Scilab/C4/File-handling/Kannada
From Script | Spoken-Tutorial
Revision as of 22:14, 6 November 2017 by Sandhya.np14 (Talk | contribs)
Time | Narration |
00:01 | ಸೈಲ್ಯಾಬ್ ನಲ್ಲಿ File Handling ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:08 | write() ಫಂಕ್ಷನ್, read() ಫಂಕ್ಷನ್, mopen() (ಎಮ್ ಓಪನ್) |
00:11 | ಮತ್ತು mclose() (ಎಮ್ ಕ್ಲೋಸ್) ಈ ಫಂಕ್ಷನ್ ಗಳೊಂದಿಗೆ, |
00:14 | ಫೈಲ್ ಹ್ಯಾಂಡ್ಲಿಂಗ್ ನ ಬಗ್ಗೆ ಕಲಿಯುವೆವು. |
00:16 | ವಿವರಣೆಗಾಗಿ ನಾನು ಇಲ್ಲಿ, Scilab ಆವೃತ್ತಿ 5.3.3 ಯನ್ನು ಇನ್ಸ್ಟಾಲ್ ಮಾಡಿರುವ Ubuntu Linux 12.04 ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿದ್ದೇನೆ. |
00:26 | ನೀವು Scilab ಅನ್ನು ಸ್ವಲ್ಪಮಟ್ಟಿಗೆ ತಿಳಿದಿರುವುದು ಅವಶ್ಯಕ. |
00:29 | ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನೋಡಿ.
spoken hyphen tutorial dot org |
00:36 | ಈಗ ನಾವು ಸೈಲ್ಯಾಬ್ ನಲ್ಲಿ, ಫೈಲ್ ಹ್ಯಾಂಡ್ಲಿಂಗ್ ಗೆ ಉಪಯುಕ್ತವಾದ ಕೆಲವು ಫಂಕ್ಷನ್ ಗಳನ್ನು ನೋಡುವೆವು. |
00:41 | ಫೈಲ್ ಹ್ಯಾಂಡ್ಲಿಂಗ್- |
00:44 | write() ಫಂಕ್ಷನ್ ಅನ್ನು ಬಳಸಿ ಫೈಲ್ ನಲ್ಲಿ ಬರೆಯುವುದು, |
00:47 | read() ಫಂಕ್ಷನ್ ಅನ್ನು ಬಳಸಿ ಫೈಲ್ ನಿಂದ ಓದುವುದು, |
00:51 | mopen() ಫಂಕ್ಷನ್ ಅನ್ನು ಬಳಸಿ, ಈಗಾಗಲೇ ಇರುವ ಫೈಲ್ ಅನ್ನು ಓಪನ್ ಮಾಡುವುದು ಮತ್ತು |
00:55 | mclose() ಫಂಕ್ಷನ್ ಅನ್ನು ಬಳಸಿ, ಈಗಾಗಲೇ ತೆರೆದಿರುವ ಫೈಲ್ ಅನ್ನು ಕ್ಲೋಸ್ ಮಾಡುವುದು- ಇವುಗಳನ್ನು ಒಳಗೊಂಡಿರುತ್ತದೆ. |
01:00 | ನಾವು ಫೈಲ್ ನಲ್ಲಿ ಡೇಟಾವನ್ನು ಬರೆಯುವುದರಿಂದ ಪ್ರಾರಂಭಿಸೋಣ. |
01:03 | ಇದಕ್ಕಾಗಿ, write() ಕಮಾಂಡ್ ಅನ್ನು ಬಳಸಲಾಗುತ್ತದೆ. |
01:07 | ಸೈಲ್ಯಾಬ್ ಕನ್ಸೋಲ್ ವಿಂಡೋ ಗೆ ಬದಲಾಯಿಸಿ. |
01:10 | ನಾವು ಮೊದಲಿಗೆ, ರಾಂಡಮ್ (random) ಸಂಖ್ಯೆಗಳ ಒಂದು ಮ್ಯಾಟ್ರಿಕ್ಸ್ ಅನ್ನು ಕ್ರಿಯೇಟ್ ಮಾಡೋಣ. |
01:15 | ಹೀಗೆ ಟೈಪ್ ಮಾಡಿ: random underscore matrix is equal to rand into bracket 20 comma 1 close the bracket semicolon ಮತ್ತು Enter ಅನ್ನು ಒತ್ತಿ. |
01:29 | ಈಗ, ’ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿ’ ಯನ್ನು ಪರೀಕ್ಷಿಸಿ. |
01:32 | pwd ಎಂದು ಟೈಪ್ ಮಾಡಿ. |
