Avogadro/C2/Edit-molecules/Kannada
From Script | Spoken-Tutorial
Revision as of 19:23, 4 July 2018 by Anjana310312 (Talk | contribs)
Time | Narration |
00:01 | ಎಲ್ಲರಿಗೂ Edit molecules ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು- ಅಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು, |
00:14 | ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು, |
00:16 | ಬಾಂಡ್ ಗಳನ್ನು ರೋಟೇಟ್ ಮಾಡುವುದು(ತಿರುಗಿಸುವುದು) , |
00:18 | ಬಾಂಡ್ ನ ಉದ್ದವನ್ನು ಬದಲಿಸುವುದು, |
00:20 | ಜಲಜನಕವನ್ನು ಮೀಥೈಲ್ ಗುಂಪಾಗಿ ಬದಲಿಸುವುದು , |
00:23 | ರಚನೆ ಗಳನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಸೇರಿಸುವುದು- ಇವುಗಳ ಕುರಿತು ಕಲಿಯುವೆವು. |
00:27 |
ಇಲ್ಲಿ ನಾನು Ubuntu Linux OS 14.04 ಆವೃತ್ತಿ, Avogadro 1.1.1 ಆವೃತ್ತಿ - ಇವುಗಳನ್ನು ಬಳಸುತ್ತಿದ್ದೇನೆ. |
00:37 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು Avogadro ಇಂಟರ್ಫೇಸ್ ಅನ್ನು ತಿಳಿದಿರಬೇಕು. |
00:43 | ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ. |
00:49 | ಇಲ್ಲಿ ನಾನು 'ಟರ್ಮಿನಲ್' ಅನ್ನು ಬಳಸಿ Avogadro ವನ್ನು ಓಪನ್ ಮಾಡುವುದು ಹೇಗೆ ಎಂದು ತೋರಿಸುವೆನು. |
00:55 | ಟರ್ಮಿನಲ್ ಅನ್ನು ಓಪನ್ ಮಾಡಲು, CTRL, ALT ಮತ್ತು T ಕೀ ಗಳನ್ನು ಒಟ್ಟಿಗೆ ಒತ್ತಿ. |
01:03 | ಪ್ರಾಂಪ್ಟ್ ನಲ್ಲಿ avogadro ಎಂದು ಟೈಪ್ ಮಾಡಿ , ಎಂಟರ್ ಅನ್ನು ಒತ್ತಿ. |
01:08 | Avogadro ಅಪ್ಲಿಕೇಷನ್ ವಿಂಡೋ ಓಪನ್ ಆಗುತ್ತದೆ. |
01:12 | ವಿವರಣೆಗಾಗಿ ನಾನು , Fragment ಲೈಬ್ರರಿಯಿಂದ n-butane ನ ಅಣುವನ್ನು ಡಿಸ್ಪ್ಲೇ ಮಾಡುವೆನು. |
01:19 | Build ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. Insert->Fragment ಗೆ ಹೋಗಿ. |
01:25 | Insert fragment ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
