Netbeans/C2/Netbeans-Debugger/Kannada
From Script | Spoken-Tutorial
Revision as of 20:13, 2 October 2018 by Sandhya.np14 (Talk | contribs)
Time | Narration |
00:01 | ಎಲ್ಲರಿಗೂ ನಮಸ್ಕಾರ. |
00:02 | Netbeans Debugger ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ನೀವು Netbeans (ನೆಟ್ಬೀನ್ಸ್) ಅನ್ನು ಮೊದಲ ಬಾರಿಗೆ ಬಳಸುತ್ತಿದ್ದರೆ, ದಯವಿಟ್ಟು ಹಿಂದಿನ ಟ್ಯುಟೋರಿಯಲ್ ಗಳನ್ನು 'ಸ್ಪೋಕನ್ ಟ್ಯುಟೋರಿಯಲ್' ವೆಬ್ಸೈಟ್ ನಲ್ಲಿ ವೀಕ್ಷಿಸಿ. |
00:14 | ಇಲ್ಲಿ ವಿವರಣೆಗಾಗಿ, ನಾನು Linux Operating System Ubuntu ಆವೃತ್ತಿ 12.04 |
00:21 | ಮತ್ತು Netbeans IDE ಆವೃತ್ತಿ 7.1.1 ಇವುಗಳನ್ನು ಬಳಸುತ್ತಿದ್ದೇನೆ. |
00:26 | ಪ್ರೊಗ್ರಾಂಗಳನ್ನು ಡೀಬಗ್ ಮಾಡುವುದು ಒಂದು ಕಠಿಣವಾದ ಕೆಲಸವೆಂದು ನಮಗೆಲ್ಲ ತಿಳಿದಿದೆ. |
00:31 | ಆದ್ದರಿಂದ, ಡೀಬಗ್ ಮಾಡುವ ಟೂಲ್ ಅನ್ನು ಅದರ ವೈಶಿಷ್ಟ್ಯಗಳೊಂದಿಗೆ ತಿಳಿದುಕೊಳ್ಳುವುದು, ನಿಮ್ಮ ಅಮೂಲ್ಯ ಸಮಯವನ್ನು ಉಳಿಸಲು ಸಹಾಯಕವಾಗುತ್ತದೆ. |
00:39 | ವಿಶೇಷವಾಗಿ, ನೀವು ದೊಡ್ಡ ಪ್ರೊಗ್ರಾಂಗಳನ್ನು ಕೋಡ್ ಮಾಡುವಾಗ ಅಥವಾ ಪರೀಕ್ಷೆ ಮಾಡುವಾಗ, |
00:42 | ಈ ಪ್ರಬಲವಾದ ಡೀಬಗ್ ಮಾಡುವ ಟೂಲ್, ತುಂಬಾ ಉಪಯುಕ್ತವಾಗಿದೆ. |
00:46 | ಈ ಟ್ಯುಟೋರಿಯಲ್ ನಲ್ಲಿ, Netbeans Debugger (ನೆಟ್ಬೀನ್ಸ್ ಡಿಬಗ್ಗರ್) ಒದಗಿಸುವ ಕೆಲವು ವೈಶಿಷ್ಟ್ಯಗಳನ್ನು ನಾವು ಕಲಿಯುವೆವು. |
00:53 | ಈ ಟ್ಯುಟೋರಿಯಲ್ - |
00:55 | ಡೀಬಗ್ ಮಾಡುವ ವಿಂಡೋ, |
00:58 | 'ಬ್ರೆಕ್-ಪಾಯಿಂಟ್' ಗಳನ್ನು ಕಾನ್ಫಿಗರ್ ಮಾಡುವುದು, |
01:00 | ಎಕ್ಸ್ಪ್ರೆಶನ್ ಗಳ (expressions) ಮೌಲ್ಯಮಾಪನ ಅಥವಾ ವಾಚ್ ಗಳನ್ನು ಸೆಟ್ ಮಾಡುವುದು, |
01:04 | ನಿಮ್ಮ ಪ್ರೊಗ್ರಾಂನ ಎಕ್ಸೀಕ್ಯೂಶನ್ ನ ಗತಿಯನ್ನು ಕಂಡುಹಿಡಿಯಲು ಆಯ್ಕೆಗಳು ಮತ್ತು |
01:17 | ಡೀಬಗ್ಗರ್ ಅನ್ನು ಕಾನ್ಫಿಗರ್ ಮಾಡಲು ಆಯ್ಕೆಗಳು, ಇವುಗಳನ್ನು ನಿಮಗೆ ತಿಳಿಸಿಕೊಡುತ್ತದೆ. |
