Moodle-Learning-Management-System/C2/Plugins-in-Moodle/Kannada

From Script | Spoken-Tutorial
Revision as of 23:05, 13 November 2019 by Sandhya.np14 (Talk | contribs)

Jump to: navigation, search
Time Narration
00:01 Installing plugins in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು ಪ್ಲಗ್-ಇನ್ ಗಳು ಮತ್ತು ಮೂಡಲ್ ನಲ್ಲಿ ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವುದರ ಬಗ್ಗೆ ಕಲಿಯುವೆವು.
00:15 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

00:23 XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,
00:31 Moodle 3.3 ,
00:33 Firefox ವೆಬ್-ಬ್ರೌಸರ್ ಮತ್ತು ಸಕ್ರಿಯವಾಗಿರುವ ಇಂಟರ್ನೆಟ್ ಸಂಪರ್ಕವನ್ನು ಬಳಸಿದ್ದೇನೆ.
00:40 ನಿಮ್ಮ ಆಯ್ಕೆಯ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
00:44 ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು. ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:52 ಈ ಟ್ಯುಟೋರಿಯಲ್ ಅನ್ನು ಕಲಿಯುವವರು ತಮ್ಮ Moodle ವೆಬ್ಸೈಟ್ ನಲ್ಲಿ ಕೆಲವು ಕೋರ್ಸ್ ಗಳನ್ನು ಹಾಗೂ ಯೂಸರ್ ಗಳನ್ನು ರಚಿಸಿರಬೇಕು.
00:59 ಇಲ್ಲದಿದ್ದರೆ, ಈ ವೆಬ್ಸೈಟ್ ನಲ್ಲಿ ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ನೋಡಿ.
01:06 plugins(ಪ್ಲಗ್ ಇನ್ಸ್) ಎಂದರೇನು?

Plugin ಗಳು ಈಗಿರುವ ಸಾಫ್ಟ್ವೇರ್ ಗೆ ಕೆಲವು ವೈಶಿಷ್ಟ್ಯಗಳನ್ನು ಸೇರಿಸುವ ಆಡ್-ಆನ್ (add-on) ಟೂಲ್ ಗಳಾಗಿವೆ.

01:15 ಮೂಡಲ್ ನಲ್ಲಿ, ಟೀಚರ್ ಮತ್ತು ‘ಸೈಟ್ ಅಡ್ಮಿನಿಸ್ಟ್ರೇಟರ್’ ಗಳಿಗಾಗಿ ಹಲವಾರು ಉಪಯುಕ್ತ ಪ್ಲಗ್-ಇನ್ ಗಳಿವೆ.
01:22 ಇವುಗಳು plugins ಡೈರಕ್ಟರಿಯಲ್ಲಿ ಲಭ್ಯವಿರುತ್ತವೆ.
01:26 ಬ್ರೌಸರ್ ಅನ್ನು ತೆರೆದು, ಹೀಗೆ ಟೈಪ್ ಮಾಡಿ:

https://moodle.org/plugins

01:36 ಈ ಪೇಜ್ ನಲ್ಲಿ, Purpose ಮತ್ತು Plugin Type ಗಳನ್ನು ಆಧರಿಸಿ ಫಿಲ್ಟರ್ ಗಳಿವೆ.
01:41 ಇಲ್ಲಿ ಕಸ್ಟಮ್-ಸರ್ಚ್ ಗಾಗಿ ಒಂದು search ಬಾಕ್ಸ್ ಸಹ ಇದೆ.
01:46, ಬಲಗಡೆ ಮೇಲ್ಭಾಗದಲ್ಲಿ ಕೆಲವು ಸಂಖ್ಯೆಗಳು ಕಾಣಿಸುತ್ತವೆ. ಅವುಗಳ ಕೆಳಗಿರುವ ಟೆಕ್ಸ್ಟ್, ಅವು ಏನೆಂದು ವಿವರಿಸುತ್ತವೆ.
01:53 ಈ ಟ್ಯುಟೋರಿಯಲ್ ನಲ್ಲಿ, ಅಟೆಂಡೆನ್ಸ್ ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವುದನ್ನು ಕಲಿಯುವೆವು.
01:59 search ಬಾಕ್ಸ್ ನಲ್ಲಿ attendance ಎಂದು ಟೈಪ್ ಮಾಡಿ, Search ಬಟನ್ ನ ಮೇಲೆ ಕ್ಲಿಕ್ ಮಾಡಿ.
02:05 ಟೈಟಲ್ ಅಥವಾ ವಿವರಣೆಯಲ್ಲಿ ಈ ಕೀವರ್ಡ್ ಅನ್ನು ಹೊಂದಿರುವ ಅನೇಕ ಪ್ಲಗ್-ಇನ್ ಗಳನ್ನು ಇಲ್ಲಿ ನಾವು ನೋಡುತ್ತೇವೆ.
02:13 Attendance ಪ್ಲಗ್-ಇನ್ ಮೇಲೆ ಕ್ಲಿಕ್ ಮಾಡಿ.

