Jmol-Application/C4/Symmetry-and-Point-Groups/Kannada

From Script | Spoken-Tutorial
Revision as of 11:48, 3 October 2017 by Sandhya.np14 (Talk | contribs)

Jump to: navigation, search
Time
Narration
00:01 Jmol ನಲ್ಲಿ Symmetry and Point Groups ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:08 ಒಂದು ಅಣುವಿನಲ್ಲಿಯ ಪರಮಾಣುಗಳ ಮೂಲಕ ಒಂದು ಗೆರೆಯನ್ನು, ಅರ್ಥಾತ್ ಆಕ್ಸಿಸ್ ಅನ್ನು (axis) ಎಳೆಯಲು,
00:12 ಈ ಆಕ್ಸಿಸ್ ನ ಉದ್ದಕ್ಕೂ ಅಣುವನ್ನು ಸ್ಪಿನ್ ಮಾಡಲು ಮತ್ತು ತಿರುಗಿಸಲು,
00:17 ಒಂದು ಅಣುವಿನಲ್ಲಿಯ ಪರಮಾಣುಗಳ ಮೂಲಕ ಒಂದು ಸಮತಲವನ್ನು ರಚಿಸಲು
00:21 ಮತ್ತು 'point group' (ಪಾಯಿಂಟ್ ಗ್ರುಪ್) ವರ್ಗೀಕರಣವನ್ನು ಮಾಡಿತೋರಿಸಲು ಕಲಿಯುವೆವು.
00:25 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ ಪದವಿಪೂರ್ವ ಮಟ್ಟದ ರಸಾಯನಶಾಸ್ತ್ರದ ಪರಿಚಯವಿರಬೇಕು ಹಾಗೂ ಜೆ-ಮೊಲ್ ವಿಂಡೋದ ಆಪರೇಶನ್ ಗಳನ್ನು ತಿಳಿದಿರಬೇಕು.
00:35 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ನೋಡಿ.
00:39 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
00:42 Ubuntu Operating System ಆವೃತ್ತಿ 14.04,
00:46 Jmol ಆವೃತ್ತಿ 12.2.32,
00:50 Java ಆವೃತ್ತಿ 7 ಮತ್ತು * Mozilla Firefox ಬ್ರೌಸರ್ 35.0. ಇವುಗಳನ್ನು ಬಳಸುತ್ತಿದ್ದೇನೆ.
00:57 ಸಾಮಾನ್ಯವಾಗಿ, ಅಣುಗಳಲ್ಲಿ ಸಿಮೆಟ್ರಿಯನ್ನು (ಸಮರೂಪತೆ)-
01:03 Axis of symmetry,
01:05 Plane of symmetry,
01:06 Center of symmetry ಗಳಂತಹ ಸಿಮೆಟ್ರಿ ಎಲಿಮೆಂಟ್ ಗಳ ದೃಷ್ಟಿಯಿಂದ ವಿವರಿಸಲಾಗುತ್ತದೆ.
01:09 ಒಂದು ಅಣುವಿನಲ್ಲಿ ಈ ಸಿಮೆಟ್ರಿ ಎಲಿಮೆಂಟ್ ಗಳನ್ನು ಪ್ರದರ್ಶಿಸಲು, ನಾವು 'ಜೆ-ಮೊಲ್' ಅನ್ನು (Jmol) ಬಳಸುವೆವು.
01:14 ಮಿಥೇನ್ ನ ಒಂದು ಮಾಡೆಲ್ ನಲ್ಲಿ, ಪರಮಾಣುಗಳ ಮೂಲಕ 'C3 ರೊಟೇಶನಲ್ ಆಕ್ಸಿಸ್' ಅನ್ನು ಎಳೆಯುವುದರೊಂದಿಗೆ ನಾವು ಈ ಟ್ಯುಟೋರಿಯಲ್ ಅನ್ನು ಆರಂಭಿಸೋಣ.
