Moodle-Learning-Management-System/C2/Forums-and-Assignments-in-Moodle/Kannada

From Script | Spoken-Tutorial
Revision as of 12:51, 4 January 2020 by Sandhya.np14 (Talk | contribs)

Jump to: navigation, search
Time Narration
00:01 ಮೂಡಲ್ ನಲ್ಲಿ Forums and Assignments ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:

ಫೋರಮ್ ಗಳ ವಿಧಗಳು, ಚರ್ಚೆಗಾಗಿ ಫೋರಮ್ ಅನ್ನು ಹೇಗೆ ಸೇರಿಸುವುದು ಮತ್ತು ಅಸೈನ್ಮೆಂಟ್ ಗಳನ್ನು ಹೇಗೆ ರಚಿಸುವುದು – ಇವುಗಳ ಕುರಿತು ಕಲಿಯುವೆವು.

00:21 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸಿದ್ದೇನೆ.

00:44 ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಅನ್ನು ನೀವು ಬಳಸಬಹುದು. Internet Explorer ಅನ್ನು ಮಾತ್ರ ಬಳಸಬಾರದು. ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:56 ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ನಿಮ್ಮನ್ನು teacher ಆಗಿ ನೋಂದಾಯಿಸಿ, ಕನಿಷ್ಠ ಒಂದು ಕೋರ್ಸ್ ಅನ್ನು ನಿಮಗೆ ಅಸೈನ್ ಮಾಡಿದ್ದಾರೆ
01:08 ಮತ್ತು ನಿಮ್ಮ ಕೋರ್ಸ್ ಗಾಗಿ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ನೀವು ಅಪ್ಲೋಡ್ ಮಾಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:22 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮ್ಮ ಕೋರ್ಸ್ ಗೆ ನೀವು ಸ್ಟುಡೆಂಟ್ ಅನ್ನು ಸೇರಿಸಿರಬೇಕು.
01:28 ಸ್ಟುಡೆಂಟ್ ಅನ್ನು ಸೇರಿಸುವ ಬಗ್ಗೆ ತಿಳಿಯಲು, Users in Moodle ಟ್ಯುಟೋರಿಯಲ್ ಅನ್ನು ನೋಡಿ. ನಾನು ಈಗಾಗಲೆ ನನ್ನ ಕೋರ್ಸ್ ಗೆ ಪ್ರಿಯಾ ಸಿನ್ಹಾ ಅವರನ್ನು ಸ್ಟುಡೆಂಟ್ ಆಗಿ ಸೇರಿಸಿರುವೆನು.
01:40 ಬ್ರೌಸರ್ ಗೆ ಹಿಂದಿರುಗಿ. teacher login ಅನ್ನು ಬಳಸಿ, ಮೂಡಲ್ ಸೈಟ್ ನಲ್ಲಿ ಲಾಗಿನ್ ಮಾಡಿ.
01:47 ಎಡಭಾಗದ ನ್ಯಾವಿಗೇಷನ್ ಮೆನ್ಯು ನಲ್ಲಿರುವ Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ.