ವಿವರಣೆಯಲ್ಲಿ “A plugin that allows an attendance log to be kept” ಹೀಗಿದೆ.

02:22 ನಾನು ಹೇಳಿದ ಪ್ಲಗ್-ಇನ್ ಮೇಲೆ ನೀವು ಕ್ಲಿಕ್ ಮಾಡಿರುವುದನ್ನು ಪರೀಕ್ಷಿಸಲು, ಹೊಸ ಪೇಜ್ ನ ಟೈಟಲ್ ಅನ್ನು ನೋಡಿ.
02:30 ಅದರ ಟೈಟಲ್ Activities ಕೋಲನ್ Attendance ಎಂದಿರಬೇಕು.
02:36 ಈ ಪ್ಲಗ್ ಇನ್, ಮೂಡಲ್ ನಲ್ಲಿ ‘ಅಟೆಂಡೆನ್ಸ್ ಲಾಗ್’ ಅನ್ನು ಇಡಲು ಟೀಚರ್ ಗೆ ಅನುಮತಿಸುತ್ತದೆ.
02:42 ಹೊಸ ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವ ಮೊದಲು, ನೀವು ಬಳಸುತ್ತಿರುವ ಮೂಡಲ್ ನ ಆವೃತ್ತಿಯಲ್ಲಿ ಅದು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಿ.
02:50 Versions ಲಿಂಕ್ ನ ಮೇಲೆ ಕ್ಲಿಕ್ ಮಾಡಿ, ಅದು ಬೆಂಬಲಿಸುವ ಆವೃತ್ತಿ ಯನ್ನು ನೋಡಿಕೊಳ್ಳಿ.
02:56 ನಮ್ಮ Moodle 3.3 ಆವೃತ್ತಿಯಲ್ಲಿ ಅದು ಲಭ್ಯವಿರುವುದನ್ನು ನೋಡಲು ಕೆಳಕ್ಕೆ ಸ್ಕ್ರೋಲ್ ಮಾಡಿ.
03:03 Description ಲಿಂಕ್ ಗೆ ಹಿಂದಿರುಗಿ.
03:06 ಈ ಪ್ಲಗ್ ಇನ್, ನಿಮ್ಮ ಉದ್ದೇಶವನ್ನು ಪೂರೈಸುವುದೇ ಎಂದು ತಿಳಿಯಲು ವಿವರಣೆಯನ್ನು ಓದಿ.
03:12 ಪ್ಲಗ್-ಇನ್ ಅನ್ನು ಬಳಸಲು ಬೇಕಾದ ಅವಶ್ಯಕತೆಗಳು ಮತ್ತು ಬಳಸುವ ಸೂಚನೆಗಳನ್ನು ಕೂಡ ಇದು ಹೇಳುತ್ತದೆ.
03:20 ಇದನ್ನು ಅನೇಕ ವೆಬ್ಸೈಟ್ ಗಳಲ್ಲಿ ಬಳಸಲಾಗಿದೆ ಮತ್ತು ಅನೇಕ ಅಭಿಮಾನಿಗಳನ್ನು ಇದು ಹೊಂದಿದೆ ಎಂದು ಇಲ್ಲಿ ನೋಡಬಹುದು.
03:27 ಪ್ಲಗ್-ಇನ್ ಉಪಯುಕ್ತವಾಗಿದೆ ಮತ್ತು ಬಳಸಲು ಸುಲಭ ಎಂದು ಇದು ಪ್ರಮಾಣೀಕರಿಸುತ್ತದೆ.
03:33 ಇನ್ನೂ ಕೆಳಕ್ಕೆ ಸ್ಕ್ರೋಲ್ ಮಾಡಿ ಈ ಪ್ಲಗ್ ಇನ್ ಕುರಿತು ಬೇರೆಯವರು ಕೇಳಿದ ಪ್ರಶ್ನೆಗಳನ್ನು ಸಹ ನೀವು ನೋಡಬಹುದು.
03:40 ಪ್ಲಗ್ ಇನ್ ಅನ್ನು ಇನ್ಸ್ಟಾಲ್ ಮಾಡಬೇಕೆಂದು ನಿಮಗೆ ಮನವರಿಕೆಯಾದಾಗ, Versions ಲಿಂಕ್ ಗೆ ಹಿಂದಿರುಗಿ.
03:46 Download ಬಟನ್ ನ ಮೇಲೆ ಕ್ಲಿಕ್ ಮಾಡಿ.
