FrontAccounting-2.4.7/C2/Journal-Entry-and-Balance-Sheet-in-FrontAccounting/Kannada
From Script | Spoken-Tutorial
Revision as of 12:59, 23 April 2020 by Melkamiyar (Talk | contribs)
Time | Narration
|
00:01 | FrontAccounting ನಲ್ಲಿ ಜರ್ನಲ್ ಎಂಟ್ರಿ ಮತ್ತು ಬ್ಯಾಲನ್ಸ್ ಶೀಟ್ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು
ಜರ್ನಲ್ ಎಂಟ್ರಿಯನ್ನು ಪಾಸ್ ಮಾಡುವುದು, |
00:12 | ಬ್ಯಾಲನ್ಸ್ ಶೀಟ್ ನ ಪ್ರತಿಫಲನ ಮತ್ತು ಟ್ರಾನ್ಸಾಕ್ಷನ್ ಅನ್ನು ವೋಯ್ಡ್ ಮಾಡಲು ಕಲಿಯಲಿದ್ದೇವೆ. |
00:18 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.4 ಮತ್ತು |
00:26 | FrontAccounting ವರ್ಶನ್ 2.4.7 ಬಳಸಲಿದ್ದೇನೆ. |
00:30 | ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ನ ಜ್ಞಾನ ಹೊಂದಿರಬೇಕು. |
00:37 | ಮತ್ತು ಬುಕ್ ಕೀಪಿಂಗ್ ತತ್ವಗಳನ್ನು ತಿಳಿದಿರಬೇಕು. |
00:40 | ಜೊತೆಗೆ ನೀವು ಈಗಾಗಲೇ FrontAccounting ನಲ್ಲಿ ಆರ್ಗನೈಸೇಶನ್/ಕಂಪನಿಯ ಸೆಟಪ್ ಮಾಡಿರಬೇಕು. |
00:46 | ಇಲ್ಲದಿದ್ದರೆ ಸಂಬಂಧಿತ FrontAccounting ಟ್ಯುಟೋರಿಯಲ್ಗಳಿಗಾಗಿ ದಯವಿಟ್ಟು ಈ ವೆಬ್ ಸೈಟ್ ಗೆ ಭೇಟಿ ನೀಡಿ. |
00:52 | FrontAccounting ಇಂಟರ್ಫೇಸ್ ನಲ್ಲಿ ನೀವು ಕೆಲಸ ಶುರು ಮಾಡುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ. |
00:58 | ನಾವೀಗ FrontAccounting ಇಂಟರ್ಫೇಸ್ ತೆರೆಯೋಣ. |
01:02 | ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
01:10 | ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ. |
01:12 | admin ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಟೈಪ್ ಮಾಡಿ.
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. |
01:20 | FrontAccounting ಇಂಟರ್ ಫೇಸ್ ತೆರೆದುಕೊಳ್ಳುತ್ತದೆ. |
01:23 | ವ್ಯವಹಾರದಲ್ಲಿ ಕ್ಯಾಪಿಟಲ್ ಅನ್ನು ಹೇಗೆ ಪರಿಚಯಿಸುವುದು ಎಂದು ನೋಡೋಣ. |
01:27 | ಜರ್ನಲ್ ಎಂಟ್ರಿಯು Commenced business with a capital of Rs. 5,00,000. |
01:32 | ಎಂಟ್ರಿಯು Cash account debit 5,00,000 To Capital Account 5,00,000
(Being Capital introduced in the business) |
01:41 | ನಾವು ಇದಕ್ಕೆ ಜರ್ನಲ್ ಎಂಟ್ರಿಯನ್ನು ಪಾಸ್ ಮಾಡುತ್ತೇವೆ. |
01:45 | Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು Journal Entry ಲಿಂಕ್ ಮೇಲೆ ಕ್ಲಿಕ್ ಮಾಡಿ. |
01:52 | Journal date ಫೀಲ್ಡ್ ನಲ್ಲಿ ಇಂದಿನ ದಿನಾಂಕವೇ ಡಿಫಾಲ್ಟ್ ದಿನಾಂಕವಾಗಿರುವುದನ್ನು ನೋಡಬಹುದು. |
01:57 | ಜತೆಗೆ ಟ್ರಾನ್ಸಾಕ್ಷನ್ ಗೆ ರೆಫರನ್ಸ್ ನಂಬರ್ ಇರುವುದನ್ನು ನಾವು ನೋಡಬಹುದು.
