Jmol-Application/C3/Crystal-Structure-and-Unit-Cell/Kannada
From Script | Spoken-Tutorial
Revision as of 15:20, 17 September 2016 by Sandhya.np14 (Talk | contribs)
|
|
---|---|
00:01 | Jmol ನಲ್ಲಿ Crystal Structure and unit cell (ಕ್ರಿಸ್ಟಲ್ ಸ್ಟ್ರಕ್ಚರ್ ಆಂಡ್ ಯುನಿಟ್ ಸೆಲ್) ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ನಾವು: * 'Crystallography Open Database' ನಿಂದ (ಕ್ರಿಸ್ಟಲೋಗ್ರಫಿ ಓಪನ್ ಡೇಟಾಬೇಸ್), 'CIF' ಅರ್ಥಾತ್ 'Crystallographic Information File' ಅನ್ನು (ಕ್ರಿಸ್ಟಲೋಗ್ರಾಫಿಕ್ ಇನ್ಫರ್ಮೇಶನ್ ಫೈಲ್) ಡೌನ್ಲೋಡ್ ಮಾಡಲು, |
00:17 | * ಜೆ-ಮೊಲ್ ನಲ್ಲಿ 'CIF' ಅನ್ನು ಓಪನ್ ಮಾಡಲು |
00:20 | * ಜೆ-ಮೊಲ್ ಪ್ಯಾನೆಲ್ ನ ಮೇಲೆ 'ಯುನಿಟ್ ಸೆಲ್' ಮತ್ತು 'ಯುನಿಟ್ ಸೆಲ್ ಪ್ಯಾರಾಮೀಟರ್' ಗಳನ್ನು ಡಿಸ್ಪ್ಲೇ ಮಾಡಲು |
00:25 | * ಮತ್ತು ವಿವಿಧ 'ಕ್ರಿಸ್ಟಲ್ ಸಿಸ್ಟಂ'ಗಳ 'ಕ್ರಿಸ್ಟಲ್ ಸ್ಟ್ರಕ್ಚರ್' ಗಳನ್ನು ಡಿಸ್ಪ್ಲೇ ಮಾಡಲು ಕಲಿಯುವೆವು. ಉದಾಹರಣೆಗೆ - 'Cubic' (ಕ್ಯೂಬಿಕ್), 'Hexagonal ' (ಹೆಕ್ಸಾಗೊನಲ್) ಮತ್ತು ' Rhombohedral' (ರೊಂಬೊಹೆಡ್ರಲ್). |
00:34 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ ಹೈಸ್ಕೂಲ್ ಮಟ್ಟದ ರಸಾಯನಶಾಸ್ತ್ರವು ತಿಳಿದಿರಬೇಕು |
00:39 | ಹಾಗೂ ಜೆ-ಮೊಲ್ ವಿಂಡೋದ ಆಪರೇಶನ್ ಗಳ ಪರಿಚಯವಿರಬೇಕು. |
00:42 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
00:48 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: * Ubuntu Operating System (ಉಬಂಟು ಆಪರೇಟಿಂಗ್ ಸಿಸ್ಟಂ) ಆವೃತ್ತಿ 14.04 |
00:54 | * Jmol ಆವೃತ್ತಿ 12.2.32 |
00:57 | * Java ಆವೃತ್ತಿ 7 ಮತ್ತು |
