Koha-Library-Management-System/C2/Circulation/Kannada
From Script | Spoken-Tutorial
Revision as of 06:49, 17 April 2019 by Sandhya.np14 (Talk | contribs)
|
|
00:01 | Circulation ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು - Patron ವರ್ಗಕ್ಕಾಗಿ, Circulation ಮತ್ತು Fine Rules, |
00:13 | Check Out (Issuing), |
00:15 | Renewing ಮತ್ತು Check In (Returning) ಇವುಗಳ ಬಗ್ಗೆ ಕಲಿಯುವೆವು. |
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04 |
00:28 | ಮತ್ತು Koha ಆವೃತ್ತಿ 16.05. ಇವುಗಳನ್ನು ಬಳಸುತ್ತಿದ್ದೇನೆ. |
00:32 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು. |
00:38 | ಇದನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು. |
00:44 | ಮತ್ತು, Koha ದಲ್ಲಿ Admin ಆಕ್ಸೆಸ್ ಅನ್ನು ಸಹ ನೀವು ಹೊಂದಿರಬೇಕು. |
00:48 | ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ. |
00:54 | ಮೊದಲಿಗೆ ನಾವು Patron category ಗಾಗಿ, Circulation ಮತ್ತು Fine Rules ಗಳನ್ನು ವಿವರಿಸುವ ಮೂಲಕ ಪ್ರಾರಂಭಿಸುತ್ತೇವೆ. |
01:02 | Spoken Tutorial Library ಯ ಅಡಿಯಲ್ಲಿ, Post Graduate student ಎಂಬ ಒಂದು Patron Category ಯನ್ನು ಕ್ರಿಯೇಟ್ ಮಾಡಿ. |
01:10 | ಈ ಸರಣಿಯಲ್ಲಿ ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ, ಮೇಲಿನ ಎಲ್ಲಾ ವಿಷಯಗಳನ್ನು ವಿವರಿಸಲಾಗಿದೆ ಎಂದು ನೆನಪಿಸಿಕೊಳ್ಳಿ. |
01:16 | ನಾವು ಈ ಮಾಹಿತಿಯನ್ನು, ನಂತರ ಈ ಟ್ಯುಟೋರಿಯಲ್ ನಲ್ಲಿ ಬಳಸುತ್ತೇವೆ. |
01:21 | Spoken Tutorial Library ಯ ಅಡಿಯಲ್ಲಿ, Post Graduate student ಎಂದು Patron Category ಯನ್ನು ಸೇರಿಸಿದ ನಂತರ, ನಿಮ್ಮ Koha ಇಂಟರ್ಫೇಸ್ ಹೀಗೆ ಕಾಣುವುದು. |
01:32 | ಈಗ, Superlibrarian Username Bella ಮತ್ತು ಅವಳ ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡಿ. |
01:39 | Koha Administration ಗೆ ಹೋಗಿ. |
01:43 | Patrons and circulation ಎಂಬ ವಿಭಾಗದ ಅಡಿಯಲ್ಲಿ, Circulation and fines rules ಮೇಲೆ ಕ್ಲಿಕ್ ಮಾಡಿ. |
01:52 | Defining circulation and fine rules for all libraries ತೆರೆದುಕೊಳ್ಳುತ್ತದೆ. |
01:57 | Select Library ಯನ್ನು ಗುರುತಿಸಿ. ಮತ್ತು ಡ್ರಾಪ್-ಡೌನ್ ನಿಂದ Spoken Tutorial Library ಯನ್ನು ಆಯ್ಕೆಮಾಡಿ. |
02:05 | Defining circulation and fine rules for "Spoken Tutorial Library" ಎಂಬ ಶೀರ್ಷಿಕೆಯೊಂದಿಗೆ, ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
02:14 | Patron category ಎಂಬ ವಿಭಾಗದ ಅಡಿಯಲ್ಲಿ, ಡ್ರಾಪ್-ಡೌನ್ ನಿಂದ Post Graduate Student ಮೇಲೆ ಕ್ಲಿಕ್ ಮಾಡಿ. |
