Moodle-Learning-Management-System/C2/Formatting-Course-material-in-Moodle/Kannada
Time | Narration |
00:01 | Course Administration in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು : ಮೂಡಲ್ ನಲ್ಲಿ ಕೋರ್ಸ್ ಅಡ್ಮಿನಿಸ್ಟ್ರೇಷನ್, ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ – ಇವುಗಳ ಕುರಿತು ಕಲಿಯುವೆವು. |
00:17 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, |
00:24 | XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, |
00:33 | Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ. |
00:40 | ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
00:52 | ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು teacher ಆಗಿ ನೋಂದಾಯಿಸಿದ್ದಾರೆ ಎಂದು ಭಾವಿಸುತ್ತದೆ. |
01:03 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು , ಮೂಡಲ್ ನಲ್ಲಿ teacher login ಅನ್ನು ಹೊಂದಿರಲೇ ಬೇಕು. |
01:09 | ಮತ್ತು ಅಡ್ಮಿನಿಸ್ಟ್ರೇಟರ್ ನಿಂದ ಒಂದಾದರೂ ಕೋರ್ಸ್ ಅಸೈನ್ ಆಗಿರಲೇ ಬೇಕು ಮತ್ತು ಅವರ ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿರಲೇ ಬೇಕು. |
01:19 | ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. |
01:26 | ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ. |
01:31 | ನಿಮ್ಮ teacher username ಮತ್ತು password ವಿವರಗಳೊಂದಿಗೆ ಲಾಗಿನ್ ಆಗಿ.
ನಾನು teacher ರೆಬೆಕಾ ರೇಮೆಂಡ್ ಎಂದು ಲಾಗಿನ್ ಆಗಿರುವೆನು. |
01:41 | ಈಗ ನಾವು ಟೀಚರ್ಸ್ ಡ್ಯಾಶ್ ಬೋರ್ಡ್ ನಲ್ಲಿರುವೆವು. |
01:44 | ಎಡಗಡೆಯಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ, My Courses ನ ಅಡಿಯಲ್ಲಿ Calculus ಅನ್ನು ಗಮನಿಸಿ. |
01:51 | ಗಮನಿಸಿ, ಇಲ್ಲಿ ನೀವು teacher ಅಥವಾ student ಆಗಿ ದಾಖಲಾಗಿರುವ ಎಲ್ಲ ಕೋರ್ಸ್ ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. |
01:59 | Calculus ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ. |
02:02 | ನಾವು ಈ ಹಿಂದಿನ ಟ್ಯುಟೋರಿಯಲ್ ನಲ್ಲಿ course topics ಮತ್ತು summaries ಅನ್ನು ಅಪ್ಲೋಡ್ ಮಾಡಿದ್ದೇವೆ. |
02:09 | ನೀವು ಮಾಡಿರದಿದ್ದರೆ, ದಯವಿಟ್ಟು ಹಿಂದಿನ ಟ್ಯುಟೋರಿಯಲ್ ನ ಅಸೈನ್ಮೆಂಟ್ ಗಳನ್ನು ನೋಡಿ. |
02:16 | ಈಗ ನಾವು ಕೋರ್ಸ್ ನ ಕೆಲವು ಉಪಯುಕ್ತ ಸೆಟ್ಟಿಂಗ್ ಗಳ ಕುರಿತು ಕಲಿಯುವೆವು. |
02:21 | ಈ ವಿಭಾಗದ ಮೇಲ್ಗಡೆ ಬಲಗಡೆಯಿರುವ gear ಐಕಾನ್ ಅನ್ನು ಕ್ಲಿಕ್ ಮಾಡಿ. |
02:26 | Edit Settings ಅನ್ನು ಕ್ಲಿಕ್ ಮಾಡಿ.ನಂತರ ಎಲ್ಲಾ ವಿಭಾಗಗಳನ್ನು ವಿಸ್ತರಿಸಲು, ಬಲಗಡೆಯಿರುವ Expand All ಅನ್ನು ಕ್ಲಿಕ್ ಮಾಡಿ. |
02:36 | ಇಲ್ಲಿ ಕಾಣಿಸುವ ಸೆಟ್ಟಿಂಗ್ ಗಳು, ಅಡ್ಮಿನಿಸ್ಟ್ರೇಟರ್ ಕೋರ್ಸ್ ಅನ್ನು ರಚನೆ ಮಾಡಿದಾಗಲೇ ಡಿಫೈನ್ ಮಾಡಿದ್ದಾಗಿವೆ. |
02:44 | General ವಿಭಾಗದಲ್ಲಿ, Course full name ಎಂದಿದೆ.