03:49 ನಿಮ್ಮ ಲೋಕಲ್ ಸಿಸ್ಟಮ್ ನಲ್ಲಿ ಫೈಲ್ ಅನ್ನು ಸೇವ್ ಮಾಡಿ. ನಾನು ಇದನ್ನು ಈಗಾಗಲೇ ನನ್ನ ಸಿಸ್ಟಮ್ ನಲ್ಲಿ ಸೇವ್ ಮಾಡಿದ್ದೇನೆ.
03:55 ಹೊಸ ಟ್ಯಾಬ್ ಅನ್ನು ತೆರೆದು, ನಿಮ್ಮ Moodle ವೆಬ್ಸೈಟ್ ನಲ್ಲಿ site administrator ಎಂದು ಲಾಗಿನ್ ಮಾಡಿ.
04:02 XAMPP ಸರ್ವೀಸ್ ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.
04:06 ಈಗ ನಾವು ‘ಅಡ್ಮಿನ್ ಡ್ಯಾಶ್ ಬೋರ್ಡ್’ ನಲ್ಲಿದ್ದೇವೆ.
04:09 ಎಡಭಾಗದಲ್ಲಿರುವ Site Administration ಅನ್ನು ಕ್ಲಿಕ್ ಮಾಡಿ.
04:13 ಈಗ Plugins ಟ್ಯಾಬ್ ಮೇಲೆ, ನಂತರ Install plugins ಲಿಂಕ್ ಮೇಲೆ ಕ್ಲಿಕ್ ಮಾಡಿ.
04:20 ಪ್ಲಗ್ ಇನ್ ಅನ್ನು ಇನ್ಸ್ಟಾಲ್ ಮಾಡಲು, Moodle plugins directory ಮೂಲಕ ಮತ್ತು zip ಅಪ್ಲೋಡ್ ಮೂಲಕ ಹೀಗೆ ಎರಡು ವಿಧಾನಗಳಿವೆ.
04:29 ನಾವು ಎರಡನೆಯ ವಿಧಾನವನ್ನು ಮಾತ್ರ ನೋಡುವೆವು.
04:33 ಮೊದಲನೆ ವಿಧಾನಕ್ಕಾಗಿ ನಾವು moodle.org ನಲ್ಲಿ ಅಕೌಂಟ್ ಅನ್ನು ಹೊಂದಿರಬೇಕು. ಹಾಗಾಗಿ ನಾವು ಅದನ್ನು ಬಿಡುತ್ತಿದ್ದೇವೆ.
04:41 Zip package ನ ಬದಿಯಲ್ಲಿರುವ Choose a file ಬಟನ್ ಅನ್ನು ಕ್ಲಿಕ್ ಮಾಡಿ.
04:46 ಎಡಭಾಗದಲ್ಲಿರುವ Upload a file ಲಿಂಕ್ ಅನ್ನು ಈಗಾಗಲೇ ಆಯ್ಕೆ ಮಾಡಿರದಿದ್ದರೆ, ಅದನ್ನು ಕ್ಲಿಕ್ ಮಾಡಿ.
04:52 Browse ಬಟನ್ ಅನ್ನು ಕ್ಲಿಕ್ ಮಾಡಿ, ನೀವು ಪ್ಲಗ್ ಇನ್ ಫೈಲ್ ಅನ್ನು ಸೇವ್ ಮಾಡಿದ ಜಾಗಕ್ಕೆ ಹೋಗಿ.
04:59 ನಾವು ಮೊದಲೇ ಡೌನ್ಲೋಡ್ ಮಾಡಿದ ಝಿಪ್ ಫೈಲ್ ಅನ್ನು ಆಯ್ಕೆಮಾಡಿ.
05:03 ನಂತರ ಈ ವಿಂಡೋದ ಕೆಳಗಿರುವ Upload this file ಬಟನ್ ಅನ್ನು ಕ್ಲಿಕ್ ಮಾಡಿ.
05:08 ಈಗ ಕೆಳಗಡೆ ಇರುವ Install plugin from the ZIP file ಬಟನ್ ಅನ್ನು ಕ್ಲಿಕ್ ಮಾಡಿ.
05:14 ಈ ಪೇಜ್ ನಲ್ಲಿ ನಿಮಗೆ ಒಂದು ಎರರ್ ಸಿಗಬಹುದು.
05:18 ಎರರ್ ಮೆಸೇಜ್, Validating mod_attendance ... Error ಎಂದು ಹೇಳುತ್ತದೆ.