01:34 | ಈ ಸಂದರ್ಭದಲ್ಲಿ, slash home slash fossee ಇದು ’ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿ’ ಆಗಿದೆ. |
01:39 | ಈ ಕಮಾಂಡ್ ಗಳನ್ನು ಎಕ್ಸಿಕ್ಯೂಟ್ ಮಾಡುವ ಮೊದಲು, ನೀವು ಇರುವ ಡೈರಕ್ಟರಿಯಲ್ಲಿ, ನಿಮಗೆ read & write ಪರ್ಮಿಷನ್ ಇರುವುದನ್ನು ಖಚಿತಪಡಿಸಿಕೊಳ್ಳಿ. |
01:47 | ಈಗ ನಾವು write ಕಮಾಂಡ್ ಅನ್ನು ಬಳಸಿ, random underscore matrix ಎಂಬ ವೇರಿಯೇಬಲ್ ನಲ್ಲಿ ಇರುವುದನ್ನು, ಒಂದು ಟೆಕ್ಸ್ಟ್ ಫೈಲ್ ನಲ್ಲಿ ಬರೆಯುವೆವು. |
01:55 | ಹೀಗೆ ಟೈಪ್ ಮಾಡಿ: write into bracket into quotes random dash numbers dot txt close the quotes comma random underscore matrix close the bracket ಮತ್ತು Enter ಅನ್ನು ಒತ್ತಿ. |
02:18 | ಈ ಫೈಲ್ ಅನ್ನು ಕ್ರಿಯೇಟ್ ಮಾಡಲಾಗಿದೆಯೇ ಎಂದು ನಾವು ನೋಡೋಣ. |
02:21 | ನಾನು ಸೈಲ್ಯಾಬ್ ಕಾನ್ಸೋಲ್ ವಿಂಡೋವನ್ನು ಮಿನಿಮೈಸ್ ಮಾಡುವೆನು. |
02:23 | ಮತ್ತು, ನನ್ನ ಕಂಪ್ಯೂಟರ್ ನಲ್ಲಿ ಕ್ರಿಯೇಟ್ ಮಾಡಿ, fossee ಡೈರಕ್ಟರಿಯಲ್ಲಿ ಸೇವ್ ಮಾಡಿರುವ ಫೈಲ್ ಅನ್ನು ಓಪನ್ ಮಾಡುವೆನು. |
02:33 | random underscore matrix ಎಂಬ ವೇರಿಯೇಬಲ್ ನಲ್ಲಿರುವ ಡೇಟಾಅನ್ನು, random dash numbers dot txt ಎಂಬ ಟೆಕ್ಸ್ಟ್ ಫೈಲ್ ನಲ್ಲಿ ಬರೆದಿರುವುದನ್ನು ನೀವು ನೋಡಬಹುದು. |
02:42 | ನಾನು ಈ ಫೈಲ್ ಅನ್ನು ಕ್ಲೋಸ್ ಮಾಡುತ್ತೇನೆ. |
02:45 | ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗೋಣ. |
02:47 | ಒಂದು ಫೈಲ್ ನಿಂದ ಡೇಟಾವನ್ನು ಹೇಗೆ ಓದುವುದು ಎಂದು ಈಗ ನಾವು ನೋಡುವೆವು. |
02:50 | ಇದಕ್ಕಾಗಿ, ನಾವು read ಕಮಾಂಡ್ ಅನ್ನು ಹೀಗೆ ಬಳಸುವೆವು: |
02:55 | ಹೀಗೆ ಟೈಪ್ ಮಾಡಿ: new underscore vector is equal to read into bracket into quote random dash numbers dot txt close the quotes comma 20 comma 1 close the bracket ಮತ್ತು Enter ಅನ್ನು ಒತ್ತಿ. |
03:18 | read ಕಮಾಂಡ್, ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನಿಂದ ಎಲ್ಲಾ ಡೇಟಾವನ್ನು ಓದುತ್ತದೆ. |
03:23 | ಈ ಸಂದರ್ಭದಲ್ಲಿ, ಇದು random dash numbers dot txt ಎಂದು ಆಗಿದೆ. |
03:27 | ಮತ್ತು, new underscore vector ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ. |
03:31 | ಡಿಸ್ಪ್ಲೇಯನ್ನು ಮುಂದುವರಿಸಲು, Enter ಅನ್ನು ಒತ್ತಿ. |
03:35 | ಒಂದುವೇಳೆ. ನಾವು ಮೇಲಿನ ಕಮಾಂಡ್ ಅನ್ನು ಈ ರೀತಿಯಾಗಿ ಮಾರ್ಪಡಿಸಿದರೆ: |
03:39 | new underscore vector is equal to read into bracket into quotes random dash numbers dot txt comma 19 comma 1 |
03:49 | ಆಗ, read ಕಮಾಂಡ್, ಈ ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನಿಂದ, ಎಂದರೆ, random dash numbers dot txt ನಿಂದ, |
03:56 | 19 ಡೇಟಾ ವ್ಯಾಲ್ಯು ಗಳನ್ನು ಮಾತ್ರ ಓದುತ್ತದೆ. |
03:59 | ಮತ್ತು, new underscore vector ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ. |
04:03 | ಈ ಕಮಾಂಡ್ ಅನ್ನು ಸೈಲ್ಯಾಬ್ ಕನ್ಸೋಲ್ ನಲ್ಲಿ ಕೊಟ್ಟು ಔಟ್ಪುಟ್ ಅನ್ನು ಪರಿಶೀಲಿಸಿ. |
04:08 | ಈಗ ನಾವು, mopen() ಫಂಕ್ಷನ್ ನ ಬಗ್ಗೆ ನೋಡೋಣ : |
04:12 | fd = mopen into bracket file-name comma mode |
04:17 | C ನಲ್ಲಿರುವ fopen ನ ಹಾಗೇ, ಮೊದಲೇ ಇರುವ ಫೈಲ್ ಅನ್ನು ಓಪನ್ ಮಾಡಲು mopen ಕಮಾಂಡ್ ಅನ್ನು ಬಳಸಲಾಗುತ್ತದೆ. |
04:25 | mode- ಇದು ಒಂದು ಕ್ಯಾರೆಕ್ಟರ್ ಸ್ಟ್ರಿಂಗ್ ಆಗಿದ್ದು, ಯಾವ ಕೆಲಸಕ್ಕೆ ಫೈಲ್ ಓಪನ್ ಆಗಬೇಕು ಎನ್ನುವುದನ್ನು ನಿರ್ಧರಿಸುತ್ತದೆ: |
04:30 | r, ರೀಡಿಂಗ್ ಗಾಗಿ, ಒಂದು ಫೈಲ್ ಅನ್ನು ಓಪನ್ ಮಾಡುತ್ತದೆ. |
04:34 | rb, ರೀಡಿಂಗ್ ಗಾಗಿ, ಒಂದು ಬೈನರಿ ಫೈಲ್ ಅನ್ನು ಓಪನ್ ಮಾಡುತ್ತದೆ. |
04:39 | rt, ರೀಡಿಂಗ್ ಗಾಗಿ, ಒಂದು ಟೆಕ್ಸ್ಟ್ ಫೈಲ್ ಅನ್ನು ಓಪನ್ ಮಾಡುತ್ತದೆ. |
04:43 | w, ರೈಟಿಂಗ್ ಗಾಗಿ, ಹೊಸ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ. ಅಥವಾ, ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ. |
04:50 | wb, ಇದು ರೈಟಿಂಗ್ ಗಾಗಿ, ಒಂದು ಹೊಸ ಬೈನರಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ. ಅಥವಾ, ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ. |
04:58 | wt, ಇದು, ರೈಟಿಂಗ್ ಗಾಗಿ ಟೆಕ್ಸ್ಟ್ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಅಥವಾ ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ. |
05:06 | a ಅಥವಾ ab, ಇದು ಅಪೆಂಡ್ ಮಾಡುತ್ತದೆ. ಎಂದರೆ, ಒಂದು ಫೈಲ್ ಅನ್ನು ಅದರ ಕೊನೆಯಲ್ಲಿ ಬರೆಯಲು ಓಪನ್ ಮಾಡುತ್ತದೆ. ಅಥವಾ, ರೈಟಿಂಗ್ ಗಾಗಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ. |
05:14 | r+, r+b (r ಪ್ಲಸ್, r ಪ್ಲಸ್ b ) ಫೈಲ್ ಅನ್ನು, ಅಪ್ಡೇಟ್ ಗಾಗಿ, ರೀಡಿಂಗ್ ಮತ್ತು ರೈಟಿಂಗ್ ಎರಡೂ, ಓಪನ್ ಮಾಡುತ್ತದೆ. |
05:20 | ಉದಾಹರಣೆಗೆ, fd underscore r is equal to mopen('random-numbers,'rt'). |
05:30 | ಮೇಲಿನ ಕಮಾಂಡ್, 'random-numbers' ಎಂಬ ಫೈಲ್ ಅನ್ನು 'text and read-only' (ಟೆಕ್ಸ್ಟ್ ಆಂಡ್ ರೀಡ್ ಓನ್ಲಿ) ಮೋಡ್ ನಲ್ಲಿ ಓಪನ್ ಮಾಡುತ್ತದೆ. |
05:37 | mclose into bracket fd: |
05:40 | ಇದು, mopen ಅನ್ನು ಬಳಸಿ ಓಪನ್ ಮಾಡಿದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ. |
05:43 | ಇಲ್ಲಿ, fd ಇದು, ಓಪನ್ ಮಾಡಿದ ಫೈಲ್ ನ 'ಫೈಲ್ ಡಿಸ್ಕ್ರಿಪ್ಟರ್' ಆಗಿರುತ್ತದೆ. |
05:48 | ಈ fd ಯನ್ನು ಬಿಟ್ಟುಬಿಟ್ಟರೆ, mclose(), ಕೊನೆಯಲ್ಲಿ ಓಪನ್ ಮಾಡಿದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ. |
05:53 | ಈ ಟ್ಯುಟೋರಿಯಲ್ ನಲ್ಲಿ ಇರುವುದು ಇಷ್ಟೆ. |
05:55 | ನಾವು ಈ ಕೆಳಗಿನ ಫಂಕ್ಷನ್ ಗಳೊಂದಿಗೆ, ಫೈಲ್-ಹ್ಯಾಂಡ್ಲಿಂಗ್ ಅನ್ನು ಕಲಿತಿದ್ದೇವೆ : |
06:02 | write() ಫಂಕ್ಷನ್, read() ಫಂಕ್ಷನ್, mopen() ಮತ್ತು mclose(). |
06:05 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ. |
06:08 | ಇದು ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
06:11 | ನಿಮಗೆ ಒಳ್ಳೆಯ ಬ್ಯಾಂಡ್-ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
06:14 | ಸ್ಪೋಕನ್ ಟ್ಯುಟೋರಿಯಲ್ ತಂಡವು : |
06:17 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ. |
06:20 | ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
06:23 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
conatct@spoken-tutorial.org. |
06:30 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
06:34 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
06:41 | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
06:50 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
06:54 | ಧನ್ಯವಾದಗಳು. |