Spoken-Tutorial-Technology/C2/What-is-a-Spoken-Tutorial/Kannada

From Script | Spoken-Tutorial
Jump to: navigation, search
Time Narration
00:01 'ಸ್ಪೋಕನ್ ಟ್ಯುಟೋರಿಯಲ್' ಟೆಕ್ನೋಲಾಜಿ ಯ ಪರಿಚಯಾತ್ಮಕವಾದ ಈ ಪ್ರಸ್ತುತಿಗೆ ನಿಮಗೆ ಸ್ವಾಗತ. ಇದು ಭಾರತವನ್ನು IT ಸಾಕ್ಷರ ದೇಶವನ್ನಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
00:09 ಈ ಪ್ರೊಜೆಕ್ಟ್ ಅನ್ನು IIT Bombay ಯ ಪ್ರೊ. ಕಣ್ಣನ್ ಮೌದ್ಗಲ್ಯ ಅವರು ನಡೆಸುತ್ತಿದ್ದಾರೆ.
00:15 'ಸ್ಪೋಕನ್ ಟ್ಯುಟೋರಿಯಲ್' ಎಂದರೇನು?
00:17 ಇದು, ಕೆಲವು ಸಾಫ್ಟ್ವೇರ್ ಗಳನ್ನು ವ್ಯಾಖ್ಯಾನದ ಜೊತೆಗೆ ವಿವರಿಸುವ ಸಂಗಣಕೀಯ ಪಾಠಗಳನ್ನು ರೆಕಾರ್ಡ್ ಮಾಡುವ ಕಾರ್ಯಾಂಗವಾಗಿದೆ.
00:24 ಇದರ ಪರಿಣಾಮ ಸ್ವರೂಪವೇ ಸ್ಪೋಕನ್ ಟ್ಯುಟೋರಿಯಲ್ ಆಗಿದೆ.
00:27 ಇದು ಸಾಮಾನ್ಯವಾಗಿ ಹತ್ತು ನಿಮಿಷದ ಕಾಲಾವಧಿಯನ್ನು ಹೊಂದಿರುತ್ತದೆ.
00:30 ಸ್ಪೋಕನ್ ಟ್ಯೊಟೋರಿಯಲ್ ನ ರಚನೆಯ ಹಂತಗಳೆಂದರೆ,
00:33 * Outline,
00:34 * Script,
00:35 * Recording,
00:36 * ಬೇರೆ ಬೇರೆ ಭಾಷೆಗಳಿಗೆ ಸ್ಕ್ರಿಪ್ಟ್ ಅನ್ನು ಅನುವಾದಿಸುವುದು ಮತ್ತು
00:38 * 'ಡಬ್' ಮಾಡುವುದು.
00:39 ನಾನೀಗ ಈ ಪ್ರತಿಯೊಂದು ಹಂತವನ್ನೂ ವಿವರಿಸುತ್ತೇನೆ.
00:42 ನಾವಿಲ್ಲಿ ಎರಡು ಸಾಫ್ಟ್ವೇರ್ ಸಿಸ್ಟಮ್ ಗಳ ಔಟ್ಲೈನ್ ಅನ್ನು ತೋರಿಸುತ್ತೇವೆ:
00:47 Xfig ಮತ್ತು PHP/MySQL (ಪಿ ಎಚ್ ಪಿ ಮೈ ಎಸ್ ಕ್ಯೂ ಎಲ್)
00:52 ನಾನು ಈಗಾಗಲೇ ಈ ಟ್ಯುಟೋರಿಯಲ್ ಗೆ ಬೇಕಾದ ಎಲ್ಲಾ ಲಿಂಕ್ ಗಳನ್ನೂ http://spoken-tutorial.org (http ಕೊಲನ್ ಸ್ಲಾಶ್ ಸ್ಲಾಶ್ spoken ಡ್ಯಾಶ್ tutorial ಡಾಟ್ ಒ ಆರ್ ಜಿ) ಎಂಬಲ್ಲಿಂದ ಡೌನ್ಲೋಡ್ ಮಾಡಿದ್ದೇನೆ.