01:52 ನಾವು ಈಮೊದಲು ಕೆಲವು course material ಮತ್ತು announcement ಗಳನ್ನು ಸೇರಿಸಿರುವುದನ್ನು ನೆನಪಿಸಿಕೊಳ್ಳಿ.
01:59 ಈಗ Forum ಗಳು ಎಂದರೇನು ಎಂದು ತಿಳಿದುಕೊಳ್ಳೋಣ.
02:03 ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮಲ್ಲಿ ಚರ್ಚಿಸಲು ಮತ್ತು ವಿಚಾರ ವಿನಿಮಯ ಮಾಡಿಕೊಳ್ಳಲು ಫೋರಮ್ ಗಳನ್ನು ಬಳಸಬಹುದು.
02:12 ಆದರೆ, ಅನೌನ್ಸ್ಮೆಂಟ್ ಗಳನ್ನು (ಪ್ರಕಟಣೆ) ಶಿಕ್ಷಕರು ಮಾತ್ರ ಪೋಸ್ಟ್ ಮಾಡುತ್ತಾರೆ.
02:18 ಎಲ್ಲ ಸದಸ್ಯರು ಗೈಡ್-ಲೈನ್ ಗಳನ್ನು ಅನುಸರಿಸುತ್ತಿರುವ ಬಗ್ಗೆ ಟೀಚರ್ ಗಳು ಈ ಚರ್ಚೆಗಳ ಮೇಲ್ವಿಚಾರಣೆ ಮಾಡುತ್ತಾರೆ.
02:26 ಈಗ, forum ಅನ್ನು ಸೇರಿಸುವುದು ಹೇಗೆ ಎಂದು ನೋಡೋಣ. ಮೂಡಲ್ ಪೇಜ್ ಗೆ ಹೋಗಿ.
02:33 ಮೇಲೆ ಬಲಗಡೆಯ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು Turn Editing On ಅನ್ನು ಕ್ಲಿಕ್ ಮಾಡಿ.
02:40 ಕೆಳಗೆ ಬಲಗಡೆಯಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ.
02:47 ಕೆಳಗೆ ಸ್ಕ್ರೋಲ್ ಮಾಡಿ, ಆಕ್ಟಿವಿಟಿ ಚೂಸರ್ ನಲ್ಲಿ Forum ಅನ್ನು ಆಯ್ಕೆಮಾಡಿ.
02:53 ಆಕ್ಟಿವಿಟಿ ಚೂಸರ್ ನ ಕೆಳಗಿರುವ Add ಬಟನ್ ಅನ್ನು ಕ್ಲಿಕ್ ಮಾಡಿ.
02:59 ಕೋರ್ಸ್ ಪೇಜ್ ನಲ್ಲಿ, ಫೋರಮ್ ಗಾಗಿ Forum name ಒಂದು ಲಿಂಕ್ ನ ಹಾಗೆ ಕಾಣಿಸುತ್ತದೆ.
03:06 ನಾನು ಇಲ್ಲಿ Interesting web resources on evolutes and involutes ಎಂದು ಟೈಪ್ ಮಾಡುವೆನು.
03:13 ಫೋರಮ್ ನ ಉದ್ದೇಶವನ್ನು ವಿದ್ಯಾರ್ಥಿಗಳಿಗೆ ತಿಳಿಸಲು Description ಅನ್ನು ಬಳಸಬಹುದು. ನಾನು ಇಲ್ಲಿ ತೋರಿಸಿರುವಂತೆ ಟೆಕ್ಸ್ಟ್ ಅನ್ನು ಟೈಪ್ ಮಾಡುವೆನು.
03:23 ಟೆಕ್ಸ್ಟ್ ಏರಿಯಾದ ಕೆಳಗಿರುವ Display description on course page ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.
03:30 ಮುಂದಿನ ಆಯ್ಕೆ, Forum type ಆಗಿದೆ. ಡಿಫಾಲ್ಟ್ ಆಗಿ, Standard forum for general use ಆಯ್ಕೆಯಾಗಿದೆ.
03:40 ಮೂಡಲ್ ನಲ್ಲಿ 5 ವಿಧದ ಫೋರಮ್ ಗಳಿವೆ. ಫೋರಮ್ ನ ವಿಧಗಳ ಬಗ್ಗೆ ಓದಲು, ಡ್ರಾಪ್- ಡೌನ್ ನ ಪಕ್ಕದ Help ಐಕಾನ್ ಅನ್ನು ಕ್ಲಿಕ್ ಮಾಡಿ.
