Linux/C2/Redirection-Pipes/Kannada
From Script | Spoken-Tutorial
Revision as of 15:46, 30 May 2014 by Vasudeva ahitanal (Talk | contribs)
Time | Narration |
0:00:00 | Redirection ಮತ್ತು Pipes ಗಳ ಬಗೆಗಿನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
0:07:00 | ಇಲ್ಲಿ ನಾನು ಉಬುಂಟು 10.04 ಅನ್ನು ಬಳಸುತ್ತಿದ್ದೇನೆ. |
0:09:00 | ನೀವು ಈಗಾಗಲೇ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ ಹಾಗೂ ಕಮಾಂಡ್ ಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿರುವಿರಿ ಎಂದು ಭಾವಿಸುತ್ತೇನೆ. |
0:16:00 | ನೀವು ಆಸಕ್ತರಿದ್ದಲ್ಲಿ, ಇದು ಈ ಕೆಳಗಿನ ವೆಬ್ಸೈಟ್ ನಲ್ಲಿ ಸಿಗುವ ಇನ್ನೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಲಭ್ಯವಿದೆ. |
0:22:00 | ಲಿನೆಕ್ಸ್ ಎಂಬುದು ಕೇಸ್ ಸೆನ್ಸಿಟಿವ್ ಎಂಬುದನ್ನು ಕೂಡಾ ಗಮನಿಸಿ. |
0:25:00 | ಈ ಟ್ಯುಟೋರಿಯಲ್ ನಲ್ಲಿ ಎಲ್ಲಾ ಕಮಾಂಡ್ಸ್ ಗಳನ್ನೂ ಲೋವರ್ ಕೇಸ್ನಲ್ಲಿ ಬಳಸಲಾಗಿದೆ. ಇಲ್ಲವಾದಲ್ಲಿ ತಿಳಿಸಲಾಗುತ್ತದೆ. |
0:32:00 | ನಾವು ಲಿನಕ್ಸ್ ನಲ್ಲಿ ಹೆಚ್ಚಿನ ಕೆಲಸಗಳನ್ನು ಟರ್ಮಿನಲ್ ಮೂಲಕ ಮಾಡುತ್ತೇವೆ. |
0:35:00 | ನಾವು ಕಮಾಂಡ್ ಗಳನ್ನು ಕಾರ್ಯಗತಗೊಳಿಸಲು ಸಾಮಾನ್ಯವಾಗಿ ಕೀಬೋರ್ಡ್ ಅನ್ನು ಬಳಸುತ್ತೇವೆ. |
0:39:00 | ಈಗ ನಮಗೆ Date ಮತ್ತು Time ನ್ನು ತಿಳಿಯಬೇಕಾಗಿದೆ ಎಂದು ಅಂದುಕೊಳ್ಳಿ, |
0:41:00 | ಇದಕ್ಕಾಗಿ ನಾವು ಕೀಬೋರ್ಡ್ ನಲ್ಲಿ "date" ಎಂದು ಟೈಪ್ ಮಾಡಿ ಎಂಟರ್ ಒತ್ತುತ್ತೇವೆ. |
0:46:00 | ಹೀಗೆ ಸಾಮಾನ್ಯವಾಗಿ ನಾವು ಕೀಬೋರ್ಡ್ ಮೂಲಕ ಇನ್ ಪುಟ್ ಕೊಡುತ್ತೇವೆ. |
0:48:00 | ಹಾಗೆಯೇ ನಮ್ಮ ಕಮಾಂಡ್ ನ ಔಟ್ ಪುಟ್ ಕೂಡಾ ಟರ್ಮಿನಲ್ ವಿಂಡೋದಲ್ಲಿ ಪ್ರದರ್ಶಿತವಾಗುವುದನ್ನು ಕಾಣಬಹುದು. |
0:56:00 | ನಾವು ಕೆಲವು ಕಮಾಂಡ್ ಗಳನ್ನು ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಕೆಲವೊಂದು ಎರರ್ ಗಳು ಕೂಡಾ ಕಂಡು ಬರುತ್ತದೆ. |
0:59:00 | ಉದಾಹರಣೆಗೆ ನಾವು "cat space aaa" ಟೈಪ್ ಮಾಡಿ, Enter ಒತ್ತೋಣ. |
1:05:00 | ಈಗ aaa ಹೆಸರಿನ ಯಾವುದೇ ಫೈಲ್ ಗಳು ಅಸ್ತಿತ್ವದಲ್ಲಿಲ್ಲ. |
1:08:00 | ಹಾಗಾಗಿ, ಅದನ್ನು ಸೂಚಿಸಿ ಒಂದು ಎರರ್ ಕಾಣಿಸುತ್ತದೆ. |
1:10:00 | ಈಗ ಈ ಎರರ್ ಕೂಡಾ ಟರ್ಮಿನಲ್ ವಿಂಡೋದಲ್ಲಿ ಕಾಣಿಸುತ್ತದೆ. ಆದ್ದರಿಂದ ನಾವು ಎರರ್ ವರದಿಯನ್ನೂ ಕೂಡಾ ಟರ್ಮಿನಲ್ ನಲ್ಲಿ ನೋಡಬಹುದು. |
