ExpEYES/C2/Introduction-to-ExpEYES-Junior/Kannada
From Script | Spoken-Tutorial
Revision as of 18:30, 20 September 2017 by Sandhya.np14 (Talk | contribs)
Time | Narration |
00:01 | ನಮಸ್ಕಾರ. Introduction to ExpEYES Junior ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:07 | ಈ ‘ಟ್ಯುಟೋರಿಯಲ್’ನಲ್ಲಿ, ನಾವು:
|
00:19 | ನಾವು-
|
00:26 | ಇಲ್ಲಿ ನಾನು:
|
00:35 | * Andriod ಆವೃತ್ತಿ 5.0.2
|
00:45 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು ಹೈಸ್ಕೂಲ್ ಮಟ್ಟದ ಭೌತಶಾಸ್ತ್ರವನ್ನು ತಿಳಿದಿರಬೇಕು. |
00:51 | 'ExpEYES' ಎಂದರೆ ಏನು ಎಂಬುದನ್ನು ಮೊದಲು ನಾವು ನೋಡೋಣ.
|
01:06 | 'ExpEYES Junior' ಸಾಧನವು ಹೀಗೆ ಕಾಣುತ್ತದೆ.
|
01:24 | ಈ ಸಾಧನವನ್ನು 'USB' ಪೋರ್ಟ್ ನ ಮೂಲಕ ಸಿಸ್ಟಂಗೆ ಜೋಡಿಸಬಹುದು. |
01:28 | ಇಲ್ಲಿ, 'ExpEYES Junior' ದ ಕೆಲವು ಪ್ರಮುಖ ವೈಶಿಷ್ಟ್ಯಗಳ ಒಂದು ಪಟ್ಟಿ ಇದೆ. |
01:33 | * ಈ ಸಾಧನವು ವೋಲ್ಟೇಜ್ಗಳನ್ನು ಅಳೆಯಬಲ್ಲದು, ಪ್ಲಾಟ್ ಗಳನ್ನು ಹಾಗೂ ತರಂಗರೂಪಗಳನ್ನು (waveforms) ತಯಾರಿಸಬಹುದು.
|
01:48 | * ಇದು 12 ಬಿಟ್ ಇನ್ಪುಟ್/ ಔಟ್ಪುಟ್ 'ಅನಲಾಗ್' (analog) ರೆಸೊಲ್ಯುಶನ್ ಅನ್ನು ಹೊಂದಿರುತ್ತದೆ.
|
02:00 | ನಾವು ಈ ಸಾಧನವನ್ನು ಆನ್-ಲೈನ್ ನಲ್ಲಿ ಹೇಗೆ ಖರೀದಿಸುವುದೆಂದು ನೋಡೋಣ. |
02:03 | Firefox ವೆಬ್-ಬ್ರೌಸರ್ ಅನ್ನು ಓಪನ್ ಮಾಡಿ. ಅಡ್ರೆಸ್-ಬಾರ್ ನಲ್ಲಿ, ಹೀಗೆ ಟೈಪ್ ಮಾಡಿ:
http://expeyes.in/hardware-availability ಮತ್ತು 'Enter' ಅನ್ನು ಒತ್ತಿ. |
02:18 | ಈ ಸಾಧನವನ್ನು ಖರೀದಿಸಲು ಬೇಕಾಗಿರುವ ಎಲ್ಲ ವಿವರಗಳೊಂದಿಗೆ ಒಂದು ವೆಬ್-ಪೇಜ್ ತೆರೆದುಕೊಳ್ಳುತ್ತದೆ. |
02:22 | ವಿವಿಧ ಆಪರೇಟಿಂಗ್ ಸಿಸ್ಟಂಗಳ ಮೇಲೆ ಈ ಸಾಫ್ಟ್ವೇರ್ ನ ಲಭ್ಯತೆಯ ಬಗ್ಗೆ ನಾವು ತಿಳಿದುಕೊಳ್ಳೋಣ. |
02:28 | * 'ExpEYES Junior' ನ ಸಾಫ್ಟ್ವೇರ್ ಅನ್ನು, 'ಪೈಥನ್' (Python) ಎಂಬ ಕಂಪ್ಯೂಟರ್ ಭಾಷೆಯಲ್ಲಿ ಕೋಡ್ ಮಾಡಲಾಗಿದೆ.