01:01 | * Mozilla Firefox ಬ್ರೌಸರ್ 35.0 ಇವುಗಳನ್ನು ನಾನು ಬಳಸುತ್ತಿದ್ದೇನೆ. |
01:04 | 'ಕ್ರಿಸ್ಟಲ್ ಸ್ಟ್ರಕ್ಚರ್' ಗಳನ್ನು ಏಳು 'ಕ್ರಿಸ್ಟಲ್ ಸಿಸ್ಟಂ' ಗಳಲ್ಲಿ ವಿಂಗಡಿಸಲಾಗಿದೆ. |
01:08 | ಈ ಟೇಬಲ್, 'ಕ್ರಿಸ್ಟಲ್ ಸಿಸ್ಟಂ'ಗಳ ಲಿಸ್ಟ್ ಅನ್ನು ಮತ್ತು ಅವುಗಳಿಗೆ ಅನುಗುಣವಾದ 'ಲ್ಯಾಟಿಸ್ ಪ್ಯಾರಾಮೀಟರ್' (lattice parameters) ಗಳನ್ನು ತೋರಿಸುತ್ತದೆ. |
01:14 | ವಿವಿಧ ಸಂಯುಕ್ತಗಳ (compound) ಮತ್ತು ಖನಿಜಗಳ (mineral) 'ಕ್ರಿಸ್ಟಲ್' ಗಳಿಗಾಗಿ ಉದಾಹರಣೆಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ. |
01:20 | ನಾವು ಜೆ-ಮೊಲ್ ಪ್ಯಾನೆಲ್ ನ ಮೇಲೆ, 'ಸೋಡಿಯಂ ಕ್ಲೋರೈಡ್, ಗ್ರಾಫೈಟ್ ಹಾಗೂ ಕ್ಯಾಲ್ಸೈಟ್ (Calcite)' ಗಳ 'ಕ್ರಿಸ್ಟಲ್ ಸ್ಟ್ರಕ್ಚರ್' ಗಳನ್ನು ಡಿಸ್ಪ್ಲೇ ಮಾಡುವೆವು. |
01:27 | 'ಕ್ರಿಸ್ಟಲ್ ಸ್ಟ್ರಕ್ಚರ್' ಗಳನ್ನು ಜೆ-ಮೊಲ್ ಪ್ಯಾನೆಲ್ ನ ಮೇಲೆ ಡಿಸ್ಪ್ಲೇ ಮಾಡಲು, |
01:31 | ನಾವು ಪ್ರತ್ಯೇಕ ಕ್ರಿಸ್ಟಲ್ ನ 'Crystallographic Information File' ಅನ್ನು ಡೌನ್ಲೋಡ್ ಮಾಡುವುದು ಅವಶ್ಯಕವಾಗಿದೆ. |
01:37 | 'CIF'- ಇದು 'ಕ್ರಿಸ್ಟಲೋಗ್ರಾಫಿಕ್' (crystallographic) ಮಾಹಿತಿಯನ್ನು ನಿರೂಪಿಸಲು ಇರುವ ಒಂದು ಸ್ಟ್ಯಾಂಡರ್ಡ್ ಟೆಕ್ಸ್ಟ್-ಫೈಲ್ ಫಾರ್ಮ್ಯಾಟ್ ಆಗಿದೆ. |
01:43 | 'CIF' ಫಾರ್ಮ್ಯಾಟ್, '.cif' ಎಂಬ 'ಫೈಲ್ ಎಕ್ಸ್ಟೆನ್ಶನ್' ಅನ್ನು ಹೊಂದಿದೆ. |
01:48 | 'Crystallography Open Database' (ಕ್ರಿಸ್ಟಲೋಗ್ರಫಿ ಓಪನ್ ಡೇಟಾಬೇಸ್) - ಇದು ಒಂದು ಓಪನ್ ಆಕ್ಸೆಸ್ (open-access) ಡೇಟಾಬೇಸ್ ಆಗಿದೆ. |
01:53 | 'COD' ವೆಬ್ಸೈಟ್ ನಲ್ಲಿ, ಡೌನ್ಲೋಡ್ ಮಾಡಲು ಸಾಧ್ಯವಿರುವ 'CIF' ಗಳು ಲಭ್ಯವಿರುತ್ತವೆ. |
01:58 | ಇಲ್ಲಿ ಕೊಟ್ಟಿರುವ ಲಿಂಕ್ ನ ಮೂಲಕ ಈ ವೆಬ್ಸೈಟನ್ನು ನೋಡಬಹುದು. |