05:24 Cancel ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
05:27 ಇದು ನಮಗೆ, ಈ ಡೈರೆಕ್ಟರಿ ಗೆ write permission ಕೊಡಬೇಕೆಂಬ ಸೂಚನೆಯಾಗಿದೆ.
05:33 ಆದ್ದರಿಂದ Control + Alt + T ಕೀಗಳನ್ನು ಒತ್ತಿ, ಟರ್ಮಿನಲ್ ಅನ್ನು ತೆರೆಯಿರಿ.
05:39 ಹೀಗೆ ಟೈಪ್ ಮಾಡಿ: sudo space chmod space 777 space slash opt slash lampp slash htdocs slash moodle slash mod slash
05:56 ಕೇಳಿದರೆ, ‘ಅಡ್ಮಿನಿಸ್ಟ್ರೇಟಿವ್ ಪಾಸ್ವರ್ಡ್’ ಅನ್ನು ನಮೂದಿಸಿ ಮತ್ತು Enter ಅನ್ನು ಒತ್ತಿ.
06:02 ಬ್ರೌಸರ್ ಗೆ ಹಿಂದಿರುಗೋಣ ಮತ್ತು ಈ ಕ್ರಿಯೆಯನ್ನು ಪುನರಾವರ್ತಿಸೋಣ.
06:09 ಈ ಬಾರಿ, ವ್ಯಾಲಿಡೇಷನ್ ಯಶಸ್ವಿಯಾಗಿದೆ ಎಂಬ ಸಂದೇಶ ನಮಗೆ ಸಿಗುವುದು. Continue ಬಟನ್ ಅನ್ನು ಕ್ಲಿಕ್ ಮಾಡಿ.
06:17 ಗಮನಿಸಿ, ಮೇಲೆ ಹೇಳಿದ ಎರರ್ ಅನ್ನು ನೀವು ಪಡೆದರೆ ಮಾತ್ರ ಈ ಹೆಚ್ಚಿನ ಕೆಲಸವನ್ನು ಮಾಡಬೇಕಾಗುವುದು.
06:25 ಈಗ, ಪ್ಲಗ್ ಇನ್ ಡೌನ್ಲೋಡ್ ಆಗಿದ್ದು ಮೂಡಲ್ ನ ಈ ಆವೃತ್ತಿಗಾಗಿ ವ್ಯಾಲಿಡೇಟ್ ಮಾಡಲಾಗಿದೆ.
06:31 ನಂತರ, ನಮಗೆ Plugins check ಎಂಬ ಹೆಸರಿನ ಪೇಜ್ ಸಿಗುವುದು.
06:36 ಇಲ್ಲಿ ಹಸಿರು ಬಣ್ಣದಲ್ಲಿರುವ ಸ್ಟೇಟಸ್ ನ ಮಾಹಿತಿಯನ್ನು ಗಮನಿಸಿ. ಇದು To be installed ಎಂದು ಹೇಳುತ್ತಿದೆ.
06:43 Upgrade Moodle database now ಬಟನ್ ಅನ್ನು ಕ್ಲಿಕ್ ಮಾಡಿ.
06:47 ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ದಯವಿಟ್ಟು ಬ್ರೌಸರ್ ವಿಂಡೋ ವನ್ನು ರಿಫ್ರೆಶ್ ಅಥವಾ ಕ್ಲೋಸ್ ಮಾಡುವುದು ಬೇಡ.
06:53 success ಸಂದೇಶ ಕಾಣಿಸಿದಾಗ, Continue ಬಟನ್ ಅನ್ನು ಕ್ಲಿಕ್ ಮಾಡಿ.
06:58 ಈಗ ನಾವು New settings ಪೇಜ್ ನಲ್ಲಿದ್ದೇವೆ.
07:02 ಏನಾದರೂ ಬದಲಿಸಬೇಕೆ ಎಂದು ನೋಡಲು, ಎಲ್ಲ ಸೆಟ್ಟಿಂಗ್ ಗಳನ್ನು ಒಮ್ಮೆ ನೋಡಿ. ನನಗೆ ಏನನ್ನೂ ಬದಲಾಯಿಸಬೇಕಾಗಿಲ್ಲ.