ಇದು ಕೋರ್ಸ್ ಪೇಜ್ ನ ಮೇಲ್ಭಾಗದಲ್ಲಿ ತೋರಿಸುವ ಹೆಸರಾಗಿದೆ. |
02:54 | Course short name ಇದು ಕೋರ್ಸ್ ನ್ಯಾವಿಗೇಷನ್ ಮತ್ತು ಕೋರ್ಸ್ ಗೆ ಸಂಬಂಧಿಸಿದ ಇ-ಮೇಲ್ ಗಳಲ್ಲಿ ಡಿಸ್ಪ್ಲೇ ಆಗುವ ಹೆಸರಾಗಿದೆ. |
03:03 | Course category ಯನ್ನು ಅಡ್ಮಿನ್ ಈಗಾಗಲೇ ಸೆಟ್ ಮಾಡಿರುವರು. |
03:08 | ನಾವು Course start date, Course end date ಮತ್ತು Course ID number ಗಳನ್ನು, ನಮಗೆ ಬೇಕಾದಂತೆ ಬದಲಿಸಬಹುದು. |
03:21 | Description ವಿಭಾಗದಡಿಯಲ್ಲಿ, Course Summary ಟೆಕ್ಸ್ಟ್ ಬಾಕ್ಸ್ ಅನ್ನು ನೋಡಿ.
ನಾನು ಇಲ್ಲಿರುವ ವಿಷಯವನ್ನು ತೆಗೆದು, ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು. |
03:31 | ನನ್ನ ವಿದ್ಯಾರ್ಥಿಗಳು ಇದನ್ನು ನನ್ನ ಕೋರ್ಸ್ ನ ಮುಖಪುಟದಲ್ಲಿ ನೋಡುವರು. |
03:37 | ಮುಂದೆ ಬರುವ ಫೀಲ್ಡ್ Course summary files ಆಗಿದೆ.
ಈ ಫೈಲ್ ಗಳು ಕೋರ್ಸ್ ಸಮರಿ ಯೊಂದಿಗೆ ವಿದ್ಯಾರ್ಥಿಗಳಿಗೆ ಡಿಸ್ಪ್ಲೇ ಆಗುವುದು. |
03:47 | ಡಿಫಾಲ್ಟ್ ಆಗಿ jpg, gif ಮತ್ತು png ಫೈಲ್ ಟೈಪ್ ಗಳನ್ನು ಕೋರ್ಸ್ ಸಮರಿ ಫೈಲ್ ಗಳಾಗಿ ಬಳಸಬಹುದು. |
03:56 | ಫೈಲ್ ಅನ್ನು ಅಪ್ಲೋಡ್ ಮಾಡಲು ಮೂರು ವಿಧಾನಗಳಿವೆ. ಈ ಬಾಕ್ಸ್ ಗೆ ಫೈಲ್ ಅನ್ನು ಎಳೆದು ತರಬಹುದು.(ಡ್ರ್ಯಾಗ್ ಅಂಡ್ ಡ್ರಾಪ್) |
04:03 | ಮೇಲ್ಗಡೆ ಎಡಗಡೆಯಿರುವ Upload ಅಥವಾ Add ಐಕಾನ್ ಅನ್ನು ಕ್ಲಿಕ್ ಮಾಡಿ.
