Java/C3/Polymorphism/Kannada
Time | Narration |
00:01 | ಜಾವಾದಲ್ಲಿ ಪಾಲಿಮಾರ್ಫಿಸಂ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನ ವಿಷಯಗಳನ್ನು ಕಲಿಯಲಿದ್ದೇವೆ:
ಜಾವಾದಲ್ಲಿ ಪಾಲಿಮಾರ್ಫಿಸಂ ರನ್-ಟೈಂ ಪಾಲಿಮಾರ್ಫಿಸಂ ವರ್ಚುವಲ್ ಮೆಥಡ್ ಇನ್ವೊಕೇಶನ್ ಮತ್ತು ಕಂಪೈಲ್-ಟೈಂ ಪಾಲಿಮಾರ್ಫಿಸಂ. |
00:10 | ಇಲ್ಲಿ ನಾವು,
ಉಬಂಟು ಲೀನಕ್ಸ್ ವರ್ಶನ್ 12.04, JDK ವರ್ಶನ್ 1.7 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇವೆ. |
00:31 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನ ಹೊಂದಿರಬೇಕು. |
00:37 | ನೀವು ಸಬ್ ಕ್ಲಾಸಿಂಗ್ ಮತ್ತು ಮೆಥಡ್ ಓವರ್ ರೈಡಿಂಗ್ ಮತ್ತು ಓವರ್ ಲೋಡಿಂಗ್ ನ ಜ್ಞಾನ ಹೊಂದಿರಬೇಕು. |
00:43 | ಇಲ್ಲದಿದ್ದರೆ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗೆ ದಯವಿಟ್ಟು ನಮ್ಮ ವೆಬ್ ಸೈಟ್ ಗೆ ಭೇಟಿ ನೀಡಿ. |
00:48 | ಪಾಲಿಮಾರ್ಫಿಸಂ ಎಂದರೆ ಅಬ್ಜೆಕ್ಟ್ ಒಂದು ಅನೇಕ ಫಾರ್ಮ್ ಗಳನ್ನು ಸ್ವೀಕರಿಸುವ ಸಾಮರ್ಥ್ಯವಾಗಿದೆ. |
00:54 | ಪಾಲಿಮಾರ್ಫಿಸಂನ ಪ್ರಮುಖ ಲಾಭಗಳೆಂದರೆ:
1. ಸಂಕೀರ್ಣತೆಯನ್ನು ಕಡಿಮೆ ಮಾಡುವುದು ಮತ್ತು 2. ಕೋಡ್ ಮರುಬಳಕೆಯ ಸಾಧ್ಯತೆ. |
01:03 | ಜಾವಾದಲ್ಲಿ ಎರಡು ವಿಧಗಳ ಪಾಲಿಮಾರ್ಫಿಸಂ ಇವೆ:
ಅವೆಂದರೆ ಕಂಪೈಲ್-ಟೈಂ ಮತ್ತು ರನ್-ಟೈಂ ಪಾಲಿಮಾರ್ಫಿಸಂ. |
01:11 | ಕಂಪೈಲ್-ಟೈಂ ಪಾಲಿಮಾರ್ಫಿಸಂ ಅನ್ನು ಮುಖ್ಯವಾಗಿ ಮೆಥಡ್ ಓವರ್ ಲೋಡಿಂಗ್ ಎಂದು ಗುರುತಿಸಲಾಗುತ್ತದೆ. ಇದನ್ನು ಸ್ಟಾಟಿಕ್ ಬೈಂಡಿಂಗ್ ಎಂದು ಸಹ ಕರೆಯಲಾಗುತ್ತದೆ. |
01:20 | ರನ್-ಟೈಂ ಪಾಲಿಮಾರ್ಫಿಸಂ ಅನ್ನು ಮುಖ್ಯವಾಗಿ ಮೆಥಡ್ ಓವರ್ ರೈಡಿಂಗ್ ಎಂದು ಗುರುತಿಸಲಾಗುತ್ತದೆ. ಇದನ್ನು ಡೈನಾಮಿಕ್ ಬೈಂಡಿಂಗ್ ಎಂದು ಸಹ ಕರೆಯಲಾಗುತ್ತದೆ. |