1:20:00 | ಈಗ ಇನ್ ಪುಟ್ಟಿಂಗ್, ಔಟ್ ಪುಟ್ಟಿಂಗ್ ಮತ್ತು ಎರರ್ ವರದಿ, ಇವು ಕಮಾಂಡ್ ಗಳಿಗೆ ಸಂಬಂಧಿಸಿದ ಮೂರು ವಿಶೇಷ ಕ್ರಿಯೆಗಳು. |
1:24:00 | ರಿಡೈರೆಕ್ಷನ್ ನ ಬಗ್ಗೆ ಕಲಿಯುವ ಮೊದಲು ನಾವು ಎರಡು ಪ್ರಮುಖ ಕಾನ್ಸೆಪ್ಟ್ ಗಳ ಬಗ್ಗೆ ತಿಳಿದಿರಬೇಕು. ಅದೇನೆಂದರೆ, ಸ್ಟ್ರೀಮ್ಸ್ ಮತ್ತು ಫೈಲ್ ಡಿಸ್ಕ್ರಿಪ್ಟರ್ ಗಳು. |
1:31:00 | ಲಿನಕ್ಸ್ ಶೆಲ್, ಬ್ಯಾಷ್ ನ ಹಾಗೆ, ಇನ್ ಪುಟ್ ಪಡೆಯುತ್ತದೆ ಮತ್ತು ಕ್ರಮಾನುಗತಿಯಲ್ಲಿ ಅಥವಾ ಅಕ್ಷರಗಳನ್ನು ಧಾರಾರೂಪದಲ್ಲಿ ಔಟ್ ಪುಟ್ ಕಳುಹಿಸುತ್ತದೆ. |
1:37:00 | ಹಿಂದೆ ಮುಂದೆ ಇರುವ ಪ್ರತಿಯೊಂದು ಅಕ್ಷರವೂ ಪರಸ್ಪರ ಅವಲಂಬಿತವಾಗಿರದೇ ಸ್ವತಂತ್ರವಾಗಿರುತ್ತವೆ. |
1:41:00 | ಸ್ಟ್ರೀಮ್ ಗಳು ಸಾಮಾನ್ಯವಾಗಿ ಫೈಲ್ IO ಟೆಕ್ನಿಕ್ ಅನ್ನು ಬಳಸಿಯೇ ಸಂಕಲಿತಗೊಳ್ಳುತ್ತವೆ. |
1:44:00 | ಇಲ್ಲಿ ನಿಜವಾದ ಅಕ್ಷರಗಳ ಸ್ಟ್ರೀಮ್ಸ್ ಫೈಲ್ ನಿಂದ, ಕೀಬೋರ್ಡ್ ಅಥವಾ ವಿಂಡೋ ಮುಂತಾದವುಗಳಿಂದ ಕೂಡಾ ಬರಬಹುದು ಹಾಗೂ ಹೋಗಬಹುದು. |
1:51:00 | ಲಿನಕ್ಸ್ ನಲ್ಲಿ, ಒಂದು ಪ್ರೋಸೆಸ್ ನ ಪ್ರತಿಯೊಂದು ತೆರೆದ ಫೈಲ್ ಒಂದು ಪೂರ್ಣಾಂಕ ಸಂಖ್ಯೆಯೊಂದಿಗೆ ಸಂಬಂಧ ಹೊಂದಿರುತ್ತದೆ. |
1:57:00 | ಈ ಸಂಖ್ಯಾ ಮೌಲ್ಯಗಳನ್ನು ಫೈಲ್ ಡಿಸ್ಕ್ರಿಪ್ಟರ್ ಗಳು ಎಂದು ಕರೆಯಲಾಗುತ್ತದೆ. |
2:05:00 | ಲಿನಕ್ಸ್ ಶೆಲ್ ಗಳು ಮೂರು ಮಾದರಿಯ I/O ಸ್ಟ್ರೀಮ್ ಗಳನ್ನು ಬಳಸುತ್ತವೆ. |
2:08:00 | ಇದರಲ್ಲಿ ಪ್ರತಿಯೊಂದೂ ಕೂಡಾ ಪ್ರಸಿದ್ಧ ಫೈಲ್ ಡಿಸ್ಕ್ರಿಪ್ಟರ್ರ್ ಜೊತೆ ಸೇರಿರುತ್ತದೆ. |
2:12:00 | stdin ಒಂದು ಗುಣಮಟ್ಟದ ಇನ್ ಪುಟ್ ಸ್ಟ್ರೀಮ್ ಆಗಿದೆ. |
2:15:00 | ಇದು ಕಮಾಂಡ್ ಗಳಿಗೆ ಇನ್ ಪುಟ್ ಒದಗಿಸುತ್ತವೆ. |
2:17:00 | ಇಲ್ಲಿ ಫೈಲ್ ಡಿಸ್ಕ್ರಿಪ್ಟರ್ 0(ಸೊನ್ನೆ) ಆಗಿರುತ್ತದೆ. |
2:19:00 | Stdout ಒಂದು ಒಳ್ಳೆಯ ಗುಣಮಟ್ಟದ ಔಟ್ ಪುಟ್ ಸ್ಟ್ರೀಮ್ ಆಗಿರುತ್ತದೆ. |
2:22:00 | ಇದು ಕಮಾಂಡ್ಸ್ ಗಳಿಂದ ಔಟ್ ಪುಟ್ ಅನ್ನು ಪ್ರದರ್ಶಿಸುತ್ತದೆ.ಇದರ ಫೈಲ್ ಡಿಸ್ಕ್ರಿಪ್ಟರ್ 1 ಆಗಿರುತ್ತದೆ. |
2:26:00 | stderr ಎರರ್ ಸ್ಟ್ರೀಮ್ ಆಗಿದೆ. ಇದು ಕಮಾಂಡ್ ಗಳಿಂದ ಎರರ್ ಔಟ್ ಪುಟ್ ಅನ್ನು ಪ್ರದರ್ಶಿಸುತ್ತದೆ. ಇದರ ಫೈಲ್ ಡಿಸ್ಕ್ರಿಪ್ಟರ್ 2 ಆಗಿರುತ್ತದೆ. |
2:36:00 | ಇನ್ ಪುಟ್ ಸ್ಟ್ರೀಮ್, ಪ್ರೋಗ್ರಾಂಗಳಿಗೆ ಇನ್ ಪುಟ್ ಒದಗಿಸುತ್ತದೆ |
2:40:00 | ಪೂರ್ವನಿಯೋಜಿತವಾಗಿ ಇದು ಟರ್ಮಿನಲ್ ಕೀಸ್ಟ್ರೋಕ್ ಗಳಿಂದ ತೆಗೆದುಕೊಳ್ಳುತ್ತದೆ. |
2:44:00 | ಔಟ್ ಪುಟ್ ಸ್ಟ್ರೀಮ್ಸ್, ಪೂರ್ವನಿಯೋಜಿತವಾಗಿ ಪಠ್ಯ ಅಕ್ಷರಗಳನ್ನು ಟರ್ಮಿನಲ್ ನಲ್ಲಿ ಮುದ್ರಿಸುತ್ತದೆ. |
2:47:00 | ಟರ್ಮಿನಲ್, ಮೂಲತಃ ಒಂದು ASCII ಟೈಪ್ ರೈಟರ್ ಅಥವಾ ಡಿಸ್ ಪ್ಲೇ ಟರ್ಮಿನಲ್ ಆಗಿತ್ತು |
2:52:00 | ಆದರೆ ಈಗ ಅದು ಗ್ರಾಫಿಕಲ್ ಡೆಸ್ಕ್ ಟಾಪ್ ಮೇಲೆ ಟೆಕ್ಸ್ಟ್ ವಿಂಡೋ ಆಗಿರುತ್ತದೆ. |
2:56:00 | ನಾವು 3 ಸ್ಟ್ರೀಮ್ಸ್ ಗಳು ಪೂರ್ವನಿಯೋಜಿತವಾಗಿ ಕೆಲವು ಫೈಲ್ಸ್ ಗಳಿಗೆ ಸಂಪರ್ಕವಿರುವುದನ್ನು ನೋಡಿದ್ದೇವೆ. |
3:01:00 | ಆದರೆ ಲಿನಕ್ಸ್ ನಲ್ಲಿ, ನಾವು ಈ ಪೂರ್ವನಿಯೋಜಿತ ವರ್ತನೆಯನ್ನು ಬದಲಾಯಿಸಬಹುದು. |
3:04:00 | ನಾವು ಈ ಮೂರು ಸ್ಟ್ರೀಮ್ ಗಳನ್ನು ಬೇರೆ ಫೈಲ್ ಗೆ ಸಂಪರ್ಕಿಸಬಹುದು. |
3:07:00 | ಈ ಪ್ರೋಸೆಸ್ ನ್ನು ರಿಡೈರೆಕ್ಷನ್ ಎಂದು ಕರೆಯಲಾಗುತ್ತದೆ. |
3:09:00 | ಈಗ ರಿಡೈರೆಕ್ಷನ್ ಅನ್ನು 3 ಸ್ಟ್ರೀಮ್ ಗಳಲ್ಲಿ ಹೇಗೆ ಮಾಡಲಾಗುತ್ತದೆ ಎಂದು ನೋಡೋಣ. |
3:14:00 | ಮೊದಲಿಗೆ ನಾವು ಹೇಗೆ ಸ್ಟ್ಯಾಂಡರ್ಡ್ ಇನ್ ಪುಟ್ ರಿಡೈರೆಕ್ಟ್ ಆಗುತ್ತದೆ ಎಂದು ನೋಡೋಣ. |
3:17:00 | ನಾವು < (left angled bracket) ನ ಸಹಾಯದಿಂದ standardin ಎಂಬುದನ್ನು ಫೈಲ್ ನಿಂದ ರೆಡೈರೆಕ್ಟ್ ಮಾಡೋಣ. |
ಇದು ಹೇಗೆ ಎಂದು ನೋಡೋಣ.
| |
3:22:00 | ನಮಗೆ ತಿಳಿದಿರುವ ಪ್ರಕಾರ wc ಕಮಾಂಡ್ ಅನ್ನು ಸಾಲುಗಳ, ಪದಗಳ ಮತ್ತು ಫೈಲ್ ನಲ್ಲಿರುವ ಅಕ್ಷರಗಳ ಸಂಖ್ಯೆಯನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ. |
3:28:00 | ಟರ್ಮಿನಲ್ ವಿಂಡೋನಲ್ಲಿ wc ಟೈಪ್ ಮಾಡಿ. |
3:31:00 | ಈಗ Enter ಒತ್ತಿ. |
3:32:00 | ಏನಾಗಬಹುದು? ನಾವು ಮಿನುಗುತ್ತಿರುವ ಕರ್ಸರ್ ನೋಡುತ್ತಿದ್ದೇವೆ. ಇದರ ಅರ್ಥ ನಾವು ಕೀಬೋರ್ಡ್ ಮೂಲಕ ಬರೆಯಬೇಕು ಎಂದು. |
3:37:00 | ಈಗ ಒಂದು ಟೆಕ್ಸ್ಟ್ ನ್ನು ಬರೆಯಿರಿ. “This tutorial is very important” |
3:46:00 | ಈಗ Enter ಒತ್ತಿ. |
3:48:00 | ಈಗ Ctrl ಮತ್ತು d ಅನ್ನು ಒಟ್ಟಿಗೆ ಒತ್ತಿ. |
3:52:00 | ಈಗ ನಾವು ಬರೆದ ಸಾಲುಗಳ ಮೇಲೆ ಕಮಾಂಡ್ ಕಾರ್ಯಗತಗೊಳ್ಳುತ್ತದೆ |
3:55:00 | ಕಮಾಂಡ್, ಟರ್ಮಿನಲ್ ನ ಮೇಲೆ ಒಂದು ಔಟ್ ಪುಟ್ ಕೊಡುತ್ತದೆ. |
3:57:00 | ಈಗ ಇಲ್ಲಿ wc ಕಮಾಂಡ್ ನಂತರ ಯಾವುದೇ ಫೈಲ್ ನೀಡಲಾಗುವುದಿಲ್ಲ. |
4:01:00 | ಆದ್ದರಿಂದ ಇದು ಇನ್ ಪುಟ್ ಅನ್ನು ಸ್ಟ್ಯಾಂಡರ್ಡ್ ಇನ್ ಪುಟ್ ಸ್ಟ್ರೀಮ್ ನಿಂದ ತೆಗೆದುಕೊಳ್ಳುತ್ತದೆ |
4:04:00 | ಈಗ ಸ್ಟ್ಯಾಂಡರ್ಡ್ ಇನ್ ಪುಟ್ ಸ್ಟ್ರೀಮ್ ಪೂರ್ವನಿಯೋಜಿತವಾಗಿ ಕೀ ಬೋರ್ಡ್ ಗೆ ಸಂಪರ್ಕಿಸಲಾಗಿದೆ. ಆದ್ದರಿಂದ wc, ಕೀಬೋರ್ಡ್ ನಿಂದ ಇನ್ ಪುಟ್ ತೆಗೆದುಕೊಳ್ಳುತ್ತದೆ. |
4:12:00 | ಈಗ ನಾವು ಹೀಗೆ ಬರೆದಲ್ಲಿ
|
" wc space 'left-angled bracket" space test1 dot txt” | |
4:19:00 | ಏನಾಗಬಹುದು ಅಂದರೆ, wc ನಮಗೆ test1 dot txt ಫೈಲ್ ನ ಒಟ್ಟು ಸಾಲುಗಳು, ಪದಗಳು ಮತ್ತು ಅಕ್ಷರಗಳನ್ನು ಹೇಳುತ್ತದೆ. |
4:27:00 | ಈಗ ಟೈಪ್ ಮಾಡಿ |
“wc space test1 dot txt “ | |
4:34:00 | ನಾವು ಅದೇ ಫಲಿತಾಂಶವನ್ನು ನೋಡಬಹುದು. |
4:37:00 | ಹಾಗಾದರೆ ವ್ಯತ್ಯಾಸ ಏನು? |
4:39:00 | ನಾವು “wc space test1dot txt” ಎಂದು ಬರೆದಾಗ ಕಮಾಂಡ್ test1dot txt ಫೈಲ್ ಅನ್ನು ತೆರೆಯುತ್ತದೆ ಮತ್ತು ಅದರಿಂದ ಓದುತ್ತದೆ. |
4:46:00 | ಆದರೆ ನಾವು “wc space 'left-angled bracket' test1 dot txt” ಎಂದು ಬರೆದಾಗ wc ಯಾವುದೇ ಫೈಲ್ ತೆರೆಯುದಿಲ್ಲ. |
4:53:00 | ಬದಲಾಗಿ, ಅದು ಸ್ಟ್ಯಾಂಡರ್ಡ್ ಇನ್ ನಿಂದ ಇನ್ ಪುಟ್ ತೆಗೆದುಕೊಳ್ಳಲು ನೋಡುತ್ತದೆ. |
4:57:00 | ಈಗ ನಾವು ಫೈಲ್ test1dot txt ಗೆ ಸ್ಟ್ಯಾಂಡರ್ಡ್ ಇನ್ ನಿರ್ದೇಶಿಸಬಹುದು. |
5:01:00 | ಆದ್ದರಿಂದ ಕಮಾಂಡ್ test1ನಿಂದ ಓದುತ್ತದೆ. |
5:04:00 | ಆದರೆ ವಾಸ್ತವವಾಗಿ ತಿಳಿದಿರುವುದಿಲ್ಲವೆನೆಂದರೆ ಸ್ಟ್ಯಾಂಡರ್ಡ್ ಇನ್ ಗೆ ಮಾಹಿತಿ ಎಲ್ಲಿಂದ ಬರುತ್ತಿದೆ ಎಂದು. |
5:10:00 | ಆದ್ದರಿಂದ, ಸ್ಟ್ಯಾಂಡರ್ಡ್ ಇನ್ ಪುಟ್ ಅನ್ನು ಹೇಗೆ ರಿಡೈರೆಕ್ಟ್ ಮಾಡಬಹುದು ಎಂದು ಈಗ ನಾವು ನೋಡಿದ್ದೇವೆ. |
5:12:00 | ಈಗ ಸ್ಟ್ಯಾಂಡರ್ಡ್ ಔಟ್ ಪುಟ್ ಮತ್ತು ಸ್ಟ್ಯಾಂಡರ್ಡ್ ಎರರ್ ಅನ್ನು ಹೇಗೆ ರಿಡೈರೆಕ್ಟ್ ಮಾಡಬಹುದು ಎಂದು ನೋಡೋಣ. |
5:17:00 | ಔಟ್ ಪುಟ್ ಅಥವಾ ಎರರ್ ರಿಡೈರೆಕ್ಟ್ ಮಾಡಲು 2 ಬಗೆಗಳಿವೆ. |
5:20:00 | n ಎಂಬುದು ಫೈಲ್ ಡಿಸ್ಕ್ರಿಪ್ಟರನ್ನು ಸೂಚಿಸುತ್ತದೆ ಎಂದು ಊಹಿಸಿಕೊಳ್ಳಿ. |
ಫೈಲ್ ಡಿಸ್ಕ್ರಿಪ್ಟರ್ n ನಿಂದ ಫೈಲ್ ಗೆ ಔಟ್ ಪುಟ್ ರಿಡೈರೆಕ್ಟ್ ಮಾಡುತ್ತದೆ. | |
5:29:00 | ನೀವು ಫೈಲ್ ಬರೆಯಲು ಅಧಿಕಾರವನ್ನು ಹೊಂದಿರಬೇಕು. |
5:32:00 | ಫೈಲ್ ಅಸ್ತಿತ್ವದಲ್ಲಿರದಿದ್ದರೆ ಅದನ್ನು ರಚಿಸಲಾಗುತ್ತದೆ. |
5:35:00 | ಒಂದು ವೇಳೆ ಇದು ಅಸ್ತಿತ್ವದಲ್ಲಿದ್ದರೆ, ಯಾವುದೇ ಸೂಚನೆಗಳಿಲ್ಲದೆ ಅಸ್ತಿತ್ವದಲ್ಲಿ ಇರುವ ಪರಿವಿಡಿಗಳು ನಾಶವಾಗುತ್ತದೆ . |
5:40:00 | ' n 'double right-angled bracket' ಕೂಡ ಫೈಲ್ ಗಾಗಿ ಫೈಲ್ ಡಿಸ್ಕ್ರಿಪ್ಟರ್ n ಇಂದ ಔಟ್ ಪುಟ್ ಅನ್ನು ಪುನರ್ನಿರ್ದೇಶಿಸುತ್ತದೆ |
5:47:00 | ಪುನಃ, ನೀವು ಫೈಲ್ ಬರೆಯಲು ಅಧಿಕಾರವನ್ನು ಹೊಂದಿರಬೇಕು. |
5:50:00 | ಒಂದು ವೇಳೆ ಫೈಲ್ ಅಸ್ತಿತ್ವದಲ್ಲಿ ಇಲ್ಲದಿದ್ದರೆ ಅದನ್ನು ರಚಿಸಲಾಗುತ್ತದೆ |
5:52:00 | ಒಂದು ವೇಳೆ ಫೈಲ್ ಅಸ್ತಿತ್ವದಲ್ಲಿ ಇಲ್ಲದಿದ್ದರೆ ಅದನ್ನು ಅಸ್ತಿತ್ವದಲ್ಲಿ ಇರುವ ಫೈಲ್ ಗೆ ಸೇರಿಸಲಾಗುತ್ತದೆ |
5:59:00 | single right angle bracket ನ n ಅಥವಾ n double right angle bracket, ಫೈಲ್ ಡಿಸ್ಕ್ರಿಪ್ಟರನ್ನು ಸೂಚಿಸುತ್ತದೆ. |
6:05:00 | ಒಂದು ವೇಳೆ ಇದನ್ನು ಬಿಟ್ಟರೆ, ಸ್ಟ್ಯಾಂಡರ್ಡ್ ಔಟ್ ಪುಟ್ ಫೈಲ್ ಡಿಸ್ಕ್ರಿಪ್ಟರ್ 1 ಎಂದು ಭಾವಿಸಲಾಗುತ್ತದೆ |
6:10:00 | ಆದ್ದರಿಂದ right angle bracket ಕೇವಲ 1 right angle bracket ಆಗಿರುತ್ತದೆ |
6:15:00 | ಆದರೆ ಎರರ್ ಸ್ಟ್ರೀಮ್ ಅನ್ನು ಪುನರ್ನಿರ್ದೇಶಿಸಲು ನಿಮಗೆ 2 right angle bracket ಅಥವಾ 2 double right angle bracket ಉಪಯೋಗಿಸಬೇಕಾಗುತ್ತದೆ |
6:22:00 | ಈಗ ನಾವು ಇದನ್ನು ಪ್ರಾಯೋಗಿಕವಾಗಿ ನೋಡೋಣ. |
6:24:00 | ಹಿಂದಿನ ಉದಾಹರಣೆಯಲ್ಲಿ ನಾವು ನೋಡಿರುವುದೇನೆಂದರೆ ಫೈಲ್ ನ wc ಕಮಾಂಡ್ ಅಥವಾ ಸ್ಟ್ಯಾಂಡರ್ಡ್ ಇನ್ ನ ಫಲಿತಾಂಶವು ಟರ್ಮಿನಲ್ ವಿಂಡೋನ ಪರದೆಯ ಮೇಲೆ ಪ್ರದರ್ಶಿಸಲ್ಪಡುತ್ತದೆ |
6:31:00 | ಒಂದು ವೇಳೆ ನಮಗೆ ಟರ್ಮಿನಲ್ ಮೇಲೆ ಪ್ರದರ್ಶಿಸಲು ಬೇಡವೆಂದಾದರೆ ಏನಾಗುತ್ತದೆ? |
6:34:00 | ನಾವು ಇದನ್ನು ಫೈಲ್ ನಲ್ಲಿ ಸ್ಟೋರ್ ಮಾಡಲು ಇಚ್ಚಿಸುತ್ತೇವೆ ಯಾಕಂದರೆ ನಾವು ಈ ಮಾಹಿತಿ ಅನ್ನು ನಂತರ ಉಪಯೋಗಿಸಬಹುದಾಗಿದೆ. |
6:38:00 | ಪೂರ್ವನಿಯೋಜಿತವಾಗಿ wc ತನ್ನ ಔಟ್ ಪುಟ್ ಅನ್ನು ಸ್ಟ್ಯಾಂಡರ್ಡ್ ಔಟ್ ನಲ್ಲಿ ಬರೆಯುತ್ತದೆ. |
6:42:00 | ಸ್ಟ್ಯಾಂಡರ್ಡ್ ಔಟ್ ಪೂರ್ವನಿಯೋಜಿತವಾಗಿ ಟರ್ಮಿನಲ್ ವಿಂಡೋ ಜೊತೆ ಸಂಪರ್ಕ ಹೊಂದಿದೆ. |
6:45:00 | ಹಾಗಾಗಿ ನಾವು ಔಟ್ ಪುಟ್ ಅನ್ನು ಟರ್ಮಿನಲ್ ವಿಂಡೋ ನ ಮೇಲೆ ಕಾಣಬಹುದಾಗಿದೆ. |
6:48:00 | ಆದರೆ ಒಂದು ವೇಳೆ ನಮಗೆ ಸ್ಟ್ಯಾಂಡರ್ಡ್ ಔಟ್ ನ್ನು ಫೈಲ್ ಗೆ ರಿಡೈರೆಕ್ಟ್ ಮಾಡಲು ಸಾಧ್ಯವಾದರೆ, ಔಟ್ ಪುಟ್ ಅನ್ನು wc ಕಮಾಂಡ್ ನಿಂದ ಆ ಫೈಲ್ ಗೆ ಬರೆಯಲಾಗುತ್ತದೆ. |
6:57:00 | ನಾವು ಇದನ್ನು ಈ ರೀತಿ ಬರೆಯುತ್ತೇವೆ ಅಂದುಕೊಳ್ಳಿ, |
"wc space test1 dot txt 'right-angled bracket' wc_results dot txt" .
| |
7:09:00 | ಈಗ ಎಂಟರ್ ಒತ್ತಿ |
7:11:00 | ಈಗ ಇದು ವಾಸ್ತವವಾಗಿ ಸಂಭವಿಸಿದೆಯೇ ಎಂದು ನೋಡಲು ನಾವು c-a-t ಕಮಾಂಡ್ ಮೂಲಕ wc_results dot txt ಗಳನ್ನು ತೋರಿಸಬಹುದು. |
7:23:00 | ಹೌದು ಇದು ಸಂಭವಿಸಿದೆ. |
7:24:00 | ಒಂದು ವೇಳೆ ನಮ್ಮ ಬಳಿ ಅದೇ ಡೈರೆಕ್ಟ್ ರಿಯಲ್ಲಿ ಇನ್ನೊಂದು ಫೈಲ್, test2 ಇದೆ ಅಂದುಕೊಳ್ಳಿ. |
7:30:00 | ನಾವೀಗ ಪುನಃ test2 ಫೈಲ್ ನ ಜೊತೆಗೆ ಕಮಾಂಡ್ ಅನ್ನು ಹೊರಡಿಸಬೇಕಾದರೆ ನಾವು ಹೀಗೆ ಟೈಪ್ ಮಾಡೋಣ, |
"wc space test2 dot txt 'right-angled bracket' wc_results dot txt" | |
7:44:00 | ಇದರಿಂದ, wc_resultsನ ವಿಷಯಗಳು ವಿಸ್ತಾರವಾಗಿ ಬರೆಯಲ್ಪಡುತ್ತದೆ. |
7:48:00 | ಈಗ ಇದನ್ನು ನೋಡೋಣ. |
7:56:00 | ಬದಲಾಗಿ ನಾವು " wc space test1 dot txt 'right-angled bracket' twice wc underscore results dot txt " ಎಂದು ಬರೆದರೆ |
8:07:00 | ಇಲ್ಲಿ ಹೊಸ ವಿಷಯಗಳು, ಮೊದಲೇ ಉಪಸ್ಥಿತಿಯಲ್ಲಿರುವ wc underscore results dot txt ಫೈಲ್ ನ ವಿಷಯಗಳನ್ನು ಒವರ್ ರೈಟ್ ಮಾಡುವುದಿಲ್ಲ, ಬದಲಾಗಿ ಸೇರಿಸಲಾಗುತ್ತದೆ. |
8:15:00 | ಈಗ ಇದನ್ನು ಕೂಡ ನೋಡೋಣ. |
8:26:00 | ಸ್ಟ್ಯಾಂಡರ್ಡ್ ಎರರ್ ಅನ್ನು ಇದೆ ರೀತಿ ರಿಡೈರೆಕ್ಟ್ ಮಾಡಲಾಗುತ್ತದೆ. |
8:29:00 | ಕೇವಲ ವ್ಯತ್ಯಾಸವೇನೆಂದರೆ ಈ ಸಂಧರ್ಭದಲ್ಲಿ ನಮಗೆ right angle bracket ಅಥವಾ double right angle bracket ಚಿಹ್ನೆ ಯ ಮೊದಲು ಸ್ಟ್ಯಾಂಡರ್ಡ್ ಎರರ್ ನ ಫೈಲ್ ಡಿಸ್ಕ್ರಿಪ್ಟರ್ ಸಂಖ್ಯೆಯನ್ನು ಉಲ್ಲೇಖ ಮಾಡುವ ಅವಶ್ಯಕತೆ ಇದೆ. |
8:38:00 | ನಮಗೆ ತಿಳಿದಿರುವ ಹಾಗೆ aaa ಹೆಸರಿನ ಯಾವುದೇ ಫೈಲುಗಳು ಅಸ್ತಿತ್ವದಲ್ಲಿ ಇಲ್ಲ. ಈಗ ಈ ಕೆಳಗಿರುವಂತೆ ಬರೆಯಿರಿ. |
"wc space aaa" | |
8:46:00 | ಈಗ ಶೆಲ್ ಎರರ್ ಅನ್ನು ತೋರಿಸುತ್ತದೆ ಅದೇನೆಂದರೆ " No such file or directory "(ಇಂಥಹ ಯಾವುದೇ ಫೈಲ್ ಅಥವಾ ಡೈರೆಕ್ಟ್ ರಿ ಅಸ್ತಿತ್ವದಲ್ಲಿ ಇಲ್ಲ) |
8:50:00 | ಈಗ ನಮಗೆ ಎರರ್ ಮೆಸೇಜ್ ಗಳನ್ನು ಸ್ಕ್ರೀನ್ ನ ಮೇಲೆ ಕಾಣುವುದು ಬೇಡವೆಂದಾದರೆ ಅದನ್ನು ಬೇರೆ ಫೈಲ್ ಗೆ ರಿಡೈರೆಕ್ಟ್ ಮಾಡಬಹುದು. |
8:55:00 | ಇದಕ್ಕಾಗಿ ಕಮಾಂಡ್ ಅನ್ನು ಕೊಡೋಣ. |
"wc space aaa space 2 'right-anged bracket' errorlog dot txt" | |
9:06:00 | ಈಗ ಎರರ್ ಟರ್ಮಿನಲ್ ಮೇಲೆ ಕಾಣಿಸುವುದಿಲ್ಲ ಬದಲಾಗಿ ಇದು errorlog dot txt ಫೈಲ್ ನಲ್ಲಿ ಬರೆಯಲ್ಪಟ್ಟಿರುತ್ತದೆ. |
9:12:00 | ಇದನ್ನು ನಾವು ಈ ಕಮಾಂಡ್ ನ ಮೂಲಕ ನೋಡಬಹುದಾಗಿದೆ. |
"cat space errorlog dot txt" | |
9:22:00 | ಒಂದು ವೇಳೆ ನಾನು ಈಗ " cat space bbb space 2 'right-angled bracket' errorlog dot txt " ಈ ಕಮಾಂಡ್ ಕಾರ್ಯಗತಗೊಳಿಸಿ ಬೇರೆ ಎರರ್ ಮಾಡುತ್ತೇನೆ ಅಂದುಕೊಳ್ಳಿ. |
9:34:00 | ಆಗ ಹಿಂದಿನ ಎರರ್ ತಿದ್ದಲ್ಪಟ್ಟು ಅಲ್ಲಿ ಹೊಸ ಎರರ್ ಕಾಣಸಿಗುತ್ತದೆ. |
9:39:00 | ಇಲ್ಲಿ " cat space errorlog dot txt " ನೋಡಿ. |
9:46:00 | ಆದರೆ ಒಂದು ವೇಳೆ ನಮಗೆ ಎಲ್ಲ ಎರರ್ ಗಳ ಪಟ್ಟಿ ಮಾಡಬೇಕೆಂದರೆ ಏನು ಮಾಡುವುದು?
ಇದಕ್ಕಾಗಿ ನಾವು ಒಂದು ಕಮಾಂಡ್ ನ್ನು ಚಲಾಯಿಸೋಣ. "wc space aaa space 2 'right-angled bracket' twice errorlog dot txt" |
9:58:00 | ನಾವು ಕ್ಯಾಟ್ ಕಮಾಂಡ್ ಮೂಲಕ ಇದನ್ನು ಪರಿಶೀಲಿಸುತ್ತೇವೆ. |
10:06:00 | ನಾವು ಈಗಾಗಲೇ ಸ್ಟ್ಯಾಂಡರ್ಡ್ ಔಟ್ ,ಸ್ಟ್ಯಾಂಡರ್ಡ್ ಇನ್,ಸ್ಟ್ಯಾಂಡರ್ಡ್ ಎರರ್ ಎಂಬ ಈ ಮೂರು ಸ್ಟ್ರೀಮ್ಸ್ ಗಳನ್ನು ಹೇಗೆ ಪ್ರತ್ಯೇಕವಾಗಿ ರಿಡೈರೆಕ್ಟ್ ಮತ್ತು ಕುಶಲತೆಯಿಂದ ಪ್ರಯೋಗಿಸಲಾಗುತ್ತದೆ ಎಂದು ತಿಳಿದಿದ್ದೇವೆ. ಆದರೆ ಈ ಪರಿಕಲ್ಪನೆಯ ವಾಸ್ತವಿಕವಾದ ಶಕ್ತಿಯ ಅಂದಾಜನ್ನು, ನಾವು ಸ್ಟ್ರೀಮ್ ಗಳನ್ನು ಒಟ್ಟಿಗೆ ಮಾನ್ಯುಪ್ಯುಲೆಟ್ ಮಾಡಬಹುದಾದ ಸಮಯದಲ್ಲ್ಲಿಯೇ, ಅಂದರೆ, ವಿವಿಧ ಸ್ಟ್ರೀಮ್ಸ್ ಗಳ ಜೋಡಣೆ ಮಾಡುವ ಸಮಯದಲ್ಲೇ ಲೆಕ್ಕ ಹಾಕಬಹುದು. |
10:20:00 | ಈ ಪ್ರೋಸೆಸ್ ನ್ನು ಪೈಪ್ ಲೈನಿಂಗ್ ಎನ್ನಲಾಗುತ್ತದೆ. |
10:22:00 | ಪೈಪ್ಸ್ ಗಳನ್ನು, ಕಮಾಂಡ್ ಸರಣಿಗಳನ್ನು ರಚಿಸಲು ಬಳಸಲಾಗುತ್ತದೆ. |
10:25:00 | ಪೈಪ್ ಸರಣಿಯಲ್ಲಿ ಕಮಾಂಡ್ ನ ಔಟ್ ಪುಟ್ ಅನ್ನು ನಂತರದ ಕಮಾಂಡ್ ನ ಇನ್ ಪುಟ್ ಗೆ ಸಂಪರ್ಕಿಸುತ್ತದೆ. |
10:30:00 | command1 vertical bar command2 hyphen option vertical bar command3 hyphen option1 hyphen option2 vertical bar command4 |
10:46:00 | ಒಂದು ವೇಳೆ, ನಮಗೆ ಈಗಿರುವ ಡೈರೆಕ್ಟರಿ ಯಲ್ಲಿರುವ ಫೈಲ್ ಗಳ ಮತ್ತು ಡೈರೆಕ್ಟ್ ರಿ ಗಳ ಸಂಪೂರ್ಣ ಸಂಖ್ಯೆಯನ್ನೂ ತಿಳಿಯಬೇಕಾಗಿದೆ ಎಂದು ಅಂದುಕೊಳ್ಳಿ. |
10:51:00 | ಇದಕ್ಕಾಗಿ ನಾವೇನು ಮಾಡಬಹುದು?
ನಮಗೆ ತಿಳಿದಿರುವ ಪ್ರಕಾರ "ls space minus l" ಈಗಿರುವ ಡೈರೆಕ್ಟ್ ರಿಯಲ್ಲಿರುವ ಎಲ್ಲಾ ಫೈಲ್ಸ್ ಗಳ ಮತ್ತು ಡೈರೆಕ್ಟ್ ರಿಗಳ ಪಟ್ಟಿಯನ್ನು ಮಾಡುತ್ತದೆ. |
10:58:00 | ನಾವು ಫೈಲ್ ಗೆ ಔಟ್ ಪುಟ್ ಅನ್ನು ರಿಡೈರೆಕ್ಟ್ ಮಾಡಬಹುದು.
"ls space minus l 'right-angled bracket' files dot txt" |
11:08:00 | "cat space files dot txt" ಚಲಾಯಿಸಿ. |
11:14:00 | ಈಗ ಪ್ರತಿಯೊಂದು ಸಾಲು ಕೂಡ ಫೈಲ್ ಅಥವಾ ಡೈರೆಕ್ಟ್ ರಿ ಯ ಹೆಸರಾಗಿದೆ. |
11:17:00 | ಒಂದು ವೇಳೆ ನಾವು ಈ ಫೈಲ್ ನ ಸಂಪೂರ್ಣ ಸಾಲುಗಳನ್ನು ಅಳೆಯಲು ಹೋದರೆ, ನಮ್ಮ ಈ ಉದ್ದೇಶವನ್ನು ಪೂರ್ಣಗೊಳಿಸಲು files dot txt ಯ ಬಳಕೆಯನ್ನು ಮಾಡಬಹುದು |
11:24:00 | ಇದನ್ನು ಈ ಕಮಾಂಡ್ ಮೂಲಕ ಮಾಡಬಹುದು "wc space minus l files dot txt" |
11:32:00 | ಇದು ನಮ್ಮ ಉದ್ದೇಶವನ್ನು ಪೂರ್ಣಗೊಳಿಸುತ್ತದೆ, ಆದರೆ ಅಲ್ಲಿ ಕೆಲವು ತೊಂದರೆಗಳು ಉಂಟಾಗುತ್ತದೆ. |
11:35:00 | ಮೊದಲು ನಮಗೆ intermediate ಫೈಲ್ ಬೇಕಾಗಿದೆ. ಇಲ್ಲಿ ಅದು files dot txt ಆಗಿದೆ. |
11:40:00 | ಆದ್ದರಿಂದ ಒಂದು ವೇಳೆ ನಾವು ಹಲವು ಕಮಾಂಡ್ಸ್ ಗಳ ಸರಣಿ ರಚಿಸಲು ಬಯಸಿದರೆ ಈ ವಿಧಾನ ನಿಧಾನಗೊಳ್ಳುತ್ತದೆ. |
11:46:00 | ಆದ್ದರಿಂದ ಒಂದು ವೇಳೆ ನಾವು ಹಲವು ಕಮಾಂಡ್ ಗಳ ಸರಣಿ ರಚಿಸಲು ಬಯಸಿದರೆ ಈ ವಿಧಾನ ನಿಧಾನಗೊಳ್ಳುತ್ತದೆ. |
11:50:00 | ನಾವು ಸುಲಭವಾಗಿ ಪೈಪ್ಸ್ ಬಳಸಿಕೊಂಡು ಈ ರೀತಿಯಲ್ಲಿ ಮಾಡಬಹುದು. ಇದಕ್ಕಾಗಿ ನಾವು ಬರೆಯುತ್ತೇವೆ.
"ls space minus l 'vertical bar' wc space minus l" |
12:01:00 | ಮತ್ತು ನಾವು ಅತ್ಯಂತ ಸುಲಭವಾಗಿ ಒಂದೇ ಆದ ಫಲಿತಾಂಶವನ್ನು ಪಡೆಯಬಹುದು. |
12:06:00 | ls ಕಮಾಂಡ್ ನಿಂದ ಔಟ್ ಪುಟ್ wc ಕಮಾಂಡ್ ಗೆ ಇನ್ ಪುಟ್ ಆಗಿ ಹೋಗುತ್ತದೆ |
12:10:00 | ನಾವು ಪೈಪ್ ಗಳ ಮೂಲಕ ಅತಿ ಉದ್ದದ ಕಮಾಂಡ್ ಗಳ ಸರಣಿಗಳನ್ನು ಕೂಡ ಸೇರಿಸಬಹುದಾಗಿದೆ. |
12:15:00 | ಪೈಪ್ ಗಳ ಒಂದು ಸಾಮಾನ್ಯ ಬಳಕೆ ಮಲ್ಟಿಪೇಜ್ ಪ್ರದರ್ಶನಗಳನ್ನು ಓದಲು ಆಗುತ್ತದೆ. |
12:19:00 | "cd space slash user slash bin" ಎಂದು ಟೈಪ್ ಮಾಡಿ. |
12:24:00 | ಹಾಗಾಗಿ, ನಾವು ಈಗ ಬಿನ್ ಡೈರೆಕ್ಟ್ ರಿ ಯಲ್ಲಿ ಇದ್ದೇವೆ. |
12:28:00 | ಈಗ "ls minus l" ಚಲಾಯಿಸಿ. |
12:31:00 | ನಮ್ಮಿಂದ ಔಟ್ ಪುಟ್ ಸರಿಯಾಗಿ ನೋಡಲಾಗುವುದಿಲ್ಲ. ಆದರೆ ಒಂದುವೇಳೆ ನಾವು ಹೆಚ್ಚುವರಿಗಾಗಿ ಪೈಪ್ಸ್ ಜೊತೆ ಸೇರಿಸುದನ್ನು ಮಾಡಬಹುದು. |
12:37:00 | ಪಟ್ಟಿಯಲ್ಲಿ ಸ್ಕ್ರೋಲ್ ಮಾಡಲು Enter ಒತ್ತಿ . |
12:41:00 | ಇದರಿಂದ ಹೊರಗೆ ಬರಲು "q" ಒತ್ತಿರಿ. |
12:45:00 | ಇವೇ ಮೊದಲಾದ ಕಮಾಂಡ್ಸ್ ಗಳು ನಮಗೆ ಫೈಲ್ಸ್ ಗಳ ಜೊತೆ ಕೆಲಸ ಮಾಡಲು ಸಹಾಯ ಮಾಡುತ್ತವೆ |
12:48:00 | ಇನ್ನು ಹಲವಾರು ಕಮಾಂಡ್ಸ್ ಗಳು ಲಬ್ಯವಿದೆ. |
12:50:00 | ಇದಲ್ಲದೆ ನಾವು ನೋಡಿದ ಪ್ರತಿಯೊಂದು ಕಮಾಂಡ್ ಅನೇಕ ಆಯ್ಕೆಗಳನ್ನು ಹೊಂದಿದೆ. |
12:54:00 | ನಾನು 'man' ಕಮಾಂಡ್ ಬಳಸಿ, ನಿಮಗೆ ಅವುಗಳ ಬಗ್ಗೆ ಹೆಚ್ಚಿನದನ್ನು ತಿಳಿಯಲು ಉತ್ತೇಜನ ನೀಡುತ್ತೇನೆ. |
12:58:00 | ಕಮಾಂಡ್ಸ್ ಗಳ ಕಲಿಕೆಯ ಒಂದು ಅತ್ಯುತ್ತಮ ವಿಧಾನವೇನೆಂದರೆ ಮತ್ತೆ ಮತ್ತೆ ಅವುಗಳನ್ನು ಬಳಸುವುದು. |
13:04:00 | ಈಗ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
13:07:00 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
13:15:00 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
13:19:00 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. ಧನ್ಯವಾದಗಳು, ಶುಭವಿದಾಯ. |