01:12 | ಈಗ, ನಾವು ಈ ಸ್ಯಾಂಪಲ್ ಕೋಡ್ ಅನ್ನು ಡಿಬಗ್ ಮಾಡುವುದರೊಂದಿಗೆ ಆರಂಭಿಸೋಣ. |
01:17 | ನಾನು Netbeans IDE ಗೆ ಬದಲಾಯಿಸುವೆನು. |
01:20 | ಈ ವಿವರಣೆಗಾಗಿ, ನನ್ನ IDE ಯಲ್ಲಿ ನಾನು ಈಗಾಗಲೇ "sampleDebug" ಎಂಬ ಒಂದು ಜಾವಾ ಅಪ್ಲಿಕೇಶನ್ ಅನ್ನು ತಯಾರಿಸಿದ್ದೇನೆ. |
01:27 | ಇದು 'a', 'b', ಮತ್ತು 'c' ಎಂಬ ಮೂರು ಇಂಟೀಜರ್ ವ್ಯಾಲ್ಯೂಗಳನ್ನು ಆರಂಭಿಸುವ ಒಂದು ಸಣ್ಣ ಪ್ರೋಗ್ರಾಂ ಆಗಿದೆ. |
01:35 | ನಂತರ, ಇದು "Hello World!" ಮತ್ತು 'a' ದ ವ್ಯಾಲ್ಯೂ ಇವುಗಳನ್ನು ಪ್ರಿಂಟ್ ಮಾಡುತ್ತದೆ. |
01:40 | ಇದು 'value' ಎಂಬ ಇಂಟೀಜರ್ ಅನ್ನು private integer value ಎಂದು ಹೊಂದಿರುವ "SampleClass" ಎಂಬ ಒಂದು class ಆಬ್ಜೆಕ್ಟ್ ಅನ್ನು ಸಹ ಕ್ರಿಯೇಟ್ ಮಾಡುತ್ತದೆ. |
01:52 | ನಂತರ, ಇದು 'b' ಯ ವ್ಯಾಲ್ಯೂಅನ್ನು ಕಂಡುಹಿಡಿಯುತ್ತದೆ |
01:55 | ಮತ್ತು 'c' ಯ ವ್ಯಾಲ್ಯೂಅನ್ನು ಕಂಡುಹಿಡಿಯಲು ಒಂದು ಫಂಕ್ಷನ್ ಅನ್ನು ಕಾಲ್ ಮಾಡುತ್ತದೆ |
02:00 | ಹಾಗೂ 'b' ಮತ್ತು 'c' ಗಳ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡುತ್ತದೆ. |
02:05 | ಡೀಬಗ್ಗಿಂಗ್ ಅನ್ನು ಆರಂಭಿಸಲು, ಮೊದಲು ನಾವು 'ಬ್ರೆಕ್-ಪಾಯಿಂಟ್' ಅನ್ನು ಸೆಟ್ ಮಾಡೋಣ. |
02:09 | 'ಬ್ರೆಕ್-ಪಾಯಿಂಟ್' ಅನ್ನು ಸೆಟ್ ಮಾಡಲು, ಲೈನ್ ನಂಬರ್ ನ ಮೇಲೆ ಕ್ಲಿಕ್ ಮಾಡಿ. |
02:13 | "Hello World!" ಎಂದು ಪ್ರಿಂಟ್ ಮಾಡುವ ಈ ಲೈನ್ ಮೇಲೆ ನಾನು ಸೆಟ್ ಮಾಡುವೆನು. |
02:18 | ಗಮನಿಸಿ: ' ಬ್ರೆಕ್ ಪಾಯಿಂಟ್' ಅನ್ನು ಹೊಂದಿದ ಲೈನ್, ಗುಲಾಬಿ ಬಣ್ಣಕ್ಕೆ ಬದಲಾಯಿಸುತ್ತದೆ ಮತ್ತು ಅದರ ಲೈನ್ ನಂಬರ್ ಅನ್ನು ಒಂದು ಸಣ್ಣ ಚೌಕದಿಂದ ಗುರುತಿಸಲಾಗಿದೆ. |
02:28 | ನೀವು ಟೂಲ್ ಬಾರ್ ನಲ್ಲಿ Debug Project ಬಟನ್ ಮೇಲೆ ಕ್ಲಿಕ್ ಮಾಡಿ, |
02:31 | ಪ್ರೊಗ್ರಾಂಅನ್ನು debugging ಮೋಡ್ ನಲ್ಲಿ ರನ್ ಮಾಡಿದಾಗ, |