ಅಥವಾ ಕೆಳಮುಖವಾಗಿರುವ ಆರೋ ವನ್ನು ಕ್ಲಿಕ್ ಮಾಡಿ. |
04:11 | Upload ಅಥವಾ Add ಐಕಾನ್ ಅಥವಾ ಕೆಳಮುಖವಾಗಿರುವ ಆರೋ ವನ್ನು ಕ್ಲಿಕ್ ಮಾಡಿದರೆ File picker ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
04:21 | ಎಡ ಮೆನ್ಯುವಿನಲ್ಲಿರುವ Upload a file ಆಯ್ಕೆಯನ್ನು ಕ್ಲಿಕ್ ಮಾಡಿ. |
04:26 | Browse ಅಥವಾ Choose File ಬಟನ್ ಅನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ಮಶಿನ್ ನಲ್ಲಿ ನಿಮಗೆ ಬೇಕಾದ ಫೈಲ್ ಅನ್ನು ಆಯ್ಕೆ ಮಾಡಿ. |
04:34 | ನಾನು ನನ್ನ ಸಿಸ್ಟಮ್ ನಲ್ಲಿ calculus.jpg ಯನ್ನು ಆಯ್ಕೆ ಮಾಡುವೆನು. |
04:40 | Save as ಫೀಲ್ಡ್ ನಲ್ಲಿ ಟೈಪ್ ಮಾಡುವುದರ ಮೂಲಕ ನೀವು ಬೇರೆ ಹೆಸರನ್ನು ಕೊಡಬಹುದು. |
04:46 | author ಮತ್ತು license ವಿವರಗಳನ್ನು, ಅವುಗಳ ಫೀಲ್ಡ್ ನಲ್ಲಿ ಸೂಚಿಸಿರಿ.
ಕೊನೆಯಲ್ಲಿ ಕೆಳಗಡೆಯಿರುವ , Upload this file ಬಟನ್ ಅನ್ನು ಕ್ಲಿಕ್ ಮಾಡಿ. |
04:58 | ಹೀಗೆ ನಾವು ಕೋರ್ಸ್ ಸಮರಿ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು. |
05:02 | ನಂತರ ಬರುವುದು Course format ಆಗಿದೆ. ಕೋರ್ಸ್ ಫಾರ್ಮ್ಯಾಟ್ ವಿದ್ಯಾರ್ಥಿಗಳಿಗಾಗಿ ರಿಸೋರ್ಸ್ ಮತ್ತು ಆಕ್ಟಿವಿಟಿಗಳನ್ನು ಸಿದ್ಧಗೊಳಿಸಿದ ವಿಧಾನವನ್ನು ಸೂಚಿಸುತ್ತದೆ. |
05:12 | Format ಡ್ರಾಪ್ ಡೌನ್ ನಲ್ಲಿ ನಾಲ್ಕು ಆಯ್ಕೆಗಳಿವೆ - ಅವು
Single Activity Format, Social Format , Topics Format ಮತ್ತು Weekly Format ಗಳಾಗಿವೆ. |
05:26 | ನಮ್ಮ ಅಡ್ಮಿನ್ Topics format ಅನ್ನು ಆಯ್ಕೆ ಮಾಡಿದ್ದಾರೆ.
ನಾವು ಇದನ್ನು ಹಾಗೆ ಇಡೋಣ. |
05:33 | ಮುಂದಿನ ಸೆಟ್ಟಿಂಗ್ Hidden sections ಆಗಿದೆ.
ಇದು ಒಂದು ಕೋರ್ಸ್ ನಲ್ಲಿ, ವಿದ್ಯಾರ್ಥಿಗಳಿಂದ ಅಡಗಿಸಿಡಬಹುದಾದ ಟಾಪಿಕ್ ಗಳಾಗಿವೆ. |
05:44 | ಇದು ಟೀಚರ್ ಇನ್ನೂ ಮುಗಿಸಿರದ ಪಾಠಗಳಿದ್ದಾಗ ಉಪಯುಕ್ತವಾಗಿದೆ.