|
02:41 | ಈ ಸಾಫ್ಟ್ವೇರ್ -
|
02:48 | 'ಉಬಂಟು ಲಿನಕ್ಸ್ ಒ ಎಸ್' ನ (Ubuntu Linux OS) ಮೇಲೆ ಇನ್ಸ್ಟಾಲ್ ಮಾಡುವುದರೊಂದಿಗೆ ನಾವು ಆರಂಭಿಸೋಣ. |
02:52 | ನಾವು ಸಾಫ್ಟ್ವೇರ್ ಅನ್ನು ನೇರವಾಗಿ 'Ubuntu Software Center' ನಿಂದ ಇನ್ಸ್ಟಾಲ್ ಮಾಡಬಹುದು. |
02:57 | ಪರ್ಯಾಯವಾಗಿ, Firefox ವೆಬ್ ಬ್ರೌಸರ್ ಅನ್ನು ಓಪನ್ ಮಾಡಿ. ಅಡ್ರೆಸ್ ಬಾರ್ ನಲ್ಲಿ, ಹೀಗೆ ಟೈಪ್ ಮಾಡಿ: http://expeyes.in |
03:08 | ಪೇಜ್ ನಲ್ಲಿ, 'SOFTWARE' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
'Software Installation' ಎಂಬ ಪೇಜ್ ತೆರೆದುಕೊಳ್ಳುತ್ತದೆ. |
03:15 | 'expeyes.deb' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
'Save File' ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. 'Save File' ಅನ್ನು ಆಯ್ಕೆಮಾಡಿ ಮತ್ತು 'OK' ಯ ಮೇಲೆ ಕ್ಲಿಕ್ ಮಾಡಿ. |
03:26 | ಡೌನ್ಲೋಡ್ ಮಾಡಲಾದ ಫೈಲ್ ನ ಮೇಲೆ ಕ್ಲಿಕ್ ಮಾಡಿ. |
03:29 | ಫೈಲ್, 'Ubuntu Software Centre' ನಲ್ಲಿ ತೆರೆದುಕೊಳ್ಳುತ್ತದೆ. 'Install' ಬಟನ್ ಮೇಲೆ ಕ್ಲಿಕ್ ಮಾಡಿ. |
03:35 | 'Authenticate' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. ಸಿಸ್ಟಂ ಪಾಸ್ವರ್ಡ್ ಅನ್ನು ಟೈಪ್ ಮಾಡಿ ಮತ್ತು 'Authenticate' ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:42 | ಇನ್ಸ್ಟಾಲ್ ಮಾಡಲು ಕೆಲವು ನಿಮಿಷಗಳು ಬೇಕಾಗಬಹುದು. |
03:45 | ಸಾಫ್ಟ್ವೇರ್ ಇಂಟರ್ಫೇಸ್ ಅನ್ನು ಓಪನ್ ಮಾಡಲು, 'Dash Home' ನ ಮೇಲೆ ಕ್ಲಿಕ್ ಮಾಡಿ. 'ಸರ್ಚ್ ಬಾರ್' ನಲ್ಲಿ "expeyes junior" ಎಂದು ಟೈಪ್ ಮಾಡಿ. |
03:54 | 'ExpEYES Junior' ಐಕಾನ್ ಕಾಣಿಸಿಕೊಳ್ಳುತ್ತದೆ. ಇಂಟರ್ಫೇಸ್ ಅನ್ನು ಓಪನ್ ಮಾಡಲು ಇದರ ಮೇಲೆ ಕ್ಲಿಕ್ ಮಾಡಿ. |
04:00 | ನಾವು ನೆಟ್ಬುಕ್ ನ (Netbook) ಮೇಲೆ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡೋಣ. |