01:29 | ನಾವು ಈಗಾಗಲೇ ಮೆಥಡ್ ಓವರ್ ರೈಡಿಂಗ್ ಎನ್ನಲಾಗುವ ರನ್-ಟೈಂ ಪಾಲಿಮಾರ್ಫಿಸಂ ಅನ್ನು ಕಲಿತಿದ್ದೇವೆ. |
01:35 | ಈಗ ಎಕ್ಲಿಪ್ಸ್ ಐ.ಡಿ.ಇ ಯತ್ತ ಬೆಳಕು ಹರಿಸೋಣ. ನಾನು ಕಳೆದ ಟ್ಯುಟೋರಿಯಲ್ ನಲ್ಲಿ ಮೈಪ್ರಾಜೆಕ್ಟ್ ಎಂಬ ಪ್ರಾಜೆಕ್ಟ್ ಅನ್ನು ರಚಿಸಿದ್ದೇನೆ. |
01:44 | ಯೂಸಿಂಗ್ ಫೈನಲ್ ಕೀವರ್ಡ್ ಟ್ಯುಟೋರಿಯಲ್ ನ ಕೋಡ್ ಫೈಲ್ ಗಳನ್ನು ನಾವು ಬಳಸೋಣ. |
01:49 | ಎಂಪ್ಲೋಯಿ ಕ್ಲಾಸ್ ಇಲ್ಲಿ ಪೇರೆಂಟ್ ಕ್ಲಾಸ್ ಆಗಿದೆ. |
01:52 | ಮ್ಯಾನೇಜರ್ ಕ್ಲಾಸ್ ಇಲ್ಲಿ ಸಬ್ ಕ್ಲಾಸ್ ಆಗಿದೆ. |
01:55 | ಮ್ಯಾನೇಜರ್ ಕ್ಲಾಸ್, ಹೆಚ್ಚುವರಿ ವೇರಿಯೇಬಲ್ ಡಿಪಾರ್ಟ್ ಮೆಂಟ್ ಅನ್ನು ಹೊಂದಿರುತ್ತದೆ. |
02:01 | ಮ್ಯಾನೇಜರ್ ಕ್ಲಾಸ್ ವಿಧಾನ getDetails(), ಎಂಪ್ಲೋಯಿ ಕ್ಲಾಸ್ ವಿಧಾನ getDetails() ಅನ್ನು ಓವರ್ ರೈಡ್ ಮಾಡುತ್ತದೆ. |
02:08 | ನಾವು getDetails() ವಿಧಾನವನ್ನು ಮ್ಯಾನೇಜರ್ ಕ್ಲಾಸ್ ಅಬ್ಜೆಕ್ಟ್, ಅಂದರೆ ಮ್ಯಾನೇಜರ್ ನಿಂದ ಕರೆಯುತ್ತೇವೆ. |
02:16 | ವಿವರಗಳನ್ನು ಪ್ರಿಂಟ್ ಮಾಡಲು (ಮುದ್ರಿಸಲು), ಹೀಗೆ ಟೈಪ್ ಮಾಡಿ:
system.out.println Details of Manager Class. |
02:28 | ಪ್ರೋಗ್ರಾಂ ಅನ್ನು ಸೇವ್ ಮತ್ತು ರನ್ ಮಾಡಿ. ಹೀಗೆ ನಾವು ಔಟ್ಪುಟ್ ನಲ್ಲಿ ಡಿಪಾರ್ಟ್ ಮೆಂಟ್ ವೇರಿಯೇಬಲ್ ವ್ಯಾಲ್ಯೂ ನೋಡಬಹುದು. |
02:37 | ಹೀಗಾಗಿ ರನ್ ಟೈಂನಲ್ಲಿ ಸಬ್ ಕ್ಲಾಸ್ ವಿಧಾನವನ್ನು ಇನ್ವೋಕ್ (ಜಾರಿ) ಮಾಡುತ್ತದೆ. |
02:42 | ವಿಧಾನದ ಇನ್ವೊಕೇಶನ್ ಅನ್ನು ಜೆ.ವಿ.ಎಂ ನಿಂದ ನಿರ್ಣಯಿಸಲಾಗುತ್ತದೆಯೇ ಹೊರತು, ಕಂಪೈಲರ್ ನಿಂದ ಅಲ್ಲ. |
02:48 | ಹೀಗಾಗಿ ಇದನ್ನು ರನ್ ಟೈಂ ಪಾಲಿಮಾರ್ಫಿಸಂ ಅಥವಾ ಮೆಥಡ್ ಓವರ್ ರೈಡಿಂಗ್ ಎಂದು ಕರೆಯಲಾಗುತ್ತದೆ. |