03:50 ನಿಮ್ಮ ಅಗತ್ಯಕ್ಕೆ ತಕ್ಕಂತೆ, ನೀವು Forum type ಅನ್ನು ಆಯ್ಕೆಮಾಡಬಹುದು. ನಾನು Standard forum displayed in a blog-like format ಅನ್ನು ಆಯ್ಕೆಮಾಡುವೆನು.
04:01 ಕೆಳಗೆ ಸ್ಕ್ರೋಲ್ ಮಾಡಿ. ಪೇಜ್ ನ ಕೆಳಗಿರುವ Save and display ಬಟನ್ ಅನ್ನು ಕ್ಲಿಕ್ ಮಾಡಿ.
04:09 ನಾವು ಒಂದು ಹೊಸ ಪೇಜ್ ಗೆ ಬಂದಿದ್ದೇವೆ. ಇಲ್ಲಿAdd a new topic ಬಟನ್ ಅನ್ನು ಕ್ಲಿಕ್ ಮಾಡಿ.
04:17 ನಾನು Subject ಮತ್ತು Message ಅನ್ನು ಇಲ್ಲಿ ತೋರಿಸಿದಂತೆ ಟೈಪ್ ಮಾಡುವೆನು. ಉಳಿದ ಆಯ್ಕೆಗಳು ಅನೌನ್ಸ್ಮೆಂಟ್ ನ ಆಯ್ಕೆಗಳಂತೆಯೇ ಇವೆ.
04:29 ಕೆಳಗೆ ಸ್ಕ್ರೋಲ್ ಮಾಡಿ. ಪೇಜ್ ನ ಕೆಳಗಿರುವ Post to forum ಬಟನ್ ಅನ್ನು ಕ್ಲಿಕ್ ಮಾಡಿ.
04:36 ಇದು ಯಶಸ್ವಿಯಾದ ಬಗ್ಗೆ ಒಂದು ಸಂದೇಶ ಕಾಣಿಸುವುದು.
04:39 ಈ ಪೋಸ್ಟ್ ಅನ್ನು ಬರೆದವರು, ಇದನ್ನು ಮೂವತ್ತು ನಿಮಿಷಗಳ ಒಳಗೆ ಎಡಿಟ್ ಮಾಡಬಹುದು ಎಂದು ಈ ಸಂದೇಶವು ಸೂಚಿಸುತ್ತದೆ. ಆದರೆ ಇದು teacher ಅಲ್ಲದವರಿಗೆ ಮಾತ್ರ ಅನ್ವಯಿಸುತ್ತದೆ.
04:54 ಕೋರ್ಸ್ ಅನ್ನು ರಚಿಸಿದ ಮತ್ತು ಮಾಡರೇಟರ್ ಸಹ ಆಗಿರುವ ಟೀಚರ್, ಯಾವುದೇ ಪೋಸ್ಟ್ ಅನ್ನು ಯಾವುದೇ ಸಮಯದಲ್ಲಿ ಎಡಿಟ್ ಅಥವಾ ಡಿಲೀಟ್ ಮಾಡಬಹುದು.
05:03 ನಾನು ಈಗ ಸ್ಟುಡೆಂಟ್ Priya Sinha ಎಂದು ಲಾಗಿನ್ ಮಾಡುತ್ತೇನೆ. ಹೀಗೆ ಮಾಡಿದಾಗ ಸ್ಟುಡೆಂಟ್ ಗೆ ಈ ಫೋರಮ್ ಹೇಗೆ ಕಾಣಿಸುವುದೆಂದು ನಾವು ನೋಡಬಹುದು.
05:15 ಚರ್ಚೆಗಳನ್ನು ನೋಡಲು, ರಿಸೋರ್ಸ್ ಗಳ ಪಟ್ಟಿಯಲ್ಲಿ ಫೋರಮ್ ನ ಹೆಸರನ್ನು ಕ್ಲಿಕ್ ಮಾಡಿ.
05:21 ಸ್ಟುಡೆಂಟ್ ಆಗಿ, ನಾನು Add a new topic ಅಥವಾ Discuss this topic ಅನ್ನು ಆಯ್ಕೆಮಾಡಬಹುದು. ಕೆಳಗೆ ಬಲಗಡೆ ಇರುವ Discuss this topic ಲಿಂಕ್ ಅನ್ನು ಕ್ಲಿಕ್ ಮಾಡುತ್ತೇನೆ.
05:35 ನಂತರ Reply ಲಿಂಕ್ ಅನ್ನು ಕ್ಲಿಕ್ ಮಾಡಿ. ಇಲ್ಲಿ ತೋರಿಸಿದಂತೆ ನಾನು ಒಂದು ಕಾಮೆಂಟ್ (comment) ಅನ್ನು ಸೇರಿಸುವೆನು.
05:42 ಕೆಳಗೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಿರುವ Post to forum ಬಟನ್ ಅನ್ನು ಕ್ಲಿಕ್ ಮಾಡಿ. ಈ ಥ್ರೆಡ್ ನ ಕೊನೆಯಲ್ಲಿ ಕಾಮೆಂಟ್ ಸೇರಿರುವುದನ್ನು ನೀವು ನೋಡಬಹುದು.