02:22 | Item type ಎಂಬ ವಿಭಾಗದ ಅಡಿಯಲ್ಲಿ, ಡ್ರಾಪ್-ಡೌನ್ ನಿಂದ Book ಮೇಲೆ ಕ್ಲಿಕ್ ಮಾಡಿ. |
02:28 | Current checkouts allowed ಎಂಬ ಫೀಲ್ಡ್ ನಲ್ಲಿ 5 ಎಂದು ನಮೂದಿಸಿ. |
02:33 | ನಾನು Current on-site checkouts allowed ಅನ್ನು ಖಾಲಿ ಬಿಡುತ್ತೇನೆ. |
02:39 | Loan period ಗಾಗಿ 15 ಎಂದು ನಮೂದಿಸಿ. |
02:43 | ನಾನು For Unit ಅನ್ನು ಇದ್ದ ಹಾಗೇ, ಎಂದರೆ Days ಎಂದು ಇಡುತ್ತೇನೆ. |
02:48 | Hard due date ಅನ್ನು ಇದ್ದ ಹಾಗೇ ಇಡುತ್ತೇನೆ. |
02:53 | Fine amount 5 ಎಂದು ಮತ್ತು Fine charging interval ಗಾಗಿ 1 ಎಂದು ನಮೂದಿಸಿ. |
03:01 | When to charge ಅನ್ನು ಇದ್ದ ಹಾಗೇ ಇಡುತ್ತೇನೆ. |
03:05 | ನಾನು Fine grace period: ಅನ್ನು ಖಾಲಿ ಬಿಡುತ್ತೇನೆ. |
03:09 | Overdue fines cap (amount): ಮತ್ತು Cap fine at replacement price: ಗಳನ್ನು ಖಾಲಿ ಬಿಡುತ್ತೇನೆ. |
03:17 | Suspension in days (day): ಅನ್ನು ಸಹ ನಾನು ಖಾಲಿ ಬಿಡುತ್ತೇನೆ. |
03:22 | Maximum suspension duration (day): ಅನ್ನು ಖಾಲಿ ಬಿಡುತ್ತೇನೆ. |
03:28 | Renewals allowed (count) ಗಾಗಿ, 10 ಎಂದು ನಮೂದಿಸಿ. |
03:33 | Renewal period ಹಾಗೂ No renewal before: ಗಳನ್ನು ನಾನು ಖಾಲಿ ಬಿಡುತ್ತೇನೆ. |
03:39 | Automatic renewal ಅನ್ನು ಇದ್ದ ಹಾಗೇ ಇಡುತ್ತೇನೆ. |
03:44 | Holds allowed (count) ಗಾಗಿ, 5 ಎಂದು ನಮೂದಿಸಿ. |
03:48 | On shelf holds allowed ಗಾಗಿ, ಡ್ರಾಪ್-ಡೌನ್ ನಿಂದ If all unavailable ಅನ್ನು ಆಯ್ಕೆಮಾಡಿ. |
03:55 | Item level holds ಅನ್ನು ಇದ್ದ ಹಾಗೇ ಇಡುತ್ತೇನೆ. |
04:00 | Rental discount ಖಾಲಿ ಬಿಡುತ್ತೇನೆ. |
04:04 | ನಂತರ, ಟೇಬಲ್ ನ ಬಲತುದಿಯ ಮೂಲೆಯಲ್ಲಿ, Actions ಎಂಬ ವಿಭಾಗಕ್ಕೆ ಹೋಗಿ. ಮತ್ತು Save ಮೇಲೆ ಕ್ಲಿಕ್ ಮಾಡಿ. |
04:13 | ಅದೇ ಪೇಜ್- Defining circulation and fine rules for "Spoken Tutorial Library" ಮತ್ತೆ ತೆರೆದುಕೊಳ್ಳುತ್ತದೆ. |
04:21 | ನಾವು ಈಗಷ್ಟೇ ತುಂಬಿದ ಎಲ್ಲಾ ನಮೂದುಗಳನ್ನು ಈ ಪೇಜ್ ಒಳಗೊಂಡಿದೆ. |
04:28 | Select the library: ಎಂಬ ಶೀರ್ಷಿಕೆಯ ಬದಿಯಲ್ಲಿ Clone these rules to: ಅನ್ನು ಗುರುತಿಸಿ. |
04:35 | ಡ್ರಾಪ್-ಡೌನ್ ನಿಂದ, Spoken Tutorial Library ಅನ್ನು ಆಯ್ಕೆಮಾಡಿ. |
04:40 | ಆಮೇಲೆ, Clone ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. |
04:45 | Cloning circulation and fine rules from “Spoken Tutorial Library” to “Spoken Tutorial Library” ಎಂಬ ಶೀರ್ಷಿಕೆಯೊಂದಿಗೆ, ಒಂದು ಹೊಸ ಪೇಜ್ ತೆರೆದುಕೊಳ್ಳುವುದು. |
04:56 | “The rules have been cloned” ಎಂದು ಹೇಳುವ ಒಂದು ಮೆಸೇಜ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
05:02 | ಈಗ, Ms. Reena Shah ಎಂಬ ಒಂದು Patron ಅನ್ನು, Post-Graduate student ಎಂದು ಕ್ರಿಯೇಟ್ ಮಾಡಿ.