01:29 | ಫ್ರ್ಯಾಗ್ಮೆಂಟ್ ಗಳ ಪಟ್ಟಿಯಲ್ಲಿ alkanes ಫೋಲ್ಡರ್ ಅನ್ನು ಓಪನ್ ಮಾಡಲು ಅದನ್ನು ಡಬಲ್ ಕ್ಲಿಕ್ ಮಾಡಿ. |
01:35 | ಕಾಣಿಸುವ ಡ್ರಾಪ್ ಡೌನ್ ಲಿಸ್ಟ್ ನಲ್ಲಿ butane.cml ಅನ್ನು ಆಯ್ಕೆ ಮಾಡಿ. |
01:41 | Insert ಬಟನ್ ಅನ್ನು ಕ್ಲಿಕ್ ಮಾಡಿ. Insert Fragment ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, X(ಕ್ಲೋಸ್) ಅನ್ನು ಕ್ಲಿಕ್ ಮಾಡಿ. |
01:49 | ನೀಲಿ ಬಣ್ಣದಲ್ಲಿ ಹೈಲೈಟ್ ಆದ Butane ಅಣು ಪ್ಯಾನಲ್ ನ ಮೇಲೆ ಕಾಣಿಸುತ್ತದೆ. |
01:54 | ಹೈಲೈಟ್ ಅನ್ನು ತೆಗೆಯಲು, Ctrl, Shift ಮತ್ತು A ಕೀಗಳನ್ನು ಒಟ್ಟಿಗೆ ಒತ್ತಿ. |
02:02 | ಸರಿಯಾಗಿ ಅಲೈನ್ ಮಾಡಲು Navigation ಟೂಲ್ ಅನ್ನು ಬಳಸಿ ರಚನೆಯನ್ನು ತಿರುಗಿಸಿ. |
02:09 | ಈಗ ಅಣುವಿಗೆ ಅಣುಗಳನ್ನು ಸೇರಿಸುವುದು ಹೇಗೆ ಎಂದು ಕಲಿಯುವೆವು. |
02:14 | ಟೂಲ್ ಬಾರ್ ನಲ್ಲಿರುವ Draw tool ಐಕಾನ್ ಅನ್ನು ಕ್ಲಿಕ್ ಮಾಡಿ. |
02:18 | ಕೊನೆಯ Carbon ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ಯಾನಲ್ ನ ಮೇಲೆ ಡ್ರ್ಯಾಗ್ ಮಾಡಿ. |
02:23 | ಅವಶ್ಯವಿರುವಷ್ಟು ಜಲಜನಕ ಅಣುಗಳ ಜತೆಗೆ ಒಂದು ಕಾರ್ಬನ್ ಅಣು ಸೇರ್ಪಡೆಯಾಗುತ್ತದೆ. |
02:27 | ಈಗ ನಾವು ಪ್ಯಾನಲ್ ನಲ್ಲಿ pentane(ಪೆಂಟೇನ್) ನ ಅಣುವನ್ನು ಹೊಂದಿದ್ದೇವೆ. |
02:32 | ಹಾಗೆಯೇ, ನೀವು ಆಲ್ಕೇನ್ ಗಳ ಸರಣಿಯನ್ನು ತಯಾರಿಸಲು, Draw tool ಅನ್ನು ಬಳಸಿ, ಅಣುಗಳನ್ನು ಸೇರಿಸಿಬಹುದು. |
02:39 | ಒಂದು ಹೊಸ ವಿಂದೋವನ್ನು ಓಪನ್ ಮಾಡಿ. Draw tool ಅನ್ನು ಬಳಸಿ ಪ್ರೊಪೇನ್ ಅನ್ನು ಬರೆಯಿರಿ. |
02:45 | ಈಗ Ethane ಅಣು ಅನ್ನು ಪಡೆಯಲು, ಜಲಜನಕದ ಜತೆ ಕೊನೆಯ ಕಾರ್ಬನ್ ಅಣುವನ್ನು ಡಿಲೀಟ್ ಮಾಡೋಣ. |
02:52 | ಅಣುಗಳನ್ನು ಡಿಲೀಟ್ ಮಾಡಲು, ಟೂಲ್ ಬಾರ್ ನಲ್ಲಿರುವ Selection tool ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
02:57 | ಆಯ್ಕೆ ಮಾಡಿಕೊಳ್ಳಲು, ಕೊನೆಯ ಕಾರ್ಬನ್ ಅಣುವಿನ ಮೇಲೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ. |