05:53 ಈಗ ಸ್ಟುಡೆಂಟ್ ಪೋಸ್ಟ್ ಮಾಡಿದ ಕಾಮೆಂಟ್ ಅನ್ನು ನೋಡಲು, ನಾನು ಮತ್ತೆ ಟೀಚರ್- ರೆಬೆಕಾ ಆಗಿ ಲಾಗಿನ್ ಮಾಡುತ್ತೇನೆ.
06:01 ಫೋರಮ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಈ ಚರ್ಚೆಗಾಗಿ 1 reply so far ಇರುವುದನ್ನು ನಾವು ನೋಡಬಹುದು.
06:12 ಕೆಳಗೆ ಬಲಗಡೆಯಿರುವ Discuss this topic ಲಿಂಕ್ ಅನ್ನು ಕ್ಲಿಕ್ ಮಾಡಿ ಈ ಸಂದೇಶವನ್ನು ನೋಡಬಹುದು.
06:21 ಇಲ್ಲಿ Split ಎನ್ನುವ ಇನ್ನೊಂದು ಆಯ್ಕೆಯಿದೆ. ರಿಪ್ಲೈ ಗೆ ಇನ್ನೊಂದು ಚರ್ಚೆಯ ಅವಶ್ಯಕತೆ ಇದೆ ಎಂದೆನಿಸಿದರೆ, ಟೀಚರ್ ಚರ್ಚೆಯನ್ನು ವಿಭಾಗಿಸಬಹುದು.
06:34 ಚರ್ಚೆಯನ್ನು (ಡಿಸ್ಕಷನ್) ವಿಭಾಗಿಸಿದಾಗ (ಸ್ಪ್ಲಿಟ್) ಹೊಸ ಚರ್ಚೆಯ ರಚನೆಯಾಗುತ್ತದೆ. ಹೊಸ ಡಿಸ್ಕಷನ್ ಮತ್ತು ಆ ಥ್ರೆಡ್ ನಲ್ಲಿಯ ನಂತರದ ಪೋಸ್ಟ್ ಗಳನ್ನು, ಹೊಸ ಡಿಸ್ಕಷನ್ ಥ್ರೆಡ್ ಗೆ ವರ್ಗಾಯಿಸಲಾಗುತ್ತದೆ. ನಾನು ಅದನ್ನು ಹಾಗೆಯೇ ಬಿಡುವೆನು.
06:49 ನಾವು Calculus ಕೋರ್ಸ್ ಗೆ ಹಿಂದಿರುಗೋಣ.
06:53 ಈಗ ನಾವು assignment ಗಳನ್ನು ರಚಿಸಲು ಕಲಿಯುವೆವು.
06:58 ಮೂಡಲ್ ನಲ್ಲಿ ಅಸೈನ್ಮೆಂಟ್ ಗಳನ್ನು ಆನ್ಲೈನ್ ನಲ್ಲಿ ಸಲ್ಲಿಸಬಹುದು. ಇದು ಪೇಪರ್ ಅನ್ನು ಉಳಿಸುವುದು. ಅಸೈನ್ಮೆಂಟ್ ಗೆ ವಿದ್ಯಾರ್ಥಿಗಳು ಮೀಡಿಯಾ ಫೈಲ್ ಗಳಾದ ಆಡಿಯೋ, ವಿಡಿಯೋ, ಪವರ್-ಪಾಯಿಂಟ್-ಪ್ರೆಸೆಂಟೇಷನ್ ಇತ್ಯಾದಿಗಳನ್ನು ಸೇರಿಸಬಹುದು. ಟೀಚರ್, Blind marking ಆಯ್ಕೆಯ ಮೂಲಕ ವಿದ್ಯಾರ್ಥಿಗಳಿಗೆ ಪಕ್ಷಪಾತವಿಲ್ಲದೆ ಗ್ರೇಡ್ ಗಳನ್ನು ನೀಡಲು ಸಹಾಯ ಮಾಡುತ್ತದೆ.
07:20 ಈಗ ಬ್ರೌಸರ್ ಗೆ ಹಿಂದಿರುಗೋಣ.
07:23 ಹೆಚ್ಚಿನ ರಿಸೋರ್ಸ್ ಗಳನ್ನು ಸೇರಿಸಲು, Turn editing on ಅನ್ನು ಕ್ಲಿಕ್ ಮಾಡಿ.
07:28 Basic Calculus ವಿಭಾಗದ ಕೆಳಗೆ, ಬಲಭಾಗದಲ್ಲಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ.
07:35 ಹೊಸ ಅಸೈನ್ಮೆಂಟ್ ಅನ್ನು ಸೇರಿಸಲು, ಪಟ್ಟಿಯಲ್ಲಿ Assignment ಮೇಲೆ ಡಬಲ್- ಕ್ಲಿಕ್ ಮಾಡಿ.
07:42 ಇಲ್ಲಿ ತೋರಿಸಿರುವಂತೆ ನಾನು ಅಸೈನ್ಮೆಂಟ್ ಗೆ ಒಂದು ಹೆಸರನ್ನು ಕೊಡುತ್ತೇನೆ.
07:47 ನಂತರ, ಅಸೈನ್ಮೆಂಟ್ ಬಗ್ಗೆ ವಿವರಿಸಿ ಮತ್ತು ಸ್ಟುಡೆಂಟ್ ಗಳು ಏನನ್ನು ಸಬ್ಮಿಟ್ ಮಾಡಬೇಕೆಂದು ತಿಳಿಸಿ.