02:35 | 'ಬ್ರೆಕ್ ಪಾಯಿಂಟ್' ಅನ್ನು ಹೊಂದಿದ ಲೈನ್ ನಲ್ಲಿ, ಪ್ರೊಗ್ರಾಂ ಎಕ್ಸೀಕ್ಯೂಟ್ ಆಗುತ್ತಿರುವುದು ನಿಲ್ಲುತ್ತದೆ. |
02:41 | ಇಲ್ಲಿಯವರೆಗೆ, 'a' ದ ವ್ಯಾಲ್ಯೂವನ್ನು ಸೆಟ್ ಮಾಡಲಾಗಿದೆ. |
02:45 | ಅದರ ವ್ಯಾಲ್ಯೂವನ್ನು ನೋಡಲು, ಅದರ ಮೇಲೆ ಮೌಸ್ ಅನ್ನು ನಡೆದಾಡಿಸಿ. |
02:49 | ಅದರ ವ್ಯಾಲ್ಯೂ, 10 ಎಂದು ಅದು ತೋರಿಸುತ್ತದೆ. |
02:52 | ವರ್ಕ್-ಸ್ಪೇಸ್ ನ ಕೆಳಗಡೆ ಇನ್ನೂ ಕೆಲವು ವಿಂಡೋಗಳು ಇರುವುದನ್ನು ನೀವು ನೋಡಬಹುದು. |
02:59 | ಇಲ್ಲಿ ಒಂದು 'Variables' ಎಂಬ ವಿಂಡೋ ಇದೆ. ಇದು ವೇರಿಯೇಬಲ್ ಗಳ ಒಂದು ಲಿಸ್ಟ್ ಅನ್ನು ಮತ್ತು ಅವುಗಳ ವ್ಯಾಲ್ಯೂಗಳನ್ನು ತೋರಿಸುತ್ತದೆ. |
03:07 | ಇಲ್ಲಿಯವರೆಗೆ, ವೇರಿಯೇಬಲ್ 'a' ಅನ್ನು ಮಾತ್ರ ಇನಿಶಿಯಲೈಸ್ ಮಾಡಲಾಗಿದೆ. |
03:11 | sampleDebug (ಸ್ಯಾಂಪಲ್ ಡೀಬಗ್) ಔಟ್ಪುಟ್ ನೊಂದಿಗೆ, Output ವಿಂಡೋಅನ್ನು ಸಹ ನಾವು ನೋಡಬಹುದು. |
03:17 | ಇಲ್ಲಿ ಇನ್ನೂ ಔಟ್ಪುಟ್ ಇಲ್ಲ. |
03:19 | ಇಲ್ಲಿ ಒಂದು Debugger Console ಸಹ ಇದೆ. ಇದು, ಪ್ರೊಗ್ರಾಂಗೆ ಲೈನ್ 29 ರಲ್ಲಿ ಒಂದು 'ಬ್ರೆಕ್ ಪಾಯಿಂಟ್' ಸಿಕ್ಕಿದ್ದರಿಂದ ಅದು ಅಲ್ಲಿಯೇ ನಿಂತುಬಿಟ್ಟಿದೆ ಎಂದು ಹೇಳುತ್ತದೆ. |
03:28 | ಇಲ್ಲಿ ಒಂದು Breakpoints ಎಂಬ ವಿಂಡೋ ಸಹ ಇದೆ. ಇದು, ಲೈನ್ 29 ರಲ್ಲಿ ಒಂದು 'ಬ್ರೆಕ್ ಪಾಯಿಂಟ್' ಅನ್ನು ಸೆಟ್ ಮಾಡಲಾಗಿದೆ ಎಂದು ಹೇಳುತ್ತದೆ. |
03:36 | ಈಗ, watch ಅನ್ನು ಸೇರಿಸುವುದು ಹೇಗೆ ಎಂಬುದನ್ನು ನಾವು ನೋಡೋಣ. |
03:40 | ಉದಾಹರಣೆಗೆ, ನನಗೆ ಇಂಟೀಜರ್ ವ್ಯಾಲ್ಯೂ 'aSample' ಅನ್ನು ವಾಚ್ ಮಾಡಬೇಕಾಗಿದೆ ಎಂದುಕೊಳ್ಳೋಣ. |
03:48 | ವರ್ಕ್-ಸ್ಪೇಸ್ ನ ಕೆಳಗಡೆ, 'Variables' ವಿಂಡೋದಲ್ಲಿ, Enter new Watch ಎಂಬ ಆಯ್ಕೆಯ ಮೇಲೆ ನಾನು ಡಬಲ್-ಕ್ಲಿಕ್ ಮಾಡುವೆನು. ಮತ್ತು, ವೇರಿಯೇಬಲ್ ನ ಹೆಸರನ್ನು "aSample.value" ಎಂದು ನಮೂದಿಸುವೆನು. |
04:02 | OK ಮೇಲೆ ಕ್ಲಿಕ್ ಮಾಡಿ. |
04:06 | ಇಲ್ಲಿಯವರೆಗೆ, 'aSample' ಅನ್ನು ಕ್ರಿಯೇಟ್ ಮಾಡಿಲ್ಲ. ಹೀಗಾಗಿ, ಇದು ವ್ಯಾಲ್ಯೂ ತನಗೆ ಗೊತ್ತಿಲ್ಲ ಎಂದು ಹೇಳುತ್ತಿದೆ. |