01:22 ಈಗಾಗಲೇ ನಾನು ‘ಜೆ-ಮೊಲ್’ ವಿಂಡೋಅನ್ನು ತೆರೆದಿದ್ದೇನೆ.
01:25 ಪ್ಯಾನೆಲ್ ನ ಮೇಲೆ, 'ಮಿಥೇನ್' ನ 'ball and stick' (ಬಾಲ್ ಆಂಡ್ ಸ್ಟಿಕ್) ಮಾಡೆಲ್ ಅನ್ನು ಪಡೆಯಲು 'ಮಾಡೆಲ್ ಕಿಟ್' ಮೆನ್ಯುದ ಮೇಲೆ ಕ್ಲಿಕ್ ಮಾಡಿ.
01:31 ಟೂಲ್ ಬಾರ್ ನಲ್ಲಿಯ 'Display' ಮೆನ್ಯುವನ್ನು ಬಳಸಿ, 'ಮಿಥೇನ್' ಅಣುವಿನಲ್ಲಿಯ ಪರಮಾಣುಗಳನ್ನು ಲೇಬಲ್ ಮಾಡಿ.
01:37 'Display' ದ ಮೇಲೆ ಕ್ಲಿಕ್ ಮಾಡಿ. ಕೆಳಗೆ 'Label' ಗೆ ಸ್ಕ್ರೋಲ್ ಮಾಡಿ ಮತ್ತು ' Number' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
01:43 'ಮಿಥೇನ್' ಅಣುವಿನಲ್ಲಿಯ ಎಲ್ಲ ಪರಮಾಣುಗಳು ಈಗ ಸಂಖ್ಯೆಯನ್ನು ಹೊಂದಿವೆ.
01:47 ಪರಮಾಣುಗಳ ಮೂಲಕ ಗೆರೆಗಳನ್ನು ಮತ್ತು ಸಮತಲಗಳನ್ನು ರಚಿಸಲು, ನಮಗೆ 'ಕನ್ಸೋಲ್' ನಲ್ಲಿ ಕಮಾಂಡ್ ಗಳನ್ನು ಬರೆಯಬೇಕಾಗಿದೆ.
01:53 'ಕನ್ಸೋಲ್' ಅನ್ನು ತೆರೆಯಲು, 'File' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
01:57 ಕೆಳಗೆ, 'Console' ಗೆ ಸ್ಕ್ರೋಲ್ ಮಾಡಿ, ಅದರ ಮೇಲೆ ಕ್ಲಿಕ್ ಮಾಡಿ.
02:01 ಸ್ಕ್ರೀನ್ ನ ಮೇಲೆ 'Console' ವಿಂಡೋ ತೆರೆದುಕೊಳ್ಳುತ್ತದೆ.
02:04 ಗೆರೆಗಳನ್ನು ಮತ್ತು ಸಮತಲಗಳನ್ನು ರಚಿಸಲು, ನಾವು ಕಮಾಂಡ್ ಲೈನ್ ನಲ್ಲಿ 'draw' ಕೀವರ್ಡ್ ಅನ್ನು ಬಳಸುವೆವು.
02:10 'ಜೆ-ಮೊಲ್ ಸ್ಕ್ರಿಪ್ಟ್ ಕಮಾಂಡ್' ಗಳ ಬಗ್ಗೆ ವಿವರವಾದ ಮಾಹಿತಿಯು ಈ ವೆಬ್ಸೈಟ್ ನಲ್ಲಿ ಲಭ್ಯವಿರುತ್ತದೆ.
02:15 ಯಾವುದೇ ವೆಬ್-ಬ್ರೌಸರ್ ನಲ್ಲಿ ವೆಬ್ಸೈಟ್ ಅನ್ನು ತೆರೆಯಿರಿ.