07:55 ಇದೊಂದು ಸರಳವಾದ ಫಾರ್ಮ್ಯಾಟ್ ಮಾಡಿದ ಟೆಕ್ಸ್ಟ್-ಎಡಿಟರ್ ಆಗಿದೆ. ಇಲ್ಲಿ ನೀವು ಟೇಬಲ್ ಇಮೇಜ್ ಇತ್ಯಾದಿಗಳನ್ನು ಸೇರಿಸಬಹುದು.
08:02 ನಾನು ಇಲ್ಲಿ ಟೈಪ್ ಮಾಡಿದ ಟೆಕ್ಸ್ಟ್ ಅನ್ನು ನೀವು AssignmentResource.odt ಫೈಲ್ ನಿಂದ ಕಾಪಿ ಮಾಡಬಹುದು.
08:07 ಇದು ಈ ಟ್ಯುಟೋರಿಯಲ್ ನ Code files ಲಿಂಕ್ ನಲ್ಲಿ ಲಭ್ಯವಿದೆ.
08:13 Availability ವಿಭಾಗವನ್ನು ನೋಡಲು, ಕೆಳಗೆ ಸ್ಕ್ರೋಲ್ ಮಾಡಿ.
08:17 ನಂತರ, ಸಬ್ಮಿಷನ್ ಮಾಡಲು ಪ್ರಾರಂಭಿಸಬೇಕಾದ ದಿನಾಂಕ ಮತ್ತು ಸಮಯವನ್ನು ನಾವು ಸೂಚಿಸುವೆವು. Enable ಬಾಕ್ಸ್ ಗಳು ಚೆಕ್ ಆಗಿರುವುದನ್ನು ಖಚಿತ ಪಡಿಸಿಕೊಳ್ಳಿ.
08:28 ದಿನಾಂಕವನ್ನು ಆಯ್ಕೆಮಾಡಲು ನೀವು ಕ್ಯಾಲೆಂಡರ್ ಐಕಾನ್ ಅನ್ನು ಸಹ ಬಳಸಬಹುದು. ನಾನು ಇಲ್ಲಿ 25 Nov 2018 ಎನ್ನುತ್ತೇನೆ.
08:39 ನಂತರ Due date ಅನ್ನು 15 Dec 2018 ಎಂದು ಇಡುವೆನು.
08:46 Cut-off date ಮತ್ತು Remind me to grade by date – ಈ ಆಯ್ಕೆಗಳ ಅರ್ಥವನ್ನು ತಿಳಿಯಲು, Help ಐಕಾನ್ ಕ್ಲಿಕ್ ಮಾಡಿ.
08:54 ಅಗತ್ಯವಿದ್ದರೆ ಅವುಗಳನ್ನು ಸೆಟ್ ಮಾಡಿ, ಬೇಡವಾದರೆ ನಿಷ್ಕ್ರಿಯಗೊಳಿಸಿ. ನಾನು ಅವುಗಳನ್ನು ನಿಷ್ಕ್ರಿಯಗೊಳಿಸುವೆನು.
09:02 Always show description ಚೆಕ್-ಬಾಕ್ಸ್ ಅನ್ನು ಅನ್-ಚೆಕ್ ಮಾಡಿ. ಈ ಫೀಲ್ಡ್ ಸಕ್ರಿಯವಾಗಿದ್ದರೆ, Allow submissions from date ನಲ್ಲಿಯ ದಿನಾಂಕದ ಮೊದಲೇ ವಿದ್ಯಾರ್ಥಿಗಳು ಅಸೈನ್ಮೆಂಟ್ ನ ವಿವರಗಳನ್ನು ನೋಡಲು ಸಾಧ್ಯವಿದೆ.
09:17 ಮುಂದಿನದು Submission types ವಿಭಾಗವಾಗಿದೆ. ವಿದ್ಯಾರ್ಥಿಗಳು ಆನ್ಲೈನ್ ಟೆಕ್ಸ್ಟ್ ಅನ್ನು ಸಬ್ಮಿಟ್ ಮಾಡಬೇಕೆ ಅಥವಾ ಫೈಲ್ ಗಳನ್ನು ಮಾತ್ರ ಅಪ್ಲೋಡ್ ಮಾಡಬೇಕೇ ಎಂದು ಇಲ್ಲಿ ನಿರ್ಧರಿಸಿ.
09:30 ನಾನು Online text ಮತ್ತು File submissions ಎರಡನ್ನೂ ಆಯ್ಕೆ ಮಾಡುವೆನು. ನಿಮ್ಮ ಅಗತ್ಯಕ್ಕೆ ತಕ್ಕಂತೆ, ಒಂದು ಅಥವಾ ಎರಡೂ ಆಯ್ಕೆಗಳನ್ನು ನೀವು ಆರಿಸಿಕೊಳ್ಳಬಹುದು.
09:42 ನಾನು Word limit ಅನ್ನು ಸಕ್ರಿಯಗೊಳಿಸಿ, ಇಲ್ಲಿ 1000 ಎನ್ನುತ್ತೇನೆ.