04:12 | ಒಮ್ಮೆ ಇದು ಲೈನ್ ಅನ್ನು ಎಕ್ಸೀಕ್ಯೂಟ್ ಮಾಡಿತೆಂದರೆ, ವೇರಿಯೇಬಲ್ ನಲ್ಲಿ ಏನಿದೆ ಎಂದು ನಮಗೆ ತಿಳಿಯುವುದು. |
04:16 | ಹೀಗೆಯೇ, ನೀವು ಎಕ್ಸ್ಪ್ರೆಶನ್ ಗಳನ್ನು ವಾಚ್ ಮಾಡಬಹುದು ಮತ್ತು ಮೌಲ್ಯವನ್ನು ಕಂಡುಹಿಡಿಯಬಹುದು. |
04:21 | ಇಲ್ಲಿ, ನಾನು b=a+10 ಗಾಗಿ ಇದನ್ನು ಪರೀಕ್ಷಿಸುತ್ತಿದ್ದೇನೆ. |
04:25 | ಒಂದುವೇಳೆ, ನನಗೆ 'a-4' ವ್ಯಾಲ್ಯೂ ಎಷ್ಟಿದೆ ಎಂದು ತಿಳಿದುಕೊಳ್ಳಬೇಕಾಗಿದ್ದರೆ? |
04:29 | ಅದಕ್ಕಾಗಿ, ನಾನು ಮೆನು ಬಾರ್ ನಲ್ಲಿಯ Debug ಎಂಬ ಮೆನುವಿಗೆ ಹೋಗಿ, Evaluate expression ಎಂಬ ಆಯ್ಕೆಯನ್ನು ಆರಿಸಿಕೊಳ್ಳುತ್ತೇನೆ. |
04:37 | ವರ್ಕ್-ಸ್ಪೇಸ್ ನಲ್ಲಿ, Evaluate Code ಎಂಬ ವಿಂಡೋ ಕಾಣಿಸಿಕೊಳ್ಳುತ್ತದೆ. |
04:41 | ಇಲ್ಲಿ, ನಾನು 'a-4' ಎಂಬ ಎಕ್ಸ್ಪ್ರೆಶನ್ ಅನ್ನು ನಮೂದಿಸುತ್ತೇನೆ. |
04:45 | ಇಲ್ಲಿ, Evaluate Expression ಬಟನ್ ಮೇಲೆ ಕ್ಲಿಕ್ ಮಾಡಿ. Variable ವಿಂಡೋದಲ್ಲಿ, a-4 ನ (a ಮೈನಸ್ 4) ವ್ಯಾಲ್ಯೂ 6 ಇದೆ ಎಂದು ಇದು ಹೇಳುತ್ತಿದೆ. |
04:56 | ಈಗ ನಾವು ಕೋಡ್ ನ ಒಂದು ಸಾಲನ್ನು ಎಕ್ಸೀಕ್ಯೂಟ್ ಮಾಡೋಣ. |
05:00 | ಇದನ್ನು ಮಾಡಲು, ಟೂಲ್ ಬಾರ್ ನಿಂದ Step-Over ಬಟನ್ ಅನ್ನು ಆರಿಸಿಕೊಳ್ಳಿ. |
05:06 | ಅದು “Hello World” ಅನ್ನು ಪ್ರಿಂಟ್ ಮಾಡಲು, ಕೋಡ್ ನ ಆ ಒಂದು ಸಾಲನ್ನು ಮಾತ್ರ ಎಕ್ಸೀಕ್ಯೂಟ್ ಮಾಡಬೇಕು. |
05:12 | ಔಟ್ಪುಟ್ ಅನ್ನು ನೋಡಲು, Output ವಿಂಡೋಗೆ ಹೋಗಿ ಮತ್ತು sampleDebug ಎಂಬ ಔಟ್ಪುಟ್ ವಿಂಡೋಅನ್ನು ಆರಿಸಿಕೊಳ್ಳಿ. |
05:17 | ಇದು "Hello World! 'a' is 10" ಎಂದು ಹೇಳುತ್ತಿದೆ. |
05:22 | ಈಗ SampleClass ಆಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡಲು, ಪ್ರೊಗ್ರಾಂ ಈ ಲೈನ್ ನಲ್ಲಿ ನಿಂತಿದೆ. |
05:28 | ಈಗ ನನಗೆ, SampleClass ನ ಕನ್ಸ್ಟ್ರಕ್ಟರ್ ನ (constructor) ಒಳಗೆ ಹೋಗಬೇಕಾಗಿದೆ. |