ಇದು ಅಟೋ ಜನರೇಟೆಡ್ ಆಗಿದೆ. |
02:05 | Account Description ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು Cash ಆಯ್ಕೆಯನ್ನು ಆರಿಸಿ. |
02:11 | Debit ಟೆಕ್ಸ್ಟ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಮೊತ್ತವನ್ನು Five lakhs ಎಂದು ಟೈಪ್ ಮಾಡಿ. |
02:17 | ಡೆಬಿಟ್ ಎಂಟ್ರಿಯನ್ನು ಸೇವ್ ಮಾಡಲು ಆ ಸಾಲಿನಲ್ಲಿರುವ Add Item ಬಟನ್ ಮೇಲೆ ಕ್ಲಿಕ್ ಮಾಡಿ. |
02:23 | ಪುನಃ, Account Description ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಮತ್ತು Capital ಆಯ್ಕೆಯನ್ನು ಆರಿಸಿ. |
02:30 | ನಂತರ Credit ಟೆಕ್ಸ್ಟ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಮೊತ್ತವನ್ನು Five lakhs ಎಂದು ಟೈಪ್ ಮಾಡಿ. |
02:38 | ಕ್ರೆಡಿಟ್ ಎಂಟ್ರಿಯನ್ನು ಸೇವ್ ಮಾಡಲು ಅದೇ ಸಾಲಿನಲ್ಲಿರುವ Add item ಬಟನ್ ಮೇಲೆ ಕ್ಲಿಕ್ ಮಾಡಿ. |
02:44 | ಈಗ, ಈ ಜರ್ನಲ್ ಎಂಟ್ರಿಯ ವಿವರಣೆಗಾಗಿ Memo ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ. |
02:49 | ಇಲ್ಲಿ ಈ ಟೆಕ್ಸ್ಟ್ ಅನ್ನು ಟೈಪ್ ಮಾಡಿ: Being capital introduced in the business |
02:54 | ಈ ಎಂಟ್ರಿಯನ್ನು ಸೇವ್ ಮಾಡಲು, ವಿಂಡೋವಿನ ಕೆಳಭಾಗದಲ್ಲಿರುವ Process Journal Entry ಬಟನ್ ಮೇಲೆ ಕ್ಲಿಕ್ ಮಾಡಿ. |
03:01 | ಮೇಲ್ಗಡೆ ನೀವು “Journal entry has been entered” ಎನ್ನುವ ಸಂದೇಶವನ್ನು ನೋಡಬಹುದು. |
03:07 | ನೀವು View this Journal Entry, Enter New Journal Entry ಆಯ್ಕೆಗಳನ್ನು ಸಹ ನೋಡಬಹುದು. |
03:12 | ಅಟ್ಯಾಚ್ ಮೆಂಟ್ ಒಂದನ್ನು ಸೇರಿಸಿ ಮತ್ತು ವಾಪಾಸಾಗಿ. |
03:17 | ಇವುಗಳನ್ನು ಒಂದೊಂದಾಗಿಯೇ ಕಲಿಯೋಣ. |
03:20 | View this Journal Entry ಲಿಂಕ್ನ ಮೇಲೆ ಕ್ಲಿಕ್ ಮಾಡಿ. |
03:24 | ಹೊಸ ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ. |
03:27 | ಇದು ನಾವು ಈಗಷ್ಟೇ ನಮೂದಿಸಿ ಜನರಲ್ ಲೆಡ್ಜರ್ ಟ್ರಾನ್ಸಾಕ್ಷನ್ ವಿವರಗಳನ್ನು ತೋರಿಸುತ್ತದೆ. |
03:33 | Print ಲಿಂಕ್, ನಮ್ಮ ಭವಿಷ್ಯದ ಉಲ್ಲೇಖಕ್ಕಾಗಿ ಟ್ರಾನ್ಸಾಕ್ಷನ್ನ ಪ್ರಿಂಟ್ ಔಟ್ ತೆಗೆಯಲು ಇದೆ. |
03:39 | ಈ ವಿಂಡೋ ಮುಚ್ಚಲು Close ಲಿಂಕ್ ಮೇಲೆ ಕ್ಲಿಕ್ ಮಾಡಿ. |
03:43 | ಈಗ Enter New Journal Entry ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
03:48 | ಮುಂದಿನ ಹೊಸ ಜರ್ನಲ್ ಎಂಟ್ರಿಗಾಗಿ ಹೊಸ ಪೇಜ್ ತೆರೆದುಕೊಳ್ಳುತ್ತದೆ. |
03:52 | ಟ್ಯುಟೋರಿಯಲ್ ಅನ್ನು ಪಾವ್ಸ್ ಮಾಡಿ ಈ ಕೆಳಗಿನ ಅಸೈನ್ ಮೆಂಟ್ ಪೂರ್ಣಗೊಳಿಸಿ. |