09:48 ಪ್ರತಿಯೊಬ್ಬ ವಿದ್ಯಾರ್ಥಿಯು ಅಪ್ಲೋಡ್ ಮಾಡಬಹುದಾದ ಫೈಲ್ ಗಳ ಸಂಖ್ಯೆ ಯನ್ನು ಕೂಡ ನೀವು ಸೂಚಿಸಬಹುದು. ಅಲ್ಲದೆ, ಫೈಲ್ ನ ಗರಿಷ್ಠ ಸೈಜ್ ಅನ್ನು ಮತ್ತು ನಾವು ಸ್ವೀಕರಿಸುವ ಫೈಲ್-ಟೈಪ್ ಅನ್ನು ಕೂಡ ಸೂಚಿಸಬಹುದು.
10:03 ದಯವಿಟ್ಟು ಗಮನಿಸಿ: ಅಡ್ಮಿನ್ ಸೆಟ್ ಮಾಡಿದ ಗರಿಷ್ಠ ಫೈಲ್ ನ ಸೈಜ್ ಅನ್ನು ಇದು ಅತಿಕ್ರಮಿಸುತ್ತದೆ. ಇಲ್ಲಿ ಇದು 128 MB ಆಗಿದೆ.
10:14 Accepted file types ಮುಂದಿರುವ Help ಐಕಾನ್ ಅನ್ನು ಕ್ಲಿಕ್ ಮಾಡಿ. ಇಲ್ಲಿ, ಈ ಫೀಲ್ಡ್ ಸ್ವೀಕರಿಸುವ ಫೈಲ್-ಟೈಪ್ ಗಳ ಕುರಿತು ಓದಬಹುದು.
10:26 ಇಲ್ಲಿ ನಾನು .pdf,.docx,.doc ಎಂದು ಟೈಪ್ ಮಾಡುವೆನು.
10:34 Feedback types ಮತ್ತು Submission settings ಗಳ ಅಡಿಯಲ್ಲಿಯ ಫೀಲ್ಡ್ ಗಳನ್ನು ಮತ್ತೊಮ್ಮೆ ನೋಡಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಅವುಗಳನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು.
10:46 ನಾನು ಸೆಟ್ಟಿಂಗ್ ಗಳನ್ನು ಹೀಗೆ ಆಯ್ಕೆ ಮಾಡಿದ್ದೇನೆ.
10:50 ಈಗ ಕೆಳಗೆ ಸ್ಕ್ರೋಲ್ ಮಾಡಿ. Grade ವಿಭಾಗವನ್ನು ವಿಸ್ತರಿಸಲು, ಅದನ್ನು ಕ್ಲಿಕ್ ಮಾಡಿ.
10:57 ಡಿಫಾಲ್ಟ್ ಆಗಿ, maximum grade 100 ಆಗಿದೆ. ನಾವು ಇದನ್ನು ಹಾಗೇ ಬಿಡುವೆವು.
11:04 ನಂತರ, Grade to pass ಅನ್ನು ನಾನು 40 ಎಂದು ಕೊಡುತ್ತೇನೆ. Blind marking ಅನ್ನು Yes ಎನ್ನುತ್ತೇನೆ.
11:13 ಮೌಲ್ಯಮಾಪಕರಿಂದ ಇದು ವಿದ್ಯಾರ್ಥಿಯ ಪರಿಚಯವನ್ನು ಅಡಗಿಸುತ್ತದೆ. ಹೀಗಾಗಿ, ಈಗ ಟೀಚರ್ ಗೆ ಯಾವ ವಿದ್ಯಾರ್ಥಿಯು ಯಾವ ಅಸೈನ್ಮೆಂಟ್ ಅನ್ನು ಸಬ್ಮಿಟ್ ಮಾಡಿದ್ದಾನೆ ಎಂದು ತಿಳಿಯುವುದಿಲ್ಲ.
11:26 ಮೌಲ್ಯಮಾಪನದಲ್ಲಿ ಪಕ್ಷಪಾತ ಮಾಡದಂತೆ ಇದು ನನಗೆ ಸಹಾಯ ಮಾಡುತ್ತದೆ.
11:31 ದಯವಿಟ್ಟು ಗಮನಿಸಿ: ಯಾವುದೇ ಸಬ್ಮಿಷನ್ ಆದಮೇಲೆ, ಈ ಅಸೈನ್ಮೆಂಟ್ ಗಾಗಿ Blind marking ಸೆಟ್ಟಿಂಗ್ ಅನ್ನು ಬದಲಿಸಲು ಸಾಧ್ಯವಿಲ್ಲ.
11:40 ಇಲ್ಲಿ ಅಸೈನ್ಮೆಂಟ್ ಗೆ ಸಂಬಂಧಿಸಿದ ಹಲವಾರು ಸೆಟ್ಟಿಂಗ್ ಗಳಿವೆ. ಇವುಗಳನ್ನು ನೀವೇ ಕಲಿತುಕೊಳ್ಳಿ.
11:46 ಈಗ ಕೆಳಗೆ ಸ್ಕ್ರೋಲ್ ಮಾಡಿ, Save and display ಬಟನ್ ಅನ್ನು ಕ್ಲಿಕ್ ಮಾಡಿ.
11:52 ಇಲ್ಲಿ ಅಸೈನ್ಮೆಂಟ್ ಗೆ ಸಂಬಂಧಿಸಿದ ಕೆಲವು ಅಂಕಿಅಂಶಗಳನ್ನು ಹಾಗೂ