02:55 | ರನ್ ಟೈಂ ಪಾಲಿಮಾರ್ಫಿಸಂ ಎಂದರೆ ಏನು ಎಂಬುದನ್ನು ನಾವು ಕಲಿತಿದ್ದೇವೆ. |
02:58 | ನಾವೀಗ ವರ್ಚುವಲ್ ಮೆಥಡ್ ಇನ್ವೊಕೇಶನ್ ಕಲಿಯಲಿದ್ದೇವೆ. |
03:03 | ಎಕ್ಲಿಪ್ಸ್ ಐ.ಡಿ.ಇ ಯಲ್ಲಿ ಎಂಪ್ಲೋಯೀ ಕ್ಲಾಸ್ಗೆ ಬನ್ನಿ. |
03:07 | ವೇರಿಯೇಬಲ್ ನೇಮ್ ಗಾಗಿ static ಮತ್ತು final ಕೀವರ್ಡ್ ಗಳನ್ನು ತೆಗೆಯಿರಿ. |
03:13 | setName ವಿಧಾನವನ್ನು ಅನ್ ಕಮೆಂಟ್ ಮಾಡಿ. |
03:16 | ಸ್ಟಾಟಿಕ್ ಬ್ಲಾಕ್ ತೆಗೆಯಿರಿ. ಫೈಲ್ ಅನ್ನು ಸೇವ್ ಮಾಡಿ. |
03:21 | TestEmployee ಕ್ಲಾಸ್ ಗೆ ಬನ್ನಿ. manager.setName(“Nikkita Dinesh”); ವ್ಯಾಲ್ಯೂ ಇನ್ಸ್ಟೆನ್ಸ್ ಅನ್ನು ಅನ್ ಕಮೆಂಟ್ ಮಾಡಿ. |
03:31 | ನಾವು ಎಂಪ್ಲೋಯೀ ಕ್ಲಾಸ್ ನಲ್ಲಿ setName() ವಿಧಾನವನ್ನು ಅನ್ ಕಮೆಂಟ್ ಮಾಡಿರುವುದನ್ನು ಈ ಇನ್ಸ್ಟನ್ಸ್ ಅನ್ನು ನಾವು ಅನ್ ಕಮೆಂಟ್ ಮಾಡಿದ್ದೇವೆ. |
03:38 | ನಾವೀಗ ಎಂಪ್ಲೋಯೀ ಕ್ಲಾಸ್ ರೆಫರನ್ಸ್ ಗೆ ಎಂಪ್ಲೋಯೀ ಅಬ್ಜೆಕ್ಟ್ emp1 ಅನ್ನು ಇನ್ಸ್ಟಾಂಶಿಯೇಟ್ (ದೃಷ್ಟಾಂತೀಕರಣ) ಮಾಡೋಣ.
|
03:46 | Employee emp1 = new Employee open and close parenthesis semicolon ಎಂದು ಟೈಪ್ ಮಾಡಿ. |
03:57 | ನಾವೀಗ ಎಂಪ್ಲೋಯೀ ಕ್ಲಾಸ್ ಗಾಗಿ setEmail ಮತ್ತು setName ಗಾಗಿ ಮೌಲ್ಯವನ್ನು ಇನಿಶಿಯಲೈಸ್ (ಅನುಸ್ಥಾಪನೆ) ಮಾಡೋಣ ಮಾಡೋಣ. |
04:03 | emp1.setName("Jayesh"); emp1.setEmail("pqr@gmail.com"); ಎಂದು ಟೈಪ್ ಮಾಡಿ. |
04:16 | ಉದ್ಯೋಗಿಯ ವಿವರಗಳನ್ನು ಪ್ರಿಂಟ್ ಮಾಡಲು System.out.println("Details of Employee class:" emp1.getDetails()) semicolon ಎಂದು ಟೈಪ್ ಮಾಡಿ. |
04:37 | ಎಂಪ್ಲೋಯೀ ಕ್ಲಾಸ್ ರೆಫರೆನ್ಸ್ ಗಾಗಿ ಮ್ಯಾನೇಜರ್ ಅಬ್ಜೆಕ್ಟ್ emp2 ಗೆ ನಾವು ಇನ್ಸ್ಟಾಂಶಿಯೇಟ್ ಮಾಡೋಣ.