04:03 | ನೆಟ್ಬುಕ್ ನ ಮೇಲೆ, 'ಎಲ್-ಉಬಂಟು ಸಾಫ್ಟ್ವೇರ್ ಸೆಂಟರ್' (Lubuntu Software Center) ಅನ್ನು ಬಳಸಿ 'ExpEYES Junior' ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಬಹುದು. |
04:10 | 'Software Center' ಐಕಾನ್ ಮೇಲೆ ರೈಟ್- ಕ್ಲಿಕ್ ಮಾಡಿ. 'Open' ಅನ್ನು ಆಯ್ಕೆಮಾಡಿ. 'Lubuntu Software Center' ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
04:19 | 'Search a package' ಬಾಕ್ಸ್ ನಲ್ಲಿ, "expeyes" ಎಂದು ಟೈಪ್ ಮಾಡಿ. 'Expeyes' ಐಕಾನ್ ಕಾಣಿಸಿಕೊಳ್ಳುತ್ತದೆ. ಐಕಾನ್ ಅನ್ನು ಆಯ್ಕೆಮಾಡಿ. |
04:28 | 'ಸ್ಟೇಟಸ್-ಬಾರ್' ನ ಮೇಲೆ, 'Add to the Apps Basket' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:33 | 'ಮೆನ್ಯು ಬಾರ್' ನ ಮೇಲೆ, 'Apps Basket' ಬಟನ್ ನ ಮೇಲೆ ಕ್ಲಿಕ್ ಮಾಡಿ. 'Apps Basket' ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
04:41 | 'Package' ಲಿಸ್ಟ್ ನಿಂದ, 'Expeyes' ಅನ್ನು ಆಯ್ಕೆಮಾಡಿ. 'Install Packages' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:48 | 'Authenticate' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. ಸಿಸ್ಟಂ ಪಾಸ್ವರ್ಡ್ ಅನ್ನು ಟೈಪ್ ಮಾಡಿ ಮತ್ತು 'Authenticate' ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:56 | 'Installing packages' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. ಇನ್ಸ್ಟಾಲ್ ಮಾಡಲು ಕೆಲವು ನಿಮಿಷಗಳು ಬೇಕಾಗುತ್ತದೆ. |
05:03 | 'USB' ಕೇಬಲ್ ಅನ್ನು ಬಳಸಿ ನೆಟ್ಬುಕ್ ಅನ್ನು ಈ ಸಾಧನಕ್ಕೆ ಜೋಡಿಸಿ. |
05:08 | 'ನೆಟ್ಬುಕ್' ನಲ್ಲಿ ಸಾಫ್ಟ್ವೇರ್ ಇಂಟರ್ಫೇಸ್ ಅನ್ನು ಓಪನ್ ಮಾಡಲು - 'Start' ಬಟನ್ ಮೇಲೆ ಕ್ಲಿಕ್ ಮಾಡಿ >> 'Education' ಇರುವಲ್ಲಿಗೆ ಹೋಗಿ >> |
05:15 | 'ExpEYES Junior' ಅನ್ನು ಆಯ್ಕೆಮಾಡಿ. ಸಾಫ್ಟ್ವೇರ್ ಇಂಟರ್ಫೇಸ್ ತೆರೆದುಕೊಳ್ಳುತ್ತದೆ. |
05:21 | ನಾವು 'Android' ನ ಮೇಲೆ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡೋಣ. |