ಈ ಸೆಟ್ಟಿಂಗ್ ವಿದ್ಯಾರ್ಥಿಗಳಿಗೆ Hidden sections ಅನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದನ್ನು ನಿರ್ಧರಿಸುತ್ತದೆ. |
05:57 | ಈ ಆಯ್ಕೆಯು ವಿದ್ಯಾರ್ಥಿಗಳಿಗೆ ಈ ಕಂಟೆಂಟ್ ಗಳನ್ನು ಕೊಲಾಪ್ಸ್ ಆದ ರೀತಿಯಲ್ಲಿ ತೋರಿಸುವುದು. |
06:04 | ಈ ಆಯ್ಕೆಯನ್ನು ಆರಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಕಂಟೆಂಟ್ ಗಳು ಕಾಣಿಸುವುದಿಲ್ಲ. |
06:09 | ನಾವು ಈಗ ಇದನ್ನು ಡಿಫಾಲ್ಟ್ ಆಗಿಯೇ ಬಿಡೋಣ. |
06:13 | ಮುಂದಿನದು Course Layout ಡ್ರಾಪ್ ಡೌನ್ ಆಗಿದೆ. ಅದನ್ನು ಕ್ಲಿಕ್ ಮಾಡಿ. |
06:19 | ಎಲ್ಲಾ ವಿಭಾಗಗಳನ್ನು ತೋರಿಸಲು ಈ ಆಯ್ಕೆಯನ್ನು ಆರಿಸಿಕೊಳ್ಳಬಹುದು. |
06:25 | ಇಲ್ಲಿರುವ ಇನ್ನೊಂದು ಆಯ್ಕೆ Show one section per page ಆಗಿದೆ.
ಇದು ಇರುವ ವಿಭಾಗಗಳ ಸಂಖ್ಯೆಯನ್ನಾಧರಿಸಿ, ಕೋರ್ಸ್ ಅನ್ನು ಅನೇಕ ಪೇಜ್ ಗಳಲ್ಲಿ ವಿಭಜಿಸುತ್ತದೆ. |
06:37 | ಈಗ ನಾವು Show all sections in one page, ಆಯ್ಕೆಯಲ್ಲಿಯೇ ಇರೋಣ. |
06:43 | ಮುಂದಿನದು Appearance ವಿಭಾಗವಾಗಿದೆ. |
06:46 | Show gradebook to students ಆಯ್ಕೆಯನ್ನು ಗಮನಿಸಿ.
ಕೋರ್ಸ್ ನಲ್ಲಿ ಹಲವಾರು ಚಟುವಟಿಕೆಗಳು ಟೀಚರ್ ಗ್ರೇಡ್ ಗಳನ್ನು ಕೊಡಲು ಸಹಾಯಕವಾಗಿವೆ. |
06:57 | ಈ ಆಯ್ಕೆಯು ಮಕ್ಕಳು ಈ ಗ್ರೇಡ್ ಗಳನ್ನು ನೋಡಬಹುದೇ ಎಂದು ನಿರ್ಧರಿಸುತ್ತದೆ.