ಇದು Books, CD/DVDs, Bound Volumes ಗಳಂತಹ Spoken Tutorial Library Item ಗಳ ಚೆಕ್-ಔಟ್ ಮತ್ತು ಚೆಕ್-ಇನ್ ಗಳಿಗಾಗಿ ಇದೆ. |
05:20 | ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ, ಪೇಟ್ರನ್ ಅನ್ನು ಕ್ರಿಯೇಟ್ ಮಾಡುವಾಗ ನಾವು ಸ್ಟಾಫ್ ಗಾಗಿ ಪರ್ಮಿಶನ್ ಗಳನ್ನು ಸೆಟ್ ಮಾಡಿದ್ದೇವೆ ಎಂಬುದನ್ನು ನೆನಪಿಸಿಕೊಳ್ಳಿ. |
05:29 | ಆದರೆ ಇಲ್ಲಿ, ಪೇಟ್ರನ್ ಗಾಗಿ, ಎಂದರೆ Student: Ms. Reena Shah ಗಾಗಿ, ಯಾವುದೇ ಪರ್ಮಿಶನ್ ಅನ್ನು ಸೆಟ್ ಮಾಡಬೇಡಿ. |
05:38 | ಸುಮ್ಮನೆ, ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ಪೇಜ್ ನ ಮೇಲ್ತುದಿಯಲ್ಲಿರುವ Save ಮೇಲೆ ಕ್ಲಿಕ್ ಮಾಡಿ. |
05:45 | ಈಗ, Superlibrarian ಅಕೌಂಟ್ ನಿಂದ ಲಾಗ್-ಔಟ್ ಮಾಡಿ. |
05:49 | ಮೇಲಿನ ಬಲಮೂಲೆಯಲ್ಲಿರುವ Spoken Tutorial Library ಮೇಲೆ ಕ್ಲಿಕ್ ಮಾಡುವ ಮೂಲಕ ಇದನ್ನು ಮಾಡಿ. |
05:56 | ಡ್ರಾಪ್-ಡೌನ್ ನಿಂದ, Log out ಮೇಲೆ ಕ್ಲಿಕ್ ಮಾಡಿ. |
06:01 | ಆಮೇಲೆ, Library Staff, Samruddhi ಎಂದು ಮತ್ತೊಮ್ಮೆ ಲಾಗ್-ಇನ್ ಮಾಡಿ. |
06:07 | ನಂತರ, Home ಪೇಜ್ ನಲ್ಲಿ, Circulation ಮೇಲೆ ಕ್ಲಿಕ್ ಮಾಡಿ. |
06:12 | Checkout ನೊಂದಿಗೆ ನಾವು ಆರಂಭಿಸೋಣ. |
06:15 | Circulation ಪೇಜ್ ನಲ್ಲಿ, Check-out ಎಂದರೆ ವಿತರಿಸುವ ಪ್ರಕ್ರಿಯೆ, ಮೇಲೆ ಕ್ಲಿಕ್ ಮಾಡಿ. |
06:22 | ಈಗ ತೆರೆದುಕೊಳ್ಳುವ ಪೇಜ್ ನಲ್ಲಿ, Enter patron card number or partial name ನ ಫೀಲ್ಡ್ ಅನ್ನು ಗುರುತಿಸಿ.