05:32 | ಇದನ್ನು ಮಾಡಲು, ಟೂಲ್ ಬಾರ್ ನಿಂದ ನಾನು Step Into ಆಯ್ಕೆಯನ್ನು ಆರಿಸಿಕೊಳ್ಳಬಹುದು. |
05:41 | ಆಗ ನಾನು Step Over ಅನ್ನು ಆಯ್ಕೆಮಾಡಬಹುದು ಮತ್ತು ' ಕನ್ಸ್ಟ್ರಕ್ಟರ್ ಕಾಲ್' ನ (constructor call) ನ ಒಳಗಡೆ ಬಂದ ವ್ಯಾಲ್ಯೂ ಈಗ 10 ಗೆ ಸೆಟ್ ಆಗಿದೆ ಎಂದು ನೋಡಬಹುದು. |
05:51 | ವೇರಿಯೇಬಲ್ ನ ಮೇಲೆ ಸುತ್ತಾಡಿ ಸಹ ನೀವು ಇದನ್ನು ನೋಡಬಹುದು. |
05:55 | ನಾನು ಮತ್ತೆ Step Over ಮಾಡಿದಾಗ, this.variable ಸಹ 10 ಗೆ ಸೆಟ್ ಆಗಿರುವುದನ್ನು ನಾವು ನೋಡಬಹುದು. |
06:03 | ಈ ಫಂಕ್ಷನ್ ನಿಂದ ಹೊರಬರಲು, ನಾನು Continue, Step Over ಅಥವಾ Step Out ಅನ್ನು ಆರಿಸಿಕೊಳ್ಳಬಹುದು. |
06:11 | ಈ ಮೆಥಡ್ ನಿಂದ ಹೊರಬರಲು, ನಾನು Step-Out ಅನ್ನು ಆರಿಸಿಕೊಳ್ಳುತ್ತೇನೆ. |
06:14 | ಮತ್ತು, ಈಗ ನಾನು ಫಂಕ್ಷನ್ ಕಾಲ್ ಮಾಡಿರುವಲ್ಲಿಗೇ ಮರಳಿದ್ದೇನೆ. |
06:19 | ನಾನು ಮತ್ತೆ Step-Over ಎಂದು ಹೇಳಿದಾಗ, aSample.value ಈಗ 10 ಗೆ ಸೆಟ್ ಆಗಿರುವುದನ್ನು ನೀವು ನೋಡುವಿರಿ. |
06:27 | ನಮಗೆ ಇದನ್ನೇ ವಾಚ್ ಮಾಡಬೇಕಾಗಿತ್ತು. |
06:30 | Breakpoint ಗಳು ಮತ್ತು Step Over ಗಳನ್ನು ಹೊರತುಪಡಿಸಿ, ಪ್ರೊಗ್ರಾಂ ನ ಎಕ್ಸೀಕ್ಯೂಶನ್ ಅನ್ನು ಕರ್ಸರ್ ಇರುವ ಲೈನ್ ನಲ್ಲಿ ಸಹ ನೀವು ನಿಲ್ಲಿಸಬಹುದು. |
06:38 | ಉದಾಹರಣೆಗೆ, ಇಲ್ಲಿ ನಾನು ಫಂಕ್ಷನ್ ನ ಒಳಗೆ ಹೋಗುತ್ತೇನೆ. ಮತ್ತು d=b-5; ಎಂದು ಹೇಳುವ ಈ ಲೈನ್ ನ ಮೇಲೆ ಇರುವಂತೆ ಕರ್ಸರ್ ಅನ್ನು ಸೆಟ್ ಮಾಡುತ್ತೇನೆ. |
06:49 | ಈಗ ಟೂಲ್ ಬಾರ್ ನಿಂದ, Run To Cursor ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
06:54 | ಪ್ರೊಗ್ರಾಂನ ಎಕ್ಸೀಕ್ಯೂಶನ್, ಫಂಕ್ಷನ್ ನ ಒಳಗೆ ಹೋಗುತ್ತದೆ ಮತ್ತು ಅದು ಕರ್ಸರ್ ಇರುವ ಲೈನ್ ನಲ್ಲಿ ನಿಲ್ಲುವುದನ್ನು ನೀವು ನೋಡುವಿರಿ. |
07:05 | ಇದು 'b' ಯ ವ್ಯಾಲ್ಯೂಅನ್ನು 20 ಎಂದು ಕಂಡುಹಿಡಿದಿರುವುದನ್ನು ನೀವು ನೋಡಬಹುದು. |
07:10 | ಮತ್ತು, Variable ವಿಂಡೋದಲ್ಲಿ, ಅದು 'b' ಯನ್ನು 20 ಗೆ ಸೆಟ್ ಮಾಡಿದೆ. |