02:03 | ನಾವು 'COD' ಡೇಟಾಬೇಸ್ ವೆಬ್ಸೈಟ್ ಅನ್ನು ಓಪನ್ ಮಾಡಿ, ಕೆಲವು 'CIF' ಫೈಲ್ ಗಳನ್ನು ಡೌನ್ಲೋಡ್ ಮಾಡೋಣ. |
02:10 | ಇಲ್ಲಿ, ನಾನು 'COD' ವೆಬ್ಸೈಟ್ ಅನ್ನು ಓಪನ್ ಮಾಡಿದ್ದೇನೆ. |
02:13 | ಪೇಜ್ ನ ಎಡಭಾಗದಲ್ಲಿ, ಮಾಹಿತಿಯನ್ನು ವಿವಿಧ ಶೀರ್ಷಿಕೆಗಳ ಅಡಿಯಲ್ಲಿ ವಿಭಾಗಿಸಲಾಗಿದೆ. |
02:19 | 'Accessing COD Data' ಎಂಬ ಶೀರ್ಷಿಕೆಯ ಅಡಿಯಲ್ಲಿ, 'Browse', 'Search' ಗಳಂತಹ ಉಪ-ಶೀರ್ಷಿಕೆಗಳು ಇರುತ್ತವೆ. |
02:27 | 'Search' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
02:31 | 'Search' ಪೇಜ್ ನ ಮೇಲೆ, 'CIF' ಫೈಲ್ ಗಳನ್ನು ಹುಡುಕಲು ನಾವು ಅನೇಕ ಆಯ್ಕೆಗಳನ್ನು ನೋಡುತ್ತೇವೆ. |
02:36 | 'hints and tips' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. 'search' ಆಯ್ಕೆಗಳನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಬಹುದೆಂಬ ಮಾಹಿತಿಯನ್ನು ಹೊಂದಿರುವ ಒಂದು ಪೇಜ್ ತೆರೆದುಕೊಳ್ಳುತ್ತದೆ. |
02:46 | 'Search' ಪೇಜ್ ಗೆ ಹಿಂದಿರುಗಿ. |
02:59 | 'COD ID' ಯನ್ನು ಬಳಸಿ ನಾವು 'ಕ್ರಿಸ್ಟಲ್ ಸ್ಟ್ರಕ್ಚರ್' ಗಾಗಿ ಸರ್ಚ್ ಮಾಡಬಹುದು. |
02:54 | 'OpenBabel Fastsearch ಅಥವಾ ಟೆಕ್ಸ್ಟ್-ಬಾಕ್ಸ್ ನಲ್ಲಿ ರಸಾಯನಿಕ ಅಥವಾ ಖನಿಜದ ಹೆಸರನ್ನು ಟೈಪ್ ಮಾಡಿ. |
03:01 | ಉದಾಹರಣೆಗೆ, ಸೋಡಿಯಂ ಕ್ಲೋರೈಡ್ ನ 'CIF' ಫೈಲ್ ಗಾಗಿ ಸರ್ಚ್ ಮಾಡಲು: |
03:06 | ಟೆಕ್ಸ್ಟ್ ಬಾಕ್ಸ್ ನಲ್ಲಿ “Halite” ಎಂದು ಟೈಪ್ ಮಾಡಿ. ಇದು ಸೋಡಿಯಂ ಕ್ಲೋರೈಡ್ ನ ಮಿನರಲ್ ನ ಹೆಸರು ಆಗಿದೆ. |
03:12 | ಕೆಳಗೆ, 'elements' ಎಂಬ ಬಾಕ್ಸ್ ಗೆ ಸ್ಕ್ರೋಲ್ ಮಾಡಿ. |
03:15 | ಸೋಡಿಯಂ ನ ಸಿಂಬಲ್ ಆಗಿರುವ Na ಹಾಗೂ ಕ್ಲೋರೈಡ್ ಗಾಗಿ Cl ಅನ್ನು ಟೈಪ್ ಮಾಡಿ. |
03:20 | 'Number of distinct elements.. ' ಎಂಬ ಬಾಕ್ಸ್ ಗೆ ಸ್ಕ್ರೋಲ್-ಡೌನ್ ಮಾಡಿ. |