ಈ ಆಯ್ಕೆ ಡಿಫಾಲ್ಟ್ ಆಗಿ Yes, ಎಂದಾಗಿರುತ್ತದೆ. ನಾವು ಅದನ್ನು ಹಾಗೆ ಇಡೋಣ. |
07:10 | ಡಿಫಾಲ್ಟ್ ಆಗಿ ಆಯ್ಕೆಯಾಗಿರದಿದ್ದರೆ, ನಾವು Show activity reports ಅನ್ನು Ye ಎಂದು ಬದಲಿಸೋಣ. |
07:18 | ಇದು ವಿದ್ಯಾರ್ಥಿಗಳು ಅವರ ಪ್ರೊಫೈಲ್ ಪೇಜ್ ನಲ್ಲಿ ಅವರ ಆಕ್ಟಿವಿಟಿ ರಿಪೋರ್ಟ್ ಗಳನ್ನು ನೋಡಬಹುದು ಎಂದು ದೃಢೀಕರಿಸುತ್ತದೆ. |
07:27 | ನಾವು, ಈ ಕೋರ್ಸ್ ಗೆ ಅಪ್ಲೋಡ್ ಮಾಡಬಹುದಾದ ಫೈಲ್ ನ ಅಳತೆಯನ್ನು ಗರಿಷ್ಟ ಕ್ಕೆ ಸೆಟ್ ಮಾಡಬಹುದು. |
07:34 | additional materials, assignments ಮುಂತಾದವುಗಳಿಗೆ ಕೂಡ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು. |
07:41 | ನಮ್ಮ ಅಡ್ಮಿನ್ ಇದನ್ನು ಫೈಲ್ ನ ಗರಿಷ್ಟ ಅಳತೆ 128MBಗೆ ಸೆಟ್ ಮಾಡಿರುವರು.
ಇದನ್ನು ಹಾಗೇ ಇಡೋಣ. |
07:52 | ಉಳಿದ ಎಲ್ಲ ಸೆಟ್ಟಿಂಗ್ ಗಳಿಗೆ ಡಿಫಾಲ್ಟ್ ವ್ಯಾಲ್ಯು ವನ್ನು ಹಾಗೆಯೇ ಇಡೋಣ. |
07:58 | ಕೆಳಕ್ಕೆ ಸ್ಕ್ರೋಲ್ ಮಾಡಿ, Save and display ಬಟನ್ ಅನ್ನು ಒತ್ತಿ.
ನಾವು Course ಪೇಜ್ ಗೆ ಕರೆದೊಯ್ಯಲ್ಪಡುತ್ತೇವೆ. |
08:06 | ಟಾಪಿಕ್ ಹೆಸರುಗಳ ಮೇಲಿರುವ Announcements ಲಿಂಕ್ ಅನ್ನು ಗಮನಿಸಿ. |
08:11 | ಇದು ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಹಿತಿಗಳು, ಪ್ರಸ್ತುತ ಸಮಾಚಾರಗಳು ಮತ್ತು ಪ್ರಕಟಣೆಗಳು ಮುಂತಾದವುಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. |
08:20 | ಪೇಜ್ ನ ಮೇಲ್ಗಡೆ ಬಲಗಡೆಯಿರುವ gear ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು Turn Editing On ಅನ್ನು ಕ್ಲಿಕ್ ಮಾಡಿ. |
08:28 | ಗಮನಿಸಿ: ಕೋರ್ಸ್ ನಲ್ಲಿ ಏನಾದರೂ ಬದಲಾವಣೆ ಮಾಡುವಾಗ Turn Editing On ಅನ್ನು ಆನ್ ಮಾಡಿರಬೇಕು. |
08:35 | ಈಗ Announcements ನ ಬಲಕ್ಕಿರುವ, Edit ಮತ್ತು Edit Settings ಅನ್ನು ಕ್ರಮವಾಗಿ ಕ್ಲಿಕ್ ಮಾಡಿ. |
08:44 | Description ನಲ್ಲಿ ನಾನು ಈ ರೀತಿಯಾಗಿ ಟೈಪ್ ಮಾಡುವೆನು.