ಅಂದರೆ Employee emp2 = new Manager open and close parenthesis semicolon ಎಂದು ಟೈಪ್ ಮಾಡಿ. |
04:54 | ನಾವಿದನ್ನು ಮಾಡಲು ಸಾಧ್ಯ, ಏಕೆಂದರೆ ಒಂದಕ್ಕಿಂತ ಹೆಚ್ಚು IS-A ಪರೀಕ್ಷೆಯನ್ನು ತೇರ್ಗಡೆ ಹೊಂಡುವ ಯಾವುದೇ ಜಾವಾ ಅಬ್ಜೆಕ್ಟ್, ಪಾಲಿಮಾರ್ಫಿಕ್ ಆಗಿರುತ್ತದೆ. |
05:04 | ಜಾವಾದಲ್ಲಿ ಎಲ್ಲಾ ಅಬ್ಜೆಕ್ಟ್ ಗಳು ಪಾಲಿಮಾರ್ಫಿಕ್ ಆಗಿರುತ್ತವೆ, ಏಕೆಂದರೆ ಯಾವುದೇ ಅಬ್ಜೆಕ್ಟ್ ಇಲ್ಲಿ ತನ್ನ ಸ್ವಂತ ಪ್ರಕಾರ ಮತ್ತು ಕ್ಲಾಸ್ ಅಬ್ಜೆಕ್ಟ್ ಗೆ IS-A ಪರೀಕ್ಷೆಯನ್ನು ತೇರ್ಗಡೆ ಹೊಂದುತ್ತದೆ. |
05:16 | ಮ್ಯಾನೇಜರ್ ಒಬ್ಬರು IS-A ಎಂಪ್ಲೋಯೀ.
ಮ್ಯಾನೇಜರ್ ಒಬ್ಬರು IS-A ಮ್ಯಾನೇಜರ್. ಮ್ಯಾನೇಜರ್ ಒಬ್ಬರು IS-A ಅಬ್ಜೆಕ್ಟ್. |
05:23 | ಯಾವುದೇ ಅಬ್ಜೆಕ್ಟ್ ಅನ್ನು ಆಕ್ಸೆಸ್ ಮಾಡಲು ರೆಫರನ್ಸ್ ವೇರಿಯಬಲ್ ಸಂಭವನೀಯ ದಾರಿಯಾಗಿದೆ. |
05:29 | ರೆಫರನ್ಸ್ ವೇರಿಯಬಲ್ ಗಳು emp1, emp2 ಮತ್ತು manager ತರ ಇವೆ. |
05:36 | ಇಲ್ಲಿ ನಾವು ಎರಡು ಮ್ಯಾನೇಜರ್ ಅಬ್ಜೆಕ್ಟ್ ಗಳನ್ನು ಇನ್ಸ್ಟಾಂಶಿಯೇಟ್ ಮಾಡುತ್ತೇವೆ:
ಒಂದು ಎಂಪ್ಲೋಯೀ ಕ್ಲಾಸ್ ಅನ್ನು ರೆಫರನ್ಸ್ ಮಾಡುತ್ತದೆ. ಇನ್ನೊಂದು ಮ್ಯಾನೇಜರ್ ಕ್ಲಾಸ್ ಅನ್ನು ರೆಫರನ್ಸ್ ಮಾಡುತ್ತದೆ. |
05:47 | ನಾವೀಗ emp2 ಅಬ್ಜೆಕ್ಟ್ ಬಳಸಿ setEmail, setName ಮತ್ತು setDepartment ನ ಮೌಲ್ಯಗಳ ಇನಿಶಿಯಲೈಸ್ ಮಾಡೋಣ. |
05:55 | ಹೀಗೆ ಟೈಪ್ ಮಾಡಿ:
emp2.setName("Ankita"); emp2.setEmail(“xyz@gmail.com”); emp2.setDepartment(“IT”); |
06:14 | ನಾವು ಇಲ್ಲೊಂದು ದೋಷವನ್ನು ನೋಡಬಹುದು, `` setDepartment (ಸ್ಟ್ರಿಂಗ್) ವಿಧಾನವನ್ನು ಎಂಪ್ಲೋಯೀ ಪ್ರಕಾರಕ್ಕೆ ನಿರೂಪಿಸಿಲ್ಲ.ʼʼ |
06:23 | ಇದು ಏಕೆಂದರೆ setDepartment ವಿಧಾನವು ಎಂಪ್ಲೋಯೀ ಕ್ಲಾಸ್ ಗೆ ಅಸ್ತಿತ್ವದಲ್ಲಿಲ್ಲ. |