03:24 | ಇಲ್ಲಿ, ಕನಿಷ್ಠ (min) ಮತ್ತು ಗರಿಷ್ಠ (max) ಎಲಿಮೆಂಟ್ ಗಳನ್ನು ಟೈಪ್ ಮಾಡಲು ನಮಗೆ ಒಂದು ಆಯ್ಕೆಯಿದೆ. |
03:29 | ನಿಮಗೆ ಕೇವಲ ಎರಡು ಎಲಿಮೆಂಟ್ ಗಳೊಂದಿಗೆ ‘ಕ್ರಿಸ್ಟಲ್ ಸ್ಟ್ರಕ್ಚರ್’ ಬೇಕಾಗಿದ್ದರೆ , ಅರ್ಥಾತ್, 'Sodium' (ಸೋಡಿಯಂ) ಹಾಗೂ 'Chloride' (ಕ್ಲೋರೈಡ್), 'minimum' ಬಾಕ್ಸ್ ನಲ್ಲಿ '2' ಎಂದು ಟೈಪ್ ಮಾಡಿ. |
03:37 | 'Send' ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:40 | ಸೋಡಿಯಂ ಕ್ಲೋರೈಡ್ ಗಾಗಿ ‘ಕ್ರಿಸ್ಟಲ್ ಸ್ಟ್ರಕ್ಚರ್’ ಡೇಟಾ ಫೈಲ್ ಗಳೊಂದಿಗೆ ಒಂದು ವೆಬ್-ಪೇಜ್ ತೆರೆದುಕೊಳ್ಳುತ್ತದೆ. |
03:45 | 'COD ID' ಯ ಮೇಲೆ ರೈಟ್-ಕ್ಲಿಕ್ ಮಾಡಿ ಹಾಗೂ “open the link in a new tab” ನ ಮೇಲೆ ಕ್ಲಿಕ್ ಮಾಡಿ. |
03:51 | ಈ ಪೇಜ್, ನಿರ್ದಿಷ್ಟ ‘ಕ್ರಿಸ್ಟಲ್ ಸ್ಟ್ರಕ್ಚರ್’ನ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿದೆ. |
03:57 | ಡೇಟಾಬೇಸ್ ವೆಬ್-ಪೇಜ್ ಗೆ ಹಿಂದಿರುಗಿ. |
04:00 | ಪೇಜ್ ನ ಬಲಭಾಗದಲ್ಲಿರುವ “archive of CIF files” ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
04:08 | ಸ್ಕ್ರೀನ್ ನ ಮೇಲೆ ಒಂದು ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. 'Open with' ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ. 'OK' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:17 | ಸೋಡಿಯಂ ಕ್ಲೋರೈಡ್ ಕ್ರಿಸ್ಟಲ್ ಗಾಗಿ ಅನೇಕ 'CIF' ಫೈಲ್ ಗಳನ್ನು ಹೊಂದಿರುವ ಒಂದು ಫೋಲ್ಡರ್, ಸ್ಕ್ರೀನ್ ನ ಮೇಲೆ ತೆರೆದುಕೊಳ್ಳುತ್ತದೆ. |
04:23 | ನಿಮಗೆ ಡೌನ್ಲೋಡ್ ಮಾಡಬೇಕಾಗಿರುವ ಫೈಲ್ ಗಳ ಮೇಲೆ ಕ್ಲಿಕ್ ಮಾಡಿ ಅವುಗಳನ್ನು ಆಯ್ಕೆಮಾಡಿ. |