03:02 | ಆಯ್ಕೆ ಮಾಡಿದ ಅಣುಗಳು ನೀಲಿ ಬಣ್ಣದಲ್ಲಿ ಕಾಣುತ್ತದೆ. |
03:06 | ಡಿಲೀಟ್ ಮಾಡಲು Backspace ಅನ್ನು ಒತ್ತಿ, ಅಥವಾ Edit ಮೆನ್ಯುವಿನಲ್ಲಿ clear ಆಯ್ಕೆಯನ್ನು ಸಹ ಆರಿಸಿಕೊಳ್ಳಬಹುದು. |
03:14 | ರಿಡೂ ಮಾಡಲು, Ctrl ಮತ್ತು Z ಕೀ ಗಳನ್ನು ಒಟ್ಟಿಗೆ ಒತ್ತಿ. |
03:20 | ಈಗ ನಾವು ಅಣುವಿನಲ್ಲಿ ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು ಹೇಗೆಂದು ನೋಡುವೆವು. |
03:26 | ಬಾಂಡ್ ಗಳನ್ನು ಸೇರಿಸಲು, ಟೂಲ್ ಬಾರ್ ನಲ್ಲಿರುವ Draw tool ಐಕಾನ್ ಅನ್ನು ಆಯ್ಕೆ ಮಾಡಿ. |
03:31 | ಎಡ ಭಾಗದಲ್ಲಿ Draw Settings ಮೆನ್ಯು ಓಪನ್ ಆಗುತ್ತದೆ. |
03:35 | Element ಡ್ರಾಪ್ ಡೌನ್ ಮೆನ್ಯುವಿನಲ್ಲಿ ಡಿಫಾಲ್ಟ್ ಆಗಿ Carbon ಆಯ್ಕೆಯಾಗಿರುತ್ತದೆ. |
03:40 | ಡಬಲ್ ಬಾಂಡ್ ಅನ್ನು ಪರಿಚಯಿಸಲು, Bond Order ಡ್ರಾಪ್ ಡೌನ್ ಮೆನ್ಯುವಿನಲ್ಲಿ, Double ಅನ್ನು ಆಯ್ಕೆ ಮಾಡಿ. |
03:46 | ಡಬಲ್ ಬಾಂಡ್ ಆಗಿ ಪರಿವರ್ತಿಸಲು, C-1 ಮತ್ತು C-2 ಗಳ ನಡುವಿನ ಬಾಂಡ್ ಅನ್ನು ಕ್ಲಿಕ್ ಮಾಡಿ. |
03:52 | ಡಬಲ್ ಬಾಂಡ್ ಅನ್ನು ಟ್ರಿಪಲ್ ಬಾಂಡ್ ಆಗಿ ಪರಿವರ್ತಿಸಲು, Bond Order ನಿಂದ Triple ಅನ್ನು ಆಯ್ಕೆ ಮಾಡಿಕೊಳ್ಳಿ. ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
03:59 | ಬಾಂಡ್ ಗಳನ್ನು ಡಿಲೀಟ್ ಮಾಡಲು, ಮೌಸ್ ನ ಬಲ ಬಟನ್ ಅನ್ನು ಹಿಡಿದು ಬಾಂಡ್ ಗಳ ಮೇಲೆ ಕ್ಲಿಕ್ ಮಾಡಿ. |
04:04 | ಇದರಿಂದ ಎರಡು ಬೇರೆ ಬೇರೆ ಅಣುಗಳು ಆಗುತ್ತವೆ. |
04:08 | ಈಗ ಈ ಅಣುಗಳನ್ನು ಪುನರ್ಜೋಡಿಸೋಣ. |
04:11 | ಒಂದು ಅಣುವಿನ ಕಾರ್ಬನ್ ನ ಮೇಲೆ ಕ್ಲಿಕ್ ಮಾಡಿಕೊಂಡು, ಇನ್ನೊಂದು ಅಣುವಿನ ಕಾರ್ಬನ್ ನ ಮೇಲೆ ಡ್ರ್ಯಾಗ್ ಮಾಡಿ, ಕ್ಲಿಕ್ ಮಾಡಿ. |
04:18 | ನಾವು Bond Centric Manipulation (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಬಳಸಿ, ಬಾಂಡ್ ಗಳನ್ನು ತಿರುಗಿಸಬಹುದು ಅಥವಾ ಬಾಂಡ್ ನ ಉದ್ದವನ್ನು ಬದಲಿಸಬಹುದು. |
04:24 | ಟೂಲ್ ಬಾರ್ ನಲ್ಲಿ Bond Centric Manipulation tool ನ ಮೇಲೆ ಕ್ಲಿಕ್ ಮಾಡಿ. |