07:14 | ಈಗ, ನಾನು ಮತ್ತೊಮ್ಮೆ Step Over ಅನ್ನು ಆಯ್ಕೆಮಾಡಬಹುದು ಮತ್ತು 'd' ಯ ವ್ಯಾಲ್ಯೂ ಸಹ ಇನಿಶಿಯಲೈಸ್ ಆಗಿ 15 ಆಗುವುದು. |
07:23 | ಈಗ ನಾನು ಹಿಂದಿರುಗಬಹುದು ಅಥವಾ ಪ್ರೊಗ್ರಾಂನ ಎಕ್ಸೀಕ್ಯೂಶನ್ ಅನ್ನು ಪೂರ್ಣಗೊಳಿಸಬಹುದು. |
07:29 | ನಾನು Step Out ಅನ್ನು ಆಯ್ದುಕೊಳ್ಳುತ್ತೇನೆ ಮತ್ತು ಫಂಕ್ಷನ್-ಕಾಲ್ ಗೆ ಹಿಂದಿರುಗುತ್ತೇನೆ. |
07:36 | ನೀವು getC() ಫಂಕ್ಷನ್ ನ ಮೇಲೆ ಸುತ್ತಾಡಿದಾಗ, ಈ ಫಂಕ್ಷನ್, ವ್ಯಾಲ್ಯೂಅನ್ನು 15 ಎಂದು ಹಿಂದಿರುಗಿಸಿರುವುದನ್ನು ನೋಡುವಿರಿ. |
07:43 | ವೇರಿಯೇಬಲ್ 'c' ಗೆ, ಆ ವ್ಯಾಲ್ಯೂ 15 ಅನ್ನು ಇನ್ನೂ ಅಸೈನ್ ಮಾಡಿಲ್ಲ. |
07:47 | ಹೀಗಾಗಿ, ನಾವು Step Over ಮಾಡಿ, ಆ ಸಾಲನ್ನು ಎಕ್ಸೀಕ್ಯೂಟ್ ಮಾಡಿದಾಗ, 'c', ವ್ಯಾಲ್ಯೂ 15 ಅನ್ನು ಪಡೆಯುವುದು. |
07:55 | ಈಗ Variable ವಿಂಡೋದಲ್ಲಿ, ಇದನ್ನು ನಾವು ಪರೀಕ್ಷಿಸಬಹುದು. ಅಥವಾ, ಇದರ ವ್ಯಾಲ್ಯೂ ಅನ್ನು ನೋಡಲು, ವೇರಿಯೇಬಲ್ ನ ಮೇಲೆ ಸುತ್ತಾಡಬಹುದು. |
08:03 | ಈಗ, ನಿಮಗೆ ಡೀಬಗ್ಗಿಂಗ್ ಸೆಶನ್ ಅನ್ನು ನಿಲ್ಲಿಸಬೇಕಾಗಿದ್ದರೆ, ನೀವು ಟೂಲ್ ಬಾರ್ ನಿಂದ Finish Debugger Session ಆಯ್ಕೆಯನ್ನು ಆರಿಸಿಕೊಳ್ಳಬಹುದು. |
08:12 | ಒಂದುವೇಳೆ ನಿಮಗೆ ಮುಂದಿನ 'ಬ್ರೆಕ್ ಪಾಯಿಂಟ್' ವರೆಗೆ ಎಕ್ಸೀಕ್ಯೂಶನ್ ಅನ್ನು ಮುಂದುವರೆಸಬೇಕಿದ್ದರೆ, ನೀವು Continue ಎಂಬ ಆಯ್ಕೆಯನ್ನು ಆರಿಸಿಕೊಳ್ಳಬಹುದು. |
08:19 | ನೀವು ಮುಗಿಸಿದ ನಂತರ, ಉಳಿದ ಪ್ರೊಗ್ರಾಂನ ಎಕ್ಸೀಕ್ಯೂಶನ್ ಅನ್ನು ಮುಂದುವರೆಸಲು, ನೀವು Continue ಆಯ್ಕೆಯನ್ನು ಆರಿಸಿಕೊಳ್ಳಬಹುದು. |
08:25 | ಇಲ್ಲಿ ನಾನು Continue ಅನ್ನು ಆರಿಸಿಕೊಳ್ಳುತ್ತೇನೆ. |
08:27 | Output ವಿಂಡೋದಲ್ಲಿ, ಇದು ನನಗೆ ಔಟ್ಪುಟ್ ಅನ್ನು ಹೀಗೆ ತೋರಿಸುತ್ತದೆ: 'b' is 20 and 'c' is 15 . |
08:34 | ಇದು netbeans ದಲ್ಲಿಯ ಡೀಬಗ್ ಮಾಡುವ ಆಯ್ಕೆಗಳ ಬಗ್ಗೆ ಇರುವ ಒಂದು ಅವಲೋಕನ ಆಗಿತ್ತು. |