05:25 | ದಯವಿಟ್ಟು ನಿಮ್ಮ 'Android' ಸಾಧನದ ಮೇಲೆ, 'Wi Fi' ಅಥವಾ 'ಡೇಟಾ ಪ್ಯಾಕ್' ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಿ. |
05:31 | 'ExpEYES Junior' ಸಾಧನವನ್ನು 'OTG' ಕೇಬಲ್ ಮೂಲಕ ನಿಮ್ಮ ಮೊಬೈಲ್ ಗೆ ಜೋಡಿಸಬಹುದು. |
05:38 | ನಿಮ್ಮ ಮೊಬೈಲ್ ನಲ್ಲಿ, 'Home' ಬಟನ್ ನ ಮೇಲೆ ಕ್ಲಿಕ್ ಮಾಡಿ >> 'Google Play Store' ಇರುವಲ್ಲಿಗೆ ಹೋಗಿ >> |
05:44 | 'APPS' ಮೇಲೆ ಕ್ಲಿಕ್ ಮಾಡಿ. 'APPS' ಪೇಜ್ ತೆರೆದುಕೊಳ್ಳುತ್ತದೆ. |
05:48 | ಮೇಲ್ಗಡೆ ಬಲಮೂಲೆಯಲ್ಲಿ ಇರುವ ಭೂತಗನ್ನಡಿಯ ಮೇಲೆ ಕ್ಲಿಕ್ ಮಾಡಿ. |
05:53 | "expeyes" ಎಂದು ಟೈಪ್ ಮಾಡಿ, 'ExpEYES' ಮೇಲೆ ಕ್ಲಿಕ್ ಮಾಡಿ. 'INSTALL' ಮೇಲೆ ಕ್ಲಿಕ್ ಮಾಡಿ. |
05:59 | 'ಲೈಸೆನ್ಸ್ ಅಗ್ರೀಮೆಂಟ್' ಅನ್ನು ಒಪ್ಪಿಕೊಳ್ಳಿ. ಡೌನ್ಲೋಡ್ ಆಗಲು ಆರಂಭವಾಗುತ್ತದೆ. |
06:05 | ಡೌನ್ಲೋಡ್ ಮಾಡುವುದು ಆದಮೇಲೆ, 'OPEN' ಮೇಲೆ ಕ್ಲಿಕ್ ಮಾಡಿ. |
06:09 | 'ExpEYES Experiments' ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
06:12 | 'Use by default for this USB device' ಎಂಬ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
06:17 | 'OK' ಮೇಲೆ ಕ್ಲಿಕ್ ಮಾಡಿ. ಇಂಟರ್ಫೇಸ್ ತೆರೆದುಕೊಳ್ಳುತ್ತದೆ. |
06:21 | ನಾವು 'Windows' ಆಪರೇಟಿಂಗ್ ಸಿಸ್ಟಂನ ಮೇಲೆ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡೋಣ. |
06:27 | ನಿಮ್ಮ ಡೀಫಾಲ್ಟ್ ವೆಬ್ ಬ್ರೌಸರ್ ಅನ್ನು ಓಪನ್ ಮಾಡಿ. ಅಡ್ರೆಸ್-ಬಾರ್ ನಲ್ಲಿ, URL "expeyes.in" ಅನ್ನು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
'ExpEYES' ಪೇಜ್ ತೆರೆದುಕೊಳ್ಳುತ್ತದೆ. |
06:40 | 'SOFTWARE' ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. 'MS Windows' ಇರುವಲ್ಲಿಗೆ ಸ್ಕ್ರೋಲ್-ಡೌನ್ ಮಾಡಿ. |
06:45 | 'Windows' ನಲ್ಲಿ ಇನ್ಸ್ಟಾಲ್ ಮಾಡಲು, ನಮಗೆ 'ಪೈಥನ್ ಇಂಟರ್ಪ್ರಿಟರ್' ಮತ್ತು ಅಗತ್ಯವಿರುವ ಲೈಬ್ರರಿಗಳನ್ನು ಇನ್ಸ್ಟಾಲ್ ಮಾಡುವುದು ಅವಶ್ಯವಾಗಿದೆ. |