02:19 ಜೆ-ಮೊಲ್ ನಲ್ಲಿ ಸ್ಕ್ರಿಪ್ಟ್ ಕಮಾಂಡ್ ಗಳನ್ನು ಬರೆಯಲು ಬಳಸಲಾಗುವ ಕೀವರ್ಡ್ ಗಳ ಪಟ್ಟಿಯೊಂದಿಗೆ ಒಂದು ವೆಬ್-ಪೇಜ್ ತೆರೆದುಕೊಳ್ಳುತ್ತದೆ.
02:26 ಕೆಳಗೆ ಸ್ಕ್ರೋಲ್ ಮಾಡಿ ಹಾಗೂ ಪಟ್ಟಿಯಲ್ಲಿ 'draw' ಎಂಬ ಶಬ್ದದ ಮೇಲೆ ಕ್ಲಿಕ್ ಮಾಡಿ.
02:31 'draw' ಕೀವರ್ಡ್ ನ ವಿವರಗಳೊಂದಿಗೆ ಒಂದು 'page' ತೆರೆದುಕೊಳ್ಳುತ್ತದೆ.
02:36 ಪೇಜ್ ನ ಮೇಲ್ತುದಿಯಲ್ಲಿ 'draw' ಕಮಾಂಡ್ ಗಾಗಿ ಸಿಂಟ್ಯಾಕ್ಸ್ ಅನ್ನು ಕೊಡಲಾಗಿದೆ.
02:42 ಇದರ ನಂತರ ಕೀವರ್ಡ್ ನ ಬಳಕೆಯ ಬಗ್ಗೆ ಮಾಹಿತಿಯು ಇರುತ್ತದೆ.
02:47 ನಾವು ಈಗ 'Jmol ಪ್ಯಾನೆಲ್' ಗೆ ಹಿಂದಿರುಗೋಣ.
02:51 ಕನ್ಸೋಲ್ ವಿಂಡೋಅನ್ನು ದೊಡ್ಡದನ್ನಾಗಿಸಲು ನಾನು 'Kmag' ಸ್ಕ್ರೀನ್ ಮ್ಯಾಗ್ನಿಫೈರ್ ಅನ್ನು ಬಳಸುತ್ತಿದ್ದೇನೆ.
02:55 'C3 ರೊಟೇಶನಲ್ ಆಕ್ಸಿಸ್' ಅನ್ನು ಪ್ರತಿನಿಧಿಸುವ ಒಂದು ಗೆರೆಯನ್ನು ಎಳೆಯಲು,
02:59 ಕನ್ಸೋಲ್ ನಲ್ಲಿ, ಡಾಲರ್ ಪ್ರಾಂಪ್ಟ್ ಇರುವಲ್ಲಿ ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ.
03:04 'ಕಮಾಂಡ್ ಲೈನ್', “draw” ಎಂಬ ಶಬ್ದದೊಂದಿಗೆ ಆರಂಭವಾಗುತ್ತದೆ. ನಂತರ 'ಆಬ್ಜೆಕ್ಟ್ ಐ ಡಿ' (object ID) ಇರುತ್ತದೆ.
03:10 ಕಮಾಂಡ್ ಲೈನ್ ನಲ್ಲಿ ಸಂಖ್ಯೆ '250' ಗೆರೆಯ ಉದ್ದವನ್ನು ಸೂಚಿಸುತ್ತದೆ.
03:15 ಇದರ ನಂತರ, ಗೆರೆ ಇರುವ ಸ್ಥಾನವನ್ನು ಹೇಳಲಾಗಿದೆ.
03:18 ಬ್ರಾಕೆಟ್ ಗಳಲ್ಲಿ, ಆಟಂ ನಂಬರ್ ಇಕ್ವಲ್ ಟು 1 ಮತ್ತು ಆಟಂ ನಂಬರ್ ಇಕ್ವಲ್ ಟು 2. 'Enter' ಅನ್ನು ಒತ್ತಿ.
03:26 ಪ್ಯಾನೆಲ್ ಅನ್ನು ಗಮನಿಸಿ.