04:29 | ಎಡಭಾಗದಲ್ಲಿ, Bond Centric Manipulate ಸೆಟ್ಟಿಂಗ್ ಗಳ ಮೆನ್ಯು ತೆರೆದುಕೊಳ್ಳುತ್ತದೆ. |
04:34 | ಡಿಫಾಲ್ಟ್ ಆಗಿ, Show Angles ಮತ್ತು Snap-to Bonds ಆಯ್ಕೆಗಳು ಚೆಕ್ ಆಗಿರುತ್ತವೆ. |
04:39 | Snap-to Threshold 10ಡಿಗ್ರಿ ಎಂದು ಸೆಟ್ ಆಗಿದೆ. |
04:43 | ಬಳಕೆದಾರರು, ಅವರ ಅವಶ್ಯಕತೆಗೆ ತಕ್ಕಂತೆ ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬಹುದು. |
04:49 | ಕೋನಗಳನ್ನು ತೋರಿಸಲು, ಎರಡು ಅಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
04:55 | ನಾವು ಬಾಂಡ್ ಗಳ ಪರಿಭ್ರಮಣ(ರೊಟೇಷನ್) ದ ಸಮತಲವನ್ನು (ಪ್ಲೇನ್) ಹೊಂದಿಸಬೇಕು. |
04:59 | ಸಮತಲವನ್ನು ಹೊಂದಿಸಲು, ಬಾಂಡ್ ನ ಮೇಲೆ ಕ್ಲಿಕ್ ಮಾಡಿಕೊಂಡು, ಮೇಲೆ ಕೆಳಗೆ ಚಲಿಸಿ. |
05:05 | ಅಣುಗಳ ನಡುವಿನ ಸಮತಲ ನೀಲಿ ಅಥವಾ ಹಳದಿ ಬಣ್ಣದಲ್ಲಿ ಕಾಣಿಸುತ್ತದೆ. |
05:11 | ತಿರುಗಿಸಲು, ಅಣುಗಳಲ್ಲಿ ಒಂದನ್ನು ಕ್ಲಿಕ್ ಮಾಡಿ, ಚಲಿಸಿ. |
05:16 | ಅಣುಗಳೊಂದಿಗೆ ಹೊಂದಿಕೊಂಡ ಬಾಂಡ್ ಅಣುಗಳ ಸಮೇತ ನಿಗದಿತ ಸಮತಲದಲ್ಲಿ ಪರಿಭ್ರಮಣೆ (ರೋಟೇಟ್) ಆಗುತ್ತದೆ. |
05:21 | ಬಾಂಡ್ ನ ಉದ್ದವನ್ನು ಬದಲಿಸಲು, ಮೌಸ್ ನ ಬಲ ಬಟನ್ ಅನ್ನು ಹಿಡಿದುಕೊಂಡು ಡ್ರ್ಯಾಗ್ ಮಾಡಿ. |
05:27 | ಈಗ ನಾವು ಹೈಡ್ರೋಜನ್ ಗಳನ್ನು ಮೀಥೈಲ್ ಗುಂಪುಗಳಾಗಿ ಪರಿವರ್ತಿಸುವುದು ಹೇಗೆ ಎಂದು ತೋರಿಸುವೆವು. |
05:32 | Build ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು Change H To Methyl ಅನ್ನು ಕ್ಲಿಕ್ ಮಾಡಿ. |
05:38 | ಎಲ್ಲಾHydrogen ಗಳು ಈಗ Methyl ಗುಂಪುಗಾಳಾಗಿ ಪರಿವರ್ತನೆಗೊಂಡಿವೆ. |
05:43 | ಬದಲಾವಣೆಗಳನ್ನು ರದ್ದುಗೊಳಿಸಲು, CTRL ಮತ್ತು Z ಕೀಲಿಗಳನ್ನು ಒಟ್ಟಿಗೆ ಒತ್ತಿ. |
05:49 | ನಾವು ನಿರ್ದಿಷ್ಟವಾದ hydrogen ಅಣುವನ್ನು ಆಯ್ಕೆ ಮಾಡಿಕೊಂಡು ಅದನ್ನು methyl ಗುಂಪಾಗಿ ಪರಿವರ್ತಿಸಬಹುದು. |
05:55 | ಟೂಲ್ ಬಾರ್ ನಲ್ಲಿರುವ Selection tool ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
05:59 | ಆಯ್ಕೆಮಾಡಿಕೊಳ್ಳಲು ಕೊನೆಯ ಕಾರ್ಬನ್ ಅಣುವಿಗೆ ಹೊಂದಿಕೊಂಡಿರುವ hydrogen ಅನ್ನು ಕ್ಲಿಕ್ ಮಾಡಿ. |