01:03 ನಾವೀಗ 'Xfig' ನ ಔಟ್ಲೈನ್ ಅನ್ನು ನೋಡೋಣ.
01:09 ನಾವೀಗ 'PHP' ಯ ಔಟ್ಲೈನ್ ಅನ್ನು ನೋಡೋಣ.
01:15 ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ.
01:19 ಸ್ಪೋಕನ್ ಟ್ಯುಟೋರಿಯಲ್ ನ ರಚನೆಯ ಎರಡನೆಯ ಹಂತ, ಸ್ಕ್ರಿಪ್ಟ್ ಅನ್ನು ತಯಾರಿಸುವುದು.
01:24 ಹೇಗೆ ಚಲನಚಿತ್ರಕ್ಕೆ ಒಂದು ಒಳ್ಳೆಯ ಸ್ಕ್ರಿಪ್ಟ್ ಬೇಕಾಗುತ್ತದೋ ಹಾಗೆಯೇ
01:26 ಒಂದು ಸ್ಪೋಕನ್ ಟ್ಯುಟೋರಿಯಲ್ ಗೂ ಕೂಡಾ ಒಳ್ಳೆಯ ಸ್ಕ್ರಿಪ್ಟ್ ನ ಅವಶ್ಯಕತೆ ಇದೆ.
01:29 ಪ್ರಸ್ತುತ ಟ್ಯುಟೋರಿಯಲ್ ನ ಸ್ಕ್ರಿಪ್ಟ್ ಇಲ್ಲಿದೆ.
01:38 ಸ್ಕ್ರಿಪ್ಟ್ ಅನ್ನು ಬರೆಯಲು ಬೇಕಾದ ಮಾರ್ಗಸೂಚಿಯು ಇಲ್ಲಿದೆ.
01:45 ಮಾರ್ಗಸೂಚಿಯನ್ನು ವಿವರಿಸುವ ಟ್ಯುಟೋರಿಯಲ್ ಕೂಡಾ ಅತಿಶೀಘ್ರದಲ್ಲೇ ಸಿಗಲಿದೆ.
01:52 ನಾನೀಗ gmail ನ ಅಕೌಂಟ್ ಮೂಲಕ ಮೇಲ್ ಕಳುಹಿಸುವುದು ಹೇಗೆಂಬುದರ ಬಗ್ಗೆ ಇರುವ ಒಂದು ಸಣ್ಣ ಟ್ಯುಟೋರಿಯಲ್ ಅನ್ನು ತಯಾರಿಸುತ್ತೇನೆ.
02:00 ನಾನೀಗ 'iShowU' ಎಂಬ ಸ್ಕ್ರೀನ್ ರೆಕಾರ್ಡಿಂಗ್ ಸಾಫ್ಟ್ವೇರ್ ಅನ್ನು ತೆರೆಯುತ್ತೇನೆ.
02:06 ಸ್ಕ್ರೀನ್ ಮೇಲಿರುವ ಆಯತವನ್ನು ಗಮನಿಸಿ.
02:09 ಈ ಆಯತದ ಒಳಗಡೆ ಬರುವ ಎಲ್ಲವೂ ರೆಕಾರ್ಡ್ ಆಗುತ್ತದೆ.
02:15 ನಾನು ನೆಟ್ಸ್ಕೇಪ್ (Netscape) ಅನ್ನು ತೆರೆದಿದ್ದೇನೆ.
02:17 ನಾನದನ್ನು ಸರಿಯಾಗಿ ಈ ಆಯತದ ಒಳಗಡೆ ಇಟ್ಟಿದ್ದೇನೆ.
02:22 ಇದು gmail ಅನ್ನು ತೋರಿಸುತ್ತಿದೆ.