07:10 ನಂತರ, ಪೇಜ್ ನ ಕೆಳಗಿರುವ Save Changes ಬಟನ್ ಅನ್ನು ಕ್ಲಿಕ್ ಮಾಡಿ.
07:16 ಕೆಲವು ಎಚ್ಚರಿಕೆ ಸಂದೇಶಗಳನ್ನು ನೀವು ನೋಡಬಹುದು. ಸಧ್ಯಕ್ಕೆ ಅವುಗಳನ್ನು ನಿರ್ಲಕ್ಷಿಸಿ.
07:21 ಪ್ಲಗ್ ಇನ್ ಯಶಸ್ವಿಯಾಗಿ ಇನ್ಸ್ಟಾಲ್ ಆಗಿದೆಯೆ ಎಂದು ನೋಡಲು, ಎಡ ಪ್ಯಾನಲ್ ನಲ್ಲಿ Site Administration ಅನ್ನು ಕ್ಲಿಕ್ ಮಾಡಿ.
07:29 Plugins ಟ್ಯಾಬ್ ಮೇಲೆ, ನಂತರ Plugins overview ಮೇಲೆ ಕ್ಲಿಕ್ ಮಾಡಿ.
07:36 ಇದು, ಡಿಫಾಲ್ಟ್ ಆಗಿ ಇನ್ಸ್ಟಾಲ್ ಆದ ಮತ್ತು
07:40 ನೀವು ಇನ್ಸ್ಟಾಲ್ ಮಾಡಿದ ಎಲ್ಲಾ ಪ್ಲಗ್-ಇನ್ ಗಳ ಪಟ್ಟಿಯನ್ನು ತೋರಿಸುವುದು.
07:46 ನನ್ನ ಸೈಟ್ ನಲ್ಲಿ, ಇಷ್ಟು ಪ್ಲಗ್ ಇನ್ ಗಳು ಇನ್ಸ್ಟಾಲ್ ಆಗಿರುವುದನ್ನು ಇದು ತೋರಿಸುತ್ತಿದೆ.
07:51 ಇನ್ಸ್ಟಾಲ್ ಆಗಿರುವ ಹೆಚ್ಚಿನ ಪ್ಲಗ್ ಇನ್ ಗಳನ್ನು ನೋಡಲು, ಟೇಬಲ್ ನ ಮೇಲ್ಭಾಗದಲ್ಲಿಯ Additional plugins ಲಿಂಕ್ ಅನ್ನು ಕ್ಲಿಕ್ ಮಾಡಿ.
07:59 ಇಲ್ಲಿ Settings ಹಾಗೂ ಈ ಪೇಜ್ ನಿಂದ ಪ್ಲಗ್ ಇನ್ ಗಳನ್ನು uninstall ಮಾಡಲು ಲಿಂಕ್ ಗಳಿವೆ.
08:05 ಈಗ ಟೀಚರ್ ಗಳು ಮತ್ತು ಅಡ್ಮಿನಿಸ್ಟ್ರೇಟರ್ ಗಳು ತಮ್ಮ ಕೋರ್ಸ್ ಗಳಿಗೆ ಅಟೆಂಡೆನ್ಸ್ ಅನ್ನು ಕ್ರಿಯೇಟ್ ಮಾಡಬಹುದು.
08:11 ಎಡ ಪ್ಯಾನಲ್ ನಲ್ಲಿರುವ Site administration ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ.
08:16 ನಂತರ Courses ಮತ್ತು Manage Courses and categories ಗಳ ಮೇಲೆ ಕ್ಲಿಕ್ ಮಾಡಿ.
08:21 ಎಡಗಡೆಯಿರುವ Course category ಯಲ್ಲಿ, 1st year Maths ಅನ್ನು ಕ್ಲಿಕ್ ಮಾಡಿ.
08:26 ಬಲಗಡೆಯಿರುವ Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ.
08:30 ಕೆಳಗೆ Calculus ಕೋರ್ಸ್ ನ ವಿವರಗಳ ವಿಭಾಗಕ್ಕೆ ಸ್ಕ್ರೋಲ್ ಮಾಡಿ. Calculus ಕೋರ್ಸ್ ಅನ್ನು ನೋಡಲು, View ಟ್ಯಾಬ್ ಅನ್ನು ಕ್ಲಿಕ್ ಮಾಡಿ.
08:40 ಮೇಲೆ ಬಲಗಡೆಯಿರುವ gear ಐಕಾನ್ ಮೇಲೆ, ನಂತರ Turn editing on ನ ಮೇಲೆ ಕ್ಲಿಕ್ ಮಾಡಿ.
08:47 ಟಾಪಿಕ್ಸ್ ನ ಮೊದಲಿರುವ, ಕೆಳಗೆ ಬಲಗಡೆ ಇರುವ Add an activity or resource ನ ಮೇಲೆ ಕ್ಲಿಕ್ ಮಾಡಿ.
08:54 ಅಟೆಂಡೆನ್ಸ್ ಅನ್ನು ಕ್ರಿಯೇಟ್ ಮಾಡಲು, Attendance activity ಮೇಲೆ ಡಬಲ್- ಕ್ಲಿಕ್ ಮಾಡಿ.
09:00 name ಮತ್ತು description ಅನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ.
09:04 Grade ವಿಭಾಗವನ್ನು ವಿಸ್ತರಿಸಿ.
09:07 ಅಟೆಂಡೆನ್ಸ್ ಗಾಗಿ ಬಳಸುವ ಗ್ರೇಡಿಂಗ್ ವಿಧಾನವನ್ನು ಈ ಡ್ರಾಪ್-ಡೌನ್ ನಿರ್ಧರಿಸುವುದು.
09:12 ಕೋರ್ಸ್ ಗ್ರೇಡ್ ಗೆ, ಅಟೆಂಡೆನ್ಸ್ ಅನ್ನು ಪರಿಗಣಿಸಬೇಕಿದ್ದರೆ, ಗರಿಷ್ಟ ವ್ಯಾಲ್ಯೂ ವನ್ನು ಸೆಟ್ ಮಾಡಿ. ಡಿಫಾಲ್ಟ್ 100 ಆಗಿದೆ.
09:21 ನಾನು Grade ಅನ್ನು None ಎಂದು ಆಯ್ಕೆ ಮಾಡುವೆನು.
09:24 ಉಳಿದ ಆಯ್ಕೆಗಳು ಡಿಫಾಲ್ಟ್ ಆಗಿರಲಿ.
09:27 ಕೆಳಗೆ ಸ್ಕ್ರೋಲ್ ಮಾಡಿ Save and display ಬಟನ್ ಅನ್ನು ಕ್ಲಿಕ್ ಮಾಡಿ.
09:31 ನಾವು ಈಗ ಹೊಸ ಪೇಜ್ ನಲ್ಲಿ ಇದ್ದೇವೆ.
09:34 ಇಲ್ಲಿ Status set ಟ್ಯಾಬ್ ಅನ್ನು ಕ್ಲಿಕ್ ಮಾಡಿ.
09:38 ಅಟೆಂಡೆನ್ಸ್ ಗಾಗಿ, Present , Late , Excused ಮತ್ತು Absent ಎಂಬ ನಾಲ್ಕು ಡಿಫಾಲ್ಟ್ ಸ್ಟ್ಯಾಟಸ್ ಗಳಿವೆ.
09:47 ನಿಮ್ಮ ಅವಶ್ಯಕತೆಗೆ ತಕ್ಕಂತೆ, ನೀವು ಇವುಗಳನ್ನು ಡಿಲೀಟ್ ಮಾಡಬಹುದು ಅಥವಾ ಹೆಚ್ಚಿನದನ್ನು ಸೇರಿಸಬಹುದು.
09:53 ಸ್ಟ್ಯಾಟಸ್ ಗಳನ್ನು ಬೇರೆ ಹೆಸರಿನಿಂದ ಕರೆಯುವುದಾದರೆ, ಅವುಗಳನ್ನು ಇಲ್ಲಿ ನೀವು ಮಾರ್ಪಡಿಸಬಹುದು.
09:59 Excused ಸ್ಟ್ಯಾಟಸ್ ಅನ್ನು ಡಿಲೀಟ್ ಮಾಡುವೆನು. ಏಕೆಂದರೆ, ನಾನು ಅದನ್ನು ನನ್ನ ತರಗತಿಯಲ್ಲಿ ಬಳಸುವುದಿಲ್ಲ.
10:07 ದೃಢೀಕರಣ ಸಂದೇಶದ ಬಾಕ್ಸ್ ಕಾಣಿಸುವುದು.