04:28 | ಟೂಲ್-ಬಾರ್ ನಲ್ಲಿರುವ “Extract” ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:32 | ನಿಮ್ಮ ಸಿಸ್ಟಂನಲ್ಲಿ, ಅನುಕೂಲಕರ ಸ್ಥಳದಲ್ಲಿ ಫೈಲ್ ಗಳನ್ನು ಸೇವ್ ಮಾಡಿ. |
04:37 | 'Extract' ನ ಮೇಲೆ ಕ್ಲಿಕ್ ಮಾಡಿ. ವಿಂಡೋಅನ್ನು ಮುಚ್ಚಿ. |
04:41 | 'Search' ಪೇಜ್ ಗೆ ಹಿಂದಿರುಗಿ. |
04:43 | ಈಗ, 'ಗ್ರಾಫೈಟ್' ಹಾಗೂ 'ಕ್ಯಾಲ್ಸೈಟ್' ಗಳಿಗಾಗಿ ಹಿಂದೆ ಬಳಸಿದ ವಿಧಾನವನ್ನೇ ಬಳಸಿ 'CIF' ಫೈಲ್ ಗಳನ್ನು ಡೌನ್ಲೋಡ್ ಮಾಡಿ. |
04:51 | ನಾವು ಈಗ ಜೆ-ಮೊಲ್ ನಲ್ಲಿ, ಸೋಡಿಯಂ ಕ್ಲೋರೈಡ್ ನ 'CIF' ಫೈಲನ್ನು ಓಪನ್ ಮಾಡುವೆವು. |
04:55 | ಇಲ್ಲಿ, ನಾನು ಜೆ-ಮೊಲ್ ವಿಂಡೋಅನ್ನು ಓಪನ್ ಮಾಡಿದ್ದೇನೆ. |
04:59 | ಟೂಲ್-ಬಾರ್ ನಲ್ಲಿಯ “Open a file” ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
05:03 | 'COD' ಡೇಟಾಬೇಸ್ ನಿಂದ ನಾವು ಡೌನ್ಲೋಡ್ ಮಾಡಿರುವ ಸೋಡಿಯಂ ಕ್ಲೋರೈಡ್ ನ 'CIF' ಫೈಲ್ ಇರುವಲ್ಲಿಗೆ ಹೋಗಿ. |
05:12 | 'Open' ನ ಮೇಲೆ ಕ್ಲಿಕ್ ಮಾಡಿ. |
05:14 | ಸೋಡಿಯಂ ಕ್ಲೋರೈಡ್ ಕ್ರಿಸ್ಟಲ್ ನ 'ಯುನಿಟ್ ಸೆಲ್', ಸ್ಕ್ರೀನ್ ನ ಮೇಲೆ ತೆರೆದುಕೊಳ್ಳುತ್ತದೆ. |
05:19 | ಒಂದು ಕ್ರಿಸ್ಟಲ್ ನಲ್ಲಿ, 'ಯುನಿಟ್ ಸೆಲ್' ಎಲ್ಲಕ್ಕಿಂತ ಚಿಕ್ಕದಾದ ಪುನರಾವರ್ತಿಸುವ ' ಯುನಿಟ್' (ಘಟಕ) ಆಗಿದೆ. |
05:23 | '3' ಆಯಾಮಗಳಲ್ಲಿ ಈ 'ಯುನಿಟ್ ಸೆಲ್' ಗಳ ಪೇರಿಸುವಿಕೆಯು, ಕ್ರಿಸ್ಟಲ್ ಸ್ಟ್ರಕ್ಚರ್’ ನ (dimensions) ತಳಹದಿಯನ್ನು ರೂಪಿಸುವುದು. |
05:29 | ಜೆ-ಮೊಲ್ ಪ್ಯಾನೆಲ್ ಗೆ ಹಿಂದಿರುಗೋಣ. |
05:32 | 'ಯುನಿಟ್ ಸೆಲ್' ಗಾಗಿ ಸಂಬಂಧಿತ ಡೇಟಾಅನ್ನು ಪ್ಯಾನೆಲ್ ನ ಎಡಭಾಗದಲ್ಲಿ ಪ್ರದರ್ಶಿಸಲಾಗುವುದು. |
05:37 | ಇದು ಸ್ಪೇಸ್ ಗ್ರೂಪ್ (space group) ವರ್ಗೀಕರಣದೊಂದಿಗೆ ಆರಂಭವಾಗುತ್ತದೆ. |
05:41 | ಸೋಡಿಯಂ ಕ್ಲೋರೈಡ್, 'ಕ್ಯೂಬಿಕ್ ಲ್ಯಾಟಿಸ್ ಸಿಸ್ಟಂ'ಗೆ (cubic lattice system) ಸೇರಿದೆ. ಆದ್ದರಿಂದ, 'a', 'b' ಹಾಗೂ 'c' ವೆಕ್ಟರ್ ಗಳು ಸಮವಾಗಿರುತ್ತವೆ. |