02:25 ನಾನು ತಮಿಳು ಭಾಷೆಯಲ್ಲಿ ಮಾತನಾಡುತ್ತೇನೆ.
02:27 ನಾನು ರೆಕಾರ್ಡಿಂಗ್ ಶುರು ಮಾಡುತ್ತೇನೆ.
02:30 "Guest.spoken aaga login seygiren gmail ai thirandagi vittadu
02:40 compose button moolam aarambikap pogiren" kannan@iitb.ac.in
02:56 Subject :Test
03:03 "ingu varuvom"
03:06 "This is a test mail"
03:11 "Send button moolam email ai anuppugiren"
03:16 "ippodu sign out seygiren nanri, vanakkam"
03:26 ನಾನೀಗ ರೆಕಾರ್ಡಿಂಗ್ ಮುಗಿಸಿದ್ದೇನೆ.
03:28 ಅನುಕ್ಷಣ, ರೆಕಾರ್ಡಿಂಗ್ ಸಾಫ್ಟ್ವೇರ್, ಮೂವೀಯನ್ನು ರಚಿಸುತ್ತದೆ.
03:32 ನಾನು ಮೊದಲು Netscape ಮತ್ತು iShowU ಗಳನ್ನು ಕ್ಲೋಸ್ ಮಾಡುತ್ತೇನೆ.
03:43 ಈಗ ರೆಕಾರ್ಡ್ ಆದ ಮೂವೀಯನ್ನು ಪ್ಲೇ ಮಾಡುತ್ತೇನೆ.
03:47 (ರೆಕಾರ್ಡ್ ಪ್ಲೇ ಆಗುತ್ತದೆ...)
03:53 ನಾವು ಇದನ್ನು ಮುಂದುವರಿಸೋಣ.
03:57 (ರೆಕಾರ್ಡ್ ಪ್ಲೇ ಆಗುತ್ತದೆ...)
04:04 ನಾನೀಗ ಇದನ್ನು ಕ್ಲೋಸ್ ಮಾಡುತ್ತೇನೆ.
04:09 ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ.
04:11 ಇದನ್ನೇ ನಾನು 'ಸ್ಪೋಕನ್ ಟ್ಯುಟೋರಿಯಲ್' ಎಂದು ಕರೆದದ್ದು.
04:14 ಶಾಲೆಗೆ ಹೋಗುವ ಮಕ್ಕಳೂ ಕೂಡಾ ಈ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ರಚಿಸಬಹುದು, ಅದು ಅಷ್ಟು ಸುಲಭವಾಗಿದೆ.
04:20 ನಾನೀಗ ರೆಕಾರ್ಡಿಂಗ್ ಗಾಗಿ ಇರುವ ಟೂಲ್ ಗಳ ಬಗ್ಗೆ ವಿವರಿಸುತ್ತೇನೆ.
04:24 ಲಿನಕ್ಸ್ ನಲ್ಲಿ, ನಾವು recordMyDesktop ಅನ್ನು ಹೊಂದಿದ್ದೇವೆ.
04:27 ಈ ಸ್ಪೋಕನ್ ಟ್ಯುಟೋರಿಯಲ್ ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ.
04:37 (ರೆಕಾರ್ಡ್ ಪ್ಲೇ ಆಗುತ್ತದೆ...)
04:43 ವಿಂಡೋಸ್ ನಲ್ಲಿ, ನಾವು Camstudio ವನ್ನು ಹೊಂದಿದ್ದೇವೆ.
04:47 ಈ ಸ್ಪೋಕನ್ ಟ್ಯುಟೋರಿಯಲ್, ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ.
04:52 ಇವೆರಡೂ ಕೂಡಾ FOSS ಗಳು.
04:59 ಟ್ಯುಟೋರಿಯಲ್, ನಿರೂಪಣೆಗಾಗಿ (narration) ಮಾರ್ಗದರ್ಶನವನ್ನು ಮಾಡುತ್ತದೆ.