06:30 | ಹೀಗಾಗಿ ಈ ಕೆಳಗಿನ ಸಾಲನ್ನು ತೆಗೆಯಿರಿ:
emp2.setDepartment("IT"); |
06:37 | ವಿವರಗಳನ್ನು ಪ್ರಿಂಟ್ ಮಾಡುವುದಕ್ಕಾಗಿ ಹೀಗೆ ಟೈಪ್ ಮಾಡಿ:
System.out.println("Details of Manager class:" emp2.getDetails()) semicolon |
06:55 | ಪ್ರೋಗ್ರಾಂ ಅನ್ನು ಸೇವ್ ಮತ್ತು ರನ್ ಮಾಡಿ. |
06:58 | ಇಲ್ಲಿ Manager of: ನಮಗೆ ಖಾಲಿಯಾಗಿ ಸಿಗುತ್ತದೆ. |
07:04 | ಇದು ಏಕೆಂದರೆ ನಾವು emp2 ಬಳಸಿ ಮ್ಯಾನೇಜರ್ ಕ್ಲಾಸ್ ನಲ್ಲಿ ಡಿಪಾರ್ಟ್ ಮೆಂಟ್ ನ ಇನಿಶಿಯಲೈಸ್ ಮಾಡಿಲ್ಲ. |
07:12 | ಪ್ರಾತ್ಯಕ್ಷಿಕೆ ಉದ್ದೇಶಕ್ಕಾಗಿ ಡಿಫಾಲ್ಟ್ ಡಿಪಾರ್ಟ್ ಮೆಂಟ್ IT ಎಂಬುದಾಗಿ ಇರಲಿ. |
07:17 | ಹೀಗೆ ಮ್ಯಾನೇಜರ್ ಕ್ಲಾಸ್ ಗೆ ಹೋಗಿ ಮತ್ತು ಡಿಪಾರ್ಟ್ ಮೆಂಟ್ ಗೆ ಮೌಲ್ಯವನ್ನು ಇನಿಶಿಯಲೈಸ್ ಮಾಡಿಲ್ಲ. |
07:25 | ಪ್ರೋಗ್ರಾಂ ಅನ್ನು ಸೇವ್ ಮತ್ತು ರನ್ ಮಾಡಿ. |
07:28 | ನಾವು ಔಟ್ಪುಟ್ ಪಡೆಯುತ್ತೇವೆ: ಎಂಪ್ಲೋಯೀ ಕ್ಲಾಸ್ ಅನ್ನು ಉಲ್ಲೇಖಿಸುವ ಎಂಪ್ಲೋಯೀ ಅಬ್ಜೆಕ್ಟ್, |
07:34 | ಎಂಪ್ಲೋಯೀ ಕ್ಲಾಸ್ ಅನ್ನು ಉಲ್ಲೇಖಿಸುವ ಮ್ಯಾನೇಜರ್ ಅಬ್ಜೆಕ್ಟ್ ಮತ್ತು ಮ್ಯಾನೇಜರ್ ಕ್ಲಾಸ್ ಅನ್ನು ಉಲ್ಲೇಖಿಸುವ ಮ್ಯಾನೇಜರ್ ಅಬ್ಜೆಕ್ಟ್. |
07:42 | ಮ್ಯಾನೇಜರ್ ಕ್ಲಾಸ್ ನ getDetails() ವಿಧಾನವನ್ನು emp2 ಎಂಬುದಾಗಿ ನಾವಿಲ್ಲಿ ಕರೆಯುತ್ತೇವೆ. |
07:49 | ಆದರೆ emp2ಯು setDepartment ಕರೆಯಲು ಯತ್ನಿಸಿದಾಗ, ದೋಷ ಕಂಡುಬಂತು. |
07:54 | ಈ ಕೆಳಗಿನ ಕಾರಣದಿಂದಾಗಿ ಇದು ಉಂಟಾಗಿದೆ:
emp2.getDetails() ವೇಳೆ ಎಂಪ್ಲೋಯೀ ಕ್ಲಾಸ್ ನಲ್ಲಿ ಕಂಪೈಲರ್, getDetails() ವಿಧಾನವನ್ನು ನೋಡುತ್ತದೆ. |
08:05 | ಹೀಗಾಗಿ ಇದು ದೋಷವನ್ನುಂಟು ಮಾಡುವುದಿಲ್ಲ, ಬದಲಾಗಿ ಕೋಡ್ ಅನ್ನು ಊರ್ಜಿತಗೊಳಿಸುತ್ತದೆ. |