“Please check the announcements regularly”. |
08:52 | Display description on course page ಆಯ್ಕೆಯನ್ನು ಚೆಕ್ ಮಾಡಿ. ಇದು ಲಿಂಕ್ ನ ಕೆಳಗಡೆ ಡಿಸ್ಕ್ರಿಪ್ಷನ್ ಅನ್ನು ತೋರಿಸುತ್ತದೆ. |
09:01 | ಉಳಿದ ಎಲ್ಲ ಸೆಟ್ಟಿಂಗ್ ಗಳನ್ನು ಹಾಗೆಯೇ ಬಿಡಿ. |
09:05 | ಕೆಳಕ್ಕೆ ಸ್ಕ್ರೋಲ್ ಮಾಡಿ, Save and return to course ಅನ್ನು ಕ್ಲಿಕ್ ಮಾಡಿ.
ನಾವು ಕೋರ್ಸ್ ಪೇಜ್ ಗೆ ಹಿಂದಿರುಗುತ್ತೇವೆ. |
09:15 | ಇನ್ನು ಹೆಚ್ಚಿನ ಪ್ರಕಟಣೆ(ಅನೌನ್ಸ್ಮೆಂಟ್) ಗಳನ್ನು ಸೇರಿಸಲು Announcements ನ ಮೇಲೆ ಕ್ಲಿಕ್ ಮಾಡಿ. |
09:21 | ಈಗ Add a new topic ಬಟನ್ ಅನ್ನು ಕ್ಲಿಕ್ ಮಾಡಿ. Subject ಅನ್ನು Minimum requirements ಎಂದು ಟೈಪ್ ಮಾಡಿ. |
09:31 | ಮೆಸೇಜ್ ಅನ್ನು “This course requires you to submit a minimum of 3 assignments and attempt 5 quizzes to pass”. ಎಂದು ಟೈಪ್ ಮಾಡಿ. |
09:43 | Discussion subscription ಇದು ಆಯ್ಕೆಯಾಗಿದೆಯೇ ಮತ್ತು ಇದು ಎಡಿಟ್ ಮಾಡಲು ಅಸಾಧ್ಯವಾಗಿದೆಯೇ ಎಂದು ಗಮನಿಸಿ.
ಏಕೆಂದರೆ ಕೋರ್ಸ್ ಗೆ ದಾಖಲಾಗಿರುವ ಎಲ್ಲರೂ ಕಡ್ಡಾಯವಾಗಿ ಇದಕ್ಕೆ ಸಬ್ಸ್ಕ್ರೈಬ್ ಆಗಿರಲೇ ಬೇಕು. |
09:59 | ಮುಂದಿನದು, Attachments. ನೀವು ಸಂಬಂಧಿತ ಫೈಲ್ ಗಳನ್ನು ಎಳೆದು ತಂದು ಹಾಕಬಹುದು ಅಥವಾ ಅಪ್ಲೋಡ್ ಮಾಡಬಹುದು. |
10:08 | ಫೋರಮ್ ನ ಮೇಲ್ಭಾಗದಲ್ಲಿ ಪ್ರಕಟಣೆಗಳು ಕಾಣಬೇಕಾಗಿದ್ದಲ್ಲಿ, Pinned ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
ನಾನು ಇದನ್ನು ಟಿಕ್ ಮಾಡುವೆನು. |
10:18 | ಮುಂದಿನ ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ.
ಇದು ತತ್ಕ್ಷಣವೇ ಈ ಫೋರಮ್ ಗೆ ಸಬ್ಸ್ಕ್ರೈಬ್ ಮಾಡಿದ ಪ್ರತಿಯೊಬ್ಬರಿಗೂ ನೋಟಿಫಿಕೇಷನ್ ಅನ್ನು ಕಳುಹಿಸುತ್ತದೆ. |
10:29 | ಮುಂದಿನ ವಿಭಾಗವಾದ Display period ವಿಸ್ತರಿಸಿ.