05:03 ನಾನದನ್ನು ಪ್ಲೇ ಮಾಡುತ್ತೇನೆ.
05:08 (ರೆಕಾರ್ಡ್ ಪ್ಲೇ ಆಗುತ್ತದೆ...)
05:16 ನಾನೀಗ ಸ್ಲೈಡ್ಗಳಿಗೆ ಹಿಂತಿರುಗುತ್ತೇನೆ.
05:19 ಸ್ಪೋಕನ್ ಟ್ಯುಟೋರಿಯಲ್ ನ ನಾಲ್ಕನೇ ಹಂತವೇನೆಂದರೆ, ಸ್ಕ್ರಿಪ್ಟ್ ಅನ್ನು ಸ್ಥಾನೀಯ ಭಾಷೆಗೆ ಅನುವಾದಿಸುವುದು.
05:26 ಇಂಗ್ಲೀಶ್ ನಲ್ಲಿ ಯಾರು ದುರ್ಬಲರಾಗಿರುವರೋ ಅವರಿಗೆ ಸುಲಭವಾಗಲು,
05:31 ನಾನು getting started on Scilab ಎಂಬುದರ ಅನುವಾದಿತ ಸ್ಕ್ರಿಪ್ಟ್ ಅನ್ನು
05:35 ಹಿಂದಿ, ಮರಾಠಿ ಮತ್ತು ಬೆಂಗಾಲಿ ಯಲ್ಲಿ ತೋರಿಸುತ್ತೇನೆ.
05:40 ಹಿಂದಿ……. ಮರಾಠಿ ……. ಮತ್ತು ಬೆಂಗಾಲಿ.
05:46 ನಾವೀಗ ಬ್ರೌಸರ್ ಗೆ ಹಿಂತಿರುಗೋಣ.
05:49 ಸ್ಕ್ರಿಪ್ಟ್ ನ ಉಪಯೋಗದಿಂದ ನಾವು ಕೇವಲ ಮಾತನಾಡುವ ಭಾಗವನ್ನು ಬದಲಿಸುತ್ತೇವೆ.
05:53 ವಿಡಿಯೋ ಎಂಬುದು ಹಾಗೇಯೇ ಇರುತ್ತದೆ.
05:56 ಲಿನಕ್ಸ್ ನಲ್ಲಿ ನಾವು Audacity ಮತ್ತು ffmpeg ಅನ್ನು ಉಪಯೋಗಿಸಬಹುದು.
06:00 ಈ ಸ್ಪೋಕನ್ ಟ್ಯುಟೋರಿಯಲ್ ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ.
06:06 ನಾನೀಗ ಬ್ರೌಸರ್ ಅನ್ನು ಮಿನಿಮೈಸ್ ಮಾಡುತ್ತೇನೆ.
06:09 ಇದರ ಕೆಳಭಾಗದಲ್ಲಿ ಹಲವು ಟ್ಯಾಬ್ ಗಳಿರುವ ಮತ್ತೊಂದು ಬ್ರೌಸರ್ ಇದೆ.
06:13 ನಾನೀಗ ಇದನ್ನು ಪ್ಲೇ ಮಾಡುತ್ತೇನೆ: (ರೆಕಾರ್ಡ್ ಪ್ಲೇ ಆಗುತ್ತದೆ...)
06:31 ವಿಂಡೋಸ್ ನಲ್ಲಿ ನಾವು Movie Maker ಅನ್ನು ಉಪಯೋಗಿಸಬಹುದು.
06:38 ಈ ಸ್ಪೋಕನ್ ಟ್ಯುಟೋರಿಯಲ್ ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ.
06:42 ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ.
06:50 ನಾವೀಗ Scilab ಎಂಬ ಸ್ಪೋಕನ್ ಟ್ಯುಟೋರಿಯಲ್ ಅನ್ನು ಹಿಂದಿ, ಮಲಯಾಲಂ ಹಾಗೂ ಬೆಂಗಾಲಿಯಲ್ಲಿ ನೋಡಲಿದ್ದೇವೆ.