08:10 | ಆದರೆ ರನ್ ಟೈಂನಲ್ಲಿ ಜೆ.ವಿ.ಎಂ, ಮ್ಯಾನೇಜರ್ ಕ್ಲಾಸ್ ನಲ್ಲಿ getDetails() ಅನ್ನು ಇನ್ವೋಕ್ ಮಾಡುತ್ತದೆ. ಏಕೆಂದರೆ ಮ್ಯಾನೇಜರ್ ಕ್ಲಾಸ್ ನ getDetails() ಎಂಪ್ಲೋಯೀ ಕ್ಲಾಸ್ ನ getDetails() ಅನ್ನು ಅತಿಕ್ರಮಿಸುತ್ತದೆ. |
08:24 | ಹೀಗಾಗಿ ನಾವು ಮ್ಯಾನೇಜರ್ ಕ್ಲಾಸ್ ನ getDetails() ಪ್ರಕಾರ ಔಟ್ಪುಟ್ ಪಡೆಯುತ್ತೇವೆ. ಆದರೆ ಕಂಪೈಲರ್, ಎಂಪ್ಲೋಯೀ ಕ್ಲಾಸ್ ನ setDepartment ವಿಧಾನವನ್ನು ನೋಡುವುದಿಲ್ಲ. |
08:36 | ಹೀಗಾಗಿ, setDepartment ಅನ್ನು emp2 ಎಂದು ಕರೆದಾಗ ಇದು ದೋಷವನ್ನು ತೋರಿಸುತ್ತದೆ. |
08:43 | ಇಲ್ಲಿ ಎಂಪ್ಲೋಯೀ ವಿಧಾನ getDetails() ಅನ್ನು ಎಂಪ್ಲೋಯೀ ಕ್ಲಾಸ್ ಗೆ ಇನ್ವೋಕ್ ಮಾಡಲಾಗುತ್ತದೆ. |
08:49 | emp1.getDetails() ವೇಳೆ getDetails() ಗಾಗಿ ಕಂಪೈಲರ್, ಎಂಪ್ಲೋಯೀ ಕ್ಲಾಸ್ ಅನ್ನು ಉಲ್ಲೇಖಿಸುತ್ತದೆ. |
08:57 | ರನ್ ಟೈಂ ವೇಳೆ ಜೆ.ವಿ.ಎಂ, ಎಂಪ್ಲೋಯೀ ಕ್ಲಾಸ್ ನಲ್ಲಿ getDetails() ಅನ್ನು ಆಮಂತ್ರಿಸುತ್ತದೆ. ಹೀಗೆ, ನಾವು ಔಟ್ಪುಟ್ ಅನ್ನು ಎಂಪ್ಲೋಯೀ ಕ್ಲಾಸ್ ನ getDetails() ಪ್ರಕಾರ ಪಡೆಯುತ್ತೇವೆ. |
09:08 | ಹೀಗಾಗಿ, ಪ್ರತಿ ವೇರಿಯೇಬಲ್ ನಲ್ಲಿ ಉಲ್ಲೇಖಿಸಿರುವ ಅಬ್ಜೆಕ್ಟ್ಗೆ ಸರಿಯಾದ ವಿಧಾನವನ್ನು ಜೆ.ವಿ.ಎಂ ಬಯಸುತ್ತದೆ. |
09:16 | ಈ ವರ್ತನೆಯನ್ನು ವರ್ಚುವಲ್ ಮೆಥಡ್ ಇನ್ವೊಕೇಶನ್ ಎಂದು ಕರೆಯಲಾಗುತ್ತದೆ. |
09:21 | ಈ ವಿಧಾನಗಳನ್ನು ವರ್ಚುವಲ್ ಮೆಥಡ್ಸ್ ಎಂದು ಹೇಳಲಾಗುತ್ತದೆ. |
09:26 | ಜಾವಾದ ಎಲ್ಲಾ ವಿಧಾನಗಳು ಇದೇ ರೀತಿಯಲ್ಲಿ ವರ್ತಿಸುತ್ತವೆ. |
09:31 | ವರ್ಚುವಲ್ ಮೆಥಡ್ ಇನ್ವೊಕೇಶನ್ ಏನೆಂಬುದನ್ನು ನಾವು ಯಶಸ್ವಿಯಾಗಿ ಕಲಿತೆವು. |