03:27 'ಮಿಥೇನ್'ನ ಮಾಡೆಲ್ ನ ಮೇಲೆ, 1 ಹಾಗೂ 2 ಸಂಖ್ಯೆಯ ಪರಮಾಣು ಗಳ ಮೂಲಕ ಹಾಯ್ದುಹೋಗುವ ಒಂದು ಗೆರೆಯನ್ನು ಎಳೆಯಲಾಗಿದೆ.
03:33 ಈಗ, ಈ ಗೆರೆಯು ರೊಟೇಶನ್ ಗಾಗಿ ಒಂದು ಆಕ್ಸಿಸ್ ನಂತೆ ವರ್ತಿಸಬಹುದು.
03:37 ಕೊಟ್ಟಿರುವ ಮಾಡೆಲ್ ನ ಮೇಲೆ ನಾವು ಒಂದಕ್ಕಿಂತ ಹೆಚ್ಚು ಗೆರೆಗಳನ್ನು ಎಳೆಯಬಹುದು.
03:41 'C2 ರೊಟೇಶನಲ್ ಆಕ್ಸಿಸ್' ಅನ್ನು ರಚಿಸಲು, 'ಕನ್ಸೋಲ್' ನಲ್ಲಿ ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ.
03:47 ಈ ಕಮಾಂಡ್ ನಲ್ಲಿ, ಕರ್ಲೀ ಬ್ರಾಕೆಟ್ ಗಳಲ್ಲಿರುವ ಸಂಖ್ಯೆಗಳು ಈ ಗೆರೆಗಾಗಿ ಇರುವ ಕಾರ್ಟಿಸಿಯನ್ ಕೋ-ಆರ್ಡಿನೇಟ್ ಗಳನ್ನು ಸೂಚಿಸುತ್ತವೆ.
03:54 ನಂತರ, ಗೆರೆಯ ಬಣ್ಣವನ್ನು ಸೂಚಿಸಲು ಒಂದು ಕಮಾಂಡ್ ಇರುತ್ತದೆ. ‘Enter’ ಅನ್ನು ಒತ್ತಿ.
03:59 ಈಗ ನಾವು ಪ್ಯಾನೆಲ್ ನ ಮೇಲೆ, C2 ಮತ್ತು C3 ರೊಟೇಶನಲ್ ಆಕ್ಸಿಸ್ ಗಳೊಂದಿಗೆ ಮಿಥೇನ್ ಅನ್ನು ಪಡೆದಿದ್ದೇವೆ.
04:05 'line 1' ನ, ಅರ್ಥಾತ್ 'C3 ಆಕ್ಸಿಸ್' ನೊಂದಿಗೆ ರೊಟೇಟ್ ಮಾಡಲು (ತಿರುಗಿಸಲು), ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ:
04:12 “rotate $line1 60” (ರೊಟೇಟ್ ಸ್ಪೇಸ್ ಡಾಲರ್ ಲೈನ್ ಒನ್ ಸ್ಪೇಸ್ 60).
04:18 ಸಂಖ್ಯೆ 60, ತಿರುಗುವಿಕೆಯ ಡಿಗ್ರೀಯನ್ನು ಸೂಚಿಸುತ್ತದೆ. ‘Enter’ ಅನ್ನು ಒತ್ತಿ.
04:24 'line1' ನೊಂದಿಗೆ ರೊಟೇಶನ್ ಅನ್ನು ಗಮನಿಸಿ.
04:27 'line1' ನೊಂದಿಗೆ ಅಣುವನ್ನು ಸ್ಪಿನ್ ಮಾಡಲು, ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ:
04:32 “spin $line1 180 60” (ಸ್ಪಿನ್ ಸ್ಪೇಸ್ ಡಾಲರ್ ಲೈನ್1 ಸ್ಪೇಸ್ 180 ಸ್ಪೇಸ್ 60).