View all submissions ಮತ್ತು Grade ಲಿಂಕ್ ಗಳನ್ನು ನೀವು ನೋಡಬಹುದು.

12:03 ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ,
12:09 ಈ ಟ್ಯುಟೋರಿಯಲ್ ನಲ್ಲಿ ನಾವು:

ಫೋರಮ್ ಗಳ ವಿಧಗಳು, ಫೋರಮ್ ಅನ್ನು ಹೇಗೆ ಸೇರಿಸುವುದು ಮತ್ತು ಅಸೈನ್ಮೆಂಟ್ ಗಳನ್ನು ಹೇಗೆ ರಚಿಸುವುದು – ಇವುಗಳ ಬಗ್ಗೆ ಕಲಿತಿದ್ದೇವೆ.

12:20 ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.

ಮೊದಲು ರಚಿಸಿದ ಫೋರಮ್ ಡಿಸ್ಕಶನ್ ಗೆ ರಿಪ್ಲೈ ಅನ್ನು ಸೇರಿಸಿ. ಈ ರಿಪ್ಲೈ ನಂತರ ಡಿಸ್ಕಷನ್ ಅನ್ನು ವಿಭಾಗಿಸಿ (ಸ್ಪ್ಲಿಟ್).

12:33 ಆನ್ಲೈನ್ ಟೆಕ್ಸ್ಟ್ ಸಬ್ಮಿಶನ್ ಗಳನ್ನು ಮಾತ್ರ ಸ್ವೀಕರಿಸುವ ಒಂದು assignment ಅನ್ನು ತಯಾರಿಸಿ.

ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.

12:44 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
12:52 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
13:02 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
13:06 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
13:20 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
13:31 ಧನ್ಯವಾದಗಳು.

Contributors and Content Editors

Anjana310312, Sandhya.np14