05:50 | ಅಲ್ಫಾ, ಬೀಟಾ ಹಾಗೂ ಗಾಮಾ ಕೋನಗಳು 90 ಅಂಶಗಳಿರುತ್ತವೆ. |
05:55 | ಪಾಪ್-ಅಪ್ ಮೆನ್ಯುಅನ್ನು ಓಪನ್ ಮಾಡಲು ರೈಟ್-ಕ್ಲಿಕ್ ಮಾಡಿ. |
05:59 | ಕೆಳಗೆ, 'Symmetry' ಎಂಬ ಆಯ್ಕೆಗೆ ಸ್ಕ್ರೋಲ್ ಮಾಡಿ. |
06:01 | ಸಬ್-ಮೆನ್ಯುನಲ್ಲಿ, ಸಿಮೆಟ್ರೀ ಎಲಿಮೆಂಟ್ ಗಳನ್ನು ಡಿಸ್ಪ್ಲೇ ಮಾಡಲು ನಾವು ಆಯ್ಕೆಗಳನ್ನು ಹೊಂದಿದ್ದೇವೆ. |
06:05 | ಸಬ್-ಮೆನ್ಯುನಲ್ಲಿಯ ಆಯ್ಕೆಗಳನ್ನು ಬಳಸಿಕೊಂಡು ನಾವು ಯುನಿಟ್ ಸೆಲ್ ಗಳ ಬ್ಲಾಕ್ ಗಳನ್ನು ಸಹ ಡಿಸ್ಪ್ಲೇ ಮಾಡಬಹುದು. |
06:10 | ಉದಾಹರಣೆಗೆ, 'Reload {1 1 1}' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:15 | ಪ್ಯಾನೆಲ್ ನ ಮೇಲೆ, 'ಫೇಸ್ ಸೆಂಟರ್ ಕ್ಯೂಬಿಕ್ ಲ್ಯಾಟಿಸ್' ಅನ್ನು (face center cubic lattice) ತೋರಿಸುತ್ತಿರುವ ಒಂದು ಯುನಿಟ್ ಸೆಲ್ ಬ್ಲಾಕ್ ಇದೆ. |
06:21 | ಡಿಸ್ಪ್ಲೇಯನ್ನು ಬದಲಾಯಿಸಲು : ಪಾಪ್-ಅಪ್ ಮೆನ್ಯುಅನ್ನು ಓಪನ್ ಮಾಡಿ. ಕೆಳಗೆ, 'Style' ಎಂಬಲ್ಲಿಗೆ ಸ್ಕ್ರೋಲ್ ಮಾಡಿ. ಆಮೇಲೆ 'Scheme' ಮತ್ತು ಆನಂತರ 'CPK Spacefill' ಗಳ ಮೇಲೆ ಕ್ಲಿಕ್ ಮಾಡಿ. |
06:29 | ಇಲ್ಲಿ ಪ್ಯಾನೆಲ್ ನ ಮೇಲೆ, ‘ಕ್ರಿಸ್ಟಲ್ ಸ್ಟ್ರಕ್ಚರ್’, 'CPK' ಡಿಸ್ಪ್ಲೇಯಲ್ಲಿ ಇರುತ್ತದೆ. |
06:34 | ಮತ್ತೊಮ್ಮೆ ಪಾಪ್-ಅಪ್ ಮೆನ್ಯುಅನ್ನು ಓಪನ್ ಮಾಡಿ. ಕೆಳಗೆ 'symmetry' ಎಂಬಲ್ಲಿಗೆ ಸ್ಕ್ರೋಲ್ ಮಾಡಿ. ಮತ್ತು 'Reload {4 4 4 6 6 6 1}' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:44 | ಈ ಆಯ್ಕೆಯು, ಜೆ-ಮೊಲ್ ಪ್ಯಾನೆಲ್ ನ ಮೇಲೆ 27 ಸೆಲ್ ಬ್ಲಾಕ್ ಅನ್ನು ಲೋಡ್ ಮಾಡುತ್ತದೆ. |
06:49 | ಪಾಪ್-ಅಪ್ ಮೆನ್ಯುಅನ್ನು ತೆರೆದು, 'symmetry' ಎಂಬಲ್ಲಿಗೆ ಹೋಗಿ. 'Reload {1 1 1}' ಎಂಬ ಆಯ್ಕೆಗೆ ಹಿಂದಿರುಗಿ. |