04:39 ಸಂಖ್ಯೆ 180, ತಿರುಗುವಿಕೆಯ ಡಿಗ್ರೀಯನ್ನು ಸೂಚಿಸುತ್ತದೆ ಹಾಗೂ 60 ತಿರುಗುವಿಕೆಯ ವೇಗವನ್ನು ಸೂಚಿಸುತ್ತದೆ. ‘Enter’ ಅನ್ನು ಒತ್ತಿ.
04:48 ಪ್ಯಾನೆಲ್ ನ ಮೇಲೆ, 'ಮಿಥೇನ್' ನ ಮಾಡೆಲ್, 'line1' ಅರ್ಥಾತ್ 'C3 ಆಕ್ಸಿಸ್' ನೊಂದಿಗೆ ಸ್ಪಿನ್ ಆಗುವುದನ್ನು ನಾವು ನೋಡುತ್ತೇವೆ.
04:55 ಒಂದು ಅಸೈನ್ಮೆಂಟ್ -
04:56 'ಇಥೇನ್' ನ ಒಂದು ಮಾಡೆಲ್ ನಲ್ಲಿ, 'C3 axis of symmetry' ಯನ್ನು ಸೂಚಿಸುವ ಒಂದು ಗೆರೆಯನ್ನು ಎಳೆಯಿರಿ
05:02 ಮತ್ತು ಮಾಡೆಲ್ ಅನ್ನು 'C3 axis' ನೊಂದಿಗೆ ಸ್ಪಿನ್ ಮಾಡಿ.
05:06 ಜೆ-ಮೊಲ್ ಪ್ಯಾನೆಲ್ ಗೆ ಹಿಂದಿರುಗಿ.
05:08 ಒಂದು ಅಣುವಿನಲ್ಲಿ, ಪರಮಾಣುಗಳ ಸಮೂಹದ ಮೂಲಕ ಹಾಯ್ದುಹೋಗುವ ಸಮತಲಗಳನ್ನು ಸಹ ನಾವು ರಚಿಸಬಹುದು.
05:12 ಇದಕ್ಕಾಗಿ, ಮೊದಲು, ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡುವುದರ ಮೂಲಕ 'ಮಿಥೇನ್' ಮಾಡೆಲ್ ನ ಮೇಲಿನ ಗೆರೆಗಳನ್ನು ಡಿಲೀಟ್ ಮಾಡಿ.

“draw off ” (ಡ್ರಾ ಸ್ಪೇಸ್ ಆಫ್). ‘Enter’ ಅನ್ನು ಒತ್ತಿ.

05:24 ಮಿಥೇನ್ ಅಣುವಿನ 1, 2 ಹಾಗೂ 3 ಪರಮಾಣು ಗಳ ಮೂಲಕ ಹಾಯ್ದುಹೋಗುವ ಪ್ರತಿಫಲನದ ಸಮತಲವನ್ನು (reflection plane) ರಚಿಸಲು,
05:31 ಕನ್ಸೋಲ್ ನ ಮೇಲೆ ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ.
05:35 ಕಮಾಂಡ್ ನಲ್ಲಿಯ ಸಂಖ್ಯೆ 300, ಪ್ಲೇನ್ ನ ಅಳತೆಯನ್ನು ಸೂಚಿಸುತ್ತದೆ. ‘Enter’ ಅನ್ನು ಒತ್ತಿ.
05:41 ಮಿಥೇನ್ ಅಣುವಿನಲ್ಲಿ, ರಿಫ್ಲೆಕ್ಶನ್ ಪ್ಲೇನ್, 1, 2 ಹಾಗೂ 3 ಪರಮಾಣು ಗಳ ಮೂಲಕ ಹಾಯ್ದುಹೋಗುವುದನ್ನು ಗಮನಿಸಿ.
