PERL/C3/Referencing-and-Dereferencing/Kannada
From Script | Spoken-Tutorial
Revision as of 17:09, 21 March 2016 by Sandhya.np14 (Talk | contribs)
|
|
00:01 | Referencing and Dereferencing in Perl (ರೆಫರೆನ್ಸಿಂಗ್ ಆಂಡ್ ಡಿ-ರೆಫರೆನ್ಸಿಂಗ್ ಇನ್ ಪರ್ಲ್) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು:
|
00:22 | ಈ ಟ್ಯುಟೋರಿಯಲ್ ಗಾಗಿ, ನಾನು:
|
00:33 | ನೀವು, ನಿಮಗೆ ಇಷ್ಟವಾದ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು. |
00:37 | ನಿಮಗೆ -
|
00:43 | ಇಲ್ಲದಿದ್ದರೆ, ಸಂಬಂಧಿತ Perl ಸ್ಪೋಕನ್ ಟ್ಯುಟೋರಿಯಲ್ ಗಳನ್ನು Spoken Tutorial ವೆಬ್ಸೈಟ್ ಮೇಲೆ ನೋಡಿ. |
00:49 | ’ರೆಫರೆನ್ಸ್’ ಎಂದರೆ ಏನು? |
00:51 | 'ರೆಫರೆನ್ಸ್' ಎನ್ನುವುದು ಒಂದು ವೇರಿಯೇಬಲ್, ಆರೇ, ಹ್ಯಾಶ್ ಅಥವಾ ಸಬ್-ರುಟೀನ್ ಗಳಿಗೆ ಒಂದು ಪಾಯಿಂಟರ್ (pointer) ಅಥವಾ ಅಡ್ರೆಸ್ (address) ಆಗಿದೆ. |
00:58 | ಇದು ನೇರವಾಗಿ ಡೇಟಾಅನ್ನು ಹೊಂದಿರುವುದಿಲ್ಲ. |
01:01 | 'ರೆಫರೆನ್ಸ್', ಒಂದು ಸುಲಭವಾದ, ಅಚ್ಚುಕಟ್ಟಾದ ಸ್ಕೇಲರ್ ವ್ಯಾಲ್ಯೂ ಆಗಿದೆ. |
01:05 | ನೀವು ದೊಡ್ಡ ಡೇಟಾ-ಸ್ಟ್ರಕ್ಚರ್ ಗಳನ್ನು ರವಾನಿಸಿದಾಗ (pass) ಅಥವಾ ರಿಟರ್ನ್ ಮಾಡಿದಾಗ, 'ರೆಫರೆನ್ಸ್', ಪರ್ಲ್ ಕೋಡ್ ನ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ. |
01:12 | ಇದು, ಸಬ್-ರುಟೀನ್ ಗೆ ವ್ಯಾಲ್ಯೂದ ಬದಲಾಗಿ ರೆಫರೆನ್ಸ್ ಅನ್ನು ಪಾಸ್ ಮಾಡುವುದರಿಂದ, ಮೆಮರೀಯನ್ನು ಉಳಿಸುತ್ತದೆ. |
01:18 | ಹೀಗಾಗಿ, ಕ್ಲಿಷ್ಟವಾದ ಪರ್ಲ್ ಡೇಟಾ-ಸ್ಟಕ್ಚರ್ ಗಳನ್ನು ನಿರ್ವಹಿಸುವುದು ಸುಲಭವಾಗುತ್ತದೆ. |
01:22 | 'ರೆಫರೆನ್ಸ್'ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ತಿಳಿಯೋಣ. |