ನಾನು ಹೆಸರನ್ನು Reena ಎಂದು ನಮೂದಿಸುತ್ತೇನೆ. |
06:34 | ಇದೇ ಸರ್ಚ್-ಫೀಲ್ಡ್ ನ ಬಲಭಾಗದಲ್ಲಿರುವ Submit ಬಟನ್ ಅನ್ನು ಕ್ಲಿಕ್ ಮಾಡಿ. |
06:39 | ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. Checking out to Reena Shah (3) Enter item Barcode: ಎಂಬ ಫೀಲ್ಡ್ ನಲ್ಲಿ, |
06:48 | ನಾನು ವ್ಯಾಲ್ಯೂವನ್ನು 00001 ಎಂದು ನಮೂದಿಸುತ್ತೇನೆ. |
06:53 | ನೆನಪಿಸಿಕೊಳ್ಳಿ, ಈ ಬಾರ್ಕೋಡ್ ಅನ್ನು, ಆಕ್ಸೆಶನ್ ನಂಬರ್ ನ (accession number) ಹಾಗೆ ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ಹೇಳಲಾಗಿತ್ತು. |
07:00 | ಆದ್ದರಿಂದ, ಅದೇ ವ್ಯಾಲ್ಯೂವನ್ನು Check-out ಗಾಗಿ ನಮೂದಿಸಲಾಗುವುದು |
07:05 | ಈಗ, ಫೀಲ್ಡ್ ನ ಕೆಳಗಿರುವ Check-out ಮೇಲೆ ಕ್ಲಿಕ್ ಮಾಡಿ. |
07:10 | ಆಮೇಲೆ, Check-out ವಿವರಗಳನ್ನು ನೋಡಲು, ಪೇಜ್ ನ ಕೆಳಗಿರುವ Show check-outs ಮೇಲೆ ಕ್ಲಿಕ್ ಮಾಡಿ. |
07:18 | ಅದೇ ಪೇಜ್ ನಲ್ಲಿ, ಚೆಕ್-ಔಟ್ ಮಾಡಲಾದ ಐಟಂನ ಎಲ್ಲಾ ವಿವರಗಳೊಂದಿಗೆ ಒಂದು ಟೇಬಲ್ ಕಾಣಿಸಿಕೊಳ್ಳುತ್ತದೆ. |
07:24 | ವಿವರಗಳು ಹೀಗಿವೆ: Due date, Title, Item type, Location, Checked out on, Checked out from, Call number, Charge, Fine, Price, Renew ಮತ್ತು Check in . |
07:43 | ಒಂದುವೇಳೆ, ಒಂದು ಐಟಂ ಅನ್ನು ರಿನ್ಯೂ ಅಥವಾ ಚೆಕ್-ಇನ್ ಮಾಡಬೇಕಾಗಿದ್ದರೆ, ಆಗ ಟೇಬಲ್ ನ ಕೆಳತುದಿಯಲ್ಲಿರುವ Renew or check in selected items ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
07:56 | ಇಲ್ಲಿ, ಒಂದಕ್ಕಿಂತ ಹೆಚ್ಚು ಐಟಂ ಗಳಿದ್ದರೆ, ಆಗ ಪೇಜ್ ನ ಕೆಳತುದಿಯಲ್ಲಿರುವ Renew or check in selected items ಎಂಬ ಟ್ಯಾಬ್ ನ ಬದಿಯಲ್ಲಿರುವ Renew all ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
08:10 | ನಾನು ಯಾವುದೇ ಟ್ಯಾಬ್ ಗಳ ಮೇಲೆ ಕ್ಲಿಕ್ ಮಾಡುವುದಿಲ್ಲ. ಏಕೆಂದರೆ, ಕೋಹಾ ಹೋಮ್-ಪೇಜ್ ಮೇಲಿನ Circulation ಟ್ಯಾಬ್ ಅನ್ನು ಬಳಸಿ, items ಮತ್ತು check in ಗಳನ್ನು ಹೇಗೆ ರಿನ್ಯೂ ಮಾಡುವುದೆಂದು ನಾನು ತೋರಿಸುವೆನು. |
08:22 | ಅದೇ ಪೇಜ್ ನಲ್ಲಿ, ಮೇಲಿನ ಎಡಮೂಲೆಯಲ್ಲಿ Circulation ಮೇಲೆ ಕ್ಲಿಕ್ ಮಾಡಿ. |
08:28 | ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, Circulation ನ ಅಡಿಯಲ್ಲಿ Renew ಮೇಲೆ ಕ್ಲಿಕ್ ಮಾಡಿ. |
08:35 | ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
Enter item barcode ಎಂಬ ಫೀಲ್ಡ್ ನಲ್ಲಿ, ನಾನು ಬಾರ್-ಕೋಡ್ ಅನ್ನು ಆಕ್ಸೆಶನ್ ನಂಬರ್ 00001 ಎಂದು ನಮೂದಿಸುತ್ತೇನೆ. |