06:56 | ಸಿಮೆಟ್ರಿ ಎಲಿಮೆಂಟ್ ಗಳನ್ನು ಪ್ರದರ್ಶಿಸಲು, ಇನ್ನೊಮ್ಮೆ ಪಾಪ್-ಅಪ್ ಮೆನ್ಯುಅನ್ನು ತೆರೆಯಿರಿ. |
07:00 | ಕೆಳಗೆ, ಸಬ್-ಮೆನ್ಯು ನಲ್ಲಿ 'Symmetry' ಎಂಬಲ್ಲಿಗೆ ಸ್ಕ್ರೋಲ್ ಮಾಡಿ. ಮತ್ತು 'mirrorplane (x z y)' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
07:08 | ಪ್ಯಾನೆಲ್ ನ ಮೇಲೆ, ಕ್ಯೂಬಿಕ್ ಲ್ಯಾಟಿಸ್ ನೊಂದಿಗೆ 'mirrorplane (x z y)' ಅನ್ನು ಪ್ರದರ್ಶಿಸಲಾಗಿದೆ. |
07:16 | ಈಗ ನಾವು ಹೆಕ್ಸಾಗೋನಲ್ ಕ್ರಿಸ್ಟಲ್ ಸಿಸ್ಟಂಗೆ ಸೇರಿರುವ 'ಗ್ರಾಫೈಟ್' ಗಾಗಿ, CIF ಫೈಲನ್ನು ಲೋಡ್ ಮಾಡೋಣ. |
07:22 | ಈ ಮೊದಲು ತೋರಿಸಿದಂತೆ, ಪ್ಯಾನೆಲ್ ನ ಮೇಲೆ ಗ್ರಾಫೈಟ್ ಗಾಗಿ 'CIF' ಫೈಲ್ ಅನ್ನು ಲೋಡ್ ಮಾಡಲು 'Open a file' ಎಂಬ ಆಯ್ಕೆಯನ್ನು ಬಳಸಿ. |
07:29 | 'ಗ್ರಾಫೈಟ್' ಗಾಗಿ ಯೂನಿಟ್ ಸೆಲ್, ಪ್ಯಾನೆಲ್ ನ ಮೇಲೆ ತೆರೆದುಕೊಳ್ಳುತ್ತದೆ. |
07:33 | ಯೂನಿಟ್ ಸೆಲ್ ಪ್ಯಾರಾಮೀಟರ್ ಗಳನ್ನು ಗಮನಿಸಿ: |
07:35 | ವೆಕ್ಟರ್ 'a', ವೆಕ್ಟರ್ 'b' ಗೆ ಸಮನಾಗಿದೆ. ಆದರೆ ವೆಕ್ಟರ್ 'c' ಗೆ ಸಮನಾಗಿಲ್ಲ. |
07:40 | 'ಅಲ್ಫಾ' ಹಾಗೂ 'ಬೀಟಾ' ಕೋನಗಳು 90 ಅಂಶಗಳಿದ್ದು 'ಗಾಮಾ' 120 ಅಂಶಗಳು ಇರುತ್ತದೆ. |
07:47 | ಪಾಪ್-ಅಪ್ ಮೆನ್ಯು ಅನ್ನು ತೆರೆಯಿರಿ. ಕೆಳಗೆ, 'Symmetry' ಎಂಬಲ್ಲಿಗೆ ಸ್ಕ್ರೋಲ್ ಮಾಡಿ ಮತ್ತು 'Reload {444 666 1}' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
07:56 | ಪರಮಾಣುಗಳ 'ಹೆಕ್ಸಾಗೊನಲ್ ಲ್ಯಾಟೀಸ್' ವ್ಯವಸ್ಥೆಯನ್ನು ಸ್ಕ್ರೀನ್ ನ ಮೇಲೆ ತೋರಿಸಲಾಗಿದೆ. |
08:01 | ಡಿಸ್ಪ್ಲೇಯನ್ನು ಬದಲಾಯಿಸಲು: ಪಾಪ್-ಅಪ್ ಮೆನ್ಯುಅನ್ನು ತೆರೆಯಿರಿ, ಕ್ರಮವಾಗಿ 'Style' >> 'scheme' >> 'Wireframe' ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ. |