08:39 | ನಿಮಗೆ ಇನ್ನೂ ಸುಧಾರಿತ ವೈಶಿಷ್ಟ್ಯಗಳ ಸೆಟ್ಟಿಂಗ್ ಗಳು ಬೇಕಾಗಿದ್ದರೆ, |
08:42 | ನೀವು Tools ಮೆನ್ಯು ಗೆ ಹೋಗಿ, Options ನ ಮೇಲೆ ಕ್ಲಿಕ್ ಮಾಡಬಹುದು. Miscellaneous ಎಂಬ ಆಯ್ಕೆಗೆ ಹೋಗಿ, Java Debugger ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
08:53 | ಇಲ್ಲಿ, ಮಲ್ಟಿ-ಥ್ರೆಡೆಡ್ ಪ್ರೊಗ್ರಾಂ ಬ್ರೆಕ್-ಪಾಯಿಂಟ್ ಆಯ್ಕೆಗಳಿಗಾಗಿ ನೀವು ಸೆಟ್ಟಿಂಗ್ ಗಳನ್ನು ಬದಲಾಯಿಸಬಹುದು. |
08:59 | ಅಥವಾ, ನಿಮಗೆ ಸ್ಟೆಪ್-ಇನ್ ಮಾಡಬೇಕಾಗಿರುವ ಮೆಥಡ್ ಗಳನ್ನು ನಿರ್ಧರಿಸಲು, ಫಿಲ್ಟರ್ ಗಳನ್ನು (filters) ಪಡೆಯಬಹುದು. |
09:07 | ಈಗ ಒಂದು ಅಸೈನ್ಮೆಂಟ್.. |
09:09 | ಅಸೈನ್ಮೆಂಟ್ ಗಾಗಿ, ನಿಮ್ಮಲ್ಲಿರುವ ಯಾವುದೇ ಒಂದು ಪ್ರೊಗ್ರಾಂ ಅನ್ನು ತೆಗೆದುಕೊಳ್ಳಿ. ಇದರಲ್ಲಿ ಈಗಾಗಲೇ ಎರರ್ ಗಳಿದ್ದರೆ ಇನ್ನೂ ಉತ್ತಮ. |
09:16 | ಇಲ್ಲದಿದ್ದರೆ, ಲಾಜಿಕ್ ಅಥವಾ ಅಲ್ಗೊರಿದಮ್ ನಲ್ಲಿ ಸ್ವಲ್ಪ ಎರರ್ ಅನ್ನು ಸೇರಿಸಿ. |
09:20 | ಕೋಡ್ ನಲ್ಲಿ 'ಬ್ರೆಕ್ ಪಾಯಿಂಟ್' ಗಳನ್ನು ಸೆಟ್ ಮಾಡಿ. ಸಾಮಾನ್ಯವಾಗಿ, ಫಂಕ್ಷನ್ ಅನ್ನು ಕಾಲ್ ಮಾಡುವಲ್ಲಿ ಎರರ್ ಇರಬಹುದು ಎಂದು ಊಹಿಸಿ ನೀವು ಬ್ರೆಕ್ ಅನ್ನು ಸೆಟ್ ಮಾಡಿರಬಹುದು. |
09:29 | ಫಂಕ್ಷನ್ ನ ಒಳಗೆ ಹೋಗಲು Step Into ಬಳಸಿ. |
09:32 | ಸಾಲುಗಳನ್ನು ಎಕ್ಸೀಕ್ಯೂಟ್ ಮಾಡಲು Step Over ಗಳನ್ನು ಬಳಸಿ. ಮತ್ತು Variable ವಿಂಡೋದಲ್ಲಿ, ವೇರಿಯೇಬಲ್ ನ ವ್ಯಾಲ್ಯೂಗಳನ್ನು ಗಮನಿಸುತ್ತಿರಿ. |
09:41 | ಎರರ್ ಅನ್ನು ಗುರುತಿಸಲು ಮತ್ತು ಸರಿಪಡಿಸಲು ನಿಮಗೆ ಸಹಾಯವಾಗುವಂತೆ, ಕೆಲವು ವಾಚ್ ಗಳನ್ನು ಸೇರಿಸಿ. |
09:45 | ಮೆಥಡ್ ನಿಂದ Step Out ಮಾಡಿ. |
09:48 | ನೀವು ಮುಂದಿನ 'ಬ್ರೆಕ್-ಪಾಯಿಂಟ್' ಅನ್ನು ತಲುಪುವವರೆಗೆ ಮುಂದುವರೆಸಿ. |
09:51 | ಕೊನೆಯದಾಗಿ, debugger ಸೆಶನ್ ಅನ್ನು ಮುಗಿಸಿ ಮತ್ತು ನಿಮ್ಮ ಅಪ್ಲಿಕೇಶನ್ ಅನ್ನು ರನ್ ಮಾಡಿ. |
09:57 | ಈ ಟ್ಯುಟೋರಿಯಲ್ ನಲ್ಲಿ, ನಾವು Netbeans Debugger ಬಗ್ಗೆ ತಿಳಿದುಕೊಂಡಿದ್ದೇವೆ. |