08:48 | ಆಮೇಲೆ ಫೀಲ್ಡ್ ನ ಬಲಭಾಗದಲ್ಲಿರುವ Submit ಮೇಲೆ ಕ್ಲಿಕ್ ಮಾಡಿ. |
08:53 | Item Renewed ಎಂಬ ಡೈಲಾಗ್-ಬಾಕ್ಸ್ ನೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
08:58 | ನಂತರ, ಅದೇ ಪೇಜ್ ನಲ್ಲಿ, ಮೇಲಿನ ಎಡಮೂಲೆಯಲ್ಲಿ Circulation ಮೇಲೆ ಕ್ಲಿಕ್ ಮಾಡಿ. |
09:05 | ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, Circulation ನ ಅಡಿಯಲ್ಲಿ, check in ಮೇಲೆ ಕ್ಲಿಕ್ ಮಾಡಿ. |
09:11 | ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, Enter item barcode ಎಂಬ ಫೀಲ್ಡ್ ಅನ್ನು ಗುರುತಿಸಿ. |
09:17 | ನಾನು ಬಾರ್-ಕೋಡ್ ಅನ್ನು, ಆಕ್ಸೆಶನ್ ನಂಬರ್ 00001 ಎಂದು ನಮೂದಿಸುವೆನು. 'ಐಟಂ' ಅನ್ನು ಇದರೊಂದಿಗೆ ಮೊದಲು ಚೆಕ್-ಔಟ್ ಮಾಡಲಾಗಿತ್ತು. |
09:27 | ಮತ್ತು, ಫೀಲ್ಡ್ ನ ಬಲಭಾಗದಲ್ಲಿರುವ Submit ಮೇಲೆ ಕ್ಲಿಕ್ ಮಾಡುವೆನು. |
09:32 | Due date, Title , Author , Barcode, Home Library, Holding library, Shelving location, Call number, Type, Patron ಮತ್ತು Note ಇತ್ಯಾದಿ ವಿವರಗಳನ್ನು ಹೊಂದಿರುವ ಒಂದು ಟೇಬಲ್ ಕಾಣಿಸಿಕೊಳ್ಳುತ್ತದೆ. |
09:52 | ಮೊದಲೇ ತುಂಬಿದ ವಿವರಗಳ ಪ್ರಕಾರ- Title-Industrial Microbiology, |
09:57 | Barcode- 00001 ಮತ್ತು Patron-Shah, Reena (PG) ಇವುಗಳನ್ನು ಗಮನಿಸಿ. |
10:09 | ಇದರೊಂದಿಗೆ, ನಾವು Circulation ಅನ್ನು ಪೂರ್ಣಗೊಳಿಸುತ್ತೇವೆ. |
10:13 | ಈಗ, Library staff ಅಕೌಂಟ್ ನಿಂದ ಲಾಗ್-ಔಟ್ ಮಾಡಿ. |
10:17 | ಇದನ್ನು ಮಾಡಲು, ಮೇಲಿನ ಬಲಮೂಲೆಗೆ ಹೋಗಿ. Spoken Tutorial Library ಮೇಲೆ ಕ್ಲಿಕ್ ಮಾಡಿ. |
10:25 | ಆಮೇಲೆ, ಡ್ರಾಪ್-ಡೌನ್ ನಿಂದ, Log out ಅನ್ನು ಆಯ್ಕೆಮಾಡಿ. |
10:31 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು,
Patron ವರ್ಗಕ್ಕಾಗಿ, Circulation ಮತ್ತು Fine Rules, |
10:41 | Check Out (Issuing), Renewing, Check In (Returning) ಇವುಗಳ ಬಗ್ಗೆ ಕಲಿತಿದ್ದೇವೆ. |
10:48 | ಅಸೈನ್ಮೆಂಟ್: Patron Ms. Reena Shah ಗೆ ಇನ್ನೊಂದು ಪುಸ್ತಕವನ್ನು ಕೊಡಿ (issue ಮಾಡಿ). |
10:54 | ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
11:01 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
11:11 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
11:15 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.
ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
11:26 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |