DWSIM-3.4/C2/Shortcut-Distillation/Kannada
From Script | Spoken-Tutorial
Revision as of 14:22, 10 January 2020 by Nancyvarkey (Talk | contribs)
|
|
00:01 | DWSIM ನಲ್ಲಿ ಯ Shortcut distillation column ಅನ್ನು ಸಿಮುಲೇಟ್ ಮಾಡುವ ಕುರಿತು ಇರುವ ಈ spoken tutorial ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ಅನ್ನು ತಯಾರಿಸಿದವರು, ಪ್ರೊ. ಕಣ್ಣನ್ ಮೌದ್ಗಲ್ಯ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು, ಒಂದು Shortcut distillation column ಅನ್ನು (ಶಾರ್ಟ್ಕಟ್ ಡಿಸ್ಟಿಲ್ಲೇಶನ್ ಕಾಲಂ) ಸಿಮುಲೇಟ್ ಮಾಡುವೆವು. |
00:13 | ನಾವು ಒಂದು ನಿರ್ದಿಷ್ಟವಾದ 'ಪ್ರೊಡಕ್ಟ್ ಸ್ಪೆಸಿಫಿಕೇಷನ್' ಅನ್ನು ಪಡೆಯಲು, ಈ ಕೆಳಗಿನವುಗಳನ್ನು ಕಂಡುಹಿಡಿಯಲು ಕಲಿಯುವೆವು. |
00:23 | Minimum number of stages , Minimum reflux ratio,
Optimal Feed stage location ಮತ್ತು Condenser and reboiler heat duty. |
00:26 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು DWSIM 3.4. ಅನ್ನು ಬಳಸುತ್ತೇನೆ. |
00:30 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸಮಾಡಲು, ನಿಮಗೆ: |
00:32 | ಒಂದು ಫ್ಲೋ-ಶೀಟ್ ಗೆ, ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು, |
00:35 | ಥರ್ಮೋಡೈನಮಿಕ್ ಪ್ಯಾಕೇಜ್ ಗಳನ್ನು (thermodynamic package) ಹೇಗೆ ಆಯ್ಕೆಮಾಡುವುದು, |
00:37 | ಮಟೀರಿಯಲ್ ಸ್ಟ್ರೀಮ್ (material stream) ಗಳನ್ನು ಹೇಗೆ ಸೇರಿಸುವುದು ಮತ್ತು ಅವುಗಳ ಲಕ್ಷಣಗಳನ್ನು ಹೇಗೆ ಸೂಚಿಸುವುದು ಇವುಗಳ ಬಗ್ಗೆ ತಿಳಿದಿರಬೇಕು. |
00:41 | ನಮ್ಮ ವೆಬ್ಸೈಟ್ spoken tutorial dot org ನಲ್ಲಿ ಅಗತ್ಯವಿರುವ ಟ್ಯುಟೋರಿಯಲ್-ಗಳು ಲಭ್ಯವಿದೆ. |
00:47 | ಮುಂದಿನ ಎರಡು ಸ್ಲೈಡ್-ಗಳಲ್ಲಿ, ನಾವು ಡಿಸ್ಟಿಲೇಷನ್ ಪ್ರಾಬ್ಲಮ್ ಗಾಗಿ ಸ್ಪೆಸಿಫಿಕೇಷನ್ ಗಳನ್ನು ಕೊಡುತ್ತೇವೆ. |
00:55 | ಈ ಪ್ರಾಬ್ಲೆಮ್ ಸ್ಟೇಟ್ಮೆಂಟ್ ಅನ್ನು Lehigh Universityಯ Prof. Bill Luyben ರವರು ಕೊಟ್ಟಿದ್ದಾರೆ. |
01:00 | ನಾನು ಈಗಾಗಲೇ DWSIM ಅನ್ನು ತೆರೆದಿದ್ದೇನೆ. |
01:03 | System of Units ಮೆನ್ಯುದ ಮೇಲೆ ಕ್ಲಿಕ್ ಮಾಡಿ. |
01:07 | Custom 1 ಅನ್ನು ಆಯ್ಕೆ ಮಾಡಿ. |
01:10 | ಇದು ಯೂನಿಟ್ ಗಳನ್ನು ಕಸ್ಟಮೈಸ್ ಮಾಡಲು ನಮಗೆ ಅನುಮತಿಸುತ್ತದೆ. ಇದನ್ನು ನಾವು ನಂತರ ಮಾಡುವೆವು. |
01:14 | ನಾವು Configure Simulation ಬಟನ್ ನ ಮೇಲೆ ಕ್ಲಿಕ್ ಮಾಡೋಣ. |
01:18 | ChemSep ಡೇಟಾಬೇಸ್ ನಿಂದ Benzene ಅನ್ನು ಸೇರಿಸಿ. |
01:27 | ಆಮೇಲೆ Toluene ಅನ್ನು ಸೇರಿಸಿ. |
01:33 | ಬಳಿಕ ನಾವು ಕ್ರಮವಾಗಿ Thermodynamics >> Property Packages ಗಳ ಮೇಲೆ ಕ್ಲಿಕ್ ಮಾಡುವೆವು. |
01:40 | ಕೆಳಗೆ ಸ್ಕ್ರೋಲ್ ಮಾಡಿ ಮತ್ತು Raoult’s Law (ರೌಲ್ಟ್ಸ್ ಲಾ) ಅನ್ನು ಆಯ್ಕೆ ಮಾಡಿ. |
01:44 | Thermodynamics ಆಯ್ಕೆಯ ಕೆಳಗೆ, ನೀವು Options ಮೆನು ಅನ್ನು ನೋಡುತ್ತೀರಿ. ಇದನ್ನು ಕ್ಲಿಕ್ ಮಾಡಿ. |
01:49 | Units System ಅನ್ನು ಕ್ಲಿಕ್ ಮಾಡಿ. |
01:53 | ಇದನ್ನು ನಾನು ಒಳಗೆ ತರುತ್ತೇನೆ. |
01:56 | ಈ ಲಿಸ್ಟ್ ನ ಮೇಲ್ಭಾಗದಲ್ಲಿ, Pressure ಮೆನು, ಕಾಣಿಸಿಕೊಳ್ಳುತ್ತದೆ. |
01:58 | ಅಟ್ಮಾಸ್ಫಿಯರ್ (atmosphere) ಗಾಗಿ atm ಅನ್ನು ಆಯ್ಕೆಮಾಡಿ ಮತ್ತು ಕ್ಲಿಕ್ ಮಾಡಿ. |
02:04 | Pressure ಮೆನುವಿನ ಕೆಳಗೆ, Molar flow rate ಮೆನು ಇದೆ. |
02:08 | ಅದನ್ನು ಕ್ಲಿಕ್ ಮಾಡಿ ಮತ್ತು kmol/per hour ಅನ್ನು ಆಯ್ಕೆ ಮಾಡಿ. |
02:13 | Back to simulation ನ ಮೇಲೆ ಕ್ಲಿಕ್ ಮಾಡಿ. |
02:15 | ಡಿಸ್ಟಿಲ್ ಮಾಡಬೇಕಾದ ಒಂದು ಫೀಡ್-ಸ್ಟ್ರೀಮ್ ಅನ್ನು (feed stream) ನಾವು ಸೇರಿಸೋಣ. |
02:21 | benzene ಗಾಗಿ 0.4 ಮತ್ತು toluene ಗಾಗಿ 0.6 ಅನ್ನು ಕೊಡಿ. |
02:29 | Apply , ನಂತರ Close ಗಳನ್ನು ಒತ್ತಿ. |
02:32 | ಈ ಸ್ಟ್ರೀಮ್-ನ ಹೆಸರನ್ನು ನಾವು Feed ಎಂದು ಬದಲಾಯಿಸೋಣ. |
02:39 | Properties ನ್ ಮೇಲೆ ಕ್ಲಿಕ್ ಮಾಡಿ. ಮೇಲ್ತುದಿಗೆ ಸ್ಕ್ರೋಲ್ ಮಾಡಿ. |
02:43 | Specification ನ್ ಮೇಲೆ ಕ್ಲಿಕ್ ಮಾಡಿ. |
02:46 | Pressure and Vapor Fraction ಅನ್ನು ಆಯ್ಕೆ ಮಾಡಿ. |
02:50 | Molar flow rate ಆಯ್ಕೆಯನ್ನು ಗುರುತಿಸಿ. |
02:53 | ಇದು kmol/per hour ಯುನಿಟ್ ಗಳನ್ನು ಹೊಂದಿದೆ. |
02:57 | ಈ ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ. 100 ಎಂದು ನಮೂದಿಸಿ. |
03:02 | Molar Fraction (Vapor Phase) ಅನ್ನು ಗುರುತಿಸಿ. |
03:08 | ಡಿಫಾಲ್ಟ್ ವ್ಯಾಲ್ಯು, 0 (ಸೊನ್ನೆ) ಆಗಿದೆ. |
03:10 | ಇದು ಸಂತೃಪ್ತ ದ್ರವವನ್ನು (saturated liquid) ಸೂಚಿಸುತ್ತದೆ. |
03:13 | ನಾವು ಇದನ್ನು ಹಾಗೆಯೆ ಇಡೋಣ. |
03:16 | ನಾವು Flowsheet ಗೆ, ಒಂದು Shortcut column ಅನ್ನು ಸೇರಿಸೋಣ. |
03:20 | Object palette ನಲ್ಲಿ ಅದನ್ನು ಗುರುತಿಸೋಣ. |
03:23 | Shortcut Column- ಇದು, Fenske-Underwood-Gilliland (ಫೆನ್ಸ್ಕಿ- ಅಂಡರ್ ವುಡ್- ಗಿಲಿಲ್ಯಾಂಡ್) ವಿಧಾನವನ್ನು ಆಧರಿಸಿದೆ. |
03:27 | ಅದನ್ನು ಕ್ಲಿಕ್ ಮಾಡಿ ಮತ್ತು ಫ್ಲೋ-ಶೀಟ್ ಗೆ ಎಳೆಯಿರಿ. |
03:32 | ನಾವು ಇದನ್ನು ಜೋಡಿಸೋಣ. |
03:34 | ಈಗ, ನಾವು ಎರಡು output stream ಗಳನ್ನು ಸೇರಿಸೋಣ. |
03:37 | ಅವುಗಳು distillate ಮತ್ತು Bottoms ಎಂದು ಆಗಿವೆ. |
03:41 | ಇದನ್ನು ಮಾಡಲು, ಎರಡು material streamಗಳನ್ನು ನಾವು ಡ್ರ್ಯಾಗ್ ಮಾಡೋಣ . |
03:46 | ಅವುಗಳು ಔಟ್ಪುಟ್ ಸ್ಟ್ರೀಮ್ ಗಳಾಗಿರುವುದರಿಂದ, ನಾವು ಅವುಗಳನ್ನು ಸೂಚಿಸದೇ ಹಾಗೆಯೇ ಇಡುತ್ತೇವೆ. |
03:56 | ಈ ಸ್ಟ್ರೀಮ್ ಗಳ ಹೆಸರನ್ನು ನಾವು Distillate ಮತ್ತು Bottoms ಎಂದು ಬದಲಾಯಿಸುವೆವು. |
04:05 | ಈಗ, Condenser duty ಮತ್ತು Reboiler duty ಗಳಿಗಾಗಿ, ಎರಡು Energy stream ಗಳನ್ನು ನಾವು ಸೇರಿಸೋಣ. |
04:17 | ಈ ಸ್ಟ್ರೀಮ್ ಗಳನ್ನು, C-Duty ಮತ್ತು R-Duty ಎಂದು ಹೆಸರಿಸೋಣ. |
04:24 | ಈಗ ನಾವು Shortcut distillation column ಅನ್ನು ಸೂಚಿಸಲು ಸಿದ್ಧರಾಗಿದ್ದೇವೆ. |
04:27 | ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಆಯ್ಕೆ ಮಾಡಿ. |
04:30 | Selected Object ವಿಂಡೋಗೆ ಹೋಗಿ. |
04:32 | Properties ಟ್ಯಾಬ್ ನ ಅಡಿಯಲ್ಲಿ, Connections ಮೆನು ಅನ್ನು ಗುರುತಿಸಿ. |
04:37 | ಮೊದಲನೆಯ ಆಯ್ಕೆಯು Feed ಆಗಿದೆ. Feed ಮೆನುವಿನ ಮೇಲೆ ಕ್ಲಿಕ್ ಮಾಡುತ್ತೇನೆ. ಒಂದು ಮೆನುವನ್ನು ಸೂಚಿಸುವ, ಡೌನ್-ಆರೋ ಕಾಣಿಸಿಕೊಳ್ಳುತ್ತದೆ. |
04:44 | ಈ ಆರೋ ಅನ್ನು ಕ್ಲಿಕ್ ಮಾಡಿ. ಇಲ್ಲಿ, ನಾವು Feed ಅನ್ನು ಆಯ್ಕೆ ಮಾಡುತ್ತೇವೆ. |
04:48 | ಈಗ, ಮುಂದಿನ ಆಯ್ಕೆಯಾದ Distillate ಮೇಲೆ ಕ್ಲಿಕ್ ಮಾಡಿ. |
04:51 | ಡ್ರಾಪ್-ಡೌನ್ ಆರೋ ಮೇಲೆ ಕ್ಲಿಕ್ ಮಾಡಿ ಮತ್ತು Distillate ಅನ್ನು ಆಯ್ಕೆ ಮಾಡಿ. |
04:56 | ಹೀಗೆಯೇ, Bottomsಗಾಗಿ, Bottoms ಅನ್ನು ಆಯ್ಕೆ ಮಾಡಿ. |
04:59 | Condenser Duty, ಮುಂದಿನ ಆಯ್ಕೆ ಆಗಿದೆ. |
05:02 | ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ ಮತ್ತು C-Duty ಅನ್ನು ಆಯ್ಕೆ ಮಾಡುತ್ತೇನೆ. |
05:07 | ಹೀಗೆಯೇ, Reboilerಗಾಗಿ, R-Duty ಅನ್ನು ಆಯ್ಕೆಮಾಡಿ. |
05:12 | ಇದು, ಫ್ಲೋಶೀಟ್ ನ, ಕನೆಕ್ಟಿವಿಟಿ ಯನ್ನು (ಸಂಪರ್ಕ) ಪೂರ್ಣಗೊಳಿಸುತ್ತದೆ. |
05:14 | Properties ಟ್ಯಾಬ್ ನ ಅಡಿಯಲ್ಲಿ , Parameters ವಿಭಾಗವನ್ನು ಗುರುತಿಸಿ. |
05:19 | ಈ ವಿಭಾಗವನ್ನು Shortcut Column ನ ವಿವಿಧ ಲಕ್ಷಣಗಳನ್ನು ಸೂಚಿಸಲು ಬಳಸಲಾಗುತ್ತದೆ. |
05:25 | ಈ ವಿಭಾಗದಲ್ಲಿ, ಮೊದಲನೆಯ ಆಯ್ಕೆಯು Condenser ಆಗಿದೆ. |
05:30 | ಡಿಫಾಲ್ಟ್ ಆಗಿ, ಇದು Total Condenser ಆಗಿದೆ. |
05:33 | ಒಂದು ವೇಳೆ partial condenser ಬೇಕಾಗಿದ್ದರೆ, ನೀವು ಇಲ್ಲಿ ಇದನ್ನು ಬದಲಾಯಿಸಬಹುದು. |
05:36 | ಇಲ್ಲಿ ನಾವು, ಇದನ್ನು ಇದ್ದ ಹಾಗೇ ಇಡುತ್ತೇವೆ. |
05:39 | ನಾವು Reflux Ratio ಅನ್ನು ನಮೂದಿಸೋಣ. ಅದರ ಮೇಲೆ ಕ್ಲಿಕ್ ಮಾಡಿ. |
05:42 | ಇಲ್ಲಿ , ಅದರ ಪಕ್ಕದ ಫೀಲ್ಡ್ ನಲ್ಲಿ, ವ್ಯಾಲ್ಯೂ ಅನ್ನು 2 ಎಂದು ಕೊಡುತ್ತೇವೆ. |
05:49 | Product composition ಅನ್ನು ಸೂಚಿಸೋಣ. |
05:52 | ಮೊದಲು ನಾವು, bottoms ನಲ್ಲಿ Light key ವಿವರಗಳನ್ನು ಸೂಚಿಸೋಣ. |
05:57 | ಇದನ್ನು ಮಾಡಲು, ನಾನು, Light key ಅನ್ನು ಕ್ಲಿಕ್ ಮಾಡುತ್ತೇನೆ. |
06:01 | ಆರೋ ಅನ್ನು ಕ್ಲಿಕ್ ಮಾಡಿ ಮತ್ತು Benzene ಅನ್ನು ಆಯ್ಕೆ ಮಾಡಿ. |
06:04 | ಕೊಟ್ಟಿರುವ ಫೀಲ್ಡ್ ನಲ್ಲಿ , ಮುಂದಿನ ಸಾಲಿನಲ್ಲಿ, 0.05ಎಂದು ನಮೂದಿಸಿ. |
06:10 | ಇದೇ ರೀತಿ, Heavy key ಗಾಗಿ, Toluene ಅನ್ನು ಆಯ್ಕೆಮಾಡಿ. |
06:15 | ಈಗ ನಾವು, Distillate ನಲ್ಲಿ, Heavy key ಯನ್ನು ಸೂಚಿಸುತ್ತೇವೆ. |
06:18 | ನಾವು 0.05 ಎಂದು ನಮೂದಿಸುತ್ತೇವೆ. |
06:23 | ಲಿಸ್ಟ್ ನಲ್ಲಿ ಮುಂದಿನದು, Condenser Pressure ಎಂದು ಇರುತ್ತದೆ. |
06:26 | ಡಿಫಾಲ್ಟ್ ವ್ಯಾಲ್ಯು, 0 atmosphere ಆಗಿದೆ. ಇದನ್ನು ನಾವು 1 atmosphere ಗೆ ಬದಲಾಯಿಸುವೆವು. |
06:32 | ಹೀಗೆಯೇ, ನಾವು reboiler pressure ಅನ್ನು 1 atmosphere ಗೆ ಬದಲಾಯಿಸೋಣ. |
06:37 | ಈಗ ನಾವು ಸಿಮುಲೇಷನ್ ಅನ್ನು run ಮಾಡೋಣ. |
06:39 | ಇದನ್ನು ಮಾಡಲು, Calculator ಆಯ್ಕೆಗಳಿಗೆ ಹೋಗಿ. |
06:42 | Play ಬಟನ್ ನ ಮೇಲೆ ಕ್ಲಿಕ್ ಮಾಡಿ. ಈಗ, Recalculate ಬಟನ್ ಮೇಲೆ ಕ್ಲಿಕ್ ಮಾಡಿ. |
06:47 | ಕ್ಯಾಲ್ಕ್ಯುಲೇಷನ್ಸ್ (calculations) ಮುಗಿದ ಮೇಲೆ, Shortcut column ನ ಮೇಲೆ ಕ್ಲಿಕ್ ಮಾಡಿ. |
06:53 | Properties ಟ್ಯಾಬ್ ನ ಕೆಳಗೆ, Results ಮೆನು ಅನ್ನು ಗುರುತಿಸಿ. |
06:58 | ನಮಗೆ ಬೇಕಾಗಿರುವ- Minimum Reflux Ratio, |
07:00 | Minimum Number of Stages, |
07:03 | Actual Number of Stages, |
07:05 | Optimal Feed Stage ಗಳಂತಹ |
07:07 | ಎಲ್ಲ ಫಲಿತಾಂಶಗಳನ್ನು ಇದು ತೋರಿಸುತ್ತದೆ: |
07:10 | ಈ ಫಲಿತಾಂಶಗಳನ್ನು ನಾನು ಒಂದು ಸ್ಲೈಡ್ ನಲ್ಲಿ ಪಟ್ಟಿ ಮಾಡಿದ್ದೇನೆ. |
07:15 | ಈ ಸಿಮುಲೇಷನ್ ಅನ್ನು ನಾನು ಸೇವ್ ಮಾಡುತ್ತೇನೆ. |
07:20 | ನಾನು ಇದನ್ನು shortcut end ಎಂದು ಸೇವ್ ಮಾಡಿದ್ದೇನೆ. |
07:24 | ಸಂಕ್ಷಿಪ್ತವಾಗಿ, ಇಲ್ಲಿ ನಾವು : |
07:26 | ಶಾರ್ಟ್ಕಟ್ ಡಿಸ್ಟಿಲೇಷನ್ ಕಾಲಂ ಅನ್ನು ಹೇಗೆ ಸೂಚಿಸುವುದು, |
07:29 | 'ಕೀ ಕಂಪೋನೆಂಟ್' ಗಳು, 'ಪ್ಯೂರಿಟಿ' ಗಳು (purities) ಮತ್ತು 'ಮಿನಿಮಂ ರಿಫ್ಲೆಕ್ಸ್ ರೇಶಿಯೋ' (minimum reflux ratio) ಗಳನ್ನು ಸೂಚಿಸುವುದು, |
07:34 | 'ಕಸ್ಟಮ್ ಯುನಿಟ್' ಗಳನ್ನು ಬಳಸುವುದು, |
07:36 | 'ಮಿನಿಮಂ ರಿಫ್ಲಕ್ಸ್ ರೇಷಿಯೋ', 'ಆಪ್ಟಿಮಲ್ ಫೀಡ್ ಲೊಕೇಷನ್' ಮತ್ತು 'ಒಟ್ಟು ಟ್ರೇ-ಗಳ ಸಂಖ್ಯೆ' ಇವುಗಳನ್ನು ಕಂಡುಹಿಡಯಲು ಕಲಿತಿದ್ದೇವೆ. |
07:43 | ನಾನು ಕೆಲವು ಅಸೈನ್ಮೆಂಟ್ ಗಳನ್ನು ಕೊಡುತ್ತೇನೆ. ಈ ಸ್ಲೈಡ್ ನಲ್ಲಿರುವ ಅಸೈನ್ಮೆಂಟ್, 'ಮಾಸ್ ಬ್ಯಾಲನ್ಸ್' ಗಳಿಗೆ ಸಂಬಂಧಿಸಿದೆ. |
07:48 | ಸ್ಟ್ರೀಮ್ ಗಳು ಮತ್ತು ಉಪಕರಣವನ್ನು ತೋರಿಸಲು, ನಾನು ನೀಲಿ ಬಣ್ಣವನ್ನು ಬಳಸುತ್ತೇನೆ. |
07:52 | ಮುಂದಿನ ಅಸೈನ್ಮೆಂಟ್ ಗೆ ಹೋಗೋಣ. |
07:54 | ಮೊದಲು ಹೇಳಿದಂತೆ, 'ಎನರ್ಜಿ ಬ್ಯಾಲೆನ್ಸ್' ಅನ್ನು ಮಾಡಿ. |
07:58 | ವಿವಿಧ 'ಪ್ರಾಡಕ್ಟ್ ಪ್ಯುರಿಟಿ' ಗಳೊಂದಿಗೆ ಸಿಮುಲೇಷನ್ ಅನ್ನು ಪುನರಾವರ್ತಿಸಿ. |
08:02 | 'ಎನರ್ಜಿ ರಿಕ್ವೈರ್ಮೆಂಟ್' ಹೇಗೆ ಬದಲಾಗುವುದು ಎಂದು ಕಂಡುಹಿಡಿಯರಿ. |
08:06 | ವಿವಿಧ 'ಥರ್ಮೋಡೈನಮಿಕ್ಸ್' ಗಳೊಂದಿಗೆ, ಈ ಸಿಮುಲೇಷನ್ ಅನ್ನು ಪುನರಾವರ್ತಿಸಿ. |
08:08 | ವಿವಿಧ 'ಫೀಡ್ ಕಂಡೀಷನ್' ಗಳೊಂದಿಗೆ, ಈ ಸಿಮುಲೇಷನ್ ಅನ್ನುಪುನರಾವರ್ತಿಸಿ. |
08:12 | ನಿಮ್ಮ ಫಲಿತಾಂಶಗಳನ್ನು ಅರ್ಥೈಸಿ. ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
08:16 | ಈ ವೀಡಿಯೋ, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
08:20 | ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:24 | ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
08:31 | ಈ Spoken Tutorial ನ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ? |
08:33 | ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ. |
08:37 | ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. FOSSEE ತಂಡದವರು ಅದಕ್ಕೆ ಉತ್ತರಿಸುವರು. |
08:41 | ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ. |
08:44 | ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ. |
08:48 | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. |
08:52 | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
08:56 | FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ. |
09:00 | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. |
09:04 | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನೋಡಿ. |
09:07 | ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
09:14 | ಈ ಟ್ಯುಟೋರಿಯಲ್ ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ ಗ್ಲೋರಿಯಾ.
ಧನ್ಯವಾದಗಳು. |