10:02 | 'ಬ್ರೆಕ್-ಪಾಯಿಂಟ್' ಗಳನ್ನು ಮತ್ತು ವಾಚ್ ಗಳನ್ನು ಹೇಗೆ ಸೆಟ್ ಮಾಡುವುದೆಂದು ನೋಡಿದ್ದೇವೆ. |
10:06 | ಕೋಡ್ ರನ್ ಆಗುತ್ತಿರುವಾಗ, ವ್ಯಾಲ್ಯೂಅನ್ನು ಕಂಡುಹಿಡಿಯಬೇಕಾಗಿರುವ ಎಕ್ಸ್ಪ್ರೆಶನ್ ಗಳನ್ನು (expressions) ಸೇರಿಸುವುದು, |
10:11 | Step-Into, Step-Over, Step-Out ಮತ್ತು Run-to-Cursor ಆಯ್ಕೆಗಳೊಂದಿಗೆ ಪ್ರೊಗ್ರಾಂನ ಎಕ್ಸೀಕ್ಯೂಶನ್ ನ ಗತಿಯನ್ನು ಕಂಡುಹಿಡಿಯಲು, |
10:19 | ಅಲ್ಲದೆ, ಮುಂದುವರಿದ ಡೀಬಗ್ಗಿಂಗ್ ಗಾಗಿ, ಡೀಬಗ್ಗರ್ ಅನ್ನು ಹೇಗೆ ಕಾನ್ಫಿಗರ್ ಮಾಡುವುದು ಎಂಬುದನ್ನು ನೋಡಿದೆವು. |
10:24 | ಈ ಟ್ಯುಟೋರಿಯಲ್, ಡಿಬಗ್ ಮಾಡುವ ಅಥವಾ ಪರೀಕ್ಷೆ ಮಾಡುವ ಕೆಲಸದಲ್ಲಿ ನಿಮ್ಮ ಸಮಯವನ್ನು ಉಳಿಸುತ್ತದೆ ಎಂದು ಆಶಿಸುತ್ತೇನೆ. |
10:30 | ಸ್ಕ್ರೀನ್ ಮೇಲೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ. |
10:33 | ಇದು Spoken Tutorial ಪ್ರೊಜೆಕ್ಟ್ ನ ಸಾರಾಂಶವಾಗಿದೆ. |
10:36 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ವೀಡಿಯೋ ಅನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:41 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
10:46 | ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. |
10:49 | ಹೆಚ್ಚಿನ ಮಾಹಿತಿಗಾಗಿ,
contact@spoken-tutorial.org ಅನ್ನು ಸಂರ್ಪಕಿಸಿ. |
10:55 | 'Spoken Tutorial' ಪ್ರಕಲ್ಪವು, 'Talk to a Teacher' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. |
10:59 | ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
11:05 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
spoken-tutorial.org/NMEICT-Intro. |
11:14 | ಈ ಟ್ಯುಟೋರಿಯಲ್, 'IT for Change' ಅವರ ಕೊಡುಗೆಯಾಗಿದೆ. |
11:18 | ಧನ್ಯವಾದಗಳು. |