03:56 | Goods Purchased for Rs 50,000 ಗೆ ಜರ್ನಲ್ ಎಂಟ್ರಿಯನ್ನು ಪಾಸ್ ಮಾಡಿ. |
04:01 | ಎಂಟ್ರಿಯು: Office furniture and Equipments Account debit
To cash Account for Rs 50,000 |
04:09 | ಮೆಮೊ: Purchased Office furniture and Equipments for Rs 50,000 |
04:15 | Process the journal entry ಮೇಲೆ ಕ್ಲಿಕ್ ಮಾಡಿ. |
04:19 | ಈಗ Add an Attachment ಮೇಲೆ ಕ್ಲಿಕ್ ಮಾಡಿ. |
04:23 | ನಾವು ಈ ಫೀಲ್ಡ್ಗಳನ್ನು ನೋಡಬಹುದು:
Transaction |
04:27 | Description ಮತ್ತು Attached file |
04:31 | Attached file ಎನ್ನುವುದು ಪಾಸ್ ಮಾಡಿದ ಜರ್ನಲ್ ಎಂಟ್ರಿಗೆ ಸಂಬಂಧಿಸಿದ ಯಾವುದೇ ದಾಖಲೆಯನ್ನು ಅಟ್ಯಾಚ್ ಮಾಡಲು ಇರುತ್ತದೆ. |
04:38 | ನಾನು ಈಗಾಗಲೇ ರಚಿಸಿ ನನ್ನ ಕಂಪ್ಯೂಟರ್ನಲ್ಲಿ ಸೇವ್ ಮಾಡಿದ ಸ್ಯಾಂಪಲ್ ವೌಚರ್ ಅನ್ನು ನಾನು ಅಟ್ಯಾಚ್ ಮಾಡುತ್ತೇನೆ. |
04:44 | Browse ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಫೈಲ್ ಸೇವ್ ಮಾಡಿರುವ ಫೋಲ್ಡರ್ ಅನ್ನು ಪತ್ತೆಹಚ್ಚಿ. |
04:51 | ನಾನು ನಮ್ಮ ಡೆಸ್ಕ್ ಟಾಪ್ ಫೋಲ್ಡರ್ ನಿಂದ Sample-Voucher.pdf ಫೈಲ್ ಆರಿಸುತ್ತೇನೆ. |
04:57 | ನೀವೀಗ ಇಲ್ಲಿ ಫೈಲ್ ಅಟ್ಯಾಚ್ ಮೆಂಟ್ ಕಾಣಬಹುದು. |
05:01 | ಈ ವೌಚರ್ ಅನ್ನು ಈ ಟ್ಯುಟೋರಿಯಲ್ ನ Code files ಲಿಂಕ್ನಲ್ಲಿ ಒದಗಿಸಲಾಗಿದೆ. |
05:06 | ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ಅಭ್ಯಸಿಸುವ ವೇಳೆ ಈ ಫೈಲ್ ಅನ್ನು ಬಳಸಿ. |
05:11 | ನಂತರ Add new ಬಟನ್ ಮೇಲೆ ಕ್ಲಿಕ್ ಮಾಡಿ. |
05:14 | Attachment has been inserted ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ. |
05:19 | ಜೊತೆಗೆ, ಅಪ್ಲೋಡ್ ಮಾಡಿದ ಫೈಲ್ ಅನ್ನು ಟೇಬಲ್ಗೆ ಸೇರಿಸಿರುವುದನ್ನು ನೀವು ನೋಡಬಹುದು. |
05:25 | ಹಿಂದಕ್ಕೆ ಸಾಗಲು Back ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
05:28 | ನಂತರ, ಈ ಜರ್ನಲ್ ಎಂಟ್ರಿಯ ಪ್ರತಿಫಲನವನ್ನು ಬ್ಯಾಲನ್ಸ್ ಶೀಟ್ನಲ್ಲಿ ನೋಡೋಣ. |
05:34 | ಇದನ್ನು ಮಾಡಲು Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
05:39 | ನಂತರ Balance Sheet Drilldown ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
05:43 | ಟ್ರಾನ್ಸಾಕ್ಷನ್ ಇಲ್ಲಿ ಪ್ರತಿಫಲಿಸಿರುವುದನ್ನು ನಾವು ನೋಡಬಹುದು. |
05:47 | ಭವಿಷ್ಯದಲ್ಲಿ ನಾವು ಅನೇಕ ಜರ್ನಲ್ ಎಂಟ್ರಿಗಳನ್ನು ಮಾಡಿದಾಗ, ಪ್ರದರ್ಶನಗೊಳ್ಳುವ ಪಟ್ಟಿಯು ದೀರ್ಘವಾಗಿರುತ್ತದೆ. |