Continue ಬಟನ್ ಅನ್ನು ಕ್ಲಿಕ್ ಮಾಡಿ.

10:13 ಈಗ Add session ಟ್ಯಾಬ್ ಅನ್ನು ಕ್ಲಿಕ್ ಮಾಡಿ.
10:16 ನೀವು ಸೇರಿಸಬೇಕಾದ ಮೊದಲ ಸೆಶನ್ ನ ದಿನಾಂಕವನ್ನು ಆಯ್ಕೆ ಮಾಡಿ.

ನಾನು ಇದನ್ನು 4 ಜೂನ್ 2019 ಎಂದು ಇಡುವೆನು.

10:24 ಸೆಶನ್ ನ ಆರಂಭದ ಮತ್ತು ಮುಗಿಯುವ ಸಮಯವನ್ನು ಆಯ್ಕೆಮಾಡಿ.
10:27 ಗಮನಿಸಿ: ಟೈಮ್ ಫೀಲ್ಡ್, 24-ಗಂಟೆಯ ಗಡಿಯಾರವನ್ನು ಹೊಂದಿದೆ.

ಹೀಗಾಗಿ 3:15 pm ರಿಂದ 4:05pm ವರೆಗಿನ ತರಗತಿಯು 15:15 ರಿಂದ 16:05 ರವರೆಗೆ ಇರುತ್ತದೆ.

10:43 ಈ ಅವಧಿಯ ಕುರಿತು ಸಣ್ಣ Description ಅನ್ನು ಟೈಪ್ ಮಾಡಿ.
10:46 Description ಫೀಲ್ಡ್ ಅನ್ನು ಖಾಲಿ ಬಿಟ್ಟರೆ, ಡಿಫಾಲ್ಟ್ ಆಗಿ ಇದು “Regular class session” ಆಗಿರುತ್ತದೆ.
10:54 Multiple sessions ವಿಭಾಗವನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.
10:59 ನಿಮ್ಮ ತರಗತಿಯು ನಿಯಮಿತವಾಗಿ ಸೇರುತ್ತಿದ್ದರೆ, ನೀವು ಒಂದೇ ಸಮಯಕ್ಕೆ ಅನೇಕ ಸೆಷನ್ ಗಳನ್ನು ಕ್ರಿಯೇಟ್ ಮಾಡಬಹುದು.
11:06 Repeat the session above as follows ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ.
11:11 ನಿಮ್ಮ ತರಗತಿಯು ವಾರದ ನಿರ್ದಿಷ್ಟ ದಿನಗಳಲ್ಲಿ ಸೇರುತ್ತಿದ್ದರೆ, ವಾರದ ಆ ದಿನಗಳನ್ನು ಆಯ್ಕೆ ಮಾಡಿ.

ನಾನು ನನ್ನ ತರಗತಿಗಾಗಿ Monday ಯನ್ನು ಆಯ್ಕೆ ಮಾಡುವೆನು.

11:20 ಮುಂದಿನ ಆಯ್ಕೆ Repeat every ಡ್ರಾಪ್-ಡೌನ್ ಆಗಿದೆ.

ತರಗತಿಯು ಪ್ರತಿವಾರ ಸೇರುತ್ತಿದ್ದರೆ, 1 ಅನ್ನು ಆಯ್ಕೆಮಾಡಿ.