06:52 | ಈ ಕೆಳಗಿನ ಡ್ರೈವರ್ ಗಳು ಮತ್ತು ಫೈಲ್ ಗಳನ್ನು ಡೌನ್ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ: |
06:57 | ನಾನು ಈಗಾಗಲೇ ಎಲ್ಲ ಫೈಲ್ ಗಳನ್ನು ನನ್ನ 'Downloads library' ಯಲ್ಲಿ ಡೌನ್ಲೋಡ್ ಮಾಡಿದ್ದೇನೆ. |
07:02 | 'expeyes-3.0.0' ಝಿಪ್ ಫೈಲ್ ನ ಮೇಲೆ ರೈಟ್- ಕ್ಲಿಕ್ ಮಾಡಿ ಮತ್ತು 'Extract Here' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಫೈಲ್ ಅನ್ನು ಎಕ್ಸ್ಟ್ರ್ಯಾಕ್ಟ್ ಮಾಡಲಾಗಿದೆ. |
07:14 | 'expeyes-3.0.0' ಫೋಲ್ಡರ್ ನ ಮೇಲೆ ಡಬಲ್-ಕ್ಲಿಕ್ ಮಾಡಿ. |
07:21 | 'eyes-junior' ಎಂಬ ಫೋಲ್ಡರ್ ನ ಮೇಲೆ ಡಬಲ್ ಕ್ಲಿಕ್ ಮಾಡಿ. ಫೈಲ್ ಗಳ ಒಂದು ಲಿಸ್ಟ್ ತೆರೆದುಕೊಳ್ಳುತ್ತದೆ. |
07:27 | 'croplus' ಎಂಬ ಫೈಲ್ ಇರುವಲ್ಲಿಗೆ ಹೋಗಿ. ರೈಟ್-ಕ್ಲಿಕ್ ಮಾಡಿ ಮತ್ತು 'Properties' ಅನ್ನು ಆಯ್ಕೆಮಾಡಿ. 'croplus Properties' ವಿಂಡೋ ತೆರೆದುಕೊಳ್ಳುತ್ತದೆ. |
07:36 | 'Change' ಬಟನ್ ಮೇಲೆ ಕ್ಲಿಕ್ ಮಾಡಿ. 'Python' ಅನ್ನು ಆಯ್ಕೆಮಾಡಿ, ಆಮೇಲೆ 'OK' ಮೇಲೆ ಕ್ಲಿಕ್ ಮಾಡಿ. |
07:44 | 'Properties' ವಿಂಡೋದಲ್ಲಿ 'OK' ಮೇಲೆ ಕ್ಲಿಕ್ ಮಾಡಿ. 'croplus' ಫೈಲನ್ನು ಡಬಲ್-ಕ್ಲಿಕ್ ಮಾಡಿ. |
07:51 | 'Python exe' ಫೈಲ್ ರನ್ ಆಗುತ್ತಿರುವುದನ್ನು ನೀವು ನೋಡಬಹುದು. ಸಾಫ್ಟ್ವೇರ್ ಇಂಟರ್ಫೇಸ್ ತೆರೆದುಕೊಳ್ಳುತ್ತದೆ. |
07:59 | ದಯವಿಟ್ಟು ಗಮನಿಸಿ- 'Windows 8/8.1' ಮೇಲೆ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡುವಾಗ, ‘settings’ ನಲ್ಲಿ 'unsigned driver installation' ಅನ್ನು ಸಕ್ರಿಯಗೊಳಿಸಿ. |
08:10 | ಸಿಸ್ಟಂಗೆ, ಸಾಧನವನ್ನು ನಾವು 'USB' ಪೋರ್ಟ್ ನ ಮೂಲಕ ಜೋಡಿಸಬಹುದು. ಜೋಡಿಸಿದ ನಂತರ, ಸಾಫ್ಟ್ವೇರ್ ಇಂಟರ್ಫೇಸ್ ತೆರೆದುಕೊಳ್ಳುತ್ತದೆ. |
08:19 | ಈಗ, ನಾನು ಸಾಧನ ಹಾಗೂ ಇಂಟರ್ಫೇಸ್ ಗಳನ್ನು ಬಳಸಿ ಒಂದು ಪ್ರಯೋಗವನ್ನು ತೋರಿಸುತ್ತೇನೆ. |
08:25 | ಈ ಪ್ರಯೋಗದಲ್ಲಿ, ನಾವು ಬಾಹ್ಯ ಮತ್ತು ಆಂತರಿಕ ಮೂಲಗಳ ವೋಲ್ಟೇಜ್ ಗಳನ್ನು ಅಳೆಯುತ್ತೇವೆ ಮತ್ತು ಹೋಲಿಸುತ್ತೇವೆ. |
