ಲಿಕ್ ಮಾಡಿ.
04:21 Deliver Items for a Sales Order ಎಂಬ ಹೆಸರಿನ ವಿಂಡೋ ತೆರೆದುಕೊಳ್ಳುತ್ತದೆ.
04:27 ಡೆಲಿವರಿ ಮಾಡಬೇಕಾದ ಐಟಂಗಳ ವಿವರಗಳನ್ನು ಇದು ತೋರಿಸುತ್ತದೆ.
04:32 ವಿಂಡೋವಿನ ಕೆಳಭಾಗದಲ್ಲಿ Process Dispatch ಬಟನ್ ಮೇಲೆ ಕ್ಲಿಕ್ ಮಾಡಿ.
04:37 ಡೆಲಿವರಿಗಾಗಿ ಎಂಟ್ರಿ ಮಾಡಿರುವುದನ್ನು ದೃಢೀಕರಿಸುವ ಮೆಸೇಜ್ ಅನ್ನು ನಾವು ನೋಡಬಹುದು.
04:43 ಕೆಳಗಿನ ಆಯ್ಕೆಗಳನ್ನು ನೀವಾಗಿಯೇ ಶೋಧಿಸಿ.
04:47 Sales ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
04:50 ಮಾಡಲಾಗಿರುವ ಸೇಲ್ಸ್ ಎಂಟ್ರಿಯ ಸ್ಟೇಟಸ್ ಅನ್ನು ನಾವೀಗ ಪರೀಕ್ಷಿಸೋಣ.
04:55 Inquiries and Reports ಪ್ಯಾನಲ್ ಅಡಿಯಲ್ಲಿ Sales Order Inquiry ಮೇಲೆ ಕ್ಲಿಕ್ ಮಾಡಿ.
05:01 ಇಲ್ಲಿ ನೀಡಿರುವ ಟೇಬಲ್ ನಲ್ಲಿ ಎಂಟ್ರಿಯ ವಿವರಗಳನ್ನು ನಾವು ನೋಡಬಹುದು.
05:06 ವಿಂಡೋವಿನ ಕೆಳಭಾಗದಲ್ಲಿ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
05:10 ನಂತರ ಕಸ್ಟಮರ್ ಪೇಮೆಂಟ್ ಕುರಿತು ತಿಳಿಯೋಣ.
05:14 Transactions ಪ್ಯಾನಲ್ ನ ಬಲಗಡೆಗೆ Customer Payments ಲಿಂಕ್ ಮೇಲೆ ಕ್ಲಿಕ್ ಮಾಡಿ.
05:20 ಗ್ರಾಹಕ ಅಮಿತ್ ನಮಗೆ ರೂ. 53147 ಪಾವತಿಸಬೇಕು.

Amount ಫೀಲ್ಡ್ ನಲ್ಲಿ ಮೊತ್ತವನ್ನು ನಮೂದಿಸಿ.

05:31 Amount of Discount ಫೀಲ್ಡ್ನಲ್ಲಿ ರೂ. 2000 ಎಂದು ನಮೂದಿಸೋಣ.
05:37 Amount ಫೀಲ್ಡ್ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ.
05:40 ಡಿಸ್ಕೌಂಟ್ ನ ನಂತರ ಮೊತ್ತದಲ್ಲಿ ಬದಲಾವಣೆಯಾಗಿರುವುದನ್ನು ನಾವು ನೋಡಬಹುದು.
05:44 Memo ಫೀಲ್ಡ್ ನಲ್ಲಿ ವಿವರಣೆಯನ್ನು ನಮೂದಿಸಿ.
05:47 ನಾನು “Amount received from Amit for sale of Dell laptop” ಎಂದು ಟೈಪ್ ಮಾಡುತ್ತೇನೆ.
05:53 ನಂತರ ವಿಂಡೋವಿನ ಕೆಳಭಾಗದಲ್ಲಿ Add payment ಬಟನ್ ಅನ್ನು ಕ್ಲಿಕ್ ಮಾಡಿ.
05:58 ನಾವು “Customer payment has been successfully entered” ಎಂಬ ಸಂದೇಶವನ್ನು ನೋಡಬಹುದು.
06:04 ಇದರ ಕೆಳಗೆ ನಾವು ವಿವಿಧ ವಹಿವಾಟುಗಳಿಗಾಗಿ ಬೇರೆ ಬೇರೆ ಲಿಂಕ್ ಗಳನ್ನು ನೋಡಬಹುದು.
06:09 ಪೇಮೆಂಟ್ ವಿವರಗಳನ್ನು ನೋಡಲು View this customer payment ಲಿಂಕ್ ಮೇಲೆ ಕ್ಲಿಕ್ ಮಾಡಿ.
06:15 ಕೊನೆಯದಾಗಿ, ವಿಂಡೋವಿನ ಕೆಳಗೆ Close ಲಿಂಕ್ ಮೇಲೆ ಕ್ಲಿಕ್ ಮಾಡಿ.
06:20 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ನಾವೀಗ ಸಂಕ್ಷೇಪಿಸೋಣ.

06:26 ಈ ಟ್ಯುಟೋರಿಯಲ್ ನಲ್ಲಿ ನಾವು,

ಸೇಲ್ಸ್ ಕೊಟೇಶನ್ ಎಂಟ್ರಿ, ಸೇಲ್ಸ್ ಆರ್ಡರ್ ಎಂಟ್ರಿ,

06:33 ಡೆಲಿವರಿ ಮತ್ತು ಸೇಲ್ಸ್ ಆರ್ಡರ್ ಇನ್ಕ್ವೈರಿ ಮಾಡಲು ಕಲಿತೆವು.
06:38 ಅಸೈನ್ ಮೆಂಟ್ ಆಗಿ ಹೊಸ ಸೇಲ್ಸ್ ಕೊಟೇಶನ್ ಎಂಟ್ರಿ ರಚಿಸಿ.
06:42 ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.
06:47 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
06:55 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
07:05 ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
07:09 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
07.15 ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.

ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Melkamiyar, Sandhya.np14