07 06 (ರೆಕಾರ್ಡ್ ಪ್ಲೇ ಆಗುತ್ತದೆ...) ನಾನೀಗ ಮಲಯಾಲಂ ಅನ್ನು ಪ್ಲೇ ಮಾಡುತ್ತೇನೆ. (ರೆಕಾರ್ಡ್ ಪ್ಲೇ ಆಗುತ್ತದೆ...) ನಾನೀಗ ಬೆಂಗಾಲಿಯನ್ನು ಪ್ಲೇ ಮಾಡುತ್ತೇನೆ.. (ರೆಕಾರ್ಡ್ ಪ್ಲೇ ಆಗುತ್ತದೆ...)
07:46 ನಾವೀಗ ಸ್ಲೈಡ್ ಗಳಿಗೆ ಹಿಂತಿರುಗೋಣ.
07:50 ನಾವೀಗ ಸ್ಪೋಕನ್ ಟ್ಯುಟೋರಿಯಲ್ ನ ಮುಖಾಂತರ ಜಟಿಲವಾದ ವಿಷಯವನ್ನು ಹೇಗೆ ವಿವರಿಸುವುದೆಂದು ಚರ್ಚಿಸೋಣ.
07:54 ಎಷ್ಟಂದರೂ, ಒಂದು ಸ್ಪೋಕನ್ ಟ್ಯುಟೋರಿಯಲ್ ಇರುವುದು ೧೦ ನಿಮಿಷವೇ ಅಲ್ಲವೇ.
07:59 ಟ್ಯುಟೋರಿಯಲ್ ಗಳನ್ನು ಸೇರಿಸುದರಿಂದ ಮೇಲ್ಸ್ತರದ ವಿಷಯಗಳನ್ನೂ ಕೂಡಾ ಕಲಿಸಬಹುದು.
08:03 ಅನುಕೂಲಕರವಾದ ಮಾರ್ಗವಿದ್ದಲ್ಲಿ
08:06 ಹಿಮಾಲಯವನ್ನು ಕೂಡಾ ಹತ್ತಬಹುದು.
08:09 ನಾವೀಗ LaTeX ಮತ್ತು Scilab ನ ಅಧ್ಯಯನ ಯೋಜನೆಗಳನ್ನು ನೋಡೋಣ.
08:20 LaTeX ನ ಅಧ್ಯಯನ ಯೋಜನೆಗಳು:
08:26 Scilab ನ ಅಧ್ಯಯನ ಯೋಜನೆಗಳು:
08:29 ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ.
08:32 ಸ್ಪೋಕನ್ ಟ್ಯುಟೋರಿಯಲ್ ಮುಖಾಂತರ ಯಾರೊಬ್ಬ ಕೂಡಾ ತನ್ನ ಡಿಜಿಟಲ್ ಅಸಮಾನತೆಯನ್ನು ದೂರಗೊಳಿಸಿಕೊಳ್ಳಬಹುದು.
08:36 ಉದಾಹರಣೆಗಾಗಿ, ನಾವಿಲ್ಲಿ irctc ಮೂಲಕ ಟಿಕೆಟ್ ಖರೀದಿಸುವುದು ಹೇಗೆ,
08:41 ಕಡಿಮೆ ವೆಚ್ಛದ ಕೃಷಿ ಸಾಲವನ್ನು ಎಲ್ಲಿ ಪಡೆಯಬಹುದು,
08:44 ಪ್ರಾಥಮಿಕ ಚಿಕಿತ್ಸಾ ಕೇಂದ್ರವು ಎಲ್ಲಿದೆ,
08:47 ಪ್ರಾಥಮಿಕ ಚಿಕಿತ್ಸೆಯನ್ನು ಹೇಗೆ ಪಡೆಯುವುದು,
08:51 TV ಗಳನ್ನು ತುಂಬಾ ಕಡಿಮೆ ಬೆಲೆಯಲ್ಲಿ ಯಾವ ಅಂಗಡಿಯಲ್ಲಿ ಮಾರುತ್ತಿದ್ದರೆಂದು ವೆಬ್ ಸರ್ಚ್ ನ ಮುಖಾಂತರ ಹೇಗೆ ತಿಳಿಯುವುದು ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಸಬಹುದು.