ಇಲ್ಲಿನ ಸೆಟ್ಟಿಂಗ್ ಗಳು, ಈ ಫೋರಮ್ ಪೋಸ್ಟ್ ಒಂದು ನಿರ್ದಿಷ್ಟ ದಿನಾಂಕದ ಅವಧಿಗೆ ಕಾಣುವಂತೆ ಇರಬೇಕೇ ಎಂಬುದನ್ನು ನಿರ್ಧರಿಸುತ್ತದೆ. |
10:41 | ಡಿಫಾಲ್ಟ್ ಆಗಿ ಇದು ಡಿಸೇಬಲ್ ಆಗಿರುವುದು. ಅಂದರೆ ಪೋಸ್ಟ್ ಗಳು ಯಾವಾಗಲೂ ಕಾಣುವಂತೆ ಇರುವುದು.
ನಾವು ಡಿಫಾಲ್ಟ್ ಆಗಿರುವ ಸೆಟ್ಟಿಂಗ್ ಗಳನ್ನು ಹಾಗೇ ಇಡೋಣ. |
10:52 | ಕೆಳಕ್ಕೆ ಸ್ಕ್ರೋಲ್ ಮಾಡಿ, Post to forum ಬಟನ್ ಅನ್ನು ಒತ್ತಿ. |
10:57 | ಒಂದು ಯಶಸ್ವಿ ಸಂದೇಶ ಡಿಸ್ಪ್ಲೇ ಆಗುವುದು. ಪೋಸ್ಟ್ ನ ಲೇಖಕರು, ಪೋಸ್ಟ್ ಅನ್ನು ಬದಲಾಯಿಸಲು ಮೂವತ್ತು ನಿಮಿಷಗಳ ಸಮಯಾವಕಾಶವನ್ನು ಹೊಂದಿರುವರು. |
11:08 | ನಾನು ಬ್ರೆಡ್ ಕ್ರಂಬ್ ನಲ್ಲಿ Calculus ಲಿಂಕ್ ಅನ್ನು ಕ್ಲಿಕ್ ಮಾಡುವೆನು. |
11:13 | ಈಗ ನಾನು ಈ ವಿಭಾಗಕ್ಕೆ ಒಂದು ವಿವರವಾದ ಒಂದು ಸಿಲಬಸ್ ಪೇಜ್ ಅನ್ನು ಸೇರಿಸುವೆನು. |
11:19 | General ವಿಭಾಗದ ಕೆಳಗಿನ ಬಲಗಡೆಯಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ.
ರಿಸೋರ್ಸ್ ಗಳ ಪಟ್ಟಿಯಲ್ಲಿ , Page ಅನ್ನು ಆಯ್ಕೆ ಮಾಡಿ. |
11:32 | ನೀವು ಆಯ್ಕೆ ಮಾಡಿದಾಗ ಬರುವ, ಈ ಚಟುವಟಿಕೆಯ ವಿವರಣೆಯನ್ನು ಓದಿರಿ. |
11:39 | ನಂತರ ಕೆಳಗಿರುವ Add ಬಟನ್ ಅನ್ನು ಒತ್ತಿ.
ನಾವು ಒಂದು ಹೊಸ ಪೇಜ್ ಗೆ ಕರೆದೊಯ್ಯಲ್ಪಡುವೆವು. |
11:47 | Name ಫೀಲ್ಡ್ ನಲ್ಲಿ Detailed syllabus ಎಂದು ಟೈಪ್ ಮಾಡಿ. |
11:52 | Description ಟೆಕ್ಸ್ಟ್ ಬಾಕ್ಸ್ ಅನ್ನು ಖಾಲಿ ಬಿಡುವೆನು ಏಕೆಂದರೆ ಇದರ ಶೀರ್ಷಿಕೆಯೇ ವಿವರವನ್ನು ನೀಡುವುದು. |
11:59 | ನಾನು Page Content ಟೆಕ್ಸ್ಟ್ ಬಾಕ್ಸ್ ನಲ್ಲಿ ಕ್ಯಾಲ್ಕ್ಯುಲಸ್ ಕೋರ್ಸ್ ನ ವಿವರವಾದ ಸಿಲೇಬಸ್ ಅನ್ನು ನಮೂದಿಸುವೆನು. |
12:07 | ಈ ಕಂಟೆಂಟ್ ಈ ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಲಭ್ಯವಿದೆ.