01:25 | ನಾವು ಯಾವುದೇ ವೇರಿಯೇಬಲ್, ಸಬ್-ರುಟೀನ್ ಅಥವಾ ವ್ಯಾಲ್ಯೂದ ಮುಂದೆ ಒಂದು ಬ್ಯಾಕ್-ಸ್ಲ್ಯಾಶ್ (\) ಇಡುವುದರ ಮೂಲಕ ಅದಕ್ಕಾಗಿ ಒಂದು 'ರೆಫರೆನ್ಸ್'ಅನ್ನು ಕ್ರಿಯೇಟ್ ಮಾಡಬಹುದು. |
01:33 | ಸ್ಕೇಲಾರ್ ವೇರಿಯೇಬಲ್, ಇಲ್ಲಿ ತೋರಿಸಿದಂತೆ ಬ್ಯಾಕ್-ಸ್ಲ್ಯಾಶ್ (\) ಹಾಗೂ ಡಾಲರ್ ಚಿಹ್ನೆಗಳಿಂದ ($) ರೆಫರೆನ್ಸ್ ಮಾಡಲ್ಪಡುತ್ತದೆ. |
01:39 | 'ಆರೇ' ವೇರಿಯೇಬಲ್, ಬ್ಯಾಕ್-ಸ್ಲ್ಯಾಶ್ (\) ಹಾಗೂ 'ಆಟ್ ದ ರೇಟ್' ಚಿಹ್ನೆಗಳಿಂದ (@) ರೆಫರೆನ್ಸ್ ಮಾಡಲ್ಪಡುತ್ತದೆ. |
01:45 | 'ಹ್ಯಾಶ್' ವೇರಿಯೇಬಲ್, ಇಲ್ಲಿ ಉದಾಹರಣೆಯಲ್ಲಿ ತೋರಿಸಿದಂತೆ, ಬ್ಯಾಕ್-ಸ್ಲ್ಯಾಶ್ (\) ಹಾಗೂ ಪರ್ಸೆಂಟೇಜ್ ಚಿಹ್ನೆಗಳಿಂದ (%) ರೆಫರೆನ್ಸ್ ಮಾಡಲ್ಪಡುತ್ತದೆ. |
01:53 | 'ಡಿ-ರೆಫರೆನ್ಸ್' ಎಂದರೇನು? |
01:55 | ಒಂದು ರೆಫರೆನ್ಸ್ ಅನ್ನು ಡಿ-ರೆಫರೆನ್ಸ್ ಮಾಡಿದಾಗ, ನಿಜವಾದ ವ್ಯಾಲ್ಯುಅನ್ನು ರಿಟರ್ನ್ (ಹಿಂದಿರುಗಿಸು) ಮಾಡಲಾಗುತ್ತದೆ. |
02:00 | ರೆಫರೆನ್ಸ್ ವೇರಿಯೇಬಲ್ ಅನ್ನು ಕರ್ಲಿ-ಬ್ರಾಕೆಟ್ಸ್ ನ ಒಳಗೆ ಇಡುವುದರಿಂದ |
02:06 | ಮತ್ತು ಎಡಗಡೆಯ ಕರ್ಲಿ-ಬ್ರಾಕೆಟ್ ನ ಮೊದಲು, ರೆಫರೆನ್ಸ್ ನ ಟೈಪ್ ಅನ್ನು ಸೂಚಿಸುವ ಒಂದು ಅಕ್ಷರವನ್ನು ಇಡುವುದರಿಂದ ಡಿ-ರೆಫರೆನ್ಸ್ ಮಾಡಲಾಗುತ್ತದೆ. |
02:12 | ನಾವು ವೇರಿಯೇಬಲ್ ಗಳನ್ನು ಡಿ-ರೆಫರೆನ್ಸ್ ಮಾಡುವ ಬಗೆಯನ್ನು ನೋಡೋಣ. |
02:16 | 'ಸ್ಕೇಲಾರ್ ವೇರಿಯೇಬಲ್'ಅನ್ನು, ಡಾಲರ್ ಚಿಹ್ನೆ ($) ಮತ್ತು ಕರ್ಲೀ ಬ್ರಾಕೆಟ್ಸ್ ಗಳಿಂದ ಡಿ-ರೆಫರೆನ್ಸ್ ಮಾಡಲಾಗುತ್ತದೆ. |
02:21 | 'ಆರೇ ವೇರಿಯೇಬಲ್'ಅನ್ನು, 'ಆಟ್ ದ ರೇಟ್' ಚಿಹ್ನೆ (@) ಮತ್ತು ಕರ್ಲೀ ಬ್ರಾಕೆಟ್ಸ್ ಗಳಿಂದ ಡಿ-ರೆಫರೆನ್ಸ್ ಮಾಡಲಾಗುತ್ತದೆ. |
02:27 | 'ಹ್ಯಾಶ್ ವೇರಿಯೇಬಲ್'ಅನ್ನು, 'ಪರ್ಸೆಂಟೇಜ್' ಚಿಹ್ನೆ (%) ಮತ್ತು ಕರ್ಲೀ ಬ್ರಾಕೆಟ್ಸ್ ಗಳಿಂದ ಡಿ-ರೆಫರೆನ್ಸ್ ಮಾಡಲಾಗುತ್ತದೆ. |
02:33 | ಸ್ಕೇಲಾರ್ ರೆಫರೆನ್ಸ್ ಮತ್ತು ಡಿ-ರೆಫರೆನ್ಸ್ ಗಾಗಿ, ನಾವು ಒಂದು ಸರಳವಾದ ಪ್ರೊಗ್ರಾಂಅನ್ನು ನೋಡೋಣ. |
02:38 | ನಾನು 'gedit' ಟೆಕ್ಸ್ಟ್-ಎಡಿಟರ್ ನಲ್ಲಿ, ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಓಪನ್ ಮಾಡುತ್ತೇನೆ. |
02:43 | ಟರ್ಮಿನಲ್ ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ: 'gedit scalarRef dot pl ampersand' ಮತ್ತು 'Enter' ಅನ್ನು ಒತ್ತಿ. |
02:50 | ಈ ಕೆಳಗಿನ ಕೋಡ್ ಅನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ. |
02:55 | ನಾನು ಕೋಡ್ ಅನ್ನು ವಿವರಿಸುತ್ತೇನೆ. |
02:57 | ಮೊದಲನೆಯ ಸಾಲು- '$a' ಎಂಬ ಒಂದು ಸ್ಕೇಲಾರ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿ ಅದನ್ನು 10 ಕ್ಕೆ ಇನಿಶಿಯಲೈಸ್ ಮಾಡುತ್ತದೆ. |
03:03 | ಮೊದಲು ಹೇಳಿದಂತೆ, ಸ್ಕೇಲಾರ್ ವೇರಿಯೇಬಲ್, ಬ್ಯಾಕ್-ಸ್ಲ್ಯಾಶ್ (\) ಹಾಗೂ ಡಾಲರ್ ಚಿಹ್ನೆಗಳಿಂದ ($) ರೆಫರೆನ್ಸ್ ಮಾಡಲ್ಪಡುತ್ತದೆ. |
03:10 | ಈ ಸಾಲು, ರೆಫರೆನ್ಸ್ ಎಂದು ಕ್ರಿಯೇಟ್ ಮಾಡಲಾದ ವೇರಿಯೇಬಲ್ ನ ಮೆಮರೀ ಅಡ್ರೆಸ್ ಅನ್ನು ಪ್ರಿಂಟ್ ಮಾಡುವುದು. |
03:16 | ನಿಜವಾದ ವ್ಯಾಲ್ಯೂಅನ್ನು ಪ್ರಿಂಟ್ ಮಾಡಲು, '$' ಚಿಹ್ನೆ ಮತ್ತು ಅನಂತರ ಕರ್ಲಿ ಬ್ರಾಕೆಟ್ಸ್ ನಿಂದ ವೇರಿಯೇಬಲ್ ಅನ್ನು ಡಿ-ರೆಫರೆನ್ಸ್ ಮಾಡಲಾಗುವುದು. |
03:23 | ಇಲ್ಲಿ, 'ref()' ಫಂಕ್ಷನ್, ರೆಫರನ್ಸ್ ಟೈಪ್ ಅನ್ನು 'ಸ್ಕೇಲಾರ್' ಅಥವಾ 'ಆರೇ' ಅಥವಾ 'ಹ್ಯಾಶ್' ಎಂದು ಹಿಂದಿರುಗಿಸುವುದು (ರಿಟರ್ನ್). |
03:30 | ಈಗ, ಫೈಲನ್ನು ಸೇವ್ ಮಾಡಲು 'Ctrl+S' ಒತ್ತಿ. |
03:34 | ನಾವು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೋಣ. |
03:36 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl scalarRef dot pl' ಮತ್ತು 'Enter' ಅನ್ನು ಒತ್ತಿ. |
03:43 | ಇಲ್ಲಿ ಕಾಣುತ್ತಿರುವ ಔಟ್ಪುಟ್ ಅನ್ನು ತೋರಿಸಲಾಗುತ್ತದೆ. |
03:46 | ಮೊದಲನೆಯ ಸಾಲು, ವ್ಯಾಲ್ಯೂ 10 ಅನ್ನು ಸ್ಟೋರ್ ಮಾಡಲಾದ ಮೆಮರೀಯ ಅಡ್ರೆಸ್ ಅನ್ನು ತೋರಿಸುತ್ತದೆ. |
03:51 | ಎರಡನೆಯ ಸಾಲು, ನಿಜವಾಗಿಯೂ ವ್ಯಾಲ್ಯೂ 10 ಅನ್ನು ಹಿಂದಿರುಗಿಸುತ್ತದೆ. |
03:55 | 'Ref()' ಫಂಕ್ಷನ್, “Scalar” ಅನ್ನು ಔಟ್ಪುಟ್ ಎಂದು ರಿಟರ್ನ್ ಮಾಡುತ್ತದೆ. |
03:59 | ನಂತರ ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ, ಒಂದು 'ಆರೇ'ಯ ರೆಫರೆನ್ಸ್ ಹಾಗೂ ಡಿ-ರೆಫರೆನ್ಸ್ ಗಳನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ತಿಳಿದುಕೊಳ್ಳೋಣ. |
04:07 | ನನ್ನ ಹತ್ತಿರ ಈಗಾಗಲೇ ಒಂದು ಸ್ಯಾಂಪಲ್ ಪ್ರೊಗ್ರಾಂ ಇದೆ. ನಾನು ಇದನ್ನು 'gedit' ಟೆಕ್ಸ್ಟ್ ಎಡಿಟರ್ ನಲ್ಲಿ ಓಪನ್ ಮಾಡುತ್ತೇನೆ. |
04:13 | ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ: 'gedit arrayRef dot pl ampersand' ಮತ್ತು 'Enter' ಅನ್ನು ಒತ್ತಿ. |
04:20 | ಸ್ಕ್ರೀನ್ ನ ಮೇಲೆ ತೋರಿಸಿದಂತೆ, 'arrayRef dot pl' ಎಂಬ ಫೈಲ್ ನಲ್ಲಿ, ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. |
04:26 | ಈಗ ನಾನು ಕೋಡ್ ಅನ್ನು ವಿವರಿಸುತ್ತೇನೆ. |
04:28 | ಇಲ್ಲಿ, ಮೊದಲನೆಯ ಸಾಲಿನಲ್ಲಿ, ನಾನು '@color' ಎಂಬ ಒಂದು ಆರೇಯನ್ನು ಡಿಕ್ಲೇರ್ ಮಾಡಿ ಅದನ್ನು ಮೂರು ವ್ಯಾಲ್ಯೂಗಳಿಂದ ಇನಿಶಿಯಲೈಸ್ ಮಾಡಿದ್ದೇನೆ. |
04:35 | ಇದನ್ನು 'backslash @color' ನೊಂದಿಗೆ ರೆಫರೆನ್ಸ್ ಮಾಡಲಾಗುತ್ತದೆ. ಇದು, ಆರೇಯ ಹೆಸರು ಆಗಿದ್ದು ' $colorRef' ಗೆ ಇದನ್ನು ಅಸೈನ್ ಮಾಡಲಾಗಿದೆ. |
04:42 | 'print' ಸ್ಟೇಟ್ಮೆಂಟ್, ರೆಫರೆನ್ಸ್ ವ್ಯಾಲ್ಯೂ ಮತ್ತು ಡಿ-ರೆಫರೆನ್ಸ್ ಮಾಡಲಾದ ವ್ಯಾಲ್ಯೂ ಗಳನ್ನು ಪ್ರಿಂಟ್ ಮಾಡುವುದು. |
04:47 | ಈಗ, ಫೈಲನ್ನು ಸೇವ್ ಮಾಡಲು 'Ctrl+S' ಒತ್ತಿ. |
04:51 | ನಾವು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೋಣ. |
04:53 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl arrayRef dot pl' ಮತ್ತು 'Enter' ಅನ್ನು ಒತ್ತಿ. |
05:00 | ಇಲ್ಲಿ ಕಾಣುತ್ತಿರುವ ಔಟ್ಪುಟ್ ಅನ್ನು ತೋರಿಸಲಾಗುವುದು. |
05:04 | ಮೊದಲನೆಯ ಸಾಲು, ರೆಫರೆನ್ಸ್ ಮಾಡಲಾದ ವೇರಿಯೇಬಲ್ ನ ಮೆಮರೀ ಅಡ್ರೆಸ್ ಅನ್ನು ಔಟ್ಪುಟ್ ಎಂದು ತೋರಿಸುತ್ತದೆ. |
05:10 | ಎರಡನೆಯ ಸಾಲು, ನಿಜವಾದ ಎಂದರೆ, ಡಿ-ರೆಫರೆನ್ಸ್ ಮಾಡಲಾದ ವ್ಯಾಲ್ಯೂಅನ್ನು ತೋರಿಸುತ್ತದೆ. |
05:16 | ನಂತರ, ಒಂದು ಆರೇ ಗಾಗಿ 'ಡೈರೆಕ್ಟ್ ರೆಫರೆನ್ಸ್' ಅನ್ನು ಹೇಗೆ ಡಿಕ್ಲೇರ್ ಮಾಡುವುದೆಂದು ನಾವು ನೋಡುವೆವು. |
05:21 | ನಾವು ನಮ್ಮ ಪ್ರೊಗ್ರಾಂಗೆ ಹಿಂದಿರುಗೋಣ. |
05:24 | ಒಂದು ಆರೇ ಗಾಗಿ 'ಡೈರೆಕ್ಟ್ ರೆಫರೆನ್ಸ್' ಅನ್ನು ತೋರಿಸಲು, ನಾನು ಈಗಿರುವ ಪ್ರೊಗ್ರಾಂಅನ್ನು ಬದಲಾಯಿಸಿದ್ದೇನೆ. |
05:29 | ಇಲ್ಲಿ ತೋರಿಸಿದಂತೆ ಚದರ ಬ್ರಾಕೆಟ್ಗಳನ್ನು (square brackets) [] ಬಳಸಿ, ಆರೇ ಗಾಗಿ ನೀವು 'ಡೈರೆಕ್ಟ್ ರೆಫರೆನ್ಸ್' ಅನ್ನು ಕ್ರಿಯೇಟ್ ಮಾಡಬಹುದು. |
05:35 | ಡಿ-ರೆಫರೆನ್ಸ್ ಮಾಡಲು, ಆರೋ ಆಪರೇಟರ್ (arrow operator “->”) ಅನ್ನು ಬಳಸಿ. |
05:39 | ಪ್ರಿಂಟ್ ಸ್ಟೇಟ್ಮೆಂಟ್, 'Green' ಎಂಬ ಔಟ್ಪುಟ್ ಅನ್ನು ಪ್ರಿಂಟ್ ಮಾಡುವುದು. |
05:43 | ಇಲ್ಲಿ, ಪ್ರಿಂಟ್ ಸ್ಟೇಟ್ಮೆಂಟ್, index[1] ನ ವ್ಯಾಲ್ಯೂಅನ್ನು, ಎಂದರೆ, ನಮ್ಮ ಪ್ರೊಗ್ರಾಂನಲ್ಲಿ 'Green' ಅನ್ನು ತೆಗೆದುಕೊಳ್ಳುತ್ತದೆ. |
05:50 | ಫೈಲನ್ನು ಸೇವ್ ಮಾಡಲು, 'Ctrl+S' ಅನ್ನು ಒತ್ತಿ. |
05:54 | ಟರ್ಮಿನಲ್ ಗೆ ಹಿಂದಿರುಗಿ ಮತ್ತು ಹೀಗೆ ಟೈಪ್ ಮಾಡಿ: 'perl arrayRef dot pl' ಮತ್ತು ಎಕ್ಸೀಕ್ಯೂಟ್ ಮಾಡಲು 'Enter' ಅನ್ನು ಒತ್ತಿ. |
06:03 | 'ಡೈರೆಕ್ಟ್ ಹ್ಯಾಶ್ ರೆಫರೆನ್ಸ್' ಅನ್ನು ಬಳಸುವುದರ ಬಗ್ಗೆ, ಇದೇ ಕೋಡ್ ಫೈಲ್ ನಲ್ಲಿ ನಾನು ಒಂದು ಉದಾಹರಣೆಯನ್ನು ತೋರಿಸುವೆನು.
ಆದ್ದರಿಂದ, ನಾವು 'gedit' ಗೆ ಬದಲಾಯಿಸೋಣ. |
06:11 | ಇಲ್ಲಿ ತೋರಿಸಿದಂತೆ ಕರ್ಲೀ ಬ್ರಾಕೆಟ್ಸ್ ಅನ್ನು ಬಳಸಿ, ನೀವು ಹ್ಯಾಶ್ ಗೆ ಒಂದು 'ಡೈರೆಕ್ಟ್ ರೆಫರೆನ್ಸ್' ಅನ್ನು ಕ್ರಿಯೇಟ್ ಮಾಡಬಹುದು. |
06:18 | ಡಿ-ರೆಫರೆನ್ಸ್ ಮಾಡಲು, ಆರೋ ಆಪರೇಟರ್ (arrow operator “->”) ಅನ್ನು ಬಳಸಿ. “Name”, ಹ್ಯಾಶ್ ಕೀ ಆಗಿದೆ. |
06:24 | ಕೋಡ್ ನ ಈ ಬ್ಲಾಕ್ ಅನ್ನು ಎಕ್ಸೀಕ್ಯೂಟ್ ಮಾಡಿದ ಮೇಲೆ, ಎರಡೂ ಪ್ರಿಂಟ್ ಸ್ಟೇಟ್ಮೆಂಟ್ ಗಳು 'Sunil' ಎಂಬ ಔಟ್ಪುಟ್ ಅನ್ನು ಪ್ರಿಂಟ್ ಮಾಡುತ್ತವೆ. |
06:31 | ನಂತರ, ಒಂದು 'ಆರೇ ರೆಫರೆನ್ಸ್' ಗೆ ಎಲಿಮೆಂಟ್ ಗಳನ್ನು ಹೇಗೆ ಸೇರಿಸುವುದು, ತೆಗೆದುಹಾಕುವುದು, ಆಕ್ಸೆಸ್ ಮಾಡುವುದು ಎನ್ನುವುದನ್ನು ಒಂದು ಸ್ಯಾಂಪಲ್ ಪ್ರೊಗ್ರಾಮ್ ನೊಂದಿಗೆ ನಾವು ನೋಡುವೆವು. |
06:39 | ನನ್ನ ಹತ್ತಿರ ಈಗಾಗಲೇ ಒಂದು ಸ್ಯಾಂಪಲ್ ಪ್ರೊಗ್ರಾಮ್ ಇದೆ. ನಾನು ಇದನ್ನು 'gedit ಟೆಕ್ಸ್ಟ್ ಎಡಿಟರ್' ನಲ್ಲಿ ಓಪನ್ ಮಾಡುತ್ತೇನೆ. |
06:45 | ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'gedit arrayRefadd dot pl ampersand' ಹಾಗೂ 'Enter' ಅನ್ನು ಒತ್ತಿ. |
06:54 | ಈಗ, 'gedit' ನಲ್ಲಿ 'arrayRefadd.pl' ಎಂಬ ಫೈಲ್ ಓಪನ್ ಆಗಿದೆ. ಇಲ್ಲಿ ತೋರಿಸಿದಂತೆ, ಕೋಡ್ ಅನ್ನು ನಿಮ್ಮ ಫೈಲ್ ನಲ್ಲಿ ಟೈಪ್ ಮಾಡಿ. |
07:02 | ಮೊದಲನೆಯ ಸಾಲು, ಆರೇಯನ್ನು ಇನಿಶಿಯಲೈಸ್ ಮಾಡುತ್ತದೆ. |
07:06 | ನಾವು 'backslash @numarray' ಯೊಂದಿಗೆ ಒಂದು ಆರೇಯನ್ನು ರೆಫರೆನ್ಸ್ ಮಾಡಿದ್ದೇವೆ ಮತ್ತು '$ref' ಗೆ ಅಸೈನ್ ಮಾಡಿದ್ದೇವೆ. |
07:13 | ಈಗ, ಒಂದು 'ಆರೇ ರೆಫರೆನ್ಸ್'ನಿಂದ, ಒಂದು ನಿರ್ದಿಷ್ಟ ಎಲಿಮೆಂಟ್ ಅನ್ನು ಹೇಗೆ ಆಕ್ಸೆಸ್ ಮಾಡುವುದೆಂದು ನಾವು ನೋಡುವೆವು. |
07:19 | ನಾವು ಒಂದು ನಿರ್ದಿಷ್ಟ ವ್ಯಾಲ್ಯೂಅನ್ನು ಆಕ್ಸೆಸ್ ಮಾಡಲು, ಚದರ ಬ್ರಾಕೆಟ್ಗಳಲ್ಲಿ 'ಆರೇ ಇಂಡೆಕ್ಸ್'ಅನ್ನು “[ ]” ಮತ್ತು ಅದನ್ನು ಡಿ-ರೆಫರೆನ್ಸ್ ಮಾಡಲು 'ಆರೋ ಆಪರೇಟರ್ ' (arrow operator “->”) ಅನ್ನು ಬಳಸಬೇಕಾಗುತ್ತದೆ. |
07:28 | ಪ್ರಿಂಟ್ ಸ್ಟೇಟ್ಮೆಂಟ್, index[0] ದ ವ್ಯಾಲ್ಯೂಅನ್ನು ಪ್ರಿಂಟ್ ಮಾಡುವುದು. |
07:32 | 'push()' ಎಂಬ ಫಂಕ್ಷನ್, ಆರೇ ರೆಫರೆನ್ಸ್ ನ ಕೊನೆಯ ಸ್ಥಾನದಲ್ಲಿ ಎಲಿಮೆಂಟ್ ಗಳನ್ನು ಸೇರಿಸುತ್ತದೆ.
ಈ ಸಂದರ್ಭದಲ್ಲಿ, ಈಗಿರುವ ಆರೇ: 1, 2, 3, 4 ಗಳ ಕೊನೆಯಲ್ಲಿ 5, 6, 7 ಗಳು ಸೇರಿಸಲ್ಪಟ್ಟಿವೆ. |
07:47 | ಈ ಪ್ರಿಂಟ್ ಸ್ಟೇಟೆಂಟ್, ಆರೇ ರೆಫರೆನ್ಸ್ ಗೆ ಸೇರಿಸಿದ ನಂತರ ಔಟ್ಪುಟ್ ಅನ್ನು ತೋರಿಸುತ್ತದೆ. |
07:53 | 'pop()' ಎಂಬ ಫಂಕ್ಷನ್, 'ಆರೇ ರೆಫರೆನ್ಸ್'ನ ಕೊನೆಯ ಸ್ಥಾನದಿಂದ ಎಲಿಮೆಂಟ್ ಅನ್ನು ತೆಗೆದುಹಾಕುತ್ತದೆ. |
07:58 | ನಮ್ಮ ಉದಾಹರಣೆಯಲ್ಲಿ, ಈಗ ಇರುವ ಆರೇ ರೆಫರೆನ್ಸ್ ನಿಂದ 7 ಅನ್ನು ತೆಗೆದುಹಾಕಲಾಗುವುದು. |
08:03 | 'print' ಸ್ಟೇಟ್ಮೆಂಟ್, ಆರೇ ರೆಫರೆನ್ಸ್ ನಿಂದ ತೆಗೆದುಹಾಕಿದ ಮೇಲೆ ಔಟ್ಪುಟ್ ಅನ್ನು ತೋರಿಸುತ್ತದೆ. |
08:08 | ಈಗ, ಫೈಲನ್ನು ಸೇವ್ ಮಾಡಲು 'Ctrl+S' ಅನ್ನು ಒತ್ತಿ. |
08:11 | ನಾವು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೋಣ. |
08:14 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl arrayRefadd dot pl' ಮತ್ತು 'Enter' ಅನ್ನು ಒತ್ತಿ. |
08:22 | ಇಲ್ಲಿ ತೋರಿಸಿದಂತೆ ಔಟ್ಪುಟ್ ಅನ್ನು ಪ್ರದರ್ಶಿಸಲಾಗುತ್ತದೆ. |
08:26 | ಈಗ, ನಾವು 'ಹ್ಯಾಶ್ ರೆಫರೆನ್ಸ್' ನ ಎಲಿಮೆಂಟ್ ಗಳನ್ನು ಸೇರಿಸಲು, ತೆಗೆದುಹಾಕಲು ಮತ್ತು ಆಕ್ಸೆಸ್ ಮಾಡಲು ಇನ್ನೊಂದು ಸ್ಯಾಂಪಲ್ ಪ್ರೊಗ್ರಾಂಅನ್ನು ನೋಡೋಣ. |
08:34 | ಟರ್ಮಿನಲ್ ನ ಮೇಲೆ ಹೀಗೆ ಟೈಪ್ ಮಾಡಿ: 'gedit hashRefadd dot pl ampersand' ಮತ್ತು 'Enter' ಅನ್ನು ಒತ್ತಿ. |
08:42 | ಇದು, 'gedit' ನಲ್ಲಿ 'hashRefadd.pl' ಎಂಬ ಫೈಲನ್ನು ಓಪನ್ ಮಾಡುವುದು. |
08:47 | ನಾನು ಸ್ಯಾಂಪಲ್ ಪ್ರೊಗ್ರಾಂಅನ್ನು ವಿವರಿಸುತ್ತೇನೆ. |
08:50 | '$weektemp' ಎಂಬ ಸ್ಕೇಲರ್-ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಲು ಸಾಧ್ಯವಿರುವ, ಒಂದು ಡೈರೆಕ್ಟ್ ಹ್ಯಾಶ್-ರೆಫರೆನ್ಸ್ ಅನ್ನು ನಾನು ಡಿಕ್ಲೇರ್ ಮಾಡಿದ್ದೇನೆ. |
08:57 | ನಾನು ಹ್ಯಾಶ್-ರೆಫರೆನ್ಸ್ ಅನ್ನು ಪ್ರತಿನಿಧಿಸಲು ಕರ್ಲೀ ಬ್ರಾಕೆಟ್ಗಳನ್ನು ಮತ್ತು ಡಿ-ರೆಫರೆನ್ಸ್ ಮಾಡಲು ಆರೋ-ಆಪರೇಟರ್ (arrow operator) ಅನ್ನು ಬಳಸಿದ್ದೇನೆ. |
09:04 | ಈ ಕೋಡ್, Monday ದಿಂದ Friday ವರೆಗಿನ ತಾಪಮಾನದ (temperature) ವ್ಯಾಲ್ಯೂಗಳನ್ನು ಸ್ಟೋರ್ ಮಾಡುತ್ತದೆ. |
09:09 | ಹ್ಯಾಶ್ ನ ಕೀಗಳಲ್ಲಿ ಲೂಪ್ ಮಾಡಲು, ನಾನು “keys” ಎಂಬ ಬಿಲ್ಟ್-ಇನ್ ಫಂಕ್ಷನ್ ಅನ್ನು ಬಳಸುತ್ತಿದ್ದೇನೆ. |
09:15 | 'print' ಸ್ಟೇಟ್ಮೆಂಟ್, ಹ್ಯಾಶ್ ನ ಪ್ರತಿಯೊಂದು ಎಲಿಮೆಂಟ್ ಅನ್ನು ಪ್ರಿಂಟ್ ಮಾಡುವುದು. |
09:19 | ಒಂದು ಎಲಿಮೆಂಟ್ ನ ನಿರ್ದಿಷ್ಟ ವ್ಯಾಲ್ಯೂಅನ್ನು, ಇಲ್ಲಿ ತೋರಿಸಿದಂತೆ ನಾವು ಆಕ್ಸೆಸ್ ಮಾಡಬಹುದು. |
09:25 | 'print' ಸ್ಟೇಟ್ಮೆಂಟ್, Monday ದ ತಾಪಮಾನವನ್ನು (temperature) ಪ್ರಿಂಟ್ ಮಾಡುವುದು. |
09:29 | ಈಗ, ಫೈಲನ್ನು ಸೇವ್ ಮಾಡಿ. |
09:32 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl hashRefadd dot pl' ಮತ್ತು ಔಟ್ಪುಟ್ ಅನ್ನು ನೋಡಲು 'Enter' ಅನ್ನು ಒತ್ತಿ. |
09:41 | ಹ್ಯಾಶ್ ಕೀಗಳು ಮತ್ತು ಹ್ಯಾಶ್ ವ್ಯಾಲ್ಯೂಗಳು, ಇಷ್ಟಬಂದಂತೆ ಸ್ಟೋರ್ ಮಾಡಲ್ಪಟ್ಟಿವೆ. |
09:46 | ತೋರಿಸಲಾದ ಔಟ್ಪುಟ್, ಅವುಗಳನ್ನು ಸೇರಿಸಿದ ಕ್ರಮಕ್ಕೆ ಸಂಬಂಧಿಸಿರುವದಿಲ್ಲ. |
09:52 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, |
09:57 | ಈ ಟ್ಯುಟೋರಿಯಲ್ ನಲ್ಲಿ, ನಾವು:
|
10:14 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
ನಮ್ಮ 'hashRefadd dot pl' ಎಂಬ ಫೈಲ್ ನಲ್ಲಿ, ಹ್ಯಾಶ್ weektemp ನಲ್ಲಿ, “Saturday” ಹಾಗೂ “Sunday” ಗಳೆಂಬ ಹೊಸ ಕೀಗಳನ್ನು ಸೇರಿಸಿ. |
10:24 | ಕೊನೆಯಲ್ಲಿ, “Saturday” ಎಂಬ ಕೀಯನ್ನು ಡಿಲೀಟ್ ಮಾಡಿ. |
10:27 | ಹ್ಯಾಶ್ “weektemp” ಎಂದು ಪ್ರಿಂಟ್ ಮಾಡಿ. |
10:30 | ಪ್ರೊಗ್ರಾಂಅನ್ನು ಸೇವ್ ಮಾಡಿ ಮತ್ತು ಎಕ್ಸೀಕ್ಯೂಟ್ ಮಾಡಿ. ಈಗ, ಫಲಿತಾಂಶವನ್ನು ನೋಡಿ. |
10:35 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
10:42 | ನಾವು ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ನಮ್ಮ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇಲ್ಲಿಗೆ ಬರೆಯಿರಿ:
contact@spoken-tutorial.org |
10:51 | ಇದು NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: spoken hyphen tutorial dot org slash NMEICT hyphen Intro. |
11:02 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
ವಂದನೆಗಳು. |