05:54 | ನಂತರ, ಟ್ರಾನ್ಸಾಕ್ಷನ್ ಒಂದನ್ನು ಹೇಗೆ ವೋಯ್ಡ್ ಮಾಡಬಹುದು ಎಂದು ನೋಡೋಣ. |
05:58 | Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
Maintenance ಪ್ಯಾನಲ್ನಲ್ಲಿ Void a transaction ಲಿಂಕ್ನ ಮೇಲೆ ಕ್ಲಿಕ್ ಮಾಡಿ. |
06:06 | ಒಂದು ಎಂಟ್ರಿಯನ್ನು ಡಿಲೀಟ್/ರಿಮೋವ್ ಮಾಡಲು ಈ ಆಯ್ಕೆಯನ್ನು ಬಳಸಲಾಗುತ್ತದೆ. |
06:11 | ನಾವು, ಎಂಟ್ರಿಯನ್ನು ತೋರಿಸುವ ಉಲ್ಲೇಖ ಸಂಖ್ಯೆಯನ್ನು ನೋಡಬಹುದು. |
06:15 | ಟ್ರಾನ್ಸಾಕ್ಷನ್ ಅನ್ನು ವೋಯ್ಡ್ ಮಾಡಲು ನಾವು 002/2019 ಉಲ್ಲೇಖವನ್ನು ಆರಿಸೋಣ. |
06:23 | ಎಂಟ್ರಿಯನ್ನು ಡಿಲೀಟ್ ಮಾಡುವ ಮೊದಲು ವಿವರಗಳನ್ನು ದೃಢೀಕರಿಸಲು ಕಾಲಂನಲ್ಲಿರುವ GL ಐಕಾನ್ ಮೇಲೆ ಕ್ಲಿಕ್ ಮಾಡಿ. |
06:30 | ಆಫಿಸ್ ಫರ್ನೀಚರ್ ಮತ್ತು ಇಕ್ಯುಪ್ಮೆಂಟ್ ಗಾಗಿ ರೂ. 50,000 ದ ಸರಕು ಖರೀದಿಯ ಎಂಟ್ರಿಯನ್ನು ನಾವಿಲ್ಲಿ ನೋಡಬಹುದು. |
06:38 | ವಿಂಡೋದಲ್ಲಿ ಕೆಳಗಡೆ ಇರುವ Close ಲಿಂಕ್ನ ಮೇಲೆ ಕ್ಲಿಕ್ ಮಾಡಿ. |
06:42 | ಈಗ Select ಕಾಲಂನಲ್ಲಿನ ಐಕಾನ್ ಮೇಲೆ ಕ್ಲಿಕ್ ಮಾಡಿ. |
06:46 | ಐಕಾನ್ ಆರಿಸಿದಾಗ, ಟ್ರಾನ್ಸಾಕ್ಷನ್ ಸಂಖ್ಯೆ ಮತ್ತು ವೋಯ್ಡಿಂಗ್ ದಿನಾಂಕ ಕಾಣಿಸಿಕೊಳ್ಳುತ್ತದೆ. |
06:52 | Void Transaction ಬಟನ್ ಮೇಲೆ ಕ್ಲಿಕ್ ಮಾಡಿ. |
06:55 | ಆಗ ಈ ಸಂದೇಶ ಕಾಣಿಸಿಕೊಳ್ಳುತ್ತದೆ: Are you sure you want to void this transaction? This action cannot be undone. |
07:03 | ನಾನು Proceed ಬಟನ್ ಮೇಲೆ ಕ್ಲಿಕ್ ಮಾಡುತ್ತೇನೆ. |
07:07 | ತಕ್ಷಣವೇ ಇನ್ನೊಂದು ಸಂದೇಶ ಕಾಣಿಸಿಕೊಳ್ಳುತ್ತದೆ ಮತ್ತು
Selected transaction has been voided ಎಂದು ಹೇಳುತ್ತದೆ. |
07:14 | ಈ ರೀತಿ ನಾವು ಅಗತ್ಯವೆನಿಸಿದಾಗ ಟ್ರಾನ್ಸಾಕ್ಷನ್ ಒಂದನ್ನು ವೋಯ್ಡ್ ಮಾಡಬಹುದು. |
07:19 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ಬಂದಿದ್ದೇವೆ.
ನಾವೀಗ ಸಂಕ್ಷೇಪಿಸೋಣ. |
07:25 | ಈ ಟ್ಯುಟೋರಿಯಲ್ನಲ್ಲಿ ನಾವು,
ಜರ್ನಲ್ ಎಂಟ್ರಿಯನ್ನು ಪಾಸ್ ಮಾಡಲು, |
07:30 | ಪ್ರತಿಫಲನವನ್ನು ಬ್ಯಾಲನ್ಸ್ ಶೀಟ್ನಲ್ಲಿ ನೋಡಲು,
ಹಾಗೂ ಟ್ರಾನ್ಸಾಕ್ಷನ್ ಅನ್ನು ವೋಯ್ಡ್ ಮಾಡಲು ಕಲಿತೆವು. |
07:35 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. |
07:43 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ. |
07:51 | ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ. |
07:55 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
08:00 | ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- . |