08:33 | ಈ ಪ್ರಯೋಗವನ್ನು ತೋರಿಸಲು, ನಮಗೆ ವೋಲ್ಟೇಜ್ ನ ಬಾಹ್ಯ ಮೂಲದಂತೆ ಒಂದು ಬ್ಯಾಟರಿಯ ಅಗತ್ಯವಿದೆ. ಬ್ಯಾಟರಿಯ 'ವೋಲ್ಟೇಜ್' “3V” ಆಗಿದೆ. |
08:44 | ಈ ಪ್ರಯೋಗಕ್ಕಾಗಿ, 'ಗ್ರೌಂಡ್ (GND)' ಟರ್ಮಿನಲ್ ಹಾಗೂ 'A1' ಟರ್ಮಿನಲ್ ಗಳನ್ನು ಬ್ಯಾಟರಿಗೆ ಜೋಡಿಸಲಾಗಿದೆ. |
08:50 | ಇಂಟರ್ಫೇಸ್ ನಲ್ಲಿ 'A1' ಟರ್ಮಿನಲ್ ನ ವೋಲ್ಟೇಜ್ ಅನ್ನು ತೋರಿಸಲು, 'A1' ಮೇಲೆ ಕ್ಲಿಕ್ ಮಾಡಿ. ತೋರಿಸಲಾದ ವೋಲ್ಟೇಜ್ “+3.15V” ಆಗಿದೆ. |
09:00 | ಕನೆಕ್ಷನ್ ಅನ್ನು ರಿವರ್ಸ್ ಮಾಡಿದಾಗ, ವೋಲ್ಟೇಜ್ “-3.14V” ಇರುತ್ತದೆ. |
09:06 | ಬ್ಯಾಟರಿಯ ಬದಲಾಗಿ, ನಾವು 'PVS' ಅನ್ನು ವೋಲ್ಟೇಜ್ ನ ಇಂಟರ್ನಲ್ ಸೋರ್ಸ್ ಎಂದು ಬಳಸಬಹುದು. ಈ ಪ್ರಯೋಗಕ್ಕಾಗಿ, 'A1' ಅನ್ನು 'PVS' ಗೆ ಜೋಡಿಸಲಾಗಿದೆ. |
09:17 | ಇಂಟರ್ಫೇಸ್ ನ ಬಲಭಾಗದಲ್ಲಿ, 'Set PVS' ವ್ಯಾಲ್ಯೂ= '3V' ಮತ್ತು 'Enter' ಅನ್ನು ಒತ್ತಿ. ಪ್ರದರ್ಶಿಸಲಾದ 'PVS' ನ ವೋಲ್ಟೇಜ್ '3.001V'. |
09:31 | ಮೇಲ್ಗಡೆ ಎಡಮೂಲೆಯಲ್ಲಿ, 'A1' ಮೇಲೆ ಕ್ಲಿಕ್ ಮಾಡಿ. 'A1' ದ ತೋರಿಸಲಾದ ವೋಲ್ಟೇಜ್ “3.008V” ಆಗಿದೆ. |
09:40 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು:
|
09:49 | * ಲಿನಕ್ಸ್, ನೆಟ್ಬುಕ್, ಆಂಡ್ರೈಡ್ ಹಾಗೂ ವಿಂಡೋಸ್ ಗಳ ಮೇಲೆ ಸಾಫ್ಟ್ವೇರ್ ಅನ್ನುಹೇಗೆ ಇನ್ಸ್ಟಾಲ್ ಮಾಡುವುದು
|
10:03 | ಒಂದು ಅಸೈನ್ಮೆಂಟ್ -
ನಿಮ್ಮ ಆಪರೇಟಿಂಗ್ ಸಿಸ್ಟಂಗೆ ಅನುಗುಣವಾಗಿ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಿ. |
10:09 | 'ExpEYES Junior' ಅನ್ನು 'Inter-University Accelerator Centre, New Delhi' ಯ 'PHOENIX' ಪ್ರೊಜೆಕ್ಟ್ ನ ಮೂಲಕ ರೂಪಿಸಿ, ಅಭಿವೃದ್ಧಿ ಪಡಿಸಲಾಗಿದೆ. |
10:17 | ಈ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:25 | ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. |
10:32 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ. |
10:43 | ವಂದನೆಗಳು. |