05:49 1, 4 ಹಾಗೂ 5 ಪರಮಾಣು ಗಳ ಮೂಲಕ ಎರಡನೆಯ ರಿಫ್ಲೆಕ್ಶನ್ ಪ್ಲೇನ್ ಅನ್ನು ರಚಿಸಲು:
05:55 ಕನ್ಸೋಲ್ ನಲ್ಲಿ, ಅಪ್-ಆರೋ ಕೀಯನ್ನು ಒತ್ತಿ ಮತ್ತು ಕಮಾಂಡ್ ಅನ್ನು ಹೀಗೆ ಎಡಿಟ್ ಮಾಡಿ.
06:01 'plane1' ಅನ್ನು 'plane2' ಎಂದು, 'atomno2' ಅನ್ನು 4 ಎಂದು ಹಾಗೂ 'atomno3' ಯನ್ನು 5 ಎಂದು ಎಡಿಟ್ ಮಾಡಿ.
06:12 ಅಲ್ಲದೇ, ಪ್ಲೇನ್ ನ ಬಣ್ಣವನ್ನು ಬದಲಾಯಿಸಲು, ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ:
06:17 ';color $plane2 blue' (ಸೆಮಿಕೋಲನ್ ಕಲರ್ ಸ್ಪೇಸ್ ಡಾಲರ್ ಪ್ಲೇನ್2 ಸ್ಪೇಸ್ ಬ್ಲೂ). ‘Enter’ ಅನ್ನು ಒತ್ತಿ.
06:24 ಪ್ಯಾನೆಲ್ ನ ಮೇಲೆ, ನಾವು 'ಮಿಥೇನ್' ಅಣುವಿನಲ್ಲಿ ಎರಡು ರಿಫ್ಲೆಕ್ಶನ್ ಪ್ಲೇನ್ ಗಳನ್ನು ನೋಡುತ್ತೇವೆ.
06:29 ಜೆ-ಮೊಲ್ ಅನ್ನು ಬಳಸಿ, 'ಮಿಥೇನ್' ಗಾಗಿ 'point group' ವರ್ಗೀಕರಣವನ್ನು ಸಹ ಈ ಕೆಳಗಿನಂತೆ ನಾವು ತೋರಿಸಬಹುದು.
06:36 ಪ್ಯಾನೆಲ್ ನ ಮೇಲೆ, ಮಿಥೇನ್ ಅಣುವಿನ ಮೇಲೆ ರಚಿಸಲಾದ ಪ್ಲೇನ್ ಗಳನ್ನು ತೆಗೆದುಹಾಕೋಣ.
06:41 ಕನ್ಸೋಲ್ ನಲ್ಲಿ, ಹೀಗೆ ಟೈಪ್ ಮಾಡಿ: "draw off" (ಡ್ರಾ ಸ್ಪೇಸ್ ಆಫ್). ‘Enter’ ಅನ್ನು ಒತ್ತಿ.
06:47 ಮಿಥೇನ್ ಗಾಗಿ ಸಾಧ್ಯವಿರುವ ಎಲ್ಲ ಸಿಮೆಟ್ರೀ ಎಲಿಮೆಂಟ್ ಗಳನ್ನು ಪ್ರದರ್ಶಿಸಲು, ಕನ್ಸೋಲ್ ನಲ್ಲಿ ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ.
06:54 'draw pointgroup' (ಡ್ರಾ ಸ್ಪೇಸ್ ಪಾಯಿಂಟ್ ಗ್ರುಪ್). ‘Enter’ ಅನ್ನು ಒತ್ತಿ.
06:59 'ಮಿಥೇನ್' ನ ಸಿಮೆಟ್ರೀ ಎಲಿಮೆಂಟ್ ಗಳನ್ನು, ಪ್ಯಾನೆಲ್ ನ ಮೇಲೆ ತೋರಿಸಿರುವುದನ್ನು ನಾವು ನೋಡುತ್ತೇವೆ.