08:56 ಹೀಗೆ, ಇದರ ಸೂಚಿಯು ಬಹಳ ವಿಸ್ತೃತವಾಗಿದೆ.
08:58 ಒಟ್ಟಿನಲ್ಲಿ, ಡಿಜಿಟಲ್ ಡಿವೈಡ್ ಅನ್ನು ಸರಿದೂಗಿಸಲು ಈ ವಿಧಾನವನ್ನು ಬಳಸಬಹುದು
09:04 ಸ್ಪೋಕನ್ ಟ್ಯುಟೋರಿಯಲ್ ಗಳು ’ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್’ ನಡಿಯಲ್ಲಿ (creative commons license) ಬಿಡುಗಡೆಯಾಗಿವೆ.
09:08 ಇವುಗಳು ಸ್ಪೋಕನ್ ಟ್ಯುಟೋರಿಯಲ್ ವೆಬ್ಸೈಟ್ ನಲ್ಲಿ ಮುಕ್ತವಾಗಿ ಡೌನ್ಲೋಡ್ ಮಾಡಲು ಸಿಗುತ್ತವೆ.
09:13 ನಾವೀಗ ಹತ್ತು ನಿಮಿಷದ ಸ್ಪೋಕನ್ ಟ್ಯುಟೋರಿಯಲ್ ನ ರಚನೆಗೆ ಸಿಗುವ ಮಾನಧನದ ಬಗ್ಗೆ ತಿಳಿಯೋಣ.
09:19 ಸ್ಕ್ರಿಪ್ಟ್ ಮತ್ತು ಸ್ಲೈಡ್ ಗಳ ರಚನೆಗೆ 3,500 ರೂಪಾಯಿಗಳು.
09:23 ಒಬ್ಬ ಹೊಸಬ ಅದನ್ನು ನೋಡಿ ಮಾಡುವ ವಿಮರ್ಶೆಗೆ 500 ರೂಪಾಯಿಗಳು.
09:28 ಸ್ಪೋಕನ್ ಟ್ಯುಟೋರಿಯಲ್ ನ ರೆಕಾರ್ಡಿಂಗ್ ಗೆ 1,000 ರೂಪಾಯಿಗಳು. ಇದನ್ನು ಹೊಸಬ ಕೂಡಾ ಮಾಡಬಹುದಾಗಿದೆ.
9:34 ಸ್ಥಾನೀಯ ಭಾಷೆಗೆ ಅನುವಾದ ಮಾಡಿದಲ್ಲಿ 1,000 ರೂಪಾಯಿಗಳು.
09:37 ಸ್ಥಾನೀಯ ಭಾಷೆಗೆ ಡಬ್ ಮಾಡಿದಲ್ಲಿ 500 ರೂಪಾಯಿಗಳು.
09:40 ಮಾನಧನವು ಟ್ಯುಟೋರಿಯಲ್ ನ ಪರಿಶೀಲನೆ ಮತ್ತು ಸ್ವೀಕೃತಿಯ ನಂತರ ಸಿಗುತ್ತದೆ.
09:43 ಮೇಲೆ ಹೇಳಿದ ಮಾನಧನವು ಹತ್ತು ನಿಮಿಷದ ಟ್ಯುಟೋರಿಯಲ್ ಗೆ ಆಗಿದ್ದು ಸರಿಯಾದ ಮಾನಧನವು ಟ್ಯುಟೋರಿಯಲ್ ನ ಸಮಯಾವಧಿಯ ಮೇಲೆ ನಿಶ್ಚಯಿಸಲಾಗುತ್ತದೆ.