09:36 | ನಾವು ಕಂಪೈಲ್ ಟೈಂ ಪಾಲಿಮಾರ್ಫಿಸಂ, ಅಂದರೆ ಮೆಥಡ್ ಓವರ್ ಲೋಡಿಂಗ್ ಅಂದರೆ ಏನು ಎಂಬುದನ್ನು ಈಗಾಗಲೇ ಕಲಿತಿದ್ದೇವೆ. |
09:42 | ಸಂಕ್ಷಿಪ್ತವಾಗಿ ಈಗ ಕಂಪೈಲ್ ಟೈಂ ಪಾಲಿಮಾರ್ಫಿಸಂ ಕುರಿತು ಕಲಿಯೋಣ. |
09:47 | ಕಂಪೈಲ್ ಟೈಂ ಪಾಲಿಮಾರ್ಫಿಸಂ ನಲ್ಲಿ ಕ್ಲಾಸ್ ಒಂದಕ್ಕಿಂತ ಹೆಚ್ಚು ಮೆಥಡ್ ಹೊಂದಿರಬಹುದು. |
09:53 | ಈ ವಿಧಾನಗಳು ಒಂದೇ ಹೆಸರನ್ನು ಹೊಂದಿರಬಹುದು, ಆದರೆ ಬೇರೆ ಬೇರೆ ಆರ್ಗ್ಯುಮೆಂಟ್ ಗಳ ಸಂಖ್ಯೆಯನ್ನು ಹೊಂದಿರಬಹುದು. |
09:59 | ಕಂಪೈಲರ್, ಕಂಪೈಲ್ ಟೈಂನಲ್ಲಿ ಮೆಥಡ್ ಕಾಲ್ ಅನ್ನು ಗುರುತಿಸಬಹುದು. ಈ ಕಾರಣಕ್ಕಾಗಿ ಇದನ್ನು ಕಂಪೈಲ್ ಟೈಂ ಪಾಲಿಮಾರ್ಫಿಸಂ ಎಂದು ಕರೆಯಲಾಗುತ್ತದೆ. |
10:09 | ನಾವೀಗ ಇದನ್ನು ಸಂಕ್ಷಿಪ್ತಗೊಳಿಸೋಣ. |
10:11 | ಈ ಟ್ಯುಟೋರಿಯಲ್ ನಲ್ಲಿ ನಾವು: ಪಾಲಿಮಾರ್ಫಿಸಂ ಎಂದರೇನು?
ರನ್ ಟೈಂ ಪಾಲಿಮಾರ್ಫಿಸಂ ವರ್ಚುವಲ್ ಮೆಥಡ್ ಇನ್ವೊಕೇಶನ್ ಮತ್ತು ಕಂಪೈಲ್ ಟೈಂ ಪಾಲಿಮಾರ್ಫಿಸಂ ಕುರಿತು ಕಲಿತೆವು. |
10:23 | ಇಲ್ಲೊಂದು ಅಸೈನ್ ಮೆಂಟ್ ಇದೆ,
ಈ ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಬಳಸಿದ ವೆಹಿಕಲ್ ಮತು ಬೈಕ್ ಕ್ಲಾಸ್ಗ ವಿಧಾನಗಳನ್ನು ಓವರ್ ರೈಡ್ ಮಾಡಿ. |
10:32 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ಲಿಂಕ್ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷಿಪ್ತಗೊಳಿಸುತ್ತದೆ. ದಯವಿಟ್ಟು ವೀಕ್ಷಿಸಿ. |
10:40 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರವನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಪತ್ರ ಬರೆಯಿರಿ. |
10:51 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. |
11:03 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |