ExpEYES/C2/Electro-Magnetism/Kannada
From Script | Spoken-Tutorial
Revision as of 13:16, 17 October 2016 by Sandhya.np14 (Talk | contribs)
Time | Narration |
00:01 | ನಮಸ್ಕಾರ. Electro-magnetic induction (ಇಲೆಕ್ಟ್ರೊ ಮ್ಯಾಗ್ನೆಟಿಕ್ ಇಂಡಕ್ಶನ್) ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:06 | ಈ ‘ಟ್ಯುಟೋರಿಯಲ್’ನಲ್ಲಿ, ನಾವು:
ನಮ್ಮ ಪ್ರಯೋಗಗಳಿಗಾಗಿ ಸರ್ಕೀಟ್ ಡೈಗ್ರಾಮ್ ಗಳನ್ನು ತೋರಿಸುವೆವು. |
00:26 | ಇಲ್ಲಿ ನಾನು:
ಇವುಗಳನ್ನು ಬಳಸುತ್ತಿದ್ದೇನೆ. |
00:35 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು ExpEYES Junior ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
00:47 | ನಾವು 'ಇಲೆಕ್ಟ್ರೊ ಮ್ಯಾಗ್ನೆಟಿಕ್ ಇಂಡಕ್ಶನ್'ಅನ್ನು ಮಾಡಿತೋರಿಸುವುದರೊಂದಿಗೆ ಆರಂಭಿಸೋಣ. |
00:52 | ಈ ಪ್ರಯೋಗದಲ್ಲಿ, 3000 ಸುತ್ತುಗಳ ಸುರುಳಿಯ ತಂತಿಗಳನ್ನು ಗ್ರೌಂಡ್ (GND) ಮತ್ತು A1 ಗೆ ಜೋಡಿಸಲಾಗಿದೆ. |
01:00 | ಆಯಸ್ಕಾಂತೀಯ ಪರಿಣಾಮವನ್ನು ತೋರಿಸಲು, 5 ಮಿ.ಮಿ. ವ್ಯಾಸ ಹಾಗೂ 10 ಮಿ.ಮಿ. ಉದ್ದದ ಒಂದು ಆಯಸ್ಕಾಂತವನ್ನು ಬಳಸಲಾಗಿದೆ.
ಇದು ಸರ್ಕೀಟ್ ಡೈಗ್ರಾಮ್ ಆಗಿದೆ. |
01:11 | ಇದರ ಪರಿಣಾಮವನ್ನು ನಾವು 'ಪ್ಲಾಟ್ ವಿಂಡೋ' ದ ಮೇಲೆ ನೋಡೋಣ. |
01:15 | ಅಡ್ಡವಾದ ಒಂದು ಅಲೆಯು 'ಪ್ಲಾಟ್ ವಿಂಡೋ' ದ ಮೇಲೆ ಕಾಣಿಸಿಕೊಳ್ಳುತ್ತದೆ. ಒಂದು ಕಾಗದವನ್ನು ಸುತ್ತಿ ಅದನ್ನು ಸುರುಳಿಯೊಳಗೆ (coil) ಸೇರಿಸಿ. |
01:23 | ಆಯಸ್ಕಾಂತವನ್ನು ಸುತ್ತಿದ ಕಾಗದದಲ್ಲಿ ಹಾಕಿ ಮತ್ತು ಅದನ್ನು ಮೇಲೆ ಕೆಳಗೆ ಕದಲಿಸಿ. |
01:29 | 'ಇಂಡ್ಯೂಸ್ಡ್ ವೋಲ್ಟೇಜ್' ಕಂಡುಬರುವತನಕ ಈ ಕ್ರಿಯೆಯನ್ನು ಪುನರಾವರ್ತಿಸಿ. |
01:35 | 'ಪ್ಲಾಟ್ ವಿಂಡೋ' ದಲ್ಲಿ, 'Experiments' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
01:39 | 'Select Experiment' ಎಂಬ ಪಟ್ಟಿಯು ಕಾಣಿಸಿಕೊಳ್ಳುತ್ತದೆ. 'EM Induction' ನ ಮೇಲೆ ಕ್ಲಿಕ್ ಮಾಡಿ. |
01:46 | Electromagnetic Induction ಹಾಗೂ Schematic ಎಂಬ ಎರಡು ಹೊಸ ವಿಂಡೋಗಳು ಕಾಣಿಸಿಕೊಳ್ಳುತ್ತವೆ.
'Schematic' ವಿಂಡೋ, ಸರ್ಕೀಟ್ ಡೈಗ್ರಾಮ್ ಅನ್ನು ತೋರಿಸುತ್ತದೆ. |
01:56 | 'Electromagnetic Induction' ವಿಂಡೋದಲ್ಲಿ, 'Start Scanning' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. ಅಡ್ಡಲಾಗಿರುವ ಗೆರೆಯು ಒಂದು ತರಂಗವಾಗಿ ಬದಲಾಯಿಸುತ್ತದೆ. |
02:05 | ವೋಲ್ಟೇಜ್ ನ 'ಪೀರಿಯಾಡಿಕ್ ಸ್ಕ್ಯಾನಿಂಗ್' (periodic scanning) ಆಯಸ್ಕಾಂತದ ಚಲನೆಯೊಂದಿಗೆ ತಾಳೆಹೊಂದಿದಾಗ ಹೀಗೆ ಆಗುತ್ತದೆ. |
02:12 | ಚಲಿಸುವ ಆಯಸ್ಕಾಂತದಿಂದ ಕಾಯ್ಲ್ ನಲ್ಲಿ ವೋಲ್ಟೇಜ್ ಉಂಟಾಗಿದೆ ಎಂದು ಇದು ಸೂಚಿಸುತ್ತದೆ. |
02:18 | ಆಮೇಲೆ, ನಾನು ಎರಡು ಕಾಯ್ಲ್ ಗಳ 'ಮ್ಯೂಚುವಲ್ ಇಂಡಕ್ಶನ್' ಅನ್ನು ಮಾಡಿತೋರಿಸುವೆನು. |
02:23 | ಈ ಪ್ರಯೋಗದಲ್ಲಿ, A2 ಅನ್ನು SINE ಗೆ ಜೋಡಿಸಲಾಗಿದೆ. SINE ಅನ್ನು ಒಂದು ಕಾಯ್ಲ್ ನ (coil) ಮೂಲಕ ಗ್ರೌಂಡ್ ಗೆ (GND) ಜೋಡಿಸಲಾಗಿದೆ. |
02:31 | ಮತ್ತು, A1 ಅನ್ನು ಒಂದು ಕಾಯ್ಲ್ (coil) ನ ಮೂಲಕ ಗ್ರೌಂಡ್ (GND) ಗೆ ಜೋಡಿಸಲಾಗಿದೆ. ಇದು ಸರ್ಕೀಟ್ ಡೈಗ್ರಾಮ್ ಆಗಿದೆ. |
02:37 | ಇದರ ಪರಿಣಾಮವನ್ನು ನಾವು 'ಪ್ಲಾಟ್ ವಿಂಡೋ' ದ ಮೇಲೆ ನೋಡೋಣ. |
02:40 | A1ಮೇಲೆ ಕ್ಲಿಕ್ ಮಾಡಿ ಮತ್ತು CH1 ಗೆ ಎಳೆಯಿರಿ. A1 ಅನ್ನು CH1 ಗೆ ನಿಗದಿಪಡಿಸಲಾಗಿದೆ. |
02:47 | A2ಮೇಲೆ ಕ್ಲಿಕ್ ಮಾಡಿ ಮತ್ತು CH2 ಗೆ ಎಳೆಯಿರಿ. A2 ಅನ್ನು CH2 ಗೆ ನಿಗದಿಪಡಿಸಲಾಗಿದೆ. |
02:55 | ಅನ್ವಯಿಸಲಾದ ವೇವ್ ಫಾರ್ಮ್ ಹಾಗೂ ಪ್ರೇರಿತ ವೇವ್ ಫಾರ್ಮ್ ಗಳನ್ನು ವೀಕ್ಷಿಸಲು msec/div ಸ್ಲೈಡರ್ ಅನ್ನು ನಡೆದಾಡಿಸಿ. |
03:02 | ಬದಲಾಯಿಸುತ್ತಿರುವ ಅಯಸ್ಕಾಂತೀಯ ಕ್ಷೇತ್ರವು 'ಇಂಡ್ಯೂಸ್ಡ್ ವೋಲ್ಟೇಜ್' ಅನ್ನು ಉಂಟುಮಾಡುತ್ತದೆ. ಸೆಕೆಂಡರಿ ಕಾಯ್ಲ್ ನಲ್ಲಿ ನೀವು 'ಇಂಡ್ಯೂಸ್ಡ್ ವೋಲ್ಟೇಜ್' ಅನ್ನು ನೋಡದೇ ಇರಬಹುದು. |
03:12 | ಆಕ್ಸಿಸ್ ನ ಉದ್ದಕ್ಕೆ ಸುರುಳಿಗಳನ್ನು ಪರಸ್ಪರ ಹತ್ತಿರದಲ್ಲಿ ಇರಿಸಿ ಹಾಗೂ ಅಲ್ಲಿ ಸ್ವಲ್ಪ 'ಫೆರೊಮ್ಯಾಗ್ನೆಟಿಕ್' ವಸ್ತುವನ್ನು ಸೇರಿಸಿ. |
03:20 | 'ಸೆಕೆಂಡರೀ ಕಾಯ್ಲ್' ನಲ್ಲಿ ವೋಲ್ಟೇಜ್ ಅನ್ನು ಪ್ರೇರಿಸಲು, ನಾವು ಒಂದು ಸ್ಕ್ರೂ ಡ್ರೈವರನ್ನು ಸೇರಿಸಿದ್ದೇವೆ. |
03:26 | CH1 ಅನ್ನು ಕ್ಲಿಕ್ ಮಾಡಿ FIT ಗೆ ಎಳೆಯಿರಿ. CH2 ಅನ್ನು ಕ್ಲಿಕ್ ಮಾಡಿ FIT ಗೆ ಎಳೆಯಿರಿ. |
03:34 | A1 ಹಾಗೂ A2 ಗಳ ವೋಲ್ಟೇಜ್ ಮತ್ತು ಫ್ರಿಕ್ವೆನ್ಸೀಗಳು ಬಲಭಾಗದಲ್ಲಿ ಕಂಡುಬರುತ್ತವೆ.
A1 ಮತ್ತು A2 ಗಳ ವೋಲ್ಟೇಜ್ ಗಳಲ್ಲಿಯ ವ್ಯತ್ಯಾಸವು, ಸೆಕೆಂಡರಿ ಕಾಯ್ಲ್ ನಲ್ಲಿಯ ಇಂಡ್ಯೂಸ್ಡ್ ವೋಲ್ಟೇಜ್ ನ ಕಾರಣದಿಂದ ಆಗಿದೆ. |
03:47 | ಆಮೇಲೆ, ನಾವು 'DC ಮೋಟರ್' ಹಾಗೂ ಕಾಯ್ಲ್ (coils) ಗಳನ್ನು ಬಳಸಿ, ತಿರುಗುತ್ತಿರುವ ಆಯಸ್ಕಾಂತದಿಂದ ಪ್ರೇರಿತ (ಇಂಡ್ಯೂಸ್ಡ್) ವೋಲ್ಟೇಜ್ ಅನ್ನು ಮಾಡಿತೋರಿಸುವೆವು. |
03:56 | ಈ ಪ್ರಯೋಗದಲ್ಲಿ,
A1 ಅನ್ನು ಒಂದು ಕಾಯ್ಲ್ ನ ಮೂಲಕ ಗ್ರೌಂಡ್ (GND) ಗೆ ಜೋಡಿಸಲಾಗಿದೆ. SQR2 ಅನ್ನು ಒಂದು 'DC ಮೋಟರ್' ನ ಮೂಲಕ ಗ್ರೌಂಡ್ (GND) ಗೆ ಜೋಡಿಸಲಾಗಿದೆ. |
04:06 | 10 ಮಿಲಿಮೀಟರ್ ವ್ಯಾಸ ಹಾಗೂ 10 ಮಿಲಿಮೀಟರ್ ಉದ್ದದ ಒಂದು ಆಯಸ್ಕಾಂತವನ್ನು 'DC ಮೋಟರ್' ನ ಮೇಲೆ ಅಳವಡಿಸಲಾಗಿದೆ.
A2 ಅನ್ನು ಒಂದು ಕಾಯ್ಲ್ ನ ಮೂಲಕ ಗ್ರೌಂಡ್ (GND) ಗೆ ಜೋಡಿಸಲಾಗಿದೆ. |
04:18 | ಇದು ಸರ್ಕೀಟ್ ಡೈಗ್ರಾಮ್ ಆಗಿದೆ. |
04:20 | ಇದರ ಪರಿಣಾಮವನ್ನು ನಾವು 'ಪ್ಲಾಟ್ ವಿಂಡೋ'ದ ಮೇಲೆ ನೋಡೋಣ. |
04:23 | 'Setting Square waves' ನ ಅಡಿಯಲ್ಲಿ, ಫ್ರಿಕ್ವೆನ್ಸಿ ವ್ಯಾಲ್ಯೂಅನ್ನು '100Hz' ಗೆ ಸೆಟ್ ಮಾಡಿ. 'SQR2' ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
04:34 | A1 ಮೇಲೆ ಕ್ಲಿಕ್ ಮಾಡಿ CH1 ಗೆ ಎಳೆಯಿರಿ. A1 ಅನ್ನು CH1 ಗೆ ನಿಗದಿಪಡಿಸಲಾಗಿದೆ. |
04:41 | A2ಮೇಲೆ ಕ್ಲಿಕ್ ಮಾಡಿ CH2 ಗೆ ಎಳೆಯಿರಿ. A2 ಅನ್ನು CH2 ಗೆ ನಿಗದಿಪಡಿಸಲಾಗಿದೆ. |
04:47 | ವೇವ್-ಫಾರ್ಮ್ ಅನ್ನು ಪಡೆಯಲು 'msec/div' ಸ್ಲೈಡರ್ ಅನ್ನು ಕದಲಿಸಿ.
ವೇವ್-ಫಾರ್ಮ್ ಅನ್ನು ಸರಿಹೊಂದಿಸಲು 'volt/div' ಸ್ಲೈಡರ್ ಅನ್ನು ಕದಲಿಸಿ. |
04:57 | CH1 ಮೇಲೆ ಕ್ಲಿಕ್ ಮಾಡಿ ಮತ್ತು FIT ಗೆ ಎಳೆಯಿರಿ.
CH2 ಮೇಲೆ ಕ್ಲಿಕ್ ಮಾಡಿ ಮತ್ತು FIT ಗೆ ಎಳೆಯಿರಿ. |
05:05 | ಬಲಭಾಗದಲ್ಲಿ, ವೋಲ್ಟೇಜ್ ಹಾಗೂ ಫ್ರಿಕ್ವೆನ್ಸಿಗಳನ್ನು ನೀವು ನೋಡಬಹುದು. ದಯವಿಟ್ಟು ಗಮನಿಸಿ. ಎರಡು ಅಲ್ಟರ್ನೇಟಿಂಗ್ ವೇವ್ ಫಾರ್ಮ್ ಗಳ ವೋಲ್ಟೇಜ್ ಹಾಗೂ ಫ್ರಿಕ್ವೆನ್ಸಿ ವ್ಯಾಲ್ಯೂಗಳು ಬಹುಮಟ್ಟಿಗೆ ಒಂದೇ ಆಗಿವೆ. |
05:16 | ಏಕೆಂದರೆ, ಆಯಸ್ಕಾಂತವು ತಿರುಗಿದಂತೆ ಕಾಯ್ಲ್ ನ ಸುತ್ತಮುತ್ತಲಿನ ಕಾಂತಕ್ಷೇತ್ರವು ನಿರಂತರವಾಗಿ ಧ್ರುವಗಳ ನಡುವೆ ಬದಲಾಯಿಸುತ್ತದೆ. |
05:24 | ಆಯಸ್ಕಾಂತದ ತಿರುಗುವಿಕೆಯು ಕಾಯ್ಲ್ ನಲ್ಲಿ 'ಅಲ್ಟರ್ನೇಟಿಂಗ್ ಇಂಡ್ಯೂಸ್ಡ್ emf' ಅನ್ನು ಉಂಟುಮಾಡುತ್ತದೆ. |
05:31 | ಆಮೇಲೆ, ನಾವು ಡ್ರಿವನ್ ಪೆಂಡೂಲಮ್ ನೊಂದಿಗೆ ಪ್ರಯೋಗವನ್ನು ಮಾಡೋಣ. |
05:34 | ಒಂದು ಲೋಲಕವು ಪ್ರೇರಿತ ಕಾಂತಕ್ಷೇತ್ರದೊಂದಿಗೆ ಓಲಾಡುತ್ತಿದ್ದರೆ, ಅದನ್ನು 'ಡ್ರಿವನ್ ಪೆಂಡೂಲಮ್' (driven pendulum) ಎಂದು ಹೇಳಲಾಗುತ್ತದೆ. |
05:41 | ಈ ಪ್ರಯೋಗದಲ್ಲಿ, ಒಂದು ಕಾಯ್ಲ್ ಅನ್ನು ಬಳಸಿ SQR1 ಅನ್ನು ಗ್ರೌಂಡ್ ಗೆ (GND) ಜೋಡಿಸಲಾಗಿದೆ. |
05:47 | ಕಾಗದದ ಪಟ್ಟಿಯ ಲೋಲಕದ ಜೊತೆಗೆ, ಬಟನ್ ಮ್ಯಾಗ್ನೆಟ್ ಗಳನ್ನು ಕಾಯ್ಲ್ ನ ಎದುರುಗಡೆ ನೇತಾಡಿಸಲಾಗಿದೆ. ಇದು ಸರ್ಕೀಟ್ ಡೈಗ್ರಾಮ್ ಆಗಿದೆ. |
05:58 | ಇದರ ಪರಿಣಾಮವನ್ನು ನಾವು 'ಪ್ಲಾಟ್ ವಿಂಡೋ' ದ ಮೇಲೆ ನೋಡೋಣ. |
06:01 | SQR1 ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
06:05 | 'Experiments' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. 'Select Experiment' ಎಂಬ ಪಟ್ಟಿಯು ಕಾಣಿಸಿಕೊಳ್ಳುತ್ತದೆ. 'Driven Pendulum' ಅನ್ನು ಆಯ್ಕೆಮಾಡಿ. |
06:15 | 'Driven Pendulum' ನ 'Schematic' ಹಾಗೂ 'EYES Junior: Driven Pendulum' ಎಂಬ ಎರಡು ವಿಂಡೋಗಳು ಕಾಣಿಸಿಕೊಳ್ಳುತ್ತವೆ. |
06:23 | EYES Junior: Driven Pendulum ವಿಂಡೋದಲ್ಲಿ, ಸ್ಲೈಡರನ್ನು ಎಳೆಯಿರಿ. ನಾವು ಸ್ಲೈಡರನ್ನು ಎಳೆದಂತೆಲ್ಲ ಲೋಲಕವು ಓಲಾಡುತ್ತದೆ. |
06:33 | 2.6 Hz ನಿಂದ 2.9 Hz ಗಳ ನಡುವೆ ಲೋಲಕವು ಗರಿಷ್ಠ 'ಆಂಪ್ಲಿಟ್ಯೂಡ್' ನೊಂದಿಗೆ (amplitude) ಓಲಾಡುತ್ತದೆ.
ಏಕೆಂದರೆ, ಅದರ 'ರೆಸೊನಂಟ್ ಫ್ರಿಕ್ವೆನ್ಸೀ' ಮತ್ತು 'ನ್ಯಾಚುರಲ್ ಫ್ರಿಕ್ವೆನ್ಸೀ' ಗಳೆರಡೂ ಒಂದೇ ಆಗಿವೆ. |
06:47 | ಸಂಕ್ಷಿಪ್ತವಾಗಿ, |
06:49 | ಈ ಟ್ಯುಟೋರಿಯಲ್ ನಲ್ಲಿ, ನಾವು:
ನಮ್ಮ ಪ್ರಯೋಗಗಳಿಗಾಗಿ ಸರ್ಕೀಟ್ ಡೈಗ್ರಾಮ್ ಗಳನ್ನು ತೋರಿಸುವುದನ್ನು ಕಲಿತಿದ್ದೇವೆ. |
07:09 | ಒಂದು ಅಸೈನ್ಮೆಂಟ್ –
|
07:22 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
07:30 | ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
07:37 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
07:44 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. .
ವಂದನೆಗಳು. |