08:10 | ಹೀಗೆಯೇ, ನಾನು ಪ್ಯಾನೆಲ್ ನ ಮೇಲೆ ಕ್ಯಾಲ್ಸೈಟ್ ಮಿನರಲ್ ನ ಒಂದು 'CIF' ಫೈಲನ್ನು ತೆರೆದಿದ್ದೇನೆ. |
08:16 | 'ಕ್ಯಾಲ್ಸೈಟ್', 'rhombohedral' (ರೊಂಬೊಹೆಡ್ರಲ್) ಎಂಬ ಕ್ರಿಸ್ಟಲ್ ಸಿಸ್ಟಂಗೆ ಸೇರಿದೆ. |
08:20 | ನೀವು ಯಾವುದೇ ಕ್ರಿಸ್ಟಲ್ ಸಿಸ್ಟಂನ 'CIF' ಅನ್ನು ತೆರೆಯಬಹುದು ಹಾಗೂ ಸ್ಟ್ರಕ್ಚರ್ ಅನ್ನು ಮತ್ತು symmetry ಆಯ್ಕೆಗಳನ್ನು ನೋಡಬಹುದು. |
08:27 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: * 'ಕ್ರಿಸ್ಟಲೋಗ್ರಫಿ ಓಪನ್ ಡೇಟಾಬೇಸ್' ನಿಂದ 'CIF' ಅನ್ನು ಡೌನ್ಲೋಡ್ ಮಾಡಲು |
08:35 | * ಜೆ-ಮೊಲ್ ನಲ್ಲಿ 'CIF' ಅನ್ನು ಓಪನ್ ಮಾಡಲು |
08:38 | * ಯೂನಿಟ್ ಸೆಲ್ ಹಾಗೂ ಯೂನಿಟ್ ಸೆಲ್ ಪ್ಯಾರಾಮೀಟರ್ ಗಳನ್ನು ಪ್ರದರ್ಶಿಸಲು ಮತ್ತು |
08:41 | * ಸೋಡಿಯಂ ಕ್ಲೋರೈಡ್, ಗ್ರಾಫೈಟ್ ಮತ್ತು ಕ್ಯಾಲ್ಸೈಟ್ ಗಳ ‘ಕ್ರಿಸ್ಟಲ್ ಸ್ಟ್ರಕ್ಚರ್’ಗಳನ್ನು ಪ್ರದರ್ಶಿಸಲು ಕಲಿತಿದ್ದೇವೆ. |
08:47 | ಒಂದು ಅಸೈನ್ಮೆಂಟ್:
ಕ್ವಾರ್ಟ್ಸ್ ಕ್ರಿಸ್ಟಲ್ ಗಾಗಿ (quartz crystal), 'COD' ಡೇಟಾಬೇಸ್ ನಿಂದ 'CIF'ಅನ್ನು ಡೌನ್ಲೋಡ್ ಮಾಡಿ. |
08:53 | ಜೆ-ಮೊಲ್ ಪ್ಯಾನೆಲ್ ನ ಮೇಲೆ ಯೂನಿಟ್ ಸೆಲ್ ಅನ್ನು ಪ್ರದರ್ಶಿಸಿ ಮತ್ತು 'symmetry' (ಸಿಮೆಟ್ರಿ) ಆಯ್ಕೆಗಳನ್ನು ಕಲಿತುಕೊಳ್ಳಿ. |
08:59 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
09:02 | ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:06 | ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಹಾಗೂ ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
09:12 | ಸ್ಪೋಕನ್ ಟ್ಯುಟೊರಿಯಲ್ ಪ್ರೊಜೆಕ್ಟ್, NMEICT-MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. |
09:18 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..
ವಂದನೆಗಳು. |