11:28 ತರಗತಿಯು ಮೊದಲನೆಯ ಸೆಶನ್ ಆದ ಎರಡು ವಾರದ ನಂತರ ಸೇರುತ್ತಿದ್ದರೆ, 2 ಅನ್ನು ಆಯ್ಕೆ ಮಾಡಿ. ಹೀಗೆ ..
11:35 ನಾನು ಇದನ್ನು 1 ಎಂದು ಇಡುವೆನು.
11:38 ಇದರರ್ಥ, ನನ್ನ ತರಗತಿಯು ಪ್ರತಿ ಸೋಮವಾರ 3:15 pm ಗೆ, 50 ನಿಮಿಷಗಳ ಕಾಲ ಸೇರುವುದು.
11:45 Repeat until ಇದು ಕೊನೆಯ ಸೆಶನ್ ನ ದಿನಾಂಕವಾಗಿದೆ.
11:49 ನಾನು ಇದನ್ನು 30th March 2020 ಎನ್ನುತ್ತೇನೆ.
11:54 ನಂತರ, Student recording ವಿಭಾಗವನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ.
12:00 ವಿದ್ಯಾರ್ಥಿಗಳು ತಮ್ಮ ಹಾಜರಿಯನ್ನು ತಾವೆ ದಾಖಲಿಸಲಿ ಎಂದು ನೀವು ಬಯಸಿದರೆ, ಈ ವಿಭಾಗದಲ್ಲಿನ ಫೀಲ್ಡ್ ಗಳನ್ನು ಭರ್ತಿಮಾಡಿ.
12:07 ನಾನು ಈ ವಿಭಾಗವನ್ನು ಬಿಟ್ಟುಬಿಡುವೆನು.
12:09 ಕೆಳಕ್ಕೆ ಸ್ಕ್ರೋಲ್ ಮಾಡಿ. ಪೇಜ್ ನ ಕೆಳಗಿರುವ Add ಬಟನ್ ಅನ್ನು ಕ್ಲಿಕ್ ಮಾಡಿ.
12:15 43 sessions were successfully generated. ಎಂಬ ದೃಢೀಕರಣದ ಸಂದೇಶ (ಕನ್ಫರ್ಮೇಶನ್ ಮೆಸೇಜ್) ಕಾಣುವುದು.
12:22 ನಾನು ಆಯ್ಕೆ ಮಾಡಿದ ದಿನಾಂಕಗಳನ್ನು ಬಿಟ್ಟು ನೀವು ಬೇರೆ ಆಯ್ಕೆ ಮಾಡಿದ್ದರೆ, ಸೆಶನ್ ಗಳ ಸಂಖ್ಯೆ ಇಲ್ಲಿ ಬೇರೆ ಇರುವುದು.
12:28 ಪ್ರತಿಯೊಂದು ಸೆಶನ್ ನ ಮುಂದೆ ಇರುವ ಐಕಾನ್ ಗಳನ್ನು ನೋಡಿ.
12:32 ಟೀಚರ್ ಇವುಗಳನ್ನು ಉಪಯೋಗಿಸಿ ಹಾಜರಿ ತೆಗೆದುಕೊಳ್ಳುವುದು ಮತ್ತು ಸೆಶನ್ ಅನ್ನು ಎಡಿಟ್ ಅಥವಾ ಡಿಲೀಟ್ ಮಾಡಬಹುದು.
12:39 ನೀವು ಅಟೆಂಡೆನ್ಸ್ ತೆಗೆದುಕೊಳ್ಳಲು ಬಯಸುವ ವಾರಕ್ಕಾಗಿ, Take attendance ಐಕಾನ್ ಅನ್ನು ಕ್ಲಿಕ್ ಮಾಡಿ.
12:46 ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲ ವಿದ್ಯಾರ್ಥಿಗಳ ಪಟ್ಟಿಯನ್ನು ನೀವು ನೋಡಬಹುದು ಮತ್ತು ನೀವು ಅವರ ಅಟೆಂಡೆನ್ಸ್ ಅನ್ನು ಗುರುತು ಹಾಕಬಹುದು.
12:53 P, L ಮತ್ತು A ಗಳು ಸೆಟ್ಟಿಂಗ್ಸ್ ನಲ್ಲಿ ಮೊದಲೇ ನಾವು ಆಯ್ಕೆಮಾಡಿದ ಸ್ಟ್ಯಾಟಸ್ ಗಳಾಗಿವೆ.
12:59 ಎಲ್ಲ ಯೂಸರ್ ಗಳ ಸ್ಟ್ಯಾಟಸ್ ಅನ್ನು'Present' ಎಂದು ಸೆಟ್ ಮಾಡಲು, 'P' ಯ ಕೆಳಗಿರುವ ರೆಡಿಯೋ ಬಟನ್ ಅನ್ನು ಒತ್ತಿ. ಗೈರು ಹಾಜಾರಿರುವ ವಿದ್ಯಾರ್ಥಿಗಳಿಗೆ ಮಾತ್ರ 'A' ಎಂದು ಗುರುತುಹಾಕಿ.
13:10 ನೀವು ಅಟೆಂಡೆನ್ಸ್ ಅನ್ನು ಗುರುತಿಸಿದ ನಂತರ, ಪೇಜ್ ನ ಕೆಳಭಾಗದಲ್ಲಿರುವ Save attendance ಬಟನ್ ನ ಮೇಲೆ ಕ್ಲಿಕ್ ಮಾಡಿ.
13:18 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಸಂಕ್ಷಿಪ್ತವಾಗಿ,

13:24 ಈ ಟ್ಯುಟೋರಿಯಲ್ ನಲ್ಲಿ ನಾವು ಪ್ಲಗ್-ಇನ್ ಗಳು ಮತ್ತು ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವುದರ ಬಗ್ಗೆ ಕಲಿತಿದ್ದೇವೆ.
13:32 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
13:35 Projectes TAC Dept ನಿಂದ ನಿರ್ವಹಿಸಲಾಗುವ plugin Font family ಯನ್ನು ಹುಡುಕಿ.
13:42 ಪ್ಲಗ್-ಇನ್ ನ ಡಿಫಾಲ್ಟ್ ಸೆಟ್ಟಿಂಗ್ ಗಳೊಂದಿಗೆ ಅದನ್ನು ಇನ್ಸ್ಟಾಲ್ ಮಾಡಿ.
13:46 ಪ್ಲಗ್-ಇನ್ ಇನ್ಸ್ಟಾಲ್ ಆಗಿದೆಯೆಂದು Plugins overview ವಿಭಾಗದಿಂದ ಖಚಿತಪಡಿಸಿಕೊಳ್ಳಿ.
13:52 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
14:00 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
14:10 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
14:14 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
14:27 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14