06:04 | Build ಮೆನ್ಯುವಿಗೆ ಹೋಗಿ , Change H to Methyl ನ ಮೇಲೆ ಕ್ಲಿಕ್ ಮಾಡಿ. |
06:10 | ಆಯ್ಕೆ ಮಾಡಿಕೊಂಡ Hydrogen , methyl ಗುಂಪಾಗಿ ಬದಲಿಸ್ಪಡುತ್ತದೆ. |
06:15 | ಡಿಸೆಲೆಕ್ಟ್ ಮಾಡಲು, Ctrl, Shift ಮತ್ತು A ಕೀಲಿಗಳನ್ನು ಒಟ್ಟಿಗೆ ಒತ್ತಿ. |
06:22 | ಈಗ ರಚನೆ ಗಳನ್ನು ಕಾಪಿ, ಪೇಸ್ಟ್ ಮತ್ತು ಜಾಯಿನ್(ಕೂಡಿಸುವುದು)ಮಾಡುವುದು ಹೇಗೆ ಎಂದು ನೋಡೋಣ. |
06:28 | ಹೊಸ ವಿಂಡೋವನ್ನು ಓಪನ್ ಮಾಡಲು, File-> New ಅನ್ನು ಕ್ಲಿಕ್ ಮಾಡಿ. |
06:33 | ನಾವು Maltose(ಮಾಲ್ಟೋಸ್) ಅಣುವನ್ನು ರಚಿಸುವುದನ್ನು ಕಲಿಯುವೆವು. |
06:37 | Maltose ಇದು ಎರಡು glucose (ಗ್ಲುಕೋಸ್) ಅಣುಗಳಿಂದ ಮಾಡಲ್ಪಟ್ಟಿದೆ. |
06:41 | glucose ಅಣುವನ್ನು ಸೇರಿಸಲು, Build ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. |
06:46 | ಕೆಳಕ್ಕೆ ಸ್ಕ್ರೋಲ್ ಮಾಡಿ, Insert -> Fragment ಅನ್ನು ಕ್ಲಿಕ್ ಮಾಡಿ. |
06:51 | Insert -> Fragment ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
06:55 | ಈ ಪಟ್ಟಿಯ ಕೆಳಕ್ಕೆ ಸ್ಕ್ರೋಲ್ ಮಾಡಿ, Cyclic sugar (ಸೈಕ್ಲಿಕ್ ಶುಗರ್) ಫೋಲ್ಡರ್ ಅನ್ನು ಕ್ಲಿಕ್ ಮಾಡಿ. |
07:01 | ಒಂದು ಸಬ್-ಮೆನ್ಯು ಕಾಣಿಸುತ್ತದೆ. |
07:04 | ಕೆಳಕ್ಕೆ ಹೋಗಿ beta-d-glucopyranose.cml.(ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ಅನ್ನು ಆಯ್ಕೆ ಮಾಡಿ. |
07:10 | Insert ಬಟನ್ ನ ಮೇಲೆ ಕ್ಲಿಕ್ ಮಾಡಿ. ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
07:16 | ಪ್ಯಾನಲ್ ನಲ್ಲಿ beta-D-glucopyranose.cml (ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ನೀಲಿ ಬಣ್ಣದಲ್ಲಿ ಕಾಣಿಸುತ್ತದೆ. |
07:24 | hand ಟೂಲ್ ಅನ್ನು ಬಳಸಿ ಇದನ್ನು ಮಧ್ಯಕ್ಕೆ ತನ್ನಿ. |
07:28 | ಈಗ ಇನ್ನೊಂದು glucose ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡೋಣ. |
07:33 | ಮೆನ್ಯು ಬಾರ್ ನಲ್ಲಿರುವ Edit ಮೆನ್ಯುವನ್ನು ಕ್ಲಿಕ್ ಮಾಡಿ. |
07:36 | Copy ಯ ಮೇಲೆ ಕ್ಲಿಕ್ ಮಾಡಿ. ಮತ್ತೆ ಎಡಿಟ್ ಮೆನ್ಯುವಿನ ಕೆಳಗೆ ಸ್ಕ್ರೋಲ್ ಮಾಡಿ, Paste ಅನ್ನು ಕ್ಲಿಕ್ ಮಾಡಿ. |
07:44 | ಗಮನಿಸಿ: ಕಾಪಿ ಪೇಸ್ಟ್ ಮಾಡುವಾಗ ವಿಂಡೋ ಒಂದು ಕ್ಷಣ ಮಬ್ಬಾಗಿ(ಡಿಮ್) ನಂತರ ಸರಿಹೋಗುತ್ತದೆ. |
07:51 | ಪ್ಯಾನಲ್ ನಲ್ಲಿ, ಮೊದಲಿರುವ ಅಣುವಿನ ಮೇಲೆ ಹೊಸ ಅಣು ಕಾಪಿ ಆಗಿ ಪೇಸ್ಟ್ ಆಗುತ್ತದೆ. |
07:58 | ಕರ್ಸರ್ ಹ್ಯಾಂಡ್ ಟೂಲ್ ಆಗಿ ಬದಲಾಗುತ್ತದೆ. |
08:01 | ಮೊದಲ ಅಣುವಿನಿಂದ ಕಾಪಿ ಮಾಡಿದ ಅಣುವನ್ನು ಹೊರತೆಗೆಯಿರಿ. |
08:06 | ಈಗ ಪ್ಯಾನಲ್ ನಲ್ಲಿ ಎರಡು ಬೇರ್ಪಟ್ಟ ಅಣುಗಳಿವೆ. |
08:10 | ಡಿಸೆಲೆಕ್ಟ್ ಮಾಡಲು Ctrl, Shift ಮತ್ತು A ಕೀಲಿಗಳನ್ನು ಒಟ್ಟಿಗೆ ಒತ್ತಿ. |
08:17 | ಈಗ ನಾವು ಅಣುಗಳಿಗೆ ಲೇಬಲ್ ಮಾಡೋಣ. ಇದು ಎಲ್ಲಾ ಅಣುಗಳ ಸ್ಥಾನವನ್ನು ಗುರುತಿಸಲು ಸಹಾಯಕವಾಗಿದೆ. |
08:25 | ಲೇಬಲ್ ಮಾಡಲು, Display Types ಡ್ರಾಪ್ ಡೌನ್ ಮೆನ್ಯುವಿನಲ್ಲಿ Label ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
08:32 | Maltose ಅನ್ನು ಪಡೆಯಲು ನಾವು ನೀರಿನ ಅಣುವನ್ನು ತೆಗೆಯುವುದು ಅವಶ್ಯವಾಗಿದೆ. |
08:37 | ಮೊದಲ ಅಣುವಿನ C-1 ನ OH ಗುಂಪನ್ನು ಮತ್ತು ಎರಡನೆಯ ಅಣುವಿನ C-9 ದ ಹೈಡ್ರೋಜನ್ ಅನ್ನು ಡಿಲೀಟ್ ಮಾಡಿ. |
08:46 | Draw tool settings ನಲ್ಲಿ Carbon ಅನ್ನು ಆಯ್ಕೆ ಮಾಡಿ. |
08:50 | Bond Order ನಲ್ಲಿ Single ಅನ್ನು ಆಯ್ಕೆ ಮಾಡಿ. |
08:54 | Adjust Hydrogens ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ. |
08:58 | ಮೊದಲ ಅಣುವಿನ C-1 ಮತ್ತು ಎರಡನೇ ಅಣು ನ C-9 ಗಳನ್ನುoxygen ಅಣುವಿನ ಮೂಲಕ ಜೋಡಿಸಲು , ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ. |
09:07 | ಈಗ ನಾವು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಬೇಕು. |
09:11 | Auto Optimization tool ಅನ್ನು ಆಯ್ಕೆ ಮಾಡಿ. |
09:15 | ಎಡ ಭಾಗದಲ್ಲಿ , Auto Optimization settings ಮೆನ್ಯು ಕಾಣಿಸುತ್ತದೆ. |
09:20 | MMFF94 ಫೋರ್ಸ್ ಫೀಲ್ಡ್ ಅನ್ನು ಆಯ್ಕೆ ಮಾಡಿ ಮತ್ತು Start ನ ಮೇಲೆ ಕ್ಲಿಕ್ ಮಾಡಿ. |
09:27 | ಆಪ್ಟಿಮೈಜೇಶನ್ ಪೂರ್ಣಗೊಳ್ಳಲು ಕೆಲವು ಸೆಕೆಂಡ್ ಗಳನ್ನು ತೆಗೆದುಕೊಳ್ಳಬಹುದು. ಈಗ ನೀವು ಲೇಬಲ್ ಗಳನ್ನು ತೆಗೆಯಬಹುದು. |
09:35 | ಈಗ ನಾವು ಪ್ಯಾನಲ್ ನಲ್ಲಿ ಆಪ್ಟಿಮೈಜ್ ಆಗಿರುವ Maltose ನ ರಚನೆ ಅನ್ನು ನೋಡಬಹುದು. |
09:40 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: ಅಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು, |
09:47 | ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು, |
09:50 | ಬಾಂಡ್ ಗಳನ್ನು ತಿರುಗಿಸಿವುದು(ರೊಟೇಟ್ ಮಾಡುವುದು) |
09:52 | ಬಾಂಡ್ ನ ಉದ್ದವನ್ನು ಬದಲಿಸುವುದು, |
09:54 | ಹೈಡ್ರೋಜನ್ ಅನ್ನು ಮೀಥೈಲ್ ಗುಂಪಾಗಿ ಬದಲಿಸುವುದು, |
09:56 | ರಚನೆಯನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಸೇರಿಸುವುದು – ಇವುಗಳ ಕುರಿತು ಕಲಿತಿದ್ದೇವೆ. |
10:00 | ಅಸೈನ್ಮೆಂಟ್: draw tool ಅನ್ನು ಬಳಸಿ, ಬ್ಯೂಟೇನ್ ಅಣುವನ್ನು ರಚಿಸಿ. |
10:06 | ಇದನ್ನು 2,3 dimethyl Butane(2,3 ಡೈಮಿಥೈಲ್ ಬ್ಯೂಟೇನ್) ಆಗಿ ಪರಿವರ್ತಿಸಿ. |
10:10 | ಬಾಂಡ್ ಗಳನ್ನು ತಿರುಗಿಸಿ(ರೊಟೇಟ್ ಮಾಡಿ) ಮತ್ತು ಬಾಂಡ್ ನ ಉದ್ದಗಳನ್ನು ಬದಲಿಸಿ. |
10:14 | cellulose(ಸೆಲ್ಯುಲೋಸ್) ಅಣುವನ್ನು ರಚಿಸಿ. (ಸುಳಿವು: Insert fragment library ಯಲ್ಲಿ D- glucose monomer ದೊರೆಯುತ್ತದೆ.) |
10:22 | UFF ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ. |
10:27 | ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.
ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು. |
10:36 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
10:44 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD ಭಾರತ ಸರ್ಕಾರ ಧನಸಹಾಯ ಮಾಡುತ್ತದೆ. |
10:52 | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು |