Time
|
Narration
|
00:01
|
side-by-side method (ಸೈಡ್ ಬೈ ಸೈಡ್ ಮೆಥಡ್) ಅನ್ನು ವಿವರಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
|
00:07
|
ಈ ಟ್ಯುಟೋರಿಯಲ್ ನಲ್ಲಿ ನಾವು -
|
00:10
|
'ಸೈಡ್ ಬೈ ಸೈಡ್ ಮೆಥಡ್' ಎಂದರೇನು,
|
00:14
|
ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯಲು, 'ಸೈಡ್ ಬೈ ಸೈಡ್ ಮೆಥಡ್', ಹೇಗೆ ಸಹಾಯ ಮಾಡುವುದು,
|
00:20
|
ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನಿಧಾನವಾಗಿ ಅಥವಾ ಶೀಘ್ರವಾಗಿ ಹೇಗೆ ಕಲಿಯಬಹುದು,
|
00:26
|
ಸ್ಪೋಕನ್-ಟ್ಯುಟೋರಿಯಲ್ ಗಾಗಿ ಅವಶ್ಯವಿರುವ ಸಾಮಗ್ರಿಗಳು ಎಲ್ಲಿ ಲಭ್ಯವಿರುತ್ತವೆ ಮತ್ತು
|
00:32
|
ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಉಪಯೋಗಿಸಬಾರದು ಎಂಬುದನ್ನು ಕಲಿಯುವೆವು.
|
00:36
|
ನಾವಿಲ್ಲಿ ಕಾರ್ಯಶಾಲೆಗಳ ಆಯೋಜಕರಿಗಾಗಿ ಸಂದೇಶವನ್ನು ಸಹ ಹೊಂದಿದ್ದೇವೆ.
|
00:41
|
'ಸೈಡ್ ಬೈ ಸೈಡ್ ಮೆಥಡ್' ಎಂಬುದು,
|
00:47
|
ನಿಮಗೆ ಮಾರ್ಗದರ್ಶನ ಮಾಡಲು ತಜ್ಞರಿಲ್ಲದಿದ್ದರೂ, ನಿಮ್ಮಷ್ಟಕ್ಕೆ ನೀವೇ ಸಾಫ್ಟ್ವೇರ್ ಅನ್ನು ಕಲಿಯಲು ನಿಮಗೆ ಸಹಾಯಮಾಡುವ ಒಂದು ತಂತ್ರಜ್ಞಾನ ವಾಗಿದೆ. ಇದನ್ನು ನಾವು IIT Bombayಯಲ್ಲಿ ಕಂಡುಹಿಡಿದಿದ್ದೇವೆ.
|
00:54
|
ನೀವು ಇದನ್ನು ಹೇಗೆ ಮಾಡಬಹುದು?
|
00:56
|
ಸ್ಪೋಕನ್ ಟ್ಯುಟೋರಿಯಲ್ ನಿಂದ, ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯುವುದರಿಂದ ಇದನ್ನು ಮಾಡಬಹುದು.
|
01:01
|
ಕಲಿಯುವುದು ಎಂದರೇನು?
|
01:03
|
ಸ್ಪೋಕನ್ ಟ್ಯುಟೋರಿಯಲ್ ಅನ್ನು ಬರೀ ನೋಡುವುದೇ?
|
01:08
|
ಅಲ್ಲವೇ ಅಲ್ಲ.
|
01:09
|
ಅಥವಾ ಸ್ಪೋಕನ್ ಟ್ಯುಟೋರಿಯಲ್ ಅನ್ನು ಎಚ್ಚರಿಕೆಯಿಂದ ಕೇಳುವುದರಿಂದ ಮಾತ್ರವೇ?
|
01:13
|
ಅಲ್ಲ.
|
01:14
|
ಕಲಿಯುವುದು ಹೀಗೆ -
|
01:16
|
ಹೌದು, ನೀವು ಸರಿಯಾಗಿ ಊಹಿಸಿದ್ದೀರಿ – ಮಾಡುವುದರಿಂದ ... ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡನ್ನು ಇನ್ನೊಂದು ಸಲ ಮಾಡಿನೋಡುವುದರಿಂದ.
|
01:24
|
ಯಾರಾದರೂ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡನ್ನು ಇನ್ನೊಂದು ಸಲ ಮಾಡಲು ಸಾಧ್ಯವಿದೆಯೇ?
|
01:29
|
ಉತ್ತರ- "ಹೌದು".
|
01:31
|
ನಾನು ಹೀಗೇಕೆ ಹೇಳುತ್ತಿದ್ದೇನೆ?
|
01:33
|
ಏಕೆಂದರೆ, ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವಯಂಕಲಿಕೆಗೆ ಸೂಕ್ತವಾಗಿರುವಂತೆ ತಯಾರಿಸುತ್ತೇವೆ.
|
01:39
|
ನಾವು ಇದನ್ನು ಹೇಗೆ ತಯಾರಿಸುತ್ತೇವೆ?
|
01:41
|
ಇದೊಂದು ದೊಡ್ಡ ಕಥೆ.
|
01:42
|
ಈ ಉದ್ದೇಶಕ್ಕಾಗಿಯೇ, IIT Bombay ಯಲ್ಲಿ ನಾವು ವಿಶೇಷ ವಿಧಾನಗಳನ್ನು ಕಂಡುಹಿಡಿದಿದ್ದೇವೆ.
|
01:49
|
ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವಯಂ ಕಲಿಕೆಗಾಗಿ ತಯಾರಿಸಲಾಗಿದೆ.
|
01:52
|
ಆದ್ದರಿಂದ, ನೀವು ಸ್ಪೋಕನ್ ಟ್ಯುಟೋರಿಯಲ್ ಗಳಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡ್ ಅನ್ನು ಪುನ: ಮಾಡಬಹುದು.
|
01:58
|
ಪ್ರತಿಯೊಂದು ಕಮಾಂಡ್ ಅನ್ನು ಪುನ: ಮಾಡುವ ಅತ್ಯುತ್ತಮ ವಿಧಾನ ಯಾವುದು?
|
02:02
|
ನಾನು ಇದನ್ನು ಮಾಡಿತೋರಿಸುತ್ತೇನೆ.
|
02:04
|
ನಾವು ಈ ಲಿಂಕ್ ಗೆ ಹೋಗೋಣ: http://spoken-tutorial.org
|
02:08
|
ಇಲ್ಲಿ, ನಾವು 'Scilab' (ಸೈಲ್ಯಾಬ್) ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹುಡುಕೋಣ.
|
02:14
|
ಇಲ್ಲಿ ನಾನು Vector Operations (ವೆಕ್ಟರ್ ಆಪರೇಶನ್ಸ್) ಎಂಬ ಸ್ಪೋಕನ್ ಟ್ಯುಟೋರಿಯಲ್ ನೊಂದಿಗೆ ಮಾಡಿ ತೋರಿಸುತ್ತೇನೆ.
|
02:18
|
ನಾನು ಈಗಾಗಲೇ ಈ ವೀಡಿಯೋಅನ್ನು ಹುಡುಕಿದ್ದೇನೆ.
|
02:21
|
ನಾನು ವೀಡಿಯೋವನ್ನು ದೊಡ್ಡದಾಗಿಸಬೇಕೇ?
|
02:23
|
ಇಲ್ಲ, ಹಾಗೇನಿಲ್ಲ.
|
02:26
|
ಬೇಕಿದ್ದರೆ ನೀವು ಇದನ್ನು ಚಿಕ್ಕದಾಗಿಸಬಹುದು.
|
02:29
|
ಈಗಾಗಲೇ ನಾನು ಇದನ್ನು ಸಾಧ್ಯವಾದಷ್ಟು ಚಿಕ್ಕದಾಗಿಸಿದ್ದೇನೆ.
|
02:33
|
ವೀಡಿಯೋವನ್ನು ಸ್ಕ್ರೀನ್ ನ ಒಂದು ಬದಿಗೆ ತೆಗೆದುಕೊಂಡು ಹೋಗಲು, ನಾನು ಬ್ರೌಸರ್ ಅನ್ನು ಸರಿಸುವೆನು.
|
02:43
|
ಇನ್ನೊಂದು ಬದಿಗೆ, ಈ ವೀಡಿಯೋ ಕಲಿಸುವ ಸಾಫ್ಟ್ವೇರ್ ಅನ್ನು ನಾವು ಓಪನ್ ಮಾಡೋಣ.
|
02:49
|
ಈ ಸಂದರ್ಭದಲ್ಲಿ, ಇದು 'Scilab' ಆಗಿದೆ.
|
02:51
|
ಏಕೆಂದರೆ, Scilab, ಒಂದು ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ. ನಾವು ಇದನ್ನು ಮಾಡಬಹುದು.
|
02:56
|
ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ಕಮರ್ಷಿಯಲ್ (ವಾಣಿಜ್ಯ) ಸಾಫ್ಟ್ವೇರ್ ಗಳನ್ನು ಪ್ರೋತ್ಸಾಹಿಸುವುದಿಲ್ಲ.
|
03:00
|
ಹೀಗಾಗಿ, ನಿಮಗೆ ಕೆಲಸ ಮಾಡಲು ಬೇಕಾಗಿರುವ ಸಾಫ್ಟ್ವೇರ್ ಅನ್ನು ನೀವು ಯಾವಾಗಲೂ ಉಚಿತವಾಗಿ ಡೌನ್ಲೋಡ್ ಮಾಡಬಹುದು.
|
03:05
|
ನಾವು ಸಾಫ್ಟ್ವೇರ್ ವಿಂಡೋವನ್ನು ದೊಡ್ದದನ್ನಾಗಿಸಬೇಕೇ (maximize)?
|
03:08
|
ಮತ್ತೆ ಉತ್ತರ, "ಮಾಡಬೇಕೆಂದಿಲ್ಲ".
|
03:09
|
ಅದರ ಬದಲಿಗೆ, ನಾನು ಮಾಡಿದಂತೆ ಇದನ್ನು ಚಿಕ್ಕದನ್ನಾಗಿಸಿ ಮತ್ತು ಇನ್ನೊಂದು ಬದಿಗೆ ತೆಗೆದುಕೊಂಡು ಹೋಗಿ.
|
03:15
|
ಈಗ ನಾನು ಜೊತೆ ಜೊತೆಗೇ (SIDE BY SIDE) ಕಲಿಯಲು, ಸ್ಪೋಕನ್ ಟ್ಯುಟೋರಿಯಲ್ ಮತ್ತು ಸಾಫ್ಟ್ವೇರ್ ಗಳನ್ನು ಓಪನ್ ಮಾಡಿದ್ದೇನೆ.
|
03:20
|
ನಂತರ ನಾವು ಏನು ಮಾಡುತ್ತೇವೆ?
|
03:22
|
ನಾವು ಮುಂದಿನ ಸ್ಲೈಡ್ ಗೆ ಹೋಗೋಣ.
|
03:28
|
ವೀಡಿಯೋವನ್ನು 'ಪ್ಲೇ' ಮಾಡಿ.
|
03:29
|
ಸ್ಪೋಕನ್ ಟ್ಯುಟೋರಿಯಲ್ ನಲ್ಲಿಯ ಒಂದು ಕಮಾಂಡ್ ಅನ್ನು ಆಲಿಸಿ.
|
03:32
|
ವೀಡಿಯೋವನ್ನು'Pause' ಮಾಡಿ (ನಿಲ್ಲಿಸಿ).
|
03:34
|
ಸಾಫ್ಟ್ವೇರ್ ನಲ್ಲಿ ಇದೇ ಕಮಾಂಡ್ ಅನ್ನು ಪ್ರಯತ್ನಿಸಿ.
|
03:37
|
ಈ ಕಮಾಂಡ್ ಕೆಲಸ ಮಾಡಿದರೆ, ಮುಂದಿನ ಕಮಾಂಡ್ ಅನ್ನು ಆಲಿಸಿ.
|
03:41
|
ಒಂದುವೇಳೆ ಇದು ಕೆಲಸ ಮಾಡದಿದ್ದರೆ, ಟ್ಯುಟೋರಿಯಲ್ ಅನ್ನು ರಿವೈಂಡ್ (rewind) ಮಾಡಿ.
|
03:44
|
ಮತ್ತೊಮ್ಮೆ ಆಲಿಸಿ ಮತ್ತು ಪ್ರಯತ್ನಿಸಿ.
|
03:47
|
ಹೀಗೆ ಪುನರಾವರ್ತಿಸಿ.
|
03:49
|
ನಾನು Scilab (ಸೈಲ್ಯಾಬ್) ಅನ್ನು ಬಳಸಿ ಇದನ್ನು ಮಾಡಿತೋರಿಸುತ್ತೇನೆ.
|
03:54
04:11
|
ನಾವು ಇದನ್ನು ನಿಲ್ಲಿಸೋಣ.
|
04:15
|
ನಾನು ಈ ಕಮಾಂಡ್ ಅನ್ನು, ಸೈಲ್ಯಾಬ್ (Scilab) ಸಾಫ್ಟ್ವೇರ್ ನ ಮೇಲೆ ಪುನರಾವರ್ತಿಸುತ್ತೇನೆ.
|
04:23
|
p equals 1 2 3, ಕ್ಲೋಸ್ ಬ್ರಾಕೆಟ್ .
|
04:32
|
ವೀಡಿಯೋದಲ್ಲಿ ಇದ್ದಂತಹ ಫಲಿತಾಂಶಗಳೇ ನಮಗೆ ಸಿಗುತ್ತವೆ.
|
04:35
|
ಆದರೆ, ಇದು ತುಂಬಾ ನೀರಸವಾಗಿದೆ.
|
04:37
|
ಏನನ್ನೂ ಮಾಡದೇ ಕೇವಲ ವೀಡಿಯೋವನ್ನು ಕೇಳಲು ನಾನು ಇಷ್ಟಪಡುವುದಿಲ್ಲ.
|
04:40
|
ಇದು ತುಂಬಾ ನಿಧಾನವಾಗಿದೆ ಕೂಡಾ.
|
04:42
|
ಪರವಾಗಿಲ್ಲ.
|
04:43
|
ಸ್ಪೋಕನ್ ಟ್ಯುಟೋರಿಯಲ್ ವಿಧಾನವು, ನಿಮಗೆ ನಿಧಾನವಾಗಿ ಅಥವಾ ಶೀಘ್ರವಾಗಿ ಅಭ್ಯಾಸ ಮಾಡಲು ಅವಕಾಶ ಕಲ್ಪಿಸುತ್ತದೆ.
|
04:48
|
ಶೀಘ್ರವಾಗಿ ನೀವು ಹೇಗೆ ಕಲಿಯಬಹುದೆಂದು ಈಗ ನಾನು ವಿವರಿಸುತ್ತೇನೆ.
|
04:51
|
ನೀವು ಏಕಕಾಲದಲ್ಲಿ ವೀಡಿಯೋ ಕೇಳುತ್ತಲೇ ಸಾಫ್ಟ್ವೇರ್ ನ ಮೇಲೆ ಕೆಲಸ ಮಾಡಬಹುದು.
|
04:57
|
ನಾವು ಮುಂದಿನ ಕಮಾಂಡ್ ಅನ್ನು ಕೇಳೋಣ, ಜೊತೆಗೇ ಅದನ್ನು ಸಾಫ್ಟ್ವೇರ್ ನಲ್ಲಿ ಪ್ರಯತ್ನಿಸೋಣ.
|
05:03
|
ನಾನು 'Play' ಬಟನ್ ಅನ್ನು ಒತ್ತುತ್ತೇನೆ.
|
05:09
05:23
|
ನಾನು ವೀಡಿಯೋ ಅನ್ನು ನಿಲ್ಲಿಸುತ್ತೇನೆ (pause).
|
05:32
|
ವೀಡಿಯೋ ಕೇಳುತ್ತಲೇ ನಾನು ಟೈಪ್ ಮಾಡುವುದನ್ನು ನೀವು ಈಗಷ್ಟೇ ನೋಡಿದಿರಿ.
|
05:36
|
ಇದು, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಶೀಘ್ರವಾಗಿ ಕಲಿಯುವ ಒಂದು ವಿಧಾನವಾಗಿದೆ.
|
05:40
|
ನಾನು ಪುನಃ ಹೇಳುತ್ತಿದ್ದೇನೆ,
|
05:41
|
ಸ್ಪೋಕನ್ ಟ್ಯುಟೋರಿಯಲ್ ವಿಧಾನವು, ನಿಮಗೆ ನಿಧಾನವಾಗಿ ಅಥವಾ ಶೀಘ್ರವಾಗಿ ಅಭ್ಯಾಸ ಮಾಡಲು ಅವಕಾಶಕಲ್ಪಿಸುತ್ತದೆ.
|
05:45
|
ಕೆಲವು ಸಲ, ವೀಡಿಯೋದಿಂದ ಸಾಫ್ಟ್ವೇರ್ ಅನ್ನು ಬೇರ್ಪಡಿಸಲು ಕಠಿನವಾಗಬಹುದು.
|
05:50
|
ಈ ಸಂದರ್ಭದಲ್ಲಿ, ಕೆಲವು ಅತಿಕ್ರಮಿಸುವ ಸ್ಥಾನಗಳನ್ನು ಬಳಸಬಹುದು.
|
05:54
|
ಮುಂದಿನ ಸ್ಲೈಡ್ ನಲ್ಲಿ, ನಾನು ಇದರ ಒಂದು ಉದಾಹರಣೆಯನ್ನು ತೋರಿಸುತ್ತೇನೆ.
|
06:03
|
ಇದು, ಇತ್ತೀಚೆಗೆ ನಾನು ಬರೆದ ಪುಸ್ತಕದ ಅಧ್ಯಾಯದಲ್ಲಿ ಬಳಸಿರುವ ಒಂದು ಆಕೃತಿ.
|
06:09
|
ನೀವು xfigನ ಸ್ಪೋಕನ್ ಟ್ಯುಟೋರಿಯಲ್ ಹಾಗೂ xfig ಸಾಫ್ಟ್ವೇರ್ ಅನ್ನು ನೋಡುತ್ತೀರಿ.
|
06:15
|
ಇಲ್ಲಿ ಅತಿಕ್ರಮಣವಿದ್ದರೂ ಸಹ ನೀವು ಇದರ ಭಾಗಗಳನ್ನು ಇನ್ನೂ ನೋಡಬಹುದು.
|
06:18
|
ನೀವು ಮುಂದೆ ಸಾಗಿದಂತೆ, ಸ್ಥಾನಗಳನ್ನು ಮತ್ತು ಸೈಜನ್ನು ಸಹ ಬದಲಾಯಿಸಬಹುದು.
|
06:23
|
ಮ್ಯಾಕ್ಸಿಮೈಸಿಂಗ್ (ದೊಡ್ಡದು ಮಾಡುವದು) ಒಂದನ್ನು ಬಿಟ್ಟು ಉಳಿದದ್ದೆಲ್ಲವನ್ನೂ ಮಾಡಬಹುದು.
|
06:27
|
ನಾವು ಎಲ್ಲ ಹಂತಗಳನ್ನು ಸಾದರಪಡಿಸಲು, ಈಗ ಬೇರೊಂದು ಅವಶ್ಯಕತೆಯನ್ನು ತಿಳಿಸುವೆವು.
|
06:32
|
ಒಂದುವೇಳೆ, ಸ್ಪೋಕನ್ ಟ್ಯುಟೋರಿಯಲ್, 'open a file' ಎಂದು ಹೇಳಿದರೆ ಏನಾಗುತ್ತದೆ?
|
06:37
|
ಆ ಫೈಲ್ ಇಲ್ಲದಯೇ ಕಲಿಯುವುದು ನಿಷ್ಪ್ರಯೋಜಕ...ಅಲ್ಲವೇ?
|
06:41
|
ಚಿಂತಿಸಬೇಡಿ… ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಬಳಸಿರುವ ಪ್ರತಿಯೊಂದು ಫೈಲ್ ಅನ್ನು ನಾವು ಒದಗಿಸುತ್ತೇವೆ.
|
06:47
|
ಏಕೆಂದರೆ, ಇವುಗಳಿಲ್ಲದೇ ಸ್ಪೋಕನ್ ಟ್ಯುಟೋರಿಯಲ್ ನ ಎಲ್ಲ ಹಂತಗಳನ್ನು ಪುನರಾವರ್ತಿಸಲು ಸಾಧ್ಯವಿಲ್ಲ.
|
06:55
|
ನಾನು, ಉದಾಹರಣೆಯೊಂದಿಗೆ ಇದನ್ನು ಈಗ ಮಾಡಿ ತೋರಿಸುವೆನು.
|
07:00
|
ಇದಕ್ಕಾಗಿ, ನಾನು Tokens (ಟೋಕನ್ಸ್) ಎಂಬ C and C++ tutorial ಅನ್ನು ಓಪನ್ ಮಾಡುತ್ತೇನೆ.
|
07:11
|
ಈಗಾಗಲೇ ನಾನು ಅದನ್ನು ಸರಿಯಾದ ಸ್ಥಾನಕ್ಕೆ (location) ಮುನ್ನಡೆಸಿದ್ದೇನೆ.
|
07:15
|
ನಾನು ಇದನ್ನು ಪ್ಲೇ ಮಾಡುತ್ತೇನೆ.
|
07:20
07:36
|
ನಾನು ನಿಲ್ಲಿಸುತ್ತೇನೆ.
|
07:41
|
ವೀಡಿಯೋ, 'tokens.c' ಎಂಬ ಫೈಲನ್ನು ಓಪನ್ ಮಾಡಲು ಹೇಳುತ್ತಿದೆ.
|
07:46
|
ಈ ಫೈಲನ್ನು ಒದಗಿಸಿದರೆ ಮಾತ್ರ ಎಲ್ಲ ಹಂತಗಳನ್ನು ಪುನರಾವರ್ತಿಸಬಹುದು.
|
07:50
|
ಈ ಫೈಲ್, ವೆಬ್-ಪೇಜ್ ಮೇಲೆ ಲಭ್ಯವಿದೆಯೇ ಎಂದು ನಾವು ನೋಡೋಣ.
|
07:55
|
ಬ್ರೌಸರ್ ಅನ್ನು ಪೂರ್ತಿಯಾಗಿ ದೊಡ್ಡದಾಗಿಸೋಣ, ಇದರಿಂದ ಎಲ್ಲ ಲಿಂಕ್ ಗಳನ್ನು ನಾವು ನೋಡಬಹುದು.
|
08:06
|
ನಾವು ಕೆಳಗೆ ಸ್ಕ್ರೋಲ್ ಮಾಡೋಣ.
|
08:13
|
ನೋಡಿ, ಇಲ್ಲಿ 'Code files' (ಕೋಡ್ ಫೈಲ್ಸ್) ಎಂಬ ಲಿಂಕ್ ಇದೆ.
|
08:16
|
ಇಲ್ಲಿ 'tokens.c' ಎಂಬ ಫೈಲ್ ಇದೆ.
|
08:21
|
ನಾವು ಇದನ್ನು ಡೌನ್ಲೋಡ್ ಮಾಡಲು ಸಾಧ್ಯವಿದೆಯೇ ಎಂಬುದನ್ನು ನೋಡೋಣ.
|
08:24
|
ನಾನು ಈ ಲಿಂಕ್ ಅನ್ನು ಕ್ಲಿಕ್ ಮಾಡುತ್ತೇನೆ.
|
08:27
|
ಈಗ ಈ ಫೈಲ್, ಸೇವ್ ಆಗಲು ಸಿದ್ಧವಾಗಿದೆ.
|
08:31
|
ಆದರೆ ನಾವು ಇದನ್ನು ಸೇವ್ ಮಾಡುವದು ಬೇಡ.
|
08:35
|
ನಾನು ಇದನ್ನು ಅಭ್ಯಾಸಕ್ಕೆಂದು ನಿಮಗೆ ಬಿಡುತ್ತೇನೆ.
|
08:38
|
ವಿವಿಧ ಆಪರೇಟಿಂಗ್ ಸಿಸ್ಟಂಗಳ ವರ್ತಿಸುವ ರೀತಿಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು.
|
08:43
|
ಉದಾಹರಣೆಗೆ, 'zip' (ಝಿಪ್) ಫೈಲ್, ನಿಮ್ಮ ಅನುಮತಿಯಿಲ್ಲದೆ ತಕ್ಷಣ ಡೌನ್ಲೋಡ್ ಆಗಬಹುದು.
|
08:48
|
ಎಲ್ಲಾ ಸಂದರ್ಭದಲ್ಲಿ, ಎಲ್ಲಾ ಅವಶ್ಯಕ ಫೈಲ್ ಗಳು ಇಂತಹ ಲಿಂಕ್ ಮೂಲಕ ಲಭ್ಯವಿರುತ್ತವೆ ಎಂಬ ಭರವಸೆ ಇರಲಿ.
|
08:54
|
ನಿಮಗೆ ಇಂಟರ್ನೆಟ್ ಲಭ್ಯವಿರದಿದ್ದರೆ ಏನು ಮಾಡಬೇಕು?
|
08:57
|
ಚಿಂತಿಸಬೇಡಿ.
|
08:58
|
ಆಫ್ಲೈನ್ ನಲ್ಲಿ ನೋಡಲು (offline viewing), ಒಂದು ಇಮೇಜ್ ಫೈಲ್ ಅನ್ನು ಕ್ರಿಯೇಟ್ ಮಾಡಲು ಸಾಧ್ಯವಿದೆ.
|
09:02
|
ಸ್ಪೋಕನ್ ಟ್ಯುಟೋರಿಯಲ್ ವೆಬ್-ಪೇಜ್ ನಲ್ಲಿ, ಎಲ್ಲಿಂದ ನೀವು ಈ ಇಮೇಜನ್ನು ಕ್ರಿಯೇಟ್ ಮಾಡಬಹುದೆಂದು ನಾನು ತೋರಿಸುತ್ತೇನೆ.
|
09:09
|
ಇದು ಮುಂದಿನ ಟ್ಯಾಬ್ ನಲ್ಲಿದೆ.
|
09:12
|
ಬ್ರೌಸರ್ ಅನ್ನು ಅತಿ ಚಿಕ್ಕದನ್ನಾಗಿ ಮಾಡಿದ್ದರಿಂದ, ಎಲ್ಲ ಲಿಂಕ್ ಗಳು ಕಾಣುತ್ತಿಲ್ಲ.
|
09:16
|
ಎಲ್ಲ ಲಿಂಕ್ ಗಳನ್ನು ನೋಡಲು, ನಾನು ಸ್ಕ್ರೀನ್ ಅನ್ನು ದೊಡ್ಡದು ಮಾಡುತ್ತೇನೆ.
|
09:21
|
ಇದು Software Training, ಅಲ್ಲಿ Downloads, ಹಾಗೂ ಅಲ್ಲಿ Create your own disk image ಎಂಬಲ್ಲಿ ಲಭ್ಯವಿದೆ.
|
09:33
|
ಈ ಸೌಲಭ್ಯದ ಮೂಲಕ ಕ್ರಿಯೇಟ್ ಮಾಡಲಾದ ಝಿಪ್-ಫೈಲ್ ಸಹ ಎಲ್ಲ ಸಂಬಂಧಿತ ಫೈಲ್ ಗಳನ್ನು ಹೊಂದಿದೆ.
|
09:37
|
ಕೆಲವು ಅಪರೂಪದ ಸಂದರ್ಭಗಳಲ್ಲಿ, ಅವಶ್ಯಕ ಫೈಲ್ ಗಳು ಕಳೆದುಹೋಗಿರಬಹುದು.
|
09:41
|
ಹೀಗಾದಲ್ಲಿ, ಸಮಸ್ಯೆಯನ್ನು ಬಗೆಹರಿಸಲು ನಮಗೆ ನಿಮ್ಮ ಸಹಾಯದ ಅಗತ್ಯವಿದೆ.
|
09:44
|
ನಾನು ಇದನ್ನು ನಮ್ಮ ವೆಬ್-ಪೇಜ್ ನ ಮೇಲೆ ತೋರಿಸುತ್ತೇನೆ.
|
09:47
|
ನಾವು ಸ್ಕ್ರೀನ್ ಅನ್ನು ಚಿಕ್ಕದಾಗಿಸೋಣ.
|
09:51
|
ಈಗ ಹಿಂದಿನ ಟ್ಯಾಬ್ ಗೆ ಮರಳಿ ಹೋಗೋಣ.
|
09:56
|
ನಂತರ ಮೇಲಕ್ಕೆ ಸ್ಕ್ರೋಲ್ ಮಾಡೋಣ.
|
09:59
|
Report missing component ಎಂಬ ಲಿಂಕ್ ಅನ್ನು ನೋಡಿ.
|
10:03
|
ಈ ಲಿಂಕ್ ಅನ್ನು ದಯವಿಟ್ಟು ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಮಾಹಿತಿಯನ್ನು ಒದಗಿಸಿ.
|
10:08
|
ಇಷ್ಟೇ ನೀವು ಮಾಡಬೇಕಾಗಿರುವ ಸಹಾಯ.
|
10:09
|
ನಾನು ಮುಂದಿನ ಸ್ಲೈಡ್ ಗೆ ಹೋಗುತ್ತೇನೆ.
|
10:12
|
ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತಿರುವುದನ್ನು ಸಂಕ್ಷೇಪಿಸುವುದಾದರೆ, ಈ ಟ್ಯುಟೋರಿಯಲ್ ನಲ್ಲಿ ನಾವು -
|
10:16
|
'ಸೈಡ್ ಬೈ ಸೈಡ್ ಮೆಥಡ್', ಎಂದರೇನು,
|
10:20
|
ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯಲು, 'ಸೈಡ್ ಬೈ ಸೈಡ್ ಮೆಥಡ್', ಹೇಗೆ ಸಹಾಯ ಮಾಡುವುದು,
|
10:25
|
ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನೀವು ನಿಧಾನವಾಗಿ ಅಥವಾ ಶೀಘ್ರವಾಗಿ ಹೇಗೆ ಕಲಿಯಬಹುದು,
|
10:31
|
ಸ್ಪೋಕನ್-ಟ್ಯುಟೋರಿಯಲ್ ಗಾಗಿ ಅವಶ್ಯವಿರುವ ಸಾಮಗ್ರಿಗಳು ಎಲ್ಲಿ ಲಭ್ಯವಿರುತ್ತವೆ, ಹಾಗೂ
|
10:36
|
ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಬಳಸಬಾರದು ಎಂಬಿತ್ಯಾದಿಗಳನ್ನು ಕಲಿತಿದ್ದೇವೆ.
|
10:40
|
ನೀವು ಸ್ಪೋಕನ್ ಟ್ಯುಟೋರಿಯಲ್ ಅನ್ನು ಬರೀ ವೀಕ್ಷಿಸಿದರೆ, ನಿಮಗೆ ಅದರ ಪೂರ್ಣ ಲಾಭ ಸಿಗುವದಿಲ್ಲ.
|
10:45
|
ಇದು ಕಾರ್ಯಶಾಲೆ (ವರ್ಕ್ಶಾಪ್) ಅಲ್ಲವೇ ಅಲ್ಲ.
|
10:47
|
ಒಂದುವೇಳೆ ನಿಮಗೆ ಸಂಯೋಜಕರು ಸ್ಪೋಕನ್ ಟ್ಯುಟೋರಿಯಲ್ ಅನ್ನು ನೋಡಲು ಹೇಳಿದರೆ, ಅವರು ತಮ್ಮ ಕರ್ತವ್ಯವನ್ನು ಮಾಡುತ್ತಿಲ್ಲವೆಂದರ್ಥ.
|
10:52
|
'side-by-side method' (ಸೈಡ್ ಬೈ ಸೈಡ್ ಮೆಥಡ್) ಅನ್ನು ಈ ಟ್ಯುಟೋರಿಯಲ್ ನಲ್ಲಿ ಹೇಳಿದಂತೆ ದಯವಿಟ್ಟು ಅನುಸರಿಸಿ.
|
10:58
|
ನನ್ನಲ್ಲಿ ನಿಮಗಾಗಿ ಒಂದು ಸಣ್ಣ ಅಸೈನ್ಮೆಂಟ್ ಇದೆ.
|
11:01
|
ಈ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಹಂತವನ್ನು ಪುನ: ಮಾಡಿ.
|
11:05
|
ಈ ವಿಧಾನವನ್ನು ಇನ್ನೊಂದು ವಿಷಯದ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಅನ್ವಯಿಸಿ.
|
11:08
|
'ಸ್ಪೋಕನ್ ಟ್ಯುಟೋರಿಯಲ್', ವಿದ್ಯಾರ್ಥಿಗೆ ಮಾಡಿನೋಡಿ ಕಲಿಯಲು ಸಹಾಯ ಮಾಡುತ್ತದೆ ಎಂಬುದನ್ನು ಪ್ರಚಾರಮಾಡಿ.
|
11:14
|
ಈ ವೀಡಿಯೋ “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
|
11:18
|
ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
|
11:22
|
ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ.
|
11:25
|
ಪ್ರಮಾಣಪತ್ರಗಳನ್ನು ಕೊಡುತ್ತೇವೆ.
|
11:26
|
ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
|
11:28
|
Spoken Tutorial Project ಎಂಬುದು, NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
|
11:34
|
IIT Bombayಯಿಂದ, ಈ ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .
ಧನ್ಯವಾದಗಳು.
|
|
|
|