07:04 'ಮಿಥೇನ್' ಗಾಗಿ ಪಾಯಿಂಟ್-ಗ್ರುಪ್ ವರ್ಗೀಕರಣವನ್ನು ಕಂಡುಹಿಡಿಯಲು, ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ:

'calculate pointgroup' (ಕ್ಯಾಲ್ಕ್ಯುಲೇಟ್ ಸ್ಪೇಸ್ ಪಾಯಿಂಟ್ ಗ್ರುಪ್). ‘Enter’ ಅನ್ನು ಒತ್ತಿ.

07:14 ಮಿಥೇನ್ ಅಣುವಿನ ಪಾಯಿಂಟ್-ಗ್ರುಪ್ ಆಗಿರುವ 'Td' ಯನ್ನು ಕನ್ಸೋಲ್ ನ ಮೇಲೆ ತೋರಿಸಲಾಗಿದೆ.
07:20 ಪಾಯಿಂಟ್ ಗ್ರುಪ್ ಅನ್ನು ಮಾಡಿತೋರಿಸಲು, 'allene' ಮತ್ತೊಂದು ಉತ್ತಮ ಉದಾಹರಣೆಯಾಗಿದೆ.
07:25 ಪ್ಯಾನೆಲ್ ನ ಮೇಲೆ, 'ಮಾಡೆಲ್ ಕಿಟ್' ಮೆನ್ಯುವನ್ನು ಬಳಸಿ ನಾವು 'ಅಲೀನ್' ನ ಸ್ಟ್ರಕ್ಚರ್ ಅನ್ನು ರಚಿಸಬಹುದು ಅಥವಾ ಇದನ್ನು 'ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್' ನಿಂದ ಡೌನ್ಲೋಡ್ ಸಹ ಮಾಡಬಹುದು.
07:37 ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿದ್ದರೆ - 'File' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. ಕೆಳಗೆ, 'Get Mol' ಎಂಬಲ್ಲಿಗೆ ಸ್ಕ್ರೋಲ್ ಮಾಡಿ ಮತ್ತು ಟೆಕ್ಸ್ಟ್-ಬಾಕ್ಸ್ ನಲ್ಲಿ “allene” ಎಂದು ಟೈಪ್ ಮಾಡಿ. 'OK' ಯ ಮೇಲೆ ಕ್ಲಿಕ್ ಮಾಡಿ.
07:48 'ಅಲೀನ್' ಗಾಗಿ, ಸಾಧ್ಯವಿರುವ ಎಲ್ಲ ಸಿಮೆಟ್ರೀ ಎಲಿಮೆಂಟ್ ಗಳನ್ನು ಪ್ರದರ್ಶಿಸಲು:
07:52 ಕನ್ಸೋಲ್ ನ ಮೇಲೆ, ಡಾಲರ್ ಪ್ರಾಂಪ್ಟ್ ಇರುವಲ್ಲಿ,
07:59 'draw pointgroup' ಎಂಬ ಕಮಾಂಡ್ ನಿಮಗೆ ಸಿಗುವವರೆಗೆ ಅಪ್-ಆರೋ ಕೀಯನ್ನು ಒತ್ತಿ. ‘Enter’ ಅನ್ನು ಒತ್ತಿ.
08:02 ಪ್ಯಾನೆಲ್ ಅನ್ನು ಗಮನಿಸಿ. ನಾವು 'ಅಲೀನ್' (allene) ಗಾಗಿ ಸಾಧ್ಯವಿರುವ ಎಲ್ಲ ಸಿಮೆಟ್ರೀ ಎಲಿಮೆಂಟ್ ಗಳನ್ನು ನೋಡುತ್ತೇವೆ.
08:09 'ಅಲೀನ್' ಗಾಗಿ ಪಾಯಿಂಟ್-ಗ್ರುಪ್ ವರ್ಗೀಕರಣವನ್ನು ಪಡೆಯಲು -
08:12 ಮತ್ತೊಮ್ಮೆ, ಕನ್ಸೋಲ್ ನ ಮೇಲೆ 'calculate pointgroup' ಎಂಬ ಕಮಾಂಡ್ ನಿಮಗೆ ಸಿಗುವವರೆಗೆ ಅಪ್-ಆರೋ ಕೀಯನ್ನು ಒತ್ತಿ. ‘Enter’ ಅನ್ನು ಒತ್ತಿ.
08:21 'ಅಲೀನ್' ನ 'ಪಾಯಿಂಟ್-ಗ್ರುಪ್ ಕ್ಲಾಸಿಫಿಕೇಶನ್', ಅರ್ಥಾತ್ 'D2d' ಯನ್ನು 'ಕನ್ಸೋಲ್' ನ ಮೇಲೆ ತೋರಿಸಲಾಗಿದೆ.
08:28 ಹೀಗೆಯೇ, ನಿಮಗೆ ಇಷ್ಟವಾದ ಅಣುಗಳನ್ನು ನೀವು ಡೌನ್ಲೋಡ್ ಮಾಡಬಹುದು ಮತ್ತು ಅವುಗಳ 'ಪಾಯಿಂಟ್-ಗ್ರುಪ್'ಅನ್ನು ಕಂಡುಹಿಡಿಯಬಹುದು.
08:34 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ:
08:38 * 'ಮಿಥೇನ್' ಅಣುವಿನಲ್ಲಿ ಪರಮಾಣುಗಳ ಮೂಲಕ ಗೆರೆಗಳನ್ನು, ಅರ್ಥಾತ್ C2 ಮತ್ತು C3 ರೊಟೇಶನಲ್ ಆಕ್ಸಿಸ್ ಗಳನ್ನು ಎಳೆಯಲು
08:45 * ಆಕ್ಸಿಸ್ ನೊಂದಿಗೆ ಅಣುವನ್ನು ಸ್ಪಿನ್ ಮತ್ತು ರೊಟೇಟ್ ಮಾಡಲು
08:49 * 'ಮಿಥೇನ್' ಅಣುವಿನಲ್ಲಿ ಪರಮಾಣುಗಳ ಮೂಲಕ ರಿಫ್ಲೆಕ್ಷನ್ ಪ್ಲೇನ್ ಅನ್ನು ರಚಿಸಲು
08:54 * ಮತ್ತು 'ಮಿಥೇನ್' ಹಾಗೂ 'ಅಲೀನ್' ಗಳ ಉದಾಹರಣೆಗಳನ್ನು ಬಳಸಿ ಪಾಯಿಂಟ್-ಗ್ರುಪ್ ವರ್ಗೀಕರಣವನ್ನು ಮಾಡಿತೋರಿಸಲು ನಾವು ಕಲಿತಿದ್ದೇವೆ.
09:01 ಒಂದು ಅಸೈನ್ಮೆಂಟ್ -
09:02 'ಡೈ ಕ್ಲೋರೋ ಮಿಥೇನ್' ನ ಮಾಡೆಲ್ ನಲ್ಲಿ ರಿಫ್ಲೆಕ್ಷನ್-ಪ್ಲೇನ್ ಅನ್ನು ರಚಿಸಿ.
09:07 ಮತ್ತು 'ಅಮೋನಿಯಾ' ಹಾಗೂ 'ಬೆನ್ಜೀನ್' ಗಳಿಗಾಗಿ ಪಾಯಿಂಟ್-ಗ್ರುಪ್ ವರ್ಗೀಕರಣವನ್ನು ಕಂಡುಹಿಡಿಯಿರಿ.
09:12 ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
09:15 ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:20 ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಹಾಗೂ ಪ್ರಮಾಣಪತ್ರವನ್ನು ಕೊಡುತ್ತೇವೆ.
09:27 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ.
09:33 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.

ವಂದನೆಗಳು.

Contributors and Content Editors

Sandhya.np14