09:50 Rs. 5,000 ಗಳ ಒಂದು ಕಂತಿನ ಬೋನಸ್ ಸಹ ಇದೆ.
09:54 ಸಾಮಾನ್ಯ ಕಲಿಕೆಯ ಸಾಧನಗಳಿಂದ ವಂಚಿತರಾಗಿ ಯಾರ ಸಹಾಯವಿಲ್ಲದೆ ಕಲಿಯಲಿಚ್ಛಿಸುವ ಮಕ್ಕಳು ನಮ್ಮ ಮುಖ್ಯ ಕೇಳುಗರು.
10:00 ಹಾಗಾಗಿ, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವತಃ ಕಲಿಕೆಗೆ ಅನುಕೂಲವಾಗುವಂತೆ ರಚಿಸಬೇಕು.
10:05 ನಾವು ಉಚಿತವಾಗಿ ದೊರೆಯುವ ಸಾಫ್ಟ್ವೇರ್ಗಳನ್ನೇ ಕಲಿಯಲು ಪ್ರೋತ್ಸಾಹಿಸುತ್ತೇವೆ.
10:08 ನಾವು ಈ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನೂ ಆಯೋಜಿಸುತ್ತೇವೆ.
10:13 ನಮಗೆ ಕ್ಯಾಂಪಸ್ ಅಂಬಾಸಿಡರ್ ಗಳು (Campus Ambassadors) ಬೇಕಾಗಿದ್ದಾರೆ.
10:16 ನಮ್ಮಲ್ಲಿ Campus Ambassador (ಕ್ಯಾಂಪಸ್ ಅಂಬಾಸಿಡರ್) ಪ್ರೊಗ್ರಾಂ ಬಗ್ಗೆ ಒಂದು ಸ್ಪೋಕನ್ ಟ್ಯುಟೋರಿಯಲ್ ಸಹ ಇದೆ.
10:21 ನಾವಿದನ್ನು ಪ್ಲೇ ಮಾಡೋಣ: (ರೆಕಾರ್ಡ್ ಪ್ಲೇ ಆಗುತ್ತದೆ...)
10:35 ನಾನು ನಮ್ಮ ಪ್ರೊಜೆಕ್ಟ್ ನ ವೆಬ್ಸೈಟ್ ಅನ್ನು ತೊರಿಸುತ್ತೇನೆ: [http ಕೊಲನ್ ಸ್ಲಾಶ್ ಸ್ಲಾಶ್ spoken ಹೈಫನ್ tutorial ಡಾಟ್ ಒ ಆರ್ ಜಿ]
10:45 ಈ ಪ್ರಸ್ತುತ ಟ್ಯುಟೋರಿಯಲ್ ಇಲ್ಲಿ ಲಭ್ಯವಿದೆ.
10:48 ”ಕಾಂಟ್ಯಾಕ್ಟ್ ಅಸ್” ಇಲ್ಲಿದೆ.
10:50 FOSS ಸಿಸ್ಟಮ್ ಗಳ ಸೂಚಿಯು ಇಲ್ಲಿರುವ wiki ಯಲ್ಲಿ ಲಭ್ಯವಿದೆ.
10:59 ನೀವು ಇವುಗಳಲ್ಲಿ ಯಾವುದನ್ನಾದರೂ ಪ್ರಯತ್ನಿಸಬಹುದು.
11:03 ನೀವು ಹೊಸ ಸಿಸ್ಟಮ್ ಗಳನ್ನು ಕೂಡಾ ಪರಿಚಯಿಸಬಹುದು.
11:06 ನಮ್ಮನ್ನು ಸಂಪರ್ಕಿಸಲು ಹಿಂಜರಿಯಬೇಡಿ.
11:10 ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ. ನಾವು ಸ್ಪೋಕನ್ ಟ್ಯುಟೋರಿಯಲ್ ಅನ್ನು ರಚಿಸುವಲ್ಲಿ, ಪರಿಶೀಲಿಸುವಲ್ಲಿ ಹಾಗೂ ಉಪಯೋಗಿಸುವಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ಸ್ವಾಗತಿಸುತ್ತೇವೆ.
11:17 ನಮಗೆ ತಾಂತ್ರಿಕ ಸಹಾಯವೂ ಬೇಕಿದೆ.
10:20 ನಮ್ಮಲ್ಲಿ ಬಹಳ ಕೆಲಸವಿದೆ.
11:22 ನಮ್ಮ ಜೊತೆ ಪೂರ್ಣಕಾಲಿಕರಾಗಿ ಅಥವಾ ಅಲ್ಪಕಾಲಿಕರಾಗಿ ಕೆಲಸ ಮಾಡಬಹುದು.
11:25 ನೀವೇಕೆ ನಮ್ಮೊಂದಿಗೆ ಕೆಲಸ ಮಾಡಬೇಕು?
11:27 ಡಿಜಿಟಲ್ ಅಸಮಾನತೆಯನ್ನು ಹೋಗಲಾಡಿಸಲು.
11:29 ನಮ್ಮ ಮಕ್ಕಳನ್ನು IT ಸಾಕ್ಷರರನ್ನಾಗಿ ಮಾಡಲು.
11:31 FOSS ಅನ್ನು ಪ್ರೋತ್ಸಾಹಿಸಲು.
11:33 ನಮ್ಮ ಮಕ್ಕಳನ್ನು ಉದ್ಯೋಗಿಗಳನ್ನಾಗಿಸಲು.
11:35 ನಮ್ಮ ದೇಶವನ್ನು ಅಭಿವೃದ್ಧಿ ಪಥದೆಡೆ ಒಯ್ಯಲು.
11:37 ಡಾ. ಅಬ್ದುಲ್ ಕಲಾಮ್ ಅವರ ಕನಸನ್ನು ನನಸಾಗಿಸಲು.
11:40 ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ.
11:44 ದಯವಿಟ್ಟು ಸಧ್ಯವಾದಲ್ಲಿ, ಈ ಟ್ಯುಟೋರಿಯಲ್ ನಲ್ಲಿ ತೋರಿಸಿರುವ ಎಲ್ಲಾ ವೆಬ್ ಪೇಜ್ ಗಳನ್ನು ನೋಡಿ.
11:49 ನಾನೀಗ ನಮ್ಮ ಆರ್ಥಿಕ ಸಹಾಯಕರನ್ನು ಪರಿಚಯಿಸಲಿಚ್ಛಿಸುತ್ತೇನೆ.
11:52 "ಸ್ಪೋಕನ್ ಟ್ಯುಟೋರಿಯಲ್" ಎಂಬುದು “ಟಾಕ್ ಟು ಅ ಟೀಚರ್" ಎಂಬ ಪ್ರೋಜೆಕ್ಟ್ ನ ಭಾಗವಾಗಿದೆ.
11:56 ಇದು ಭಾರತ ಸರ್ಕಾರದ, ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD ಇದರಿಂದ ಸಮರ್ಥಿತವಾಗಿದೆ.
12:01 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಇಲ್ಲಿ ಲಭ್ಯವಿದೆ:

spoken-tutorial.org/NMEICT-Intro

12:11 ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
12:14 ಧನ್ಯವಾದಗಳು.
12:15 ನಾನು IIT Bombay ಯಿಂದ ವಾಸುದೇವ, ನಿಮಗೆ ವಿದಾಯ ಹೇಳುತ್ತೇನೆ.

ಜೈ ಹಿಂದ್.

Contributors and Content Editors

PoojaMoolya, Sandhya.np14, Vasudeva ahitanal