ನೀವು ಅಭ್ಯಾಸ ಮಾಡುವಾಗ ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು. |
12:18 | ಕೆಳಕ್ಕೆ ಸ್ಕ್ರೋಲ್ ಮಾಡಿ, Save and return to course ಬಟನ್ ಅನ್ನು ಕ್ಲಿಕ್ ಮಾಡಿ.
ನಾವು ಕೋರ್ಸ್ ಪೇಜ್ ಗೆ ಹಿಂದಿರುಗುವೆವು. |
12:27 | ಈಗ ನಾವು ನಮ್ಮ ಅಕೌಂಟ್ ನಿಂದ ಲಾಗೌಟ್ ಆಗೋಣ. ಇದಕ್ಕಾಗೆ ಮೇಲೆ ಬಲಗಡೆಯಿರುವ user ಐಕಾನ್ ಅನ್ನು ಕ್ಲಿಕ್ ಮಾಡಿ.
Log out ಆಯ್ಕೆಯನ್ನು ಆಯ್ಕೆ ಮಾಡಿ. |
12:39 | ಈಗ ನಾನು ವಿದ್ಯಾರ್ಥಿಗೆ ಈ ಪೇಜ್ ಹೇಗೆ ಕಾಣುವುದು ಎಂದು ತೋರಿಸುವೆನು. |
12:45 | ನಾನು student ID Priya Sinha ಅನ್ನು ಹೊಂದಿರುವೆನು.
ಈ ವಿದ್ಯಾರ್ಥಿ ಅಡ್ಮಿನ್ ನಿಂದ ಕ್ಯಾಲ್ಕ್ಯುಲಸ್ ಕೋರ್ಸ್ ಗೆ ದಾಖಲಾಗಿರುವರು. |
12:55 | ನಾನು ಸ್ಟುಡೆಂಟ್ Priya Sinha ಎಂದು ಲಾಗಿನ್ ಆಗಿರುವೆನು. ಈಗ ನಾನು ಎಡಗಡೆಯಿರುವ Calculus ಅನ್ನು ಕ್ಲಿಕ್ ಮಾಡುವೆನು. |
13:04 | ವಿದ್ಯಾರ್ಥಿಗೆ ಈ ಪೇಜ್ ಹೀಗೆ ಕಾಣಿಸುವುದು.
ಈ ಪೇಜ್ ನ ಮೇಲ್ಗಡೆ ಬಲಭಾಗದಲ್ಲಿ ಗೇರ್ ಐಕಾನ್ ಇಲ್ಲದಿರುವುದನ್ನು ಗಮನಿಸಿ. |
13:14 | ಏಕೆಂಡರೆ ವಿದ್ಯಾರ್ಥಿಯು ಕೋರ್ಸ್ ನ ಯಾವುದೇ ಭಾಗವನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. |
13:20 | ಈಗ ನಾವು student id ಯಿಂದ ಲಾಗೌಟ್ ಆಗೋಣ. |
13:24 | ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
ಸಂಕ್ಷಿಪ್ತವಾಗಿ, |
13:30 | ಈ ಟ್ಯುಟೋರಿಯಲ್ ನಲ್ಲಿ ನಾವು ಕೋರ್ಸ್ ಅಡ್ಮಿನಿಸ್ಟ್ರೇಷನ್, ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ – ಇವುಗಳ ಕುರಿತು ಕಲಿತಿದ್ದೇವೆ. |
13:40 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
ಕೋರ್ಸ್ ನ ಫಲಿತಾಂಶವನ್ನು ವಿವರಿಸುವ ಒಂದು ಹೊಸ Page ಅನ್ನು ಸೇರಿಸಿ. ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ. |
13:53 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
14:02 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
14:13 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
14:17 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
14:31 | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |